Athree Book Center

ಮೃಗಜಲದ ಬೆನ್ನೇರಿ
ಸುಮಾರು ನಲ್ವತ್ತು ವರ್ಷಗಳ ಹಿಂದಿನ ನನ್ನ ಅನುಭವ ಕಥನ – ತಾತಾರ್ ಶಿಖರಾರೋಹಣವನ್ನು ಮರುಕಥನಕ್ಕಿಳಿದು ನಾಲ್ಕು ಕಂತು ಕಳೆದಿದೆ. ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ತಂಡ, ಉದಕಮಂಡಲ ಶ್ರೇಣಿಯ, ಮುದುಮಲೈ ವನಧಾಮಾಂತರ್ಗತ ತಾತಾರ್ ಬೆಟ್ಟವನ್ನು ವಾತಾವರಣದ ವಿಪರೀತದಲ್ಲೂ ಏರುತ್ತೇರುತ್ತೇರುತ್ತಾ ಒತ್ತರಿಸಿ ಬಂದ ರಾತ್ರಿಗೆ ಆಕಸ್ಮಿಕವಾಗಿ ಒದಗಿದ ಬಂಡೆಮರೆಯಲ್ಲಿ ಶಿಬಿರ ಹೂಡಿದ್ದಾಗಿದೆ. ಅತ್ತ ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾ ವಿಮೋಚನೆಯ ಸಮರದಲ್ಲಿ ತೊಡಗಿದ ಭಾರತೀಯ ಸೇನೆಯ ವೀರಗಾಥೆಯನ್ನು ತುಣುಕು ರೆಡಿಯೋ ವರದಿಗಳಲ್ಲಿ ಸ್ಫೂರ್ತಿಪೇಯದಂತೆ ಹೀರುತ್ತಾ ಸಾಗಿದ ಪ್ರಾಕೃತಿಕ ಸಾಹಸಯಾನಕ್ಕಿಲ್ಲಿ ಶಿಖರಯೋಗ ಕಾಣಿಸುವ ಹಂತ ಬಂದಿದೆ. ನಿನ್ನೆಯ ಅನ್ನಕ್ಕೆ ಇಂದಿನ ವಗ್ಗರಣೆ ಎಂಬ ತಾತ್ಸಾರ ಕಳೆದು, ಹಿಂದಿನ ಸಾಧನೆ ಮುಂದಕ್ಕೆ ಪ್ರೇರಣೆ ಎಂಬ ಉತ್ಸಾಹ ತಳೆದು ಬನ್ನಿ, ಹೊರಡೋಣ ಸವಾರಿ…

(ತಾತಾರ್ ೫)

ರಾಜು, ಮಾರ್ಗದರ್ಶಿಗಳ  ನಾಯಕನಿಗೆ ನಮ್ಮ ಮೇಲೆ ಸಿಟ್ಟು! ಹಿಂದಿನ ಸಂಜೆ ಜಾವೀದನ ಬಳಿ ಆತ ಕಾಫಿಗೆ ಬೇಡಿಕೆ ಸಲ್ಲಿಸಿದ್ದನಂತೆ. ಅದು ಬರಲಿಲ್ಲ. ಮುಂದೆ ಆತ ಕೇಳಿದ್ದ ಊಟವೂ ದಕ್ಕಲಿಲ್ಲ ಯಾಕೇಂತ ನಿಮಗೆ ಗೊತ್ತಿದೆ. ಆದರೆ ಅವನು, ತಮ್ಮ ಕನಿಷ್ಠಾವಶ್ಯಕತೆಗಳನ್ನೂ ಪೂರೈಸದ ತಂಡದೊಡನೆ ತಾವು ಸಾಯಲು ಬಂದದ್ದಲ್ಲವೆಂದು ಹಾರಾಡುತ್ತಿದ್ದ. ಅವನ ಲೆಕ್ಕಕ್ಕೆ ಗೋವಿಂದರಾಜ್ ಮುಖ್ಯ ಅಪರಾಧಿ. ಗೋವಿಂದ ರಾಜರೇ ಅವರ ಬಿಡಾರದ ಬಳಿ ಹೋಗಿ ವಿವರಿಸಿದರು. ಜಾವೀದ್ ಬಿದ್ದದ್ದು, ಚೇತರಿಸಿಕೊಂಡ ಮೇಲೆ ರಾಜೂ ಬೇಡಿಕೆ ತಿಳಿಸಲು ಮರೆತದ್ದು, ಎಲ್ಲಕ್ಕೂ ಮುಖ್ಯವಾಗಿ ಹಿಂದಿನ ಬೆಳಿಗ್ಗೆ ಮಸಣಿಗುಡಿ ಬಿಡುವಾಗಲೇ ಅದೇ ರಾಜು ‘ನಮ್ಮ ಊಟ, ಕಾಫಿ ಎಲ್ಲ ನಾವೇ ನೋಡಿಕೊಳ್ತೇವೆ’ ಎಂದದ್ದೆಲ್ಲ ನೆನಪಿಸುವುದರೊಡನೆ, ರಾತ್ರಿ ಆಮಂತ್ರಣ ಕೊಟ್ಟದ್ದನ್ನೂ ಜ್ಞಾಪಿಸಿದರು. “ಕತ್ತಲೆ iಳೆಯಲ್ಲಿ ಕಾಡಿನ ಮಕ್ಕಳು ನೀವೇ ಊಟಕ್ಕೆ ಬರಲು ಹಿಂದೇಟು ಹೊಡೆಯುವಾಗ ಈ ಪೇಟೆಯ ಮಕ್ಕಳನ್ನು ಊಟದ ಹೊರೆಯೊಡನೆ ನಿಮ್ಮಲ್ಲಿಗೆ ಹೇಗೆ ಕಳಿಸಬಹುದಿತ್ತು” ಎಂದು ಮರುಸವಾಲು ಹಾಕಿದ ಮೇಲೆ ಆತ ಪೂರ್ಣ ಶರಣಾದ. ಮೂವರೂ ನಮ್ಮ ಶಿಬಿರದ ಬಂಡೆಗೆ ಬಂದು ಉಪಾಹಾರ ಸ್ವೀಕರಿಸುವುದರೊಡನೆ ಎರಡನೇ ಹಗಲಿಗೆ ಒಳ್ಳೆಯ ನಾಂದಿ ಸಿಕ್ಕಿತು ಎನ್ನಬಹುದು.

ಒದ್ದೆಮುದ್ದೆಯಾದ ಸಾಮಾನು ಸರಂಜಾಮುಗಳನ್ನು ಕಟ್ಟಿ, ಗರಿಗರಿಯಾದ ಅನುಭವ ಸಾಮ್ರಾಜ್ಯಕ್ಕೆ ಹೊಸ ಲಗ್ಗೆ ಹಾಕುವಾಗ ಗಂಟೆಯೇನೋ ಹತ್ತಾಗಿತ್ತು. ಆದರೆ ಹವಾಮಾನದ ವೈಪರೀತ್ಯ – ಮಂಜೇ ಹನಿಗಟ್ಟಿ ಬೀಳುತ್ತಿತ್ತೋ ಭೋರ್ಗಾಳಿಯೇ ಬೆವರುತ್ತಿತ್ತೋ ಎನ್ನುವ ಗೊಂದಲ ಮುಂದುವರಿದೇ ಇತ್ತು. ಹಿಂದಿನ ದಿನ ಕೊನೆಯವರಿಗಿಂತ ಒಂದು ಸ್ಥಾನ ಮುಂದಿರಬೇಕಿದ್ದ ನಾನು ಇಂದು ಮಧ್ಯವರ್ತಿಯಾಗಿದ್ದೆ. ಹೊರೆಯಲ್ಲೂ ನನಗೆ ಬದಲಾವಣೆ ಸಿಕ್ಕಿತ್ತು. ಟೈಗರ್ ಮರೆತಿರಾ – ಮಸಣಿಗುಡಿಯಿಂದ ಸೇರಿಕೊಂಡ ಬೀಡಾಡಿ ನಾಯಿ, ರಾತ್ರಿ ಎಲ್ಲೋ ಒದ್ದೆ ಹುಲ್ಲ ಮೇಲೇ ಮೈ ಮುದುರಿಕೊಂಡ ಜೀವ, ನಮ್ಮ ಉಪ್ಪಿಟ್ಟಲ್ಲೇ ಪಾಲು ಪಡೆದು ಹೊಸ ಹುರುಪಿನಲ್ಲಿ ಜೊತೆಗೊಟ್ಟಿತ್ತು.

ಮಾರ್ಗದರ್ಶಿಗಳಿಗೆ ಈ ಜಾಡು, ಶಿಖರ ಮತ್ತಾಚಿನ ಸಾಧ್ಯತೆಗಳ ಅಂದಾಜು ಮಾತ್ರವಿತ್ತು. ಹಾಗಾಗಿ ಶಿಖರವನ್ನು ಸಾಧಿಸಿ, ಇನ್ನೊಂದೇ ಕತ್ತಲು ಬರುವುದರೊಳಗೆ ಕನಿಷ್ಠ ಇದೇ ಬಂಡೆ ಶಿಬಿರವನ್ನಾದರೂ ತಲುಪಲೇಬೇಕೆಂಬ ಅಂದಾಜು ಹಾಕಿದ್ದೆವು. ಹಾಗಾಗಿ ವಿಶ್ರಾಂತಿರಹಿತ, ಒಂದೇ ಉಸುರಿನ ಏರಿಕೆ. ಬಂಡೆ, ಜಾರುನೆಲ, ಕುರುಚಲು ಪೊದೆ ಮೊದಮೊದಲು. ಅನಂತರ ಬಂಡೆಗಳು ವಿರಳವಾಗಿ ಬರಿಯ ಹುಲ್ಲು, ಹುಲ್ಲು. ಎಡೆ ಸಿಕ್ಕರೂ ಜಾರುನೆಲ, ಕಾಲಿಟ್ಟಲ್ಲೆಲ್ಲ ಜಾರಿ ಮುಗ್ಗರಿಸುವ ಸ್ಥಿತಿ. ಸವಾಲು ಹಿಂದಿನ ದಿನದ ಏರಿಕೆಗಿಂತ (ಸುಮಾರು ೫೦-೬೦ ಡಿಗ್ರಿ) ಕಠಿಣವಾದಂತಿತ್ತು (ಸುಮಾರು ೭೦-೭೫ ಡಿಗ್ರಿ). ನೇರವಾಗಿ ಹತ್ತತೊಡಗಿದರೆ ನಾಲ್ಕೇ ಹೆಜ್ಜೆಯಲ್ಲಿ ಉಸಿರಿನ ಸೊಲ್ಲೇ ಅಡಗಿಹೋಗಬಹುದಿತ್ತು. ವಾರೆಕೋರೆಯ ಜಾಡು ಮೂಡಿಸುತ್ತಾ ಕೆಲವೆಡೆಗಳಲ್ಲಂತೂ ತುದಿಗಾಲು ಊರಲು ಪುಟ್ಟ ಮೆಟ್ಟಿಲನ್ನೇ ಕಡಿಯುತ್ತಾ ಹುಲ್ಲನ್ನು ಸೀಳುತ್ತಾ ಸಾಗಿದ್ದಂತೆ ಮುಂದಿನವರಿಂದ ಶುಭ ಸಮಾಚಾರ ತೇಲಿ ಬಂತು. ನೆತ್ತಿಯ ಮಂಜು ಹರಿದಿತ್ತು, ಇನ್ನೇನು ನೂರಡಿಯಲ್ಲಿ ಶಿಖರ! ಅಲ್ಲಿ ಕೆಲವು ಮರಗಿಡಗಳೂ ಕಾಣಿಸುತ್ತಿತ್ತು. ಇನ್ನೇನು ಬಂತೇ ಬಂತು ಎಂಬ ಉತ್ಸಾಹದಲ್ಲಿ ಜಾರುಗುಪ್ಪೆಯಂತಿದ್ದ ಬಂಡೆ ದಾಟಿದ್ದೂ ತಿಳಿಯಲಿಲ್ಲ. ಅದು ಕಳೆದು ಕೆಸರು ನೆಲದಲ್ಲಿ ಅವರಿವರು ನೆಲಕಚ್ಚಿದ್ದೂ ಗೌಣವಾಯ್ತು. ಚಳಿ, ಸತತ ನೀರಿನಲ್ಲಿ ನೆನೆದು ಕೈಗಳು ಬಿಳಿಚಿ, ಚಿರಿಟಿದ್ದರೂ ಆಧಾರಕ್ಕೆ ಹುಲ್ಲಗುಪ್ಪೆಗಳನ್ನು ಎಳೆದೆಳೆದು ಉಂಟಾದ ಅಸಂಖ್ಯ ಗೀರು ಗಾಯಗಳೂ ಮರೆತೇಹೋದವು.

ಮರಗಳ ಎತ್ತರವನ್ನು ತಲಪಿದೆವು. ಅಲ್ಲಿ ಮರ, ಪೊದರುಗಳನ್ನು ದಟ್ಟ ಬಳ್ಳಿ ಹೆಣೆದು ಬಲವತ್ತರವಾದ ತಡೆಗೋಡೆಯನ್ನೇ ಮಾಡಿತ್ತು. ಅದರ ಮರೆಯಲ್ಲಿ ದಿಣ್ಣೆ, ಅಂದರೆ ಶಿಖರ ಇನ್ನೂ ಆಚೆಗಿತ್ತು. ಮಾರ್ಗದರ್ಶಿಗಳು ತುಳಿದು, ಕೆಲವೆಡೆಗಳಲ್ಲಿ ಕತ್ತಿಯಲ್ಲಿ ಕಡಿದೇ ದಾರಿ ಬಿಡಿಸಬೇಕಾಯ್ತು. ಮಣ್ಣು ತೀರಾ ನುಸುಲು, ತಪ್ಪಡಿಯಿಟ್ಟರೆ ಅನಿಶ್ಚಿತ ಕುಸಿತ ಖಾತ್ರಿ! ಪಕ್ಕಕ್ಕೆ ಸರಿಯುತ್ತ ಏರುವ ಸಂಕಟಕ್ಕೆ ಅಡ್ಡಿಪಡಿಸುವಂತೆ ಸುಮಾರು ಇಪ್ಪತ್ತೈದು ಅಡಿ ಎತ್ತರಕ್ಕೆ ಮತ್ತೆ ಬಂಡೆಮೈ. ಬುಡದಲ್ಲೇನೋ ತುಸು ಹರಡಿಕೊಂಡಿದ್ದು, ಏರಿಕೆಯಲ್ಲಿ ತೊಡಗುವವರಿಗೆ ಗಟ್ಟಿ ನೆಲೆ ಕಾಣಿಸಿತ್ತು. ಆದರೆ ಅದರ ಇನ್ನೊಂದು ಅಂಚಿನಲ್ಲಿ ಮಂಜು ಮುಸುಕಿದ ನಿಗೂಢ ಪ್ರಪಾತ. ಮಳೆಗಾಳಿಗಳ ದ್ವಂದ್ವ ನಡೆದೇ ಇತ್ತು. ಹಿಂದೆ ಒಂದೆರಡು ಬಾರಿ ಮಾಡಿದಂತೇ ಆಯಕಟ್ಟಿನ ಎತ್ತರಗಳಲ್ಲಿ ಒಬ್ಬೊಬ್ಬರು ನಿಂತು, ಗಂಟು ಗದಡಿಗಳನ್ನು ಕೊನೆಗೆ ಟೈಗರನ್ನೂ ಕೈಕೈ ದಾಟಿಸಿಯೇ ಬಿಟ್ಟೆವು. ಇನ್ನೇನು ನೂರಡಿ, ಶಿಖರಕ್ಕೆ ನಾ ಮುಂದು ನೀ ಮುಂದು ಧಾವಂತ.

ನಮ್ಮ ಅಲ್ಲಿವರೆಗಿನ ಆರೋಹಣದಲ್ಲಿ ಎಲ್ಲೂ ಗಿಡಗಳು ನಮಗೆ ಅಪಾಯಕಾರಿಗಳಾಗಿರಲಿಲ್ಲ. ಎಲೆಗಳು ವರ್ಣ ವೈವಿಧ್ಯ, ಆಕಾರ ವೈಚಿತ್ರ್ಯಗಳಲ್ಲಿ ಆಕರ್ಷಿಸಿದ್ದವು. ಕಾವೇರಿಯಮ್ಮನಿಗಂತೂ ಕಂಡದ್ದೆಲ್ಲ ತನ್ನ ಕೈದೋಟದಲ್ಲಿ ಮತ್ತೆ ಅರಳಿಸುವ ಹುಮ್ಮಸ್ಸು. ಕೀಳುತ್ತಿದ್ದರು, ಶಿಖರ ಸಾಧನೆಯ ಸಂಭ್ರಮಕ್ಕೆ ಅನುಕೂಲವಾಗಲು ಸುಜಾತ, ಭಾಸ್ಕರರ ಮೆಹನತ್ತಿನಲ್ಲಿ ವನಸುಮಗಳ ಅಂದದ ಜೋಡಣೆಯನ್ನೂ ಸುರುಮಾಡಿದ್ದರು. ಆದರಿಲ್ಲಿ ನಾವು ಮುಟ್ಟಲು ಹೆದರುವಂತ ಗಿಡಗಳ ಸರಣಿ. ಕತ್ತರಿ ಕತ್ತರಿ ಎಲೆ, ಮೈಮೇಲೆಲ್ಲ ಹಾಗಲ ಕಾಯಿಯಂತೆ ಕಡುಹಸಿರ ಕಜ್ಜಿಗಳು, ಮುಟ್ಟಿದರೆ ಉರಿಹಚ್ಚುವ ರೋಮಗಳು, ಸಜ್ಜಾದ ಪಾಕೀ ಯೋಧನಂತೆ ಮುಳ್ಳುಗಳು. ಕಡಿದು, ಬೂಟುಗಾಲಿನಲ್ಲೇ ಹೊಸಕಿ ಮುಂದುವರಿದೆವು. ಹಿಂದಿನ ದಿನವಿಡೀ ನೀರಿಲದೆ ಬಳಲಿದ್ದಕ್ಕೆ ವ್ಯತಿರಿಕ್ತವಾಗಿ ಇಂದು ಒಂದೊಂದು ಏಣಿನಲ್ಲೂ ಝರಿ, ತೊರೆ. ನೀರು ಶೀತಕ್ಕೆ ಹೆದರಿದಂತೆ ಕೆಲವೆಡೆ ನಮಗೆ ಗುರುತೂ ಸಿಗದಂತೆ ಬಂಡೆಗುಂಡುಗಳೂ ಪಾಚಿಯ ಕಂಬಳಿ ಹೊದ್ದು ಧ್ಯಾನಸ್ಥವಾಗಿದ್ದವು. ಮತ್ತೆ ತೆರೆಮೈಯ ಬಂಡೆ, ನಲವತ್ತಡಿ ಏರಿಕೆ. ಬಂತೇಬಂತು ಹಗುರ ಏರಿನ, ತುಸುವೇ ಹುಲ್ಲಿನ ಬೋಳುಮೈ. ನೂರೆಂದುಕೊಂಡವರು ಇನ್ನೂರಡಿಯನ್ನೇ ಕಳೆದದ್ದಿರಬೇಕು. ಆದರೆ ಈಗ  ಶಿಖರ ಇನ್ನೂ ಐವತ್ತಡಿಗಳ ಅಂತರದಲ್ಲಿ ನಮ್ಮನ್ನು ಕರೆಯುತ್ತಲೇ ಇತ್ತು. ನಮ್ಮಲ್ಲಿ ಸಾಧನೆಯ ಅಮಲಿನಲ್ಲಿ ಜೈಕಾರಗಳು ತೊಡಗಿಯಾಗಿತ್ತು. ಭಾರತ ಮಾತೆ, ಡೀಎಮ್ಮೆಲ್ (ಡೆಕ್ಕನ್ ಮೌಂಟೆನೀರಿಂಗ್ ಲೀಗ್), ಗೋವಿಂದ್ರಾಜ್, ಸುಜಾತಗಳಿಗೆಲ್ಲಾ ‘ಕೀ’ ಹೊಡಕೊಂಡೆವು. ಬದುಕಿದರೇ ಇಲ್ಲಿ, ಸತ್ತರೂ ಇಲ್ಲೇ (ಜೀನಾ ಯಹಾಂ ಮರ್ನಾ ಯಹಾಂ) ಹಾಡಂತೂ ಸಮೂಹಗಾನವೇ ಆಗಿತ್ತು. ಗಂಟೆ ಎರಡಕ್ಕೆ ಐದು ಮಿನಿಟು, ಮಾರ್ಗದರ್ಶಿಗಳು ಕುಳಿತ ದಿಬ್ಬವೇ ಶಿಖರ ಎಂಬಂತೆ ತಲಪಿಬಿಟ್ಟೆವು.

ಅದೊಂದು ಹುಲ್ಲುಗಾವಲು ಎಂದರೂ ತಪ್ಪಿಲ್ಲ. ಬಲಬದಿಗೆ ಸ್ವಲ್ಪ ಇಳಿಜಾರು. ಅದರ ಕೊನೆಯಲ್ಲಿ ಸಣ್ಣ ದಿಣ್ಣೆ, ಮೇಲೊಂದು ಕಾಡುಕಲ್ಲುಗಳ ಗುಪ್ಪೆ – ನಮ್ಮ ಮಟ್ಟಿಗೆ ಶಿಖರದ ಕೇಂದ್ರ ಸೂಚಿ. ಆ ಪುಟ್ಟ ಮೈದಾನದಲ್ಲಿ ಚದುರಿದಂತೆ ಸಣ್ಣ ಪುm ಬಂಡೆಗಳು ಹರಡಿದ್ದವನ್ನು ಸಣ್ಣದಾಗಿ ಸುತ್ತಿ ನೋಡಿದೆವು. ಒಂದು ಬಂಡೆಯ ಮೇಲೆ ಯಾರೋ ನಿಲ್ಲಿಸಿದ್ದ ಒರಟು ಶಿಲುಬೆಯೊಂದು, ಅಡ್ಡಪಟ್ಟಿ ಕಳಚಿಕೊಂಡು ನಿಂತದ್ದೂ ಕಾಣಿಸಿತು. ಬೆಟ್ಟದ ಮೈ ಎಡಕ್ಕೆ ಸ್ವಲ್ಪ ಏರಿ ಮಂಜಿನ ಹಿನ್ನೆಲೆಯಲ್ಲಿ, ಪೊದೆಗಳ ಗುಂಪಿನಲ್ಲಿ ಅಸ್ಪಷ್ಟವಾಗಿತ್ತು. ನಾವು ಹೆಚ್ಚಿನ ಯೋಚನೆ ಬಿಟ್ಟು ಆ ಈ ಪುಡಿ ಬಂಡೆಗಳ ಮೇಲೆ ವಿರಮಿಸಿದೆವು. ತಾಪತ್ರಯಗಳು – ಮಳೆ, ಗಾಳಿ, ಮಂಜು ತಮ್ಮ ಅವಿರತ ದಾಳಿಯನ್ನು ಮುಂದುವರಿಸಿಯೇ ಇದ್ದವು. ಪರಿಸರದ ಎಲ್ಲ ಜೀವಾಜೀವಗಳು, ನಮ್ಮ ನಖಶಿಖಾಂತ ನೀರು ಸುರಿಯುತ್ತಲೇ ಇತ್ತು. ತಲೆ ಮುಂದೆ ಬಾಗಿಸಿದರೆ ಹ್ಯಾಟಿನ ಅಂಚಿನಿಂದ ಮನೆಸೂರಿನ ಧಾರೆಯದೇ ಚಿತ್ರ. ಮುಕ್ತಿವಾಹಿನಿಯ ತುಪಾಕೀ ದಾಳಿಗೀಡಾದ ಪಾಕೀಪಾತಕಿಗಳಂತೆ ಅಂಗೈಗಳೆರಡೂ ಅಸಂಖ್ಯ ಗೀರುಗಾಯವಡೆದು, ಮರಗಟ್ಟಿ, ಸ್ಪರ್ಷಜ್ಞಾನವನ್ನೇ ಕಳೆದುಕೊಂಡಂತಿತ್ತು. ನಿರಂತರ ನಡಿಗೆಯಿಂದ ಬೂಟುಗಳೊಳಗೆ ಪಾದಗಳೇನೋ ಬೆಚ್ಚಗಿದ್ದರೂ ಆಕ್ರಮಣಕ್ಕೊಳಗಾದ ಜೆಸ್ಸೂರಿನಂತಿತ್ತು. ಜೆಸ್ಸೂರಿನಲ್ಲಿ ಊಟ ತಯಾರಿದ್ದರೂ ಸೈನಿಕರಿಗೆ ತಿನ್ನಲು ಪುರುಸೊತ್ತಿರಲಿಲ್ಲವಂತೆ. [ಬಾಂಗ್ಲಾ ಯುದ್ಧದ ಪ್ರಭಾವ] ಹಾಗೇ ಇತ್ತು ನಮ್ಮ ಪಾದಗಳ ಸ್ಥಿತಿ. ಶೂಗಳು ಚಳಿಗೆ ಕುಗ್ಗಿ ಕಾಲನ್ನು ಹಿಸುಕಿದರೆ, ಹೊರೆ ಸಹಿತ ದೇಹದ ಭಾರ, ಅಸಡ್ಡಾಳ ನಡಿಗೆ ಉಜ್ಜಿ ಉಜ್ಜಿ ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಉಗುರು ಸುಲಿದ ಅನುಭವ, ಬೆರಳುಗಳ ತುದಿಗಳಲ್ಲೆಲ್ಲ ನೀರಗುಳ್ಳೆಗಳ ಸಾಲು. ಆದರೆ ಇವನ್ನೆಲ್ಲ ಮೀರಿಸುವ ಸಂತೋಷದ ಸಮಯವದು. ನಾಲ್ಕು ಗಂಟೆಗಳ ಅವಿರತ ಏರಿಕೆ ಕೊನೆ ಮುಟ್ಟಿತ್ತು. ಎರಡು ದಿನಗಳ ಶ್ರಮ, ಹಲವು ದಿನಗಳ ಕನಸು ನನಸಾಗಿತ್ತು. ನಾವು ಯಶಸ್ವಿಗಳಾಗುವಂತೆ ತಾತಾರ್ ನಮ್ಮನ್ನು ತಲೆಯ ಮೇಲೆ ಹೊತ್ತಿದ್ದ.

ಆಲೀಸಳ ಅದ್ಭುತ ಲೋಕ

ಶಿಖರ ತಲುಪಿದ ಸಂತೋಷವೋ ಒಂದು ಘಟ್ಟ ಮುಗಿದದ್ದಕ್ಕೆ ನಿಟ್ಟುಸಿರೋ ಎನ್ನುವ ಸ್ಥಿತಿಯಲ್ಲಿ ನಾವಿದ್ದರೂ ನಾಯಕರುಗಳಿಗೆ ಏನೋ ಗುಮಾನಿ. ಬಲದಿ ಸ್ಪಷ್ಟವಾಗಿ ನಾವಿದ್ದ ದಿಣ್ಣೆಯೆತ್ತರಕ್ಕೆ ಮುಗಿದಿದ್ದರೂ ಎಡಬದಿಯ ಇನ್ನೂ ಎತ್ತರವಿದೆಯೋ ಎಂದು ಪರೀಕ್ಷಿಸಿಯೇ ಬಿಡಲು ಮಾರ್ಗದರ್ಶಿ ಸುಬ್ಬಯ್ಯನ್ ಜೊತೆ ಗೋವಿಂದರಾಜ್, ಸುಜಾತ, ಕಾವೇರಿ, ಅಚ್ಯುತರಾವ್ ಮಂಜಿನಲ್ಲಿ ಮರೆಯಾದರು. ಕೆಲವೇ ಕ್ಷಣಗಳಲ್ಲಿ ಶಿಳ್ಳೆ ಕೇಳಿತು, ಹಿಂಬಾಲಿಸಿ ತಂತಮ್ಮ ಹೊರೆ ಬಿಟ್ಟು ಅತ್ತ ಬರಲು ಸೂಚನೆಯೂ ಸಿಕ್ಕಿತು. ಹಿಂದುಳಿದ ಇಬ್ಬರು ಮಾರ್ಗದರ್ಶಿಗಳು ಅತ್ತ ಸರಿಯುವ ಉತ್ಸಾಹ ತೋರಲಿಲ್ಲ. ರಾಶಿ ಬಿದ್ದ ನಮ್ಮೆಲ್ಲ ಚೀಲಗಳೊಡನೆ ಅವರನ್ನು ಬಿಡಲು ಒಪ್ಪದ ಮನಸ್ಸಿನಲ್ಲಿ ರಮೇಶ್ ಜಸವಂತರು ಹಿಂದುಳಿದಂತೆ ನಾವೆಲ್ಲ ಸೂಚನೆ ಬಂದತ್ತ ಹಗುರವಾಗಿ ಧಾವಿಸಿದೆವು.

ಪೊದರ ಹಿಂಡು ದಟ್ಟಗೋಡೆಯಂತೆ ವ್ಯಾಪಿಸಿಕೊಂಡು, ನಿಧಾನಕ್ಕೆ ಏರುಮೈಯಲ್ಲಿ ಮಂಜಿನಲ್ಲಿ ಕರಗಿದಂತಿತ್ತು. ಅಲ್ಲಿನ ಹವಾ ವೈಪರೀತ್ಯಕ್ಕೆ ಕುದುರಿದ ಆ ಗಟ್ಟಿ ಜೀವರಾಶಿಯನ್ನು ಕಡಿದು, ಮೆಟ್ಟಿ ದಾರಿ ಬಿಡಿಸಿಕೊಳ್ಳುವುದು ಹೊಸದೇ ಸಾಹಸವಾಗಬಹುದಿತ್ತು. ಬದಲು ಅವಕ್ಕೆ ಶರಣಾದಂತೆ ಬಗ್ಗಿ, ಕಾಂಡಗಳ ನಡುವೆ ಜಾಡು ಮೂಡಿಸಿದೆವು. ಎತ್ತರಕ್ಕೆ ಹೋಗುವ ಚಿಗುರು ಚಿವುಟಿದ ಕಾಫಿ, ಚಾ ಗಿಡಗಳದ್ದೇ ರೂಪ, ಎಲೆಗಳ ಹರಹು ಅಷ್ಟಗಲವಿದ್ದರೂ ಮೋಟು ಗಟ್ಟಿ ಕಾಂಡಗಳು ವಿರಳ ವಿರಳ. ನಾವು ಗೂನು ಬೆನ್ನರಾಗಿ, ಕೆಲವೆಡೆ ನಾಲ್ಗಾಲರಾಗಿ ನುಗ್ಗಿ ಸಾಗಿದೆವು. ಆಲಿಸ್ ಮೊಲದ ಬಿಲವೊಂದಕ್ಕೆ ಹೀಗೇ ನುಗ್ಗಿದ್ದಲ್ಲವೇ ಎಂದು ಯೋಚಿಸುತ್ತಾ ಬರಲಿರುವ ಮಾಯಾಲೋಕದ ರಮ್ಯಕಲ್ಪನೆಯಲ್ಲಿ ಮುಂದುವರಿದೆವು. ಪೊದರೆಲ್ಲ ಏಕಜಾತಿಯವೇನಲ್ಲ. ವಾಟೆ, ಮುಳ್ಳುಗಿಡಗಳೂ ಹಲವು ಕುಸುಮಾಂಗಿಯರೂ ಶೋಭಿಸಿದ್ದರು. ಹೂಗಳ ನರುಗಂಪು ನಮಗೆ ನವಚೇತನ ಕೊಟ್ಟಿತು. ಓರೆಕೋರೆಯಾಗಿ ನಿಧಾನವಾಗಿ ಏರುತ್ತಲೇ ಸಾಗಿದ ಜಾಡು, ಸೊಂಟನೋವು ಬರಿಸಿ, ಸುಮಾರು ನೂರು ಮೀಟರಾಚೆ ಬಯಲಾಯ್ತು. ಎದುರು ಮತ್ತೊಂದು ಸಣ್ಣ ಬೋಳು ಗುಡ್ಡ!

ಮಹತ್ತರ ಕಲ್ಪನೆಯಲ್ಲಿ ಮರಳುವ ದಾರಿ ಮರೆಯದಂತೆ ದಾರಿ ಗುರುತಿಸಲೆಂದೇ ತಂದಿದ್ದ ಸಣ್ಣ ಕೆಂಪು ಬಟ್ಟೆಗಳನ್ನು ಜಾಡಿನುದ್ದಕ್ಕೆ ಕಟ್ಟುತ್ತ ಹೋಗಿದ್ದೆವು. ಇಲ್ಲಿ ಅಸ್ಪಷ್ಟತೆ ಇಲ್ಲ, ಇದು ತಾತಾರನ ನಿಜ ನೆತ್ತಿ. ಮಂಜು ಸರಿಸಿ ನೋಡುವುದಾಗಿದ್ದರೆ ಬಹುಶಃ ಸುಮಾರು ಐವತ್ತಡಿ ತಗ್ಗಿನಲ್ಲಿ ನಮ್ಮ ಮಾರ್ಗದರ್ಶಿಗಳನ್ನೂ ಬಿಟ್ಟು ಮಿತ್ರರು ಹಾಗೂ ನಮ್ಮ ಹೊರೆಗಳು ಕಾಣಬಹುದಿತ್ತು. ಇಲ್ಲೂ ಒಂದು ಕಾಡಕಲ್ಲ ಗುಪ್ಪೆ, ನಡುವೆ ಊರಿದ ಕಂಬ, ಅಂತರ ಕೇವಲ ಐವತ್ತಡಿ ಎನ್ನುವಾಗ ನಾಯಕರಲ್ಲಿ ಔಪಚಾರಿಕತೆ ಜಾಗೃತವಾಯ್ತು. ಎಲ್ಲರೂ ಅರ್ಧ ವೃತ್ತಾಕಾರದಲ್ಲಿ ನಿಂತೆವು. ಗೋವಿಂದರಾಜ್, ಸುಜಾತ ಎರಡೆರಡು ಭಾವುಕ ಮಾತಾಡಿದರು. ಯಾವುದೇ ಶಿಖರದ ಅಗ್ರಭಾಗ ಪರ್ವತಾರೋಹಿಗೆ ಪವಿತ್ರ. ಅಲ್ಲಿ ಸ್ಪರ್ಧೆ ಕೂಡದು, ನೆಲೆ ನಿಲ್ಲುವುದು ತಪ್ಪು. ನಮ್ಮ ಪರ್ವತಾರೋಹಣ ಸಂಸ್ಥೆ ಮತ್ತು ಜಾವಾ ಕಾರ್ಖಾನೆಯ ಬ್ಯಾನರುಗಳನ್ನು ಅರಳಿಸಿ, ರಾಷ್ಟ್ರಧ್ವಜವನ್ನು ಎತ್ತಿಹಿಡಿದ ಹಿಮಗೊಡಲಿಯ ತುದಿಗೇರಿಸಿ, ಹಾಗೇ ವೃತ್ತಾಕಾರದಲ್ಲಿ ಎಲ್ಲರೂ (ವಾಸ್ತವದಲ್ಲಿ ಅಲ್ಲಿರದ ರಮೇಶ್ ಜಸವಂತರೂ ನಮ್ಮೊಡನಿದ್ದಾರೆಂಬ ಭಾವದಲ್ಲಿ) ಮುಂದುವರಿದು ಏಕಕಾಲಕ್ಕೆ ತಾತಾರ್ ವಿಜಯಿಗಳಾದೆವು. ಟೈಗರ್ ಸಂತೋಷದಿಂದ ಕುಂಯ್‌ಗುಟ್ಟುತ್ತ ಎಲ್ಲರ ಅಕ್ಕಪಕ್ಕಗಳಲ್ಲಿ ಸುಳಿದಾಡುತ್ತ ಸಂಭ್ರಮಿಸುತ್ತಿದ್ದದ್ದು ಆಶ್ಚರ್ಯ ಆದರೂ ನಿಜ! ಸ್ವಲ್ಪ ವಿರಮಿಸಿದ್ದ ತಂಪುತ್ರಯ (ಮಳೆ, ಮಂಜು, ಗಾಳಿ; ತಾಪತ್ರಯದ ವಿರುದ್ಧಪದ) ಮತ್ತೆ ತೊಡಗಿದರೂ ನಮ್ಮನ್ನು ಹರಸಲು ಬಂದದ್ದಿರಬೇಕು ಎಂದು ನಾವು ಭಾವುಕರಾದೆವು! ಬಹುಶಃ ಈ ವಿಶ್ವಾಸವೇ ಮುಂದೆ ನಮ್ಮನ್ನು ಅನಾರೋಗ್ಯದಿಂದಲೂ ಕಾಪಾಡಿರಬೇಕು. ನಾನಾ ಕೋನಗಳಿಂದ ಚಿತ್ರಗ್ರಹಣ, ಮಣ್ಣೋ ಕಲ್ಲೋ ಎಲೆಯೋ ಸ್ಮರಣಿಕೆಗಳ ಸಂಗ್ರಹಗಳೆಲ್ಲಾ ಏನೋ ವೈದಿಕ ವಿಧಿಯ ಗಾಂಭೀರ್ಯದಲ್ಲಿ ನಡೆಯಿತು. ಹಾಗೇ ಮುಂಬರುವ ಸಾಹಸಿಗಳಿಗೆ ಕಾಲಕೋಶದಂತೆ ಒದಗಲು ದೇಶ, ಕಾಲ, ನಾಮಗಳ ಪಟ್ಟಿ ಮಾಡಿ (ಸ್ವಸ್ತಿಶ್ರೀ ವಿರೋಧಿಕೃತ್ ನಾಮ ಸಂವತ್ಸರದ ಪುಷ್ಯ ಮಾಸ, ಎಳ್ಳಮಾವಾಸ್ಯೆಯ ಶುಭದಿನ, ಶುಕ್ರವಾರ ಅಂದರೆ ಕ್ರಿಸ್ತಶಕ ಸನ್ ಸಾವಿರದ ಒಂಬೈನೂರಾ ಎಪ್ಪತ್ತ ಒಂದನೆಯ ಇಸವಿ, ಡಿಸೆಂಬರ್ ಹದಿನೇಳನೆಯ ದಿನಾಂಕ, ಅಪರಾಹ್ನ ಎರಡು ಗಂಟೆ ಮೂವತ್ತು ಮಿನಿಟಿಗೆ, ದಖ್ಖಣ ಪರ್ವತಾರೋಹಣ ಸಂಸ್ಥೆ, ಮೈಸೂರಿನ ಹದಿನಾರು ಪ್ರುರುಷರು, ನಾಲ್ವರು ಮಹಿಳೆಯರು, ಮೂವರು ಮಾರ್ಗದರ್ಶಿಗಳು ಮತ್ತು ಒಂದು ನಾಯಿ, ಎಡೆಬಿಡದ ಮಂಜು ಮಳೆಸುಳಿಗಾಳಿಗಳೊಡನೆ ಒಂದೂವರೆ ದಿನದ ಹೋರಾಟದ ಕೊನೆಯಲ್ಲಿ, ಮಸಣಿಗುಡಿ ನಾಮದ ಊರಿನತ್ತಣಿಂದ, ದಟ್ಟ ಕಾನನವನ್ನು ದಿಟ್ಟ ಬೆಟ್ಟವನ್ನು ಉತ್ತರಿಸಿ, ಉದಕಮಂಡಲ ಶ್ರೇಣಿಸ್ಥಿತ, ಸಮುದ್ರ ಮಟ್ಟದಿಂದ ಏಳು ಸಾವಿರದ ನಾನೂರ ನಲವತ್ತೇಳು ಅಡಿ ಔನ್ನತ್ಯದ, ತಾತಾರ್ ಗಿರಿಶಿಖರವನ್ನು ಜಯಿಸಿದೆವು), ಕೆಲವರು ಅವರ ಒಂದೊಂದು ಪ್ರಿಯ ವಸ್ತುಗಳನ್ನು ಸೇರಿಸಿ (ಗೋವಿಂದರಾಜ್ ಅವರ ಒಂದು ಕೈಗವುಸು, ಗಿರೀಶ ಒಂದು ಪುಸ್ತಕ, ಕಾವೇರಿಯಮ್ಮ ಹೂ ಕುಂಕುಮ, ನಾನು ಅದುವರೆಗೆ ಬಳಸಿದ್ದ ಕಾಡು ಊರುಗೋಲು ಇತ್ಯಾದಿ), ಮುಖ್ಯ ಗುಪ್ಪೆಯ ಕಲ್ಲ ಸಂದಿನಲ್ಲಿ ಭದ್ರಪಡಿಸಿದೆವು. ಕೆಲವರ ಇಷ್ಟದೇವತಾ ಸ್ತೋತ್ರ, ಮನೆಮಂದಿಗಳ ಸ್ಮರಣೆ, ಸವೆಯಿಸಿದ ದಾರಿಯ ರೋಚಕ ನೆನಪು, ಒಟ್ಟಾರೆ ಗಾಳಿಮಳೆಯ ಗದ್ದಲ ಮೀರುವ ಘೋಷಗಳೊಡನೆ ಸಿಹಿ ಹಂಚಿ ಮುಗಿಸಿದೆವು.

ಚಳಿ ತಡೆಯಲಾರದೆ ಸೂರ್ಯ ಆಗಲೇ ಗೃಹಾಭಿಮುಖನಾಗಿದ್ದ. ಸುಬ್ಬಯ್ಯನ್ ಅಲ್ಲಿದ್ದ ಊರ ದನಗಳು ಬಿಟ್ಟುಹೋದ ಜಾಡು ನೋಡಿ, ನಮಗೆ ಹಿಂದಿರುಗಲು ಹೆಚ್ಚು ನಾಗರಿಕ ಜಾಡು ಸೂಚಿಸಿದ. ಮತ್ತದು ನಮ್ಮವರಿಗೂ ಒಪ್ಪಿಗೆಯಾದ್ದರಿಂದ ನಾವು ಹಿಂದೆ ಬಿಟ್ಟ ಜನ, ಸಾಮಾನನ್ನು ತರಲು ಧಾವಿಸಿದೆವು. ಪೊದರ ಗುಹಾಮಾರ್ಗದ ಉದ್ದಕ್ಕೆ ಅಕ್ಷರಶಃ ಹಿಮಜಾರಾಟವನ್ನೇ ಅನುಕರಿಸಿದೆವು. ರಾಜು ರಮೇಶಾದಿಗಳಿಗೆ ವಿಜಯವಾರ್ತೆಯೊಡನೆ ದಾರಿ ಬದಲಾವಣೆಯನ್ನೂ ತಿಳಿಸಿ, ಸಮಯಾಭಾವವನ್ನು ಗಮನದಲ್ಲಿಟ್ಟುಕೊಂಡು ಗಂಟು ಮೂಟೆಗಳನ್ನು ಬೆನ್ನಿಗೇರಿಸಿ ಮತ್ತೆ ಶಿಖರಕ್ಕೆ ಮರಳಿ… ನಿಲ್ಲಿ, ನಿಲ್ಲಿ. ಗುಹಾಮಾರ್ಗ ಮೊದಲ ಶೋಧದಲ್ಲೇ ಕೆಸರೆದ್ದಿತ್ತು. ಮತ್ತಿಳಿಯುವಾಗ ಎಲ್ಲರೂ ನಿರ್ಯೋಚನೆಯಿಂದ ಜಾರಿ ಈಗ ಅದು ಅಕ್ಷರಶಃ ಜಾರುಗುಪ್ಪೆ. ಸಾಲದ್ದಕ್ಕೆ ಬೆನ್ನ ಮೇಲೆ ಸಿಂದಬಾದನ ಮುದುಕ! ಎಷ್ಟೇ ಎಚ್ಚರಿಕೆಯಿಂದ ಎರಡೂ ಬದಿಯ ಗಿಡಗಳ ಬುಡ ಹಿಡಿದು, ಮತ್ತೊಂದೆರಡು ಬುಡ ತುಳಿದು ಮುಂದುವರಿಯ ತೊಡಗಿದರೆ ಬೆನ್ನ ಗಂಟನ್ನು ಪೊದರ ಚಪ್ಪರ ಹೆಟ್ಟಿಯೂ ಮಲಗಿಸುತ್ತಿತ್ತು. ಅಂತೂ ಇಂತೂ ಅದರಿಂದ ಪಾರಾಗುವುದರೊಳಗೆ ಕನಿಷ್ಠ ಎರಡು ಬಾರಿಯಾದರೂ ನೆಲಕಚ್ಚದ ವ್ಯಕ್ತಿಯಿರಲಿಲ್ಲ! ಮೊದಲೇ ಬಳಲಿದವರು ಈಗ ಅಡಿಯಿಂದ ಮುಡಿವರೆಗೆ ಕೆಸರ ಮುದ್ರೆ ಹೊಡೆದುಕೊಂಡು ಶಿಖರ ಸೇರುವಾಗ ಸಾಕೋ ಸಾಕು. ಹೆಚ್ಚಿದ ಮಂಜು ಚಳಿಯ ಹೊಡೆತದಲ್ಲಿ (ಇಪ್ಪತ್ತಡಿ ಆಚೆಗೆ ಎಲ್ಲವೂ ಮಾಯ) ಎಲ್ಲರೂ ಚಡಪಡಿಸುತ್ತ, ಒಂದಷ್ಟು ಗ್ಲುಕೋಸ್, ನೀರು ಮಾತ್ರ ಸೇವಿಸಿ, ಜನಗಣಮನ ಹಾಡಿ, ಶಿಖರ ಬಿಟ್ಟೆವು. ಗಂಟೆ ಮೂರು ಮುವತ್ತೈದು.

[ಚಿತ್ರ ಸೂಚನೆ: ೧. ನನ್ನ ಆ ಕಾಲದ ಬೆನ್ನುಚೀಲ, ಮೇಲೆ ಮಲಗಿದ ನೀರ ಅಂಡೆ, ಚೀಲಕ್ಕೆ ಕತ್ತರಿಯಾಕಾರದಲ್ಲಿ ಕುತ್ತಿದ ಗುಡಾರದ ಗೂಟ, ತಲೆಗೆ ಕಾಡುಟೊಪ್ಪಿ ಇತ್ಯಾದಿಗಳಿಗೆ ರೂಪದರ್ಶಿ - ತಮ್ಮ ಆನಂದವರ್ಧನ, ಬೇರೊಂದು ಸಾಹಸಯಾತ್ರೆ ಮುಗಿಸಿ ಬರುವಾಗ ಬೂಟು ಕಚ್ಚಿದ ಪರಿಣಾಮವಾಗಿ ಚಪ್ಪಲಿಧಾರಿ, ಬೂಟು ಕಂಠಾಭರಣ! ೨. ನನ್ನಲ್ಲಿ ಲಭ್ಯವಿರುವ, ತಂಡದ ಇತರ ಗೆಳೆಯರ ಆ ಕಾಲದ ಚಿತ್ರಗಳು - ಕಾವೇರಿಯಮ್ಮ, ನಿರ್ಮಲಾ ಪ್ಯಾಟ್ರಿಕ್.]

ಕರಡಿ ಬೆಟಕೆ ಹೋಯಿತು (ರಾಗದಲ್ಲಿ ಮೂರು ಬಾರಿ ಹೇಳತಕ್ಕದ್ದು. ಮತ್ತೆ), ನೋಡಿತೇನನೂಊಊಊಊಊಊ? ವಾರಕಾಲ ಜಪಿಸಿ ಬನ್ನಿ, ಸಿದ್ಧಿಯೋ ಸುದ್ಧಿಯೋ ಮುಂದಿನ ಕಂತಿನಲ್ಲಿ! ತಾತಾರ್ ವಿಜಯ ವಾರ್ತೆ ಕೇಳಿಸಿದ್ದಕ್ಕೆ ಮನ್ ಪಸಂದ್ ಮಾಡಲಿಕ್ಕೆ ನ ಭೂಲಿಯೇ. ಮಳೆನೀರು ಹಿಂಡಿ, ಅಂಗಾತ ಇಟ್ಟ ನನ್ನ ಜಂಗಲ್ ಹ್ಯಾಟೆಂದೇ ಭಾವಿಸಿ ಪ್ರತಿಕ್ರಿಯಾ ಅಂಕಣವನ್ನು ತುಂಬಿ…

ಮೌಲ್ಯಗಳ ಪುಡಾರೀಕರಣ
ಗತಕಥನದ ಲಹರಿಯಲ್ಲಿ ವರ್ತಮಾನ ಕಳೆದುಹೋಗದಂತೆ ಈ ವಾರ ಮತ್ತೆ ತಾತಾರ್ ತಡೆದಿದ್ದೇನೆ. ಹಸಿವು ಹೆಚ್ಚಿಸಿ ತಿನಿಸು ಮೆಚ್ಚಿಸುವ ರೀತಿಯಲ್ಲಿ ಇಲ್ಲೊಂದು ಕಟುಕರೋಹಿಣಿ ಕಷಾಯ ಕಾಯಿಸಿ ಇಟ್ಟಿದ್ದೇನೆ. ನಿಧಾನಕ್ಕೆ ತಗೊಳಿ,  ಸೆರೆ ಸಿಕ್ಕೀತು, ಹುಶಾರ್!

ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ ಸ್ವಾದ’ ಕಂಡದ್ದೂ ಇದೆ, ‘ತುತ್ತಿನ ಕಲ್ಲು’ ಉಗುಳಿದ್ದೂ ಇದೆ. ಆದರೆ ಇವುಗಳಲ್ಲಿ ವೈಯಕ್ತಿಕತೆಯನ್ನು ಮೀರಿ, ಸಾಮಾಜಿಕ ಕುಶಿ ಅಥವಾ ಚಿಂತನೆಯ ಭಾಗಗಳಾಗುವಂತವನ್ನು ಎಚ್ಚರದಿಂದ ಸಾರ್ವಜನಿಕದಲ್ಲಿ ಹಂಚಿಕೊಂಡಿದ್ದೇನೆ. ಹಾಲಾಹಲವಾದರೆ ನೀಲಕಂಠನಾದರೂ ಸರಿ, ಅಮೃತ ಮೂಡಿದರೆ ಮೋಹಿನಿಯಾಗಲೇಬೇಕು (ಅನ್ಯಾರ್ಥಗಳನ್ನು ಮರೆತುಬಿಡಿ). ಈ ಮರೆಯಬಾರದ ಸಂಕೇತಗಳ ಪ್ರೇರಣೆಯಲ್ಲಿ ಫೆಬ್ರುವರಿ ೨೩ಕ್ಕೆ ನಾನು ಕೆಳಗೆ ಕಾಣಿಸಿದ ಲೇಖನ ಬರೆದೆ. ಮಿಂಚಂಚೆಯಲ್ಲಿ ಉದಯವಾಣಿಯ ಗೆಳೆಯ ಸತ್ಯಗಣಪತಿಗೆ ಕಳಿಸಿ “ಬೇಕೇ” ಕೇಳಿದೆ. ನನ್ನ ಕಾತರಕ್ಕೆ ಆತ ಉತ್ತರಿಸಲಿಲ್ಲ; ನಿರೀಕ್ಷೆ ಮೀರಿದ ಚುರುಕಿನಲ್ಲಿ ಮರುದಿನವೇ ಪ್ರಕಟಿಸಿಬಿಟ್ಟರು!

ಇಂದು ಮಾಧ್ಯಮಗಳ ವೈವಿಧ್ಯಕ್ಕೆ ತಕ್ಕಂತೆ ಸಂಪರ್ಕ ಸಾಧ್ಯತೆಗಳೂ ವಿಭಿನ್ನ. ಹಾಗಾಗಿ ಮೇ ಫ್ಲವರ್ ಮೀಡಿಯಾ ಹೌಸಿನ ಗೆಳೆಯ ಜಿ.ಎನ್. ಮೋಹನ್ನರಿಗೂ ಇದೇ ಲೇಖನವನ್ನು ದೂಡಿ (ಫಾರ್ವರ್ಡಿಸಿ), ಸೂಚಿಸಿದೆ, ‘ಇದು ಇಂದಿನ ಉದಯವಾಣಿಯಲ್ಲಿ ಪ್ರಕಟವಾಗಿದೆ. ನಿಮಗೆ ಬೇಕಾದಂತೆ ಬಳಸಿಕೊಳ್ಳಿ. ಅವರೂ ಮರುಕ್ಷಣದಲ್ಲಿ ತಮ್ಮ ‘ಅವಧಿ’ಯಲ್ಲಿ ಪ್ರಕಟಿಸಿದರು. ಈಗ ಮೊದಲು ಲೇಖನ ನೋಡಿ:

ಪುಸ್ತಕ ಖರೀದಿಯಲ್ಲಿ ಪಕ್ಷ ರಾಜಕೀಯ

ನಾನೊಬ್ಬ ಬಿಡಿ ಪುಸ್ತಕ ವ್ಯಾಪಾರಿ. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣ ಅಧಿಕಾರಿ, ಪುತ್ತೂರು ಇವರಿಂದ, ಸ್ಥಳೀಯ ಶಾಸಕರ ‘ಶಾಸಕನಿಧಿ’ಯ ಬಲದಲ್ಲಿ, ಸುಮಾರು ಎರಡು ಲಕ್ಷ ಮೌಲ್ಯದ ಕನ್ನಡ ಭಾರತ ಭಾರತಿ ಪುಸ್ತಕಗಳ ಖರೀದಿಗೆ ‘ದರಪಟ್ಟಿ’ ಕೇಳಿ ನನಗೊಂದು ಪತ್ರ ಬಂತು. ಸಾರ್ವಜನಿಕ ಸಂಸ್ಥೆಗಳು ಯಾವುದೇ ಖರೀದಿಯಲ್ಲಿ ತಮ್ಮ ಗರಿಷ್ಠ ಹಿತ (ಹಣ ಮತ್ತು ಗುಣಗಳಲ್ಲಿ) ಕಾಯುವ ಕ್ರಮವಾಗಿ ಮತ್ತು ಅವು ತಳೆಯಲೇಬೇಕಾದ ನಿಷ್ಪಕ್ಷ ನಿಲುವಿಗೆ ಬದ್ಧವಾಗಿ ಕನಿಷ್ಠ ಮೂರು ಮಳಿಗೆಗಳಿಂದ ಈ ದರಪಟ್ಟಿ ಕೇಳುವ ಕ್ರಮ ಅನುಸರಿಸಲಾಗುತ್ತದೆ. ಆದರೆ ಇಲ್ಲಿ ಈ ಕ್ರಮವನ್ನು ತಪ್ಪು ಸಂಗತಿಗೆ ಅನ್ವಯಿಸಿ, ತಪ್ಪನ್ನು ಒಪ್ಪಾಗಿಸುವ ದುರುದ್ದೇಶ ಎದ್ದು ಕಾಣುತ್ತದೆ! ಪತ್ರವೇ ಹೇಳಿಕೊಂಡಂತೆ, ಎರಡು ಲಕ್ಷ ರೂಪಾಯಿ ಮೌಲ್ಯದವರೆಗೆ ಇಲಾಖೆ ಕೊಳ್ಳಲುದ್ದೇಶಿಸಿರುವುದು ಒಟ್ಟಾರೆ ಮಕ್ಕಳ ಪುಸ್ತಕಗಳಲ್ಲ, ಕೇವಲ ಕನ್ನಡ ಭಾರತ ಭಾರತಿ ಪುಸ್ತಕಗಳು ಮಾತ್ರ. ಕನ್ನಡದಲ್ಲಿ, ಮಕ್ಕಳ ಮಟ್ಟದಲ್ಲಿ, ಜೀವನ ಚರಿತ್ರೆಗಳನ್ನೇ ಹುಡುಕಹೋದರೂ ವಾಸನ್ ಪಬ್ಲಿಕೇಶನ್ಸ್, ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಶನ್ಸ್ ಮೊದಲಾಗಿ ಹಲವು ಪ್ರಕಾಶಕರು ಉದ್ದುದ್ದ ಮಾಲೆಗಳನ್ನೇ ಕೊಟ್ಟಿರುವುದು ಕಾಣುತ್ತೇವೆ. ಬೆಲೆ, ಗಾತ್ರ, ಗುಣಮಟ್ಟಗಳಲ್ಲೂ ಅಪಾರ ವೈವಿಧ್ಯ ಸಿಗುತ್ತವೆ. ಹೀಗೆ ವಿವಿಧ ಪ್ರಕಾಶನ ಮಾಲೆಗಳ ನಡುವೆ ನಡೆಯಬಹುದಾಗಿದ್ದ ತುಲನೆ, ಒಂದೇ ಮಾಲೆಯ ಅದೂ ಬರಿಯ ಬೆಲೆ ಚೌಕಾಸಿಯ ಮಟ್ಟಕ್ಕೆ ಸೀಮಿತಗೊಳಿಸಲ್ಪಟ್ಟಿದೆ. (ಹಣಕಾಸಿನ ವ್ಯವಸ್ಥೆ ನೋಡಿಕೊಳ್ಳುವವರು ಗುಣಮಟ್ಟದಲ್ಲಿ ಹಸ್ತಕ್ಷೇಪಿಸುತ್ತಿರುವುದು ಇದು ಮೊದಲೇನಲ್ಲ!)

ಭಾರತ ಭಾರತಿ ಪುಸ್ತಕ ಮಾಲೆ ಸುಮಾರು ಮೂವತ್ತು ವರ್ಷಗಳ ಹಿಂದೆ ರಾಷ್ಟ್ರೋತ್ಥಾನ ಪರಿಷತ್ತು (ಬೆಂಗಳೂರು), ತನ್ನ ‘ಹಿಂದೂದೇಶದ’ ಪರಿಕಲ್ಪನೆಗೆ ಪೂರಕವಾಗುವಂತೆ, ವಿವಿಧ ಲೇಖಕರಿಂದ ಬರೆಯಿಸಿದ ಸುಮಾರು ಐದುನೂರು ವ್ಯಕ್ತಿಗಳ ಜೀವನ ಚರಿತ್ರಾ ಮಾಲಿಕೆ. ಸೀಮಿತ ಪುಟ ಸಂಖ್ಯೆ ಮತ್ತು ವಿಷಯ ನಿರ್ವಹಣೆಯೊಡನೆ ಇವು ಮೊದಲು ಪುಟ್ಟ ಮಗ್ಗಿ ಪುಸ್ತಕಗಳಂತೆಯೂ ಈಚಿನ ಮರುಮುದ್ರಣಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರಪುಸ್ತಕ ಮಾಲೆಗಳ ಆಕಾರದಲ್ಲೂ ಬರುತ್ತಿವೆ. (ಕಾಲಾನುಕ್ರಮದಲ್ಲಿ ಇವುಗಳ ಇಂಗ್ಲಿಷ್ ಅನುವಾದಗಳೂ ಬಂದುದರಿಂದ ಇಲ್ಲಿ ‘ಕನ್ನಡ’ ಎಂದಿದ್ದಾರೆ. ಅವು ತಲಾ ಎಪ್ಪತ್ತೈದು ಪೈಸೆ ಬೆಲೆಯಿಂದ ತೊಡಗಿದ್ದರೂ ಸದ್ಯ ರೂ ಎಂಟರ ಮುದ್ರಿತ ಬೆಲೆ ತಲಪಿರುವುದು ಎಲ್ಲರಿಗೂ ತಿಳಿದಿದೆ.) ಇವು ಏಕಸ್ವಾಮ್ಯದ, ಏಕ ಗುಣಮಟ್ಟದ, ಏಕ ಬೆಲೆಯ ಪ್ರಕಟಣೆಗಳು. ಅವು ಅಸಂಖ್ಯ ಮರುಮುದ್ರಣಗಳನ್ನು ಕಂಡಿವೆ, ಕಾಲಕ್ಕನುಗುಣವಾಗಿ ಬೆಲೆ ಏರಿದ್ದೂ ನ್ಯಾಯವೇ. ಆದರೆ ವಸ್ತು, ನಿರ್ವಹಣೆ ಮತ್ತು ಪರಿಷ್ಕರಣೆಗಳ ಸ್ತರದಲ್ಲಿ ವೈವಿಧ್ಯತೆ ಇಲ್ಲದ ಮಾಲು. ಅವನ್ನು ಮೂರಲ್ಲ ನೂರು (ನನ್ನಂಥ) ಬಿಡಿ ಮಾರಾಟಗಾರರಲ್ಲಿ ದರಪಟ್ಟಿ ಕೇಳಿಸಿದರೂ ಒಪ್ಪಂದ ಅಂತಿಮಗೊಳ್ಳುವುದು ರಾಷ್ಟ್ರೋತ್ಥಾನ ಪರಿಷತ್ತಿನ ನಿಯಮದಂತೇ ಮತ್ತವರು ಮುದ್ರಿಸಿದ ಬೆಲೆಯ ಒಳಗೇ ಆಗಬೇಕು. (ಬಿಡಿ ಮಾರಾಟಗಾರರ ಮಟ್ಟದಲ್ಲಿ ರಾಷ್ಟ್ರೋತ್ಥಾನಕ್ಕೆ ಸಾಹಿತ್ಯ ಸಿಂಧುವೆಂಬ ಮಳಿಗೆಯೂ ಇದೆ ಎಂಬುದು ಗಮನಾರ್ಹ.)

ಈ ವಹಿವಾಟಿನಲ್ಲಿ ‘ಶಾಸಕರ ನಿಧಿ’ ಎಂಬ ಉಲ್ಲೇಖವಿರುವುದನ್ನು ವಿಶೇಷವಾಗಿ ಗಮನಿಸಬೇಕು. ಪ್ರಜಾಸತ್ತೆಯಲ್ಲಿ ಪ್ರತಿನಿಧಿಗಳಿಗೆ ಶಾಸನಗಳ ಕಟ್ಟುಪಾಡು ಇದ್ದಂತೆ, ವಿವೇಚನೆಯ ಅಧಿಕಾರ ಮತ್ತು ಸವಲತ್ತುಗಳು ಅನೇಕವಿರುವುದು ನಮಗೆಲ್ಲ (ಪೂರ್ಣ ಅರಿವಿದೆ ಎನ್ನಲಾರೆ) ಅಂದಾಜಿದೆ. ಅದರಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಂಸದ, ಶಾಸಕರೇ ಮುಂತಾದವರಿಗೆ ತಮ್ಮತಮ್ಮ ವಿವೇಚನೆಯ ವಿನಿಯೋಗಕ್ಕೆ ಸೀಮಿತ ನಿಧಿ ಇರುವುದೂ ಹೌದು. ಇಲ್ಲಿ ಅದರ ಅಂಶವನ್ನು ಓರ್ವ ಶಾಸಕ ಶಾಲಾ ಗ್ರಂಥಾಲಯಕ್ಕೆ ನಿರ್ದೇಶಿಸಿದ್ದೂ ಸರಿ. ಅಂದ ಮಾತ್ರಕ್ಕೆ ಅಂಥ ನಿರ್ದೇಶನಗಳು ಸೂಕ್ಷ್ಮಗಳಲ್ಲಿ (ಶಾಸಕನ) ವೈಯಕ್ತಿಕವಾಗುವುದು ನೈತಿಕವಾಗಿ ತಪ್ಪು. ಆಡಳಿತದಲ್ಲಿ ಕೆಲಸದ ವಿಭಾಗೀಕರಣದೊಡನೆ ಜವಾಬ್ದಾರಿಗಳ ಹಂಚಿಕೆಯೂ ಆಗಿರುತ್ತದೆ ಎಂಬ ತಿಳುವಳಿಕೆ ಜನಪ್ರತಿನಿಧಿಗಳಿಗೆ ಇರಲೇ ಬೇಕು. ಗ್ರಂಥಾಲಯ ಬಲಪಡಿಸಬೇಕು ಎಂಬ ವಿವೇಚನೆ ಸರಿ. ‘ಯಾವುದರಿಂದ’ ಎನ್ನುವ ವಿವರ ಹೇಳಲು ವಿದ್ಯಾರ್ಥಿ, ಶಿಕ್ಷಕರು ಸಮರ್ಥರಿಲ್ಲವೇ? ‘ಎಷ್ಟು, ಹೇಗೆ’ ಎಂದು ನೋಡಿಕೊಳ್ಳಲು ಇಲಾಖೆಯ ಸಿಬ್ಬಂದಿಗಳಿಲ್ಲವೇ? ‘ಕನ್ನಡ ಭಾರತ ಭಾರತಿ’ ಪುಸ್ತಕಗಳನ್ನೇ ಕೊಳ್ಳಬೇಕು ಎಂದವರು ನಾಳೆ ‘ಇಂಥದ್ದೇ ಮಳಿಗೆಯಲಿ’, ‘ಇಷ್ಟೇ ಮೊತ್ತಕೊಟ್ಟು’ ಎಂದೆಲ್ಲಾ ಹೇಳಲೂಬಹುದಲ್ಲವೇ? ಇದು ವಿವೇಚನೆಯ ಹೆಸರಿನಲ್ಲಿ ಹಾಜರಾದ ಮದುವೆಗಳಲ್ಲಿ ವರನೂ (ಅಥವಾ ವಧುವೂ) ಮರಣಗಳಲ್ಲಿ ಹೆಣವೂ ಆಗಲು ಹೊರಟಷ್ಟೇ ಹಾಸ್ಯಾಸ್ಪದ. ಕನ್ನಡ ಭಾರತಭಾರತಿ ಖರೀದಿಗೆ ಆಜ್ಞಾಪಿಸಿರುವುದು ತೀರಾ ಪ್ರಾಥಮಿಕ ಮಟ್ಟದ ಪಕ್ಷಪಾತ (ಪಕ್ಷವಾತ)! ಚುನಾವಣೆಯವರೆಗೆ ತಾನು ಪಕ್ಷದ ಪ್ರತಿನಿಧಿ ಅನಂತರ (ಚುನಾಯಿತನಾದ ಎಂದಿಟ್ಟುಕೊಳ್ಳಿ) ಸಮಗ್ರ ಸಮಾಜದ ಸೇವಕ ಎಂಬ ಉನ್ನತ ಆದರ್ಶಕ್ಕೆ ಇಂದು ಆಚರಣೆಯಲ್ಲಿ ಬಿಡಿ, ಕಡತಗಳಲ್ಲೂ ಅಡ್ಡಗೀಟು ಬಿದ್ದಿರುವುದು ಪ್ರಜಾಸತ್ತೆಯ ದುರಂತ.

ಮಕ್ಕಳು ಮತ್ತು ಶಾಲಾ ಶಿಕ್ಷಕರಷ್ಟೇ ನಿರ್ಧರಿಸಬಹುದಾದ ವಿಷಯವನ್ನು ಇಲಾಖೆಯ ಮಟ್ಟದಲ್ಲೇ ನಿಗದಿಗೊಳಿಸಿ ‘ಕನ್ನಡ ಭಾರತ ಭಾರತಿ ಪುಸ್ತಕಗಳು’ ಎಂದು ಹೆಸರಿಸಿರುವುದು ಶಿಕ್ಷಕರ ವಿಚಾರ ಸ್ವಾತಂತ್ರ್ಯವನ್ನು ನಗಣ್ಯ ಮಾಡಿದಂತೆಯೂ ಆಗಿದೆ. ಶಾಲೆಗಳಿಗೆ ಮತ್ತು ವ್ಯಾಪಾರಿಗಳಿಗೆ ಎರಡು ಲಕ್ಷ ಮೌಲ್ಯದ ಪುಸ್ತಕ ಕೊಡಿಸುವ ಕೃಪಾಹಸ್ತವನ್ನೂ ಮೇಲಿನ ಲೆಕ್ಕಾಧಿಕಾರಿಗಳಿಗೆ ‘ನಿಯಮಪ್ರಕಾರ’ ಶುದ್ಧಹಸ್ತವನ್ನೂ ತೋರುವ ಈ ಕ್ರಮ ಪಕ್ಷ ರಾಜಕೀಯದ ಕೆಟ್ಟಮುಖ. ಇಲ್ಲಿ ದರಪಟ್ಟಿಯನ್ನು ಕೇಳುವುದು ನಿಯಮಗಳ ಪಾಲನೆಯ ಕಣ್ಕಟ್ಟು ಮತ್ತು ಅಪ್ರಾಮಾಣಿಕವಾದ ವ್ಯವಾಹಾರ ನೀತಿ ಎನ್ನುವುದು ಸ್ಪಷ್ಟ. ಎತ್ತಿಹಿಡಿದಂತೆ ತೋರುವ ನ್ಯಾಯತಕ್ಕಡಿ, ನಿಜದಲ್ಲಿ ಸಾರ್ವಜನಿಕರನ್ನು ಮಾಡುತ್ತಿದೆ ಬೆಪ್ಪುತಕ್ಕಡಿ!

(ಲೇಖನ ಮುಗಿಯಿತು)

ಈ ಕುರಿತು ಪುತ್ತೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗೆ ನಾನು ಮೊದಲೇ ನೇರ ಪತ್ರವನ್ನೇ ಬರೆದಿದ್ದೆ. ಅದಕ್ಕೂ ಈ ಪತ್ರಿಕಾ ಲೇಖನಕ್ಕೂ ಅವರಿಂದ ಇದುವರೆಗೆ ಉತ್ತರ, ಪ್ರತಿಕ್ರಿಯೆ ಬಂದಿಲ್ಲ.

ವೃತ್ತಿಜೀವನ ಕಾಲದಲ್ಲಿ ಓರ್ವ ಪ್ರೌಢಶಾಲಾ ಶಿಕ್ಷಕನಷ್ಟೇ ಆಗಿದ್ದ, ಆದರೆ ಆಗಲೂ ಈಗಲೂ (ನಿವೃತ್ತಿಯ ದಿನಗಳು) ಉನ್ನತಮಟ್ಟದ, ಕ್ರಿಯಾಶೀಲ ಶಿಕ್ಷಣತಜ್ಞನಾಗಿ ದುಡಿಯುತ್ತಿರುವ ಸಿ.ಎಚ್ ಕೃಷ್ಣ ಶಾಸ್ತ್ರಿಗಳು ಉದಯವಾಣಿ ನೋಡಿದ ಕೂಡಲೇ ದೂರವಾಣಿಸಿ, ಸ್ಪಷ್ಟನುಡಿಗಳೊಡನೆ ನನ್ನನ್ನು ಬೆಂಬಲಿಸಿದರು. ಮಂಗಳೂರಿಗೆ ಬರುವ ಮೊದಲ ಅವಕಾಶದಲ್ಲಿ ನನ್ನನ್ನು ಭೇಟಿಯಾಗಿ, ಸರಕಾರೀ ಯೋಜನೆಗಳು ಆರ್ಥಿಕ ವಹಿವಾಟಿನಲ್ಲಿ ಕಾಣಿಸುವ ಯಶಸ್ಸನ್ನು ಕಾರ್ಯರಂಗದಲ್ಲಿ ಕಾಣಿಸುತ್ತಿಲ್ಲವೇಕೆ ಎನ್ನುವುದಕ್ಕೆ ಅವರು ಸ್ವಾನುಭವದ ಉದಾಹರಣೆಯೊಡನೆ ವಿವರವಾಗಿ ಮಾತಾಡಿದರು. (ಅನ್ಯಾತಿಕ್ರಮಣದ ಎಚ್ಚರದಲ್ಲಿ ಅವರು ಕೊಟ್ಟ ಉದಾಹರಣೆಯನ್ನು ನಾನಿಲ್ಲಿ ಉದ್ಧರಿಸಿಲ್ಲ.)

‘ಅವಧಿ’ಯಲ್ಲಿ ‘ಶಿವ’ ಹೆಸರಿನ ಅಪರಿಚಿತರೊಬ್ಬರು ಕೂಡಲೇ ಪ್ರತಿಕ್ರಿಯಿಸಿದರು. “ನಾವೂ ಸಾರ್ವಜನಿಕರೇ. ಇಲ್ಲಿ ನಮಗೇನೂ ಬೆಪ್ಪುತಕ್ಕಡಿ ಆಗಿದ್ದೇವೆ ಅನ್ನಿಸುತ್ತಿಲ್ಲ ಅಂದಮೇಲೆ ಭಾರತ ಭಾರತಿ ಪುಸ್ತಕಗಳು ಹಿಂದೂದೇಶದ’ ಪರಿಕಲ್ಪನೆಗೆ ಪೂರಕವಾಗುವಂತೆ ಇವೆ ಎಂಬುದು ಲೇಖಕರ ಪೂರ್ವಗ್ರಹವಿರಬಹುದು.” ನನ್ನ ಪ್ರತಿ ಟಿಪ್ಪಣಿ, “ಶಿವಣ್ಣಾ ನಾನು ಕನ್ನಡ ಭಾರತ ಭಾರತಿ ಪುಸ್ತಕಗಳ ವಿಮರ್ಶೆ ಬರೆದದ್ದಲ್ಲ. ಸಾರ್ವಜನಿಕ ವ್ಯವಸ್ಥೆಗಳು ಪಕ್ಷ ರಾಜಕೀಯಕ್ಕೆ ಬಲಿಯಾಗುತ್ತಿರುವುದನ್ನು ಹೇಳ್ತಾ ಇದ್ದೇನೆ.” ಜೊತೆಯಲ್ಲೇ ಎರಡು ಗೆಳೆಯರ ಗಮನಾರ್ಹ ಟಿಪ್ಪಣಿಗಳೂ ಪ್ರಕಟವಾಗಿವೆ. ಪಂಡಿತಾರಾಧ್ಯ ಬರೆಯುತ್ತಾರೆ “ನಾವು ತಕ್ಕಡಿಯ ಯಾವ ತಟ್ಟೆಯಲ್ಲಿದ್ದೇವೆ ಎನ್ನುವುದು ನಮ್ಮ ಬಗ್ಗೆ ತಿಳಿಸುತ್ತದೆ. ಮಾನ್ಯ ಶಿವ ಅವರಿಗೆ ಇಡಿ ವ್ಯವಹಾರದಲ್ಲಿ ಯಾವ ಬೆಪ್ಪು ಗೋಚರಿಸದಿರುವುದು ಸ್ವಯಂ ವೇದ್ಯವಾಗಿದೆ.” ಡಿ.ಎಸ್ ನಾಗಭೂಷಣ ಬರೆಯುತ್ತಾರೆ, “ಪುಸ್ತಕ ಮಾರಾಟ ಬರೀ ಮಾರಾಟ ವ್ಯವಹಾರವಲ್ಲ; ಅದೊಂದು ನೈತಿಕ ಜವಾಬ್ದಾರಿಯ ಕೆಲಸ ಎಂಬುದನ್ನು ಪ್ರಿಯ ಅಶೋಕವರ್ಧನ ಅವರು ಈ ಲೇಖನದ ಮೂಲಕ ವಿಷದೀಕರಿಸಿದ್ದಾರೆ. ಹಿಂದೂ ದೇಶದ ಪರಿಕಲ್ಪನೆಯನ್ನು ಒಪ್ಪುವುದು ಬಿಡುವುದು ಬೇರೆ ವಿಷಯ. ಆದರೆ ಸಾರ್ವಜನಿಕರ ಹಣವನ್ನು ತಮಗೆ ಬೇಕಾದ ಒಂದು ಪ್ರಕಾಶನವನ್ನೂ, ಒಂದು ಸಿದ್ಧಾಂತವನ್ನೂ ಬೆಳಸಲು ಬಳಸುವುದು ಅನೈತಿಕ ಮತ್ತು ಖಂಡನಾರ್ಹ.”

ಹಂಪಿಯಲ್ಲಿ ಕೃಷ್ಣದೇವರಾಯನ ನೆಪದಲ್ಲಿ ಸಾರ್ವಜನಿಕ ಹಣದ ಭರ್ಜರಿ ವಿನಿಯೋಗ (ಒಂದು ಪತ್ರಿಕಾ ವರದಿಯ ಪ್ರಕಾರ ಎಪ್ಪತ್ತೈದು ಕೋಟಿ ರೂಪಾಯಿಗಳು) ನಡೆದದ್ದು ನಿಮಗೆಲ್ಲಾ ತಿಳಿದೇ ಇದೆ. ಹಿಂಬಾಲಿಸಿದಂತೆ (ಹಿಂಬಾಗಿಲ ಮೂಲಕ?) ಕನ್ನಡ ವಿಶ್ವವಿದ್ಯಾಲಯದ ಎಂಬತ್ತು ಎಕ್ರೆಗೆ ಪದಾರ್ಪಣೆ, ಅದೇನೋ ಉದಾತ್ತ ಹೆಸರಿನ ಸಂಸ್ಥೆಯ ಅವತರಣ ಎಲ್ಲಾ ನಡೆದುಹೋಗಿದೆ. ಇದರ ಲಕ್ಷಣ, ವ್ಯಾಪ್ತಿ ಪ್ರಜಾಪ್ರಭುಗಳಿಗೆ ತಿಳಿಯುವ ಮುನ್ನವೇ ಅದಕ್ಕೆಷ್ಟೋ ಕೋಟಿಯ ಅನುದಾನವೂ ಸರಕಾರದಿಂದ ಒದಗಿದ್ದೂ ಆಗಿದೆ. ಮತ್ತಿದು ರಾಜ್ಯಕೋಶಕ್ಕೆ ಒಮ್ಮೆ ಬಡಿದ ಸುನಾಮಿಯಾಗಬಾರದು. ನಿರಂತರ ಹಿಂಡುವ ಏಡಿಗಂತಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಸ್ಪಷ್ಟವಾಗುತ್ತಿದೆ.

ವಿವಿಧ ಸಾರ್ವಜನಿಕ ಹುದ್ದೆಗಳಲ್ಲಿ ಮೆರೆದು, ಪ್ರಾಯದೋಷದಿಂದ ಮರೆ (ನಿವೃತ್ತಿ) ಆಗಲೇ ಬೇಕಾದವರು ಸೃಷ್ಟಿಸಿಕೊಂಡ ಹತ್ತು ಹಲವು ಉದಾತ್ತನಾಮದ ಅನುದಾರ ಸಂಸ್ಥೆಗಳನ್ನು ‘ನಾವು’ ಸಹಿಸಿಕೊಳ್ಳುತ್ತಲೇ ಬಂದಿದ್ದೇವೆ. ನಿಜ ಮೌಲ್ಯ ಮಾಪನದಲ್ಲಿ ಈ ಅಕಾಡೆಮಿಗಳು (ಹೀಗೇ ಹೆಸರಿಸುವುದಾದರೆ ಕೊಡವ, ಉರ್ದು, ಬ್ಯಾರಿ, ಶಿಲ್ಪ, ಜನಪದ, ಯಕ್ಷಗಾನ ಇತ್ಯಾದಿ), ಪ್ರಾಧಿಕಾರಗಳು (ಪುಸ್ತಕ, ಅಭಿವೃದ್ಧಿ, ಅನುವಾದ, ನದಿ ತಿರುಗಿಸು, ಪಶ್ಚಿಮ ಘಟ್ಟ ಇತ್ಯಾದಿ) ಹೆಚ್ಚೇಕೆ ಹಲವು ವಿಷ-ವಿದ್ಯಾನಿಲಯಗಳು (ಸಂಗೀತ, ಮಹಿಳಾ, ಆರೋಗ್ಯ, ಸಂಸ್ಕೃತ ಇತ್ಯಾದಿ) ಎಲ್ಲಾ ಒಂದು ಇಲಾಖೆಯ ಸಮರ್ಥ ಗುಮಾಸ್ತ ನಿರ್ವಹಿಸಬಹುದಾದ ಕೆಲಸಕ್ಕಿಂಥ ಘನವಾದ್ದೇನನ್ನೂ ಸಾಧಿಸಿಲ್ಲ. ಅಂಥ ಸಂಸ್ಥೆಗಳನ್ನು ಹುಟ್ಟಿಸಿದವರ ‘ವಿಷಯ ತಜ್ಞ’ತೆಯ ಸೋಗನ್ನು ಈಗ ಜನಪ್ರತಿನಿಧಿಗಳು ಎನ್ನುವವರು ಅನಾಮತ್ತಾಗಿ ನಕಲಿಸಿದ್ದಾರೆ. ಎಲ್ಲಾ ಸರಿಯಿದ್ದರೆ ಐದು ವರ್ಷ ಬಾಳ್ತನವಷ್ಟೇ ಇರಬಹುದಾದ ಈ ಖಾಲೀ ಬಾಜಣಗಳು ಇರುವ ಅಲ್ಪಕಾಲದಲ್ಲಿ ತಮ್ಮಳವಿಗೆ ದಕ್ಕಿದ್ದೆಲ್ಲವನ್ನೂ ಕೆಡಿಸಿ, ಹೊಸ ವ್ಯಾಖ್ಯಾನವನ್ನು ಬರೆಸುತ್ತಿರುವುದಕ್ಕೆ ಇವೆರಡು ಸಣ್ಣ ಉದಾಹರಣೆಗಳು. ಹಂಪಿಯದು ಭಾರೀ ಪ್ರಮಾಣದ ಸಂಸ್ಕೃತಿಯ ಪುಡಾರೀಕರಣವಾದರೆ  ಪುತ್ತೂರಿನದು ಸಣ್ಣ ಪ್ರಮಾಣದ ಶಿಕ್ಷಣ ಪುಡಾರೀಕರಣ!

ನಮ್ಮ ಘೋಷಿತ ಜಾತ್ಯಾತೀತ ರಾಷ್ಠ್ರ ಈಗಾಗಲೇ ಅನುಭವಿಸುತ್ತಿರುವ ಮತೀಯ-ಖಂಡಾಂತರ ಚಲನೆಯ ನಡುಕಗಳನ್ನು ಇಂಥ ಪ್ರಕರಣಗಳು ಇನ್ನಷ್ಟು ಚುರುಕುಗೊಳಿಸುತ್ತವೆ. ನಾಳೆ ಇತರ ಶಾಸಕರೂ ಕನ್ನಡ ಭಾರತಭಾರತಿ ಪ್ರಕರಣವನ್ನು ಪ್ರೇರಣೆ ಮತ್ತು ಪೂರ್ವನಿದರ್ಶನಗಳನ್ನಾಗಿ ಸ್ವೀಕರಿಸಿ ತಮ್ಮ ಜಾತಿಗಳಿಗೆ ‘ನ್ಯಾಯ’ ಕೊಡಿಸಿದರೆ ಪ್ರಶ್ನಿಸಲು ನಾಲಗೆ ಏಳದು. ಮತ್ತವರ ವಿನಿಯೋಗಗಳು ಓದುವ ಪುಸ್ತಕಕ್ಕೇ ಸೀಮಿತಗೊಳ್ಳಬೇಕೆಂದು ಯಾರೂ ಹೇಳುವಂತೆಯೂ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳು ದೇವಮಾನವರಿಗೆ, ಮಠ, ದೇವಳಗಳಿಗೂ ನೇರ ನೆಲ, ಅನುದಾನ ಕೊಡುವ ಆದರ್ಶ ಹಾಕಿಕೊಟ್ಟಿದ್ದಾರೆ. (ಕನ್ನಡ ವಿವಿಯ ನೆಲನುಂಗಿದ ಯೋಜನೆಯ ಗುಪ್ತಕಲಾಪ ಪಟ್ಟಿಯೆಂದೇ ಪ್ರಚಾರದಲ್ಲಿರುವ ‘ಅಕ್ಷರಧಾಮದಂತ ದೇವಾಲಯ’ ಬಂದದ್ದೇ ಆದರೆ ಬಹುಶಃ ದೇಶದಲ್ಲಿ ಪ್ರಪ್ರಪ್ರಥಮ ದೇವಾಲಯ ಜನಕ ಸರಕಾರವೆಂಬ ಖ್ಯಾತಿ ರಾಜ್ಯಕ್ಕೆ ದಕ್ಕಲಿದೆ!) ಇನ್ನು ಮುಂದೆ ಸಾರ್ವಜನಿಕರು ಸಾಮಾಜಿಕ ಕಾರ್ಯಗಳಿಗೆ ವಿಧಾನಸೌಧ ಅಥವಾ ಸಂಸತ್ ಭವನದತ್ತ ಮುಖಮಾಡುವ ಬದಲು ಮಠ ಮಂದಿರಗಳ ಕೆಳಜಗುಲಿಯಲ್ಲಿ ಮಡಿಯುಟ್ಟು ನಿಂತರೆ ಸಾಕು!

ನಿಮ್ಮ ವಿಷಾದಕ್ಕೆ ಕನಿಷ್ಠ ಅಕ್ಷರರೂಪದ ಬಿಡುಗಡೆಯನ್ನಾದರೂ ಕೊಟ್ಟು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಿ ಹಗುರಾಗುವಿರಾಗಿ ನಂಬಿದ್ದೇನೆ.

ಅಯನದ್ವಯಕ್ಕೂ ಭೀಷ್ಮ ಕಾಯ
(ತಾತಾರ್ ೪)

ತಾತಾರ್ ಶಿಖರಾರೋಹಣ ಪುಸ್ತಕವನ್ನು ಅಂದು (೧೯೭೨) ಪುಣೆಯಲ್ಲಿದ್ದ ನನ್ನ ಸೋದರತ್ತೆ ಸೀತಾ ಓದಿ ಕಾಲೆಳೆದಿದ್ದಳು, “ಇದು ‘ಕುದುರೆಮುಖದೆಡೆಗೆ’ ಬರೆದ ನಾರಣ್ಣಯ್ಯನೇ (ನನ್ನ ತಂದೆ) ಬರೆದುಕೊಟ್ಟಿರಬೇಕು.” ಕುದುರೆಮುಖದೆಡೆಗೆ (೧೯೬೮) ಬೆಂಗಳೂರು ವಿಶ್ವವಿದ್ಯಾನಿಲಯದ ಪಠ್ಯೇತರ ಪ್ರಕಟಣೆಗಳಲ್ಲಿ ಪ್ರಥಮ ಪುಸ್ತಕ. ಮುಂದೆ ಇದು ತಂದೆಯದೇ ಎನ್.ಸಿ.ಸಿ ದಿನಗಳಲ್ಲಿ, ಸವಾಲನ್ನು ಎದುರಿಸುವ ಛಲದಲ್ಲಿ ಮತ್ತು ಕೊನೆಯದಾಗಿ ಮುಗಿಯದ ಪಯಣದಲ್ಲಿ ಸಮಕಾಲೀನ ಆವಶ್ಯಕತೆಗಳಿಗನುಗುಣವಾಗಿ ಪರಿಷ್ಕೃತಗೊಂಡು ಮರುಮುದ್ರಣಗಳನ್ನೂ ಕಂಡಿದೆ. ತಂದೆಯ ಸಾಹಿತ್ಯ ಕೊಡುಗೆಗಳಲ್ಲಿ ಸರಸ ಶೈಲಿ, ಹಾಸ್ಯಪ್ರಜ್ಞೆಗಳಿಂದ ನಿರ್ವಿವಾದವಾಗಿ ಜನಪ್ರಿಯತೆಯನ್ನು ಗಳಿಸಿದ ಬರವಣಿಗೆಗಳು ಇಂಥವು. ಆದರೆ ತಂದೆ ಯಾವುದನ್ನು ತನ್ನ ಜೀವನದ ಪರಮಲಕ್ಷ್ಯ (ಕನ್ನಡದಲ್ಲಿ ವಿಜ್ಞಾನಸಾಹಿತ್ಯ ಪ್ರಸರಣ) ಎಂದು ಭಾವಿಸಿ (‘ವಿಜ್ಞಾನ ಎನ್ನಶನ’ ಎಂದೇ ಘೋಷಿಸಿ) ದುಡಿದರೋ ಅಲ್ಲಿ ಹೀಗಳೆವ ಕೆಲವು ಪ್ರಯತ್ನಗಳನ್ನು ಆಗಾಗ ಅನುಭವಿಸಿದ್ದುಂಟು. (ತಪ್ಪು ತಿಳಿಯಬೇಡಿ, ಅದರಿಂದ ವಿಷಾದ, ಸಂತ್ರಸ್ತತನದಂಥ ಭಾವಗಳು ಅವರನ್ನೆಂದೂ ಕಾಡಲಿಲ್ಲ.) ಕಳೆದ ವಾರ ‘ಕೆಂಡಸಂಪಿಗೆ’ಯಲ್ಲಿ ಕೆ.ವಿ ತಿರುಮಲೇಶ್ ಕೂಡಾ ಇಂಥದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾಗ, ಅವರ ಬೆಂಬಲಕ್ಕೆ ತಂದೆಯ ಉದಾಹರಣೆ ಕೊಟ್ಟು ನನ್ನ ಮಿತಿಯ ನಾನೂ ನಾಲ್ಕು ಮಾತು ಹೊಸೆದೆ. ಮೊದಲು ಅದನ್ನಷ್ಟು ಉದ್ದರಿಸಿ, ನಿರುಮ್ಮಳವಾಗಿ ತಾತಾರಿನತ್ತದ ಯಾತ್ರೆ ಮುಂದುವರಿಸುತ್ತೇನೆ, ಸೇರಿಕೊಳ್ಳಿ, ಜೊತೆ ಬಿಡಬೇಡಿ.

ನನ್ನ ತಂದೆ (ಜಿಟಿ ನಾರಾಯಣ ರಾವ್), ಅವರ ವಿಜ್ಞಾನ ಬರವಣಿಗೆ ಕುರಿತಂತೆ ‘ಸರಳವಾಗಿಲ್ಲ, ಸಂಸ್ಕೃತಭೂಯಿಷ್ಟ (ಭೋ ಇಷ್ಟ?) ಕಬ್ಬಿಣದ ಕಡಲೆ, ಪದ್ಯ ತುರುಕುವ ಚಟ’ ಎಂದಿತ್ಯಾದಿ ಕಟಕಿಗಳನ್ನು ಆಗೀಗ ಜೀವನದುದ್ದಕ್ಕೂ ಕೇಳಿದರು. ಅವರು ಮುಖಾಮುಖಿಯ ಅವಕಾಶ ಒದಗಿದಲ್ಲಿ, ತನ್ನ ಹಲವು ಬರಹಗಳಲ್ಲಿ ಶೈಲಿ ಮತ್ತು ವ್ಯಕ್ತಿಯ ಅವಿನಾಭಾವವನ್ನು ವಿಷದಪಡಿಸುತ್ತಲೇ ಬಂದರು. ತನ್ನ ಆತ್ಮಕಥೆ – ‘ಮುಗಿಯದ ಪಯಣ’ದಲ್ಲಿ ಸುಮಾರು ಹನ್ನೊಂದು ಪುಟಗಳಷ್ಟು ಉದ್ದಕ್ಕೆ ‘ಕನ್ನಡದಲ್ಲಿ ಜನಪ್ರಿಯ ವಿಜ್ಞಾನ: ವಸ್ತು, ಶೈಲಿ, ವಿನ್ಯಾಸ’ ಎಂಬ ಅಧ್ಯಾಯವನ್ನೇ ಬರೆದರು. ಕನ್ನಡ ಬಲ್ಲವರಿಗೆಲ್ಲ ವಿಜ್ಞಾನ ಸಾಹಿತ್ಯ ದಕ್ಕಬೇಕೆಂಬ ‘ಕನ್ನಡ ಮೇಷ್ಟ್ರಗಿರಿ’ಯನ್ನು ನಿರಾಕರಿಸಿ, ಅದನ್ನು ವಿಜ್ಞಾನಭಾಷೆಯಾಗಿ ದೃಢಗೊಳಿಸುವಲ್ಲಿ ಅವಿರತ ದುಡಿದರು. ಹಗುರ ಅಥವಾ ಬೇಜವಾಬ್ದಾರಿ ಮಾತುಗಳ ಸುಳಿ ತಣಿಸುವ ಕಾಯಕ ಬಿಟ್ಟು ತೊಡಗಿಕೊಳ್ಳುವ ಛಾತಿಯಿದ್ದವರಿಗೆಲ್ಲ ಪ್ರೇರಣೆಯ ಮಹಾಮೂಲವಾದರು. ವಿಜ್ಞಾನ ಲೇಖನ ಕಮ್ಮಟಗಳಲ್ಲಿ, ವಿಶ್ವಕೋಶ, ವಿಜ್ಞಾನ ಪದ ಕೋಶದಂಥ ಕನ್ನಡ ಕಟ್ಟುವ ವಿಶಿಷ್ಟ ಕೂಟಗಳಲ್ಲಿ, (ಸ್ವಸಮರ್ಥನೆಯ ಗಂಧವಿಲ್ಲದೆ) ಜ್ಞೇಯನಿಷ್ಠ ಜಿಜ್ಞಾಸೆಗಳಲ್ಲಿ ಇವರದು ಅಂತಿಮ ಮಾತು. ಸರಳತೆಯ ಹೆಸರಿನಲ್ಲಿ, ‘ಎಲ್ಲರಿಗೂ ಅರ್ಥಮಾಡಿಸುವ’ ಭ್ರಮೆಯಲ್ಲಿ ಪಟ್ಟುಬಿಡದವರಿಗೆ ತಂದೆಯ ಕೊನೆಯಲ್ಲಿ ಹೇಳಿಯೇ ಹೇಳುತ್ತಿದ್ದರು “ಕಲಗಚ್ಚು ಅತಿ ಸರಳ. ಕುಂಕುಮ ಕೇಸರಿ ಮಿಶ್ರಿತ ಕೆನೆ ಹಾಲು ಅತಿ ಕಠಿಣ. ಆಯ್ಕೆ ಸ್ವಾತಂತ್ರ್ಯ ನಿಮ್ಮದು.”

ಪ್ರೊ| ತಿರುಮಲೇಶ್ ತಡವರಿಸಬೇಡಿ, ನಿಜದಲ್ಲಿ ಸಮೃದ್ಧಿ ಬಯಸುವ ಬಹುಸಂಖ್ಯಾತರು ಮೌನಿಗಳು, ಬರಹ ದೂರರು, ಆದರೆ ನಿಮ್ಮನ್ನು ಉತ್ಸಾಹದಿಂದ ಅನುಸರಿಸುತ್ತಲೇ ಇದ್ದೇವೆ. ***** ಇನ್ನು ನನ್ನನ್ನು ಅನುಸರಿಸುವವರತ್ತ…

ನಿದ್ರಿಸದಿರು ವೀರಾ?

ಬೆಟ್ಟದ ಕಡಿದಾದ ಮೈಯಲ್ಲಿ ತೋರಿಕೆಯ ತೆಳು ಮಣ್ಣಪದರು ಮತ್ತು ಹುಲ್ಲ ಹಾಸು ಸೀಳಿದಂತೆ ಅಲ್ಲಲ್ಲಿ ಬಂಡೆ ಹಾಸೇ ಎದ್ದು ಕಾಣುವುದೋ ಸಹಜವಿತ್ತು. ಇನ್ನೆಲ್ಲಿಂದಲೋ ಕಳಚಿ ಬಿದ್ದು ಸದ್ಯ ಇರುವಲ್ಲೇ ನೆಲ ಕಚ್ಚಿ ಕೂತ  ಭಾರೀ ಗುಂಡುಗಳೂ ಸಾಕಷ್ಟಿತ್ತು. ಅಂಥ ಒಂದು ಭಾರೀ ಬಂಡೆ ಗುಂಡು (ಜ್ವಾಲಾಮುಖೀ ದೇವಿಯವರ ವಗ್ಗರಣೆ ಸಟ್ಟುಗದಿಂದ ಸಿಡಿದ ಸಾಸಿವೆ ಕಾಳು!), ಸುಮಾರು ಐವತ್ತಡಿ ಎತ್ತರಕ್ಕೆ ನಿಂತಿತ್ತು. ಯುಗಯುಗಗಳ ಹಿಂದೆ ಏಕವಿದ್ದಿರಬಹುದಾದ ಮಹಾ ಬಂಡೆ ಹಾಸಿನಿಂದ ಕಳಚಿಕೊಳ್ಳುವಾಗಲೋ (ಸ್ವಾತಂತ್ರ್ಯ ಸಂಗ್ರಾಮ?) ಅನಂತರ ಸಿಡಿಲು ಬಡಿದೋ ಇದರ ಮೈಯಲ್ಲಿ ದೊಡ್ಡ ಹಳಕುಗಳು ಕಳಚಿಹೋದ, ಸೀಳು ಬಿಟ್ಟ ಗುರುತುಗಳು ಧಾರಾಳವಿತ್ತು. ಕಾಲಾನುಕ್ರಮದಲ್ಲಿ ಬಂಡೆಯ ಸೀಳಿನಲ್ಲಿ, ನೆತ್ತಿಯಲ್ಲಿ ಹುಲ್ಲು, ಆಲದ ಜಾತಿಯ ಹಸಿರು ವ್ಯಾಪಿಸಿ ಗಾಯಗಳನ್ನು ಮರೆಸಿತ್ತು. ಹಾವಸೆ, ಶಿಲಾವಲ್ಕಲ, ಮಣ್ಣಕಲೆಗಳೂ ಸೇರಿ ಅದಕ್ಕೆ ಸೌಮ್ಯತೆಯನ್ನೂ ವನ್ಯಶಿಲ್ಪದ ಭವ್ಯತೆಯನ್ನೂ ತಂದಿತ್ತು.

ಹಿಂದೆಯೇ ಹೇಳಿದಂತೆ ಈ ಬಂಡೆಯ ನೆತ್ತಿ ಸುಮಾರು ಐದಾರಡಿ ಮುಂಚಾಚಿಕೊಂಡಿದ್ದದ್ದು ನಮಗೆ ಒಮ್ಮೆಗೆ ಆಶ್ರಯದಾತನ ಭ್ರಮೆ ಉಂಟುಮಾಡಿದ್ದು ನಿಜ. ಆದರೆ ವಾಸ್ತವದಲ್ಲಿ ಈ ಮುಂಚಾಚಿಕೆ ಬಲು ಎತ್ತರದಲ್ಲಿದ್ದುದರಿಂದ ಮಂಜು ಸುರಿತದ ಎದುರು ಪೂರ್ಣ ರಕ್ಷಣೆ ಖಾತ್ರಿಯಿರಲಿಲ್ಲ, ಮತ್ತೆ ಮಳೆ ಬಂದರಂತೂ ನಿಶ್ಚಿಂತೆಯಿಂದ ಸಚೇಲ ಸ್ನಾನಕ್ಕೆ ಹಾಕಬಹುದು  “ಗೋವಿಂದ”! ಪ್ರಪಾತಕ್ಕೆ ಬಂಡೆ (ಎಂಬ ವ್ಯಕ್ತಿ) ಮುಖ ಹಾಕಿದೆ ಎಂದುಕೊಳ್ಳಿ. ಅದರ ಎಡ ಅಂಚಿನಿಂದ ಬಲ ಅಂಚಿನತ್ತ ನೆಲ ಇಳಿಜಾರಾಗಿತ್ತು. ಎಡ ಅಂಚಿನಲ್ಲಿ ಮಣ್ಣು ಸ್ವಲ್ಪ ಮುಂದೊತ್ತಿ ಬಂದು ಸಣ್ಣ ಗುಹೆಯೇ ಏರ್ಪಟ್ಟಂತಿತ್ತು. ಆ ಮೂಲೆಯಲ್ಲಿ ಗಾಳಿ ಹೊಡೆತ ಕಡಿಮೆ ಎಂದು ಅಂದಾಜಿಸಿ ‘ಕಿಚನ್’ ಕಿಚ್ಚಿದೆವು. ಅಲ್ಲಿಂದ ಬಲಕ್ಕೆ ಸರಿಯುತ್ತ ಮಧ್ಯಂತರದಲ್ಲಿ, ಅಂದರೆ ಅಡುಗೆಮನೆಯ ತಟ್ಟಿಗಿಂತ ಸುಮಾರು ಒಂದಡಿ  ಕೆಳಗೆ ಒಂದು ಸಪಾಟು ಬಂಡೆಯ ಹಾಸು ಇತ್ತು. ಅದು ಒಮ್ಮೆಗೆ ಆರೇಳು ಜನಕ್ಕೆ ವಿರಮಿಸಲು ಅನುಕೂಲವಿತ್ತು; ಕಾನ್ಫರೆನ್ಸ್ ಹಾಲ್, ಹೇಳಬಹುದೇ – ಕೂಟಕಟ್ಟೆ? ಅದರ ತಳ ಇನ್ನೊಂದೇ ತಟ್ಟು ಇತ್ತು, ಮೈ ಚಾಚಲು ಹೆಚ್ಚಿನ ನೆಲ; ಬೆಡ್ ರೂಂ? ಅಲ್ಲೇ ನೆಲ ಒಳ ಅಂಚಿನಲ್ಲಿ, ಅಂದರೆ ಮುಖ್ಯ ಬಂಡೆಯನ್ನು ಸಂಪರ್ಕಿಸಿದಲ್ಲಿ ನಿಗೂಢವಾದ ಗವಿಯೂ ಏರ್ಪಟ್ಟಿತ್ತು; ಗೆಸ್ಟ್ ರೂಂಗಳೇ ಇದ್ದಿರಬಹುದು. ಆದರೆ ಈಗಾಗಲೇ ಚತುಷ್ಪಾದಿ ಗೆಸ್ಟ್‌ಗಳು ಯಾರಾದರೂ ಎಂಗೇಜ್ ಮಾಡಿ ಘೋಸ್ಟ್ ರೂಂ ಆಗಿದ್ದರೆ ಎಂಬ ಸಂಶಯದಲ್ಲಿ ಮೊದಲು ನಾವು ಎಂಟ್ರಿ ಹಾಕಲಿಲ್ಲ.

ಬಂಡೆಯ ಎರಡೂ ಅಂಚುಗಳಲ್ಲಿ, ಬಂಡೆಯಿಂದ ಸ್ವಲ್ಪೇ ಹೊರಗೆ ಎರಡು ಸಣ್ಣ ಮರಗಳಿದ್ದವು. ಅವರೆಡರನ್ನು ಸೇರಿಸಿದಂತೆ ನಮ್ಮ ಪರ್ವತಾರೋಹಣದ (ಅರೆ ನೈಲಾನ್) ಹಗ್ಗವನ್ನು ಬಿಗಿದು, ನಮ್ಮ ಕೆಲವು ಜಮಖಾನ ಹೊದಿಕೆಗಳನ್ನು ತೂಗು ಹಾಕುವುದರೊಡನೆ ಶಿಬಿರ ಸ್ಥಾನಕ್ಕೆ ಗಾಳಿಯ ಹೊಡೆತವನ್ನು ಕಡಿಮೆ ಮಾಡಿಕೊಂಡೆವು. ನೀರು ತರಲು ಹೋದವರು ಬಂದಿರಲಿಲ್ಲ. ಆದರೆ ಹಸಿವೆ ಕೇಳುತ್ತದೆಯೇ. ಒಣಪೂರಿಯನ್ನು ಜಗಿಜಗಿದು, ಇಲ್ಲದ ಜೊಲ್ಲಿನಲ್ಲೇ ನೆನೆನೆನೆಸಿ ಕಷ್ಟದಿಂದ ನುಂಗತೊಡಗಿದೆವು. ಒದ್ದೆ ಮೈಯನ್ನು ಆರಿಸಲು, ವಾತಾವರಣದಲ್ಲಿ ಏರುತ್ತಿದ್ದ ಚಳಿಯನ್ನು ನಿಭಾಯಿಸಲು ಆಚೀಚೆ ಓಡಾಡಿ ಸಿಕ್ಕ ಕಡ್ಡಿಪುರುಳೆಗಳನ್ನು ಒಟ್ಟುಮಾಡಿ, ಎರಡನೇ ಜಗುಲಿಯಲ್ಲಿ ಸಣ್ಣ ಶಿಬಿರಾಗ್ನಿಯನ್ನು ಎಬ್ಬಿಸಿದೆವು. ಅತ್ತ ನೀರಿಗೆ ಹೋದವರಿಗೆ ಅನತಿ ದೂರದಲ್ಲೇ ಬೆಟ್ಟಕುವರಿಯೊಬ್ಬಳು ಒಲಿದು ಮೈದೋರಿದ್ದಳು. ಆದರೆ ಹೊತ್ತು ತರುವಲ್ಲಿ ಜಾವೀದ್ ಕಂಗಾಲು. ಅವನ ಧ್ವನಿ ಮಾತ್ರ ಕೇಳಿ ನಮ್ಮಲ್ಲಿ ಕೆಲವರು ಹುಡುಕ ಹೋದವರು ಬಕೆಟ್ ನೀರಲ್ಲದೆ, ಕುಸಿದ ಜಾವೀದನಿಗೂ ಭುಜಕೊಟ್ಟು ಮೇಲೆ ತರಬೇಕಾಯ್ತು!  ಮತ್ತವನಿಗೆ ಶಾಖ ಕೊಟ್ಟು, ಕಾಲು ಅಂಗೈಗಳಿಗೆ (ಅಮೃತಾಂಜನದ) ಮಾಲೀಷು ಮಾಡಿ, ಹೊಟ್ಟೆಗೊಂದು ಚೂರು ಗ್ಲುಕೋಸ್, ಪೂರಿ, ನೀರು ಎಲ್ಲಾ ಹೊಗಿಸಿದ ಮೇಲೆ ಪೂರ್ಣ ಚೇತರಿಸಿಕೊಂಡ. ಅನಂತರ ಹೆಚ್ಚಿನವರು ಬೆಚ್ಚನೆಯ ತಿನಿಸುಗಳ ನಿರೀಕ್ಷೆಯಲ್ಲಿ, ಹಿಂಬಾಲಿಸುವ ದೇಶಕಾಲಗಳನ್ನು ಮರೆಸುವ ನಿದ್ರೆಯ ಕಲ್ಪನೆಯಲ್ಲಿ ಸುಖಸಂಕಥಾ ಕಾಲಕ್ಷೇಪ ನಡೆಸುವುದೊಂದೇ ಉಳಿಯಿತು! ನಮ್ಮ ಸ್ಟವೆರಡೂ ಜೀವ ತಳೆದಿತ್ತು, ರಮೇಶ್ ಬಳಗ ಪಾತ್ರೆ ಜೀನಸುಗಳ ಹೊಂದಾಣಿಕೆಯಲ್ಲಿ ಹೋರಾಟ ನಡೆಸಿದ್ದರು.

ಮೊದಲ ನೀರಿನಲ್ಲಿ ಕಾಫಿ ಕುಣಿಯಿತು. ಅನಂತರ ಅಕ್ಕಿ ಬೇಳೆಗಳು ಸ್ಟೌ ಏರಿ ರಂಗೇರುತ್ತಿದ್ದಂತೆ ಪಾಲು ಕೇಳಲು ಬಂದ ತಟಪಟ ಹನಿರಾಯ! ಪೂರ್ವರಂಗದ ಕಲಾಪಗಳಿಲ್ಲದೇ ನೇರ ಮಳೆಯದ್ದೇ (ಅಧಿಕ?) ಪ್ರಸಂಗ. ಅಡುಗೆಯವರಿಗೆ ಹೊಗೆಕಾಟ ತಪ್ಪಿಸಲೆಂದು ಕೆಳ ಜಗುಲಿಯ ಸ್ವಲ್ಪ ಹೊರಭಾಗಕ್ಕೆ ಜಾರಿಸಿದ್ದ ಶಿಬಿರಾಗ್ನಿ ಮಳೆಗೆ ಮೊದಲ ಬಲಿ. ಆಶ್ರಯದಾತ ಬಂಡೆಯ ಮೈಯಲ್ಲೂ ಧಾರೆಗಳಲ್ಲಿ ಇಳಿದ ನೀರು ಮೂಲೆ ಮೂಲೆಗಳಿಗೆ ಸರಿದುಕೊಳ್ಳುತ್ತಿದ್ದ ನಮ್ಮ ಮೇಲೆ ಹಗೆಯ ಈಡಿನಂತೆ ಬಿದ್ದು ಹಿಂಸಿಸಿತು. ಮೊದಲೇ ಶೀತ ಹಿಡಿದ ಮೈ, ಸಾಮಾನು ಸರಂಜಾಮುಗಳನ್ನು ಮತ್ತಷ್ಟು ನೆನೆಯದಂತೆ ಕಾಪಾಡಿಕೊಳ್ಳುವುದು ಭಾರೀ ಪ್ರಯಾಸದ ಕೆಲಸವೇ ಆಯ್ತು. ಈ ಒದ್ದಾಟದಲ್ಲೂ ನಮಗೆ ನೆನಪಾದದ್ದು ಆ ದಿನಗಳಲ್ಲಿ ಸುದ್ಧಿಯ ತುರೀಯಾವಸ್ಥೆಯಲ್ಲಿದ್ದ ಪೂರ್ವ ಪಾಕಿಸ್ಥಾನದ್ದು. ಅಂತಃಕಲಹದ ಬಿಸಿಯಲ್ಲಿ ಮಾನವ ಸಂಬಂಧಗಳ ತೀವ್ರ ನಷ್ಟದಲ್ಲಿ, ಮನೆಮಾರು ಬಿಟ್ಟೋಡಿ ಭಾರತಕ್ಕೆ ವಲಸೆ ಬಂದ ಲಕ್ಷಾಂತರ ನಿರಾಶ್ರಿತರ ಶಿಬಿರಗಳ ದಾರುಣ ಚಿತ್ರ ಪತ್ರಿಕೆಗಳಲ್ಲೆಲ್ಲ ಕಂಡವರಿದ್ದೆವು. ಪರೋಕ್ಷ ಯುದ್ಧದಲ್ಲಿ, ಭಾರತದ ಸೈನ್ಯ (ಬಾಂಗ್ಲಾ ಮುಕ್ತಿ ಸೇನೆಯ ಮುಖವಾಡದಲ್ಲಿ) ಪಾಕಿಸ್ಥಾನೀ ಸೈನ್ಯವನ್ನು ಅದರದೇ ನೆಲದಲ್ಲಿ ಹಂತಹಂತವಾಗಿ ಹಿಮ್ಮೆಟ್ಟಿಸುತ್ತಿದ್ದ ವಾರ್ತೆ ಕ್ಷಣ ಕ್ಷಣಕ್ಕೂ ರೋಮಾಂಚನವನ್ನುಂಟು ಮಾಡುತ್ತಿತ್ತು. ಅಂದು ಡಿಸೆಂಬರ್ ೧೭, ಗೋವಿಂದರಾಜರ ಪುಟ್ಟ ಟ್ರಾನ್ಸಿಸ್ಟರ್ ರೇಡಿಯೋ ಘೋಷಿಸಿತು ಬಾಂಗ್ಲಾ ವಿಜಯ! ಅದು ತಾತಾರ್ ಮೈಯಲ್ಲಿ ಹೆಚ್ಚು ಕಡಿಮೆ ನಿರಾಶ್ರಿತರ ಶಿಬಿರದಂತ ಪರಿಸ್ಥಿತಿಯಲ್ಲೇ ಇದ್ದ ನಮಗೆ ಭವಿಷ್ಯವನ್ನು ಗಟ್ಟಿಯಾಗಿ ಎದುರಿಸಲು ಸ್ಫೂರ್ತಿ ಕೊಟ್ಟಿತು ಎಂದೇ ಹೇಳಬೇಕು.

ನಳವಲಲರಂತೆ ರಮೇಶ ಶ್ರೀನಿವಾಸರು ಸ್ತ್ರೀ ಸದಸ್ಯರ ನೆರವಿನಿಂದ ಅಡುಗೆ ಮುಗಿಸುವಾಗ ಗಂಟೆ ಹನ್ನೊಂದು. ಹೇಗೋ ಇದ್ದ ಅನ್ನಕ್ಕೆ ಬಿಸಿಯಾದ ಸಾಂಬಾರನ್ನು ಬೆರೆಸಿ ಜಠರಾಗ್ನಿಯನ್ನು ತಣಿಸಿದೆವು. ಮಳೆ, ಚಳಿಯ ಹೊಸಪೆಟ್ಟಿಗೆ ನಿಲುಕದಂತೆ ಎಲ್ಲರೂ ತಟ್ಟೆಬಟ್ಟಲನ್ನು ಬಯಲಿಗೆ ನೂಕಿ, ಕೈಗಳನ್ನು ತಂತಮ್ಮ ಪ್ಯಾಂಟಿಗೆ ಒರೆಸಿಕೊಂಡು ಡ್ರೈ ಕ್ಲೀನಾದೆವು! ಮತ್ತೆ ಇಷ್ಟರಲ್ಲೇ ಬಂಡೆಯ ವಿವಿಧ ಧಾರೆಗಳಿಗನುಗುಣವಾಗಿ ಪುನಃ ವ್ಯವಸ್ಥೆಗೊಂಡ ನಮ್ಮ ಬಂಡೆಕ್ಯಾಂಪ್, ಮಲಗಲು ಹೊಸತೇ ಪರದಾಟಕ್ಕಿಳಿಯಿತು. ನಾನು ಮತ್ತು ಗಿರೀಶ ಅದುವರೆಗೆ ತಿರಸ್ಕರಿಸಲ್ಪಟ್ಟ ‘ಗೆಸ್ಟ್-ರೂಮಿ’ಗೇ ಲಗ್ಗೆ ಹಾಕಿದೆವು. ಒಳಗೆ ಒಂದೆರಡು ಸಣ್ಣ ಕಲ್ಲಿನ ಮೊಳಕೆಗಳಿದ್ದರೂ ನಮಗಿಬ್ಬರಿಗೆ ಮೈಚಾಚಲು ಮಣ್ಣಿನ ನೆಲ, ಬೆಚ್ಚಗಿನ ಗೂಡು ಅದು ಒದಗಿಸಿತು. ನಮ್ಮ ಶಯನ ಸ್ಥಿತಿಯ ದ್ವಾರಪಾಲಕ ಭಾಸ್ಕರ, ಅವನ ಪಾದ ಸೇವಕ ರವಿ! ನಮ್ಮಿಂದ ಕೆಳಗವಿಯಲ್ಲಿ ಜಾವೀದ್ ಮಾತ್ತು ಪುರಾಣಿಕ್. ಅಲ್ಲಿನ ಹೊಸ್ತಿಲ ಪಾರ ಜಯರಾಮನದು. ಗುಹೆ ಎನ್ನುವುದು ದೊಡ್ಡ ಮಾತು, ಬಂಡೆಯ ಸಂದು ಎನ್ನಿ, ಅದರ ಅಂತರಾಳದಲ್ಲಿದ್ದಿರಬಹುದಾದ ಜೀವವೈವಿಧ್ಯ ವಾತಾವರಣದ ಶೀತಕ್ಕೆ ಚೈತನ್ಯ ಪಡೆಯಲಾರದು, ನಮ್ಮ ಮೇಲೆ ಹಲ್ಲೆ ಮಾಡದು ಎಂಬ ನಮ್ಮ ಭಂಡ ನಂಬಿಕೆ ಆ ರಾತ್ರಿಗಂತೂ ಹುಸಿಯಾಗದ್ದು ನಮ್ಮ ಅದೃಷ್ಟ.

ಗಂಟೆ ಹನ್ನೆರಡು, ದಿನ ಕಳೆದು ದಿನ ಬರುವ ಹೊತ್ತು. ಕತ್ತಲನ್ನು ಸೀಳಿ ಬಂತು ನಮ್ಮ ಮಾರ್ಗದರ್ಶಿ ರಾಜುವಿನ ಅರಚಾಟ “ಸ್ವಾಮೀ ಊಟಾ!” ಓಹ್! ನಮ್ಮ ಗಡಿಬಿಡಿಯಲ್ಲಿ ಈ ಮಾರ್ಗದರ್ಶಿಗಳ ಬಗ್ಗೆ ನೆನಪೇ ಹಾರಿಹೋಗಿತ್ತು ಎಂದು ತಿಳಿಯಬೇಡಿ. ನಮ್ಮ ಬಂಡೆಯಿಂದ ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಬಂಡೆಯ ಮಾಟೆಯಲ್ಲಿ ಆ ಮೂವರೂ ನೆಲೆ ಕಂಡುಕೊಂಡಿದ್ದರು. ಮತ್ತೆ ರಾತ್ರಿಯ ಮಟ್ಟಿಗೆ ಅವರನ್ನು ತುಸುವೇ ದೂರ ಇರಿಸಲು ನಮಗೆ ಹಿಂದಿನ ದಿನ ಅರಣ್ಯಾಧಿಕಾರಿ ಎಚ್ಚರಿಸಿದ್ದೂ ನೆನಪಿತ್ತು. “ಅವರು ಅಸಂಸ್ಕೃತರು, ಕಾಡಿನ ಪರಿಸರದಲ್ಲೆ ಬೆಳೆದು ಬುದ್ಧಿಯಲ್ಲೂ ಪಶು ಪ್ರವೃತ್ತಿ ಹೆಚ್ಚು. ನಾಲ್ಕು ಹುಡುಗಿಯರು ಬೇರೇ ಇರುವ ಈ ತಂಡದ ಮೇಲೆ ರಾತ್ರಿ ಅವರ ದೃಷ್ಟಿಕೋನ ಯಾವ ತೆರನದು ಎಂದು ಹೇಳುವುದು ಕಷ್ಟ. ಅಷ್ಟಲ್ಲದೆ ರಾತ್ರಿಯ ಚಳಿ ಸಹಿಸಲು ಅವರು ಸಾರಾಯಿ ಸೇವಿಸುವುದೂ ಖಂಡಿತ. ಹಾಗಾಗಿ ಕತ್ತಲಾಗುತ್ತಿದ್ದಂತೆ ಅವರನ್ನು ದೂರವೇ ಇಡಿ.” ಅದನ್ನೆಲ್ಲ ನೆನಪಿಟ್ಟುಕೊಂಡು ಗೋವಿಂದರಾಜರು ಅವರನ್ನು ದೂರ ಇಟ್ಟಿದ್ದರು. ಅಷ್ಟು ಸಾಲದೆಂಬಂತೆ ನಮ್ಮ ‘ನಾಗರಿಕ’ ಭಯಗಳಿಗೆ ಸಹಜವಾಗಿ, ಏನೋ ಸುಳ್ಳು ನೆಪಗಳನ್ನು ಹೇಳಿ ಅವರಲ್ಲಿದ್ದ ಎರಡು ಕತ್ತಿಗಳಲ್ಲಿ ಒಂದನ್ನು ಕೇಳಿ ಪಡೆದು, ರಾತ್ರಿಯ ಮಟ್ಟಿಗೆ ನಮ್ಮಲ್ಲೇ ಉಳಿಸಿಕೊಂಡಿದ್ದರು!

[ನನ್ನ ಇಂದಿನ ಅನುಭವದಲ್ಲಿ ಅದು ಅಂದಿಗೂ ತೀರಾ ಅನುಚಿತ ಸಲಹೆ, ನಾವದನ್ನು ಅನುಸರಿಸಿದ್ದು ಮತ್ತಷ್ಟು ಕೆಟ್ಟ ಕ್ರಮವಾಗಿ ತೋರುತ್ತದೆ. ಆ ಕುರಿತು ಇಂದು ನಾನು ಏನು ಹೇಳಿದರೂ ಮಸೀದಿ ಉರುಳಿದ ಮೇಲೆ ವಿಷಾದ ವ್ಯಕ್ತಪಡಿಸಿದಷ್ಟೇ ಪರಿಣಾಮಕಾರಿ. ಆದರೆ ತಮಾಷೆ ಎಂದರೆ, ಇಂದಿಗೂ ಸರಕಾರೀ ಯಂತ್ರ ಈ ತತ್ವವನ್ನು ಜಾತಿಬೇಧದಷ್ಟೇ ವ್ರತನಿಷ್ಠೆಯಲ್ಲಿ, ಸೂಕ್ಷ್ಮದಲ್ಲಿ ಕಾಪಾಡಿಕೊಂಡಿರುವುದನ್ನು ಕಾಣಬಹುದು!]

ರಾಜು ಧ್ವನಿಯಲ್ಲಿದ್ದ ಒರಟು ಕೇಳಿ ಗೋವಿಂದರಾಜ್ ಅಷ್ಟೇ ಅಬ್ಬರದಲ್ಲಿ “ಇಲ್ಲೇ ಬನ್ನಿ, ಕೊಡ್ತೇವೆ” ಎಂದರು. ಅವನಿಗೆ ಸಿಟ್ಟು ಬಂದಿರಬೇಕು, ಜವಾಬೂ ಜನವೂ ಬರಲಿಲ್ಲ. ಅಮಲುಕೋರರ ಕೋಪ ತಡವಾಗಿ ನಮ್ಮ ತಂಡದ ಮೇಲೆ ಎರಗಿದರೆ ಎಂದು ಭಯಪಟ್ಟು ಗೋವಿಂದರಾಜ್ ಒಂದು ನಾಟಕವನ್ನೂ ಮಾಡಿದರು. ನಮ್ಮಲ್ಲಿ ಚಾರಣದಲ್ಲೆಲ್ಲಾದರೂ ಕಾಡಾನೆ ಅಟಕಾಯಿಸಿದರೆ ಬೆದರಿಸಲೆಂದು ಒಯ್ದ ‘ಆಟಂ ಬಾಂಬ್’ ಪಟಾಕಿ ಇತ್ತು. ಅದರಲ್ಲಿ ಒಂದನ್ನು ಹೊಟ್ಟಿಸಿದರು. ಹಿಂಬಾಲಿಸಿದಂತೆ ಏರು ಧ್ವನಿಯಲ್ಲಿ, ತಾವು ತಂದ ತುಪಾಕಿಯ ಆರು ಗುಂಡಲ್ಲಿ ಒಂದನ್ನು ಯಾಕೆ ವ್ಯರ್ಥಗೊಳಿಸಿದೆ ಎಂದು ರಮೇಶನ ಮೇಲೆ ರೇಗಾಡಿದಂತೆ ಮಾತಾಡಿದರು. ಕೇವಲ ಆತ್ಮರಕ್ಷಣೆಗೆ ಎಂದು ತಂದ ಈ ತೋಟೆಗಳ ಲೆಕ್ಕ ನಾಳೆ ಅರಣ್ಯಾಧಿಕಾರಿಗೆ ಹೇಗೆ ಕೊಡಲಿ ಎಂದೆಲ್ಲಾ ಬೊಬ್ಬೆ ಹೊಡೆಯುವ ಭರದಲ್ಲಿ ರಾಜು ಮತ್ತವನ ಬಳಗಕ್ಕೆ ನಮ್ಮಲ್ಲಿ ತುಪಾಕಿಯಿದೆ ಎಂಬ ಪರೋಕ್ಷ ಸಂದೇಶ ಬಿತ್ತರಿಸಿದರು. ಅದು ಎಷ್ಟು ಪರಿಣಾಮಕಾರಿಯಾಯ್ತೋ ಬಿಟ್ಟಿತೋ ಅಂತು ಮತ್ತೆ ರಾತ್ರಿಯಿಡೀ ರಾಜು ಬಳಗದಿಂದ ಯಾವ ಸದ್ದೂ ಬರಲಿಲ್ಲ!

ಮತ್ತೊಂದು ರಾತ್ರಿ ತೆವಳುತ್ತಿತ್ತು. ಅಚ್ಯುತರಾಯರು ಉಣ್ಣೇ ಶರಾಯಿ, ಅಂಗಿ ಮೇಲೆ ಅಂಗಿ ಹಾಕಿ, ತಲೆಯನ್ನೂ ಎರಡು ಮಂಗನ ಟೊಪ್ಪಿಯೊಳಗೆ ಹುಗಿದು, ಒಟ್ಟು ಕಂಬಳಿ ಸುತ್ತಿ ಮತ್ತೆ ಮಳೆಕೋಟೂ ಹೇರಿಕೊಂಡು ಜಗುಲಿಯೊಂದರ ಮೂಲೆಪಾಲಾದರು; ಮೂರನೆಯವರು ನೋಡಿದ್ದರೆ ದೇವರಾಣೆಗೂ ಆ ಬಟ್ಟೆ ಗಂಟಿನೊಳಗೆ ಒಂದು ಮನುಷ್ಯ ಜೀವ ಉಂಟೆಂದು ಹೇಳುವಂತಿರಲಿಲ್ಲ. ರಮೇಶ್ ಜಸವಂತರು ಅಡುಗೆಮೂಲೆಯಲ್ಲೇ ಮುದುಡಿಕೊಂಡರು. ಹುಡುಗಿಯರಷ್ಟೂ ಮೂಟೆಗಟ್ಟಿದಂತೆ ಇನ್ನೊಂದೇ ಮೂಲೆ ಸೇರಿಬಿಟ್ಟರು. ಉಳಿದ ರುದ್ರಪ್ಪ, ಗೋವಿಂದರಾಜ್, ಶ್ರೀನಿವಾಸ್ ಜಗುಲಿಯಲ್ಲಿ ಕೂತಲ್ಲೇ ಹರಟೆಕೊಚ್ಚುತ್ತಿದ್ದರು, ಬಾಲು ಹಾಗೇ ನಿಂತು (ಅವನು ಜಾವೀದ್ ಹೊಕ್ಕ ಗವಿ ಸೇರಲು ಹೆದರಿದ್ದ) ಶೋತೃವಾದ. ಆದರೆ ಯಾವುದೋ ಹೊತ್ತಿನಲ್ಲಿ ಅವನು ಜೊಂಪು ಹತ್ತಿ, ಮುಗ್ಗರಿಸಿ, ಬಂಡೆಗೆ ಸಣ್ಣದಾಗಿ ತಲೆ ಘಟ್ಟಿಸಿ, ನಮ್ಮ ಏಕೈಕ ಬೆಳಕಿನ ಮೂಲ – ಪೆಟ್ರೋಮ್ಯಾಕ್ಸ್ ಪಲ್ಟಿಸಿದ. ಮತ್ತದರ ಗಾಜು, ಮ್ಯಾಂಟಲ್ ಬದಲಿಸಿ ಉರಿಸುವವರೆಗಾದರೂ ಶ್ರೀನಿವಾಸ್ ಚಟುವಟಿಕೆಯ ಸಂತೋಷ ಅನುಭವಿಸಿದರು!

ಬಿಸಿ ಕಾಫಿಯಾದರೂ ಕುಡಿಯೋಣವೆಂದು ‘ಸೂರಿ’ನ ನೀರಿಗೆ ಬಕೆಟಿಡುವಲ್ಲಿಂದ ಕ್ರಮಪಾಠ ಚೆನ್ನಾಯ್ತು, ನಿದ್ದೆಗೇಡಿಗಳಿಗೆ ಬಿಸಿಕಾಫಿ ರುಚಿಸಿದ್ದೂ ಆಯ್ತು. ಆದರೆ ಬೆಳಿಗ್ಗೆ ಎದ್ದ ಮೇಲೆ ತಿಳಿಯಿತು ನಾವು ಕುಡಿದ ಪಾನೀಯದಲ್ಲಿ ಸಾಂಪ್ರದಾಯಿಕ ಕಾಫಿಯ ಮೇಲೆ ಇಷ್ಟು ಮಣ್ಣು, ಬಂಡೆಗಂಟಿದ್ದ ಪಾಚಿಯೂ ಸೇರಿತ್ತು. ಜಸವಂತ ಮುಸುಕಿನೊಳಗಿಂದ ಒಮ್ಮೆಲೆ ಕಾಲು ಚಾಚಿದಾಗ ಬಕಧ್ಯಾನದಲ್ಲಿದ್ದ ಸುಜಾತರಿಗೊಂದು ಲತ್ತೆ ಉಚಿತ. ಸರದಿಯ ಮೇಲೆ ಯಾರ್ಯಾರೋ ಜೋಮುಗಟ್ಟಿದ ಕೈಕಾಲು ಬಿಡಿಸಿಕೊಳ್ಳಲು ಪ್ರಕಟವಾಗುತ್ತಿದ್ದದ್ದು, ಇದ್ದವರು ಅಲ್ಲಲ್ಲೇ ಜೂಗರಿಸುತ್ತಿದ್ದದ್ದು ಹೀಗೆಲ್ಲಾ ಶಯನ ವೈವಿಧ್ಯ ವಿವರಿಸುತ್ತಾ ಹೋದರೆ ಮಹಾಭಾರತದಲ್ಲಿ ಶರಶಯ್ಯೆಯನ್ನು ಸರಳ ಮಂಚವಾಗಿಸಿಕೊಂಡ ಭೀಷ್ಮ ಪಿತಾಮಹನೂ ಬರಬಹುದಾದ ಪುಣ್ಯಕಾಲವನ್ನು ನಿರಾಕರಿಸುತ್ತಿದ್ದನೋ ಏನೋ.

ಹೊಸದಿನದ ಬೆಳಕೇನೋ ಬಂತು. ಆದರೆ “ಬಂಡೆಯಿಂದಾಚೆ ತಲೆ ಹಾಕಲು ಬಿಟ್ಟರೆ ಕೇಳಿ” ಎನ್ನುವಂತಿತ್ತು ದೆವ್ವ ಬಡಿದ ಗಾಳಿ, ಹನಿ ಕಡಿಯದ ಮಳೆ.  ಆದರೂ ಹೊಸದೊಂದು ಸೌಲಭ್ಯ ಒದಗಿತ್ತು. ನಮ್ಮ ಶಿಬಿರದ ಹೊರ ಅಂಚಿನ ಬೆಟ್ಟದ ಒಣ ಝರಿ ಈಗ ಸಂಪನ್ನೆ! [ಪರಿಸರ ಮಾಲಿನ್ಯದ ಯಾವ ಸೋಂಕೂ ತಗುಲದ ಜಾಗವದು ಮತ್ತು ಇಂದು ಅನಿವಾರ್ಯವಾಗಿ ಆ ಕುರಿತು ಉಂಟಾಗಿರುವ ಜಾಗೃತಿಯೂ ಇಲ್ಲದ ದಿನಗಳವು] ವಿಪರೀತದಲ್ಲೂ ನಮ್ಮದು ಹಿಂಗದ ಉತ್ಸಾಹ. ಆ ತೊರೆಯನ್ನೇ ಬೇರೆ ಬೇರೆ ಹಂತಗಳಲ್ಲಿ ಬಳಸಿಕೊಂಡು, ಗಡಗಡಾ ನಡುಗಿಕೊಂಡೇ ನಮ್ಮೆಲ್ಲ ಪ್ರಾತರ್ವಿಧಿಗಳನ್ನು ಪೂರೈಸಿಕೊಂಡೆವು. ಅನುಸರಿಸಿದಂತೆ ಆಯ್ತು ಪಾಕಬ್ರಹ್ಮರು ಕೊಟ್ಟ ಶುದ್ಧ ನೀರಿನ ಕಾಫಿ, ಬಿಸಿಯುಪ್ಪಿಟ್ಟಿನ ಸಂಗಮ [ವರ್ಷ ನಲವತ್ತು ಕಳೆದು ಇಂದು ನೆನೆಸಿದರೂ ಆಹ್, ಅದಕ್ಕೆಂಥ ಗಮಗಮ!].

ಇನ್ನೇನು ಗಂಟು ಗದಡಿ ಕಟ್ಟುವುದು, ತಾತಾರ್ ವಿಜಯ ಸಾರುವುದು ಎಂದು ಸಜ್ಜಾಗತೊಡಗಿದವರಿಗೆ ಎದುರಾಯ್ತೊಂದು ಕಗ್ಗಂಟು! ಬಿಡಿಸಲು ಉಗುರು ಹಲ್ಲುಗಳ ಪ್ರಯೋಗದ ಯೋಚನೆ ಬಿಡಿ, ವಾರ ಕಾಲ ಕಾದು ನೋಡಿ. ಏತನ್ಮಧ್ಯೆ ಸಾಹಸ ಕಥನಕ್ಕೆ ಬಂದ ನಿಮಗಿದು ಜಗಿರಬ್ಬರ್ ಆಯ್ತೇ ಮಂಗಳೂರಿನ ವರ್ಲ್ಡ್ ಫೇಮಸ್ ತಾಜ್ ಮಹಲ್ ಹಲ್ವಾ ಆಯ್ತೇ ಎಂದು ತಿಳಿದುಕೊಳ್ಳುವ ನನ್ನ ಕುತೂಹಲಕ್ಕೊಂದಿಷ್ಟು ಕಾಣಿಕೆ ಹಾಕಲು ಮರೆಯಬೇಡಿ.

ಮರುಬಳಕೆಯ ನಾಲ್ಕು ಪ್ರಹಸನಗಳು
ಪುಸ್ತಕ ಅಂಗಡಿಯಲ್ಲಿ ಕಾಗದದ ಮರುಬಳಕೆಯ ಅವಕಾಶ ಅಸಂಖ್ಯ. ಅವನ್ನು ಆಡುನುಡಿಯಲ್ಲೇ ಹೇಳುವುದಾದರೆ ಕ್ಯಾಟಲಾಗು (ಬರಿಯ ಪಟ್ಟಿಯಲ್ಲ, ಪ್ರಚಾರ ಸಾಹಿತ್ಯವೂ ಆಗಬಹುದು), ಇನ್ವಿಟೇಶನ್ನು (ಅಂಗಡಿಯಲ್ಲಿ ವಿತರಿಸಬೇಕೆಂಬ ಬೇಡಿಕೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲೂ), ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ವಿವಿಧ ಇನ್ಸ್ಟಿಟ್ಯೂಶನ್ನುಗಳ ಸೆಲ್ಫ್ ಎಡ್ರೆಸ್ಸ್‌ಡ್ ಕವರ್ಸ್ ನಿತ್ಯ ಬರುತ್ತಿರುತ್ತವೆ. ಎಲ್ಲಾ ಬೆಸ್ಟ್ ಪೇಪರ್, ಸೈಜ್ ಮತ್ತು ಎಷ್ಟೋ ಭಾಗ ನೀಟಾಗಿ ಬ್ಲ್ಯಾಂಕ್ ಕೂಡಾ ಇದ್ದೇ ಇರುತ್ತವೆ. ಬಿಲ್ಲುಗಳ (ಅನಾವಶ್ಯಕ) ಎಕ್ಸ್ಟ್ರಾ ಕಾಪೀಸ್ (ಹೆಚ್ಚುವರಿ ಪ್ರತಿಗಳ ಹಿಂಬದಿ), ಕವರಿಂಗ್ ಲೆಟರ್ರು (ಮೇಲ್ಮುಚ್ಚುವ ಪತ್ರ?), ಮತ್ತೆ (ಸಾರ್ವಜನಿಕ ಸಾಗಣೆಯಲ್ಲಿ ಕಳಿಸಿದ್ದಾದರೆ) ಡ್ಯುಪ್ಲಿಕೇಟೋ ಟ್ರಿಪ್ಲಿಕೇಟೋ ಪ್ರತಿಗಳಲ್ಲಿ ಡೆಲಿವರಿ ಚಲನ್ನು ಸಹಾ ಬರುತ್ತವೆ. (ಅವನ್ನೆಲ್ಲ ನೇರಾನೇರ ಕನ್ನಡ ಶಬ್ದಗಳಲ್ಲಿ ಹೇಳುವುದೂ ಒಂದೇ ದೇವಭಾಷೆ ಬಿಟ್ಟ ಪುರೋಹಿತನೂ ಒಂದೇ!) ಅಗತ್ಯಕ್ಕಿಂತ ಹೆಚ್ಚಿಗೆ ಔಪಚಾರಿಕತೆಗೇ ವ್ಯರ್ಥವಾಗುವ ಇವನ್ನೆಲ್ಲ ಆವಶ್ಯಕತೆಯ ನೆಲೆಯಲ್ಲಿ ಕಡಿತಕ್ಕೊಳಪಡಿಸಲು ನಾನು ಬಳಸುವ ಅಸ್ತ್ರ ಮರುಬಳಕೆ. (ಹೆಚ್ಚಿನ ವಿದ್ಯಾಸಂಸ್ಥೆಗಳು ಪಾವತಿ ಕಳಿಸಲು ಪೂರ್ವಮುದ್ರಿತ ಮೇಲ್ಮುಚ್ಚುವ ಪತ್ರಗಳನ್ನಿಟ್ಟುಕೊಂಡಿರುತ್ತವೆ. ಸಹಜವಾಗಿ ಅದರ ಖಾಲಿ ಜಾಗಗಳಲ್ಲಿ ಪಡೆಯುವವರ ಹೆಸರು, ವಿಳಾಸ, ಖಾತೆಯ ವಿವರ ತುಂಬಿಬಿಡುತ್ತಾರೆ. ಕೆಲವೊಮ್ಮೆ ಸಂಸ್ಥಾ ಮುಖ್ಯಸ್ಥನ ರುಜು ರಬ್ಬರ್ ಮೊಹರು ಇರುತ್ತದೆ. ನಾನು ಕಳಿಸಲೇ ಬೇಕಾದ ರಸೀದಿ ಜೊತೆಗೆ ಆ ಪತ್ರಗಳಲ್ಲೇ ಕೃತಜ್ಞತೆಯ ಒಂದು ಸಾಲು ಕೈಯಾರೆ ಬರೆದುಬಿಡುತ್ತೇನೆ. ‘ಇದು ಅವಮಾನಕಾರಿ’ ಎಂದೊಬ್ಬ ಪ್ರಾಂಶುಪಾಲ ನನಗೆ ಹೇಳಿ ಕಳಿಸಿದ್ದರೂ ನಾನು ವ್ರತ ಬದಲಿಸಿಲ್ಲ!) ಅದರಲ್ಲಿ ಲಕೋಟೆಗಳ ಮರುಬಳಕೆಯಲ್ಲಿ ಉಂಟಾದ ಮೂರು ರಸಪ್ರಸಂಗಗಳನ್ನು ಮಾತ್ರ ಇಲ್ಲಿ ವಿಸ್ತರಿಸುತ್ತೇನೆ.

ಕೈಕೊಟ್ಟ ವಿವೇಕ!

ನಾನು ಯಾವ್ಯಾವುದೋ ಹಳೆ ಲಕೋಟೆಗಳನ್ನು ಕತ್ತರಿಸಿ, ಅಂಟಿಸಿ, ಪಾವತಿ ಕಳಿಸುತ್ತಿದ್ದದ್ದನ್ನು ಗಮನಿಸಿದ ವೃತ್ತಿಮಿತ್ರ – ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ, ಅವರಲ್ಲಿ ಉಳಿದಿದ್ದ ಯಾವ್ಯಾವುದೋ (ಅವರದೇ ಹಳೇ ಕಾರ್ಯಕ್ರಮಗಳ) ಖಾಲೀ ಲಕೋಟೆಗಳನ್ನು ಒಂದಷ್ಟು ನನ್ನ ಒಂದು ಪಾರ್ಸೆಲ್ಲಿಗೆ ಹಾಕಿ ಕಳಿಸಿಕೊಟ್ಟಿದ್ದರು. ಅದರಲ್ಲೊಂದನ್ನುಎಳೆದು ಇನ್ನೋರ್ವ ಮಿತ್ರ – ವಿವೇಕ ಶಾನಭಾಗರಿಗೆ, ದೇಶಕಾಲದ ಮೂರು ತಿಂಗಳ ಲೆಕ್ಕ ತುಂಬಿಸಿ, ಎಡಮೂಲೆಯಲ್ಲಿ ನನ್ನಂಗಡಿಯ ಮೊಹರು ಹೊಡೆದು, ಕೊರ್ಯರ್ ಮಾಡಿದೆ. ತಿಂಗಳು ಕಳೆದರೂ ಚೆಕ್ ತಲಪಿದ ಬಗ್ಗೆ ರಸೀದಿ ಬರಲಿಲ್ಲ, ನನ್ನ ಖಾತೆಯಿಂದ ಹಣವೂ ವಜಾ ಆಗಲಿಲ್ಲ. ದೂರವಾಣಿ ಬಳಕೆಯಲ್ಲಿ (ಮುಖ್ಯವಾಗಿ ಚರವಾಣಿಗ್ರಸ್ತರಂತೆ) ದಾರಿಯ ಆಚೆ ಬದಿಯಲ್ಲಿ ನಿಂತವನಿಗೂ ಕಾಲ್ ಹೊಡೆದು, ಹಾಯ್ ಹೇಳುವ ಧಾರಾಳಿ ನಾನಲ್ಲ. ಆದರೂ ವಿವೇಕರನ್ನು ವಿಚಾರಿಸಿದೆ, ಕೊರ್ಯರ್ ಬರಲೇ ಇಲ್ಲ ಎಂದುಬಿಟ್ಟರು. ತತುಕ್ಷಣವೇ ನಮ್ಮಲ್ಲಿ ಕೊರ್ಯರ್ ಸಂಗ್ರಹಿಸಲು ಬರುವ ಹುಡುಗನಿಂದ ತೊಡಗಿ, ಬೆಂಗಳೂರಿನಲ್ಲಿ ನನ್ನ ಪತ್ರ ಹೋದ ದಿನ ವಿತರಣೆಗಿದ್ದ ಹುಡುಗನವರೆಗೆ ಎಲ್ಲರ ಜಾತಕ ಶುದ್ಧ ಮಾಡಿದೆ. ಪಾಪ ಕೊರ್ಯರ್ರಿನವರು ತಿಂಗಳ ಹಿಂದಿನ ಕಡತ ಮತ್ತು ನೆನಪುಗಳ ದೂಳು ಹೊಡೆದು, ವಿವೇಕರ ತಂದೆಯೇ ‘ಪತ್ರ ಪಡೆದು ಕೊಟ್ಟ ರಸೀದಿ’ (ಪೀಓಡೀ) ಹಾಜರು ಪಡಿಸಿ “ಅಪರಾಧಿ ನಾವಲ್ಲ” ಎಂದರು. (ಪುಣ್ಯಕ್ಕೆ ನನ್ನ ಮೇಲೆ ಹರಿಹಾಯಲಿಲ್ಲ!) ಸಂಪಾದಕತ್ವದೊಡನೆ ವಿವೇಕ್ ಸಹಜವಾಗಿ ದೊಡ್ಡ ‘ಕಬು’ (ಕಸದ ಬುಟ್ಟಿ) ಇಟ್ಟುಕೊಂಡಿದ್ದರು. ಮತ್ತದರ ತಲಾಷಿ ನಡೆಯಿತಂತೆ. ಅಲ್ಲಿ ಭದ್ರವಾಗಿ ಮಲಗಿತ್ತು ನನ್ನ ಲಕೋಟೆ! ಜೊತೆಗೆ ಅಂಥವೇ ಬೇರೆರಡೋ ಮೂರೋ ಲಕೋಟೆಗಳಿದ್ದವಾದರೂ ಅವುಗಳ ಹೂರಣ ನಿಜ ಆಮಂತ್ರಣ ಮಾತ್ರ (ಪ್ರಕಾಶಕ, ಬಿಡುಗಡೆಯಾಗಲಿದ್ದ ಪುಸ್ತಕಗಳ ಲೇಖಕರು ಪ್ರತ್ಯೇಕ ಪ್ರತ್ಯೇಕವಾಗಿ ಕಳಿಸಿದ್ದಿರಬೇಕು). ಲಕೋಟೆಯ ಮೇಲಿನ ಮುದ್ರಿತ ವಿವರಗಳನ್ನಷ್ಟೇ ನೋಡಿ, ‘ಒಂದೇ ಕಾರ್ಯಕ್ರಮಕ್ಕೆ ಎಷ್ಟು ಆಮಂತ್ರಣಪ್ಪಾ’ ಎಂಬ ವಿವೇಕದ ಮಾತು ಮಾತ್ರ ಸಿಕ್ಕಲಿಲ್ಲ. ಕಸದ ಬುಟ್ಟಿಯೂ ಕಥೆ ಹೇಳಲು ಹೊರಟರೆ ಎಷ್ಟು ಚೆನ್ನಾಗಿರುತ್ತೆ!

ಡೇಟ್ ಬಾರ್

‘ಕೊಡಗಿನ ಖಗರತ್ನಗಳು’ ಬಂದವಕ್ಕೆ ಕೂಡಲೇ ಪಾವತಿ ಕಳಿಸಿದ್ದೆ. ಲೇಖಕ, ಪ್ರಕಾಶಕ, ಎಲ್ಲಕ್ಕೂ ಮಿಗಿಲಾಗಿ ಕುಟುಂಬ ಮಿತ್ರರೇ ಆದ ಡಾ| ನರಸಿಂಹನ್ ಹಿಂದೆಯೇ ಹೇಳಿದ್ದರು “ಅಶೋಕ್, ಪುಸ್ತಕ ಜನಕ್ಕೆ ಮುಟ್ಟಬೇಕು, ನನಗೆ ಪೇಮೆಂಟ್ ಅರ್ಜಂಟಿಲ್ಲ.” ಹಾಗಾಗಿ ಸುಮಾರು ಮೂರ್ನಾಲ್ಕು ವಾರ ಕಳೆದ ಮೇಲೂ ಅವರಿಗೆ ಕಳಿಸಿದ್ದ ಚೆಕ್ ನಗದಾಗದ್ದನ್ನು ನಾನು ಗಮನಿಸಿರಲಿಲ್ಲ. ಅಂದು ನರಸಿಂಹನ್ ಸಂಕೋಚದಿಂದಲೇ ದೂರವಾಣಿಸಿದರು, “ಅಶೋಕ್ ಪುಸ್ತಕ ಬಂತಲ್ಲಾ?” ನಾನಾಶ್ಚರ್ಯದಲ್ಲೇ ಹೇಳಿದೆ, “ಅಂದ್ರೆ ಮೂರು ವಾರದ ಹಿಂದೆಯೇ ಕಳಿಸಿದ ಚೆಕ್ ಬರಲಿಲ್ಲಾಂತಾಯ್ತು!” ಕೊರ್ಯರ್ ರಸೀದಿಗಳ ರಾಶಿಯಲ್ಲಿ ವಿರಾಜಪೇಟೆದು ಹುಡುಕಿ ತೆಗೆದು ವಿವರಗಳನ್ನು ನರಸಿಂಹನ್ನರಿಗೂ ಮಂಗಳೂರು ಶಾಖೆಗೂ ಕೊಟ್ಟೆ. ಅರ್ಧ ಗಂಟೆಯಲ್ಲೇ ಶಾಖೆಯವರು “ಅಂದೇ ಇಲ್ಲಿಂದ ಹೋಗಿದೆ ಸಾರ್. ವಿರಾಜಪೇಟೆಯಲ್ಲೂ ರಿಸೀವ್ ಆಗಿದೆ. ಸ್ವಲ್ಪ ಸಮಯ ಬಿಟ್ಟು ಪೀಓಡೀ (ಪತ್ರ ಪಡೆದು ಕೊಟ್ಟ ರಸೀದಿ) ವಿವರ ಹೇಳ್ತೇವೆ ಸಾರ್.”

ನರಸಿಂಹನ್ ವಿರಾಜಪೇಟೆಯಲ್ಲಿ ತಾವು ಪುಸ್ತಕ ಕಳಿಸಿದ ಪ್ರೊಫೆಶನಲ್ ಕೊರಿಯರ್ ಕಛೇರಿಗೆ ಧಾವಿಸಿ, ತನಿಖೆ ಮಾಡಿ ನನಗೆ ಚರವಾಣಿಸಿದರು “ಇಲ್ಲಿ ಬರಲೇ ಇಲ್ವಂತೆ”. “ನಾನು ಕಳಿಸಿದ್ದು ವೀಯಾರೆಲ್ ಕೊರಿಯರ್” ತಿದ್ದುಪಡಿ ಕೊಟ್ಟೆ. ನನ್ನ ಬಗ್ಗೆ ನನಗಿಂತ ಹೆಚ್ಚು ಕಾಳಜಿಯ ಡಾಕ್ಟರ್ ಸಾಹೇಬರು ಊರಿನ ಇನ್ನೊಂದು ಮೂಲೆಯಲ್ಲೆಲ್ಲೋ ಇರುವ ವೀಯಾರೆಲ್ ಶಾಖೆಗೂ ಧಾವಿಸಿದರು. “ಹೌದು, ರಿಸೀವ್ ಆಗಿದೆ. ಪೀಓಡೀ ಕಾಣ್ತಾ ಇಲ್ಲ. ಆ ದಿನದ ಡೆಲಿವರಿ ಬಾಯ್, ಡೆಲಿವರಿ ಬಾಯ್…” ಎಂದು ತಡವರಿಸಿದರು. ಅವರ ಖಾಯಂ ಡೆಲಿವರಿ ಬಾಯ್ ಆ ದಿನ ರಜೆಯಲ್ಲೋ ಬೇರೇ ಲೈನಿಗೋ ಹೋಗಿದ್ದನಂತೆ. ತತ್ಕಾಲೀನ ಹುಡುಗ, ನರಸಿಂಹನ್ ಲಕೋಟೆ ಒಯ್ದವ ನಾಪತ್ತೆಯಾದದ್ದು ಅವರ ಅರಿವಿಗೆ ಬಂದದ್ದು ನಮ್ಮ ದೂರಿನೊಡನೆ! ಉಗ್ರ ನರಸಿಂಹರು ಹುಡುಗನ ವಿಳಾಸ ತೆಗೆಸಿ, (ಊರು ಸಣ್ಣದಾದ್ದರಿಂದ ಬಚಾವ್) ಮನೆ ಹುಡುಕಿಸಿ, ‘ಅಪರಾಧಿ’ಯನ್ನು ಮಾಲು ಸಹಿತ ಹಿಡಿದೇ ಬಿಟ್ಟರು! ಆತನ ತಪ್ಪೊಪ್ಪಿಗೆ ಸಾರಾಂಶ ಇಷ್ಟು: ಆಗಾಗ ಹೀಗೇ ತತ್ಕಾಲೀನ ಡೆಲಿವರಿ ಮಾಡಿದವನೇ ಅವನು. ಅಂದು ಏನೋ ಕಾರಣಕ್ಕೆ (ಮರವೆ? ಉದಾಸೀನ? ಉಡಾಫೆ?) ಅದನ್ನಿಟ್ಟುಕೊಂಡು ದಿನ ಕಳೆದ. ಎಚ್ಚರವಾದ ದಿನ ಲಕೋಟೆ ನೋಡ್ತಾನೆ, ದಿನಾಂಕ, ಸ್ಥಳ ಎಲ್ಲಾ ಮುದ್ರಿಸಿದ್ದಂತೆ ಅದೇ ದಿನ ಬೆಂಗಳೂರಿನಲ್ಲಿ ನಡೆಯುವ ಯಾವುದೋ ಮಹತ್ತರ ಕಾರ್ಯಕ್ರಮ ಒಂದರ ಆಮಂತ್ರಣ. ಅವನಿಗೆ ಗಾಬರಿಯಾಯ್ತು. ಇಷ್ಟು ತಡವಾಗಿ ಕೊಟ್ರೆ ಈ ಡಾಕ್ಟ್ರು ಬೆಂಗಳೂರಿಗೆ ಹೋಗುವುದಂತೂ ಅಸಾಧ್ಯ. ಆದರೆ ತನ್ನನ್ನು ಸುಮ್ಮನೆ ಬಿಟ್ಟಾರೆಯೇ ಎಂದು ತಲೆ ಓಡಿಸಿ, ಸಾಕ್ಷಿಯನ್ನು (ಪುಣ್ಯಕ್ಕೆ ನಾಶ ಮಾಡಲಿಲ್ಲ) ತನ್ನಲ್ಲೇ ಉಳಿಸಿಕೊಂಡು ಬಿಟ್ಟಿದ್ದ. ನನಗೆ ಗೊತ್ತು, ನಿಮಗೆ ಗೊತ್ತು, ಈ ಹೊತ್ತಿಗೆ ನರಸಿಂಹನ್ನರಿಗೂ ತಿಳಿದಿತ್ತು – ಆ ಲಕೋಟೆ ಮರುಬಳಕೆಯದು. ಹೂರಣ, ಅದರಲ್ಲಿ ನಮೂದಿಸಿದಂತೆ ಆಮಂತ್ರಣದ್ದಲ್ಲ, ನನ್ನ ಪತ್ರ ಮತ್ತು ಚೆಕ್!

ಜಂಕ್ ಮೇಲ್

‘ಮೈಸೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಪಾವತಿ ಕಳಿಸಿದ್ದು ತಲಪಿಲ್ಲ’ ಎಂದು ಒಂದು ಸಲ ಸ್ಪಷ್ಟವಾಯ್ತು. ಕೊರಿಯರ್‌ನವರು ಮುಟ್ಟಿಸಿದ್ದಕ್ಕೆ ಕೊಟ್ಟ ಅಪೂರ್ಣ ಸಾಕ್ಷಿ (ಅವರ ಗ್ರಹಚಾರಕ್ಕೆ ಸ್ವೀಕರಿಸಿದವರ ರುಜು ಇರಬಹುದಾದ ಪೀಓಡೀ ಸಿಗಲಿಲ್ಲ. ಆದರೆ ಡೆಲಿವರಿ ಚಲನ್ನಿನಲ್ಲಿ ಆಶ್ರಮದ ಸೀಲಿತ್ತು) ನಮಗೆ ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಆಶ್ರಮದ ಪ್ರಸಾರಾಂಗದ ಕಛೇರಿ ಸಿಬ್ಬಂದಿ ನನ್ನ ಮೇಲಿನ ವಿಶ್ವಾಸಕ್ಕೆ ಎಲ್ಲಾ ಕಪಾಟು, ಖಾನಿಗಳನ್ನು (= ಮೇಜಿನ ಡ್ರಾಯರ್) ಹುಡುಕಿ ನಿರಾಶರಾದರು.

ಎರಡನೇ ಯೋಚನೆಯಲ್ಲಿ, ಸಣ್ಣ ಆಸೆಯಿಟ್ಟುಕೊಂಡು ಆಶ್ರಮದ್ದೇ ಆಡಳಿತ ಕಛೇರಿಯ (ಇದು ಪ್ರತ್ಯೇಕವಿದೆ) ತಲಾಷ್ ನಡೆಸಿದರು. ಪುಣ್ಯಕಾಲಗಳಲ್ಲಿ ದೇವಸ್ಥಾನ, ಆಶ್ರಮಗಳಿಗೆ ಬರುವ ಅಂಚೆಯ ರಾಶಿ ಸುಧಾರಿಸುವುದು ಸಣ್ಣ ಕೆಲಸವಲ್ಲ. ನನ್ನ ಪಾವತಿ ಹೋದ ಕಾಲ ಹೊಸ ವರ್ಷದ ಮುನ್ನಾ ದಿನಗಳು. ಹಾಗಾಗಿ ಅಲ್ಲಿನ ಮುಖ್ಯ ಲೆಕ್ಕಾಧಿಕಾರಿ ಮೇಲಿಂದ ಮೇಲೆ ಕಾಣುವಂತೆ ಶುಭಾಶಯ ಕೋರುವ ಪತ್ರಗಳನ್ನೆಲ್ಲ ಪುರುಸೊತ್ತಿನ ವಿಲೇವಾರಿಗೇಂತ ಬಂದ ಕ್ರಮದಲ್ಲೇ ಕಟ್ಟಿ ಮೂಲೆಗೆ ಹಾಕಿದ್ದರಂತೆ. ಅನಿವಾರ್ಯವಾಗಿ ಅದನ್ನು ಕೊನೇಗೆ ಬಿಡಿಸಿದರು; ಅಲ್ಲಿತ್ತು ನನ್ನ ಮೊಹರ್ ಒತ್ತಿದ ಲಕೋಟೆ. ನನಗೆ ಯಾವುದೋ ಕಂಪೆನಿ ಕಳಿಸಿದ ಸ್ವವಿಳಾಸ ಮತ್ತು ಹೊರಗೂ ಆಶಯವನ್ನು ಬಿಂಬಿಸುವ ಸಾಲುಗಳನ್ನು ಮುದ್ರಿಸಿದ ಲಕೋಟೆಯನ್ನು ನಾನು ಸಣ್ಣ ತಿದ್ದುಪಡಿಯೊಡನೆ ಮರುಬಳಸಿದ್ದೆ!

ಕಳೆದುದು ಸಿಕ್ಕಿದೆ

ಗೆಳೆಯ ಲಕ್ಷ್ಮೀನಾರಾಯಣ ರೆಡ್ಡಿ ನನ್ನಲ್ಲೇನೋ ಪುಸ್ತಕ ಕೊಂಡರು. “ರ್ರೀ ಸ್ಕೂಟರಿನಲ್ಲಿ ಕಾಲಬುಡದಲ್ಲಿ ಪುಸ್ತಕ ಇಟ್ಟುಕೊಳ್ಳುವಾಗ ಕೊಳೆಯಾಗುತ್ತೆ. ಯಾವುದಾದರೂ ಹಳೇ ಲಕೋಟೆ ಕೊಡಿ” ಎಂದು ಕೇಳಿ, ಪಡೆದುಕೊಂಡು ಹೋದರು. ಹನ್ನೊಂದು ಗಂಟೆಯ ಸುಮಾರಿಗೆ ಮಿಲಾಗ್ರಿಸ್ ಶಾಲೆಯ ಮುಖ್ಯೋಪಾಧ್ಯಾಯರು ದೂರವಾಣಿಸಿದರು, “ನೀವು ಕಳೆದುಕೊಂಡ ಪುಸ್ತಕ ಸಿಕ್ಕಿದೆ.” ನನ್ನ ಮೊದಲ ಪ್ರತಿಕ್ರಿಯೆ ಠಪ್ಪ ಬಂತು, “ಇಲ್ಲ ನಾನೇನೂ ಕಳೆದುಕೊಂಡಿಲ್ಲ.” ಮತ್ತೆ ವಿವರ ವಿಚಾರಿಸಿದಾಗ ಅದು ರೆಡ್ಡಿ ಕೊಂಡ ಪುಸ್ತಕ. ಆದರೆ ಮರುಬಳಕೆಗೆ ಕೊಟ್ಟ ಲಕೋಟೆಯ ಮೇಲಿನ ವಿಳಾಸ ನನ್ನ ಅಂಗಡಿಯದ್ದೇ ಇತ್ತು.

ಎಚ್ಚರೆಚ್ಚರ: ಈ ಮರುಬಳಕೆ ಪುರಾಣವನ್ನು ಓದಿದವರು, ಕೇಳಿಸಿಕೊಂಡವರು ಕನಿಷ್ಠ ಹತ್ತು ಜನರಿಗಾದರೂ ಮುಂದೂಡದಿದ್ದರೆ (Forward), ಪ್ರತಿ ಮಾಡಿ ಪ್ರಚುರಿಸದಿದ್ದರೆ ಏಳೇಳು ಮರುಜನ್ಮವನ್ನೆತ್ತಿ (ಜೀವವೈವಿಧ್ಯದಲ್ಲಿ ಯಾವುದಾದರೊಂದು ಎಂದಿಟ್ಟುಕೊಳ್ಳಿ) ಬಲುಬನ್ನ ಪಡಬೇಕಾಗುತ್ತದೆ – ಟ್ರಿಪ್ಪಲ್ ಶ್ರೀ ಆಕ್ರೋಶವರ್ಜನ ಮಹಾಸ್ವಾಮಿಗಳು.

ಒದ್ದೆ ಕನಸುಗಳು (ತಾತಾರ್ ೩)
ತೆಪ್ಪಕಾಡಿನಲ್ಲಿ ತೆಪ್ಪಗೆ ಬಿದ್ದವರ ಕಥೆಯಂತೂ ನಿಮಗೆ ಗೊತ್ತಾಯ್ತು. ಹಾಗೆಂದು ಮಸಣಿಗುಡಿಗೆ ಹೋದವರು ಹಿಂದಿನ ಯೋಚನೆಗಳನ್ನು ಇಟ್ಟುಕೊಳ್ಳುವುದು ಹೇಗೆ ಎಂದು ತಪ್ಪು ಭಾವಿಸಬೇಡಿ. ಅವರು ಮಸಣಿಗುಡಿ ತಲಪಿದ್ದೇ ಊರಬಾಗಿಲಿನಲ್ಲೇ ಇದ್ದ ಚೆಕ್ ಪೋಸ್ಟ್ ಬಳಿಯ ಮೈದಾನದಲ್ಲಿ ಬೀಡುಬಿಟ್ಟರು. ನಾಗರಾಜ್ ರೋಪಿಗೆ ಎಲ್ಲ ಗುಡಾರಗಳನ್ನು ವ್ಯವಸ್ಥಿತವಾಗಿ ಬಿಡಿಸಲು ಸೂಚನೆ ಹೋಯ್ತು. ಬಹಳ ಬಿಸಿಯಿಂದಲೇ ಸುರು ಮಾಡಿದ್ದರಂತೆ, ಆದರೆ ಬೆಣ್ಣೆಯಂತಾ ಸದಸ್ಯರು ಕರಗಿಹೋದರು. ಜಾವೀದ್ ಸೇಟ್ ಮತ್ತು ಬಾಲಸುಬ್ರಹ್ಮಣ್ಯಂ ಸೇರಿ ಮೊದಲ ಗುಡಾರ ಎಬ್ಬಿಸಿದರು. ಉಳಿದವು ಮೆಲ್ಲ ಮೆಲ್ಲನೆ ಏಳುತ್ತಿದ್ದಂತೆ ಜಾವೀದ್ ರೋಪಿಗೆ ಶಿಬಿರಾಗ್ನಿಗೆ ಸೌದೆ ಸಂಗ್ರಹಿಸುವ ಆದೇಶ ಹೊರಟಿತು. ಇದಕ್ಕೂ ಬಾಲಗ್ರಹ. ಇನ್ನೊಂದು ತಂಡ ನೀರು ಸಂಗ್ರಹಕ್ಕೆ ಹೊಯ್ತು. ಇಲ್ಲ, ಬಾವಿಗೆ ಬೀಳಲಿಲ್ಲ, ಅಲ್ಲಿಗೆ ಚಕ್ರದ ಮೇಲೆ ಬಂದಿದ್ದ ಸಣ್ಣ ಪ್ರಾಣಿ ಸಂಗ್ರಹಾಲಯದ ಹುಲಿ ಸಿಂಹಗಳನ್ನು ನೋಡುತ್ತ ಮೈಮರೆಯಿತು. ಮತ್ತೆ ಕೆಲವರು ಗೂಡು ಹೋಟೇಲಿನಲ್ಲಿ ಊರಿನ ರುಚಿಗಳನ್ನು ಪರೀಕ್ಷಿಸಿದರು. ಉಂಡಾಡಿಗಳ ಉಡಾಫೆ ಸಹಿಸದೆ ಹುಡುಗಿಯರು ಸುಮಾರು ಸೌದೆ ಸಂಗ್ರಹಿಸಿದರು. ಅವರೇ ನೀರಿನ ಹೊಣೆಗಾರರಿಗೆ ಮಾತಿನಲ್ಲಿ ಕುಕ್ಕಿ ಚುರುಕು ಮೂಡಿಸಿದರು. ಊಟದ ವೇಳೆಯೂ ಬಂತು (ಮಾಡಿದರು) ಆದರೆ ಉಳಿದೇ ಹೋಯ್ತು ಪಲ್ಲವಿ… `ಇನ್ನೂ ಯಾಕ ಬರಲಿಲ್ಲವ್ವಾ ತೆಪ್ಪಕಾಡಿನಂವಾ’

ಗೋವಿಂದರಾಜ್ ಸುಜಾತರು ಮತ್ತೆ ಏನೆಲ್ಲಾ ಸರ್ಕಸ್ ಮಾಡಿ, ಅಲ್ಲಿ ಶೂಟಿಂಗ್ ನಿರತರಾಗಿದ್ದ ತಮಿಳು ಸಿನಿಮಾ ಮಂದಿಯನ್ನು ಒಲಿಸಿಕೊಂಡು, ಅವರ ಜೀಪ್ ಎರವಲು ಪಡೆದರು. ತೆಪ್ಪಕಾಡಿನಲ್ಲಿ ಗುಡ್ಡೆಬಿದ್ದ ಕಟ್ಟುಗಳಿಗೇನೋ ಅದು ಸಾಕಾಯ್ತು, ಸದಸ್ಯರಿಗೆ ನಡುಗೆಯೇ. ಹೇಳಿಕೇಳಿ ಸಾಹಸಯಾತ್ರೆಗೇ ಹೊರಟವರು. ಮತ್ತೆ ಆಹ್ಲಾದಕರ ವನವಿಹಾರ, ದಾರಿಬದಿಯ ಮರಗಳಲ್ಲಿ ಆಕರ್ಷಣೀಯ ನೆಲ್ಲಿಕಾಯಿ ಸಿಕ್ಕ ಮೇಲೆ ನಾಲ್ಕೂವರೆ ಮೈಲನ್ನು ನಡಿಗೆಯಲ್ಲಲ್ಲ, ಓಡಿಯೇ ಮುಗಿಸುತ್ತೇವೆ ಎಂದೂ ತೊಡಗಿದ್ದೆವು. ದಿನಪೂರ್ತಿ ಕಾದಾಗ ಬರದ ಖಾಲೀ ಲಾರಿಯೊಂದು ಆಗ ಬಂದು ಪರೋಕ್ಷವಾಗಿ ನಮ್ಮನ್ನು ಸೋಲಿಸಿತು. ಮತ್ತೆ ಎಲ್ಲಾ ಒಟ್ಟಾಗಿ, ಬಾಕಿ ಗುಡಾರಗಳು ತಲೆ ಎತ್ತಿ ಶಿಬಿರ ಸಮರ್ಪಕವಾಗಿತ್ತಾ ‘ಆಗ ಸಂಜಿಯಾಗಿತ್ತಾ.’

ಉದಕಮಂಡಲ ದಾರಿಯಿಂದ ಸಿಂಗಾರಂ ಜಲವಿದ್ಯುದಾಗರಕ್ಕೊಂದು ದಾರಿ ಕವಲೊಡೆಯುವಲ್ಲಿ ಇರುಕಿಕೊಂಡಂತಿರುವ ಪುಟ್ಟ ಹಳ್ಳಿ ಮಸಣಿಗುಡಿ. ಗುಪ್ಪೆ ಹಾಕಿದಂತೆ ಇಪ್ಪತ್ತು ಮೂವತ್ತು (ಜೋಪಡಿಗಿಂತ ಸ್ವಲ್ಪ ಉತ್ತಮ ಸ್ಥಿತಿಯ)  ಮನೆಗಳು, ಶಾಲೆ, ಗುಡಿ, ಮಸೀದಿ, ಊರ ಗಡಿರೇಖೆಯಂತೊಂದು ಹೊಳೆ. ಸೂಜಿ ಕಾರ್ಖಾನೆ ಇಲ್ಲಿನ ವೈಶಿಷ್ಟ್ಯ! [ಯಃಕಶ್ಚಿತ್ ಸೂಜಿಗೂ ಒಂದು ಸ್ವತಂತ್ರ ಕಾರ್ಖಾನೆ ಬೇಕೋ ಅದೂ ಇಂಥಾ ಕಗ್ಗಾಡ ಮೂಲೆಯಲ್ಲಿ? ಅದು ಯಾವುದೇ ಕಿರಾಣಿ ಅಂಗಡಿಯವನ ಡ್ರಾಯರಿನ ಸಿಗರೇಟು ಡಬ್ಬಿಯಲ್ಲೋ ಬೇಗಡೆ ಕಾಗದದ ಲಕೋಟೆಯಲ್ಲೋ ತಂತಾನೇ ಇರುತ್ತದೆ ಎಂಬ ಮುಗ್ಧತನ ಹಾಗಾಗಿ ಬೆರಗು ಆ ಕಾಲದಲ್ಲಿ ನನಗಿತ್ತು] ಮತ್ತೇನಿದ್ದರೂ ಇಲಾಖೆಗಳ ಅನಿವಾರ್ಯ ರಚನೆಗಳು. ಅವುಗಳದೇ ಒಂದು ಪ್ರವಾಸೀ ಬಂಗ್ಲೆ ಬಳಕೆಗೆ ಬಂದರೆ, ಆಗೀಗ ಚಿತ್ರೀಕರಣದವರ ತಂಡಗಳು ತಂಗಿದರಷ್ಟೇ ಊರಿಗೆ ವಿಶೇಷ ಎನ್ನುವಂತಿತ್ತು. [ಆದರೆ ಸುಮಾರು ಆರೇಳು ವರ್ಷದ ಹಿಂದೆ ನಾನತ್ತ ಹೋಗಿದ್ದಾಗ ಮತ್ತು ಇಲ್ಲಿನ ಹೊಸ ಫೋಟೋಗಳನ್ನು ಕಳೆದ ವರ್ಷವಷ್ಟೇ ಹೋಗಿದ್ದಾಗ ಹಿಡಿದು ತಂದ ಗೆಳೆಯ ಮನೋಹರ ಉಪಾಧ್ಯರು ಕಂಡಂತೆಯೂ ಇಂದು ಪ್ರವಾಸೋದ್ಯಮದ ಗಿರ ಮಸಣಿಗುಡಿಯನ್ನೂ ಬಿಟ್ಟಿಲ್ಲ ಎಂದಷ್ಟೇ ಸಖೇದ ದಾಖಲಿಸುತ್ತೇನೆ]

ಬಯಲಿನಲ್ಲಿ ದಾರಿಗೆ ಮುಖ ಹಾಕಿದಂತೆ U ಆಕಾರದಲ್ಲಿ ನಮ್ಮ ಎಂಟು ಗುಡಾರಗಳನ್ನು ಅರಳಿಸಿ, ಎದುರು ಸಂಸ್ಥೆಯ ಧ್ವಜ ಹಾರಿಸಿದೆವು. [ಬರವಣಿಗೆಯಲ್ಲಿ ಎಲ್ಲವೂ ರಮ್ಯ. ವಾಸ್ತವದಲ್ಲಿ ಹೆಚ್ಚಿನ ಗುಡಾರಗಳು ಮೂರಡಿ ಆರಡಿಯ ಎರಡು ಜಮಖಾನಗಳ ಸಂಯೋಜನೆ. ನನ್ನದಕ್ಕಂತೂ ಮೂರಡಿ ಎತ್ತರದ ಎರಡು ಬಿದಿರು ದೆಬ್ಬೆಗಳೇ ಆಧಾರ, ಆರು ಕಾಡುಕಲ್ಲುಗಳೇ ಮೂಲೆ ಕೀಲುಗಳು. ಇದಕ್ಕಪವಾದವಾಗಿ ಒಂದೆರಡು ಗುಡಾರಗಳು (ಮೀಡ್ ಮಾದರಿಯವು) ನಮ್ಮ ಶಿಬಿರದಲ್ಲಿತ್ತಾದರೂ ಇಂದು ಲಭ್ಯವಿರುವ ಗುಡಾರಗಳಲ್ಲಿನ ಸಾವಿರಾರು ಮಾದರಿಗಳು, ಸೌಕರ್ಯಗಳು ಮತ್ತು ವರ್ಣ ವೈವಿಧ್ಯಕ್ಕೆ ಹೋಲಿಸಿದರೆ ನಮ್ಮ ಶಿಬಿರ ಅಲೆಮಾರಿ ಜನಾಂಗಗಳ ‘ಅರೆಮನೆ’ಗಳೊಡನೆ ಸ್ಪರ್ಧಿಸುವಂತಿತ್ತು.] ಊರ ಕುಡಿನೀರ ಟಾಂಕಿಯಲ್ಲಿನ ನಲ್ಲಿಯಿಂದ ನೀರು ತರಲು ನಾನು ಮುಂದಾದೆ. ಆದರೆ ಅದು ದಿನಕ್ಕೊಮ್ಮೆ ಮಾತ್ರ ವಿತರಣಾ ನಿಯಮದಲ್ಲಿದ್ದುದರಿಂದ ಯಾವುದೋ ಮನೆಯವರ ಕೃಪೆಗೆ ಪಾತ್ರನಾದೆ. ಅಷ್ಟರಲ್ಲಿ ನನಗೂ ಮೊದಲೇ ಊರ ಹೊಳೆಗೇ ನೀರು ತರಲು ಹೋಗಿದ್ದ ನಮ್ಮ ಸ್ತ್ರೀ ಸದಸ್ಯರು ‘ಸಿನಿಮಾ ನಟಿಯರಾಗಿ’ ಊರ ‘ಅಭಿಮಾನೀ ಬಳಗ’ವನ್ನು ಆಕರ್ಷಿಸಿ, ಬಳಲುತ್ತ ಬರುವುದು ಕಾಣಿಸಿತು. ವಾಸ್ತವದಲ್ಲಿ ಪ್ಯಾಂಟು, ಶರಟು ತೊಟ್ಟ ಮಹಿಳೆಯರು ಅದರಲ್ಲೂ ಹೊಳೆ ದಂಡೆಯಲ್ಲಿ ಎಂದಾಗ ಮುಗ್ದ ಹಳ್ಳೀ ಮಂದಿಗೆ ನಿಲುಕಿದ ಕಲ್ಪನೆ (ಪ್ರೇಮ ಸಲ್ಲಾಪದೊಡನೆ ವಿಹರಿಸುವ) ಸಿನಿಮಾ ತಾರೆಯರದು ಮಾತ್ರವಾಗಿತ್ತು. ಅನಂತರ ‘ಎಲ್ಲರೂ ಹಂಚಿಕೊಂಡು ಶಿಬಿರ ಕಾರ್ಯಗಳು ನಡೆಯಬೇಕು’ ಎನ್ನುವ ನಿಯಮ ಸಾಂಪ್ರದಾಯಿಕ ನಿಯಮಗಳಿಗೆ ದಾರಿ ಮಾಡಿಕೊಟ್ಟಿತು; ಹೆಂಗಸರಿಗೆ ಅಡುಗೆ ಕೆಲಸವೇ ಗಟ್ಟಿ!

ಕತ್ತಲಿನೊಡನೆ ಚಳಿ ಅಮರಿಕೊಂಡಿತು. ನಮ್ಮ ಬಡಕಲು ಸೌದೆ ಸಂಗ್ರಹ ಇಡೀ ರಾತ್ರಿಗೆ ಸಾಕಾಗದೆಂದು ಅರಿವಾದದ್ದೇ ಸಮೀಪದಲ್ಲಿ ಚದುರಿದಂತೆ ಬಿದ್ದಿದ್ದ ಕೆಲವು ಒಣ ಮರಗಳನ್ನೂ ದಾಸ್ತಾನು ಮಾಡಿ, ಕೆಲವನ್ನು ಶಿಬಿರಾಗ್ನಿ ಎಂದು ಉರಿಸಲೂ ತೊಡಗಿ “ಶ್ಲೀಈಈ ಅಹಹ ಉಹುಹು” ಮಂತ್ರೋಚ್ಚಾರಣೆಗೂ ಸುರು ಮಾಡಿದ್ದೆವು. ನಮ್ಮ ಸಂಕಲ್ಪದ ಪ್ರಭಾವವೋ ಮಂತ್ರದ ಶಕ್ತಿಯೋ ‘ಯಜ್ಞ’ ಪರಿಮಳಿಸತೊಡಗಿತು. ಆದರೆ ವಿಘ್ನಕಾರಕರಾದ ರಾಕ್ಷಸ ಪಾತ್ರದಲ್ಲಿ ಬಂದವರು ಕೆಲವು ಊರ ಹಿರಿಯರು ಮತ್ತು ಅರಣ್ಯ ಇಲಾಖೆಯ ಗಾರ್ಡು. ವಾಸ್ತವದಲ್ಲಿ ನಾವು ಅರಿವಿಲ್ಲದೆ ಅಲ್ಲಿ ಸಹಜವಾಗಿ ಲಭ್ಯವಿದ್ದ ಗಂಧದ ಕೊರಡುಗಳನ್ನೇ ಉರಿಗೆ ಒಡ್ಡಿದ್ದೆವು. ತಿಂಗಳ ಹಿಂದೆ ಸಾಹಸ ಯಾತ್ರೆಯನ್ನು ಆಯೋಜಿಸಿದಂದಿನಿಂದಲೇ ನಾವು ಇಲಾಖೆಯ ಸಹಾಯ ಮತ್ತು ಸಹಕಾರವನ್ನು ಗಳಿಸಿಯೇ ಇದ್ದೆವು. ಹಾಗಾಗಿ ಅವರು ತಪ್ಪು ತಿಳಿಯದೆ ಗಂಧದ ಕೊರಡುಗಳನ್ನು ಒಯ್ದು, ಅನ್ಯ ಸೌದೆ ಒದಗಿಸಿದರು. ಹೆಚ್ಚೇನು ಶಿಬಿರಾಗ್ನಿಯ ಔಪಚಾರಿಕ ಉದ್ಘಾಟನೆಯನ್ನು ಆ ವಲಯದ ಅರಣ್ಯಾಧಿಕಾರಿ – ಜಾನ್ ಆಂಬ್ರೋಸ್ ಎನ್ನುವವರೇ ಬಂದು ಸಂತೋಷದಿಂದ ನಡೆಸಿಕೊಟ್ಟರು. ನಾವು ಎದುರಿಸಬಹುದಾದ ವನ್ಯಮೃಗಗಳಾದಿ ಎಲ್ಲ ಸವಾಲುಗಳಿಗೂ ಅವರೊಡನೆಯ ಅನೌಪಚಾರಿಕ ಮಾತುಕತೆಗಳಲ್ಲಿ ಪರಿಹಾರವನ್ನೂ ನಾವು ಕಂಡುಕೊಂಡೆವು. ಮೊದಲೇ ನಿಶ್ಚಯಿಸಿದ್ದಂತೆ ಮಾರಣೇ ದಿನ ಬೆಳಿಗ್ಗೆ ಇಬ್ಬರು ಮಾರ್ಗದರ್ಶಿಗಳ ಬಗ್ಗೆಯೂ ಭರವಸೆ ಕೊಟ್ಟು ಹೋದರು.

ಎರಡು ಪಂಪ್ ಸ್ಟೌಗಳ ಭರ್ರದಲ್ಲಿ ಕಾಫಿ, ಅನ್ನ, ಪಲ್ಯ, ಸಾರು ಸಾಲಿನಲ್ಲಿ ಬಂದಂತೆ, ಸಂಜೆಯ ಲೆಕ್ಕ ರಾತ್ರಿಯ ಲೆಕ್ಕ ಚುಕ್ತಾ ಮಾಡುವಾಗ ಗಂಟೆ ಹತ್ತಾಗಿತ್ತು. ಗುಡಾರಗಳೆಲ್ಲ ಒಳಗೆ ಹಾಸಿಗೆ ಬಿಚಾಯಿಸಿಕೊಂಡು ‘ಮಲಗಲು ಬನ್ನಿ’ ಎಂದು ಕರೆಯುತ್ತಿದ್ದವು. ಆ ಪುಟ್ಟ ಮನೆಗಳನ್ನು ಬೆಳಗುವ ಮೊಂಬತ್ತಿಗಳೂ ಕರೆ ಬೆಂಬಲಿಸಿ ತಲೆದೂಗುತ್ತಿದ್ದವು. ಆದರೆ ಹೊಂಗನಸಿಗೂ ಮುನ್ನ ಸುಳಿಗಾಳಿ ಸುಂಟರಗಾಳಿಯಾಗುತ್ತಲಿತ್ತು. ‘ಸಾಹಸಿಗಳಿಗೆ ಪ್ರಥಮ ಪರೀಕ್ಷೆ’ ಒಡ್ಡುವಂತೆ ಮಂಜಿನ ಮುಸುಕಿನ ಹಿಂದೆ ಕರಿಮೋಡಗಳು ತಮ್ಮ ಆಯುಧಗಳನ್ನು ಝಳಪಿಸುತ್ತ ಕಲೆತವು. ಅವಕ್ಕೆಲ್ಲ ಸೊಪ್ಪು ಹಾಕದೆ ‘ಮನರಂಜನಾ ಅಧಿಕಾರಿ’ ನಾಗರಾಜ್, ಉದ್ಘಾಟನೆಗೆ ತಾನೇ ಆಫ್ರಿಕದ ಕಾಡುಜನಾಂಗದ ಒಂದು ಹಾಡು ಒಗೆದುಬಿಟ್ಟಾ! (ನಾವೂ ಆಫ್ರಿಕನ್ನೇ ಇರಬೇಕು ಎಂದು ಅಂದುಕೊಂಡೆವು, ಅಲ್ಲಾ ಎನ್ನಲು ನಮಗ್ಗೊತ್ತಿರಬೇಕೇ!) ಮುಂದಿನ ಸರದಿ ಮಹಿಳೆಯರದು ಎಂದು ಆತ ಘೋಷಿಸಿದ್ದೂ ಆಯ್ತು. ಆದರೆ ತಪ್ಪಿ ಮಳೆ ಕೇಳಿಸಿಕೊಂಡಿತೋ ಏನೋ ಶಿಬಿರಾಗ್ನಿ ನೊಂದುಕೊಳ್ಳುವಂತೆ ಹನಿಗಳ ಪ್ರಹಾರಕ್ಕಿಳಿಯಿತು. ಕೇವಲ ಇಬ್ಬನಿಯ ಶೈತ್ಯಕ್ಕಷ್ಟೇ ಸಜ್ಜುಗೊಂಡಿದ್ದ ಎಲ್ಲ ಗುಡಾರಗಳಿಗೂ ಇದ್ದ ಬದ್ದ ಪ್ಲ್ಯಾಸ್ಟಿಕ್ ಹಾಳೆಗಳು, ಮಳೆಕೋಟುಗಳನ್ನೂ ಮುಚ್ಚಿ ಏನೋ ಬಂದೋಬಸ್ತು ಮಾಡಿಕೊಂಡೆವು. ಮತ್ತೆ ರಾತ್ರಿ ಸರದಿಯ ಮೇಲೆ ಎಲ್ಲರೂ ಪಹರೆ ಕಾರ್ಯ ನಡೆಸಬೇಕಿತ್ತು. ಅದಕ್ಕೆ ತಂಡಗಳ ಸೂಚನೆಯನ್ನು ಸುಜಾತರಿಂದ ಕೇಳಿಕೊಂಡು ಗುಡ್ನಾಯಿಟಿಸಿದೆವು. ನಾನು ಗಿರೀಶನೂ ಗುಡಾರ ಸೇರಿ, ಶೂ ಕಳಚಿಟ್ಟು, ಬೆಚ್ಚನೆಯ ಸವಲತ್ತುಗಳನ್ನೆಲ್ಲ ಮೈಮೇಲೆಳೆದುಕೊಂಡು ಮಲಗಿದೆವು.

ಮಳೆನಾಡ ಮಳೆಯದುವು ಗೋಳು ಕರೆಯುತ್ತಿತ್ತು

ಸುಳಿಗಾಳಿ ಸುಯ್ ಸುಯ್ದು ಅನುಮೋದಿಸುತ್ತಿತ್ತು.

ಮೊದಲ ಜಾಮದ ಪಹರೆ ಗೋವಿಂದರಾಜ್, ನಾಗರಾಜ್ ಮತ್ತು ಜಸವಂತರದ್ದು. ಹನಿಗಳ ನಡುವೆ ಅಂತರ ಕಡಿಮೆಯಾಗುತ್ತ ಹೋಯ್ತು. ಚಳಿ, ಹಾವು ಮತ್ತು ವನ್ಯ ಮೃಗಗಳಿಂದ ಶಿಬಿರವನ್ನು ದೂರವಿಡುವ ಶಿಬಿರಾಗ್ನಿಯ ಶಿಖೆ ಅಳಿವು ಉಳಿವುಗಳ ನಡುವೆ ತುಯ್ಯತೊಡಗಿತು. ಇಂದ್ರ ಕಳಿಸಿದ ಮುಸಲ ಧಾರೆಯನ್ನು ತಡೆದು ಖಾಂಡವವನ ದಹನಾನುಕೂಲಿಯಾದ ಗೋವಿಂದ ಇಲ್ಲೂ ಕೆಲಸ ಮಾಡಿದಂತೇ ಇತ್ತು. ಕೈ ಮಿಲಾಯಿಸಿ ರೈನ್ ಕೋಟ್ಗಳನ್ನೇ ಎತ್ತರದಲ್ಲಿ ಬಿಡಿಸಿ ಹಿಡಿದು ಅಗ್ನಿಯನ್ನು ವರುಣನಿಂದ ಕಾಪಾಡಿದರು (ಇಲ್ಲಿ ತಕ್ಷಕನ ತಪ್ಪಿಸೋಣ ನಮ್ಮ ಗಮನಕ್ಕಂತೂ ಬರಲಿಲ್ಲ!). ನೆಲಕ್ಕೆ ಬಿದ್ದ ನೀರು ಗುಡಾರಗಳೊಳಗೆ ಹರಿಯದಂತೆ ಇದ್ದೊಂದು ಹಿಮಗೊಡಲಿಯಲ್ಲೇ ನೆಲ ಕೆರೆದು ಸಪುರ ಕಣಿಗಳನ್ನು ಮಾಡತೊಡಗಿದರು. ಹುಡುಗಿಯರ ಗುಡಾರದ ಸುತ್ತೂ ಹೀಗೇ ನೆಲ ಕೆರೆಯುತ್ತಿದ್ದಂತೆ, ನಿದ್ದೆಯ ಮಂಪರಿನಲ್ಲಿದ್ದ ಕಾವೇರಿಯಮ್ಮನಿಗೆ ಭೀಕರ ಕನಸು. ಕಾಡು ಹಂದಿಯ ದಂತ ಮಸೆತ, ಹೆಬ್ಬುಲಿಯ ಪಂಜದ ಪೆಟ್ಟು ಮೂರ್ತವಾದಂತಾಗಿ ಕಾವೇರಿಯಮ್ಮನ ಬಾಯಿಯಿಂದ ಗೋವಿಂದೋ ಗೋವಿಂದ. ಇವರು ಗೊಂದಲದಲ್ಲಿ ಚಡಪಡಿಸಿ ಏಳುತ್ತಿದ್ದಂತೆ ಗುಡಾರದ ಮೇಲೆ ಹಾಸಿದ್ದ ಯಾವುದೋ ಮಳೆಕೋಟಿನ ಮಡಿಕೆಯಲ್ಲಿ ತುಂಬಿದ್ದ ಶೀತಲ ನೀರು ಮಲಗಿದ್ದವರ ಮೈಗೆ ಒಮ್ಮೆಗೆ ಬಿತ್ತು. ಮತ್ತೆಕೇಳಬೇಕೇ ಗಾಬರಿಗೆಟ್ಟ ಹುಡುಗಿಯರು ನಿಮಿಷಾರ್ಧದಲ್ಲಿ ಗುಡಾರದಿಂದ ಹೊರಗೆ ಸಿಡಿದಿದ್ದರು! ಮುಂದಿನದೆಲ್ಲ ಜಲಪರ್ವವೇ. ಅಚ್ಯುತರಾಯರು ಹುಡುಗಿಯರಿಗೆ ತನ್ನ ಗುಡಾರ ತೆರವು ಮಾಡಿಕೊಟ್ಟರು. ಗೋವಿಂದರಾಜರ ಜಲನಿರೋಧಕ ಮಲಗುವ ಚೀಲವನ್ನೇ ಬಿಡಿಸಿ ಅವರಿಗೆ ಬೆಚ್ಚನೆಯ ಹೊದಿಕೆ ಮಾಡಿದ್ದೂ ಆಯ್ತು. ಆದರೆ ಸಂತೃಪ್ತ ನೆಲ ಅಲ್ಲೂ ಇತರ ಗುಡಾರಗಳಲ್ಲೂ ಜಲಜಾಗೃತಿಯನ್ನು ಉಂಟುಮಾಡಿತು! ಒದ್ದೆ ಕಾಗೆಗಳಂತೆ ಒಬ್ಬೊಬ್ಬರೇ ಮುನಿದ ಶಿಬಿರಾಗ್ನಿಗೆ ಮುತ್ತಿಗೆ ಹಾಕುತ್ತಿದ್ದಂತೆ ‘ಇನ್ನೇನಪ್ಪಾ ಮಾಡುವುದು’ ಯೋಚನೆ ಹೆಚ್ಚಾಯ್ತು, ಅನುಕೂಲಕ್ಕೆ ಸಂಜೆ ಅರಣ್ಯಾಧಿಕಾರಿ ಕೊಟ್ಟ  ಆಮಂತ್ರಣ ನನೆಪಿಗೂ ಬಂತು. ಹಾಗಾಗಿ ಮೊದಲು ಒಂದಷ್ಟು ಹುಡುಗರು ಅಚ್ಯುತರಾಯರ ಮುಂದಾಳತ್ವದಲ್ಲಿ ಅಗತ್ಯದ ಹಾಸಿಗೆ ಬಟ್ಟೆಗಳನ್ನು ಅವಚಿಕೊಂಡು ಅರಣ್ಯ ಇಲಾಖೆಯ ಜಗುಲಿಗೆ ವಲಸೆ ಹೋದರು. ಸ್ವಲ್ಪ ಸಮಯದಲ್ಲೇ ಜಸವಂತನ ನೇತೃತ್ವದಲ್ಲಿ ಹುಡುಗಿಯರನ್ನೂ ರವಾನಿಸಬೇಕಾಯ್ತು. ಆದರೆ ಜಸವಂತನಿಗೆ ಕಛೇರಿ ದಾರಿ ತಪ್ಪಿ ಊರಲೆದು, ನಿದ್ದೆಗೇಡಿ ಗುಮಾಸ್ತನೊಬ್ಬನ ಕಣ್ಣಿಗೆ ಬಿದ್ದು ನೆಲೆ ಸೇರಿದರು. ಶಿಬಿರ ಸ್ಥಾನದಲ್ಲಿ ಗೋವಿಂದರಾಜ್, ಇತ್ತ ಜಗುಲಿಯಲ್ಲಿ ರಮೇಶ್ ಕಾಲಮಿತಿಯಿಲ್ಲದ ಕಾವಲುಗಾರರು.

ಏತನ್ಮಧ್ಯೆ ನಾನೆಲ್ಲಿದ್ದೆ ಅಂತೀರಾ? ಎಲ್ಲರೂ ಎದ್ದಿರಲು ಇವನೊಬ್ಬನಿದ್ದ, ಗಟ್ಟಿಯಾಗಿ ಮಲಗಿದ್ದ! ಮೂರು ಗಂಟೆಗೆ ಪಹರೆಯ ಸರದಿ ಮರೆಯದಂತೆ ಭಾಸ್ಕರ ಎಬ್ಬಿಸಿದಾಗಲೇ ನಾನು ಬುದ್ಧ. ನೀರಿಳಿಯುತ್ತಿದ್ದ ಗುಡಾರದ ಬಟ್ಟೆಯಿಂದ ಸಂಪರ್ಕದಲ್ಲಿದ್ದ ನನ್ನ ಪ್ಯಾಂಟೂ ಹೊದಿಕೆಗಳೂ ನೀರೆಳೆದುಕೊಂಡು ನನಗೆ (ಅತಿ)ಶೈತ್ಯೋಪಚಾರ ನೀಡಿತ್ತು. ಕೊರಡುಗಟ್ಟಿದ ಕೈಕಾಲು ಝಾಡಿಸಿ, ಕಾಲ್ಚೀಲ ಹಿಂಡಿ ಹಾಕಿ, ಶೂವಿನೊಳಗಿನ ನೀರು ಖಾಲಿ ಮಾಡಿ, ತೊಡರಿಸಿಕೊಳ್ಳುತ್ತಾ ಕಣ್ಣುಹೊಸೆಯುತ್ತಾ ಹೊರಗೆ ಬಂದಾಗಲೇ ಗೊತ್ತು ಶಿಬಿರ ಖಾಲಿ.

ಮಳೆಚಳಿಗೆ ಕಾಲಪುರುಷಂಗೂ ಜಡಂಗಡ. ತೆವಳುತ್ತ ಬಂದ ನಾಲ್ಕು ಗಂಟೆಗೆ ಸುಜಾತ ಹೊರಬಿದ್ದು, ಶಿಬಿರಕಾರ್ಯ ವಹಿಸಿಕೊಂಡರು. ಮಳೆ ನಿಂತಿತ್ತು. ಗೋವಿಂದರಾಜ್ ದಕ್ಕಿದಷ್ಟು ವಿಶ್ರಾಂತಿ ಎಂದು ಗುಡಾರ ಸೇರಿಕೊಂಡರು. ಕರ್ತವ್ಯ ಪ್ರಜ್ಞೆ ಮರೆಯದೆ ರಮೇಶನೂ ಕಛೇರಿ ಜಗುಲಿ ಬಿಟ್ಟು ಬಂದು ಕಾಫಿ ತಿಂಡಿಗಳ ತಯಾರಿಗೆ ಸೇರಿಕೊಂಡ. ಮಳೆ ನೀರೇನೋ ಧಾರಾಳ ವ್ಯಾಪಿಸಿತ್ತು. ಆದರೆ ಪರಂಗಿ ಕವಿಯೊಬ್ಬನ ಕ್ಷಮೆ ಕೋರಿ:

ನೀರು ನೀರು ಎಲ್ಲೆಲ್ಲು ನೀರು

ಶಿಬಿರವೋ ಚಂಡಿಪಿಂಡಿ

ನೀರು ನೀರು ಎಲ್ಲೆಲ್ಲು ನೀರು

ಕುಡಿಯೆ ಇಲ್ಲ ಅರೆಗಿಂಡಿ

ಸೂರ್ಯ ಮಳೆಕೋಟು, ಮಫ್ಲರ್ ಎಲ್ಲಾ ಹಾಕಿಕೊಂಡು ನಿಧಾನಕ್ಕೆ ಬಂದ. ಬಿಸುಪಿಲ್ಲ, ಬರಿಯ ಮಂದ ಬೆಳಕು. ವಿಶ್ರಾಂತಿ, ಹವೆ, ಪೂರೈಕೆ ಮುಂತಾದವೆಲ್ಲ ಆದರ್ಶಯುತವಾಗಿದ್ದಾಗ ಬೆಟ್ಟ ಹತ್ತುವುದು ಸಾಹಸ ಎಂಬ ಅಪಕಲ್ಪನೆ ನಮ್ಮದಲ್ಲ. ಎಲ್ಲವನ್ನೂ ಸುಧಾರಿಸಿಕೊಂಡು ಕಾಫಿ ತಿಂಡಿ ಮಾಡಿ ಮುಗಿಸಿ, ಮಧ್ಯಾಹ್ನಕ್ಕೆ ಬುತ್ತಿ ತಯಾರಿಸಿ ಕಟ್ಟಿಕೊಂಡದ್ದಾಯ್ತು. ನಿದ್ದೆ ಒದ್ದೆಗಳ ಪ್ರಭಾವದಲ್ಲಿ ದೈಹಿಕವಾಗಿ ಹಿಂದುಳಿಯ ಬಯಸುವವರಿಗೆ ನಾಯಕರು ವ್ಯರ್ಥ ಅವಕಾಶವನ್ನೂ ಕೊಟ್ಟದ್ದಾಯ್ತು. ಅರಣ್ಯ ಇಲಾಖೆಯ ಮಾರ್ಗದರ್ಶಿಗಳು ಬರುವಾಗ ನಮ್ಮ ಪೂರ್ಣ ತಂಡ on the mark ಇತ್ತು. ಒದ್ದೆ ಗುಡಾರವೇ ಮುಂತಾದ ಹಲವು ಸಾಮಾನುಗಳನ್ನು ಅಲ್ಲೇ ಅರಣ್ಯ ಇಲಾಖೆಯ ವಶದಲ್ಲಿ ಬಿಟ್ಟು ಊರು ಬಿಡುವಾಗ ಗಂಟೆ ಹನ್ನೊಂದು. ಮೂವರು ಮಾರ್ಗದರ್ಶಿಗಳು, ಅಯಾಚಿತವಾಗಿ ಜೊತೆಗೊಟ್ಟ ಊರಿನ ಒಂದು ಬೀಡಾಡಿ ನಾಯಿ (ಟೈಗರ್) ಸೇರಿ ಇಪ್ಪತ್ನಾಲ್ಕು ಮಂದಿ ಮನದ, ದಿನದ, ಭವಿಷ್ಯದ ಮಂಕು ಹರಿಯುವಂತೆ ಜೈಕಾರ ಹಾಕಿ ಶಿಂಗಾರಂ ದಾರಿ ತುಳಿದೆವು.

ಡಾಮರು ದಾರಿ ತುಳಿಯುತ್ತಿದ್ದಂತೆ ಆರಂಭಿಕ ಉತ್ಸಾಹದಲ್ಲಿ ನಮ್ಮದು ಗದ್ದಲ ತುಸು ಜಾಸ್ತಿಯೇ ಇತ್ತು. ದಾರಿ ಹೊಳೆಯೊಂದರ ಅಂಚಿಗೆ ಇಳಿಯುತ್ತಿದ್ದಂತೆ ಕಣಿವೆಯಿಂದ ಆನೆಯ ಘೀಳು ಕೇಳಿಸಿದ್ದೇ ಎಲ್ಲರ ಬಡಿವಾರ ಬಂದ್. ಒಂದೇ ಗಂಟೆಯಲ್ಲಿ ಡಾಮರು ದಾರಿಯನ್ನು ಬಲಕ್ಕೆ ಬಿಟ್ಟು ನಾವು ಬಿದಿರು ಕಾಡಿನೊಳಗಿನ ಕಾಲು ದಾರಿ ಹಿಡಿದೆವು. ಆಗಿಂದಾಗ್ಗೆ ಆನೆ ಲದ್ದಿಯ ದರ್ಶನ; ಹಲವು ಹಳತು, ನಮ್ಮೆದೆ ತಲ್ಲಣಕ್ಕೆ ಕೆಲವು ಬಿಸಿಬಿಸಿ. ಒಂದೊಂದು ಅಕರಾಳ ವಿಕರಾಳ ಸಿಗಿದು ಬಿದಿರುಗಳ ಹಿಂಡ್ಲಿನಾಚೆ,  ಪ್ರತಿ ತಿರುವಿನಾಚೆ ಗಜ ದರ್ಶನದ ನಿರೀಕ್ಷೆಯಲ್ಲಿ ನಮ್ಮ ಹೆಜ್ಜೆ ತಡವರಿಸುತ್ತಿದ್ದರೂ ಚುರುಕಾಗಿಯೇ ಇತ್ತು.

ಮೊದಮೊದಲು ಗಂಟೆಗೊಮ್ಮೆ ಐದು ಮಿನಿಟಿನ ವಿಶ್ರಾಂತಿ. ಮುಂದುವರಿದಂತೆ ಏರು ತೀವ್ರವಾದಂತೆ, ಅಡ್ಡಿಗಳು ಹೆಚ್ಚಿದಂತೆ ಗತಿ ನಿಧಾನವಾದದ್ದಕ್ಕೆ ಪ್ರತ್ಯೇಕ ವಿರಾಮವಿಲ್ಲದೆ ಆರೋಹಣ ಸಾಗಿತು. ಮಧ್ಯೆ ಸ್ವಲ್ಪ ದೂರ ಸುತ್ತಿ ಸುತ್ತಿ ಬರುತ್ತಿದ್ದ, ಜೀಪು ಮಾತ್ರ ಪಯಣಿಸಬಹುದಾಗಿದ್ದ ಕಚ್ಚಾ ದಾರಿಯೊಂದು ಸಿಕ್ಕಿದರೂ ಬೇಗನೆ ಆಳೆತ್ತರದ ಹುಚ್ಚು ಹುಲ್ಲುಹಬ್ಬಿದ ತೆರೆಮೈ ಸೇರಿದೆವು. ಮಾರ್ಗದರ್ಶಿಗಳು ಹುಲ್ಲು ಬಗಿಯುತ್ತ, ಅಡ್ಡಗಟ್ಟುವ ಪೊದರುಗೈಗಳನ್ನು ಸವರುತ್ತ ಆದಷ್ಟು ನಮ್ಮ ನಡೆಯನ್ನು ಹಸನು ಮಾಡಿಕೊಡುತ್ತಿದ್ದರು. ಆದರೆ ವನ್ಯ ಪರಿಸರಕ್ಕೆ ತಕ್ಕಂತೆ ನಾವೂ ಜಾಗೃತರಾಗಿ ಸುತ್ತಲೂ ಕುತೂಹಲದೊಡನೆ ಎಚ್ಚರಿಕೆಯ ದೃಷ್ಟಿ ಬೀರುತ್ತ ಸಾಗಿದೆವು. ಟೈಗರ್ ಸಾಲಿನ ಹಿಂದೊಮ್ಮೆ ಮುಂದೊಮ್ಮೆ, ಇಲ್ಲಿ ನನ್ನ ಕಾಲಿನ ಸಂದಿನಲ್ಲಿ ನುಸಿದು ಅಲ್ಲಿ ನರೇಶನ ಶಿಳ್ಳೆಗೆ ಕುಣಿಕುಣಿದು ಮುಂದುವರಿದಿತ್ತು. ಮಂಗ (ಮಾರ್ಗದರ್ಶಿಗಳ ಭಾಷೆಯಲ್ಲಿ ಕೊರುಂಗು), ತೋಳ್ದಪ್ಪದ ಹಸಿರು ಹಾವು ಕಂಡದ್ದಾಯ್ತು, ಮುಂದೇನು, ಮುಂದೇನು?

ಬೆಟ್ಟದ ಏಣುಗಳನ್ನು ಓರೆಯಲ್ಲಿ ದಾಟುತ್ತಾ ಅಂದರೆ ಬಲಬದಿಗೆ ಸರಿಯುತ್ತಾ ನಡೆದವರಿಗೆ ಅಡ್ಡ ಸಿಕ್ಕಿತೊಂದು ಝರಿ – ಬೂದಿಪರೆಹಳ್ಳ. ತನ್ನ ಹಲವು ಶತಮಾನಗಳ ಸಾಹಸದಲ್ಲಿ ಅದು ಆಳವಾದ ಕೊರಕಲನ್ನೇ ಸಾಧಿಸಿತ್ತು. ಮೇಲಿನ ಪೊದೆಗಳಿಂದ ಸೋಸಲ್ಪಟ್ಟು, ಬೇರು ಬಂಡೆಗಳ ತಾಕಲಾಟದಲ್ಲಿ ನೊರೆಯುಕ್ಕಿಸಿ ‘ಸಾಹಸಿಗಳಷ್ಟೇ ದಾಟಬಹುದು’ ಎಂಬ ಸವಾಲಿಕ್ಕಿ ಕೆಳಗಿನ ಕಣಿವೆಯತ್ತ ಮರೆಯಾಗುತ್ತಿತ್ತು. ಹಿಂದೆ ಯಾರೋ  ಒಂದೆರಡು ಸಣ್ಣ ಬಂಡೆಗುಂಡುಗಳನ್ನು ಆಯಕಟ್ಟಿನ ಜಾಗದಲ್ಲಿ ಉರುಳಿಸಿ ಕಷ್ಟಸಾಧ್ಯ ಸೇತುವನ್ನೇನೋ ಮಾಡಿದ್ದರು. ಆದರೆ ತೊರೆ ಅದನ್ನೂ ಆಗಿಂದಾಗ್ಗೆ ತೊಯ್ಯಿಸಿ, ಅಲ್ಲಿ ಹಾವಸೆ ಬೆಳೆದು ಬೆದರಿಸುತ್ತಿತ್ತು. ಕೊರಕಲಿಗಿಳಿಯುವಲ್ಲೂ ಕರಿಮಣ್ಣು ಕುಸಿಯುತ್ತಿತ್ತು, ಜಾರುತ್ತಿತ್ತು. ಕೋಲೂರಿ, ಕೈ ಕೈ ಮಿಲಾಯಿಸಿ, ಬಂಡೆಯಿಂದ ಬಂಡೆಗೆ ಹುಶಾರಿನಿಂದ ಹಾರಿ ಎಲ್ಲ ಅತ್ತ ದಾಟಿದೆವೆನ್ನುವಾಗ ಹಿಂದಿನಿಂದ ಕುಂಯ್ ಕುಂಯಿ. ಅತಿಥಿ ಟೈಗರ್ ನೀರಿನಬ್ಬರಕ್ಕೆ ಬೆದರಿ ಕೊರಕಲಿನಾಚೆ ಥರಗುಟ್ಟುತ್ತ ನಿಂತಿತ್ತು! ಮತ್ತೆ ನಮ್ಮ ಮಾರ್ಗದರ್ಶಿ – ಸುಬ್ಬಯ್ಯನ್, ಹೋಗಿ ಸುಲಭವಾಗಿ ಸಿಕ್ಕದ ನಾಯಿಯನ್ನು ಬೆರೆಸಿ ಹಿಡಿದು, ಎತ್ತಿಕೊಂಡು ಈಚೆ ದಡ ಕಾಣಿಸಿದ.

ಏರಿಕೆ ವಾರೆಯಲ್ಲೂ ತೀವ್ರವಾಗಿತ್ತು. ಸವಕಲು ಕಾಲುದಾರಿಗಳೇನೂ ಇರಲಿಲ್ಲ. ಅಲ್ಲಲ್ಲಿ ಹತ್ತಿಯೇ ಮುಂದುವರಿಯಬೇಕಾದ ಭಾರೀ ಬಂಡೆ ಗುಂಡುಗಳು. ಊರೆಗೋಲಾಗಿ ಒಯ್ದಿದ್ದ ದೊಣ್ಣೆಗಳಂತೂ ವೃಥಾ ಭಾರಗಳು. ಸೂರ್ಯ ಮತ್ತೆ ಮರೆಯಾಗಿ ಸುರಿಯುತ್ತಿದ್ದ ಮಂಜೋ ಮುತ್ತುತ್ತಿದ್ದ ಮೋಡಗಳ ಪ್ರಭಾವದಲ್ಲಿ ಕಾಲಿಟ್ಟ ನೆಲ, ಆಧಾರಕ್ಕೆ ಜಗ್ಗಿದ ಹುಲ್ಲು ಎಲ್ಲವೂ ಜಾರುತ್ತಿತ್ತು, ಬೆನ್ನಿನ ಅಸಾಮಾನ್ಯ ಹೊರೆ ತೊನೆದು ಜಗ್ಗುತ್ತಿತ್ತು. ಒಂದೆಡೆ, ಕಾಡು ಪೂರ್ಣ ಹರಿದಲ್ಲಿ ಬಲು ದೀರ್ಘ ಮತ್ತು ಹೆಚ್ಚು ಕಡಿದಾದ ಬಂಡೆಯ ಹಾಸಿನ ಸವಾಲು. ನಮ್ಮಲ್ಲಿನ ರೋಪ್‌ಗಳು ಜಾಗೃತವಾದವು. ಹೊರೆ ಇಳುಹಿ, ಕೆಲವು ಗಟ್ಟಿ ಕುಳಗಳು ಬಂಡೆಯ ಹಾಸಿನುದ್ದಕ್ಕೂ ಆಯಕಟ್ಟಿನ ಜಾಗಗಳಲ್ಲಿ ಹರಡಿ ನಿಂತೆವು. ಮತ್ತೆ ಹೊರೆಗಳನ್ನು, ಇತರ ಸದಸ್ಯರನ್ನು, ಕೊನೆಯಲ್ಲಿ ಟೈಗರನ್ನೂ ಕೈ ಕೈ ಬದಲಾಯಿಸಿ ಮೇಲೇರಿದೆವು. ಇಲ್ಲಿ, ಅದುವರೆಗೆ ಕಾಣಿಸದಿದ್ದ ಕೊಳ್ಳದಾಳದ ದೃಶ್ಯ ಮುಕ್ತವಾಗಿತ್ತು. ತಪ್ಪಲಿನ ಕಾಡು, ಮಸಣಿಗುಡಿ ಬೆಚ್ಚನೆಯ ಬಿಸಿಲಿನಲ್ಲಿ ಮಿಂದಿದ್ದರೆ ಶಿಖರ ವಲಯ ಮಳೆಯನ್ನೇ ಹೊತ್ತು ನಿಂತಂತಿತ್ತು! ಆ ಎತ್ತರದ ಬೆಟ್ಟದ ಸೀಳೊಂದರಿಂದ ನುಸಿದ ಮೋಡ ಸಂದೋಹ ಹಸೆಗಾರ ಬಿಲ್ಲು ಹೊಡೆದು ಹಿಂಜಿದ ಹತ್ತಿಯಂತೆ ಹರಡುತ್ತಿದ್ದ ದೃಶ್ಯ ಚಿರಸ್ಮರಣೀಯ.

ವಿಸ್ತಾರ ಬಂಡೆ ಹರಹಿನ ಮೇಲಂಚಿನ ಮಟ್ಟಸ ಜಾಗದಲ್ಲಿ ನಿಂತಿದ್ದೆವು. ಸಹಜವಾಗಿ ಆನೆಗಳ ಭಯ ದೂರವಾಗಿ ಮಾತು, ಹಾಸ್ಯ ಧಾರಾಳವಾಗಿತ್ತು. ಆದರೆ ಸ್ವಲ್ಪೇ ಮುಂದೆ ನಮ್ಮ ಅಂದಾಜುಗಳನ್ನು ಹುಸಿಮಾಡುವಂತೆ ಆನೆಯ ಲದ್ದಿ ಗುಪ್ಪೆ ಕಾಣಿಸಿದಾಗ ಉಳಿದದ್ದು ಕೇವಲ ಬೆರಗು. ನಮ್ಮ ದೈನಂದಿನ ಮಾತುಗಳಲ್ಲಿ ಮಹಾಕಾಯರನ್ನೆಲ್ಲಾ ಆನೆಗೆ ಸಮೀಕರಿಸಿ ನಗುವ ನಮ್ಮ ಮಂದಬುದ್ಧಿಗೆ ಆ ಮಂದಚರ್ಮಿ ಮಂದಸ್ಮಿತ ಕೊಟ್ಟಂತಿತ್ತು. ಬೆಟ್ಟದ ತಪ್ಪಲಿನೆಡೆಗೆ ದೃಷ್ಟಿ ಹರಿದಂತೆ ಹುಲ್ಲು ಹಾಸು, ಹಸಿರು ಅರಣ್ಯಗಂಬಳಿಗಳಾಚೆ ನೇರ ತಪ್ಪಲಿನಲ್ಲಿ ಸಿಂಗಾರಂ ಪವರ್ ಹೌಸ್ ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದರ ಓಂಕಾರದಂಥ ಏಕನಾದ ಮಾತ್ರ ಕಣಿವೆಯುದ್ದಕ್ಕೂ ಅನುರಣಿಸುತ್ತಿತ್ತು. ಅಲ್ಲಿ ತಯಾರಾದ ಶಕ್ತಿ ಸಾಗಣೆಯ ಭಾರೀ ಕಂಬ, ತಂತಿಗಳ ಸರಣಿ ಮಸಣಿಗುಡಿ ದಾಟಿ ದಿಗಂತದಲ್ಲಿ ಲೀನವಾಗಿತ್ತು. ಅದು ಬಳಸಿಬಿಟ್ಟ (ಚಪ್ಪೆ!) ನೀರು ಕಾಲುವೆಯಲ್ಲಿ ಕಾಡಲೆಯುತ್ತಿದ್ದದ್ದು ಒಂದು ಕಲಾತ್ಮಕ ರೇಖೆ.

ಗಂಟೆ ಮೂರಾದರೂ ಶಿಖರ ಇನ್ನೂ ಅಗೋಚರ ಎತ್ತರಗಳಲ್ಲೇ ಇತ್ತು. ಮಾರ್ಗದರ್ಶಿಗಳ ಮುಖ್ಯಸ್ಥ ರಾಜು ಹೊರಡುವಾಗ ಹಾಕಿದ ಅಂದಾಜು ಸರಿಯಾಗಿದ್ದರೆ ನಾವಾಗಲೇ ಶಿಖರ ಸೇರಿ ಒಂದೂವರೆ ಗಂಟೆಯೇ ಕಳೆದಿರುತ್ತಿತ್ತು! ಊಟ ವಿಶ್ರಾಂತಿಗಳೇನಿದ್ದರೂ ಅಲ್ಲೇ ಎಂದುಕೊಂಡಿದ್ದ ಛಲವಂತರ ಕಾಲುಗಳು ಎಳೆಯುತ್ತಿತ್ತು. ನೀರಲ್ಲಿ ನೆನೆದ ಶೂಗಳ ಹಿಂಸೆ ತಡೆಯಲಾರದೆ ಕೆಲವರು ಅವನ್ನು ಕಂಠಾಭರಣ ಮಾಡಿಕೊಂಡಿದ್ದರು. ಆಧಾರಕ್ಕೆ ಬಲಿತ ಹುಲ್ಲನ್ನು ಹಿಡಿದು ಹಿಡಿದು ಕೈಯಲ್ಲಿ ಅಸಂಖ್ಯ ಗೀಚು ಗಾಯಗಳ ಉರಿ. ಚಪಲಕ್ಕೆ ಚಪ್ಪರಿಸಿದ ಚಾಕಲೇಟಿನಂತ ಚಿಲ್ಲರೆಗಳು ಆಕರ್ಷಣೆ ಕಳೆದುಕೊಂಡಿದ್ದವು. ವಾತಾವರಣದಲ್ಲಿ ಶೀತವಿದ್ದರೇನು ತೀವ್ರ ದೈಹಿಕ ಶ್ರಮದಲ್ಲಿ ದೇಹದ ದ್ರವಪದಾರ್ಥಗಳು ಕಳೆದು ಆರೋಗ್ಯದ ಸಮಸ್ಯೆಯಾಗುವುದು ನಮಗೆ ತಿಳಿದೇ ಇತ್ತು. ವಾಟರ್ ಬಾಟಲುಗಳಲ್ಲಿ ಹೊತ್ತ ನೀರು ಸಾಲದಾಗುತ್ತ ಬಂತು. ಅಕ್ಕಿ ಬೇಳೆಗಳ ಡಬ್ಬಿ ಹೊರುವವರಿಗೆ ಹೆಣಭಾರ. ಪಾತ್ರೆ ಪರಡಿಗಳ ಡಬ್ಬಿ ಒಬ್ಬನಿಂದಾಗದು, ಇಬ್ಬರಿಗೆ ಕಡಿಮೆ. ಸ್ಟೌಗಳ ಡಬ್ಬಿ ನೆಟ್ಟಗಿರಬೇಕು, ತರಕಾರಿಯ ಚೀಲ ಜಜ್ಜಿ ಹೋಗಬಾರದು. ಉಳಿದವರಿಗೂ ಬೆನ್ನುಚೀಲಗಳೇನೂ ಹಗುರದ ಮಾತಾಗಿರಲಿಲ್ಲ. ಸಹಜವಾಗಿ ಸಾಲಿನಲ್ಲಿ ಹಿಂದು ಮುಂದಿನವರ ಅಂತರ ಹೆಚ್ಚುವುದು, ಅಸಹನೆ  ಗೊಣಗಾಟ ಬೆಳೆಯುವ ಮುನ್ನ ಸುಮಾರು ನಾಲ್ಕು ಗಂಟೆಯ ಅಂದಾಜಿಗೆ ತಂಗುದಾಣದ ಅನ್ವೇಷಣೆಗಿಳಿದೆವು.

ಸುಮಾರು ಅರುವತ್ತಡಿ ಅಂತರದಲ್ಲೆ ಸ್ವಲ್ಪ ಕೆಳಗಿಳಿದು ಒಂದು ಬಂಡೆಯ ಮುಂಚಾಚಿಕೆಯನ್ನು ರಾಜು ಆಯ್ಕೆ ಮಾಡಿದ. ನಮ್ಮ ಅಸಾಧಾರಣ ಹೊರೆಗಳೊಡನೆ ಇಳಿಯುವುದಂತೂ ಹೊಸದೇ ಸಾಹಸವಾಗಿತ್ತು! ಅಕ್ಷರಶಃ ಹರಿದುಕೊಂಡು ಹೋಗಿ, ಶಿಬಿರ ಸ್ಥಾನವನ್ನು ಸೇರಿ ಮೈಚಾಚಿದೆವು. ಮಧ್ಯಾಹ್ನದ ಊಟ + ಸಾಯಂಕಾಲದ ತಿಂಡಿ = ಐದು ಪೂರಿ ಪಲ್ಯ. ಆದರೆ ನೀರಿಲ್ಲದೆ ಅದು ಗಂಟಲಿಳಿಯುವುದಾದರೂ ಹೇಗೆ? ಮತ್ತೆ ಮಂಕಾಗಿಯೇ ಇದ್ದ ಹಗಲೂ ಕತ್ತಲ ಬಿಡಾರಕ್ಕೆ ಅಲ್ಲಿ ಬೇಗನೆ ಜಾರುವ ಸೂಚನೆಗಳಿದ್ದುದರಿಂದ ಒಟ್ಟಾರೆ ಶಿಬಿರ ಕಾರ್ಯಗಳಿಗೆ ನೀರ ಮೂಲ ಬೇಗನೇ ಹಿಡಿಯಲೇಬೇಕಿತ್ತು. ಮಾರ್ಗದರ್ಶಿ ರಾಯನ್ ಮತ್ತು ಜಾವೀದ್ ಹುಲ್ಲು ಕಂಟಿಗಳನ್ನು ನಿವಾರಿಸುತ್ತ ಏಣುಗಳಾಚೆ ಜಲಶೋಧಕ್ಕೆ ಮುಂದಾದರು. ಉಳಿದವರು ಬಂಡೆಮರೆಯನ್ನು ಒಂದು ರಾತ್ರಿಗಾದರೂ ವಾಸಯೋಗ್ಯ ಮಾಡುವ ತರಾತುರಿಗೆ ಬಿದ್ದರು.

ಮಸಣಿಗುಡಿಯ ನಿದ್ದೆಗೇಡಿಗಳು, ದಿನಪೂರ್ತಿಯ ಆರೋಹಿಗಳು ಶಿಬಿರ ಹೂಡಿದ ಪರಿ, ರಾತ್ರಿ ಕಳೆದ ವಿವರಗಳು ಮತ್ತೂ ಶಿಖರ ಸಾಧಿಸಿದ ವೈಭವಗಳೊಡನೆ ಮುಂದಿನ ವಾರ ಸಿಗುತ್ತೇನೆ. ಹಿಂದಿನ ಕಥಾನಕದ ಪ್ರತಿಕ್ರಿಯೆ ಬಾಕೀದಾರರು ಇದರ ಲೆಕ್ಕವನ್ನೂ ಸೇರಿಸಿ ಅಕ್ಷರಸ್ಥರಾಗುತ್ತೀರಿ ಎಂದು ನಂಬುತ್ತೇನೆ.

ನಿರಾಶ್ರಿತರ ಶಿಬಿರ
(ತಾತಾರ್-೨)

[ವಿ.ಸೂ: ಮುಂದೆ ಹಳಗಾಲದ ನಿರೂಪಣೆಯ ಉದ್ದಕ್ಕೆ ಈ ತೆರನ [ ] ದೊಡ್ಡ ಕಂಸದೊಳಗೆ ಈ ಕಾಲದ ವಗ್ಗರಣೆ ಅಥವಾ ಟಿಪ್ಪಣಿ ಎನ್ನಿ, ಹಾಕುತ್ತಿರುತ್ತೇನೆ]

ಡಿಸೆಂಬರ್ ೧೫, ೧೯೭೧ರ ಬೆಳಿಗ್ಗೆ ನಾನು ನಾಲ್ಕು ಗಂಟೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಅವಸರದಲ್ಲಿ ತಿಂಡಿ ಕುಡಿದು ಕಾಫಿ ತಿಂದೆ. ಪ್ಯಾಂಟು ಶರಟುಗಳೊಳಗೆ ತೂರಿದ್ದಲ್ಲದೆ ಊಟಿಯ ಚಳಿಯ ನಿರೀಕ್ಷೆಯಲ್ಲಿ ತಂದೆಯ ಹಳೆಯ ಕೋಟೊಂದನ್ನೂ ಏರಿಸಿಕೊಂಡೆ. [ಆ ಪ್ರಾಯದಲ್ಲಿ ‘ಕೊಡಗಿನವನಾದ’ ನಾನು, ಸ್ವೆಟ್ಟರ್ ಬಳಸುವುದು ಅವಮಾನಕಾರಿ ಎಂದೇ ಇತ್ತು, ನನ್ನಲ್ಲಿರಲೂ ಇಲ್ಲ!) ಮಧ್ಯಾಹ್ನದ ಊಟಕ್ಕೆ ಮಿತ್ರರೊಡನೆ ಹಂಚಿ ತಿನ್ನಲು ಕಟ್ಟಿಟ್ಟ ರೊಟ್ಟಿಗಂಟನ್ನು ದಿನಮುಂಚಿತವಾಗಿ ಇತರ ಸಾಮಾನುಗಳನ್ನು ತುಂಬಿ ಸಜ್ಜುಗೊಂಡಿದ್ದ ಸುಲಭೋಪಾಯದ ಬೆನ್ನುಚೀಲದಲ್ಲಿ ಇರುಕಿಸಿ, ಅದರ ಬಾಯಿ ಬಿಗಿದು ಬೆನ್ನಿಗೇರಿಸಿದೆ. ಬಲಗೈಯಲ್ಲಿ ಗಾಂಧೀ ಬಂಟ - ಊರುಗೋಲು. ಕಾಲಿಗೆ ಬೇಟೆಗಾರನ ಪಾದರಕ್ಷೆ ಅಥವಾ ಹಂಟರ್ ಶೂ. ನನ್ನಲ್ಲಿ ಅಷ್ಟಾಗಿ ಪ್ರಾಮುಖ್ಯ ಸಲ್ಲಬೇಕಿಲ್ಲದ ತಲೆಗೆ ಕಾಡುಟೊಪ್ಪಿ ಅಥವಾ ಜಂಗಲ್ ಹ್ಯಾಟ್.

[ಬೆನ್ನುಚೀಲದ ಬಗ್ಗೆ: ಈಗ ಪ್ರತಿ ವಿದ್ಯಾರ್ಥಿಯ ಬಳಿಯೂ ಕಾಣುವ ಸಾವಿರಾರು ನಮೂನೆಯ, ವರ್ಣದ, ಗಾತ್ರದ ಬೆನ್ನುಚೀಲಗಳು ಆ ಕಾಲದಲ್ಲಿ ಸಾಮಾನ್ಯ ಮಾರುಕಟ್ಟೆಗೆ ಪರಿಚಯವೇ ಇರಲಿಲ್ಲ. ಎನ್.ಸಿ.ಸಿಯಿಂದ ಎರವಲು ಪಡೆದ ಬ್ಯಾಕ್-ಪ್ಯಾಕ್ ಮೂರು ದಿನದ ಆವಶ್ಯಕತೆಗಳನ್ನು ತುಂಬಿಕೊಳ್ಳಲು ತುಂಬಾ ಸಣ್ಣದಾಗುತ್ತಿತ್ತು. ಆದರೆ ಎನ್.ಸಿ.ಸಿ ಯಲ್ಲಿರುತ್ತಿದ್ದ ಸೈನಿಕರ ಖಾಸಗಿ ಸೊತ್ತು ‘ಪ್ಯಾಕ್-೦-೮’ ನ ವೈಭವವನ್ನು ನಮ್ಮ ತಂಡದಲ್ಲಿ ಅನೇಕರು ಹೊಂದಿದ್ದರು. ಅದೂ ದಕ್ಕದ ನಾನು ಸಣ್ಣ ಸಕ್ಕರೆ ಗೋಣಿಯೊಂದನ್ನು ಕೈಯಾರೆ ಕತ್ತರಿಸಿ, ದಪ್ಪ ಸೂಜಿಯಲ್ಲಿ ಟ್ವೈನ್ ದಾರದಲ್ಲಿ ಹೊಲಿದು (ಎರಡು ಸೂಜಿ ಮುರಿದು, ಅಮ್ಮನಿಂದ ಬೈಸಿಕೊಂಡದ್ದು ಇಲ್ಲಿ ಹೇಳುವುದಿಲ್ಲ), ಪೇಟೆಯಲ್ಲಿ ದೊರೆಯುತ್ತಿದ್ದ ದಟ್ಟಿ (= ಬಹುಶಃ ಗೋಣಿ ನಾರಿನಿಂದ ಸುಮಾರು ಮೂರು ಬೆರಳಗಲಕ್ಕೆ ದಪ್ಪವಾಗಿ ಮತ್ತು ಬಿಗುವಾಗಿ ಹೆಣೆದು ಮಾಡಿದ ಉದ್ದದ ಬೆಲ್ಟು ಎನ್ನಿ) ಹೊಂದಿಸಿ ಮಾಡಿಕೊಂಡ ಬೆನ್ನುಚೀಲದಿಂದ ಉಳಿದವರ ಅಸೂಯಾದೃಷ್ಟಿಗೂ ಗುರಿಯಾಗಿದ್ದೆ ಎಂದರೆ ಇಂದು ನೀವೆಲ್ಲಾ ನಗುತ್ತೀರೋ ಏನೋ!]

ಐದೂಕಾಲಕ್ಕೆ ಮನೆಬಿಟ್ಟೆ. ಹತ್ತಿರದಲ್ಲೇ ಇದ್ದ ಗೆಳೆಯ ಗಿರೀಶನ ಮನೆ ಮುಂದೊಂದು ಕೂಗು. ಅವನದೇ ರೀತಿಯಲ್ಲಿ ಸಜ್ಜುಗೊಂಡ ಗಿರೀಶ ಹೆಚ್ಚಿನ ದೊಣ್ಣೆಗಳ ಕಟ್ಟೊಂದರ ಸಹಿತ ಹೊರಬಂದ. ಎಲ್ಲ ಆರೋಹಿಗಳ ಅನುಕೂಲಕ್ಕಾಗಿ ಇದನ್ನು ಸಂಗ್ರಹಿಸಿ ತರಲೊಪ್ಪಿದ್ದ ಗಿರೀಶ್ ಮೂರು ನಾಲ್ಕೆಡೆಗಳಲ್ಲಿ ಆಗ ಬಾ, ಈಗ ಬಾ, ಹೋಗಿ ಬಾ ಎನ್ನಿಸಿಕೊಂಡು, ಹೊತ್ತ ಹೊಣೆಯ ಮರ್ಯಾದೆಗಾಗಿ ಕಷ್ಟಪಟ್ಟುದರ ಫಲವಾಗಿ ಆ ಹತ್ತೇ ದೊಣ್ಣೆಗಳ ಕಟ್ಟು ಹಿಂದಿನ ರಾತ್ರಿ ಸಿಕ್ಕಿತ್ತಂತೆ. ಅವನ್ನು ಗಿರೀಶನ ಗೆಳೆಯನೊಬ್ಬ ಸೈಕಲ್ ಮೇಲೇರಿಸಿ, ನಮ್ಮೊಡನೆ ನಡೆದುಕೊಂಡು ಬಸ್ ನಿಲ್ದಾಣಕ್ಕೆ ತಂದುಕೊಟ್ಟ.

[ಆ ಕಾಲದಲ್ಲಿ ಅಕಾಲದಲ್ಲೂ (ಉಳಿದ ಕಾಲದಲ್ಲಿ ಸಿಟಿ ಬಸ್ಸು ಮಾತ್ರ ನಮ್ಮದು) ನಾವು ಆಟೋ ರಿಕ್ಷಾ, ಮೈಸೂರಿನ ಬಹುಜನಪ್ರಿಯ ವಾಹನ ಟಾಂಗಾ, ಟ್ಯಾಕ್ಸಿಗಳೆಲ್ಲಾ ಬಳಸಿದವರಲ್ಲ. ಒಂದೆರಡು ಬಾರಿ ನನ್ನಮ್ಮನಿಗೆ ಊರಿಗೆ ಹೋಗಲು ದಿನದ ಮೊದಲ ಬಸ್ಸು ಹಿಡಿಯುವ ಪ್ರಸಂಗ ಬಂದಾಗ ತಂದೆಯೋ ನಾನೋ ಸೈಕಲ್ಲಿನಲ್ಲಿ ಡಬ್ಬಲ್ ರೈಡ್ ಮಾಡಿಕೊಂಡೋಗಿ ಬಿಟ್ಟದ್ದು ಅಮ್ಮ ಜ್ಞಾಪಿಸಿಕೊಳ್ಳುತ್ತಿರುತ್ತಾಳೆ. ಇಂದು ನನ್ನಲ್ಲಿ ಬೈಕು ಕಾರುಗಳಿದ್ದರೂ ಇಲ್ಲದವರು ಹೊಸ್ತಿಲು ದಾಟುವಾಗಲೇ “ಆಟೋ” ಕರೆಕೊಡುವುದು ನೋಡುವಾಗ ‘ಅವರ ಆರ್ಥಿಕತೆ ತಡೆದೀತೇ’ ಎಂದು ನನಗೆ ಆತಂಕವಾಗುತ್ತದೆ]

ಸಾಹಸ ಯಾತ್ರೆಯ ಸದಸ್ಯರು, ಸಾಮಾನು ಸರಂಜಾಮುಗಳೆಲ್ಲಾ ಆರು ಗಂಟೆಯ ಬಸ್ಸಿನಂದಾಜಿಗೆ ಸರಿಯಾಗಿಯೇ ನಿಲ್ದಾಣದಲ್ಲಿ ಸೇರಿದ್ದೆವು. ನಮ್ಮ ಮುಂದಾಲೋಚನೆ ಹಿಗ್ಗಿತ್ತು – ಗುಂಡ್ಲುಪೇಟೆ, ಗುಡಲೂರು ಬಸ್ಸು ಹೊರಟದ್ದು ಒಂದು ಗಂಟೆ ತಡ. ಕೆಲವು ಸದಸ್ಯರ ಕುಟುಂಬದವರು, ಗೆಳೆಯರು ಅಷ್ಟು ಬೇಗನೇ ಬಂದು, ಕಾದು ಬೀಳ್ಕೊಡುತ್ತಿದ್ದಂತೆ ಗಡಿಯಾರ ಗೋಪುರ ಬಾರಿಸಿತು ಏಳು. ಮೈಸೂರು ಉದಕಮಂಡಲ ದಾರಿಯ ಮೇಲೆ ಪ್ರಯಾಣಾರಂಭ. ನಮ್ಮ ದೃಷ್ಟಿಯೆಲ್ಲ ಎಡಕ್ಕೆ ಕೀಲಿಸಿತ್ತು. ಸ್ವಲ್ಪದರಲ್ಲೇ ಕಣ್ಣು ತುಂಬಿದಳು ಬೆಟ್ಟ ಚಾಮುಂಡಿ, ಮೈಸೂರಿನ ಪರ್ವತಾರೋಹಿಗಳ ತಾಯಿ. ತನ್ನ ಮಡಿಲಲ್ಲಿ ಬಿಸಿಲು ಮಳೆಯೆನ್ನದೆ ಹಾರಾಡಿದ ಮಕ್ಕಳ ಮುನ್ನಡೆಯನ್ನು ಕಂಡು ಹೆಮ್ಮೆಯಿಂದ ತಲೆ ಎತ್ತಿ ನಿಂತು, ಕಲ್ಪನೆಯ ಕೈಬೀಸುತ್ತಾ ಹಿನ್ನೆಲೆಗೆ ಸರಿಯುತ್ತಿದ್ದಂತೆ ಮಂಜಿನ ಆನಂದಾಶ್ರುಗಳನ್ನು ಉದುರಿಸಿದಳು. ಭೋರ್ಗರೆವ ಬಸ್ಸು ನಿರ್ಲಿಪ್ತ.

ರಮೇಶ ತೆಪ್ಪಕಾಡಿಗೆ ಇಪ್ಪತ್ತು ಟಿಕೆಟ್ ಕೊಂಡ. ಹಾಗೇ ಗೋವಿಂದರಾಜ್ ರಮೇಶರೊಳಗೆ ಏನೋ ಸಮಾಲೋಚನೆ, ಹಣದ ವಿನಿಮಯವೆಲ್ಲ ನಡೆಯಿತು. ಸ್ವಲ್ಪ ಹೊತ್ತಿನಲ್ಲಿ ನಮ್ಮೊಳಗಿನ ಪೂರ್ವಸಿದ್ಧತೆಗಳ ಬಿಗಿತಗಳೆಲ್ಲ ಸಡಿಲಿದವು. ಬಳಿಕ ಎಲ್ಲರೂ ಕದನ ಕುತೂಹಲಿಗಳೇ. ಮಾತು ಲೋಕಾಭಿರಾಮವಾಗಿ [ಬಾಂಗ್ಲಾ ವಿಮೋಚನೆಯ ಭಾರೀ ಯುದ್ಧ ನಡೆಯುತ್ತಿದ್ದ ಕಾಲ] ಯುದ್ಧವಾರ್ತೆಯನ್ನು ಆಡಿಸಿತು, ಪರ್ವತಾರೋಹಣಕ್ಕೆ ಸ್ವಲ್ಪೇ ಹೋಗಿ ಬಂತು, ಹಾಡು ಹಾಸ್ಯಗಳಿಗೆ ಧಾರಾಳ ಇಳಿಯಿತು. ಈ ಮಧ್ಯೆ ದಾಟಿದ ಹಳ್ಳಿ, ಊರುಗಳತ್ತ ಯಾರಿಗೂ ಗಮನವೇ ಇಲ್ಲ.  ಬೇಗೂರು ದಾಟುತ್ತಿದ್ದಂತೆ ದಿಗಂತದಲ್ಲಿ ಗೋಚರಿಸಿತು ಪರ್ವತಶ್ರೇಣಿ. ಅವುಗಳ ಮುನ್ನೆಲೆಯಲ್ಲಿ ಕಲ್ಪನೆಯ ತಾತಾರ್ ತಲೆಯೆತ್ತಿ ನಿಂತಿತ್ತು. ತೇನ್‌ಸಿಂಗನ ಚೊಮೊಲುಂಗ್ಮಾ ಗರಿಕೆದರಿ ಮೂಡಿತ್ತು. ಮತ್ತೆ ದಾರಿಯುದ್ದಕ್ಕೂ ಅಂಥದ್ದೇ ಕಲ್ಪನೆ, ಸುಂದರ ಕನಸುಗಳು ಹಾಸಿದ್ದಂತೆ ಎಂಟೂಕಾಲಕ್ಕೆ ಗುಂಡ್ಲುಪೇಟೆ.

ಎಲ್ಲರೂ ಕಾಫಿ ಕುಡಿಯಲೆಂದು ಬಸ್ಸಿಳಿದು ಹೋಟೆಲಿಗೆ ಹೋದರೂ ರಮೇಶ ಬಸ್ಸಿನಲ್ಲೇ ಕಾವಲು ಕೂತಿದ್ದ. ಅವನಿಗೆ ಅಲ್ಲೆ ಕಾಫಿ ಸರಬರಾಜು ಆಯ್ತು. ಬಸ್ಸು ಹೊರಡಲು ಇನ್ನೂ ಕಾಲು ಗಂಟೆ ಸಮಯ ಉಂಟೆಂದಾಗ ಗ್ರೂಪ್ ಫೋಟೋ ಬೇಡಿಕೆ ಬಂತು. ರಮೇಶ ಫೋಟೋಗ್ರಾಫರ್ ಆದ್ದರಿಂದ ಬದಲಿ ಕಾವಲಿಗೆ ರುದ್ರಪ್ಪನನ್ನು ಕೂರಿಸಿ ಬಂದ. ಎಲ್ಲ ಬಸ್ಸಿನ ಬಲಪಾರ್ಶ್ವದಲ್ಲಿ ಸಜ್ಜಾಗುತ್ತಿದ್ದಂತೆ, ವ್ಯವಸ್ಥೆ ಗೊತ್ತಿಲ್ಲದ ನಾನು ಒಂಟಿ ಕುಳಿತ ರುದ್ರಪ್ಪನನ್ನು ಕರೆದೆ. ಆತ ಇಳಿದು ಬಂದು ಸೇರಿಕೊಂಡ. ತಂಡ ಸೂರ್ಯಾಭಿಮುಖವಾಗಿ ನಿಂತು, ವಿವಿಧ ಭಂಗಿಗಳಲ್ಲಿ, ಕ್ಯಾಮರಾಗಳಲ್ಲಿ ಫೋಟೋಗಳಾದವು. ತಿರುಗಿ ಬಸ್ಸೇರಿದೆವು. ಕಾಲ ಹಳಸಿತ್ತು, ತಂಡದ ಪರ್ಸು ಯಾರಿಗೋ ಸಂದಿತ್ತು! ಎಲ್ಲರೂ ಕೂತ, ನಿಂತ ಎಡೆಗಳನ್ನು, ಹೋಟೆಲನ್ನೂ ಶೋಧಿಸಿದೆವು; ಪ್ರಯತ್ನ ನಿಷ್ಫಲ. ಬಸ್ಸು ಪೊಲಿಸ್ ಠಾಣೆಗೆ ಹೋಯ್ತು, ಸಂಶಯಿತನೊಬ್ಬನ ಬಂಧನವೂ ಆಯ್ತು – ದುಡ್ಡಂತೂ ಸಿಕ್ಕಲಿಲ್ಲ. ಹೋದ ಹಣಕ್ಕಿಂತಲೂ ಇರುವ ಸದಸ್ಯರು ದೊಡ್ಡವರಲ್ಲವೇ? ರುದ್ರಪ್ಪ, ರಮೇಶರನ್ನು ಸಮಾಧಾನಪಡಿಸಿದೆವು. ಹೀಗೆ ಒಂದೂಕಾಲು ಗಂಟೆ ಗುಂಡ್ಲುಪೇಟೆಯಲ್ಲಿ ತಳುವಿ, ಮುಂದುವರೆಯಿತು ನಮ್ಮ ತಾತಾರ್ ಅಭಿಯಾನ. ಮನದಲ್ಲಿ ಕವಿದ ಮೋಡ ಚದುರುವಂತೆ ಮಿತ್ರರಿಂದ ಹಾಡು ಹಾಸ್ಯಗಳು ನಡೆದವು. ದಾರಿ ಬದಿಯ ಬಂಡಿಪುರದ ಆಂಜನೇಯ ಸ್ವಾಮಿಗೆ ಮೂಕ ಪ್ರಾರ್ಥನೆಯೂ ಸಂದಿತು.

ಈ ವಲಯದ ವನ್ಯಸಂರಕ್ಷಣಾ ಕಾನನಕ್ಕೆ ಕರ್ನಾಟಕದ [ಆಗ ಇನ್ನೂ ಮೈಸೂರು ರಾಜ್ಯ] ಒಳಗೆ ಬಂಡಿಪುರ ಸೇರಿದರೆ, ರಾಜಕೀಯ ಗಡಿಯಾಚೆ, ಅಂದರೆ ತಮಿಳುನಾಡಿನಲ್ಲಿ ಮುದುಮಲೈ ಅಂಟಿಕೊಳ್ಳುತ್ತದೆ, ಅಷ್ಟೆ. ಹೀಗೆ ಗಡಿದಾಟಿದ ಸಾಹಸ ಯಾತ್ರೆ ಮತ್ತೆ ಎಂಟೇ ಮಿನಿಟಿಗೆ ಬಸ್ಸಿಳಿಯಿತು. ಅರಣ್ಯದ ನಡುವೆ ದಾರಿ ಕವಲಾದ್ದರಿಂದಲೇ ಹುಟ್ಟಿಕೊಂಡ, ಏನೂ ಅಲ್ಲದ ಹಳ್ಳಿ, ತೆಪ್ಪಕಾಡು. ದಾರಿಯ ಎಡಬದಿಗೆ ಸ್ವಲ್ಪ ಒಳಗೆ ವನ್ಯ ವಿಶ್ರಾಂತಿಧಾಮ. ಬಲಬದಿಗೆ ಚೆಕ್ ಪೋಸ್ಟಿನ ಗುಡಿಸಲು, ಸಣ್ಣ ಪೊಲಿಸ್ ಠಾಣೆ, ಒಂದೆರಡು ಗೂಡಂಗಡಿ, ಚಾ ದುಕಾನು. ಬಲಕ್ಕೆ ತಿರುಗುತ್ತ ಹೋಗುವ ಈ ದಾರಿ ಮುಂದುವರಿದು ಗುಡಲೂರಿಗಾಗಿ ಊಟಿ ಸೇರುವ ಹೆದ್ದಾರಿ. ನೇರ ಸಾಗುವ ಸಪುರದಾರಿ, ಅನುಕೂಲಕ್ಕೆ ಬೇಕಾದರೆ ಎಡ ಕವಲು ದಾರಿ ಎನ್ನಿ,  ಹೊಳೆಯೊಂದನ್ನು ಇಕ್ಕಟ್ಟಿನ ಸೇತುವೆಯಲ್ಲಿ ದಾಟಿ, ಹೆಚ್ಚು ದಟ್ಟ ಕಾಡಿನ ನಡುವಿನಿಂದ ಹಾಯ್ದು ತಲಪುವುದು ಊಟಿಯನ್ನೇ. ಆದರೆ ಹೆಚ್ಚಿನ ಮಂದಿ ಇದನ್ನು ಅಲ್ಲೇ ಹತ್ತೆಂಟು ಕಿಮೀ ಅಂತರದೊಳಗಿನ ಹಳ್ಳಿಗಳ ಸಂಪರ್ಕಕ್ಕಷ್ಟೇ ಬಳಸುತ್ತಾರಂತೆ. ಮುಂದೆ ಇದರದು ಬಲು ಏರಿನ, ಅಪಾಯಕಾರೀ ಹಿಮ್ಮುರಿ ತಿರುವಿನ ಓಟವಂತೆ. ಹೆದ್ದಾರಿಗಿಂತ ಇದು ಕಡಿಮೆ ಅಂತರದಲ್ಲೇ ಊಟಿ ತೋರಿದರೂ ಬಯಸಿ ಬಳಸುವವರು ಅಪರೂಪ. ಅದರ ಮೊದಲ ಮಜಲಲ್ಲೇ (ಘಟ್ಟದ ತಪ್ಪಲಲ್ಲೇ) ದಾರಿಬದಿಯ ಪುಟ್ಟ ಪೇಟೆ ನಮ್ಮ ಮುಂದಿನ ಗುರಿ, ಮಸಣಿಗುಡಿ.

ಮಸಣಿಗುಡಿಗೆ ತೆಪ್ಪಕಾಡು ದಾಟಿ ಬೆಳಗ್ಗೊಂದು ಸಂಜೆಗೊಂದು ಬಸ್ಸು ಮಾತ್ರ ಇತ್ತು. ನಾವು ಬೆಳಗ್ಗಿನ ಸೇವೆಗೆ ತಡವೂ ಸಂಜೆಯದ್ದಕ್ಕೆ ತುಂಬಾ ಬೇಗವೂ ಆದ್ದರಿಂದ ಅನ್ಯ ವಾಹನ ಅನುಕೂಲದ ಅದೃಷ್ಟವನ್ನು ಕಾಯುವುದು ಉಳಿಯಿತು. ಚೆಕ್ ಪೋಸ್ಟಿನ ಬುಡದಿಂದ ನಮ್ಮೆಲ್ಲ ಸಾಮಾನುಗಳನ್ನು ಇಕ್ಕಟ್ಟಿನ ಸೇತುವೆಯ ಅಂಚಿಗೆ ಸಾಗಿಸಿದೆವು. ಸುಜಾತ ಮುಂದಿನ ಕಾರ್ಯಾನುಕೂಲದ ದೃಷ್ಟಿಯಿಂದ ನಮ್ಮನ್ನು ನಾಲ್ಕು ‘ರೋಪು’ಗಳನ್ನಾಗಿ (ಪರ್ವತಾರೋಹಣದಲ್ಲಿ ಪರಸ್ಪರ ರಕ್ಷಣೆಯ ಅನುಕೂಲಕ್ಕೆ ಕನಿಷ್ಠ ಎರಡರಿಂದ ಗರಿಷ್ಠ ಐದಾರು ಆರೋಹಿಗಳನ್ನು ಒಂದೊಂದು ತುಕ್ಕಡಿಯನ್ನಾಗಿಸಿ ‘ರಕ್ಷಣಾ ಹಗ್ಗ’ ಎಂದೇ ಹೆಸರಿಸುತ್ತಾರೆ) ವಿಂಗಡಿಸಿದರು. ನಾನೂ ಸೇರಿದ ಒಂದನೇ ರೋಪಿನವರು ವಾಹನಾನುಕೂಲ ಕಾದು ಹೆಚ್ಚಿನ ಸಾಮಾನು ಮಸಣಿಗುಡಿಗೆ ತಲಪಿಸಬೇಕಿತ್ತು. ಉಳಿದ ಮೂರೂ ರೋಪುಗಳು ಅಚ್ಚ್ಯುತರಾಯರ ನೇತೃತ್ವದಲ್ಲಿ, ಗೋವಿಂದರಾಜರ ಬೆಂಗಾವಲಿನಲ್ಲಿ ತಂತಮ್ಮ ಹೊರೆಗಳೊಡನೆ ಮಸಣಿಗುಡಿಗೆ ನಡೆದರು. ಇಲಾಖೆಗಳಿಗೆ ಸಂಬಂಧಿಸಿದ ವಾಹನಗಳ ಬಗ್ಗೆ ಅರಣ್ಯ, ವಿದ್ಯುತ್, ಪೊಲಿಸ್ ಅಧಿಕಾರಿಗಳನ್ನು ವಿಚಾರಿಸಿದೆವು. ಅಲ್ಲಿದ್ದ ವಿದ್ಯುಜ್ಜೀಪು* ಅನ್ಯ ಕಾರ್ಯನಿಮಿತ್ತ ಉದಕಮಂಡಲಕ್ಕೆ ಹೋಗಲಿದ್ದುದರಿಂದ ನಮಗೊದಗಲಿಲ್ಲ.

[ಗಾಬರಿಯಾಗಬೇಡಿ, ಆ ಕಾಲದಲ್ಲೇ ಕಗ್ಗಾಡಿನಲ್ಲಿ ವಿದ್ಯುತ್ ಚಾಲಿತ ಜೀಪ್ ಎಂದು ಭಾವಿಸಬೇಡಿ, ವಿದ್ಯುತ್ ಇಲಾಖೆಯ ಜೀಪ್ ಎಂದಷ್ಟೇ ಅರ್ಥ. ಉಳಿದಂತೆ ಮಾಮೂಲೀ ಡೀಜೆಲ್ ಕುಡಿದು, ನೂಕಿದಾಗ ಢರಕ್ಕೆಂದು ಹೊರಟು, ಏರಿನಲ್ಲಿ ಗೇರು ಜಾರಿ, ಇಳುಕಲಿನಲ್ಲಿ ಬಿರಿ ಸಡಲಿ, ಡ್ಯಾಶ್ ಬೋರ್ಡ್ ಹತ್ತಿ ಕುಳಿತ Pದೇವಾನುದೇವರ ಬಲದಲ್ಲಿ, ಚಾಲಕ ಕಂ ರಿಪೇರಿಗನ ಮಾಂತ್ರಿಕ ಶಕ್ತಿಯಲ್ಲಿ ಇದುವರೆಗೆ ಸಾಯದ್ದಕ್ಕೆ ಬದುಕಿ/ ನಂಬಿದವರನ್ನು ಬದುಕಿಸಿಟ್ಟಿರುವ ವಾಹನ ಎನ್ನಬಹುದು]

ಉಳಿದವರು ಅಲ್ಲಿಲ್ಲದ ತಮ್ಮ ಇಲಾಖಾ ವಾಹನಗಳ ಕುರಿತು ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಮತ್ತೆ ಆ ಕುಗ್ರಾಮದ ಕನಿಷ್ಠಬಿಲ್ಲೆಗಳಿಗೆ ಕಷ್ಟದಲ್ಲಿ ಸಂಪರ್ಕಸಾಧನೆಯಾಗುತ್ತಿದ್ದ ದೂರವಾಣಿ ನೆಚ್ಚಿ, ಇತರೆಡೆಯಿಂದ ವಾಹನ ತರಿಸುವ ಅಧಿಕಾರ ಇರಲೇ ಇಲ್ಲ. ನಾವು ರಾಶಿ ಬಿದ್ದ ಸಾಮಾನುಗಳ ಒತ್ತಿನಲ್ಲೇ ಕೈಕಾಲು ಚಾಚಿದೆವು.

[ಈಚಿನ ದಿನಗಳಲ್ಲಿ ಅಲ್ಲಿ, ಅಂಥಲ್ಲಿ ನಮ್ಮಂಥವರ ಅವ್ಯವಸ್ಥೆ ನಿರಾಕರಿಸುವಷ್ಟು ಪ್ರವಾಸೋದ್ಯಮ ಬೆಳೆದಿದೆ ಎನ್ನಲು ಹರ್ಷಿಸುತ್ತೇನೆ. ಹುಟ್ಟಿನಿಂದಲೇ ಕಾಲಮಾನದಲ್ಲಿ ಬಲುದೊಡ್ಡ ಹಿಂಭಡ್ತಿ ಪಡೆಯುವ ತಂಗುದಾಣಗಳು, ತೊಂಡಲೆವ ಜಾನುವಾರು ನಾಯಿಗಳು, ನೀರೆಂದೂ ಹರಿಯದ ಮುರುಕು ನಲ್ಲಿಗಳು ಹರಕು ಚರಂಡಿಗಳು, ಹರದಾರಿ ದೂರದಿಂದಲೇ ಮೂಗು ಸತ್ತವನಿಗೂ ತಮ್ಮಿರವನ್ನು ಸಾರುವ ಮೂತ್ರದೊಡ್ದಿಗಳು, ಗಾಳಿಗುದರಿಯನ್ನೇರಿ ವಿಹರಿಸುವ ಪ್ಲ್ಯಾಸ್ಟಿಕ್ ರದ್ದಿಗಳು, ಸತ್ಯಹರಿಶ್ಚಂದ್ರ ಚಿತ್ರದ ಶ್ಮಶಾನ ವೈಭವವನ್ನು ನಾಚಿಸುವ ನಾರುವ ಅರೆಬೆಂದ ಕಸಕುಪ್ಪೆಗಳು   . . . ಓ, ಕ್ಷಮಿಸಿ]

ಶುದ್ಧ ವನ್ಯ ಪರಿಸರದಲ್ಲಿ, ಯಾವುದೇ ತುರ್ತುಗಳಿಲ್ಲದೆ ಬಿದ್ದುಕೊಳ್ಳುವುದೂ ಒಂದು ಸ್ಮರಣೀಯ ಅನುಭವ! ನಮ್ಮಿಂದ ಕೆಳಗೊಂದು ಸಣ್ಣ ತೊರೆ ದಟ್ಟ ಪೊದೆಗಳ ಮುಚ್ಚಿಗೆಯಲ್ಲಿ ಹರಿಯುತ್ತಿತ್ತು. ಆ ಆಳದಿಂದ ಎದ್ದು, ಅಲ್ಲಿ ಪೊದೆಗಳನ್ನು ಹೆಣೆದು ಬದಿಯ ದರೆಗಳ ಮೇಲೂ ಹಬ್ಬಿತ್ತೊಂದು ಬಳ್ಳಿ. ಅದರಲ್ಲಿ ನಿಂಬೆಹಣ್ಣು ಗಾತ್ರದ, ಹಸುರು, ಸಣ್ಣ ಮುಳ್ಳು ಸೌತೇಕಾಯಿಗಳಂಥದ್ದೇ ಕಾಯಿಗಳು. ಮಲೆನಾಡಿನವನಾದ ನನಗವು ಚಿರಪರಿಚಿತ. ತಮಾಷೆಗೆಂದು ಗೆಳೆಯರಿಬ್ಬರಿಗೆ ನಾನವನ್ನು ಕೊಯ್ದು ಕೊಡುವಾಗ “ಯ್ಯೋ, ಉಪ್ಪಿಲ್ಲ, ಖಾರ ಇಲ್ಲ” ಎಂದು ಕೊರಗುತ್ತಲೇ ಬಾಯಿ ಸೇರಿಸಿದರು. ಆದರೆ ಒಂದೇ ಗಳಿಗೆಯೊಳಗೆ ಅವರ ನಾಲಗೆಯೇ ಕಳಚಿ ಬೀಳುವ ವೇಗದಲ್ಲಿ ಜಗಿದಷ್ಟನ್ನೂ ಹೊರಗುಗುಳಿದರು. ವಾಸ್ತವದಲ್ಲಿ ಅದು ಕಡುಕಹಿಯ (ನಿರ್ವಿಷ) ಕೌಟೇಕಾಯಿ, ಮುಳ್ಳು ಸೌತೆಯಲ್ಲ! ಮೊತ್ತೊಂದು ಗಂಟೆಯಿಡೀ ಅವರು ನಾಲಗೆ ಶುದ್ದಿ ನಡೆಸಿಯೇ ಇದ್ದರು.

ನಾನೂ, ರುದ್ರಪ್ಪನೂ ಸೇತುವೆಯಿಂದಾಚೆ ಸಣ್ಣದಾಗಿ ತಿರುಗಾಡಿಕೊಂಡುಹೊರಟೆವು. ದಾರಿಯ ಬಲಬದಿಯ ದಿಣ್ಣೆಯ ಮೇಲೆ ಒಂದಾನೆ ನಿರಾತಂಕವಾಗಿ ಸೊಪ್ಪು ಮೇಯುತ್ತಿದ್ದುದು ನಮ್ಮತ್ತ ತಿರುಗಿತು. ನಾವು ಇನ್ನೇನು ಕಾಲಿಗೆ ಬುದ್ದಿ ಹೇಳುವುದರಲ್ಲಿದ್ದೆವು. ಅಷ್ಟರಲ್ಲಿ ಬಂದೊಬ್ಬ ದಾರಿಹೋಕ ಸಮಾಧಾನಿಸಿ, ಅದು ಅಲ್ಲೇ ಮೇಲಿದ್ದ ಆನೆ ತರಬೇತಿ ಕೇಂದ್ರದ ಸಾಕಾನೆ ಎಂದಾಗ ಗಾಬರಿ ಕುತೂಹಲಕ್ಕೆ ತಿರುಗಿಕೊಂಡಿತು. ಅದು ಸೇತುವೆ ಬದಿಯಿಂದ ಕೂಗಳತೆಯ ದೂರದಲ್ಲೇ ಇದ್ದುದರಿಂದ ಉಳಿದವರಿಗೆ ಹೇಳಿ ನಾವಿಬ್ಬರು ಆನೆ ಕೇಂದ್ರಕ್ಕೊಂದು ಸುತ್ತು ಹಾಕಿದೆವು. ಅಲ್ಲಿ ಮುಖ್ಯವಾಗಿ ಎರಡು ಹಜಾರಗಳಿದ್ದವು. ಒಂದು ತಗ್ಗು ಮಹಡಿನದು, ಸುತ್ತಲೂ ಕಟ್ಟೆ ಮಾತ್ರ ಇರುವಂಥದ್ದು – ಆನೆಗಳ ಪಾಕಶಾಲೆ. ಅಲ್ಲಿ ಭಾರೀ ಬಡ್ಡು ಮೇಜಿನ ಮೇಲೆ ದೊಡ್ಡಾನೆಗಳಿಗೆ ಬಿಸಿಬಿಸಿ ರಾಗಿ ಇಟ್ಟಿಗೆಗಳು ತಯಾರಾಗಿ ಕುಳಿತಿದ್ದರೆ, ಇನ್ನೊಂದು ಮೂಲೆಯಲ್ಲಿ ಮರಿಯಾನೆಗಳಿಗೆ ಅನ್ನದುಂಡೆಗಳನ್ನು ಉರುಡುತ್ತಿದ್ದರು. ಎರಡನೇ ಹಜಾರದಲ್ಲಿ ತೋರ ಬೋದಿಗೆ ನಿಲ್ಲಿಸಿ, ಪಕಾಸುಗಳ ಅಡ್ಡ ಕಟ್ಟಿ, ಅಲ್ಲಲ್ಲಿ ಇಡೀ ಬಿದಿರಿನ ಹೆಣಿಗೆಯ ಗೋಡೆಯೂ ಮಾಡಿದ ಎರಡು ಆನೆ ಪಂಜರಗಳಿದ್ದವು. ಒಂದರಲ್ಲಿ ಸುಮಾರು ಒಂದು ವರ್ಷ ಪ್ರಾಯದ ಮರಿ, ಇನ್ನೊಂದರಲ್ಲಿ ಎರಡು ಮೂರು ತಿಂಗಳ ಹಸುಗೂಸು (ತೂಕ ಮಾತ್ರ ಕ್ವಿಂಟಲ್‌ನಲ್ಲಿ!). ಬಯಲಿನ ಸವಕಲು ಜಾಡಿನಲ್ಲಿ ದೊಡ್ಡ ಹೆಣ್ಣಾನೆಯೊಂದು ತನ್ನ ಬಾಯಲ್ಲಿ ಕಚ್ಚಿದ್ದ ದಪ್ಪ ಹಗ್ಗದ ಕೊನೆಗೆ ಕಟ್ಟಿದ್ದ ದೊಡ್ಡ ಮರದಬೊಡ್ಡೆಯನ್ನು ಎಳೆದು ತರುತ್ತಿತ್ತು. ಅದರ ಸ್ವಲ್ಪ ಬೆಳೆದ ಮರಿ ಜೊತೆಗೇ ಅರ್ಧ ಆಟದಲ್ಲಿ ಕಾಲೆಳೆದುಕೊಂಡು ಬರುತ್ತಿದ್ದದ್ದು, ನಮ್ಮನ್ನು ಕಂಡದ್ದೇ ಹೂಂಕರಿಸಿತು. ಊರಿನಲ್ಲಿ ನಾಯಿ ಬೆಕ್ಕುಗಳ ಮರಿಗಳನ್ನೋ ಎಳೆಗರುಗಳನ್ನೋ ಮುದ್ದಾಡಿದ ನೆನಪಿನಲ್ಲಿ ಹತ್ತಿರಹೋಗಲಿದ್ದ ನಮಗೆ ಮಾಹುತ ಅಪಾಯದ ಎಚ್ಚರಿಕೆ ಕೊಟ್ಟದ್ದರಿಂದ ನಾವು ಹಿಂದುಳಿದೆವು, ತೆಪ್ಪಕಾಡಿನ ಸೇತುವೆಯಾಶ್ರಯಕ್ಕೆ ಮರಳಿದೆವು.

ಗಂಟೆ ಎರಡಾದರೂ ಯಾವ ವಾಹನವೂ ನಮಗೆ ದಕ್ಕಲಿಲ್ಲ. ಉಳಿದ ಮಿತ್ರರೂ ಆನೆ ಶಿಬಿರವನ್ನು ಇನ್ನಷ್ಟು ವಿರಾಮದಲ್ಲಿ ನೋಡಿ ಬಂದರು. ಉದಕಮಂಡಲದ ಹೆಸರನ್ನೇ ನಡನಡುಗಿ ಉಚ್ಛರಿಸುವ ನಮಗೆ ಕಲ್ಪನೆ ಸುಳ್ಳೋ ಎಂಬಂತೆ ಸೂರ್ಯ ಚುರುಕಾಯಿಸುವಾಗ ಒಂದು ಜಮಖಾನೆಯನ್ನು ಅಲ್ಲೆ ಗಿಡ ಮರಗಳಿಗೆ ಕಟ್ಟಿ ಮರೆಮಾಡಿಕೊಂಡೆವು. ಮುಖ್ಯ ದಾರಿಯಲ್ಲಿ ಅಪರೂಪಕ್ಕೆ ಒಂದೊಂದು ವಾಹನ ಬರುತ್ತಿತ್ತು, ಗೇಟಿನ ಔಪಚಾರಿಕತೆ ಮುಗಿಸಿಕೊಂಡು ಮೆಲ್ಲಾನೆ ಮುಂದುವರಿಯುತ್ತಿತ್ತು. ಆಗೀಗ ಒಬ್ಬರಿಬ್ಬರು ಇಳಿದರೆ ಅಲ್ಲಿನ ನಾಲ್ಕು ಗೂಡಂಗಡಿಗೆ ಜೀವ. ಉಳಿದಂತೆ ಪೋಲಿಸ್ ಬಿಡಿಸಿ ಎಸೆದ ನೆಲಗಡ್ಲೆ ಸಿಪ್ಪೆಯಲ್ಲಿ ಗಟ್ಟಿಕಾಳು ತನಿಖೆ ಮಾಡುವ ವಾನರ ಸೈನ್ಯ, ಅವುಗಳಲ್ಲಿನ ಸ್ಪರ್ಧಾ ಕೊಸರಾಟಗಳು, ಹೇನುಹೆಕ್ಕುವ ಸ್ನೇಹಾಚಾರಗಳು, ಕಡ್ಲೆ ಪಾಲು ಕೇಳಲು ನುಗ್ಗಿದ ಒಬ್ಬ ಡೊಂಕುಬಾಲದ ನಾಯಕ, ಆತನ ದಾರ್ಷ್ಟ್ಯಕ್ಕೆ ಸೊಪ್ಪು ಹಾಕದೆ ಭೀಕರ ಶಬ್ದದೊಡನೆ ಹಲ್ಲು ಕಿಸಿದು ಆತನ ಕಿವಿಯನ್ನೇ ಹಿಡಿದೆಳೆದ ಗಡವಕೋತಿ, ಅನ್ನ ದೇವರ ಮುಂದೆ ಇನ್ನು ವೈರಗಳು ಉಂಟೇ ಎಂದು ನಾಯಿ ನಿರ್ವಿಕಾರಚಿತ್ತದಿಂದ ಕಡ್ಲೆಧ್ಯಾನದಲ್ಲಿ ಮುಂದುವರಿದದ್ದು, ಅಲ್ಲಿ ದಕ್ಕದ್ದು ಇಲ್ಲೇನಾದರೂ ಇದ್ದೀತೇ ಎಂದು ಕಪಿ ಸೇನೆ ನಮ್ಮ ಜೋಪಡಿಗೆ ಲಗ್ಗೆಹಾಕಿದ್ದು ಹೇಳುತ್ತಾ ಹೋದರೆ ಹತ್ತರಿಂದ ಹತ್ತಕ್ಕೆ ನಿದ್ದೆ ತೆಗೆದವನಿಗೂ ಬಂದೀತು ಅಸಾಧ್ಯ ಆಕಳಿಕೆ.

ಮಸಣಿಗುಡಿಯಲ್ಲಿ ಯಾವುದೋ ತಮಿಳು ಚಲನಚಿತ್ರದ ಶೂಟಿಂಗ್ ನಡೆದಿತ್ತು. ಹಾಗಾಗಿ ಅತ್ತ ಹೋದ ಒಂದೆರಡು ಜೀಪು ಕಾರುಗಳಲ್ಲಿ ಚಾಲಕನೇ ಕಾಣದಷ್ಟು ಜನ. ಮುಖ್ಯ ದಾರಿಯ ಬಸ್ಸುಗಳಲ್ಲಿ ಬಂದ ಹಲವರು ಮಸಣಿಗುಡಿಯೆಡೆಗೆ ನಡೆದು ಹೊರಟದ್ದಿದ್ದರೆ ಅವರ ಗುರಿಯೂ ಮೋಹಕ ನಟೀಮಣಿ – ಜಯಲಲಿತಳ ದರ್ಶನ! [No Comments!] ನಾವು ನಿಶ್ಚಿಂತೆಯಿಂದ ಬುತ್ತಿ ಬಿಚ್ಚಿದೆವು. ಒಬ್ಬರದಿನ್ನೊಬ್ಬರಿಗೆ, ಎತ್ತಣ ರೊಟ್ಟಿ ಎತ್ತಣ ಬಾಜೀ, ಗಿರೀಶನ ಬ್ರೆಡ್ಡಿಗೆ ಜಶವಂತನ ಪಲ್ಯ – ಒಟ್ಟಾರೆ ಭರ್ಜರಿ ನಮ್ಮ ಊಟ. ತುಣುಕಾದರೂ ಗಿಟ್ಟೀತು ಎಂದು ಹೊಂಚಿದ ಮಂಗಗಳು “ಥೂ ಮಂಗಗಳು, ಒಂದು ನೀರುಳ್ಳಿ ಎಸಳೂ ಬಿಡಲಿಲ್ಲ” ಎಂದು ಬಯ್ದುಕೊಂಡು ಹೋದವು. ರಮೇಶ್ ಜಶವಂತ್ ಗೂಡಂಗಡಿ ಚಾ ಕಾಫಿ ತರಿಸಿದರೆ ನಾನು ರುದ್ರಪ್ಪ, ಬಾಳೆ ಕಿತ್ತಳೆ ಸರಬರಾಜು ನೋಡಿಕೊಂಡೆವು.

ಗುಂಡ್ಲುಪೇಟೆ ಕಡೆಯಿಂದ ಬರುತ್ತಿದ್ದ ಬಸ್ಸುಗಳ ಬಗ್ಗೆ ರುದ್ರಪ್ಪನಿಗೆ ಒಂದು ಕಣ್ಣಿತ್ತು. ಮೂರು ಗಂಟೆಯ ಸುಮಾರಿಗೆ ಬಂದ ಒಂದರಲ್ಲಿ ನಾವು ಕಳ್ಳನೆಂದು ಸಂಶಯಿಸಿದಾತನೇ ಬಿಡುಗಡೆಹೊಂದಿ ಹೋಗುತ್ತಿದ್ದ. ರುದ್ರಪ್ಪ ವಿಚಾರಿಸಿದಾಗ ಉರುರಿ ಕೋಪದಲ್ಲಿ “ನಾನು ನಿಮಗೆ ಸಹಾಯ ಮಾಡಲು ಹೊರಟರೆ ನನ್ನನ್ನೇ ಸಿಕ್ಕಿಸಿಹಾಕಿದಿರಿ. ನಾನು ನಿಮಗೆ ಪಾಠ ಕಲಿಸುತ್ತೇನೆ.” ಪೋಲಿಸರಿಗೆ ಮುಚ್ಚಳಿಕೆ ಹೇಗೋ ಮಾಡಿಕೊಟ್ಟು ಬಂದಿದ್ದನಂತೆ. ನಿರುಮ್ಮಳವಾಗಿ ಬಸ್ಸು ಹೋಯ್ತು, ಕಾಲವೂ ಹೋಗುತ್ತಲೇ ಇತ್ತು.

[ಕಾಲನ ಠಾಣೆಯಲ್ಲಿ ಗೇಟಿಲ್ಲ, ದೇಶ ವಿದೇಶವೂ ಇಲ್ಲ; ತಪಾಸಣೆ ನಿರಂತರ. ಹಾಗಾಗಿ ಮೂರು ದಶಕದ ಹಿಂದಿನ ಕಥೆಗೆ ಎಲ್ಲೆಲ್ಲಿನ ನೀವೆಲ್ಲ, ಇಂದಿನ ವಾರದವರೆಗೆ ಕಾದವರಿಗೆ ಉಳಿದ ಭಾಗಕ್ಕೆ ಮುಂದಿನ ವಾರ ದೂರವಲ್ಲ! ಇಲ್ಲಿವರೆಗಿನ ಓದಿಗೆ ಸುಂಕ ಕಟ್ಟಲು (ಕೆಳಗಿದೆಯಲ್ಲಾ DROP BOX) ಮಾತ್ರ ಮರೆಯಬೇಡಿ.]

ಈಶ್ವರ ದುರ್ಯೋಧನನಾದದ್ದು ಯಾಕೆ?
ಪ್ರಿಯರೇ,

ತಾತಾರ್ ಲೇಖನ ಮುಂದೊಂದು ವಾರಕ್ಕೆ ಮತ್ತೆ ದೂಡುತ್ತಿರುವುದಕ್ಕೆ ನಿಮ್ಮಿಂದ ಕ್ಷಮೆ ಕೇಳಲೇ ಮಗ ಅಭಯನಿಗೆ ಪ್ರಥಮ ಸಿನಿಮಾ – ಗುಬ್ಬಚ್ಚಿಗಳು, ಇದಕ್ಕೆ ಸ್ವರ್ಣಕಮಲ ಬಂದ ಸಂತೋಷದ ವಾರ್ತೆ (ನೋಡಿ: www.abhayatalkies.com) ಬಿತ್ತರಿಸಿ ನಾನದಕ್ಕೆ ಸಂಬಂಧಿಸಿದ ಓಡಾಟಗಳಲ್ಲಿ ವ್ಯಸ್ತನಾಗಿದ್ದೆ ಎನ್ನಲೇ! ಏನೇ ಇರಲಿ, ಸದ್ಯ ತಮ್ಮ ಅನಂತ ವರ್ಧನ (ಅ-ತೃತೀಯ) ನನ್ನ ಲೇಖನ ಛಲದೊಳ್ ದುರ್ಯೋಧನಕ್ಕೆ ಪೂರಕವಾಗಿ ಅವನ ನೆನಪುಗಳ ಒಂದಷ್ಟು ಹೊರೆ ಇಳಿಸಿದ್ದನ್ನು ಇಲ್ಲಿ ಕೊಡುತ್ತಿದ್ದೇನೆ. ಕೊನೆಯಲ್ಲಿ ಈ ತೀನಿ ನಿಮಗೆ ರುಚಿಸಿದ್ದಕ್ಕೆ ನಾಲ್ಕು ಸಾಲಾದರೂ ಬರೆಯುವುದು ಮರೆಯಬೇಡಿ.

ಈಶ್ವರ ದುರ್ಯೋಧನನಾದದ್ದು ಯಾಕೆ?

- ಲೇಖನ: ಜಿ.ಎನ್. ಅನಂತವರ್ಧನ

ಈಶ್ವರ ಎಂಬ ಪದ ಸುಂದರ. ಮಂಗಳ ತತ್ಸಮಾನ ಅರ್ಥ ಕೊಡುತ್ತದೆ. ತ್ರಿಮೂರ್ತಿಗಳ ಪೈಕಿ ಕೊನೆಯವನಾದ ಈಶ್ವರ ಜೀವಿಗಳೆಲ್ಲದರ ನಾಶಕಾರಕ, ಭಯಾನಕನಾಗಬೇಕಾದವನು ಸುಂದರ, ಮಂಗಳಪ್ರದಾಯಕನಾಗುವುದು ಹ್ಯಾಗೆ? ಜೀವಿಗಳು ಜೀವನದಿಂದ ಜರ್ಝರಿತರಾಗಿ, ದೇಹದ ಸಕಲ ಅಂಗಗಳೂ ಚೇತನರಹಿತಗೊಂಡಾಗ  ಮುಕ್ತಗೊಳಿಸುವವ ಈಶ್ವರನಾದ್ದರಿಂದ ಆತ ಸುಂದರನೂ ಮಂಗಳಪ್ರದಾಯಕನೂ ಆಗಿದ್ದಾನೆ. ಆದರೆ ನಾನು ಈಗ ಹೇಳ ಹೊರಟಿರುವ ಈಶ್ವರ, ನನ್ನ ತಂದೆಯ ತಮ್ಮ,, ಈಶ್ವರ ಚಿಕ್ಕಯ್ಯ. ಈತ ಲೋಕರೂಢಿಗಳ ಪ್ರಕಾರ ಹೇಳುವುದಾದರೆ ಹೆಸರಿನ ಅರ್ಥಕ್ಕೆ ದೂರವಾಗಿ ಬದುಕಿದ್ದು ಯಾಕೆ ? ಅವನ ಮನೆಗೆ ‘ದುರ್ಯೋಧನ ನಿಲಯ’ ಎಂದು ಹೆಸರು ಕೊಟ್ಟುಕೊಂಡದ್ದು ಯಾಕೆ ಎಂದೆಲ್ಲಾ ಪ್ರಶ್ನೆಗಳು ಬಂದಾಗ ಅವನೇ ಕೊಟ್ಟ ಉತ್ತರ – “ಅನೇಕರಿಗೆ ಒಳ್ಳೆ ಒಳ್ಳೆಯ ಹೆಸರು ಇರುತ್ತದೆ, ಆದರೆ ಅವರು ಕೆಟ್ಟದ್ದನ್ನೇ ಮಾಡುತ್ತಾರೆ. ಆದರೂ ಅಂತಹ ಜನರನ್ನೇ ಸಮಾಜ ನಂಬುತ್ತದೆ. ನಾನು ಕೆಟ್ಟವನ ಹೆಸರನ್ನು ಇಟ್ಟುಕೊಂಡು ಒಳ್ಳೆಯ ಕೆಲಸ ಮಾಡ್ಬೇಕೆಂದಿದ್ದೇನೆ. ದುರ್ಯೋಧನ ಎಂಬ ಪದ ಮಹಾಭಾರತವನ್ನು ಓದಿದವರೆಲ್ಲರೂ ಒಕ್ಕೊರಲಿನಿಂದ ಅಬ್ಬಾ ಕೆಟ್ಟವ, ದುಷ್ಟ, ಹಠವಾದಿ ಹೇಳಿದ್ದಕ್ಕೆ ವಿರುದ್ಧವಾಗಿ ನನ್ನ ಒಳ್ಳೆಯ ಕೆಲಸದಿಂದಾದರೂ ದುರ್ಯೋಧನನಿಗೆ ಒಳ್ಳೆಯ ಹೆಸರು ಬರಲಿ”.

ಚಿಕ್ಕಯ್ಯನ ಬದುಕೇ ಪರೋಪಕಾರದ್ದು. ಅವನು ವಿಚಾರಕ್ಕಿಂತ ಆಚಾರವೇ ಪ್ರಧಾನ ಎಂದು ನಂಬಿ ಬಾಳಿದವ. ನಮ್ಮ ಅತ್ರಿ ಮನೆಯಿಂದ ಮೊದಲ್ಗೊಂಡು ಕೆ.ರಾಮಕೃಷ್ಣ ಉಡುಪ, ಪ್ರಜೀವ ಶಿವಕುಮಾರ್, ಗುಲಾಬಿ ಉಡುಪ ಮೊದಲಾದ ಮನೆಯವರು ಏನಾದರೂ ಕೆಲಸದಲ್ಲಿ ಊರು ಬಿಟ್ಟುಹೋಗುವಾಗ ನಿಶ್ಚಿಂತೆ ಅನುಭವಿಸುವುದು ಹೋಗುವುದು “ಈಶ್ವರ್ ಮನೆ ಪಾರ  ಕಾಯುತ್ತಾರೆ” ಎಂದು. ಪಾರ ಎಂದರೇನು? ತನ್ನ ಮನೆಯ ಎಲ್ಲಾ ಕೆಲಸ ಮುಗಿಸಿ ರಾತ್ರಿ ಊಟ ಮಾಡಿ ಬಳಿಕ ಪಾರದ ಅ ಮನೆಗೆ ಬಂದು ಮಲಗುವುದು. ಮತ್ತೆ ಮನೆಯವರೇ ಅಪ್ಪಿ ತಪ್ಪಿ ಬಂದರೂ ಬೆಳಗಿನವರೆಗೂ ಬಾಗಿಲು ತೆರೆಯದ ಕರ್ತವ್ಯ ನಿಷ್ಠೆ ಅವನದು. ಮೊದಲೇ ಹೇಳಿದ್ದರೆ ಪಟ್ಟಿನಲ್ಲಿ ಸಡಿಲ ಮಾಡುವುದಿತ್ತು. ಹೇಳದೇ ಬಂದರೆ (ಎಚ್ಚರವೇ ಆಗದಿದ್ದರೆ?) ಕಟ್ಟು ನಿಟ್ಟು. ರಾತ್ರೆ ಮಲಗಲು ಮಂಚ ಹಾಸಿಗೆ ಕಡ್ಡಾಯ ಕೊಡಲೇಬೇಕು. ಎದುರಿನ ಖಾಲಿ ಕೋಣೆ ಕೊಟ್ಟು ಮಲಗಿ ಎಂದರೆ ಆಗುವುದಿಲ್ಲ. ಮತ್ತೆ ಇದಕ್ಕೆಲ್ಲಾ ಸಂಬಳ, ಗೌರವಧನ, ಇನಾಮು ಕೊಟ್ಟರೆ ಈತ ಸಾಕ್ಷಾತ್ ರುದ್ರನೇ!

ಮನೆಯಲ್ಲೊಂದು ತೆಂಗಿನಕಾಯಿ ಸುಲಿಯುವ ಚಿಮಟ ಇಟ್ಟುಕೊಂಡು ಗುರ್ತ ಇರುವ ಹಿರಿಯ ನಾಗರಿಕರ ಮನೆಗೆ ಹೋಗಿ ತೆಂಗಿನಕಾಯಿ ಸುಲಿದುಕೊಡುವುದು ಮತ್ತೊಂದು ಗುಣ. ಕೈಲಾಗದವರಿಗೆ ಬ್ಯಾಂಕಿಗೆ ಚೆಕ್ ನಗದು ಹಾಕುವುದು, ವಿದ್ಯುತ್ ನೀರಿನ ಕಂದಾಯ ಕಟ್ಟುವುದು, ಯಾವುದೇ ದುರಸ್ತಿಗೆ ಜನ ಕರೆದು ತರುವುದು, ಸಾಮಾನು ತಂದುಕೊಡುವುದು, ಆರೋಗ್ಯಕ್ಕೆ ಉಪಯುಕ್ತ ಮಾಹಿತಿ ಹಾಗೂ ವೈದ್ಯರ ಭೇಟಿ ಮಾಡಿಸುವುದು, ವಧೂವರರ ಅನ್ವೇಷಣೆ, ಸಾರ್ವಜನಿಕರ ಪರವಾಗಿ ಅರ್ಜಿ ಬರೆದು ಸಹಿ ಹಾಕಿಸಿ ಸಂಬಂಧ ಪಟ್ಟ ಇಲಾಖೆಗೆ ರವಾನಿಸುವುದು ಒಂದೋ ಎರಡೋ ವಿವಿಧ ಬಗೆ.

ಪ್ರತಿ ಶುಕ್ರವಾರ ಬೆಳಗ್ಗೆ ಊಟ ಕಟ್ಟಿಕೊಂಡು ಚಾಮರಾಜಪುರಂನ (ದುರ್ಯೋಧನ ನಿಲಯದಿಂದ ೨ ಕಿ.ಮೀ) ನೇಸರ ಎಂಬ ಸಾವಯವ ಕೃಷಿಕರ ಮಾರಾಟ ಮಳಿಗೆಗೆ ಸ್ವಯಂ ಸೇವಕ ಮಾರಾಟಗಾರನಾಗಿ ಹೋಗುತ್ತಿದ್ದ. (ಅಲ್ಲೇ ತನ್ನ ಬುತ್ತಿಯೂಟ ಮಾಡಿ, ಮಲಗಿ, ಸಂಜೆವರೆಗಿದ್ದು ಬರುವುದೂ ಸೇವೆಯ ಪಟ್ಟಿಯಲ್ಲಿ ಸೇರಿತ್ತು) ಅಲ್ಲಿನ ವಸ್ತುಗಳ ವೈಶಿಷ್ಟ್ಯದ ಬಗ್ಗೆ ಚಿಕ್ಕಯ್ಯನದೇ ಕೆಲವು ನುಡಿಮುತ್ತುಗಳು:

ಕೆಂಪಕ್ಕಿ ತಿನ್ನಿ. ನಾನು ತಿನ್ನುವುದರಿಂದಲೇ ಈ ೭೫ನೇ ವಯಸ್ಸಿಗೂ ಸೈಕಲ್ ಬಿಡ್ತಿದ್ದೇನೆ. ನನ್ನಾರೋಗ್ಯದ ಗುಟ್ಟು ಕೆಂಪಕ್ಕಿ.

ತಿಮರೆ ಸೊಪ್ಪಿನ ಪುಡಿ – ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಹೆಚ್ಚೆಚ್ಚು ತಿಂದರೆ ಹಿಂದಿನ ಜನ್ಮದ್ದೂ ನೆನಪಿಗೆ ಬಂದೀತು!

ಶುದ್ಧ ಸೆಗಣಿಯಿಂದ ಬೆಳೆದ ತರಕಾರಿ ತಿಂದರೆ ನೇರ ರಕ್ತ, ಮೂಳೆಗಳಿಗೆ ಸೇರುತ್ತದೆ. ಜೀರ್ಣಾಂಗದ ಸಮಸ್ಯೆಯೇ ಇಲ್ಲ. ನನಗೆ ಮಲಗಿದ್ದೇ ಏನು ಕೂತಲ್ಲೂ ನಿದ್ದೆ ಬರುವ ಗುಟ್ಟೇ ಸಾವಯವ ತರಕಾರಿ.

ಸಾವಯವ ಕೃಷಿತೋಟದಲ್ಲಿನ ಜೇನು ಮಧುಮೇಹಿಗಳಿಗೂ ಮದ್ದು. ಜ್ವರ, ಶೀತ, ಕೆಮ್ಮು ಬಾಧೆಯಿಲ್ಲ. ರೋಗ ನಿರೋಧ ಶಕ್ತಿ ಅಪಾರ. ನನಗಂತೂ ಜ್ವರ ಬಂದ ನೆನಪೇ ಇಲ್ಲ.

ಚಿಕ್ಕಯ್ಯನ ಸ್ವಾಭಿಮಾನ ಅಸಾಧಾರಣ. ವೆರಿಕೋಸ್ ವೈನ್, ಪೈಲ್ಸ್, ಕಣ್ಣಿನ ಪೊರೆ, ಉಗುರುಸುತ್ತು ಇತ್ಯಾದಿ ಸಣ್ಣ ಶಸ್ತ್ರ ಚಿಕಿತ್ಸೆಗಳ ಅನಿವಾರ್ಯದಲ್ಲಿ ಈಗಾಗಲೇ (ನನ್ನಣ್ಣ) ಅಶೋಕ ಬರೆದಿರುವಂತೆ ನಮ್ಮಲ್ಲಿ ಯಾರಿಗೂ ತಿಳಿಸುತ್ತಿರಲಿಲ್ಲ, ವೈದ್ಯರೆಲ್ಲಾದರೂ ಸ್ವಪ್ರೇರಣೆಯಿಂದ ತಿಳಿಸಿಬಿಟ್ಟರೆ ಅವರ ಸಂಗ ಠೂ! ಅಲ್ಲೆಲ್ಲ ಊಟ ತಿಂಡಿ ಇತ್ಯಾದಿ ಒದಗಿಸುವ ಹುಡುಗರಿಗೆ ಹಣ ಕೊಡುತ್ತಿದ್ದ. ಮತ್ತೆ ಅಕಸ್ಮಾತ್ ತಾನು ಸತ್ತು ಹೋದರೆ ನೇತ್ರ, ದೇಹದಾನದ ವಿವರ ಹಾಗೂ ನಮ್ಮನೆಗೆ ಸುದ್ದಿ ಕೊಡಬೇಕೆಂದು ಹೇಳುವುದೂ ಮರೆಯುತ್ತಿರಲಿಲ್ಲ. ಆರೋಗ್ಯ ಕೆಟ್ಟು ತಾನು ಮಲಗಿದಲ್ಲೇ ಆಗಬಾರದೆಂದು (ಬೇರೆಯವರಿಗೆ ಹೊರೆಯಾಗಬಾರದೆಂದು) ಭಾರೀ ಮುಂಜಾಗ್ರತೆ ವಹಿಸುತ್ತಿದ್ದ. ವಾಯುವಿಹಾರ, ವ್ಯಾಯಾಮ ಕಟ್ಟು ನಿಟ್ಟಾಗಿ ಮಾಡಿ ವಯೋಧರ್ಮದ ಲೋಪಗಳು ಬಿಟ್ಟರೆ ಗಟ್ಟಿಮುಟ್ಟಾಗಿ ದೇಹ ಕಾಪಾಡಿಕೊಂಡಿದ್ದ. ಆಹಾರದಲ್ಲೂ ಅಷ್ಟೇ. ಹಸುವಿನ ಹಾಲು ಮನುಷ್ಯರಿಗಲ್ಲ ಎಂದು ಕಾಯಿ ಹಾಲು ಉಪಯೋಗಿಸುತ್ತಿದ್ದ. ಬೇಸಿಗೆಯಲ್ಲಿ ಮನೆಯೊಳಗೆ ಫ್ಯಾನ್ ಹಾಕಿ ಮಲಗಿದರೆ ಹಾಳೆಂದು ತಾರಸಿಯ ಮೇಲೆ ಮಲಗುತ್ತಿದ್ದ. ಅಲ್ಲಿಗೆ ಇವನದೇ ವ್ಯವಸ್ಥೆಯಲ್ಲಿ ಕಾಂಕ್ರೀಟ್ ಮಂಚ ಮಾಡಿಸಿದ್ದು, ಹಾಕಿಸಿದ್ದು ಹೇಳಲು ಹೋದರೆ ಅದೇ ದೊಡ್ದ ಕಥೆ, ಬಿಡಿ. ಅವನ ತಾರಸಿಯಲ್ಲಿನ ನಿದ್ದೆಯ ಕಥೆಗಳೂ ಅಷ್ಟೇ ರೋಚಕ! ಒಟ್ಟಾರೆ ನಿದ್ದೆ ಕತೆಗಳಲ್ಲಿ ಎರಡನ್ನಷ್ಟೇ ಹೇಳಿಬಿಡುತ್ತೇನೆ.

೧. ಈಶ್ವರ ಬೆಂಗಳೂರಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಕಾರ್ಪೊರೇಷನ್ ಈಜುಕೊಳಕ್ಕೆ ಹೋಗುವುದಿತ್ತು. ಇವನಲ್ಲಿ ಗಡಿಯಾರ ವಾಚೇನೂ ಇರಲಿಲ್ಲ. ಒಂದು ದಿನ ಅಂದಾಜಿನಲ್ಲೇ ಎದ್ದು  ಕೆಂಪೇಗೌಡ ವೃತ್ತದ ಬಳಿ ಬಂದಾಗ ದಾರಿಬದಿಯ ಗಡಿಯಾರದಲ್ಲಿ ನಾಲ್ಕು ಗಂಟೆ ತೋರಿತಂತೆ. ಬೇಸಿಗೆ ದಿನಗಳಾದ್ದರಿಂದ ಇನ್ನೇನು ಮಾಡುವುದೆಂದು ಇವನು ಸಮಯ ಕಳೆಯಲು ಅಲ್ಲೇ ಇದ್ದ ಕಲ್ಲ ಬೆಂಚಿನ ಮೇಲೆ ಮೈ ಚಾಚಿದ. ಆದರೆ ಕೆಲವೇ ಕ್ಷಣಗಳಲ್ಲಿ ಭಾರೀ ಬ್ಯಾಂಡು ಬಜಂತ್ರಿಗಳೊಡನೆ, ಆನೆ ಕುದುರೆ ಮೊದಲಾದ ಸಕಲ ಸೈನಿಕ ಕವಾಯತಿನೊಡನೆ, ಸ್ವತಃ ಪುರದರಸು ಕೆಂಪೇಗೌಡನೇ ಮೆರವಣಿಗೆಯಲ್ಲಿ ಅಲ್ಲಿಗೆ ಬಂದನಂತೆ. ಮೆರವಣಿಗೆ ಕಲ್ಲ ಬೆಂಚನ್ನು ಸಮೀಪಿಸಿದಾಗ ಕೆಂಪೆಗೌಡ “ಇವನ್ಯಾಕೆ ಇಲ್ಲಿ” ಎಂದು ಬೊಬ್ಬಿಟ್ಟ. ಈಶ್ವರ ಹೆದರಿ, ಮುಖವೆಲ್ಲಾ ಬೆವೆತು ಚಂಡಿಯಾಗಿ ಗಡಬಡಿಸಿ ಎದ್ದು ನೋಡುತ್ತಾನೆ – ವಿಧಾನಸೌಧದ ಪಹರೆಯವನು, ನೀರು ಚಿಮುಕಿಸಿ, ಅಸಾಮಿ ಬದುಕಿದ್ಯೋ ಸತ್ತಿದ್ಯೋಂತ ನೋಡ್ತಾ ಇದ್ದ.

೨. ಇವನು ತನ್ನ ಮನೆಯಂಗಳದಲ್ಲಿ ಎರಡು ತೆಂಗಿನ ಮರ (ನೆಟ್ಟು) ಬೆಳೆಸಿದ್ದ. ಅದರ ಆರೈಕೆ ಮನೆಮಕ್ಕಳಿಗಿಂತಲೂ ಹೆಚ್ಚೇ ಮಾಡುತ್ತಿದ್ದ. ಮನೆಯ ಬಚ್ಚಲಿನ ಬೂದಿ, ಕೊಳೆಯುವ ಕಸ ಕಡ್ಡಿಗಳಲ್ಲದೆ ದಾರಿಯಲ್ಲಿನ ಸೆಗಣಿ ಬಾಚಿ ತಂದು ಹಾಕುವುದು ನಡೆದೇ ಇತ್ತು. ಜಾನುವಾರುಗಳದ್ದಾಗಬಹುದಾದರೆ ಮನುಷ್ಯರದ್ಯಾಕೆ ಕೊರತೆಯಾಗಬೇಕು ಎಂದು ಇವರು ಸ್ವಂತದ್ದನ್ನು ಸಾರ್ವಜನಿಕಕ್ಕೆ ತಿಳಿಸದೆ ತೆಂಗಿನ ಬುಡಕ್ಕೆ ಉಪಯೋಗಿಸುತ್ತಿದ್ದ. ಒಂದು ರಾತ್ರಿ ತಾರಸಿಯ ಮೇಲೆ, ತೆಂಗಿನ ನೆರಳಿನಲ್ಲಿ ಮಲಗಿದ್ದಾಗ ಮರವೇ ಇವನ ಮುಖಕ್ಕೆ ‘ಇವನದ್ದನ್ನೇ’ರಾಚಿದ ಅನುಭವವಾಯ್ತಂತೆ! ಅಲ್ಲಿಗೆ ಆ ಪ್ರಯೋಗ ಬಂದ್.

ಈಶ್ವರ ಅತಿ ಎಚ್ಚರದಲ್ಲಿ ಕೆಲವೊಮ್ಮೆ ಕೆಲಸಗಳನ್ನು ಒಂದಕ್ಕೆರಡು ಮಾಡುವುದಿತ್ತು. ಇವನು ಸೈನ್ಯದಲ್ಲಿದ್ದಾಗ (ಫಿರಂಗಿದಳ) ಒಮ್ಮೆ ಗಾರ್ಡ್ ಡ್ಯೂಟಿಯಲ್ಲಿದ್ದಾಗ ಸೇನಾ ವರಿಷ್ಠ ತನಿಖೆಗೆ ಬರುತ್ತಾರೆ ಎಂಬ ಸುದ್ದಿ ಬಂತು. ಜೊತೆಗೆ ಇವನ ಅಧಿಕಾರಿ “ಅವರು ಮೂರು ಪ್ರಶ್ನೆ ಕೇಳುತ್ತಾರೆ – ಮೊದಲು, ನಿನ್ನ ವಯಸ್ಸು ಎಷ್ಟು? ಉತ್ತರ ಹದಿನೆಂಟು ಹೇಳಬೇಕು. ಮತ್ತೆ ನಿನ್ನ ಸೇವಾವಧಿ ಎಷ್ಟು? ಉತ್ತರ ಐದು ಹೇಳಬೇಕು. ಕೊನೆಯದಾಗಿ ನಿನಗೆ ದೇಶಪ್ರೇಮ ಹೆಚ್ಚೋ ಸೈನ್ಯ ಪ್ರೇಮ ಹೆಚ್ಚೋ? ಉತ್ತರ (ಎರಡೂ ಎನ್ನುವ ಅರ್ಥದಲ್ಲಿ) BOTH ಎನ್ನಬೇಕು”. ಈಶ್ವರನ ಮನದಲ್ಲಿ ಪ್ರಶ್ನೋತ್ತರ ಮರುಜಪವಾಗುತ್ತಿದ್ದಂತೆ ವರಿಷ್ಠ ಬಂದೇ ಬಂದ. ಕಟ್ಟುಮಸ್ತಿನ, ಶಿಸ್ತಿನ ಮೂರ್ತಿ ಲ್ಯಾನ್ಸ್ ನಾಯಕ್ ಜಿ.ಟಿ ಈಶ್ವರ್ ಲಟ್ಟೆಂದು ಸಲ್ಯೂಟ್ ಕೊಟ್ಟಾಗ ಅದೇ ಮರುಸುಟಿಯಲ್ಲಿ ಚಟ್ಟೆಂದು ಪ್ರಶ್ನೆ ಬಂತು “ಎಷ್ಟು ಸಮಯವಾಯ್ತು, ಸೈನ್ಯ ಸೇರಿ?” ವರಿಷ್ಠ ತಪ್ಪಿರಬಹುದು, ನಮ್ಮ ಚಿಕ್ಕಯ್ಯನ ನೆನಪಿನ ಕ್ರಮ ತಪ್ಪುವುದುಂಟೇ “ಹದಿನೆಂಟು ವರ್ಷಾ ಸಾರ್.” ವರಿಷ್ಠನ ಹುಬ್ಬು ಮೇಲೇರಿತು, “ಅಂದ್ರೆ ನಿನ್ನ ಪ್ರಾಯ?” ಬಡಿದ ಚೆಂಡಿನ ಮರುಪುಟಿತದ ವೇಗದಲ್ಲಿ ಬಂತು “ಐದು ವರ್ಷಾ ಸಾರ್.” ವರಿಷ್ಠ ಕಕ್ಕಾಬಿಕ್ಕಿಯಾಗಿ ತಾರದಲ್ಲಿ ಒದರಿದ “between us, who is MAD?” ಬೆರಗಿನ ಸರಣಿಗೆ ತಾರ್ಕಿಕ ಕೊನೆ ಕಾಣಿಸುವಂತೆ ಈಶ್ವರಪ್ಪಚ್ಚಿ (ಚಿಕ್ಕಪ್ಪ) ಚಚ್ಚಿಯೇ ಬಿಟ್ಟರಂತೆ “BOTH.”

೧೯೫೫ರ ಗೋವಾ ವಿಮೋಚನೆಗೆ ಈಶ್ವರನ ಸೇನಾ ತುಕಡಿಯೂ ಹೋಗಿತ್ತು. ಪೋರ್ಚುಗೀಸರು ಬಿಟ್ಟೋಡಿದ ನೆಲವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಾಗ ಸೈನಿಕರು ಬೆಲೆಬಾಳುವ ವಸ್ತುಗಳನ್ನು ದೋಚುವುದು ಸಹಜವಾಗಿ ನಡೆದಿತ್ತಂತೆ. ಆದರೆ ಪರಸ್ತ್ರೀಯಷ್ಟೇ ಪರಧನವನ್ನೂ ಕಣ್ಣೆತ್ತಿಯೂ ನೋಡದ ನೈತಿಕ ಛಲವಂತ ಈಶ್ವರ. ಆತನಿಗೆ ದಿನಗಟ್ಟಳೆಯ ಆತಂಕ, ಶ್ರಮ, ಅಪರಿಪೂರ್ಣ ಪೋಷಕ ಸಾಮಾಗ್ರಿಗಳ ಪೂರೈಕೆಯ ಕೊನೆಯಲ್ಲಿ ಬರಿದೇ ಹಾಳಾಗಿ ಹೋಗಲಿದ್ದ ಆಹಾರ ಸಾಮಾಗ್ರಿಗಳ ಕೋಠಿಯೇ ಕಾಣಿಸಿತಂತೆ. ಸುಮಾರು ಎರಡು ಗಂಟೆಯ ‘ಧಾಳಿಯ’ ಕೊನೆಯಲ್ಲಿ ಈಶ್ವರ ತಿಂದು ಎಸೆದ sealed Jamಗಳ ಖಾಲೀ ಡಬ್ಬಿಗಳ ರಾಶಿ ಲಾರಿ ಲೋಡಿನಷ್ಟಿತ್ತಂತೆ! ಮಾಡಿದ ಪಾಪ, ತಿಂದು ಪರಿಹಾರ?

ಕಾಫಿ, ಟೀಗಳನ್ನೇ ಕುಡಿಯದ ಈಶ್ವರನಿಗೆ ಮದ್ಯವಂತೂ ಹರದಾರಿ ದೂರ. ಇವನ ಕಮಾಂಡರ್ ಒಮ್ಮೆ ಸಸಾರದಲ್ಲಿ ಉದ್ಗರಿಸಿದನಂತೆ “ಹೆಂಡ ಕುಡಿಯಲು ಬಾರದ ನೀನು ಸೈನ್ಯಕ್ಕೆ ನಾಲಾಯಕ್.” ಈತ ಸಾಮಾನ್ಯ ಸೈನಿಕನೇ ಇರಬಹುದು ಆದರೆ ನೈತಿಕ ಸ್ತರ ಎಂದೂ ಉಚ್ಚ ಮಟ್ಟದ್ದೇ ಇದ್ದುದಕ್ಕೆ ಸಾಕ್ಷಿಯಾಗಿ ಕೂಡಲೇ ಉತ್ತರಿಸಿದನಂತೆ “ಸಾಬ್, ಹೆಂಡ ಕುಡಿದ ಮೇಲೆ ಹೆಂಡತಿಗೂ ಮಗಳಿಗೂ ವ್ಯತ್ಯಾಸವೇ ಗೊತ್ತಾಗಲಾರದು.”ಅಧಿಕಾರಿ ದೊಡ್ಡವನೇ ಇರಬಹುದು ಆದರೆ ಅಂದೂ ಮುಂದೆಯೂ ಈ ವಿಚಾರ ಮತ್ತೆ ಪ್ರಸ್ತಾಪಿಸುವ ಧೈರ್ಯ ಮಾಡಲಿಲ್ಲವಂತೆ.

ಅಂಬಾಲ ಸೈನ್ಯ ಶಿಬಿರದಲ್ಲಿ ಈಶ್ವರ ಇದ್ದಾಗ ಮೇಲಧಿಕಾರಿಯೊಬ್ಬ ಎಲ್ಲರಿಗೂ ಅವರವರ ಕರ್ತವ್ಯದಾಚೆ ವೈಯಕ್ತಿಕ ಬಿಟ್ಟಿ ಚಾಕರಿಗಳ ಹೊರೆ ಹೊರಿಸಿ ಕಿರುಕುಳ ಕೊಡುತ್ತಿದ್ದನಂತೆ. ಈಶ್ವರ ವಾರದ ಬಿಡುವಿನ ದಿನ ಪೇಟೆಗೆ ಹೋದಾಗ ಯಾವುದೋ job typist  ಬಳಿ ಅಹವಾಲುಗಳ ಪಟ್ಟಿ ಮಾಡಿ, ಹತ್ತೆಂಟು ಸಹೋದ್ಯೋಗಿಗಳ ನಕಲಿ ರುಜು ಮಾಡಿ ಮೇಲಕ್ಕೆ ಅಂಚಿಸಿಬಿಟ್ಟ. ಒಂದೇ ವಾರದಲ್ಲಿ ಮೇಲಿನಿಂದ ವಿಚಾರಣೆಯ ದಂಡ ಇವರ ಶಿಬಿರಕ್ಕೆ ಅಪ್ಪಳಿಸಿದಾಗ ಅಧಿಕಾರಿ ಕೆಂಡಾಮಂಡಲ. ಇಡಿಯ ತುಕ್ಕಡಿಯನ್ನು ಮೈದಾನದಲ್ಲಿ ಸೇರಿಸಿ ಒಬ್ಬೊಬ್ಬರನ್ನೂ ವಿಚಾರಣೆ ಮಾಡಿ, ವಾಚಾಮಗೋಚರ ಬಯ್ದರೂ ‘ಕಳ್ಳ’ ಪತ್ತೆಯಾಗಲೇ ಇಲ್ಲವಂತೆ. ಆದರೆ ಇವರ ಶೋಷಣೆ ಮಾತ್ರ ನಿಂತದ್ದು ಒಂದು ಸಾಧನೆಯೇ.

ಈಶ್ವರನ ವಿಚಾರಗಳು ಎಷ್ಟು ಶುದ್ಧವಿದ್ದರೂ ಸಹಜ ಪ್ರವೃತ್ತಿಗಳು ಅವನ್ನು ಮೀರಿ ನಿಲ್ಲುತ್ತಿದ್ದದ್ದನ್ನು ಅವನು ಎಷ್ಟೋ ಬಾರಿ ಅನಾವಶ್ಯಕ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ದ. ಅರ್ಧ ಶತಮಾನದ ಹಿಂದೆಲ್ಲಾ ಕಾಫಿ ತೋಟದಲ್ಲಿ ಏಲಕ್ಕಿ ಗಿಡ ಸುಲಿದು ಎಳೆ ಸುಳಿ ತಿನ್ನುವಲ್ಲಿ ಕಾಡಕಪಿಗಳು ಉಪದ್ರ ಹೇಳತೀರದು. ಪ್ರತಿ ತೋಟದವರೂ ಕಪಿಪಾರಕ್ಕೆ ಜನ ಇಡುವುದು, ಆತ ದಿನವಿಡೀ ಬೊಬ್ಬೆ ಹೊಡೆದುಕೊಂಡು ತೋಟ ಸುತ್ತುವುದು, ಅನಿವಾರ್ಯವಾದರೆ ಆಗಾಗ ಯಜಮಾನರ ಮನೆಯ ಗನ್ ಒಯ್ದು ಒಂದೆರಡು ಮಂಗ ಬಲಿ ಹಾಕುವುದು ಇಂದು ಜಿರಳೆ, ಇಲಿ ಹೊಡೆದಷ್ಟೇ ಸಹಜವಿತ್ತು. ಆ ಕಾಲದಲ್ಲಿ, ಈಶ್ವರ ಸೈನ್ಯ ಸೇರಿ ಮೊದಲ ರಜಾ ಅವಧಿಯಲ್ಲಿ ಊರಿಗೆ ಬಂದಾಗ ಕಪಿ-ಪಾರದವನು ರಜೆಯಲ್ಲಿ ಹೋಗಿದ್ದಿರಬೇಕು. ಈಶ್ವರ ಭಾರೀ ಉಮೇದಿನಿಂದ ಅಲ್ಲಿನ .೨೨ ಗನ್ ಹಿಡಿದು ಹಾಡೇ ಹಗಲು ಬೇಟೆಗೆ ಹೊರಟ. ಚತುರ ಸಿಪಾಯಿಗೆ ಒಮ್ಮೆಲೇ ದೂರದಲ್ಲಿ ಕಾಫಿ ಏಲಕ್ಕಿ ಪೊದರುಗಳ ಮರೆಯಲ್ಲಿ ಏನೋ ಸಂಚಲನ ಕಾಣಿಸಿತು. Position, Load, two rounds FIRE! ‘ನಿಷ್ಣಾತ ಗುರಿ’ ಏನಾಯ್ತೋ ಕೇಳಬೇಡಿ, ಅಲ್ಲಿ ಕಾಫಿಹಣ್ಣುಗಳನ್ನು ಬಿಡಿಸುತ್ತಿದ್ದ ಇವರ ಕೆಲಸದವ ಬೇಟೆಯಾಯ್ತೇ ಎಂದು ನೋಡಲು ಮುಗ್ಧವಾಗಿ, ಕೂದಲೂ ಕೊಂಕದೆ ಪೊದರ ಮರೆಯಿಂದ ಪ್ರಕಟವಾದಾಗ ಈಶ್ವರನ ಜೀವ ಬಾಯಿಗೆ ಬಂದಿತ್ತಂತೆ!

ಈಶ್ವರ ತನ್ನ ನಿಧಾನಕ್ಕೆ, ಅದಕ್ಷತೆಗೆ ಎಂದೂ ಸುಳ್ಳನ್ನು ಆಧಾರವಾಗಿ ಇಟ್ಟುಕೊಂಡದ್ದಿಲ್ಲ. ಈಶ್ವರನಿಗೆ ಪ್ರಾಯದಲ್ಲಿ ಸಾಮಾನ್ಯವಾಗಿ ಯಾವುದೇ ಅನಾರೋಗ್ಯ ಕಾಡಿದ್ದಿಲ್ಲ. ಮತ್ತೆ ಆರೋಗ್ಯದ ಬಗ್ಗೆ ಸುಳ್ಳು ಹೇಳಿದರೆ ನಿಜ ಆಗಿಬಿಡುತ್ತದೆ ಎಂಬ ಸಣ್ಣ ಭಯವೂ ಆತನಿಗಿತ್ತು. ಆದರೆ ಎಳೆಪ್ರಾಯದ ಭ್ರಾಮಕ ಕಲ್ಪನೆಗಳು ಸೈನ್ಯ ಜೀವನದಲ್ಲಿ ಹುಸಿಯಾದಾಗ ಆರೇಳು ವರ್ಷದುದ್ದಕ್ಕೆ ಮಾನಸಿಕವಾಗಿ ಬಳಲಿ, ಕೊನೆಗೆ ಆರೋಗ್ಯದ ಕುರಿತೇ ಸುಳ್ಳು ಹೇಳಿ ನಿವೃತ್ತಿಪಡೆದಿದ್ದ. ಇದು ಆತನಲ್ಲಿ ಕೊನೆಗಾಲದವರೆಗೂ ಅಪರಾಧೀ ಪ್ರಜ್ಞೆ ಉಳಿಸಿತ್ತು. ಹಾಗಾಗಿಯೋ ಏನೋ ನನ್ನ ಅನುಭವಕ್ಕೆ ಬಂದ ಮುಂದಿನ ಕಾಲಗಳಲ್ಲಿ ಆತ ನಮಗೆ ಮುಜುಗರವಾಗುವಷ್ಟು ತನ್ನನ್ನು ನಿಂದಿಸಿಕೊಂಡದ್ದಿತ್ತು ಆದರೆ ಸುಳ್ಳಾಡಿದ್ದಿಲ್ಲ. ಎನ್.ಸಿಸಿ ಆಫೀಸಿನಲ್ಲಿ ಗುಮಾಸ್ತಗಿರಿಯಲ್ಲಿ ಕೆಳಸ್ತರದ Despatch clerk ಈತನ ಹುದ್ದೆ. ಬಡ್ತಿಗಾಗಿ ಹಲವು ಇಲಾಖಾ ಪರೀಕ್ಷೆಗಳಿಗೆ ಈತ ಹೋದದ್ದಿತ್ತು. ಆದರೆ ಅಲ್ಲೆಲ್ಲಾ ಸಜವಾಗಿ ನಡೆಯುವ ನಕಲು ಹೊಡೆಯುವ ಕೆಲಸ ಈತ ಎಂದೂ ಮಾಡಲಿಲ್ಲ. ಸಹಜವಾಗಿ ವೃತ್ತಿಯಿಂದಲೇ despatch (ನಿವೃತ್ತಿ) ಆಗುವವಗೂ ಈತ despatch clerkಏ. ಈತ ಬೆಳಿಗ್ಗೆ ಏಳುವುದೇನೋ ನಾಲ್ಕು ಗಂಟೆಗೇ ಆದರೂ ಎಂಟು ಗಂಟೆಗಾರಂಭವಾಗುತ್ತಿದ್ದ ಕಛೇರಿ ತಲಪುವಲ್ಲಿ ತಡವಾಗುತ್ತಿದ್ದದ್ದು, ಎಷ್ಟೋ ಬಾರಿ ವಾಗ್ದಂಡನೆಗೆ ಗುರಿಯಾಗುತ್ತಿದ್ದದ್ದಕ್ಕೆ (ಈಶ್ವರ ಹಿಂದೆಬಿಟ್ಟು ಮೇಲಧಿಕಾರಿಯನ್ನು ತಮಾಷೆಗೆ ಕಾಲಪುರುಷ, ಯಮಧರ್ಮರಾಯ ಎಂದೇ ಕರೆಯುತ್ತಿದ್ದ) ಈತನ ಗೊಂದಲಗಳೇ ಕಾರಣ; ಸೋಮಾರಿತನವಲ್ಲ.

ಕೊನೆಗಾಲಕ್ಕೆ ಹತ್ತೋ ಹನ್ನೆರಡೋ ದಿನ ಮೊದಲು ಈತ ನನ್ನ ಮಗಳು – ಅಕ್ಷರಿಯ ಮದುವೆಯ ಸನ್ನಿವೇಶದಲ್ಲಿ ಸಿಕ್ಕಿಕೊಳ್ಳುವುದನ್ನು ತಪ್ಪಿಸಲು ಮೋದೂರಿಗೆ ಕಾವಲುಗಾರನಾಗಿ ಓಡಿ ಹೋದದ್ದು ಅಶೋಕನ ಬ್ಲಾಗ್ (ಛಲದೊಳ್ ದುರ್ಯೋದನಂ) ಓದಿದ ನಿಮಗೆ ಗೊತ್ತೇ ಇದೆ. ಅಲ್ಲಿಂದ ವಾಪಾಸು ಮೈಸೂರಿಗೆ ಹೊರಟವನು ‘ಚಿತ್ತಿ’ಯನ್ನು ನೋಡಬೇಕೆಂದು ಸಣ್ಣ ಮರುಪಯಣ ಮಾಡಿದ್ದ. [ಚಿತ್ತಿ ಅಂದರೆ ಸದ್ಯ ನಮ್ಮ ಕುಟುಂಬದಲ್ಲಿ ಅತ್ಯಂತ ಹಿರಿಯರೂ (ತೊಂಬತ್ತು ಮೀರಿದ ಪ್ರಾಯ) ಎಲ್ಲರ ಪ್ರೀತಿ ಗೌರವಗಳಿಗೆ ಯೋಗ್ಯವಾಗಿಯೇ ಪಾತ್ರರಾದವರೂ ನೆನಪು ವಿಚಾರಗಳಲ್ಲಿ ಏನೇನೂ ಗೊಂದಲವಿಲ್ಲದವರೂ ಆಗಿ ಸಂಬಂಧದಲ್ಲಿ ನಮ್ಮ ಮೂವರಿಗೆ ಅಜ್ಜಿಯೂ ನನ್ನಪ್ಪ ಚಿಕ್ಕಪ್ಪಂದಿರಿಗೆ ಚಿಕ್ಕಪ್ಪನ ಹೆಂಡತಿ ಎಂದು ಚಿಕ್ಕಮ್ಮನೂ (ಅಪಭ್ರಂಶದಲ್ಲಿ ಚಿತ್ತಿ) ಆದ, ನನ್ನಮ್ಮನಿಗೆ (ಭವಾನಿ+ಅತ್ತೆಮ್ಮ=) ಭಾಂತೆಮ್ಮನೂ ಆದ ಮಡಿಕೇರಿಯ ಜ್ಯೋತಿ ಮನೆಯ ವಿರಿಜಾ ಭವಾನಿಯಮ್ಮ]. ಅವರು ಆಗ ಮಡಿಕೇರಿಯಲ್ಲೇ ಎರಡನೇ ಮಗನ ಮನೆ – ಅಶೋಕನಿಲಯದಲ್ಲಿದ್ದರು. ಈಶ್ವರ “ಚಿತ್ತೀ ನನಗೆ ಮೈ ಮಾಲುತ್ತದೆ, ಅಡ್ಡಡ್ಡ ನಡೆದುಕೊಂಡೇ ಬಂದೆ” ಎಂದು ಬಾಲ್ಯದ ಸದರದಲ್ಲೇ ತಮಾಷೆ ಮಾಡಿಕೊಂಡೇ ಭೇಟಿಯಾಗಿದ್ದನಂತೆ. ಇವರೂ ಅದೇ ಲಹರಿಯಲ್ಲಿ “ಗೊತ್ತು ಅಪ್ಪನೇ, ನೀನೀಗ ಸಣ್ಣ ಹುಡುಗನಲ್ಲಾ” ಅಂದದ್ದೇ ಕೊನೇ ಸಂಭಾಷಣೆ ಎನ್ನುವಾಗ ಚಿಕ್ಕಜ್ಜಿಯ ಗದ್ಗದ ಕಂಠಕ್ಕೆ ನನ್ನ ಈ ಕೆಲವು ಮತ್ತು ಬರಹಕ್ಕಿಳಿಯದ ಸಾವಿರಾರು ನೆನಪುಗಳ ಭಾರವೂ ಸೇರುತ್ತದೆ.

ಜಿ.ಎನ್. ಅನಂತ ವರ್ಧನ

ನಿಲ್ಲಿ! ಗಡಿಬಿಡಿಯಲ್ಲಿ ಗಂಗಡಿಕಲ್ಲು
(ತಾತಾರ್ ಶಿಖರವನ್ನು ಭೂತಕಾಲದಲ್ಲಿ ಹತ್ತುವ ಮುನ್ನ ವರ್ತಮಾನದ ಒಂದು ಜರೂರು, ಒಂದು ಅನುಭವ ಹೇಳಿಬಿಡುತ್ತೇನೆ. ನಿಮ್ಮುತ್ಸಾಹದ ಚಿಲುಮೆ ವಾರಕಾಲ ಬಾಳಲಿ!)

ಕುದುರೆಮುಖ ರಾಷ್ಟೀಯ ಉದ್ಯಾನವನದೊಳಗೆ ಹಾಯುವ ಸುಲಭ ಏರಿನ, ಅಂದದ ಬಳುಕಿನ ನುಣ್ಣನೆ ದಾರಿ ಅದರದ್ದಲ್ಲ; ಗಣಿಗಾರಿಕೆಯವರದ್ದು. ಕಬ್ಬಿಣ ಗಣಿಗಾರಿಕೆಯವರಿಗೆ ಅದು ಅವಶ್ಯವೇ ಸರಿ. ಆದರೆ ಮತ್ತೆ ಹುಟ್ಟಿದ ವನ್ಯ ಇಲಾಖೆಗೆ, ಇಂದು ಬದಲಾದ ಪರಿಸ್ಥಿತಿಗೆ ಅದು ಶಾಪವೇ ಆಗಿದೆ. ಮೇಲಿನ ಸೌಕರ್ಯಗಳಲ್ಲದೆ ವಿರಳ ವಾಹನ ಸಂಚಾರವೂ ಕುಮ್ಮಕ್ಕು ಕೊಡುವುದರಿಂದ ಇಲ್ಲಿ ಮಿತಿಮೀರಿದ ವೇಗದಲ್ಲಿ ಧಾವಿಸುವ ಖಾಸಗಿ ವಾಹನಗಳು (ಈ ದಾರಿಯಲ್ಲಿ ಕೆಂಬಸ್ಸು, ಗಣಿಲಾರಿ, ಸಹಸ್ರಪಾದಿ ಎಣ್ಣೆಲಾರಿಗಳು ಇಲ್ಲ. ಇತರ ಸರಕು ಸಾಗಣೆ ಲಾರಿಗಳು, ಸಾರ್ವಜನಿಕ ಬಸ್ಸುಗಳೂ ತುಂಬಾ ಕಡಿಮೆ.) ಅಪಘಾತಕ್ಕೊಳಗಾಗುವುದು, ಜೀವ ಹಾನಿಯಾಗುವುದು ನಿತ್ಯ ಸಂಗತಿ. ಕರಾವಳಿ ವಲಯದಿಂದೇರುವವರಿಗೆ ಮಾಳದವರೆಗಿನ ಬಿಸಿಯೋ ಘಟ್ಟದ ಮೇಲಿನಿಂದ ಬರುವವರಿಗೆ ಕಳಸದವರೆಗಿನ ಅವೈಜ್ಞಾನಿಕ ಏರಿಳಿವಿನ ಹರಕು ದಾರಿಯೋ ಈ ಕಾಡಿನ ನದುವೆ ಕಾಡುವುದಿಲ್ಲ. ಕಣ್ಣು ತುಂಬುವ ಹಸಿರು, ಮೈ ತೀಡುವ ತಣ್ಪು, ತೆರೆದು ಬಿದ್ದ ಬೆಟ್ಟದಲೆಯಲೆಯ ನಡುವೆ ನಾನು/ ನಾವು ಮಾತ್ರ ವಿಹಾರಿಗಳು ಎಂಬ ಭಾವ ತಂದುಬಿಡುತ್ತದೆ. ಸೌಮ್ಯದಿಂದ ಬಿಸಿಯೇರಿಸುವವರೆಗಿನ  ಪಾನೀಯಗಳನ್ನು ಸೇವಿಸುತ್ತ, ಹಾಳಮೂಳಗಳನ್ನು ಕುರುಕುತ್ತ, ವಾಹನದಲ್ಲೇ ಇರುವ ಸಂಗೀತವನ್ನು ಗರಿಷ್ಠ ಅರಚಿಸುತ್ತಾ ಕಡಿಮೆಯಾದರೆ ತಾವೂ ಬೊಬ್ಬೆ-ಸಂಗೀತದಲ್ಲಿ ಕಡಿಮೆಯಿಲ್ಲ ಎಂದು ಪ್ರಚುರಿಸುತ್ತ, ಸಿಗರೇಟು ಮೋಟು, ಕಸ, ಡಬ್ಬಿ, ಬಾಟಲುಗಳನ್ನು ಹೊರಗೆ ತೂರುತ್ತ ಅಪಾಯಕಾರೀ ವೇಗ ತಲಪಿಬಿಡುತ್ತಾರೆ. ಸ್ಥಳನಾಮ ಹೇಳುವ, ವನ್ಯರಕ್ಷಣೆಯ ನೂರೆಂಟು ಸಂದೇಶಗಳನ್ನು ಜಾಹೀರುಪಡಿಸುವ ಬರಹಗಳ ವೈವಿಧ್ಯ (ವಿವಿಧ ಸ್ಕೀಮುಗಳ ಕಡತ ಬಲಪಡಿಸಿದಷ್ಟು) ಪರಿಸರಕ್ಕೆ ಏನೂ ಮಾಡಿದಂತೆ ಕಾಣುವುದಿಲ್ಲ. ಇಲ್ಲಿ ಅವಘಡಗಳಿಗೆ ಸಿಕ್ಕು ಸಾಯುವ ಅಸಂಖ್ಯರಲ್ಲಿ ವನ್ಯ ಜೀವಿಗಳೇ ಬಹುಸಂಖ್ಯಾತರು. ಸಾಮಾನ್ಯ ದೃಷ್ಟಿಗೆ ನಗಣ್ಯವಾಗಬಹುದಾದ ಹಾವು ಮಂಗಗಳಷ್ಟೇ ಅಲ್ಲ, ಕಡವೆ ಕಾಟಿಯಷ್ಟು ದೊಡ್ಡ ಮೃಗಗಳೂ ಇವೆ ಎನ್ನುವುದು ನಿಜಕ್ಕೂ ಆತಂಕಕಾರಿ. ಹಾಗಾಗಿ ನಿಲ್ಲಿ! ನಡೆದು ಬನ್ನಿ.

ಮೊನ್ನೆ ಆದಿತ್ಯವಾರ ಬೆಳಿಗ್ಗೆ ನಾವು ಹನ್ನೊಂದು ಮಂದಿ ಗಂಗಡಿಕಲ್ಲಿನ ತಪ್ಪಲಿನಲ್ಲಿ ಸೇರಿದ್ದು ಹೀಗೆ ನಡೆದು ನೋಡುವುದಕ್ಕೇ. [ಮಂಗಳೂರಿನಿಂದ ಜೀಪಿನಲ್ಲಿ ಕುದುರೆಮುಖ ಪಟ್ಟಣಕ್ಕೆ ಹೋಗಿ ಇಲಾಖೆಯ ಅನುಮತಿ ಪತ್ರ ಹಾಗೂ ಓರ್ವ ರಕ್ಷಕನನ್ನು ಜೊತೆ ಮಾಡಿಕೊಂಡಿದ್ದೆವು. ದಾರಿಹೋಕರಿಂದ ನಮ್ಮ ವಾಹನವನ್ನು ಮರೆಮಾಡುವಷ್ಟು ಮೊದಲೊಂದು ಕಿಮೀ ತೀರಾ ಕಚ್ಚಾ ಕಾಡುದಾರಿಯಲ್ಲಿ ಜೀಪು ನುಗ್ಗಿಸಿದೆವು. ಮೂಲದಲ್ಲಿ ಅದು ಆ ವಲಯದ ಅದಿರಿನ ಮಾದರಿ ಸಂಗ್ರಹಿಸಲು ಗಣಿಗಾರಿಕೆಯವರು ಮಾಡಿದ ದಾರಿ. ಮತ್ತೆ ಅದನ್ನು ಊರ್ಜಿತದಲ್ಲಿಡುವುದರೊಡನೆ ಮತ್ತಷ್ಟು ಕಚ್ಚಾ ದಾರಿಗಳನ್ನೂ ಶ್ರೇಣಿಯ ತಪ್ಪಲಿನಲ್ಲಿ ಹರಿಯಬಿಟ್ಟದ್ದು ವನ್ಯ ಇಲಾಖೆ. ನೆಪ ವನ್ಯದ ಉಸ್ತುವಾರಿ; ಕಾಡಕುದುರೆಯ ರಕ್ಷಣೆಗೆ ಜೀನು ಬಿಗಿದಂತೆ. ಅನಂತರ] ಪೂರ್ವಾಭಿಮುಖರಾಗಿ ನಡಿಗೆಗಿಳಿದೆವು. ಕಾಲಬುಡದಿಂದ ದಿಗಂತದವರೆಗೂ ನಮ್ಮ ದಿಟ್ಟಿಯಾಡುತ್ತಲೇ ಇತ್ತು, ಕಿವಿ ನಾಗರಿಕ ಶಬ್ದಗಳನ್ನು (ಮುಖ್ಯವಾಗಿ ದಾರಿಯಲ್ಲೋಡುವ ವಾಹನಗಳ ಸದ್ದು) ಮೀರಿ ಗಾಳಿ ಹೊತ್ತು ತರುವ ವನ್ಯ ತರಂಗಾಂತರಕ್ಕೆ ಹೊಂದಿಕೊಳ್ಳುತ್ತಲಿತ್ತು. ವಿವಿಧ ವಾಸನೆಗಳ ಗ್ರಹಣದಲ್ಲಿ ನಾವು ದುರ್ಬಲರಿದ್ದರೂ ಸ್ವಲ್ಪ ಕುತೂಹಲ, ಬಹುತೇಕ ಪ್ರದರ್ಶನಕ್ಕಾಗಿ ವಾಚಾಳಿಗಳಾಗಿಬಿಡುತ್ತೇವೆ. ಚಾಪಲ್ಯಗಳಿಗೆ ಬಾಯಿಯಾಗುವುದು ಇಲ್ಲಿ ನಿಷಿದ್ಧ. ದೂರದ ಕಾಡಿನಿಂದ ಹನುಮಾನ್ ಲಂಗೂರಿನ ಘೂಕ್ ಮತ್ತು ಕೆಂಜಳಿಲಿನ ಚೊಳಚೊಳ ಕರೆಗಳು ಬಿಟ್ಟು ಬಿಟ್ಟು ಕೇಳುತ್ತಿತ್ತು. ನಿಂತು ನಮ್ಮುಸಿರಿನ ಹೊಯ್ದಾಟ ಕಡಿಮೆ ಮಾಡಿದರೆ ನಸುಗಾಳಿಯ ಸುಳಿವು, ಎಲ್ಲೆಲ್ಲಿನ ತೊರೆಝರಿಗಳ ಶ್ರುತಿಗೆ ಎಲೆಲೆಯ ಮರ್ಮರ, ಹಕ್ಕಿಗಳುಲಿ. ಕೆಲವು ಋತುಮಾನಗಳ ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ಭೋರ್ಗರೆಯುವ ಮಾರುತಪ್ರತಾಪ, ವಿವಿಧ ಲಯಗಳಲ್ಲಿ ಬಾಗುಬಳುಕಿನಲ್ಲಿ ಆಕಾಶ ಭೂಮಿಯನ್ನು ಬೆಸೆಯುವ ನೀರಧಾರೆಯ ಆಟೋಪ, ತಾರಕ್ಕೇರುವ ಬಿಬ್ಬಿರಿಗಳ ಸ್ಪರ್ಧಾ ಗಾನಮೇಳಕ್ಕೆಲ್ಲಾ ಅಂದು ರಜೆ. ಆದರೂ ಆ ದಿವ್ಯ ಮೌನದೊಳಗೆ ಎಷ್ಟೊಂದು ಸದ್ದು!

ನಾವು ನೇರ ಗಂಗಡಿಕಲ್ಲು ಶಿಖರದ ಬುಡಕ್ಕೇ ಹೋಗುವ ದಾರಿ ಅನುಸರಿಸಿದೆವು. ಅನತಿ ದೂರದಲ್ಲಿ ಅದು ಪಕ್ಕಾ ಏರುಮೈ ಹಿಡಿಯುವಲ್ಲಿ ಕೇವಲ ಕಾಲುದಾರಿಯಷ್ಟೇ ಉಳಿದಿತ್ತು. ವನ್ಯ ಇಲಾಖೆಯವರು ಕೆಲವು ಹುಲ್ಲುಗಡ್ಡೆಗಳನ್ನು ಒಕ್ಕಿ ತೆಗೆದು, ಅಲ್ಲಲ್ಲಿ ಪುಟ್ಟ ಮೆಟ್ಟಿಲು ಕಡಿದು ಜಾಡು ಸ್ಪಷ್ಟಗೊಳಿಸಿದ್ದರು. ಮತ್ತೂ ಮುಚ್ಚಿಬರುವ ಹುಲ್ಲಿನ ಎಡೆಯಲ್ಲಿ ಜಾಡು ಗುರುತಿಸಿಕೊಳ್ಳಲು ಅಲ್ಲಲ್ಲಿ ಬದಿಯಲ್ಲಿ ಕಾಡಕಲ್ಲು ಗುಪ್ಪೆಗಳನ್ನೂ ಒಟ್ಟಿದ್ದರು. ನಮ್ಮೊಳಗಿನ ಟೀಕಾಕಾರತನವನ್ನು ಅದುಮಿ ವನ್ಯದಲ್ಲಷ್ಟೇ ತೊಡಗಿಕೊಂಡೆವು.

ಸವಕಲು ಜಾಡಿನ ನಡುವೆ ಸಣ್ಣ ಹುಲ್ಲಹಾಸಿನ ಮೇಲೆ ಒಂದಷ್ಟು ಬಿಳಿಯ ಗುಪ್ಪೆಯಿತ್ತು. ಪಿಸುಮಾತಿನಲ್ಲಿ ನಿರೇನ್ ಸವಾಲಿಕ್ಕಿದರು, “ಇದು ಯಾವ ಪ್ರಾಣಿಯ ಮಲ?” ಉತ್ತರ ಯಾರಲ್ಲೂ ಇರಲಿಲ್ಲ, ಥಟ್ಟಂತ options ಕೇಳಿ ಇದನ್ನೂ ಒಂದು ಜನಪ್ರಿಯ ಹಾಸ್ಯಗೋಷ್ಠಿ ಮಾಡುವ ಮನಸ್ಸೂ ಬರಲಿಲ್ಲ. ಕಾಡುಕಡ್ಡಿಯೊಂದನ್ನು ಹಿಡಿದು ಆ (ಹಳತಾದ್ದರಿಂದ) ಒಣಗುಪ್ಪೆಯನ್ನು ಹಿಸಿದು ಜೀರ್ಣವಾಗದ ರೋಮಗುಚ್ಚ, ಮೂಳೆಚೂರುಗಳನ್ನು ತೋರಿಸಿ, ಸಾಧಾರ ‘ಚಿರತೆಯದ್ದೇ’ ಎಂದು ನಿರೇನ್ ತೋರಿಸಿಕೊಟ್ಟರು. “ತೆರೆಮೈಯಲ್ಲೂ ಹೀಗೆ ಹುಲ್ಲ ಹಾಸನ್ನು ಆಯ್ದು ಮಲವಿಸರ್ಜನೆ ಮಾಡಿ ಮತ್ತೆ ಸುತ್ತಮುತ್ತ ತನ್ನ ಮುಂಗೈ ಉಜ್ಜಿ, ವೈಯಕ್ತಿಕ ವಾಸನೆಯ ಗುರುತನ್ನು ಬಿಟ್ಟುಹೋಗುವುದು ಚಿರತೆಗಳ ವಾಡಿಕೆ. ಹುಲಿ, ಚಿರತೆಯಾದಿ ಪ್ರಾಣಿಗಳ ಕುರುಣೆಯ ಗಾತ್ರದ ಮತ್ತು ಮೊತ್ತದ ಮೇಲೆ ಪ್ರಾಣಿಯ ಗಾತ್ರವನ್ನು ಅಂದಾಜಿಸುವುದು ಸಾಧ್ಯ. ಆದರಿಲ್ಲಿ ಇದು ಹಳತಾಗಿ, ಮಳೆಗೋ ಇಬ್ಬನಿ ಸುರಿವಿನಲ್ಲೋ ನಿರಾಕಾರವೂ ಸವಕಳಿಯಿಂದ ಸಣ್ಣ ಮೊತ್ತದ್ದೂ ಆಗಿರಬಹುದು” ಎಂದೂ ಬಂತು ಅವರ ವಿವರಣೆ. ಹಾಗಾದರೆ ಮಾರ್ಜಾಲ ಕುಲದ ಕಿರಿಯ ಸದಸ್ಯ, ನಮ್ಮ ಹಿತ್ತಿಲ ಬೆಕ್ಕು  ತನ್ನ ಮಲಮುಚ್ಚುವ ಮಡಿವಂತ ಎಂದು ಭ್ರಮಿಸಬೇಕಾಗಿಲ್ಲ. ಬದಲು ಈ ಒಂದೊಂದೂ ಯಃಕಶ್ಚಿತ್ ಮಲಗುಪ್ಪೆ ಒಂದೊಂದು ‘ಸಾಮ್ರಾಜ್ಯಶಾಹಿ’ಯ ಗಡಿಕಲ್ಲು ಎಂಬ ವಿಚಾರದ ಬೆರಗಿನಿಂದ ನಾನಿನ್ನೂ ಹೊರಬಂದಿಲ್ಲ!

ಇಮ್ಮಡಿಸಿದ ನಮ್ಮ ಕುತೂಹಲಕ್ಕೆ ಮತ್ತೆ ಕೆಲವೇ ಹೆಜ್ಜೆಗಳಲ್ಲಿ ಇನ್ನೊಂದೇ ಕುರುಹು ಕಾಣಿಸಿತು. ಇದೂ ಇನ್ಯಾವುದೋ ಪ್ರಾಣಿಯ ಮಲ ಎನ್ನುವುದು ಸ್ಪಷ್ಟವಿತ್ತು. ಬಣ್ಣ ಕಪ್ಪು. ಕಾಡ ಕಡ್ಡಿಯಲ್ಲಿ ಒಕ್ಕಿದಾಗ ಮಾಂಸಾಹಾರಿ ಪ್ರಾಣಿಗಳಿಗೆ ಸಹಜವಾದ ರೋಮಗಳ ಮುದ್ದೆಯೋ, ಮೂಳೆ ಚೂರುಗಳೋ ಇರಲಿಲ್ಲ. ಬದಲು ಸಾಸಿವೆ ಗಾತ್ರದ ಅದೇನೋ ಮಿರಿಮಿರಿ ಹೊಳೆತದ ಕಣಗಳು ಧಾರಾಳವಿತ್ತು. ಸೆಗಣಿಯ ಹಾಗೆ ಕಾಣಿಸುತ್ತದೆ ಆದರೆ ಮೊತ್ತ ಸಾಧಾರಣವಾದ್ದರಿಂದ ಕಾಟಿ ಇರಲಾರದು. ಕಡವೆ? ಬರಿಂಕ? ಹಂದಿ? ಅದೇನೇ ಇರಲಿ, ಆ ಹೊಳೆತದ ಕಣಗಳು ಏನು ಎಂಬಲ್ಲಿ ಮತ್ತೆ ನಮ್ಮ ತಲೆ ಕರಡಾಯ್ತು. ಹುಲ್ಲಿನೊಡನೆ ಹೊಟ್ಟೆ ಸೇರಿರಬಹುದಾದ ಮರಳು? ದಾರಿಹೋಕರು ಎಸೆದ ನಾಗರಿಕ-ಕಸದ ಅವಶೇಷ? ನಿರೇನ್ ಮತ್ತೆ ಪ್ರವೇಶಿಸಬೇಕಾಯ್ತು, ಅದು ಸರ್ವಭಕ್ಷಕ ಕರಡಿಯದ್ದು. ಹಣ್ಣೋ ಗೆಡ್ಡೆಯೋ ಮುಕ್ಕುವಷ್ಟೇ ಸಹಜವಾಗಿ ಗೆದ್ದಲು, ಹುಳಹುಪ್ಪಟೆಗಳನ್ನು ಆಹಾರ ಮಾಡಿಕೊಳ್ಳುವ ಅದರ ಉಚ್ಚಿಷ್ಟದಲ್ಲಿ ಜೀರ್ಣವಾಗದ ಚಿಪ್ಪಿನ ಚೂರುಗಳು ಹೀಗೆ ಕಾಣುವುದು ಮಾಮೂಲಂತೆ. ಹೀಗೇ ಮೊಲ, ಕಾಡು ಹಂದಿ, ಕಡವೆ, ಕಾಟಿಗಳ ಮತ್ತು ಅಸಂಖ್ಯ ಪಕ್ಷಿಗಳ ಪರೋಕ್ಷ ಪರಿಚಯ ಲಾಭ ನಮಗಾಯ್ತು.

ಹುಲ್ಲು ಕೆತ್ತಿ ಜಾಡು ಸ್ಪಷ್ಟಗೊಳಿಸಿದಲ್ಲೆಲ್ಲಾ ದಬ್ಬಳ ಚುಚ್ಚಿ ತೆಗೆದಂತಿನ ಚೊಕ್ಕ, ಯಾವುದೋ ಹುಳಗಳು ಕೊರೆದ ಅಸಂಖ್ಯ ತೂತುಗಳು ತೋರುತ್ತಿತ್ತು. ಇವು, ನಾವು ಕಾಣದ ಹುಲ್ಲಿನ ಮರೆ, ಬಂಡೆಯ ಸೆರೆಯೆಂದಿತ್ಯಾದಿ ಬ್ರಹ್ಮಾಂಡ ವ್ಯಾಪಿಸಿದ ಗಾತ್ರ ವೈವಿಧ್ಯಗಳ ಮಾಟೆ, ಬಿಲ – ಮಳೆನೀರಿಗೆ ಎಷ್ಟೊಂದು ಇಂಗುಗುಂಡಿಗಳು! ಅವುಗಳಾಳದಲ್ಲಿ, ಹಿನ್ನೆಲೆಯಲ್ಲಿ ಇರಬಹುದಾದ ಒಕ್ಕಲು ಎಂಥವೋ ಎಂಬ ಬೆರಗಿನ ಮೆಲೆ ಬೆರಗು ಸವಾರಿ ಮಾಡಿ ನಾವು ಸುಸ್ತು. ಘಟ್ಟಗಳ ಹುಲ್ಲ ಹರಹುಗಳು ಶುದ್ಧ ಬೋಳಲ್ಲ, ಅಲ್ಲಿ ಬಿದ್ದ ಮಳೆನೀರು ಬರಿದೆ ಓಡುವುದಿಲ್ಲ. ಈ ನಿಶ್ಶುಲ್ಕ ಕಾಮಗಾರಿಯ ನೌಕರ ಕೋಟಿಯನ್ನು ಕಲ್ಪಿಸುವ ಯೋಗ್ಯತೆ ಇಲ್ಲದ ‘ನದಿ ತಿರುಗಿಸುವ’ ಭೋಳೆಗಳಿಗೆ, ಗಣಿ ಶಿಫಾರಿಸುವ ನಿರ್-ಜೀವವಿಜ್ಞಾನಿಗಳಿಗೆ, ‘ವ್ಯರ್ಥ ಹುಲ್ಲು’ ಹೆರೆದು ಬರಪೀಡಿತ ಪ್ರದೇಶಕ್ಕೆ ರವಾನೆಯ ಮಾತಾಡುವ ಪುಡಾರಿಗಳಿಗೆ, ದಾರಿ ಸವೆಸುವ ಪ್ರವಾಸೀ ಯೋಜಕರಿಗೆ ಸಾವಿರ ಧಿಕ್ಕಾರ.

ಹಗುರಕ್ಕೆ ತೊಡಗಿದ್ದ ಏರು ಕೊನೆಯ ಹಂತದಲ್ಲಿ ವಿಪರೀತಕ್ಕೆ ಬಂದಿತ್ತು. ಕಾಲುದಾರಿ ನಮ್ಮನ್ನು ಎಷ್ಟು ಎಡಬಲಕ್ಕೆ ಲಂಬಿಸಿ, ಅಡ್ಡಾಡಿಸಿದರೂ ಒಂದೊಂದು ಹೆಜ್ಜೆಗೂ ದಮ್ಮು ಕಟ್ಟುತ್ತಿತ್ತು. ಆಚೀಚಿನ ಎತ್ತರದ ಹುಲ್ಲನ್ನು ಮುಷ್ಠಿಯಲ್ಲಿ ಬಾಚಿ ಎಳೆದೆಳೆದು, ಏನೂ ಸಿಗದಲ್ಲಿ ಮೊಣಕಾಲಿಗೆ ಅಂಗೈಯ ಒತ್ತುಕೊಟ್ಟು, ಮತ್ತೂ ಸಾಲದಲ್ಲಿ ನಾಲ್ಗಾಲರಾಗಿ ಗಂಗಡಿ ಕಲ್ಲಿನ ಶಿಖರ ತಲಪುವಾಗ ಗಂಟೆ ಹನ್ನೊಂದಾಗಿತ್ತು. ನಾವು ಜೀಪು ಬಿಟ್ಟು ಹೊರಡುವಾಗ ನಾಲ್ಕೆಂಟು ಜನರ ಗುಂಪೊಂದು, ಇನ್ನೋರ್ವ ಮಾರ್ಗದರ್ಶಿಯೊಡನೆ ಸಾಕಷ್ಟು ಮುಂದೆ ಸಾಗುತ್ತಿದ್ದದ್ದನ್ನು ಕಂಡಿದ್ದೆವು. ಹತ್ತೇ ಮಿನಿಟಿನಲ್ಲಿ ನಾವು ಆ ತರುಣ ತಂಡವನ್ನು ಸಮೀಪಿಸಿದಾಗ ಒಬ್ಬಿಬ್ಬರು ಸಿಗರೇಟು ಹಚ್ಚಿದ್ದು, ಧಾರಾಳ ಹಾಡೂ ಹರಟೆ ನಡೆಸಿದ್ದೂ ಕಾಣಿಸಿತು. ನಿರೇನ್ ಕಟುವಾಗದಂತೆ ಆದರೆ ಸ್ಪಷ್ಟ ಆಕ್ಷೇಪಣೆಯ ಧ್ವನಿ ತೆಗೆದರು. ಅದೃಷ್ಟವಶಾತ್ ಅವರು ತಮ್ಮ  ಅಜ್ಞಾನಕ್ಕೆ ವಿಷಾದ ವ್ಯಕ್ತಪಡಿಸಿದರು (ಕ್ಷಮೆಯನ್ನೂ ಕೋರಿದರು). ಅನಂತರ ಆ ತರುಣರಿಗೆ ಬೆಟ್ಟದ ಏರನ್ನು ನಿಭಾಯಿಸಲು ಉಸಿರು ಉಳಿದಿರಲಿಲ್ಲವೋ ಶಿಖರಸಾಧನೆಯ ಸಂಭ್ರಮಕ್ಕೆ ಸಿಗರೇಟನ್ನು ಹಿಂಬಾಲಿಸಿ ಇನ್ನೇನೇನು ಯೋಜನೆ ಹಾಕಿದ್ದೆಲ್ಲಾ ನಮ್ಮ ಉಪಸ್ಥಿತಿಯಲ್ಲಿ ವ್ಯರ್ಥವಾಗುತ್ತದೆಂಬ ನಿರಾಶೆಯಲ್ಲೋ ನಿಂತೇ ಇದ್ದರು. ಈಗವರು ಅಲ್ಲಿಂದಲೇ ಹಿಂದೆ ನಡೆದು ಹೋಗುತ್ತಿದ್ದರು; ಬೆಟ್ಟದ ಬೈತಲೆಯಲ್ಲಿ ಸಾಲುಗಟ್ಟಿದ ಹೇನುಗಳು!

ಗಂಗಡಿಕಲ್ಲಿನ ಉನ್ನತಿ ಮಾಮೂಲೀ ಶಿಖರಗಳಂತೆ ಪೀನಾಕಾರದಲ್ಲಿಲ್ಲ. ಉತ್ತರಕ್ಕೆ ವಾಲಿಕುಂಜದಿಂದ (೩೪೦೮ ಅಡಿ) ಬರುವ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿ ಕುರಿಯಂಗಲ್ಲಿನನಂತರ (೩೮೧೩ ಅಡಿ) ಪೂರ್ವದ ಒಳನಾಡಿನತ್ತ ಸರಿಯುತ್ತ ಗಡಿಕಲ್ಲು ಗುಡ್ಡ (೩೯೦೬ ಅಡಿ), ಕಡಮಡಿ ಕಲ್ಲು (೪೯೦೦ ಅಡಿ), ಕಡಕೇಜ ಗುಡ್ಡಕ್ಕಾಗಿ (೫೪೦೬ ಅಡಿ) ಏರೇರುತ್ತಾ ಕುದುರೆಮುಖ ಶಿಖರದಲ್ಲಿ (೬೨೦೭ ಅಡಿ) ಅತ್ಯುನ್ನತಿಯನ್ನು ಕಾಣುತ್ತದೆ. ಇದರ ಪೂರ್ವ ಇಳುಕಲಿನ ತಳದಲ್ಲಿ ಭದ್ರಾ ಹೊಳೆ ಮತ್ತೆ ಒತ್ತಡಕ್ಕೆದ್ದ ಸಿಬರಿನಂತೆ ನಮ್ಮ ಗಂಗಡಿಕಲ್ಲು (೪೭೭೪ ಅಡಿ). ಇದಕ್ಕೂ ಹಿಮ್ಮೈ ಕಣಿವೆಯ ಆಳದಲ್ಲಿ ಹುಟ್ಟಿಕೊಂಡ ಸಿಂಗ್ಸರ ಹಳ್ಳ, ಮತ್ತಾಚೆ ಹೆಚ್ಚುಕಡಿಮೆ ಸಮಾನಾಂತರದಲ್ಲಿ ಹಬ್ಬಿದ ಗುರಿಗೆಯ ಸಾಲುಬೆಟ್ಟ. ಅದಕ್ಕೂ ಆಚಿನ ಕಣಿವೆಯಲ್ಲಿ ಮೂಲೆಮೂಲೆಗಳಿಗೆ ವ್ಯಾಪಿಸಿದೆ ಲಖ್ಯಾ ಅಣೆಕಟ್ಟಿನ ಹಿನ್ನೀರು. ಗುರುತಕ್ಕೆ ಸಿಕ್ಕಿಯೂ ಸಿಗದೆಯೂ ಕಣ್ತುಂಬುವ ದೃಶ್ಯ ವೈಭವವನ್ನು ಎಷ್ಟು ಹೊಗಳಿ ಹಾಡಿದರೂ ಕಡಿಮೆಯೇ. ಈಚಿನ ಭದ್ರಾ ಆಚಿನ ಸಿಂಗ್ಸರ ಹಳ್ಳಗಳನ್ನು ಒಂದೇ ಪಾತ್ರೆಗೆ ಒಡ್ಡುವಂತೆ, ಅಂದರೆ ಗಂಗಡಿಕಲ್ಲು ಶ್ರೇಣಿಯನ್ನೆ ಅರೆದು, ಸೋಸಿ ಅರೆಕಾಸಿನ ಕಬ್ಬಿಣಚೂರ್ಣವಾಗಿಸುವ ಯೋಜನೆ ಮಾತ್ರವಲ್ಲ, ಇಂದು ಕೆಐಓಸಿಎಲ್ಲೇ (ಕುದುರೆಮುಖ ಗಣಿಗಾರಿಕಾ ಸಂಸ್ಥೆ) ಸೋಲಿನ ಕಡತ ಸೇರಿಯಾಗಿದೆ. ಅವರು, ಮತ್ತೆ ವನ್ಯ ಇಲಾಖೆ ಮಾಡಿದ ವಿಭಿನ್ನ ಪ್ರಯೋಗಗಳ ಅವಶೇಷಗಳು ಆ ಶಿಖರದಲ್ಲಿ ಧಾರಾಳ ಇತ್ತು. ಅಟ್ಟಳಿಗೆಯೋ, ಗಾಳಿಗುದುರೆಯೋ, ರೇಡಿಯೋ ಅಲೆಗಳ ಪ್ರೇಷಕವೋ ಅಲ್ಲಿನ ಪ್ರಚಂಡ ಗಾಳಿಗೆ ಚಿಂದಿಯಾಗಿ ಹರಡಿ ಬಿದ್ದಿದ್ದವು. ನಮ್ಮ ಯಾವುದೇ ಸಾರ್ವಜನಿಕ ಇಲಾಖೆಗಳಿಗೆ ಪ್ರಯೋಗಗಳನ್ನು ಹೇರುವಲ್ಲಿನ ಉತ್ಸಾಹ, ಸೋಲನ್ನು ಪಾರಿಸರಿಕ ಗೌರವದೊಡನೆ ಮುಗಿಸುವಲ್ಲಿ ಇರುವುದೇ ಇಲ್ಲ ಎನ್ನುವುದಕ್ಕೆ ಅಲ್ಲಿ ಸಾಕ್ಷ್ಯ ಎಷ್ಟೂ ಇತ್ತು!

ಉರಿ ಬಿಸಿಲಿರಲಿಲ್ಲ, ಭೋರ್ಗಾಳಿಯೂ ವಿಶ್ರಾಂತಿಗೆ ಹೋದಂತಿತ್ತು. ಪ್ರಸನ್ನ ವಾತಾವರಣದಲ್ಲಿ ನಾವು ಶ್ರೇಣಿಯ ನೆತ್ತಿಯಲ್ಲೇ ದಕ್ಷಿಣಕ್ಕೆ ಪಾದ ಬೆಳೆಸಿದೆವು. ಆ ನಡಿಗೆಯ ಕುಶಿ, ಮತ್ತಷ್ಟು ಸಪುರಗೊಂಡ ಶಿಖರವಲಯದ ಚಂದ ವಿವರಿಸಲು ಕುಳಿತರೆ ಈಗಾಗಲೇ ನಿಮ್ಮ ಕುತೂಹಲದ ಮೇಲೆ (ಸದ್ಯ ಅದು ತಾತಾರ್ ಪ್ರಯಾಣಕ್ಕಲ್ಲವೇ ಮೀಸಲು) ನಾನು ಮಾಡಿದ ‘ಅಕ್ರಮಕೃಷಿ’ ಇನ್ನೊಂದೇ ವಾರಕ್ಕೆ ಎಳೆಯಬೇಕಾದೀತು; ಹಾಗೆ ಮಾಡಲಾರೆ. ಸುಮಾರು ಒಂದೂವರೆ ಗಂಟೆಯ ನಡಿಗೆಯ ಕೊನೆಯಲ್ಲಿ ಸಿಂಗ್ಸರ ಹಳ್ಳಿಯನ್ನು ಸಮೀಪಿಸಿದ್ದೆವು. ಮತ್ತೆ ನೇರ ಇಳಿದಿಳಿದು ಸಿಂಗ್ಸರ ಹಳ್ಳದ ದಂಡೆಯನ್ನೇ ಸೇರುವಾಗ ಗಂಟೆ ಒಂದೂವರೆಯಾಗಿತ್ತು. ತೋರಿಕೆ ಮತ್ತು ವಾಸ್ತವಗಳಲ್ಲಿ ಬೇಧವೇ ಇಲ್ಲದ ಸ್ಫಟಿಕ ನಿರ್ಮಲ ಸಿಂಗ್ಸರ ಹಳ್ಳಕ್ಕೇ ಬಾಯಿಹಚ್ಚಿ ದಾಹ ತೀರಿಸಿಕೊಂಡೆವು. ಮರಗಳ ತಂಪಿನಲ್ಲಿ, ಎಳೆಗಾಳಿಯ ಆರೈಕೆಯಲ್ಲಿ ಬುತ್ತಿಯೂಟ ಮುಗಿಸಿ ನವಚೇತನರಾದೆವು.

ಸುಮಾರು ಐವತ್ತು ವರ್ಷಗಳ ಹಿಂದಿನಿಂದ ತೊಡಗಿದಂತೆ ಈ ವಲಯದಲ್ಲಿ ಚದುರಿದಂತೆ ಸಣ್ಣ ಕೃಷಿಕಾರ್ಯ, ಜಾನುವಾರು ಸಾಕಣೆ ಮತ್ತು ಜನವಸತಿ ಹೆಚ್ಚಿನಂಶ ಸಕ್ರಮದ ನಿರೀಕ್ಷೆಯಲ್ಲಿ ಅಕ್ರಮವಾಗಿ ರೂಢಿಸುತ್ತಲೇ ಇತ್ತು. ಗಣಿಗಾರಿಕೆ ಇವರಿಗೆ ನಾಗರಿಕ ಸವಲತ್ತುಗಳನ್ನು ಹತ್ತಿರ ತಂದಿತ್ತು. ಆದರೆ ಗಣಿಗಾರಿಕೆಯ ಎತ್ತಂಗಡಿ, ರಾಷ್ಟ್ರೀಯ ಉದ್ಯಾನವನದ ಘೋಷಣೆ ಇವರ ಭವಿಷ್ಯವನ್ನು ಮಸುಕಾಗಿಸಿತು. ಆದರೂ ನೆಲಕಚ್ಚಿ ನಿಲ್ಲುವ ಇವರ ಛಲವಂತಿಕೆಗೆ ನಕ್ಸಲ್ ಪ್ರವೇಶ ಕೊನೆಯ ಅಂಕವೇ ಆದದ್ದು ಒಂದು ವಿಪರ್ಯಾಸವೇ ಸರಿ. ಅತ್ತ ನಕ್ಸಲ ಇತ್ತ ಪೋಲೀಸ! ಅಂಥಲ್ಲಿ ಮುಖ್ಯವಾಗಿ ನಿರೇನ್, ಬೆಂಬಲಿಸಿದ Wildilfe Conservation Society and Kudremukh Wildlife Foundation ಬಳಗ ಮಾಡಿದ ಘನಕಾರ್ಯ ನಿಜಕ್ಕೂ ಸ್ಮರಣಾರ್ಹ. ಅಷ್ಟೂ ಮಂದಿಗೆ ಅಂದರೆ ಪಟ್ಟಾ ಇದ್ದ, ಇಲ್ಲದವರಿಗೂ (ಆದರೆ ನಿಜವಾಸಿಗಳಿಗೆ) ಮೊದಲು ಅವರಿಷ್ಟದಂತೆ ರಾಷ್ಟ್ರೀಯ ಉದ್ಯಾನದ ಹೊರಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿತು. ಮತ್ತೆ ಅವರ ಮನೆ, ಜಾನುವಾರುಗಳಾದಿಯಾಗಿ ಇಚ್ಚಿಸಿದ್ದೆಲ್ಲವನ್ನೂ ಉಚಿತ ಸಾಗಣೆಯ ಸೌಕರ್ಯ ಕೊಟ್ಟು ಇಷ್ಟ ಬಂದಂತೆ (ಹೊಸ ವಠಾರಕ್ಕೆ ಒಯ್ಯಬಹುದು ಅಥವಾ ಮಾರಿಕೊಳ್ಳಬಹುದು) ಬಳಸಿಕೊಳ್ಳಲೂ ಅವಕಾಶ ಒದಗಿಸಿದೆವು. ಹೀಗೆ ಅವರು ಹಲವು ವರ್ಷಗಳ ಶ್ರಮ, ಹಲವು ವಿಪರೀತಗಳ ಮುಖಾಮುಖಿಯೊಡನೆಯೂ ಉಳಿಸಿ ಬೆಳೆಸಿದ್ದ ಮನೆ ತೋಟವನ್ನು ಅವರೇ ಕೈಯಾರೆ ಕುಟ್ಟಿ ಬೀಳಿಸುವ, ಕಡಿದೊಗೆಯುವ ಹೃದಯ ಕಲಕುವ ದೃಶ್ಯಕ್ಕೆ ಎಂಟೇ ತಿಂಗಳ ಹಿಂದೆ ನಾನೂ ಸಾಕ್ಷಿಯಾಗಿದ್ದೆ.

ಸಣ್ಣ ವಿಶ್ರಾಂತಿಯನಂತರ ನಾವು ಮರಳಿ ಪ್ರಕೃತಿಗೆ ಸೇರುತ್ತಿರುವ ಸಿಂಗ್ಸರ ಹಳ್ಳಿಯ ಸಣ್ಣ ದರ್ಶನ ಮಾಡಿಕೊಳ್ಳುತ್ತಾ ಬೆಟ್ಟದ ಸುಲಭ ಸಂದಿನಲ್ಲಿ ನುಸಿದು ಮತ್ತೆ ಪಶ್ಚಿಮಾಭಿಮುಖಿಗಳಾದೆವು. ಸಿಂಗ್ಸರ ಹಳ್ಳಕ್ಕೆ ಹಳ್ಳಿಗರು ಹಾಕಿದ್ದ ಪಾಲಗಳು (ಅಡಿಕೆ ಮರದ ಸೇತುವೆ ಎನ್ನಿ) ಕಣ್ಮರೆಯಾಗಿದ್ದವು. ಆಸುಪಾಸಿನ ಬೆಟ್ಟಗುಡ್ಡಗಳ ಮೇಲೆ ಅವರ ಜಾನುವಾರುಗಳು ಓಡಾಡಿ ಮೂಡಿಸಿದ ಅಸಂಖ್ಯ ಜಾಡುಗಳು ಮಾಸುವಂತೆ ಹುಲ್ಲು ಬೆಳೆದಿತ್ತು. [ಅದಕ್ಕೆ ಅಟ್ಟೆ, ಪಟ್ಟಿ ಕಿತ್ತ ನಮ್ಮವರ ಪಾದರಕ್ಷೆಗಳೂ ಕುಸಿದು ಕುಕ್ಕರಿಸಿದ ವಿನೋದಗಳೂ (ಅಪಘಾತಗಳಾಗದ ಎಚ್ಚರ ವಹಿಸಿದ್ದೆವು) ಸಾಕ್ಷಿ.] ಇತಿಹಾಸ ಸೇರುವ ಮನೆಯಂಗಳದಲ್ಲಿ ಬಿದ್ದಿದ್ದ ಕಾಟಿಯ ಭಾರೀ ಸೆಗಣಿಗುಪ್ಪೆ ರಾಷ್ಟ್ರೀಯ ಉದ್ಯಾನವನದ ಇನ್ನೊಂದೇ ಅಧ್ಯಾಯದ ನಾಂದಿ. ನಾವು ಹಿಂದುಳಿಸಿ ಬಂದಿದ್ದ ಜೀಪಿಗಿದ್ದ ಅಂತರ, ದಿನದ ಬೆಳಕಿಗುಳಿದಿದ್ದ ಅವಕಾಶಗಳನ್ನು ಸರಿದೂಗಿಸುವ ಧಾವಂತದಲ್ಲೂ ಕಾಣಲು ಸಿಕ್ಕಿದ ಕಡವೆಗಳು ವನ್ಯಪುನರುಜ್ಜೀವನದ ಭರವಸೆಗಳು.

ಪೂರ್ವಾಹ್ನದ ಬಿಳಿನೀಲ ಚಿತ್ತಾರದ ಮೋಡಗಳು ಕರಿಛಾಯೆ ಪಡೆದು, ಆಕಾಶಬಿರಿದಂತೆ ಗುಡುಗಿ ಹನಿದರೂ ಮಳೆಯಾಗದಿದ್ದದ್ದು ನಮ್ಮ ಅದೃಷ್ಟ. ಬಲು ದೀರ್ಘ, ಏರುಜಾರಿನ, ಆರೆಂಟು ಬಾರಿ ತೊರೆಹೊಳೆಗಳಲ್ಲಿ ತಳಬುಳುಂಕಿಸಿ ನಡೆದು ನಡೆದೂ ಎಲ್ಲಾ ಕಥೆಗಳಂತೆ ಕೊನೆಗೆ ಜೀಪು ತಲಪಿದೆವು. ಮಾರ್ಗದರ್ಶಿಯನ್ನು ಬೀಳ್ಕೊಂಡು ಮನೆಗೆ ಮರಳಿದೆವು.

[Click the images to view it clearly.]

ವಿ.ಸೂ: ವನ್ಯ ಜೀವಿಗಳ ಬಗೆಗಿನ ನಿಮ್ಮ ಕುತೂಹಲಕ್ಕೆ ಪ್ರಾಯೋಗಿಕ ಉಣಿಸು ಬೇಕಿದ್ದರೆ, ಅದು ನಿಮ್ಮ ತುತ್ತಲ್ಲವಾದರೂ ಪರಿಚಯದಲ್ಲಿನ ತರುಣರಿಗೆ ದಾಟಿಸುವ ಉಮೇದು ನಿಮ್ಮಲ್ಲಿದ್ದರೆ ಪ್ರತಿಕ್ರಿಯೆ ಅಂಕಣವನ್ನು ಅರ್ಜಿಪೆಟ್ಟಿಗೆ ಮಾಡಿ. ಪ್ರಾಮಾಣಿಕ ವನ್ಯ ಚಟುವಟಿಕೆಗಳಿಗೆ ನನ್ನ ಪರಿಚಯದ ಬಳಗದಲ್ಲಿ ಅಸಂಖ್ಯ ಅವಕಾಶಗಳಿವೆ. ಒಟ್ಟು ಲೇಖನದ ಆಶಯಕ್ಕೆ ಪೂರಕವಾದ ಅಥವಾ ಚರ್ಚಾಯೋಗ್ಯವಾದ ಅನುಭವಗಳು ನಿಮ್ಮಲ್ಲಿದ್ದರೆ ಪೆಟ್ಟಿಗೆಯನ್ನೇ ಆಖಾಡ ಮಾಡಿ, ಏರಿಸಿ ನಿಮ್ಮ ಹುದ್ದರಿಯನ್ನ! ಮತ್ತೆ ಬರುವ ವಾರದ ತಾತಾರ್ ಸಾಹಸಯಾತ್ರೆ ಮರೆಯಬೇಡಿ!

[Click the images to view it clearly.]

View This Poll
surveys

ಹೋಗೋಣ ಬನ್ನಿ ತಾತಾರಿಗೆ
“ಕ್ರಿಸ್ಮಸ್ ರಜೆಗೆ ಬಸ್ಸೇರಿ ರಾಮೋಜಿ ಸಿಟಿ ನೋಡಲು ಹೊರಟಿದ್ದೇವೆ” ಗೆಳೆಯ ಮನೋಹರ ಉಪಾಧ್ಯ ಹೇಳಿದ್ದರು. ಆದರೆ ತೆಲಂಗಾಣದ ಗದ್ದಲಕ್ಕೆ ಹೆದರಿ, ಕಡೇ ಮಿನಿಟಿಗೆ ಯೋಜನೆ ಬದಲಿಸಿ, ಸ್ವಂತ ವಾಹನದಲ್ಲಿ ಊಟಿಯನ್ನು ಮುಟ್ಟಿ ಬಂದರು. ಎರಡೂವರೆ ಜನ (ಹೆಂಡತಿ ವಿದ್ಯಾ ಮತ್ತು ಮಗ ಸುಧನ್ವ, ಸಣ್ಣವನಾದ್ದರಿಂದ ೧/೨) ಮಾತ್ರ ತುಂಬಿಕೊಂಡು ಎರಡು ದಿನದ ಹೋ-ಬರುವ ಚಾಲನೆಯ ನಡುವೆ ಉಳಿದ ಎರಡೂವರೆ ದಿನದಲ್ಲಿ ಎಷ್ಟು ನೋಡಿರಬಹುದು, ಏನು ಅನುಭವಿಸಿರಬಹುದು ಎಂದು ಉಪೇಕ್ಷೆಯಲ್ಲೇ ವಿಚಾರಿಸಿದೆ. ಕಾಸರಗೋಡು, ಸುಲ್ತಾನ್ ಬತ್ತೇರಿಯ ದಾರಿ ಹಿಡಿದಿರಬೇಕು ಎಂಬ ನನ್ನೂಹೆ ತಪ್ಪಾಗಿತ್ತು. ಮನೋಹರ್ ಮೈಸೂರು ದಾರಿಯನ್ನೇ ಹಿಡಿದಿದ್ದರು. ೧೯೭೧ರಲ್ಲಿ ಇದೇ ಊಟಿವಲಯದಲ್ಲಿ ನನ್ನೊಂದು ಸಾಹಸ ಯಾತ್ರೆ ತೊಡಗಿದ್ದೂ ಮೈಸೂರಿನಿಂದ ಎಂದು ಮನಸ್ಸು ಒಮ್ಮೆಲೇ ಜಾಗೃತವಾಯ್ತು. ಮನೋಹರ್ ಮುಂದುವರಿದು “ನಾವ್ short cut, ಮಾಸ್ನಿಗುಡಿ ದಾರಿ ಹಿಡಿತ್ತ್” ಎಂದರು. ಅವರಿಗೆ ಬಲುದೂರದಿಂದಲೇ ಆಕಾಶಕ್ಕೆದ್ದ ದಿಗಂತದಂತೇ ತೋರುವ ಉದಕಮಂಡಲ ಶ್ರೇಣಿ ಒಟ್ಟಾರೆ ವಾಹನಸಾಧ್ಯ ಹತ್ತಿರದ ದಾರಿಯಲ್ಲಿ ಹತ್ತುವುದಷ್ಟೇ ಗುರಿ. ಒತ್ತಿನ ಕಾಡು, ಮಂಜುಮೋಡ ಮುಡಿದ ಬೆಟ್ಟಸಾಲುಗಳೆಲ್ಲ ದಾರಿ ಸಾಗುವಾಗ ದಕ್ಕುವ ಸಹಜ ಸುಂದರ ದೃಶ್ಯ ಮಾತ್ರ. ಸುಮಾರು ನಾಲ್ಕು ದಶಕದ ಹಿಂದೆ ನನಗೋ ‘ಮಸಣಿಗುಡಿ’ ಮಹಾಸಾಹಸಕ್ಕೆ ತಳಶಿಬಿರ. ಇನ್ನು ಕಾಡು, ನಡಿಗೆಯಲ್ಲಿ ಪಾರುಗಾಣಲೇಬೇಕಾದ ‘ದುಷ್ಟಮೃಗ’ಗಳ ಬೀಡು. ಮತ್ತೆ ಬೆಟ್ಟ, ಹತ್ತಿ ಜಯಿಸಲೇ ಬೇಕಾದ ತಾತಾರ್ ಶಿಖರದ ಸವಾಲು. ನನ್ನ ಉದಕಮಂಡಲದ ಪ್ರಥಮ ಸಂದರ್ಶನದ ನೆನಪು ಇನ್ನಿಲ್ಲದಂತೆ ಒತ್ತರಿಸಿ ಬಂತು. ಉಪಾಯ್ದರು ಸ್ವಭಾವತಃ ದಾಕ್ಷಿಣ್ಯಪರರು, ಮಾತು ಕಡಿಮೆಯವರು. ಇನ್ನು ಅನ್ಯರ ಅನುಭವಗಳಿಗೆ ಕಿವಿಯಾಗುವ ನೆಪದಲ್ಲಿ ತಮ್ಮ ಕಡತ ಬಿಚ್ಚುವವರ ‘ಮುದಿತನ’ವನ್ನು ನಾನು ಪ್ರಕಟಿಸಿಬಿಟ್ಟಿದ್ದರೆ ಫಜೀತಿಯಾಗುತ್ತಿತ್ತು; ಬಹಳ ಕಷ್ಟದಿಂದ ನಿಯಂತ್ರಿಸಿದೆ! ಆದರೆ ಅನೂಹ್ಯಲೋಕದ, ಅಸಂಖ್ಯಭಾವದ ಜಾಲಿಗರೇ ನಿಮ್ಮೆದುರು ನನಗೇನೂ ಸಂಕೋಚವಿಲ್ಲ. (ನಿಮಗೆ ಬೇಡವೆನ್ನಿಸಿದಾಗ ಇಲ್ಲೇ ಮೇಲಿನ ಬಲಮೂಲೆಯಲ್ಲಿ ಚಿಟಿಕೆ ಹೊಡೆದು, ಮೌನವಾಗಿದ್ದರೆ ನಾನು ಕೇಳಲುಂಟೇ!)

೧೯೬೯ಕ್ಕೆ ನನ್ನ ತಂದೆ (ಜಿಟಿ ನಾರಾಯಣ ರಾವ್) ಮೈಸೂರು ವಿವಿನಿಲಯದ ಕನ್ನಡ ವಿಶ್ವಕೋಶಕ್ಕೆ ವಿಜ್ಞಾನ ಸಂಪಾದಕರಾಗಿ ನೇಮನಗೊಳ್ಳುವುದರೊಡನೆ ನನಗೆ ಮಹಾರಾಜಾ ಕಾಲೇಜಿನಲ್ಲಿ ಸ್ನಾತಕ ವಿದ್ಯಾಭ್ಯಾಸಕ್ಕೆ ಸೇರ್ಪಡೆಯಾಯ್ತು. ಅಂದು ವಿಶ್ವಕೋಶ ಯೋಜನಾ ಬಳಗದಲ್ಲಿ ನಿಯಮಕ್ಕೆ ತಕ್ಕ ಕೆಲಸ ಆಗುತ್ತಲೇ ಇರಲಿಲ್ಲ; ಹೆಚ್ಚೇ ಆಗುತ್ತಿತ್ತು! ದೇಜಗೌ ಮಾಂತ್ರಿಕ ಪ್ರೇರಣೆ ಅಂಥದ್ದು. ಎಚ್ಚೆಸ್ಕೆ, ಪ್ರಹ್ಲಾದರಾವ್ ಆದಿಯಾಗಿ ಅವರು ಕಟ್ಟಿದ್ದ ಕೂಟಕ್ಕೆ ಕೆಲಸವೇ ಅಮಲು. ಬೆಳಕು ಹರಿದಲ್ಲಿಂದ ಕತ್ತಲು ಮುಸುಕುವವರೆಗೂ ಇವರು ಪ್ರೀತಿಯಿಂದ ದುಡಿದಿದ್ದರು. (ಅಚ್ಚುಕೂಟದ ಕೆಲಸಕ್ಕಾಗಿ ಬೆಂಗಳೂರಿಸಿದಾಗ ರಾತ್ರಿ ಪಾಳಿಯಲ್ಲೂ ಯಾವ ಹೆಚ್ಚಿನ ಆರ್ಥಿಕ ಪ್ರಯೋಜನ ಕಾರಣವಾಗದೇ ಶ್ರಮಿಸಿದ್ದರು) ಜಗತ್ತಿನ ಎಲ್ಲಾ ಆಗುಹೋಗುಗಳನ್ನೂ ಕನ್ನಡಕ್ಕೆ ಮೂಲದಿಂದ ತರುವಲ್ಲಿ, ಅನುಭವದ ಬಲದಲ್ಲಿ ರೂಢಿಸುವಲ್ಲಿ ಅಂದು ಪ್ರತಿಯೊಬ್ಬ ವಿಶ್ವಕೋಶ ನೌಕರನೂ ಬದ್ಧ. (ಸ್ವಾಮೀ ಚಿನ್ಮಯಾನಂದರು ತಮ್ಮ ಅಜ್ಞಾನದಲ್ಲಿ ಕೇಳಿದಂತೆ ಇಂಗ್ಲಿಷಿನ ಖ್ಯಾತ ವಿಶ್ವಕೋಶ – ಬ್ರಿಟಾನಿಕಾವೋ ಅಮೆರಿಕಾನವೋ ಒಂದರ ಅನುವಾದ ಅಲ್ಲ) ನನ್ನ ತಂದೆ (ಗುಡ್ಡಗಾಡಿನ) ಕೊಡಗಿನ ಹಿನ್ನೆಲೆ ಮತ್ತೆ ಎನ್.ಸಿ.ಸಿಯ ಅಧಿಕಾರಿಯಾಗಿದ್ದ ಅನುಭವದಲ್ಲಿ ಸಾಕಷ್ಟು ಗುಡ್ಡಬೆಟ್ಟಗಳನ್ನು ಹುಡಿಮಾಡಿದ್ದರು. ಸಹಜವಾಗಿ ಇವರಿಗೆ ಮೊದಲ ಸಂಪುಟದ ‘ಎವರೆಸ್ಟ್’ ನಮೂದಿನಲ್ಲಿ ಭೂವಿಜ್ಞಾನದೊಡನೆ ‘ಪರ್ವತಾರೋಹಣ’ ಕಾಣಿಸಿತು. ಕನ್ನಡವೆಷ್ಟು ಸಮೃದ್ಧವೋ ಕನ್ನಡಿಗರೂ ಅವಕಾಶ ಒದಗಿದರೆ ಅಷ್ಟೇ ಸಂಪನ್ನರು ಎಂದು ಜಾಹೀರುಗೊಳಿಸುವ ಹಠ ನನ್ನ ತಂದೆಗೆ ಯಾವತ್ತೂ ಇತ್ತು. ಸಹಜವಾಗಿ ಅವರು “ಯಾರಿದ್ದಾರೆ ಪರ್ವತಾರೋಹಣಕ್ಕೆ” ಎಂದು ಡಂಗುರಿಸಿದಾಗ ಮೈಸೂರಿನಲ್ಲೇ ಸಮರ್ಥವಾಗಿ ಸಿಕ್ಕವರು ವಿ. ಗೋವಿಂದರಾಜ್.

ವಿದ್ಯಾರ್ಥಿ ದೆಸೆಯಿಂದಲೇ ಸ್ಕೌಟ್ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಗೋವಿಂದರಾಜ್ ಜಿಲ್ಲಾ ಉಪ-ವರಿಷ್ಠನ ಸ್ಥಾನದವರೆಗೂ ಏರಿದವರು. (ಅಲ್ಲಿನ ರಾಜಕೀಯಗಳಿಗೆ ಬೇಸತ್ತು ಇವರು ಹೊರ ಬಾರದಿರುತ್ತಿದ್ದರೆ ರಾಷ್ಠ್ರಮಟ್ಟಕ್ಕೂ ಏರುವ ಯೋಗ್ಯತಾವಂತರು) ಪರ್ವತಾರೋಹಣದಲ್ಲಿ ಸ್ವತಃ ಪ್ರಥಮ ಎವರೆಸ್ಟ್ ಆರೋಹಿ ತೇನ್‌ಸಿಂಗರ ಶಿಷ್ಯ. ಇನ್ನೊಂದೇ ಹವ್ಯಾಸವಾದ ದೇಹದಾರ್ಢ್ಯ ಮತ್ತು ಕುಸ್ತಿಪಟುತನಗಳ ಮೇಳದಲ್ಲಿ ಗೋವಿಂದರಾಜ್ ಬಲುಬೇಗನೆ (೧೯೬೬) ಹಿಮಾಲಯದ ಸಾಹಸಯಾತ್ರೆಯೊಂದಕ್ಕೂ ಆಯ್ಕೆಯಾದರು. ಹಿಮಾಲಯದ ಚತುರಂಗಿ ಶ್ರೇಣಿಯಲ್ಲಿ ‘ಭಗೀರಥ – ೨’ ಶಿಖರ (ಸಮುದ್ರ ಮಟ್ಟದಿಂದ ೨೨,೦೦೦ ಅಡಿಗಳು) ಇವರ ಲಕ್ಷ್ಯ. ಅದರ ಮೇಲಿನ ವಿಜಯಘೋಷ ಇವರಿಗೆ ಸುಲಭದಲ್ಲಿ ದಕ್ಕಲಿಲ್ಲ. ವಿಪರೀತದ ಹವಾಮಾನದಲ್ಲಿ ಶಿಖರ ಸಾಧಿಸಿದವರು ಮೂವರಾದರೂ ಅವರೋಹಣದ ಅವಘಡದಲ್ಲಿ ಇವರೊಬ್ಬರೆ ಉಳಿದುಬಂದರು. (ವಿವರಗಳಿಗೆ ನೋಡಿ: ‘ನಾನು ಸಾವಿನ ದವಡೆಯಿಂದ ಪಾರಾದೆ’ ಕಸ್ತೂರಿ ಜನವರಿ ೧೯೬೮) ಅದರ ಪರಿಣಾಮವಾಗಿ ಕಾಲಿನ ಎಲ್ಲಾ ಬೆರಳುಗಳೂ ಕೈಯ ಎರಡು ಬೆರಳೂ ಹಿಮವ್ರಣದಲ್ಲಿ ಲೋಪವಾದರೂ ಗೋವಿಂದರಾಜರ ಒಳಗಿನ ಸಾಹಸಿ ಸುಮ್ಮನುಳಿಯಲಿಲ್ಲ. ಸಂಜೆ ಕಾಲೇಜಿನಲ್ಲಿ ಓದುತ್ತಾ ವೃತ್ತಿಯಾವಶ್ಯಕತೆಯಲ್ಲಿ ಜಾವಾ ಮೋಟಾರು ಸೈಕಲ್ ಕಾರ್ಖಾನೆಯಲ್ಲಿ ಸ್ವಾಗತಕಾರನಾಗಿ ದುಡಿಯುತ್ತಾ ದಖ್ಖಣ ಪರ್ವತಾರೋಹಣ ಸಂಸ್ಥೆಯನ್ನು ಕಟ್ಟಿದರು. ಪರ್ವತಾರೋಹಣದ ಬಗ್ಗೆ ರಂಜನೀಯ ಕಥೆಗಾರನಾಗಿ ಉಳಿಯದೆ ಮೈಸೂರಿನಲ್ಲಿ ಸಾಹಸಪ್ರಜ್ಞೆಯ ಹರಿಕಾರನಾಗಿ ದುಡಿದರು. (ಇಲ್ಲಿ ಅವರ ಅಭಿಮಾನಿಗಳಿಗೊಂದು ನಷ್ಟದ ನುಡಿ: ೨೦೦೯ರಲ್ಲಿ ಗೋವಿಂದರಾಜರು ಪ್ರಕೃತಿಯಲ್ಲಿ ಲೀನವಾದರು.) ಗೋವಿಂದರಾಜರಿಂದ ತಂದೆ ಲೇಖನ ಮಾತ್ರ ಪಡೆದದ್ದಲ್ಲ, ಪರ್ವತಾರೋಹಣದ ಒಲವು ತೀವ್ರವಾಗಿದ್ದ ಮಗನಿಗೆ (ಮೊದಲು ನನಗೆ, ಸ್ವಲ್ಪ ಕಾಲಾನಂತರ ನನ್ನ ತಮ್ಮ ಆನಂದನಿಗೂ) ಸಮರ್ಥ ಗುರುವನ್ನೂ ಕಂಡುಕೊಂಡರು.

ಶನಿವಾರ ಸಂಜೆ ಮೀಟಿಂಗು, ಆದಿತ್ಯವಾರ ಔಟಿಂಗು. ಚಾಮುಂಡಿ ಬೆಟ್ಟ, ಕರಿಘಟ್ಟ, ಪಾಂಡವಪುರದ ಕುಂತಿಬೆಟ್ಟದ ಜಾಡು ಮೇಡುಗಳು, ಬಂಡೆ ಕೊರಕಲುಗಳು ನಮಗೆ ಅಂಗೈ ರೇಖೆ. ಸೂರ್ಯನುದಯಿಸುವ ಮೊದಲು  ಬುತ್ತಿ, ನೀರು ಕಟ್ಟಿಕೊಂಡು ಸೈಕಲ್ ಏರಿ ಹೋದವರಿಗೆ ದೂರ, ವಿಶ್ರಾಂತಿಗಳ ಪರಿವೆಯೇ ಇರುತ್ತಿರಲಿಲ್ಲ. ಎರಡೋ ಮೂರೋ ಗಂಟೆಗೆ ಇನ್ನು ದೇಹ ತಡೆಯಲಾರದು ಎನ್ನುವ ಹೊತ್ತಿನಲ್ಲಿ, ಬುತ್ತಿಯೂಟ ಮುಗಿಸಿ, ಹೆಚ್ಚಿನುತ್ಸಾಹದಲ್ಲಿ ಮನೆಗೆ ಪೆಡಲ್ ಮೆಟ್ಟುತ್ತಿದ್ದೆವು. ಒಂದು ರಾತ್ರಿಯ ಶಿಬಿರವಾಸದ ಅನುಭವಕ್ಕೆ ರಾಮನಗರದ (ಸುಮಾರು ೯೨ ಕಿಮೀ) ಮತ್ತು ಮೇಲುಕೋಟೆಯ (ಸುಮಾರು ೩೮ ಕಿಮೀ) ಬಂಡೆಗಳೂ ನಮ್ಮ ಸೈಕಲ್ ಯಾನಕ್ಕೆ ದೂರವಾಗುತ್ತಿರಲಿಲ್ಲ. ಇವನ್ನು ಮೀರಿದ ವರ್ಷದ ವಿಶೇಷಕ್ಕೆ ಅಂದು, ಅಂದರೆ ೧೯೭೧ರ ಕೊನೆಯ ದಿನಗಳಲ್ಲಿ ನಮ್ಮ ಸಂಸ್ಥೆ ಆರಿಸಿಕೊಂಡದ್ದು ಉದಕಮಂಡಲ ಶ್ರೇಣಿಯ, ಹತ್ತುವಲ್ಲಿ ಅತ್ಯುನ್ನತಿಯನ್ನು ಪಡೆದ ಶಿಖರ – ತಾತಾರ್ (ಹೆಸರಿಗೆ ದಕ್ಷಿಣ ಭಾರತಕ್ಕೆ ದೊಡ್ಡದೆನಿಸಿದ ಶಿಖರ – ದೊಡ್ಡಬೆಟ್ಟವನ್ನು ತೇನವಿನಾ ಪಂಗುಂ ಲಂಘಯತೇ!).

ಜಾವಾ ಮೋಟಾರ್ ಸೈಕಲ್ ಕಾರ್ಖಾನೆಯ ಮಾಲಿಕ ಎಫ್. ಕೆ ಇರಾನಿ ದಖ್ಖಣ ಪರ್ವತಾರೋಹಣ ಸಂಸ್ಥೆಯ ಅಧ್ಯಕ್ಷ. ಇವರ ಪೂರ್ಣ ಪ್ರೋತ್ಸಾಹದೊಡನೆ ಆಗಸ್ಟ್ ತಿಂಗಳಲ್ಲೇ ಗೋವಿಂದರಾಜ್ ಮಿತ್ರನೊಬ್ಬನನ್ನು ಕೂಡಿಕೊಂಡು ಮೋಟಾರ್ ಸೈಕಲ್ಲಿನಲ್ಲಿ ಆ ವಲಯಕ್ಕೆ ಹೋಗಿ, ಮೋಜಣಿ ನಡೆಸಿ, ಡಿಸೆಂಬರಿಗೆ ದಿನ ನಿಶ್ಚಯ ಮಾಡಿಬಂದರು. ಡಿಸೆಂಬರ್ ಹನ್ನೆರಡರಂದು ಇಪ್ಪತ್ತು ಜನರ ತಂಡಕ್ಕೆ ಇರಾನಿಯವರಿಂದ ಔಪಚಾರಿಕ ಬೀಳ್ಕೊಡುಗೆ. ಮುಂದಿನ ಮೂರು ದಿನ ಮೂರುಕ್ಷಣ. ಗೋವಿಂದರಾಜ್ ತಂಡದಲ್ಲಿದ್ದರೂ ಆ ಸಾಹಸಯಾತ್ರೆಯ ನಾಯಕತ್ವವನ್ನು ಸುಜಾತರಿಗೆ ವಹಿಸಿದ್ದರು. ವಿಜ್ಞಾನ ಪದವೀಧರೆ, ಎನ್.ಸಿ.ಸಿಯ ಪೂರ್ಣಕಾಲಿಕ ಶಿಕ್ಷಕಿ ಸುಜಾತ ಸಂಸ್ಥೆಯ ಹಳೆಯ ಪೈಕಿಯಲ್ಲಿ ಮುಖ್ಯರು. ಹಿಮಾಲಯದಲ್ಲೇ ಪರ್ವತಾರೋಹಣ ಶಿಕ್ಷಣವನ್ನೂ ಪಡೆದಿದ್ದ ಈಕೆ ಶಿಸ್ತು ಸಂಯಮಗಳಿಗೆ ಇನ್ನೊಂದು ಹೆಸರು. ತಂಡದ ಉಗ್ರಾಣಿ – ರಮೇಶ, ಕುಶಲ ಬಾಣಸಿಗನೂ ಹೌದು. ಈತ ತಮ್ಮ ನರೇಶನ ಜತೆಯಲ್ಲಿ ನಾಯಕಿಗೆ ಸಾಮಾನು ಸರಂಜಾಮುಗಳ ಒಟ್ಟಣೆಯಲ್ಲಿ ತೊಡಗಿಕೊಂಡ. ಸುಮಾರು ಇಪ್ಪತ್ತೆರಡು ಮಂದಿಗೆ (ಸ್ಥಳೀಯವಾಗಿ ಸೇರಲಿದ್ದ ಮಾರ್ಗದರ್ಶಿಗಳು ಸೇರಿ) ಕನಿಷ್ಠ ಮೂರು ದಿನಕ್ಕೆ ಹೊಟ್ಟೆಪಾಡು, ಅದೂ ನಾವೇ ಹೊತ್ತು ಸಾಗಿಸುವುದರೊಡನೆ, ಅಟ್ಟು ರುಚಿಸಿಕೊಳ್ಳಬೇಕಾದ ರೀತಿಯಲ್ಲಿ ಸಂಗ್ರಹಿಸುವುದು ಸಾಮಾನ್ಯ ಕೆಲಸವಲ್ಲ.

ಸುಜಾತರ ಎನ್.ಸಿ.ಸಿ ಸಹೋದ್ಯೋಗಿ – ಕಾವೇರಿ ಕೂಡಾ ಹಿಮಾಲಯದಲ್ಲಿ ತರಬೇತಾದ ಪರಿಣಿತೆ, ನಮ್ಮ ಸಾಹಸಯಾತ್ರೆಯಲ್ಲೂ ಜತೆಗಾತಿ. ನಿರ್ಮಲಾ ಪ್ಯಾಟ್ರಿಕ್ (ಬಿ.ಎ., ಎಂ.ಎ ಗಳಲ್ಲಿ ನನ್ನ ಸಹಪಾಠಿ, ಇವಳೂ ಹಿಮಾಲಯದಲ್ಲಿ ಪರ್ವತಾರೋಹಣ ತರಬೇತು ಪಡೆದವಳು) ಮತ್ತು ಪದ್ಮ (ತಂಡದಲ್ಲಿ ಅತಿಕಿರಿ ಪ್ರಾಯದವಳು) ಇತರ ಮಹಿಳಾ ಸದಸ್ಯರು. ಪ್ರಾಯದಲ್ಲಿ ಎಲ್ಲರಿಗೂ ಹಿರಿಯ (ಉದ್ಯಮಿ) ಬಾಹುಸಾರ್ ಅಚ್ಚುತರಾವ್ ತಂಡದ ಉಪನಾಯಕ. ಈಗಾಗಲೇ ಹೆಸರಿಸಿದ ರಮೇಶ ನರೇಶರಲ್ಲದೆ ಜಸವಂತ, ಶ್ರೀನಿವಾಸ (ಪದ್ಮಳ ಅಣ್ಣ), ಜಾವೀದ್ ಸೇಟ್, ನಾಗರಾಜ್, ಗಿರೀಶ, ಜಯರಾಮ, ರವಿ, ಜಯರಾಮ ಪುರಾಣಿಕ್, ರುದ್ರಪ್ಪ ಮತ್ತು ಬಾಲಸುಬ್ರಹ್ಮಣ್ಯ ಇತರ ಸದಸ್ಯರು. ಇವರೆಲ್ಲರ ನೆನಪು ಸಂದ ಮೂವತ್ತು ವರ್ಷಗಳನಂತರ ಇಂದು ನನಗೆ ಹೇಗಾಯ್ತು, ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ ಆಶ್ಚರ್ಯವಿಲ್ಲ.

ಯಾತ್ರೆಗೆ ಮುನ್ನ ನಾಯಕಿ ಸದಸ್ಯರ ಒಲವರಿಯದೆ ಹೊಣೆ ಹಂಚುತ್ತ ಜಸವಂತನನ್ನು ‘ತಂಡದ ಲೇಖಕ’ ಎಂದಿದ್ದರು. ಜಸವಂತ ಏನೂ ಮಾಡಲಿಲ್ಲ ಬಿಡಿ. ಆದರೆ (ನಗಾಡಬೇಡಿ) ಅಂದು ನನ್ನ ಮಟ್ಟಿಗೆ ಅದೊಂದು ಕ್ರೌಂಚವಧಾ ಪ್ರಸಂಗ! ಯಾತ್ರೆ ಮುಗಿಸಿ ಮನೆಗೆ ಬಂದು ಕುಳಿತದ್ದೇ (ವಲ್ಮೀಕದೊಳಗಲ್ಲ) ಮೂವತ್ತು ನಲವತ್ತು ಪುಟದುದ್ದಕ್ಕೆ ‘ಕಾವ್ಯಧಾರೆ’ ಹರಿದಿತ್ತು. ಮಾರಣೇ ದಿನ ನಮ್ಮ ಪರ್ವತಾರೋಹಣ ಸಂಸ್ಥೆಯ ವಠಾರದಲ್ಲಿ ನಾವೇ ಭಾಗಿಗಳು ಸಂತೋಷ ಹಂಚಿಕೊಳ್ಳಲು ಸೇರಿದ್ದೆವು. ಹುತ್ತವನ್ನು ಹಿಮಾಲಯ ಮಾಡುವ ಮಾತುಗಳ ಎಡೆಯಲ್ಲಿ, ನನ್ನ ಬರವಣಿಗೆ ವಾಚನ. ಅಳಿದೂರಿಗೆ ಉಳಿದವನೇ ಗೌಡ! ಗೋವಿಂದರಾಜ್ ಆದಿಯಾಗಿ ಎಲ್ಲರೂ ಆ ಬರವಣಿಗೆ ಪರಿಪೂರ್ಣಗೊಂಡು, ಪುಸ್ತಕವಾಗಿ ಪ್ರಕಟವಾಗಲೇ ಬೇಕು ಎಂದು ಆಶಿಸಿದರು, ಹಾಗೇ ಆಯ್ತು. (ವಿವರಗಳಿಗೆ ನೋಡಿ: ಇನ್ನು ಬರುವುದಿಲ್ಲ ಡೀವೀಕೆ)

‘ತಾತಾರ್ ಶಿಖರಾರೋಹಣ’ (೧೯೭೩) ಎಂಬತ್ನಾಲ್ಕು ಪುಟಗಳ (ಐದು ಹಾಲುಕಾಗದದಲ್ಲಿ ಇಪ್ಪತ್ತೊಂದು ಚಿತ್ರಗಳ ಸಹಿತ) ಸರಳ ಗದ್ಯ ಪ್ರವಾಸಕಥನ (ಬೆಲೆ? ಕೇವಲ ಎರಡೂವರೆ ರೂಪಾಯಿ). ಪ್ರಕಟಣಪೂರ್ವ ಪುಸ್ತಕ ಓದಿ, ಪ್ರಮಾಣಪತ್ರ ಕೊಟ್ಟ ಖ್ಯಾತ ಲೇಖಕ ಎನ್. ಪ್ರಹ್ಲಾದರ ರಾಯರದೇ ಬೆನ್ನುಡಿ. ಅವರು ಬರೆದರು “ಪುಸ್ತಕದುದ್ದಕ್ಕೂ ಪರ್ವತಾರೋಹಣ ತಂತ್ರವನ್ನು, ಸಾಮಾನ್ಯ ಓದುಗರಿಗೆ ಹೊರೆಯಾಗದಂತೆ, ಈ ಲೇಖಕರು ಅವಧರಿಸಿದ್ದಾರೆ. ಜೀವನದ ರಸ ಹಾಗೂ ವಿಷ ನಿಮಿಷಗಳನ್ನು ಇವರು ನಿರಪೇಕ್ಷ ದೃಷ್ಟಿಯಿಂದ ಅವಲೋಕಿಸಿ, ಆಕರ್ಷಕವಾಗಿ ನಿರೂಪಿಸಬಲ್ಲರು ಎನ್ನುವುದಕ್ಕೆ ಈ ಪುಸ್ತಕ ಸಾಕ್ಷಿ. ಪರ್ವತಾರೋಹಣವೇ ಆಗಲಿ, ಅದರ ನಿರೂಪಣೇಯೇ ಆಗಲಿ ಎಂದೂ ಕಳಾಹೀನವಾಗವು – ಯಾರು ಮತ್ತು ಯಾವ ಬದಿಯಿಂದ ಏರುತ್ತಾರೆ ಎನ್ನುವುದರ ಮೇಲೆ ಅವು ಅವಲಂಬಿಸಿವೆ.” ಹೋಂ ಗಾರ್ಡ್ಸ್ ಭವನದಲ್ಲಿ ಎಫ್. ಕೆ. ಇರಾನಿಯವರ ಅಧ್ಯಕ್ಷತೆಯಲ್ಲಿ ಪ್ರೊ| ದೇ. ಜವರೇಗೌಡರು  ಅದಕ್ಕೊಂದು ಭರ್ಜರಿ ಅನಾವರಣದ ನೂಕು ಬಲವನ್ನೂ ಕೊಟ್ಟರು. ಹಾಗಾದರೆ ಕಥನ ಹೇಗಿದೆ ಕುತೂಹಲವೇ?

ಮನೋಹರ ಉಪಾಧ್ಯರ ನೆಪದಲ್ಲಿ ಇಷ್ಟುದ್ದ ಕೊರೆದು, ನನ್ನೊಂದು ಪುಸ್ತಕ ‘ಪುಷ್ ಮಾಡುತ್ತಿದ್ದೇನೆ’ ಎಂದು ನಿಮಗನ್ನಿಸಿದ್ದರೆ ಕ್ಷಮಿಸಿ, ಅದು ಪ್ರತಿಗಳು ಮುಗಿದು ವರ್ಷ ಇಪ್ಪತ್ತು ಸಂದವು. ನಿಮಗಿನ್ನೂ ಅದರಲ್ಲಿ ಕುತೂಹಲವುಳಿದಿದ್ದರೆ ಇಲ್ಲೇ ಕೆಳಗೆ ಮಾಯಾಪೆಟ್ಟಿಗೆಗೆ ನಾಲ್ಕು ಮಾತು ಹಾಕಿ. ಕಾಲಕೋಶವನ್ನು ನಲ್ವತ್ತು ವರ್ಷಗಳ ಹಿಂದಕ್ಕೆ ಸಜ್ಜುಗೊಳಿಸಿ, ಮುಂದಿನವಾರ ಘೋಷವಾಕ್ಯ ಹಾಕುತ್ತೇನೆ “ಹೋಗೋಣ ಬನ್ನಿರೋ ತಾತಾರಿಗೆ.”

ಚಿತ್ರ ಕೃಪೆ: ಪುಸ್ತಕದಲ್ಲೂ ಪ್ರಕಟವಾಗಿದ್ದ ಹಳೆಯ ಚಿತ್ರಗಳು: ರಮೇಶ್. ಉದಕಮಂಡಲ ಶ್ರೇಣಿ: ಡಾ| ಮನೋಹರ ಉಪಾಧ್ಯ.

ಛಲದೊಳ್ ದುರ್ಯೋದನಂ!
‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು’ – ಸ್ವಾಮಿ ಶಿವಾನಂದರ ಉಕ್ತಿಯನ್ನು ಅಕ್ಷರಶಃ ನಂಬಿ, ಕೇಳುವ ಕಿವಿಗಳಿಗೆ ಧಾರಾಳ ಹೇಳುತ್ತಿದ್ದ ಮತ್ತೆ ತನ್ನ ಮುಕ್ಕಾಲು ಶತಮಾನದ ಬಾಳಿನುದ್ದಕ್ಕೂ ಯಾರೂ ಸಂದೇಹಪಡದಂತೆ ಹಾಗೇ ಬಾಳಿದ ಜಿ.ಟಿ. ಈಶ್ವರ ನನ್ನ ಚಿಕ್ಕಪ್ಪಂದಿರಲ್ಲಿ (ನಾಲ್ವರಲ್ಲಿ) ದೊಡ್ದವ, ನನ್ನ ತಂದೆಗಿಂತ ಎಂಟೇ ವರ್ಷ ಚಿಕ್ಕವ. [ನೀವು ತಪ್ಪು ತಿಳಿಯುವ ಮೊದಲು ಒಂದು ಸ್ಪಷ್ಟನೆ: ನಮ್ಮ ಕುಟುಂಬದಲ್ಲಿ ಅದೂ ಸಣ್ಣ ಕಕ್ಷೆಯೊಳಗೆ ಯಾವ ತರ್ಕಗಳೂ ಇಲ್ಲದೆ, ಪ್ರೀತಿ, ಗೌರವಗಳಿಗೆ ಕುಂದಿಲ್ಲದೆ ರೂಢಿಸಿರುವಂತೆ ಈತನೂ ನಮ್ಮಿಂದ ಏಕವಚನದ ಮತ್ತು ನೇರ ಹೆಸರಿನ ಸಂಬೋಧನೆಗೇ ಒಳಗಾದವ.] ಈಶ್ವರ ನೆಚ್ಚಿದ ಇನ್ನೊಂದು ಸ್ವಾಮಿ ವಿವೇಕಾನಂದ. ಅವರು ಹೇಳಿದ್ದನ್ನು ಸ್ವಲ್ಪ ಆಚೀಚೆ ಮಾಡಿ ‘ದೃಢ ಮನಸ್ಸಿಗೊಂದು ಉಕ್ಕಿನ ದೇಹ’ ರಚಿಸಿ, ಕಾಪಾಡುವುದರಲ್ಲಿ ಜೀವಮಾನವನ್ನೇ ಮೀಸಲಿಟ್ಟವನೂ ಈ ಈಶ್ವರ! ರಜೆಗೆ ಅಜ್ಜನಮನೆಗೆ (ಮಡಿಕೇರಿಯಿಂದ ಆರು ಮೈಲು ದೂರದ ಮೋದೂರು) ಹೋಗುವ ನನ್ನಂಥವರಿಗೆ (ಬಾಲರಿಗೆ) ಈಶ್ವರ ಬಲುದೊಡ್ಡ ಆಕರ್ಷಣೆ, ಆದರ್ಶ. ನನಗೆ ಬೆಳಗಾಗುವ ಎಷ್ಟೋ ಮೊದಲು (ನಾಲ್ಕೋ ಐದೋ ಗಂಟೆಗೆ) ಈತ ಎದ್ದು, ಕೊರೆಯುವ ಚಳಿಯಲ್ಲಿ ತಣ್ಣೀರು ಮಿಂದು, ಗಂಟೆಗಟ್ಟಳೆ ಯೋಗಾಸನ ಮಾಡಿ, ವಿಚಿತ್ರಪಾಕದ (ಉಪ್ಪು, ಕಾರ, ಹುಳಿಗಳ ಹಂಗಿಲ್ಲದ ಆದರೆ ಎಲ್ಲ ಜೀವಾತುಗಳ ಸಂಗಮವೆನಿಸಿದ ಮಡ್ಡಿ) ಬುತ್ತಿ ಕಟ್ಟಿಕೊಂಡು ಮಡಿಕೇರಿಯ ಪಾಲಿಟೆಕ್ನಿಕ್ಕಿಗೆ ವಿದ್ಯಾರ್ಥಿಯಾಗಿ ಓಡುತ್ತಿದ್ದ. ಅದಕ್ಕೂ ಮಿಗಿಲಾಗಿ  ಗಾಢಾಂಧಕಾರದಲ್ಲಿ ಮತ್ತೆ ಒಂಟಿಯಾಗಿ ಆತ ಮರಳುತ್ತಿದ್ದನಲ್ಲಾ ಅದು, ಇನ್ನಷ್ಟು ಪರಿಣಾಮ ಬೀರುತ್ತಿತ್ತು. ಅಂದ ಕಾಲತ್ತಿಲೆ ಮಡಿಕೇರಿಯೇ ಕತ್ತಲಮೂಟೆ. ಆ ಸಣ್ಣ ಪೇಟೆ ಕಳೆದದ್ದೇ ಸಿಗುವ ಕಾಫಿ, ಏಲಕ್ಕಿ ತೋಟಗಳೆಂದರೆ ರಾತ್ರಿಯಲ್ಲಿ ಗೊಂಡಾರಣ್ಯವೇ. ಅದರ ನಡುವೆ ನಡುಗುವ ದಾರಿಯಲ್ಲಿ ಇನ್ನಷ್ಟು ಭಯಹುಟ್ಟಿಸುವ ಹರಿಶ್ಚಂದ್ರ ಘಾಟ್ (ಬ್ರಾಹ್ಮಣರ ಶ್ಮಶಾನ) ದಾಟಿ ಬರಬೇಕು. ಇನ್ನು ಭೋರ್ಗರೆವ ಮಳೆಗಾಲದಲ್ಲಿ, ಸೊಂಯ್‌ಗುಟ್ಟುತ್ತ ಮೂಳೆಯಾಳಕ್ಕಿಳಿಯುವ ಚಳಿಗಾಳಿಗಳ ಇರಿಚಿಲಿನ ಹೊಡೆತದಲ್ಲಿ, ಇಂಬುಳ ಹಾವುಗಳಿಂದ ಹಿಡಿದು ಅಬ್ಬರಿಸುವ ಅರ್ಬುತನವರೆಗೆ ಏನೂ ಅಟಕಾಯಿಸಬಹುದಾದ ಪರಿಸರದಲ್ಲಿ ಕೂದಲೂ ಕೊಂಕದೆ ಬರುವ ಈಶ್ವರ ನನಗೆ ವಿವರಿಸಲಾಗದ ಅಚ್ಚರಿ. ಹಾಗೆ ಬರುವಲ್ಲಿ ಆತ ದಿನಕ್ಕೊಂದು ಭೂತಕ್ಕೆ ಹಾಕಿದ ಪಟ್ಟು, ಪಿಶಾಚಕ್ಕೆ ಕೊಟ್ಟ ಪೆಟ್ಟು ಕೇಳುತ್ತಾ ನನ್ನ ನಿದ್ರೆ ಚಟ್ಟು. ಈಶ್ವರ ಸಾವಿಲ್ಲದ ಸರದಾರ, ಅಲೆದಾಡುವ ಭೂತ, ಸಾಕ್ಷಾತ್ ಫ್ಯಾಂಟಮ್! ಉಳಿದ ವೇಳೆಯಲ್ಲೂ ಮಕ್ಕಳು ಅಟಕಾಯಿಸಿದಾಗೆಲ್ಲ ಆತ ಮತ್ತಷ್ಟು ರೋಚಕವಾಗಿ ಬಿತ್ತರಿಸುತ್ತಿದ್ದ ಸೈನ್ಯದ ಪ್ರಸಂಗಗಳು, ನೆನಪಿಸಿಕೊಳ್ಳುತ್ತಾ ತಾನೇ ಉಸಿರು ಸಿಕ್ಕಿಹೋಗುವಂತೆ ನಗುತ್ತಿದ್ದ ಜೋಕುಗಳು, ಅಲ್ಲಿ ಆತ ನೋಡಿದ ಜಗಜಟ್ಟಿ ಗಾಮಾ ದಾರಾಸಿಂಗ್ ಕಿಂಗ್ ಕಾಂಗ್ ಮುಂತಾದವರ ಮಲ್ಲಯುದ್ಧದ ಬಿಡಿಬಿಡಿ ಸನ್ನಿವೇಶಗಳು ಕೇಳಿದಷ್ಟೂ ಮುಗಿಯದು. (ಈಚೆಗೆ ಆತನ ಮನೆಗೆ ಹೋಗಿ ಬಂದ ಮಕ್ಕಳು ಕೇಳುವುದಿದೆ “ಈಶ್ವರಜ್ಜನ ಮನೆ ಅಡಿಗೆ ಮನೆ ಕಿಟಕಿಯಿಂದ ದೋಸೆ ಕೇಳುವ ಭೂತದ ಕೈ ಬಂದದ್ದು ನಿಜವಾ?”) ಈಶ್ವರ ಅಮರ ಕತೆಗಳ ಖಜಾನೆ.

ಓದು ಎಸ್ಸೆಸ್ಸೆಲ್ಸಿ ದಾಟುವಾಗ ಈಶ್ವರ ಯಾಕೋ ಏನೋ ಮನೆಯಲ್ಲಿ ತಿಳಿಸದೆ (ಓಡಿಹೋಗಿ) ಭಾರತೀಯ ಸೈನ್ಯ ಸೇರಿದ್ದ. ವರ್ಷ ಒಂದೋ ಎರಡೋ ಕಳೆಯುವಾಗ ಸೈನ್ಯದಲ್ಲಿ ಆದರ್ಶಕ್ಕೂ ವಾಸ್ತವಕ್ಕೂ ಇರುವ ಅಗಾಧ ಕಂದರವನ್ನು ಪಾರುಗಾಣಿಸಲಾಗದೆ ಈಶ್ವರ ನಾಗರಿಕ ಜೀವನಕ್ಕೆ ಮರಳುವ ಕೊರಗಿನಲ್ಲಿ ತನ್ನ ಇರವನ್ನೂ ಪ್ರಕಟಿಸಿದ, ಹಂಬಲವನ್ನೂ ತೋಡಿಕೊಂಡ. ಆದರೆ ಅವನೇ ಬರೆದುಕೊಟ್ಟ ಏಳೋ ಎಂಟೋ ವರ್ಷದ ದುಡಿಯುವ ಒಪ್ಪಂದ (ಬಾಂಡು) ಮೀರಲಾಗದೆ ಬಲುಬನ್ನ ಪಟ್ಟೇ ಹೊರಬಂದ. ಮತ್ತೆ ಮಡಿಕೇರಿ ಪಾಲಿಟೆಕ್ನಿಕ್ಕಿನಲ್ಲಿ ಶಾರ್ಟ್ ಹ್ಯಾಂಡ್ ಮತ್ತು ಟೈಪಿಂಗ್ ಕಲಿತದ್ದು. ಆ ಪದವಿ + ಮಾಜೀ ಸೈನಿಕ + (ಅಣ್ಣ) ಮೇಜರ್ ಜಿಟಿ ನಾರಾಯಣ ರಾವ್ ಶಿಫಾರಸಿನಲ್ಲಿ ಆತನಿಗೆ ಎನ್.ಸಿ.ಸಿ ಆಫೀಸಿನಲ್ಲಿ ಗುಮಾಸ್ತಗಿರಿ ಸಿಕ್ಕಿತು. ಅದರಲ್ಲಿ ಮೂರೂರು ಸುತ್ತಿ, ಮೈಸೂರಿನಲ್ಲಿ ನೆಲೆಸಿದ. ಆ ಹೊತ್ತಿಗೆ ಈಶ್ವರನ ನಿಜ ವ್ಯಕ್ತಿತ್ವವನ್ನು ಸ್ವಲ್ಪವಾದರೂ ತಿಳಿಯುವ ಹಂತಕ್ಕೆ ನಾನು ಬೆಳೆದಿದ್ದೆ.

ಸರಳ ಸಾತ್ವಿಕ ಜೀವನ, ಪ್ರಾಮಾಣಿಕತೆ, ಪರೋಪಕಾರಗಳೆಲ್ಲ ಈಶ್ವರನ ಉಸಿರುಸಿರಿನಲ್ಲೂ ಇತ್ತು. ಆದರೆ ಸ್ವಧರ್ಮ ರಕ್ಷಣೆಗಾಗಿ (ಖಂಡಿತವಾಗಿಯೂ ಇತರರನ್ನು ವಂಚಿಸಲು ಅಲ್ಲ) ಸುಳ್ಳು ಹೇಳುವುದನ್ನು ಆತ ನಮಗೆ ಬಾಲಾಪ್ಯದಲ್ಲಿ ಕಥೆ ಹೇಳಿದಷ್ಟೇ ಪರಿಣತಿಯಿಂದ ಹೇಳುತ್ತಿದ್ದ. ಇತರರಿಗೆ  ತೊಂದರೆ ಕೊಡದ ಸುಳ್ಳಿಗೊಂದೇ ಉದಾಹರಣೆ ಸಾಕು. ಈಶ್ವರ ಬೆಂಗಳೂರಿನಲ್ಲಿದ್ದಾಗ ಒಂದು ಮನೆಯ ಮಾಳಿಗೆಯ ಕೋಣೆಯೊಂದನ್ನು ಬಾಡಿಗೆಗೆ ಹಿಡಿದಿದ್ದ. ಕೆಳಗಿದ್ದ ವಾನರತಿ (ಮನೆಯ Ownerನ ಹೆಂಡತಿ) ಯಾವುದೋ ಹಬ್ಬಕ್ಕೆ ‘ಪಾಪ, ಒಂಟಿಜೀವ’ ಎಂದು ಪಾಯಸ ಕೊಡಲು ಬಂದರಂತೆ. ದಾರಾಸಿಂಗನನ್ನೂ ಒಂದು ಕೈ ನೋಡುವ ಹಾಗಿದ್ದ ಈಶ್ವರನಿಗೆ ಪಾಯಸ ಎಂದರೆ ಭಾರೀ ಇಷ್ಟವೂ ಹೌದು. ಆದರೆ ಸ್ವಾಭಿಮಾನ ಬಿಡಬೇಕಲ್ಲಾ “ಓ ಸಾರಿ, ನನಗೆ ಡಯಾಬಿಟಿಸ್” ಎಂದು ಬಿಟ್ಟ. ಇನ್ನೊಮ್ಮೆ ಆ ಕರುಣಾಮಯಿ ಈತನಿಗೆ ಶುದ್ಧ ತುಪ್ಪದನ್ನ ಕೊಡಬಂದಳು. ಈತ ವ್ಯಾಯಾಮದಂಗವಾಗಿ ತಾರಸಿಯ ಮೇಲೆ ಸ್ಕಿಪ್ಪಿಂಗ್ ಮಾಡಿದರೆ ಹಳೆ ಕಟ್ಟಡ ಜರಿದು ಬಿದ್ದೀತೆಂದು ಯಾವುದೋ ಪಾರ್ಕಿನಲ್ಲಿ ಭಾರೀ ‘ದಮ್ಮಾಸ್’ ಹಾಕಿದ್ದರಿಂದ ಬೆವರಿನಿಂದ ತೊಯ್ದಿದ್ದ. ತೆರೆದ ಬಾಯಿಗೆ ಘೋಷಿಸಿಬಿಟ್ಟ “ಅಯ್ಯೋ ಕೊಲೆಸ್ಟ್ರಾಲ್! ನಂಗೆ ಹಾರ್ಟ್ ಟ್ರಬಲ್ಲ್.” ಪಾಪ, ಆಕೆಗೆ ವಿಷ ಒಡ್ಡಿದಷ್ಟೇ ಸಂಕಟವಾಗಿರಬೇಕು. ಹೀಗೆ ಆಕೆಯ ಪ್ರತಿ ಉಪಚಾರಕ್ಕೆ ವಿರುದ್ಧವಾದ ಮರಣಾಂತಿಕ ಕಾಯಿಲೆ ಹೆಸರಿಸುವ ಕಷ್ಟಕ್ಕೆ ಹೆದರಿ ಈಶ್ವರ ಬೇಗನೆ ಮನೆಯನ್ನೇ ಬದಲಿಸಿಬಿಟ್ಟ!

ಸೈನ್ಯದಲ್ಲಿ ಚೀನಾ ಯುದ್ಧ, ಗೋವಾ ವಿಮೋಚನೆಗಳಲ್ಲಿ ಮುಂಚೂಣಿಯ ಅನುಭವ ಈಶ್ವರನಿಗಾಗಿತ್ತು. ಅದರ ಜೊತೆಗೆ ಸಿಕ್ಕಿದ ತೀರಾ ಸೀಮಿತ ಅರ್ಥಗ್ರಹಣದ ಓದು (ಹಿಮಾಲಯನ್ ಬ್ಲಂಡರ್ – ಬ್ರಿಗೆಡಿಯರ್ ದಳ್ವಿ ಬರೆದ ಪುಸ್ತಕ ಈತನ ಬಲುಪ್ರಿಯ ಸಂಗ್ರಹದಲ್ಲೊಂದು) ಈಶ್ವರನನ್ನು ಉಗ್ರ ದೇಶಪ್ರೇಮಿ (ಹಾಗೂ ಬದ್ಧ ನೆಹರೂ ವೈರಿಯನ್ನಾಗಿಯೂ) ಹಾಗೂ ಆತನೇ ವ್ಯಾಖ್ಯಾನಿಸಬಹುದಾಗಿದ್ದ ‘ಸನಾತನ ಮೌಲ್ಯಗಳ’ ಪ್ರತಿಪಾದಕನನ್ನಾಗಿಯೂ ರೂಪಿಸಿತ್ತು. ಹೆಣ್ಣು/ ಮದುವೆ ಎಂಬ ಕಲ್ಪನೆಗಳೇ ಆತನ ಕೋಶದಲ್ಲಿರಲಿಲ್ಲ. ನನ್ನ ತಾಯಿ, ಆತನ ಸೋದರ ಮಾವನ ಮಗಳೇ ಆದ್ದರಿಂದ ಮತ್ತು ಬಾಲ್ಯದಿಂದ ಒಡನಾಟ ಇದ್ದುದರಿಂದ ಮೈಸೂರಿನ ನಮ್ಮ (ಅತ್ರಿ) ಮನೆಗೆ ಆತ ಧಾರಾಳ ಬರುವುದಿತ್ತು. ಮತ್ತೆ ನನ್ನ ತಂದೆಯ ಬಗ್ಗೆ ಆತನಿಗೆ ಲಕ್ಷ್ಮಣ ನಿಷ್ಠೆ. ಅವರು ಏನು ಹೇಳಿದರೂ ಈತನಿಗೆ ಶಿರೋಧಾರ್ಯ! ಆದರೆ ಸಾರ್ವಜನಿಕದಲ್ಲೆಲ್ಲೂ ಅಪರಿಚಿತರಿಗೆ ತಾನು ಇಂಥವರ ಸಂಬಂಧಿ ಎಂದು ಹೇಳಿಕೊಳ್ಳದ ವಿನಯಿ ಮತ್ತು ಸ್ವಾಭಿಮಾನಿ. (ಅವನ ಮಿತಿ ಗೊತ್ತಿದ್ದು ತಂದೆ ಅವನಿಗೆ ಕೆಲಸ ಹೇಳುತ್ತಿದ್ದದ್ದು ಕಡಿಮೆ) ತಂದೆಯನ್ನೊಮ್ಮೆ ತೀವ್ರ ಅನಾರೋಗ್ಯ ಕಾಡಿ, ವಾರಗಟ್ಟಳೆ ಆಸ್ಪತ್ರೆಯಲ್ಲಿರುವಂತಾಗಿದ್ದಾಗ ಅಕ್ಷರಶಃ ಅಣ್ಣನ ಚರಣಸೇವಕನಾಗಿದ್ದ ಈಶ್ವರ.

ಊರಿನಲ್ಲೇನಾದರೂ ವಿಶೇಷ ಸಮಾರಂಭಗಳಿದ್ದು ದಿನಗಟ್ಟಲೆ ಅತ್ರಿಗೆ ಬೀಗ ಜಡಿದು ಬರಬೇಕೆಂದಿದ್ದರೆ ಮನೆಯ ಇಪ್ಪತ್ನಾಲ್ಕು ಗಂಟೆ ಪಹರೆಗೆ ಈ ಮಾಜೀ ಸೈನಿಕ ಬಲು ಸಂತೋಷದಿಂದ ಹಾಜರ್. (ಆ ಸಮಾರಂಭಗಳಲ್ಲಿ ಆತ ಭಾಗಿಯಾಗುವ ಮಾತಂತೂ ಊಹಾತೀತ.) ಮತ್ತದನ್ನು ಒಟ್ಟಾರೆ ತನ್ನ ಭೋಳೇತನವನ್ನು ಎಲ್ಲೂ ಹೇಳಿಕೊಳ್ಳುವ, ಒಪ್ಪಿಕೊಳ್ಳುವ ಪ್ರಾಮಾಣಿಕತೆಯೂ ಆತನಲ್ಲಿತ್ತು. ಅತ್ರಿಗೆ ಸೊಸೆಯಂದಿರು, (ಹೆಣ್ಣು) ಮೊಮ್ಮಕ್ಕಳು ಬರತೊಡಗಿದೊಡನೆ (ಅಂದರೆ ನಮ್ಮ ಮೂವರಿಗೆ ಮದುವೆ, ಮಕ್ಕಳಾಗುತ್ತಿದ್ದಂತೆ) ಈತ ಅಷ್ಟಷ್ಟು ದೂರವಾಗುತ್ತಿದ್ದ. ನನ್ನ ಹೆಂಡತಿಯೋ (ದೇವಕಿ) ತಮ್ಮನ ಹೆಂಡತಿಯೋ (ರುಕ್ಮಿಣಿ) “ಈಶ್ವರ ಮಾವಾ”ಂತ, ತಮ್ಮನ ಮಗಳು ಅಕ್ಷರಿ “ಈಶ್ವರಜ್ಜಾ”ಂತ ಅವರ ಮನೆಗೆಲ್ಲಾದರೂ ಹೋಗಿಬಿಟ್ಟರೆ ಅವನ ಗಡಿಬಿಡಿ ನಿಜವಾಗಿಯೂ ನೋಡುವಂತದ್ದೇ. ತವರು ನೆಲವೆಂದೂ ನೈಸರ್ಗಿಕ ಆರೋಗ್ಯಧಾಮವೆಂದೂ ಮೋದೂರಿನ ಮೇಲೆ ಆತನಿಗೆ ವಿಶೇಷ ಮೋಹವೇನೋ ಇತ್ತು. ಆದರೆ ತಮ್ಮ, ದಿವಾಕರನ ಹೆಂಡತಿ ಅಲ್ಲಿರುವಾಗ ಈ ಋಷ್ಯಶೃಂಗ ಅಲ್ಲಿಗೆ ಹೋಗುವುದುಂಟೇ! ನಮ್ಮ ಮನೆಯೊಳಗೇ ಸಣ್ಣ ಪುಟ್ಟಪುಟ್ಟ ನೆಪಮಾಡಿ (ದೊಡ್ಡ ಕಾರ್ಯಕ್ರಮಗಳೆಂದು ಗೊತ್ತಾದರೆ ಆತ ಊರೇ ಬಿಟ್ಟೋಡಿಬಿಡುತ್ತಿದ್ದ!) ವಿಶೇಷ ಊಟಕ್ಕೆ ಆತನನ್ನು ಕರೆಸುವುದಿತ್ತು. ಸ್ವತಃ ಆತನ ಅಡುಗೆ ಉದ್ದೇಶಪೂರ್ವಕವಾಗಿ ಭಯಂಕರ! ಹಿಂದೆ ಪಾಲಿಟೆಕ್ನಿಕ್ಕಿಗೆ ಹೋಗುವಾಗ ಆತನೇ ಮಾಡಿಕೊಳ್ಳುತ್ತಿದ್ದ ವಿಚಿತ್ರಪಾಕವನ್ನೇ ಪರಿಷ್ಕರಿಸಿ ಬಳಸುತ್ತಿದ್ದ. (ಪ್ರಯೋಗಗಳು ಅಸಂಖ್ಯ, ಪರಿಣಾಮ ಶೂನ್ಯ!) ಆರೋಗ್ಯ, ದೇಹದಾರ್ಢ್ಯಕ್ಕೆ ವಿರೋಧವಾದ್ದೆಲ್ಲವೂ ಆತನಿಗೆ ಬುದ್ಧಿಪೂರ್ವಕವಾಗಿ ವರ್ಜ್ಯ. ಅನಿವಾರ್ಯವಾದಲ್ಲಿ ನಮ್ಮ ವಲಯದ ಸಾಂಪ್ರದಾಯಿಕ ರುಚಿಗಳು, ಮುಖ್ಯವಾಗಿ ಊಟ ಅವನೆಂದೂ (ಅವನೇ ಹೇಳಿಕೊಳ್ಳುತ್ತಿದ್ದಂತೆ, ತನ್ನ ನಾಲಗೆ ಚಪಲವನ್ನೂ) ತಿರಸ್ಕರಿಸಿದ್ದಿಲ್ಲ, ಅಷ್ಟೇಕೆ ಕಡಿಮೆ ತಿಂದದ್ದೂ ಇಲ್ಲ! ಪೊಗದಸ್ತು ಊಟದ ಕೊನೆಯಲ್ಲಿ (ನನ್ನ ತಮ್ಮ) ಅನಂತ ಎಂದಿನ ಆತ್ಮೀಯ ಶೈಲಿಯಲ್ಲಿ “ಈಶ್ವರಾ ಈ ಮುದ್ದೇಹುಳಿ ಉಳ್ದುಹೋಯ್ತಲ್ಲಾ. ಇನ್ನು ತೆಂಗಿನಗುಂಡಿಗೇ ಹಾಕಬೇಕು” ಎಂದೇನಾದರೂ ಹೇಳಿಬಿಟ್ರೆ ಈಶ್ವರ ಈಗಾಗಲೇ ಮೂಗಿನವರೆಗೆ ಊಟಮಾಡಿಯಾಗಿದ್ದರೂ ಅದನ್ನೂ ತಿಂದು ಖಾಲಿಮಾಡಿದ ಎಂದೇ ಅರ್ಥ. ಆತ ಸ್ವಂತ ಮನೆಯಲ್ಲಿ ಅಕ್ಕನ (ಅವನಮ್ಮ, ಅಂದರೆ ನನ್ನಜ್ಜಿಯನ್ನು ಮಕ್ಕಳೆಲ್ಲರೂ ಕರೆಯುತ್ತಿದ್ದದ್ದು ಹಾಗೇ) ನೆನಪಲ್ಲಿ ಒಮ್ಮೊಮ್ಮೆ ಯಾವುದೋ ಪಾಕ ಮಾಡಲು ಹೋಗಿ, ಅದು ಇನ್ನೇನೋ ಆಗುತ್ತಿತ್ತಂತೆ. ಆದರೆ ಅನ್ನಬ್ರಹ್ಮನನ್ನು ಅವಮಾನಿಸದ ಈಶ್ವರನ ನಿಲುವು, ಆ ಪಾಕದ ಒಂದಗಳೂ ವ್ಯರ್ಥವಾಗದಂತೆ ಇವನ ಹೊಟ್ಟೆ ಸೇರಿದ ಕಥೆ ಭೂತಪ್ರೇತಗಳ ಹೊಡೆದಾಟದಷ್ಟೇ ರಮ್ಯ.

ನನ್ನ ಮೈಸೂರು ವಾಸದ ಕಾಲದಲ್ಲೇ (೧೯೬೯-೭೪) ಈಶ್ವರ ಮೈಸೂರಿಗೆ ವರ್ಗವಾಗಿ ಬಂದಿದ್ದ. ಮೊದಲ ಕೆಲವು ಕಾಲ ನಮ್ಮ ಮನೆಯಲ್ಲೇ ಇದ್ದ. ನನ್ನ ಅಪ್ಪಮ್ಮರ ಸ್ಪಷ್ಟ ಸೂಚನೆಗೆ ಮಣಿದು, ಅನಂತನ ಪೂರ್ಣ ಸಹಕಾರದಲ್ಲಿ ಇವನೊಂದು ಸಣ್ಣ ಮನೆ ಖರೀದಿಸಿದ್ದ. ನನ್ನಮ್ಮನೊಡನೆ (ಬಾಲ್ಯದಿಂದ ಕಂಡ ಸೋದರಮಾವನ ಮಗಳೇ) ಆತನಿಗೆ ಸದರವಿತ್ತಾದರೂ ಕೆಲವೊಮ್ಮೆ ಸಲಹೆಗಳು ಅಪಥ್ಯವಾಗುವುದಿತ್ತು. ಆದರೂ ಆಕೆಯ ವರ್ತಮಾನದ ‘ಅತ್ತಿಗೆ’ ಅಂತಸ್ತಿನ ಗೌರವಕ್ಕೆಂದೂ ಈಶ್ವರ ಚ್ಯುತಿ ತಂದದ್ದಿಲ್ಲ. ಆತನಿಗೆ ಸ್ಟ್ರಾಂಗ್ ಕಾಫಿ ರುಚಿಸುತ್ತಿತ್ತು ಆದರೆ ತತ್ವತಃ ಕುಡಿಯುವಂತಿಲ್ಲವಲ್ಲಾ! ಇದು ಅಮ್ಮನಿಗೆ ಗೊತ್ತಿದ್ದೇ ಕಾಫಿ ಕೊಟ್ಟು ಒಂದು ಒತ್ತಾಯದ ಮಾತು ಸೇರಿಸಿದರೆ ಸಾಕು, ಕುಡಿದುಬಿಡುತ್ತಿದ್ದ – (ನಾಲಿಗೆ) ಸುಖಕ್ಕಾಯ್ತು. ಆದರೆ ಹಿಂದೆಯೇ ಚೊಂಬು ತುಂಬಾ ನೀರು ಕುಡಿದು ನಗೆ ಬೀರುತ್ತಿದ್ದ – ಶಾಸ್ತ್ರಕ್ಕೂ ಆಯ್ತು (ಜೀರ್ಣಾಂಗಕ್ಕೆ ಕಾಫಿಯ ಪರಿಣಾಮ dilute ಮಾಡುವುದಂತೆ). ಹೀಗೆ ನನ್ನಮ್ಮ ದಕ್ಕಿಸಿಕೊಂಡಳೆಂದು ಇನ್ಯಾರಾದರೂ ಸದರ ತೆಕ್ಕೊಂಡ್ರೆ ಈಶ್ವರ ಸಾಕ್ಷಾತ್ ದೂರ್ವಾಸ. ಈ ಹಠಮಾರಿತನವನ್ನೇ ಈತ ಗುಣವಾಗಿ ಸ್ವೀಕರಿಸಿದ್ದಕ್ಕೆ ಸಾಕ್ಷಿಯಾಗಿ ತನ್ನ ಮನೆಗೆ ‘ದುರ್ಯೋದನ ನಿಲಯ’ ಎಂದೇ ಹೆಸರಿಸಿದ್ದ!

ಕೆಳಸ್ತರದ ವೃತ್ತಿ (ಕೀಳಲ್ಲ, low profile ಅಂತಾರಲ್ಲಾ ಅದು) ಕೊಡುತ್ತಿದ್ದ ಮರೆ, ತೀರಾ ಗೊಂದಲಿತ ಆದರೆ ಅಷ್ಟೇ ಖಚಿತ ನಿಲುವುಗಳು ಮತ್ತು ಕೌಟುಂಬಿಕವಾಗಿ ಸಿದ್ಧಿಸಿದ ಹಾಸ್ಯಪ್ರಜ್ಞೆಗಳೆಲ್ಲಾ ಸೇರಿ ರೂಪುಗೊಂಡ ಈಶ್ವರನನ್ನು ಸಾಮಾಜಿಕವಾಗಿ (ಹತ್ತಿರದ ಸಂಬಂಧಿಗಳು ಸೇರಿ) ಏಕಕಾಲಕ್ಕೆ ಪ್ರೀತಿ (ಕನಿಕರ) ಮತ್ತು ತಿರಸ್ಕಾರಗಳ ಸಮತೂಕದಲ್ಲಿ ಅಳೆಯುವಂತಾಗುತ್ತಿತ್ತು. ನಿಧಾನ, ಅವ್ಯವಸ್ಥೆ, ಕೊಳಕು ಎನ್ನುವ ಮಟ್ಟದ ಸರಳತನ ಈತನನ್ನು ಸದಾ ಹಿಂದೆಬಿಟ್ಟು ಗೇಲಿ ಮಾಡಲು ವಿಷಯವಾಗುತ್ತಿತ್ತು. ಆದರೆ ಅವುಗಳಲ್ಲೇ ಪ್ರಚೋದನೆಯನ್ನು ಪಡೆದು ತೀವ್ರ ಉಗ್ರ ನಿಲುವು, ಮತ್ತದರ ಪ್ರತಿಪಾದನೆಗೆ ಆತ್ಮೀಯರಲ್ಲಿ ಮುಖಾವಲೋಕನ ನಿಷೇಧಿಸಿಕೊಳ್ಳುವುದು, ಕೈಸಾಗದಲ್ಲಿ ಉಗ್ರ ಮೂಕರ್ಜಿ ಬರೆಯುವುದು ಈಶ್ವರನ ಪ್ರಿಯ ಹವ್ಯಾಸಗಳು! ಇವನೊಮ್ಮೆ ನಮ್ಮನೆಯಲ್ಲಿ ಊಟ ಮಾಡುತ್ತಿದ್ದಾಗ ಬೆಂಗಳೂರಿನಿಂದ ಹತ್ತಿರದ ತಮ್ಮ ಕೃಷ್ಣಮೂರ್ತಿ ಎದುರು ಬಾಗಿಲಿನಲ್ಲಿ ಬಂದ ಸುದ್ಧಿ ಸಿಕ್ಕಿತು. ಎಂಥದ್ದೋ ಚಿಲ್ಲರೆ ಪ್ರಸಂಗದಲ್ಲಿ ಈಶ್ವರ “ಮೂರ್ತಿಯ ಮುಖ ನೋಡೆ” ಎಂದು ಶಪಥ ಮಾಡಿದ್ದು ಆಗ ಜ್ಯಾರಿಯಲ್ಲಿತ್ತು. ಅಮ್ಮ ಮೂರ್ತಿಯಲ್ಲಿ ಎರಡು ಉಪಚಾರದ ಮಾತಾಡಿ, ಊಟಕ್ಕೆ ಕರೆತರುವಾಗ ಈಶ್ವರ ಮಂಗಮಾಯ. ಅವಸರವಸರವಾಗಿ ಕೈ ತೊಳೆದೋ ತೊಳೆಯದೆಯೋ ಬಟ್ಟೆ ಹಾಕಿಯೋ ಎಳೆದುಕೊಂಡೋ ಹಿಂದಿನ ಬಾಗಿಲಿನಲ್ಲಿ ಓಡಿಹೋಗಿಯಾಗಿತ್ತು! ಕೊನೆಯ ತಮ್ಮ ದಿವಾಕರನಿಗೆ, ಸೋದರ ಮಾವನ ಮಗ – ಬಾಲ್ಯದ ಚಡ್ಡಿ ದೋಸ್ತ ಎ.ಪಿ ಗೋವಿಂದನಿಗೆ ಇನ್ನೆಷ್ಟೋ ಸಂಬಂಧಿಕರಿಗೆ ಈತ ಅನಾವಶ್ಯಕ ವಾಚಾಮಗೋಚರ ಪತ್ರ ಬರೆಯುತ್ತಿದ್ದದ್ದು, ಭೇಟಿ ಬಹಿಷ್ಕರಿಸುತ್ತಿದ್ದದ್ದು ಎಲ್ಲಾ ನಮ್ಮ ವಲಯಗಳಲ್ಲಿ ಕೇವಲ ಹಾಸ್ಯ ಪ್ರಸಂಗಗಳಾಗಿ, ಕಟ್ಟೇಪುರಾಣಗಳಾಗಿಯೇ ಚಾಲ್ತಿಯಲ್ಲಿದ್ದವು.

ಈಶ್ವರ ಕಚೇರಿಯಲ್ಲಿ, ನಿವೃತ್ತಿಯಾದಮೇಲೆ ಹೋದಲ್ಲಿ ಬಂದಲ್ಲಿ ಭೀಕರ ನಿದ್ರೆಗೆ (ಕಾಯಿಲೆ ಏನೂ ಅಲ್ಲ) ಜಾರುವುದಿತ್ತು. ಪೇಪರ್ ಓದುವ ನೆಪದಲ್ಲಿ ಹೋದ ಸಾರ್ವಜನಿಕ ಗ್ರಂಥಾಲಯಗಳಲ್ಲಿ, ಪಾರ್ಕುಗಳ ಸಿಮೆಂಟ್ ಬೆಂಚಿನಲ್ಲಿ, ಹೆಚ್ಚೇಕೆ ಜೀವದ ಸಂಗಾತಿಯಾಗಿದ್ದ ಸೈಕಲ್ (ಸವಾರಿ ಮಾಡಿದ್ದು ಕಡಿಮೆಯೇ ಇರಬೇಕು!) ನೂಕುತ್ತ ನಡೆಯುತ್ತಿದ್ದಂತೆ ಒಮ್ಮೆಗೆ ನಿಲ್ಲಿಸಿ, ದಾರಿ ಬದಿಯ ಮೋರಿಕಟ್ಟೆಯಲ್ಲೂ ಈತ ಗಂಟೆಗಟ್ಟಳೆ ನಿದ್ರೆ ತೆಗೆದದ್ದಿತ್ತು. ಆಸ್ಪತ್ರೆಯಲ್ಲಿದ್ದ ಏಕಮಾತ್ರ ಅಣ್ಣನ ಕಾವಲಿನ ಸಮಯದ ಕಥೆ, ನಂಬಿದರೆ ನಂಬಿ, ರೋಗಿಯ ಪಕ್ಕದ ಮಂಚದ ಮೇಲೆ ಕೆಡೆದುಬಿದ್ದ (ಮಲಗಿದ್ದ ಎನ್ನುವುದು ತುಂಬಾ ಸೌಮ್ಯ ಶಬ್ದ) ಈತನನ್ನು ವೈದ್ಯರು ಮಹಾರೋಗಿಯೆಂದೇ ಭ್ರಮಿಸಿ ಕಾರ್ಯಾಚರಣೆಗಿಳಿದಿದ್ದರಂತೆ! ಆತನ ಭಾಷೆಯಲ್ಲಿ ಅದು ನಿದ್ರೆಯಲ್ಲ, ‘ಸಮಾಧಿ ಸ್ಥಿತಿ.’ ಗುಮಾಸ್ತನ ಭಾಷೆಯಲ್ಲೂ ಆತನೇ ಅಸಾಧ್ಯ ನಗೆಯೊಡನೆ ಹೇಳುತ್ತಿದ್ದ “ನಿದ್ರೆ ಕಂಡಾಬಟ್ಟೆ ಕ್ರೆಡಿಟ್ ಬ್ಯಾಲೆನ್ಸ್ ಇತ್ತು. ಎಲ್ಲ ಡೆಬಿಟ್ ಮಾಡಿಬಿಟ್ಟೆ.” ಹೀಗೇ ಆತ ಕಬ್ಬನ್ ಪಾರ್ಕಿನ ಮುರುಕು ಬೆಂಚಿನ ಮೇಲೆ ಒರಗಿರುತ್ತಲೊಂದು ಕಂಡ ಕನಸು, ಅಪರಾತ್ರಿಯಲ್ಲಿ ನಿರ್ಜನ ನಗರ ವಿಸ್ತರಣ ಜಾಗದ ಮೋರಿ ಕಟ್ಟೆಯ ಮೇಲೆ ಧ್ಯಾನಸ್ಥನಾದ ಪರಿ ಮುಂತಾದವು ಬಾಯಿಂii ಸೆಟ್ಟ್ ಹಲ್ಲು ಹಾರಿಹೋಗುವಂಥ ಅವನ ನಗುವಿನ ಸಹಿತ  ಅವನ ಬಾಯಲ್ಲೇ ಕೇಳಬೇಕು, ಇಲ್ಲ, ಕೇಳಬೇಕಿತ್ತು.

ಹೌದು, “ಈಶ್ವರಮಾವ ಹೋಗಿಬಿಟ್ರು” ಎಂದು ೨೭ರ (ಇದೇ ಡಿಸೆಂಬರ್, ೨೦೦೯) ಬೆಳಿಗ್ಗೆ ರುಕ್ಮಿಣಿ ಮೈಸೂರಿನಿಂದ ದೂರವಾಣಿಸಿದಾಗ ಇನ್ನೂ ಎಷ್ಟೆಷ್ಟೋ ಹಾಸ್ಯ, ರಸಪ್ರಸಂಗಗಳು ಈಶ್ವರನ ಬಾಯಲ್ಲೇ ‘ಕೇಳಬೇಕಿತ್ತು’ ಎನ್ನುವ ಮಾತು ಉಳಿದೇ ಹೋಯ್ತು. ಸಣ್ಣಪುಟ್ಟ ವೃದ್ಧಾಪ್ಯದ ತೊಂದರೆಗಳು (ಪ್ರಾಯ ಎಪ್ಪತ್ತೈದು) ಆತನನ್ನು ಕಾಡುತ್ತಿದ್ದಾಗಲೂ ಇನ್ನೊಬ್ಬರಿಗೆ ತಾನು ಹೊರೆಯಾಗಬಾರದೆಂದು ತಿಂಗಳಾನುಗಟ್ಟಳೆ ಅತ್ರಿಗೆ ಬರುತ್ತಿರಲಿಲ್ಲ. ಆ ದೈಹಿಕ ಚಿಕಿತ್ಸೆಗಳಿಗೆ ಎಲ್ಲೋ ಆಸ್ಪತ್ರೆಗೆ ಅಜ್ಞಾತವಾಗಿ ಸೇರಲು ಹೋಗಿ, “ಅರೆ, ನೀವು ಜಿಟಿಎನ್ ಬ್ರದರ್ ಅಲ್ವೇನ್ರೀ” ಎಂದು ಗುರುತು ಹಿಡಿದಾಗ ಚಿಕಿತ್ಸೆ ನಿರಾಕರಿಸಿ ಹೋದದ್ದು, ಇನ್ನೆಲ್ಲೋ ಹೀಗೇ ಸೇರಿ ಪರಿಸ್ಥಿತಿ ಬಿಗಡಾಯಿಸಿದಾಗ ಅನಂತನಿಗೆ ಹೇಗೋ ತಿಳಿದು ಅವನ ಅಭಿಮಾನ ಭಂಗ ಮಾಡದೆ ಸಹಾಯ ಒದಗಿಸಿದ್ದು, ಇನ್ನೆಲ್ಲೋ “Oh, brother of GTN!” ಯಾರೋ ಅಂದದ್ದಕ್ಕೆ “Yes, infamous brother of famous GTN” ಎಂದು ಈತನೇ ವಗ್ಗರಿಸಿದ್ದು ಎಷ್ಟೂ ಇವೆ. ಆದರೆ ಅನಂತ-ರುಕ್ಮಿಣಿಯರು, ಅವನ ಮನೆಯ ಹತ್ತಿರದಲ್ಲೇ ಇದ್ದ ಕುಸುಮ-ಸದಾಶಿವರು (ನನ್ನ ಒಬ್ಬ ಸೋದರಮಾವ ಎ.ಪಿ. ರಮಾನಾಥ ರಾವ್ ಅವರ ಮಗಳು, ಅಳಿಯ) ಏನೇನೋ ನೆಪ ಮಾಡಿಕೊಂಡು ಅವನನ್ನು ವಿಚಾರಿಸಿಕೊಳ್ಳುತ್ತಲೇ ಇದ್ದರು.

೨೦-೧೨-೨೦೦೯ರಂದು ಅಕ್ಷರಿಯ ಮದುವೆ ನಿಶ್ಚಯವಾದೊಡನೇ ಅನಂತ “ಚಿಕ್ಕಯ್ಯಾ (ಅನಂತ ಈಚೆಗೆ ಹಾಸ್ಯಕ್ಕೆಂದು ಈ ಸಾಂಪ್ರದಾಯಿಕ ಸಂಬೋಧನೆಯನ್ನು ರೂಢಿಸಿಕೊಂಡಿದ್ದ) ಬಂದುಬಿಡೋ” ಎಂದು ಆಮಂತ್ರಣ ಕೊಟ್ಟೇ ಹೇಳಿದ್ದ. ಮೈಸೂರಿನಲ್ಲೇ ನಡೆಯಲಿದ್ದ ಮದುವೆಯಲ್ಲಿ ತಾನು ಭಾಗಿಯಾಗುವುದನ್ನು ತಪ್ಪಿಸುವುದು ಹೇಗೆ ಎಂದು ಈಶ್ವರನ ಚಡಪಡಿಕೆ ಸುರುವಾಗಿರಬೇಕು. ಹಳ್ಳಿಮನೆ “ಮೋದೂರಿಗೆ ಬೀಗ ಹಾಕಿ ಬರುವುದು ಕಷ್ಟ. Watch & Ward ಕೆಲ್ಸಕ್ಕೆ ಬರ್ತಿಯಾ” ಎಂದು ದಿವಾಕರ ಕೇಳಿದ ನೆಪ ಸಾಕಾಗಿ ಈತ ಮೈಸೂರಿನಲ್ಲಿ ಸುದ್ಧಿ ಕೊಡದೆ ಹೋಗಿಬಿಟ್ಟಿದ್ದ. ಅದರರಿವಿಲ್ಲದೆ ಮದುವೆಯ ಹಿಂದಿನ ಬೆಳಿಗ್ಗೆ ಮೈಸೂರು ತಲಪಿದ್ದ ನಾನು ಹೀಗೇ ಅವನ ಮನೆಗೆ ಹೋದಾಗ ಗೇಟಿಗೆ ಬೀಗ. ವೈಶಂಪಾಯನ ಸರೋವರದಲ್ಲಿ ಮುಳುಗುವ ಮೊದಲು ದುರ್ಯೋದನ ಹಿಂದೆ ಹಿಂದೆ ಹೆಜ್ಜೆಯಿಟ್ಟುಕೊಂಡು ಹೋಗಿದ್ದನಂತೆ. ಹಾಗೇ ಈ ಅಭಿನವ ದುರ್ಯೋದನ ಗೇಟಿಗೆ ಮತ್ತು ಎದುರು ಬಾಗಿಲಿಗೆ ಬೀಗ ಹಾಕಿ ಹಿಂದಿನ ಬಾಗಿಲಿನಿಂದ ಒಳಸೇರಿ ಭೇಟಿಗೆ ಬಂದವರನ್ನು ಸೋಲಿಸುವುದುಂಟೆಂದು ರುಕ್ಮಿಣಿ ಹೇಳಿದ್ದಳು. ಹಾಗಾಗಿ ನಾಲ್ಕೈದು ಬಾರಿ ಕೂಗಿ ಕರೆದೂ (ಭೀಮ ಗರ್ಜನೆ?) ವಿಫಲನಾಗಿದ್ದೆ. ಅನಂತರ ತಿಳಿಯಿತು, ಆತ ನಿಜಕ್ಕೂ ಮನೆಯಲ್ಲಿರಲಿಲ್ಲ; ಮೋದೂರಿನಲ್ಲಿದ್ದ. ಇಂದು ಯೋಚಿಸುವಾಗ, ‘ಕೊನೆಯ ಭೇಟಿ’ ಎಂಬ ಔಪಚಾರಿಕತೆಯನ್ನೂ ಆತ ನನಗೆ ನಿರಾಕರಿಸಿದ್ದ.

ನನ್ನ ತಂದೆಗೆ ಕೊನೆಯ ದಿನಗಳವರೆಗೆ ಸಂಗೀತಕ್ಕೋ ನಾಟಕಕ್ಕೋ ಹೋಗೆಂದ ಕಡೆಗೆ ಜೊತೆಗೊಡುವುದರೊಡನೆ ಬೌದ್ಧಿಕ ಸಾಹಚರ್ಯವನ್ನೂ ಒದಗಿಸಿದವರು ಪ್ರೊ| ರಾಘವೇಂದ್ರ ಭಟ್ಟರು. ಅವರು ಮೊನ್ನೆ ಬೆಳಿಗ್ಗೆ ಹೀಗೇ ವಾಯುಸೇವನೆಗೆ ನಡೆದು ಹೊರಟಿದ್ದ ಈಶ್ವರನಿಗೆ ಸಿಕ್ಕಿದರಂತೆ. ಮತ್ತೆ ಪಟ್ಟಾಂಗ ಹೊಡೆಯುತ್ತ ದಾರಿಯಲ್ಲಿ ರೈಲ್ವೇ ಬುಕ್ಕಿಂಗ್ ಕಛೇರಿಗೆ, ಯಾವುದೋ ಮುಂಗಡ ಟಿಕೆಟ್ ಖರೀದಿಸುವುದಕ್ಕೆಂದು ಒಳನುಗ್ಗಿದರು. ಹಾಗೆ ಹೋಗಿ ಹೀಗೆ ಬರುವಾಗ, ಹೊರಗೆ ಮೆಟ್ಟಿಲ ಸಾಲ ಬಳಿ ಇವರನ್ನು ಕಾದು ನಿಂತಿದ್ದ ಈಶ್ವರ ಕುಸಿದು ಬಿದ್ದಿದ್ದ. ಭಟ್ಟರು ಕೂಡಲೇ ಆಂಬುಲೆನ್ಸ್ ತರಿಸಿದರೂ ಆ ಸ್ವಾಭಿಮಾನೀ ಜೀವ ಚಿಕಿತ್ಸೆ ಕಾದು ಕುಳಿತಿರಲಿಲ್ಲ.

ಸಹಜವಾಗಿ ಮತ್ತು ಸಮರ್ಥವಾಗಿ ಅನಂತ ಉತ್ತರಾಧಿಕಾರವನ್ನು ನಡೆಸಿದ್ದಾನೆ. ನನ್ನಪ್ಪ ದೇಹದಾನದ ಒಪ್ಪಂದವನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನೊಡನೆ ಮಾಡಿಕೊಂಡಂದೇ ಈಶ್ವರನೂ ಅನುಸರಿಸಿದ್ದ. ಹಾಗಾಗಿ ಸಕಾಲಕ್ಕೆ ಕಣ್ಣು ಮತ್ತೆ (ಮಡಿಕೇರಿ, ಬೆಳ್ಳಾರೆಗಳಿಂದ ಈಶ್ವರನ ತಮ್ಮ ತಂಗಿಯರು, ನೆರೆಕರೆಯವರು) ‘ಅಂತಿಮದರ್ಶನ’ದ ಔಪಚಾರಿಕತೆ ಮುಗಿಸಿದ ಬೆನ್ನಿಗೆ ದೇಹವನ್ನೂ ಕಾಲೇಜಿನವರು ಗೌರವಯುತವಾಗಿ ಪಡೆದುಕೊಂಡರು. ಮಡಿಕೇರಿಯ ಹರಿಶ್ಚಂದ್ರ ಘಾಟಿನ ಪ್ರೇತಾತ್ಮಗಳಿಗೆ ಇನ್ನು ಪೆಟ್ಟು ಹಾಕುವವರು ಯಾರು?

<embed src='http://widget-0e.slide.com/widgets/slideticker.swf' type='application/x-shockwave-flash' quality='high' scale='noscale' salign='l' wmode='transparent' flashvars='site=widget-0e.slide.com&channel=3386706919823252238&cy=wp&il=1' width='426' height='320' name='flashticker' align='middle' />