# Athree Book | ಅತ್ರಿ ಬುಕ್ ## Posts - [ಗಿರಿ, ಮಲೆಗಳ ದಾರಿಯಲ್ಲಿ](https://athreebook.com/2026/04/10/on-the-path-of-hills-and-mountains/): ಜಿಎಸ್ ಜಯದೇವ ಅವರ ಸೋಲಿಗ ಚಿತ್ರಗಳು (ಪರಸ್ಪರ ಪ್ರಕಾಶನ) ಓದಿದಂದಿನಿಂದ ನನಗೆ ಅವರ ‘ಕಥಾನಾಯಕರು’ಗಳನ್ನೂ ಆ ಪರಿಸರವನ್ನೂ ಕಣ್ದುಂಬಿಕೊಳ್ಳುವ ತುಡಿತ ಹೆಚ್ಚಾಗಿತ್ತು. ಹಾಗೆ ಮಾರ್ಚ್ ೧೯ ರಿಂದ೨೨ರವರೆಗೆ, ನಾನು, ದೇವಕಿ, ಅನಿಲ್, ತಿರುಮಲೇಶ ಭಟ್ ಮತ್ತು ದಿಗಂತ, ಕಾರೋಡಿಸಿ ಕಂಡ ಕಥನ. - [ನೀನಾಸಂ ಕಲೆಗಳೊಡನೆ ಮಾತು ಕತೆ - ೨೦೨೪](https://athreebook.com/2026/04/02/a-conversation-with-the-arts-of-ninasam-2024/): ನನ್ನ ಜಾಲತಾಣಕ್ಕೆ ಹೊಸ ನೀರು ಕೊಡುವಲ್ಲಿ ಈಗ ಎರಡು ವರ್ಷಗಳ ಹಿಂದಿನ ನೀನಾಸಂ ಕಲೆಗಳೊಡನೆ ಮಾತು ಕತೆ-೨೪ ಬಳಸಿದ್ದೇನೆ. ಇದು ಕೂಡಾ ಆ ಕಾಲದಲ್ಲೇ ಫೇಸ್ ಬುಕ್ಕಿನಲ್ಲಿ ಹಲವು ಕಂತುಗಳ ಧಾರಾವಾಹಿಯಾಗಿ ಬಂದದ್ದರ ಇಂದಿನ ಪರಿಷ್ಕರಣ, ಸಂಕಲನ. - [ಮತ್ತೆ ತುಮರಿಗೆ....](https://athreebook.com/2026/03/16/2023-way-to-tumari/): ‘ನಾಟಕೋತ್ಸವ’ ಬಯಸಿ ನಾನು, ದೇವಕಿ ಮತ್ತು ಅನಿಲ್ ಶರಾವತಿ ಹಿನ್ನೀರಿನಲ್ಲಿ ಮೂಲೆ ಪಾಲಾಗಿರುವ ತುಮರಿಗೆ ೨೦೨೨ರಲ್ಲಿ ಹೋಗಿದ್ದೆವು. ಅಲ್ಲಿಗೆ ಹೋದ ಮೇಲೆ ಅದು ‘ಹಾಮ ಭಟ್ಟ ಸ್ಮೃತಿ - ೨೦೨೨’ ಕಾರ್ಯಕ್ರಮದ ಭಾಗವೆಂದೂ ತಿಳಿಯಿತು. ನಾವದನ್ನೇ ಅನುಭವಿಸಿ ಬಂದು, ನನ್ನ ಅನುಭವಗಳನ್ನು ಇಲ್ಲೇ ಬರೆದಿದ್ದೆ. (ನೋಡಿ : https://athreebook.com/2022/12/10/way-to-tumari/) ಹಾಗಾಗಿಯೋ ಏನೋ ೨೦೨೩ರ ಸಾಲಿನ ಕಲಾಪ ರೂಪಿಸುವಾಗ, ಸಂಘಟಕ. ಆತಿಥೇಯ ರಘು ಹಾಲಕೆರೆ. ನನ್ನನ್ನು ಒತ್ತಾಯಿಸಿ, ‘ಪುಸ್ತಕ ಮಾರಾಟ ಹೋರಾಟ’ದ ಕುರಿತಂತೆ ಅರ್ಧ ಗಂಟೆಯ ಕಲಾಪ-ಬಂಧಿಯಾಗಿಸಿದರು. ಅದನ್ನನುಭವಿಸಿ ಬಂದ ಹೊಸತರಲ್ಲೇ ಅದನ್ನೂ ಫೇಸ್ ಬುಕ್ಕಿನಲ್ಲಿ ಸಣ್ಣ ಸಣ್ಣ ಟಿಪ್ಪಣಿಗಳ ಧಾರಾವಾಹಿ ಮಾಡಿದ್ದೆ. ಸುಮಾರು ಮೂರು ವರ್ಷಗಳ ಮೇಲೀಗ ಅವನ್ನು ಒಂದು ಕಟ್ಟಿನಲ್ಲಿ ಇಲ್ಲಿ ಪ್ರಕಟಿಸುತ್ತಿದ್ದೇನೆ. - [ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ](https://athreebook.com/2024/11/06/special-article-for-karnataka-suvarna-mahotsav/): ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಕನ್ನಡಕ್ಕೆ ‘ಮೈಸೂರು ರಾಜ್ಯ’ ದಕ್ಕಿತ್ತು. ಆದರೆ ಹೆಸರಿನಲ್ಲಿದ್ದ ರಾಜಸತ್ತೆಯ ವಾಸನೆಯನ್ನು ಅಳಿಸಬೇಕೆಂಬ ಉದಾತ್ತತೆಯಲ್ಲಿ ಬಂದ ‘ಕರ್ನಾಟಕ’ಕ್ಕೆ ಇಂದು ಐವತ್ತರ ಹರಯ. ಈ ಪರ್ವ ಕಾಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಖಚಿತ ಪ್ರತಿನಿಧಿಯೇ ಆದ ಕನ್ನಡ ಪುಸ್ತಕೋದ್ಯಮ ಹೇಗಿತ್ತು, ಇದೆ, ಮುಂದೇನಾಗಬಹುದು ಎನ್ನುವುದರ ಸಮೀಕ್ಷಾ ಲೇಖನ ಇಲ್ಲಿದೆ. - [ಪುಸ್ತಕ ಮಾರಾಟದಲ್ಲಿ ಹೋರಾಟದ ಹಾದಿ](https://athreebook.com/2023/10/05/the-struggle-in-bookselling/): ನಾನು ಸಾಮಾನ್ಯವಾಗಿ ಭಾಷಣಗಳನ್ನು ಕೇಳುವುದಿಲ್ಲ, ಇನ್ನೂ ಮುಖ್ಯವಾಗಿ ಮಾಡುವುದಿಲ್ಲ. ಆದರೆ ತುಮರಿಯ ರಘು ಹಾಲಕೆರೆಯವರ ಪ್ರಾಮಾಣಿಕ ಆಸಕ್ತಿಗೆ ಮಣಿದು, ಅಲ್ಲಿನ ಮೂರು ದಿನಗಳ ಹಾಮ ಭಟ್ಟ ಸ್ಮೃತಿ ದಿನದಲ್ಲಿ ಭಾಗವಹಿಸಿ ಮಂಡಿಸಿದ ಪ್ರಬಂಧ ಇಲ್ಲಿದೆ. - [ಜೀವ ಸಂತುಲನ ಮತ್ತು ಏಕದಲ್ಲಿ ಅನೇಕ](https://athreebook.com/2023/09/22/unity-in-diversity/): ಹುಚ್ಚು ಅಭಿವೃದ್ಧಿಯ ಹೆಸರಿನಲ್ಲಿ, ರಕ್ಷಿಸಬೇಕಾದವರೇ ಕದಡುತ್ತಿರುವ ಪಾರಿಸರಿಕ ಸಮಸ್ಯೆಗೂ ಧರ್ಮದ ಹೆಸರಿನಲ್ಲಿ ನಿಜ ಮಾನವ ಧರ್ಮವನ್ನು ಕುಲಗೆಡಿಸಿದ್ದಕ್ಕೂ ಸಾತ್ವಿಕ ಪ್ರತಿಭಟನೆ ಇಲ್ಲಿದೆ. ನಾನು ಈಚೆಗೆ ಮಾಡಿದ ಮುಖ್ಯ ಮೂರು ಮರಗೆತ್ತನೆಗಳು - ಅಕೇಸಿಯಾದಲ್ಲಿ ‘ಜೀವಾನಿ’, ಕುಂಬಾಗುತ್ತಿದ್ದ ಹಲಸಿನ ಬೇರಿನಲ್ಲಿ ‘ವಿವಿಧತೆಯಲ್ಲಿ ಏಕತೆ’ ಮತ್ತು ಒಂದೇ ಕೊರಡಿನಲ್ಲಿ ಸರಪಳಿ ಮಾಡುವ ಪ್ರಯತ್ನದೊಡನೆ ಸಾಧಿಸಿದ ‘ಏಕದಲ್ಲಿ ಅನೇಕ’. ಇವುಗಳ ಜತೆಗೆ ಕೆಲವು ನಾಮ ಫಲಕಗಳ ಕೆತ್ತನೆಯೂ ಸೇರಿವೆ. ಎಲ್ಲಕ್ಕೂ ಮುಖ್ಯವಾಗಿ ಶಿಲ್ಪದೊಡನೆ ಬೆರೆತ ನನ್ನ ವಿವರಣಾತ್ಮಕ ಚಿಂತನೆಗೆ ನಿಮ್ಮ ಚಿಂತನಾಲಹರಿ ಸೇರಿಸುವಂತೆ ಓದಿ, ಪ್ರತಿಕ್ರಿಯೆಗಳನ್ನು ಅವಶ್ಯ ಬರೆಯಿರಿ. - [ನನ್ನದೇ ಮರಣವಾರ್ತೆ ಓದಿದಂತೆ!](https://athreebook.com/2023/05/08/athree-facebook-reach-decreased/): ಫೇಸ್ ಬುಕ್ಕಿನಲ್ಲಿ ‘ರೀಚ್’ ಕಡಿಮೆ ಮಾಡಿರುವುದನ್ನು ವಿರೋಧಿಸಿ ನಾನದಕ್ಕೆ ತತ್ಕಾಲೀನ ವಿದಾಯ ಹೇಳಿದೆ. ಅದಕ್ಕೆ ಓದುಗರಿಂದ ಬಂದ ಪ್ರತಿಕ್ರಿಯೆಗಳಿಗೆ, ಭಾವನೆಗಳಿಗೆ ನನ್ನ ಸಣ್ಣ ಸ್ಪಷ್ಟನೆ ಮತ್ತು ವಂದನಾರ್ಪಣೆ ಇಲ್ಲಿದೆ - [ಅನುಪಮ ‘ಪ್ರವಾಸ ಕಥನ’ ಬೆಳಗಿನೊಳಗು](https://athreebook.com/2023/04/29/book-review-belaginolagu-mahadeviyakka/): ಡಾ| ಎಚ್.ಎಸ್ ಅನುಪಮಾ ಮಹಾದೇವಿಯಕ್ಕನ ಜೀವನ ಸಾಧನೆಗಳನ್ನು ಬಹುತೇಕ ಆಕೆಯ ಮತ್ತು ಸಮಕಾಲೀನರ ವಚನಗಳಿಂದ ಆಸವಿಸಿ, ತನ್ನ ಕಲ್ಪಕತೆಯ ಮಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಂತೆ ಕಾದಂಬರಿ ಎಂದಿದ್ದಾರೆ. ಮತೀಯ ಅಮಲಿನಲ್ಲಿ ಲಿಂಗಾಯತ, ಹಿಂದೂ ಎಂದೇನೇನೋ ವಿಕಾರಗಳು ಮೆರೆಯುತ್ತಿರುವ ಕಾಲದಲ್ಲಿ ಇದೊಂದು ಬಹುದೊಡ್ಡ ಚೇತೋಹಾರಿ ಓದು. ಅದನ್ನು ನಾನು ಚುಟುಕಾಗಿ ಇಲ್ಲಿ ಹೇಳಿದ್ದೇನೆ. - [ಮಾರ್ಗದ ಸಂಗಡ ಮಾತುಕತೆ](https://athreebook.com/2023/04/13/ninasam-arts/): ಹೆಗ್ಗೋಡಿನ ಕಲೆಗಳ ಸಂಗಡ ಮಾತುಕತೆ-೨೦೨೨, ಮುಗಿಸಿ ನಾವಿಬ್ಬರು ಬೈಕೇರಿ ವಾಪಾಸಾಗುವ ದಾರಿಯ ಪ್ರವಾಸ ಕಥನ ಇಲ್ಲಿದೆ. ಆಗ ಕಂಡ ಐತಿಹಾಸಿಕ ಪ್ರಾಮುಖ್ಯದ ಕೌಲೇ ದುರ್ಗ ಮತ್ತು ವರಾಹಿ ಜಲವಿದ್ಯುತ್ ಯೋಜನೆಯ ಮುಖ್ಯ ಭಾಗವಾದ ಮಾಣಿ ಅಣೆಕಟ್ಟಿನ ಮುಖ್ಯ ಕಥನಗಳೊಡನೆ ಪ್ರಸ್ತುತ ನೀನಾಸಂ ಸರಣಿಯ ಮುಕ್ತಾಯ ಓದಲು..... - [ಕುತ್ಲೂರು ಕಥೆ - ಮಲೆ ಮಕ್ಕಳ ನೆಲೆ ರಕ್ಷಣೆಯಾಗದ ವ್ಯಥೆ](https://athreebook.com/2023/03/02/kuthluru-story/): ಈಚೆಗೆ ‘ಕುತ್ಲೂರು ಕಥನ’ ಪುಸ್ತಕದ ಲೋಕಾರ್ಪಣಕ್ಕೆ ನಾನು ಹೋಗಿದ್ದೆ. ಸಭೆ ತಡವಾಗಿ ಶುರುವಾಯ್ತು. ಹಾಗಾಗಿ ನನಗೆ ಸಭೆಯಲ್ಲಿ ಪ್ರಕಾಶಕಿ - ಅಕ್ಷತಾ ಹುಂಚದ ಕಟ್ಟೆ, ಲೇಖಕ - ನವೀನ್ ಸೂರಿಂಜೆ ಮತ್ತು ವಕೀಲ - ದಿನೇಶ್ ಉಳೇಪಾಡಿಯವರ ಮಾತುಗಳನ್ನಷ್ಟೇ ಕೇಳಲು ಸಾಧ್ಯವಾಯ್ತು. ಅನ್ಯ ಕಾರ್ಯ ಒತ್ತಡದಿಂದ ಎದ್ದು ಬರುವಾಗ, ವಿಷಯ ವನ್ಯಕ್ಕೆ ಸಂಬಂಧಿಸಿದ್ದರಿಂದ ಅಪಾರ ಕುತೂಹಲದಲ್ಲಿ ಪುಸ್ತಕದ ಪ್ರತಿಯೊಂದನ್ನು ಕೊಂಡು ತಂದೆ. ಪುಸ್ತಕ ಮೊದಲಲ್ಲಿ ‘ಮಲೆಕುಡಿಯ ಸಮುದಾಯ’ಕ್ಕೆ ಅರ್ಪಣೆ ಮಾಡಿದಲ್ಲಿಂದ, ವಿರೋಧ ಪಕ್ಷದ ನಾಯಕ ಹರಿಪ್ರಸಾದರ ಹಿನ್ನುಡಿಯವರೆಗಿನ ಪೂರ್ಣ (ಸುಮಾರು ಒಂದು ನೂರು ಪುಟ) ಗಮನವಿಟ್ಟು ಓದಿದೆ. ಮತ್ತೆ ಅದರ ಕುರಿತು ಫೇಸ್ ಬುಕ್ಕಿಗೆ ಬರೆದ ಟಿಪ್ಪಣಿ ಮತ್ತು ಚರ್ಚೆಗಳ ಫಲ.... - [ತಿರು ಶ್ರೀಧರ್ ಸ್ಮರಿಸಿದ ಜಿಟಿ ನಾರಾಯಣ ರಾವ್](https://athreebook.com/2023/01/30/rememberence-of-gt-narayana-rao/): ಇಂದು ನನ್ನಪ್ಪ (ಜಿಟಿ ನಾರಾಯಣ ರಾವ್) ಹುಟ್ಟಿದ ದಿನ. ಅವರು ನಮಗೆ ಹಾಕಿಕೊಟ್ಟ ಆದರ್ಶ - ವ್ಯಕ್ತಿ ನಿಮಿತ್ತ, ಕೃತಿ ಶಾಶ್ವತ. ಅವರು ವಿಜ್ಞಾನ ಸಾಹಿತ್ಯ ನಿರ್ಮಾಣದ ಅಂಗವಾಗಿ ಆಲ್ಬರ್ಟ್ ಐನ್ಸ್ಟೈನ್, ಸಿವಿ ರಾಮನ್, ಸುಬ್ರಹ್ಮಣ್ಯನ್ ಚಂದ್ರಶೇಖರ್ ಮುಂತಾದವರ ಕುರಿತು ಬರೆದಾಗಲೂ ಈ ನಿಲುವನ್ನು ಸ್ಪಷ್ಟಪಡಿಸಿದರು. ವಾಗಾಡಂಬರದ ಜೀವನ ಕಥನ ಮಾಡಲಿಲ್ಲ, ವೈಜ್ಞಾನಿಕ ಜೀವನ ಕಥನವನ್ನೇ ಕೊಟ್ಟರು. ಒಂದು ಹಂತದಲ್ಲಿ ತಂದೆ ನಮ್ಮೆಲ್ಲರ ಒತ್ತಾಯಕ್ಕೆ ಮಣಿದು, ಆತ್ಮಕಥೆ (ಮುಗಿಯದ ಪಯಣ) ಬರೆದರು. ಆಗಲೂ ಆತ್ಮರತಿಯ ಭಾವಲಹರಿಯಲ್ಲಿ ಕಳೆದುಹೋಗದೇ (ಮುಂದೆ ಯಾರಾದರೂ ಓದಿದರೆ!!) ಆದರ್ಶ ಅಥವಾ ಅನುಸರಣಾರ್ಹ ಮೌಲ್ಯವಾಗಬಹುದಾದ ಅಂಶಗಳನ್ನಷ್ಟೇ ದಾಖಲಿಸಿದರು. ಈ ನಿಟ್ಟಿನಲ್ಲಿ ತಿರು ಶ್ರೀಧರ್ ತಮ್ಮ www.sallapa.com ಜಾಲತಾಣದಲ್ಲಿ ಇಂದು ಜಿಟಿನಾ ಅವರನ್ನು ಸ್ಮರಿಸಿದ್ದು ಅಷ್ಟೇ ಔಚಿತ್ಯಪೂರ್ಣವಾಗಿತ್ತು. ಶ್ರೀಧರ್ ಅವರ ಬರಹ ನನ್ನ ಜಾಲತಾಣದ ಸಂಗ್ರಹಕ್ಕೆ ಬೇಕೆಂದು ಕೋರಿದಾಗ, ಅವರು ತುಂಬ ಉದಾರವಾಗಿ ಅನುಮತಿಸಿದ್ದಾರೆ. ಮುಂದೆ ಓದಿ - [ನಾಟಕಗಳ ಬಹುರೂಪ ಮತ್ತು ಸಂಗೀತ....](https://athreebook.com/2023/01/04/variety-of-dramas-and-music/): ಕಲೆಗಳ ಸಂಗಡ ಮಾತುಕತೆ ಶಿಬಿರದ ಹೆಸರಿನಲ್ಲಿ ಮೊದಲು ಪ್ರವಾಸ ಕಥನ, ಅನಂತರ ಬಹುತೇಕ ನೀನಾಸಂ ಪರಿಸರದ ಪ್ರವೇಶಿಕೆ ಮತ್ತು ಶಿಬಿರದ ಸಾಹಿತ್ಯಕ ಅಂಶಗಳ ಬಗ್ಗೆ ನನ್ನ ಗ್ರಹಿಕೆಗಳನ್ನು ಲೇಖನವಾಗಿ ಹರಿಸಿದೆ. ಈಗ ಅದರ ಮುಖ್ಯ ನಾಟಕಾಂಶಗಳ, ಅಂದರೆ ಕೆಲವು ನಾಟಕೀಯ ಓದು, ರೂಪಕ, ತಿರುಗಾಟದ ಎರಡು ನಾಟಕಗಳೂ ಸೇರಿದಂತೆ ಐದು ಮಹಾ ಪ್ರದರ್ಶನಗಳ ಕುರಿತು ನನ್ನ ಅಂದಾಜುಗಳನ್ನು ವಿಸ್ತರಿಸಿ ಶಿಬಿರಾನುಭವವನ್ನು ಮುಗಿಸುತ್ತಿದ್ದೇನೆ. (ಮುಂದೆ ಓದಿ) - [ಶಿಬಿರದ ಅನೌಪಚಾರಿಕತೆ, ಸೊರಗಿದ ಸಾಹಿತ್ಯ](https://athreebook.com/2022/12/24/ninasam-camp-2022-part-2/): ನೀನಾಸಂ ವಠಾರ, ಶಿಬಿರ ಮತ್ತು ಶಿಬಿರಾರ್ಥಿಗಳ ಅನೌಪಚಾರಿಕ ಪರಿಚಯವಿಲ್ಲಿದೆ. ಶಿಬಿರಭಾಗಿಯಾಗದೆಯೂ ಇಲ್ಲಿನ ರಂಗಪ್ರಸ್ತುತಿಗಳನ್ನು ಎಲ್ಲೂ ಯಾರೂ ತಮ್ಮದೇ ಸಮಯಾನುಕೂಲದಲ್ಲಿ ಉಚಿತವಾಗಿ ಅನುಭವಿಸಲು ಒದಗಿಸುವ ದಾಖಲೀಕರಣದ ಪ್ರಾಸಂಗಿಕ ಪರಿಚಯವೂ ಆಗುತ್ತದೆ. ಶಿಬಿರ ತೋರಿಕೆಯ ವೈಭವಗಳನ್ನು ನಿರಾಕರಿಸಿಯೂ ಸವಿಯಾದ, ಭಾವುಕ ಪ್ರಾರ್ಥನೆಯಿಲ್ಲದೆಯೂ ಮನ ಹದಗೊಳಿಸಿದ, ಉದ್ಘಾಟನೆ ಎಂದರೆ ಕೊರೆತ ಎನ್ನುವ ಭಾವನೆಯನ್ನು ಕಲಾತ್ಮಕವಾಗಿಸಿದ ಕಲಾಪಗಳೆಲ್ಲದರೆ ಚಿಕ್ಕ ಚೊಕ್ಕ ಟಿಪ್ಪಣಿಗಳು ಇಲ್ಲಿವೆ. ಕೊನೆಯಲ್ಲಿ ಶಿಬಿರದ ಭಾಗವೇ ಆದ ಉಪನ್ಯಾಸಗಳ ಸಂಕ್ಷಿಪ್ತ ಪರಿಚಯವೂ ಇಲ್ಲಿದೆ.... - [ಕಲೆಗಳ ಸಂಗಡ ಮಾತುಕತೆ - ನೀನಾಸಂ ಶಿಬಿರ ೨೦೨೨](https://athreebook.com/2022/12/21/ninasam-camp-2022/): ಗುರುವಾರ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ ಮಂಗಳೂರು ಬಿಟ್ಟೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಿದ್ದವು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆಂದು ಹಿಡಿದುಕೊಂಡ ಬಟ್ಟೆಬರಿಗಳು ಬೈಕಿನ ದೊಡ್ಡ ಡಬ್ಬಿ ತುಂಬಿ, ದೇವಕಿಯ ಬೆನ್ನಿನ ಚೀಲಕ್ಕೂ ಸೇರಿಕೊಂಡಿತ್ತು. ನಾವು ನೆನೆದರೂ ಅವು ಒದ್ದೆಯಾಗಬಾರದು ಎಂಬ ಹೆಚ್ಚಿನ ಎಚ್ಚರದಲ್ಲಿ, ನಸು ಚಳಿಗೆ ನಡುಕ ಹುಟ್ಟುವ ವೇಗದಲ್ಲೇ ಮೂಡಬಿದ್ರೆ ಸೇರಿಕೊಂಡೆವು. - [ತುಮರಿಯ ದಾರಿಯಲ್ಲಿ...](https://athreebook.com/2022/12/10/way-to-tumari/): ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ ತುಮರಿ ಕಂಡದ್ದು ಬಹುತೇಕ ಮರವೆಗೆ ಸಂದಿತ್ತು. ದೀರ್ಘ ಬಿಡುವಿನ ಮೇಲೆ ಅಂದರೆ, ಕಳೆದ ಹತ್ತು ವರ್ಷಗಳಲ್ಲಿ, ನನಗೆ ಹೆಗ್ಗೋಡು ಒಡನಾಟ ಹೆಚ್ಚಾಗಿ, ಶರಾವತಿ ಸಾಗರದ ಪರಿಚಯ ಹೆಚ್ಚಿತು. ಜೋಗ, ಕೋಗಾರ ಘಾಟಿ, ಹಸಿರುಮಕ್ಕಿ, ಸಿಗಂದೂರು, ಹೊಸನಗರಗಳ ಭೇಟಿ ಮತ್ತು ಹೊನ್ನೇಮರಡಿನಲ್ಲಿ ಸಿಕ್ಕ ಆಪ್ತ ಸಾಹಸೀ ಅನುಭವದೊಡನೆ. ಒಟ್ಟಾರೆ ಶರಾವತಿ ನದಿಯ ಮುಳುಗಡೆ ವಲಯ ಹುಚ್ಚನ್ನೇ ಹತ್ತಿಸಿತ್ತು. ಇವಕ್ಕೆ ಗಜಾನನ ಶರ್ಮರ ‘ಪುನರ್ವಸು’ ಕಾದಂಬರಿಯ ಓದು ಮತ್ತು ಅಂತರ್ಜಾಲದ ಗೂಗಲ್ ನಕ್ಷೆಯ ವಿವರಗಳೂ ಬೆಸೆದುಕೊಂಡಾಗ ನಾನು ಕಾಣದ ಕನಸಿಲ್ಲ. ಇವಕ್ಕೆ ಕಲಶ ರೂಪವಾಗಿ ರಘು ಹಾಲ್ಕೆರೆಯಿಂದ ಕರೆ ಬಂತು "ಬನ್ನಿ ತುಮರಿಗೆ, ಬನ್ನಿ ಹಾಮ ಭಟ್ಟ ಸ್ಮೃತಿ ಹಬ್ಬಕೇ". - [ಮಡಿಕೇರಿ ಟಿಪ್ಪಣಿಗಳು](https://athreebook.com/2022/09/21/madikeri-storys/): ಕೌಟುಂಬಿಕ ಕಾರ್ಯಕ್ರಮ (೨-೯-೨೧) ಒಂದಕ್ಕಾಗಿ ತಲಕಾವೇರಿಯ ಸಮೀಪದ ‘ಕಾವೇರಿ ಯಾತ್ರಿಕ ಧಾಮ’ಕ್ಕೆ ಹೋಗಿ ಬರುವಾಗ ಭಾಗಮಂಡಲದಲ್ಲಿ ಕಾವೇರಿಯ ಮೇಲಿನ ಈ ಅಪೂರ್ಣ ಸೇತುವೆ ಕಂಡೆ. ಅದರ ಸ್ಥಗಿತಗೊಂಡ ಕಾರ್ಯದ ಪ್ರಾಚೀನತೆ ಮತ್ತು ಅಪೂರ್ಣತೆ ನೋಡಿ, ಖಂಡಿತವಾಗಿಯೂ ಇದು ಜವಾಹರಲಾಲ್ ನೆಹರೂ ಮಾಡಿದ ಇನ್ನೊಂದು ಮಹಾಪರಾಧ ಎಂದೇ ನಿರ್ಧರಿಸಿದ್ದೆ. - [ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ](https://athreebook.com/2022/05/23/shatayushi-sammana/): "ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ ಮನೆಯಲ್ಲಿ ಸೇರುತ್ತಿದ್ದೆವು. ಅಲ್ಲಿ ಆಡದ ಮಾತಿಲ್ಲ, ಮಾಡದ ಚಟುವಟಿಕೆಗಳಿಲ್ಲ…." ಎಂದೇ ತೊಡಗಿತ್ತು ಎನ್.ಜಿ ಮೋಹನರ ಪ್ರಾಸ್ತಾವಿಕ ಮಾತುಗಳು. ಸಂದರ್ಭ - ಮೋಹನ್ನರ ತಾಯಿ - ವಸಂತಿ ಟೀಚರ್ ಅವರ ಜನ್ಮ ಶತಾಬ್ದಿ, ಅವರ ಪುಸ್ತಕ - ಬೀದಿ - [ಚಿತ್ರಪಟ ರಾಮಾಯಣ - ಚಿತ್ರ, ಕತೆ](https://athreebook.com/2022/04/15/chitrapata-ramayana/): ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ನಾಟಕ ಶಾಲೆ ವಾರಣಾಸಿಯಲ್ಲೊಂದು ಶಾಖೆ ತೆರೆಯಿತು. ಅದರ ನಿರ್ದೇಶಕರು ರಾಮ್ ಜಿ. ಬಾಲಿ (/ವಾಲಿ). ಪುರಾಣ, ಕಲೆಗಳಲ್ಲೆಲ್ಲ ರಾಮ ಮತ್ತು ವಾಲಿಯ ಹೆಸರುಗಳು ಎದುರು ಬದಿರಾಗಿ ಕಂಡರೆ ಇವರಲ್ಲಿ ಅಪೂರ್ವವಾಗಿ ಸಮನ್ವಯಗೊಂಡಿದೆ. ರಾಮ್ಜೀ ಅಧಿಕಾರದ ಹೊಸತರಲ್ಲೇ ಉಡುಪಿಯ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣರನ್ನು ಯುಕ್ತ ಸಮ್ಮಾನದೊಡನೆ ವಾರಣಾಸಿಗೆ ಕರೆಸಿಕೊಂಡಿದ್ದರು. ನಾಟಕ ಕಲಿಕೆಯ ಹಿಂದಿ ವಿದ್ಯಾರ್ಥಿಗಳಿಗೆ ಸುವರ್ಣರ ಮೂಲಕ ಕನ್ನಡದ ಯಕ್ಷಗಾನವನ್ನೂ ಕಲಿಸಿದರು! - [ಸಸ್ಯ ತಪಸ್ವಿ ಗೋಪಾಲಕೃಷ್ಣ ಭಟ್](https://athreebook.com/2022/04/11/plant-ascetic-gopalakrishna-bhat/): ಡಾ| ಕಾಕುಂಜೆ ಗೋಪಾಲಕೃಷ್ಣ ಭಟ್ಟರ (ಕೆ.ಜಿ ಭಟ್) ಸಹಜ ಹಸನ್ಮುಖವನ್ನು ಹೊತ್ತ, ಹೊಳಪುಳ್ಳ ಉತ್ತಮ ಕಾಗದದ ನೂರಾ ಹದಿನಾರು ಪುಟಗಳ, ಅಸಂಖ್ಯ ಚಿತ್ರಗಳ ಪುಸ್ತಕ - ಟ್ಯಾಕ್ಸೋನೊಮಿ ಭಟ್ಟರ ಯಾನ. ನಿಜ ‘ಎಲೆಗಳ ಹಿಂದೆ’ ಬೀಳುವ ಗೀಳಿನ ಭಟ್ಟರ ವ್ಯಕ್ತಿತ್ವ ಸಾಮಾನ್ಯ ಲೋಕಮುಖಕ್ಕೆ, ಲೋಕೋಕ್ತಿಯಂತೆ ಎಲೆಯ ಮರೆಯಲ್ಲೇ ಉಳಿದಿತ್ತು. ಆ ಕೊರತೆಯನ್ನು ಕಿರಿದರಲ್ಲಿ ನೀಗಿಸುವ ಪ್ರಾಮಾಣಿಕ ಪ್ರಯತ್ನ ಈ ಪುಸ್ತಕ. - [ಡಾ| ಕೃಷ್ಣಮೋಹನ ಪ್ರಭು ಇನ್ನಿಲ್ಲ](https://athreebook.com/2022/01/21/dr-krishnamohan-prabhu-no-more/): ಮಲೇಶ್ಯಾದಿಂದ ವೈದ್ಯಕೀಯ ಓದಿಗಾಗಿ ಅಸಂಖ್ಯ ವಿದ್ಯಾರ್ಥಿಗಳು ಮಂಗಳೂರು, ಮಣಿಪಾಲಕ್ಕೆ ಬರುತ್ತಿದ್ದ ಕಾಲವದು (ಸುಮಾರು ೧೯೮೪). ಆ ಬಳಗದ್ದೇ ಇದೊಂದು ಕುಡಿ ಎಂದೇ ನಾನೋರ್ವ ಧಡೂತಿ ತರುಣನನ್ನು ಭಾವಿಸಿದ್ದೆ. ಆದರೆ ಒಮ್ಮೆ ನಾನು ಇನ್ಯಾರದೋ ಜತೆ ಕನ್ನಡದಲ್ಲಿ ಮಾತಾಡುತ್ತಿದ್ದಾಗ, ಅಲ್ಲೇ ಇದ್ದ ಈತ ಅರ್ಥಪೂರ್ಣ ನಗೆ ಕೊಟ್ಟ! ಆಗ ತಿಳಿಯಿತು, ಈತ ಅಪ್ಪಟ ಕನ್ನಡಿಗ - ಸಮೀಪದ ಮೂಡಬಿದ್ರೆಯ ಕೃಷ್ಣಮೋಹನ ಪ್ರಭು - [ಆಷ್ಟಭುಜೆ ರಮಾದೇವಿಗೆ ನಮನ](https://athreebook.com/2021/11/17/greetings-to-ramadhevi/): ಅತ್ತಿಗೆ ಬಹು ಚಟುವಟಿಕೆಯ, ನಿರೋಗೀ ವ್ಯಕ್ತಿ. ಸುಮಾರು ದಶಕಗಳ ಹಿಂದೆ ಆಕಸ್ಮಿಕವಾಗಿ ಪಾಲದಿಂದ ತೋಡಿಗೆ ಬಿದ್ದು ಸೊಂಟ ಮುರಿದುಕೊಂಡರೂ ಆರೇ ತಿಂಗಳಲ್ಲಿ ಹಿಂದಿನ ಲವಲವಿಕೆಗೇ ಮರಳುವಷ್ಟು ಚೇತರಿಸಿಕೊಂಡರು. ಆದರೆ ಸುಮಾರು ಹದಿನೇಳು ವರ್ಷಗಳ ಹಿಂದೆ ಬಡಿದ ಪಾರ್ಶ್ವ ವಾಯು. ಮುಂದೆ ಏನೇನೋ ಅನಾರೋಗ್ಯ ಸರಣಿ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತಲೇ ಹೋದವು. - [ಪುಸ್ತಕ ವಿಭಾಗ](https://athreebook.com/2021/09/10/books-department/): ಕನ್ನಡ ವಿದ್ಯುನ್ಮಾನ (ವಿ)-ಪುಸ್ತಕಗಳು ಅತ್ರಿ ಬುಕ್ ವಿ–ಪ್ರಕಾಶನ(ಉಚಿತ)   ಕನ್ನಡ ಪುಸ್ತಕೋದ್ಯಮದಲ್ಲಿ ಮುಖ್ಯವಾಗಿ ಬಿಡಿ ಮಾರಾಟಗಾರನಾಗಿ ಮತ್ತೆ ಪ್ರಕಾಶನವೇ ಮೊದಲಾದ ಕೆಲವು ಮುಖಗಳಲ್ಲಿ ಚೂರುಪಾರೆಂದು ಸುಮಾರು ಮೂವತ್ತಾರು ವರ್ಷ ಪ್ರಾಮಾಣಿಕ ದುಡಿದ ಅನುಭವ ನನ್ನದು. ಆ ಕೊನೆಯಲ್ಲಿ ಕನ್ನಡ ಮುದ್ರಣ–ಪ್ರಕಾಶನ ಮಾಧ್ಯಮದ ಹುಸಿತನಕ್ಕೆ ರೋಸಿ ಪ್ರಕಾಶನವನ್ನು ಮುಚ್ಚಿದೆ, ಅನಂತರ ಸ್ವಯಂ ನಿವೃತ್ತಿ ಘೋಷಿಸಿ ಪುಸ್ತಕ ಮಾರಾಟವನ್ನೂ ನಿಲ್ಲಿಸಿದೆ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಗಂಭೀರ ಓದುಗರಿಲ್ಲ ಅಥವಾ ಸಾರ್ವತ್ರಿಕ ಉಪಯುಕ್ತವಾದ ಅನುಭವಗಳಿಗೆ ಅಭಿವ್ಯಕ್ತಿ ಮಾಧ್ಯಮವೇ ಇಲ್ಲ ಎಂದಲ್ಲ ಎನ್ನುವಂತೆ ಅಂತರ್ಜಾಲದ ಜಾಲತಾಣಗಳು, ಜಾಲಪತ್ರಿಕೆಗಳು ವಿಕಸಿಸುವುದನ್ನು ಕಾಣುತ್ತಿದ್ದೇನೆ. ಸ್ವತಃ ನನ್ನದೇ ಆದ ಈ ಜಾಲತಾಣದ (www.athreebook.com) ವ್ಯಾಪ್ತಿ ಇನ್ನೂ ಅಚಿಂತ್ಯ, ಅನಂತವಾಗಿಯೇ ಕಾಣುತ್ತಿದೆ. ಜಾಲತಾಣದ ಬಹುಮುಖೀ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ, ಕಾಲಕಾಲಕ್ಕೆ ಅವನ್ನು ನನ್ನ ಜಾಲತಾಣಕ್ಕೆ ಅಳವಡಿಸಿಕೊಡುತ್ತಲಿರುವವನು ನನ್ನ ಮಗ ಅಭಯಸಿಂಹ– ಈ ಜಾಲತಾಣದ ನಿರ್ವಾಹಕ. ನಾನು ಜಾಲತಾಣಕ್ಕಿಳಿಯುವ ಕಾಲದಲ್ಲಿ, ಇದು ಮುದ್ರಣ ಮಾಧ್ಯಮದಲ್ಲಿ ಬಂದ ನನ್ನ ಬರಹಗಳ ವಿದ್ಯುನ್ಮಾನ ದಾಸ್ತಾನು ಕೋಠಿ ಎಂದಷ್ಟೇ ಭಾವಿಸಿದ್ದೆ. ಆದರಿಂದು ಇಲ್ಲಿನ […] - [‘ನಕ್ಷೆ’ತ್ರಿಕನ ವಿಷಾದದ ಎಳೆ](https://athreebook.com/2021/08/07/the-thread-of-regret/): ಈಚೆಗೆ ಫೇಸ್ ಬುಕ್ ಗೆಳೆಯ ರಾಜೇಂದ್ರ ಪ್ರಸಾದ್, ನನ್ನ ಗಣಪತಿ ಗುಹಾ ನಕ್ಷೆ (೧೯೯೪) ನೋಡಿ ಮೋಹಗೊಂಡು, ವಿವರ ವಿಚಾರಿಸಿದರು. ಸೀಮಿತ ಮುದ್ರಿತ ನಕಾಶೆಗಳಿದ್ದ ಕಾಲದ ಅಗತ್ಯಕ್ಕೆ ನಾನು ಬಿಡಿಸಿದ ೯೬ ನಕ್ಷೆಗಳ ಕುರಿತು ಒಂದೆರಡು ಮಾತು ಹೇಳಿದೆ. ಆತ ಎಲ್ಲವನ್ನು ಪುಸ್ತಕವಾಗಿ ಪ್ರಕಟಿಸಲು ಒತ್ತಾಯಿಸಿದರು. ನಾನೋ ‘ಇದು ಮುದ್ರಿತ ಪುಸ್ತಕಗಳ ಕಾಲವೇ ಅಲ್ಲ’ ಎಂದು ಘೋಷಿಸಿ ಇದ್ದ ಪುಸ್ತಕ ಪ್ರಕಾಶನ, ಅಂಗಡಿಗಳನ್ನು ಮುಚ್ಚಿದವ ! - [ಗುಹಾ ನೆನಪುಗಳು, ಇನ್ನಷ್ಟು](https://athreebook.com/2021/07/03/guha-memories/): "ಅಶೋಕ್ವರ್ಧನ್ ನೀವು ಈ ಸುಳ್ಳಮಲೆ-ಬಲ್ಲಮಲೆ ಕಾಡಿನೊಳಗಿರುವ ಗುಹೆಯಳಗಿನ ಜಲಪಾತ ನೋಡಲೇಬೇಕು" ಎಂದು ಮೊದಲ ಕಿಡಿ ಹಚ್ಚಿದವರು ಏರ್ಯ ಲಕ್ಷ್ಮೀನಾರಾಯಣ ಆಳ್ವ. ಆ ಹೊಸತರಲ್ಲೇ ಒಂದು ದಿನ (೨೫-೨-೧೯೯೦) ನಮ್ಮ ಏಳು ಮಿತ್ರರ ಬಳಗ, ಬೈಕ್ ಸ್ಕೂಟರುಗಳನ್ನೇರಿ ಸುಳ್ಳಮಲೆಯ ತೀರ್ಥದ ಗುಹೆ ವಿಚಾರಿಸಿಕೊಂಡು ಹೋಗಿತ್ತು. ಮಂಗಳೂರು - ಪುತ್ತೂರು ದಾರಿಯಲ್ಲಿ ಸೂರಿಕುಮೇರಿಗೆ ಮೊದಲೇ ಬಲಕ್ಕೆ ಸಿಗುವ ಮಣ್ಣ ದಾರಿಯವರೆಗೆ ಅವರಿವರಲ್ಲಿ ವಿಚಾರಿಸಿಕೊಂಡೇ ಹೋಗಿದ್ದೆವು. ಅಲ್ಲಿ ನಮ್ಮ ಅದೃಷ್ಟಕ್ಕೆ ಶಂಭುಕದ ಬಾಲಕೃಷ್ಣ ಶೆಟ್ಟಿ ಮಾರ್ಗದರ್ಶಿಯಾಗಿ ಒದಗಿದರು. - [ದುಗ್ಗುಳಮಾಟೆ ಮತ್ತಿತರ ಮಣಿಪಾಲ ಗುಹೆಗಳು](https://athreebook.com/2021/06/23/manipal-cave/): ಜಗನ್ನಾಥ್ ಪದವಿನಂಚಿನಲ್ಲಿ ಅಡ್ಡಗಟ್ಟೆ ಕಟ್ಟಿ, ನೀರಿನ ದಿಕ್ಕು ತಪ್ಪಿಸಿ ಜಲಪಾತ ನಿಲ್ಲಿಸಿದರು. (ಇಂದಿನ ಲೆಕ್ಕದಲ್ಲಿ ಹೇಳುವುದಿದ್ದರೆ, ಪದವಿನ ಕಸ, ಕೊಳಚೆಗಳನ್ನೇ ತಪ್ಪಿಸಿಕೊಂಡರು.) ಅನಂತರ ನೀರು ಬಿದ್ದು ಪೊಳ್ಳಾದ ಜಾಗದ ಪೊದರು, ಕಸ ಬಿಡಿಸುವಾಗ ಸಣ್ಣದೊಂದು ಗುಹೆ ತೆರೆದುಕೊಂಡಿತು. ಉತ್ಸಾಹ ಹೆಚ್ಚಿ ಮತ್ತಷ್ಟು ಆಸುಪಾಸಿನ ಪೊಳ್ಳು ಸೆರೆಗಳನ್ನು ಬಿಡಿಸಿ, ಸಣ್ಣ ಮಟ್ಟದ ಗುಹಾಜಾಲವನ್ನೇ ಅನಾವರಣಗೊಳಿಸಿದ್ದರು. - [ಅಂಬರೀಷ ಗುಹೆ](https://athreebook.com/2021/06/18/ambhareesha-cave/): ಮೂಡಬಿದ್ರೆ - ಕಾರ್ಕಳ ದಾರಿಯ ಬೆಳ್ವಾಯಿ ಕವಲಿನಿಂದ ನಾಲ್ಕೂವರೆ ಕಿಮೀ ಪಶ್ಚಿಮಕ್ಕಿರುವ ಕಾಂತೇಶ್ವರ ದೇವರ ಊರು ಕಾಂತಾವರ. ಸೋನ್ಸ್ ಒಮ್ಮೆ ಕಾಂತಾವರಕ್ಕೆ ಹೋದಾಗ ಕ್ಷೇತ್ರದ ‘ಎನರ್ಜಿ’ಯನ್ನು ಅನುಭವಿಸಿದರಂತೆ. ಮುಂದುವರಿದು ದೇವಳದ ಕೆರೆ, ಅದರ ಮೂಲ ನೆಲೆಯೆಂದೇ ಜನಪದ ನಂಬಿದ ಅಂಬರೀಷ ಗುಹೆಯ ಪರಿಚಯ ಪಡೆದರು. ಸಹಜವಾಗಿ ಅವರ ಡೌಸಿಂಗ್ ತಂತ್ರ ಪ್ರಯೋಗಿಸಿ, ಅಂಬರೀಷ ಗುಹಾಜಾಲದ ನಕ್ಷೆ ಮಾಡಿದರು, ಮಂಗಳೂರಿಗೆ ಬಂದಾಗ, ನನ್ನೆದುರು ಇಟ್ಟಿದ್ದರು. ನಾನು ಕೂಡಲೇ ಗುಹೆಯ ವಾಸ್ತವ ದರ್ಶನದ ಅನುಭವ ಗಳಿಸಲು ತಂಡ ಹೊರಡಿಸಿದೆ. - [ಜಯಂತರಿಗೊಂದು ನುಡಿ ನಮನ](https://athreebook.com/2021/05/28/condolence-to-jayanth/): ಜಯಂತರ ಕೌಟುಂಬಿಕ ಹಿನ್ನೆಲೆ ಹಣಕಾಸಿನದ್ದಲ್ಲ. ಹಾಗಾಗಿ ಅವರು ಗಳಿಸಿದ ವಿದ್ಯಾ ಯೋಗ್ಯತೆಗೆ ದಕ್ಕಿದ ವೃತ್ತಿ ಭದ್ರತೆಯಲ್ಲಿ ‘ನಾನು, ನನ್ನ ಸಂಸಾರ’ ಎಂದು ಬೆಚ್ಚಗುಳಿದು ಬಿಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಜಯಂತರು ವೃತ್ತಿ, ಮದುವೆ, ಮಕ್ಕಳು ಎಂದು ತೊಡಗಿಕೊಂಡ ಕಾಲಕ್ಕೇ ಕೌಟುಂಬಿಕ ಗೊಂದಲಗಳಲ್ಲಿ, ಸ್ವಂತ ಮನೆಯಿಂದಲೇ ಹೊರಬೀಳಬೇಕಾಯ್ತು. ಬಹುತೇಕ ಊರ ಹೊರಗೇ (ಸರೀಪಳ್ಳ) ಎಂಬಂತೆ ನಿವೇಶನ ಕೊಂಡು, ಸರಳ ಮನೆ ಕಟ್ಟಿಸಿ ನೆಲೆಸಿದರು. ಆ ಸರಳತೆಯ ಭಾಗವೇ ಎನ್ನುವಂತೆ, ಜಯಂತ ಎಂದೂ ಸ್ವಂತ ವಾಹನ ಇಟ್ಟುಕೊಳ್ಳಲೇ ಇಲ್ಲ. - [ಮುಕ್ಕಾಂ ಕಪ್ಪೆಗೂಡು](https://athreebook.com/2021/04/29/kappegoodu/): ಕಪ್ಪೇಗೂಡಿ’ಗೆ ಮೇಲ್ಟಾಂಕಿ ಕೂರಿಸಿ ಬಂದ ಮೇಲೆ ನಾನು ಅತ್ತ ತಲೆ ಹಾಕಿರಲಿಲ್ಲ. ಬಾಕಿಯುಳಿದ ಚಿಲ್ಲರೆ ಕೆಲಸ ಸೇರಿಸಿಕೊಂಡು, ಬಳಸು ದಾರಿಯಲ್ಲಿ ಅಶೋಕವನಕ್ಕೆ ಹೋಗುವ, ಮೂರು ದಿನದ ಮೊಕ್ಕಾಂ ಮಾಡುವ ಯೋಜನೆ ಹಾಕಿದೆ. ಹಿಂದಾದರೋ ಶಿರಾಡಿಘಾಟ್ ಏರಿ ಸಕಲೇಶಪುರಕ್ಕೂ ಮೂರು ಕಿಮೀ ಮೊದಲು ಸಿಗುವ ಮಂಜರಾಬಾದಿನಲ್ಲಿ ಬಲ ಹೊರಳಬೇಕಿತ್ತು. ಆದರೆ ಈಗ ಹದಿನಾರು ಕಿಮೀ ಮೊದಲೇ ಸಿಗುವ ಮಾರನಹಳ್ಳಿಯಲ್ಲಿ ಕವಲಾದರೆ ಸಾಕು. ಎತ್ತಿನಹೊಳೆ ಯೋಜನೆಯ ಉಪೋತ್ಪನ್ನವಾದ ಕಾಂಕ್ರೀಟ್ ದಾರಿ ನಮಗೆ ಮೂವತ್ತಕ್ಕೂ ಮಿಕ್ಕು ಉಳಿತಾಯದ ದಾರಿ. - [ಯಕ್ಷಗಾನ ದೀವಟಿಗೆ ಬೆಳಕಿನಲ್ಲಿ, ಮರುಚಿಂತನೆ](https://athreebook.com/2021/04/14/yakshagana-lights/): "ಯಕ್ಷಗಾನಕ್ಕೆ ಆರ್ನೂರೋ ಎಂಟ್ನೂರೋ ವರ್ಷಗಳ ಇತಿಹಾಸವಿದೆ ಎಂದು ಕೇಳಿದ್ದೇನೆ, ಇರಬಹುದು. ಆದರೆ ಇಂದು ನಮ್ಮಲ್ಲಿ, ಅಂದರೆ ಕರ್ನಾಟಕದ ಕರಾವಳಿ ಸೇರಿದಂತೆ ಸ್ವಲ್ಪ ಮಲೆನಾಡಿನ ಜಿಲ್ಲೆಗಳಲ್ಲಿ ಬಹಳ ಜನಪ್ರಿಯತೆ ಮಾತ್ರವಲ್ಲ, ಬಹುದೊಡ್ಡ ‘ಉದ್ಯಮ’ವೇ ಆಗಿ (ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟುಗಳು) ಕಂಡ ಬೆಳವಣಿಗೆಗೆ ಮಾತ್ರ ಈ ಪ್ರಾಚೀನತೆ ಇದ್ದಂತಿಲ್ಲ. ವಾಸ್ತವದಲ್ಲಿ ಇದು ನೂರು ನೂರಿಪ್ಪತ್ತು ವರ್ಷಗಳಷ್ಟು ಆಧುನಿಕವೇ ಇದೆ" ಎಂದು ಗೋವಾ ವಿವಿನಿಲಯದ ಪ್ರಾಧ್ಯಾಪಕ ಕೆ. ಶ್ರೀಪಾದ ಭಟ್ ಹೇಳಿದರು. - [ಲಕ್ಷದ್ವೀಪದ ಮರಿ - ಪೆರುಮಾಳ ಪಾರ](https://athreebook.com/2021/04/12/lakshadweep-perumala-paara/): ನಾನು ಮಂಗಳೂರಿನಿಂದ ಲಕ್ಷದ್ವೀಪ ಸಮೂಹದ ಅಗಾತ್ತಿ ದ್ವೀಪದ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಬಂದು ಒಂದು ವರ್ಷ ಕಳೆಯಿತು. ಇಲ್ಲಿನ ಎಲ್ಲಾ ದ್ವೀಪಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವುದು ನನ್ನ ಆಸೆ. ಆದರೆ ದುರದೃಷ್ಟಕ್ಕೆ ಈ ಕೊರೊನಾ ಬಾಧೆ ವಕ್ಕರಿಸಿ ಕೆಲವು ತಿಂಗಳಕಾಲ ಎಲ್ಲವೂ ಅಸ್ತವ್ಯಸ್ತವಾಯಿತು. ದ್ವೀಪಕಲ್ಪದ ಹೊರಗಿನವರು ಇತರ ಮುಖ್ಯ ದ್ವೀಪಗಳಿಗೆ ತೆರಳಲು ಅಧಿಕೃತ ಅನುಮತಿ ಪಡೆಯಬೇಕು. ಅದನ್ನು ಪಡೆದರೂ ಇಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲ. ಆದರೂ ಇಲ್ಲಿನ ನನ್ನ ಸೇವಾವಧಿ ಮುಗಿಯುವ ಮುನ್ನ ಕನಿಷ್ಠ ಎಲ್ಲ ಜನವಸತಿಯ ದ್ವೀಪಗಳನ್ನಾದರೂ ಕಾಣಬೇಕೆನ್ನುವ ಕನಸಿಗೆ ಕಾವು ಕೊಡುತ್ತಲೇ ಇದ್ದೇನೆ... - [ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ](https://athreebook.com/2021/04/07/rangapurusha-drama/): ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ: ಸಿನಿಮಾವಲ್ಲ, ದಾಖಲೀಕರಣ) ಅಂಥದ್ದೇ ಯೋಜನೆಯ ಭಾಗವಾಗಿ ೨೦೧೯ರ ಒಂದು ದಾಖಲೀಕರಣಕ್ಕೆ ಜತೆಗೊಟ್ಟ ನನಗೆ, ಅಯಾಚಿತವಾಗಿ ಆ ವರ್ಷದ ನೀನಾಸಂ ರಂಗ ಶಾಲೆಯ ಹೊಸ ವಿದ್ಯಾರ್ಥಿಗಳ ಮೊದಲ ದಿನವನ್ನೂ ನೋಡುವ ಅವಕಾಶ ಒದಗಿತ್ತು. - [ಕಾಡಿನೊಳಗೊಂದು ಮನೆಯ ಮಾಡೀ ......](https://athreebook.com/2021/02/27/a-house-with-in-a-jungle/): ಬಚ್ಚಲು, ಕಕ್ಕೂಸ್ ಅಲ್ಲದೆ ಯಾವುದಕ್ಕೂ ಹೊಂದುವಂತೆ ಸ್ವಲ್ಪ ಖಾಲೀ ಜಾಗವನ್ನೂ ರೂಪಿಸಿದೆ. ವರ್ಷಪೂರ್ತಿ ಹರಿಯುವ ಬೆಟ್ಟದ ನೀರು ಉಪಯೋಗಕ್ಕೆ. ಕೊಳಚೆನೀರು ಭೂಗತವಾಗುವಂತೆ ಗುಂಡಿ. ಬೆಳಕಿಗೆ ಸಾಕ್ಷಾತ್ ಸೂರ್ಯನಾರಾಯಣ - ಸೌರಶಕ್ತಿ! ಅಶೋಕವನದೊಳಗೆ ಹೊಸದಾಗಿ ದಾರಿ ಕಡಿಯುವುದು, ನೆಲ ತಟ್ಟು ಮಾಡುವುದು ನಮಗೆ ಬೇಕಿರಲಿಲ್ಲ. ಮೊದಲೇ ಇದ್ದ ಕಚ್ಚಾ ದಾರಿ ಮತ್ತು ನಾವು ಸದಾ ಬಳಸಿದ ಶಿಬಿರ ತಾಣವೇ ಕಪ್ಪೆಗೂಡಿಗೆ ನಿವೇಶನ. ಅಲ್ಲೂ ತೊರೆಯ ಮಳೆಗಾಲದ ಪ್ರವಾಹ ಅಂದಾಜಿಸಿ, ಸ್ವಲ್ಪ ಹಿಂದಣ ನಾಕೆಂಟು ಪ್ರಾಕೃತಿಕ ಬಂಡೆಗುಂಡುಗಳನ್ನೇ ಆಯ್ದುಕೊಂಡೆ. ಇಂದು ಹೊಸ ಕಟ್ಟಡಗಳ ನಿವೇಶನ-ಕಛೇರಿಯಾಗಿ ಕಂಟೇನರ್ ಮನೆಗಳು ಸಾಮಾನ್ಯವಾಗುತ್ತಿವೆ. ಮತ್ತೆ ಲಾರಿಗಳನ್ನೇರಿ ಊರೂರು ತಿರುಗುವ ಕಂಟೇನರ್ಗಳನ್ನೂ ಧಾರಾಳವಾಗಿ ಕಾಣಬಹುದು. - [ಬಿಸಿಲೆಯಲ್ಲಿ ಹೊಸ ಬೆಳಕು - ಕಪ್ಪೆಗೂಡು](https://athreebook.com/2021/02/02/bisile-ghat-kappegoodu-story/): "ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ ಆಮಂತ್ರಣದ ಮೇಲೆ, ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಕುತೂಹಲ ಮತ್ತು ಅಪಾರ ಸಹಾನುಭೂತಿ ಇಟ್ಟುಕೊಂಡು ಬಂದ ಎಲ್ಲರಿಗೂ ಹಾರ್ದಿಕ ಸ್ವಾಗತ. ಖಾಸಗಿ ವನ್ಯ ಸಂರಕ್ಷಣೆಯ ತೀರಾ ಸಣ್ಣ ಪ್ರಯೋಗವನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳುವ ತಾಳ್ಮೆ ಹೊತ್ತು ಬಂದ ಒಬ್ಬೊಬ್ಬರ ಪರಿಚಯ ಮತ್ತು ಉಪಸ್ಥಿತಿಯ ಮಹತ್ವ ವಿಸ್ತರಿಸಲು ನನ್ನ ಸಾಮರ್ಥ್ಯವೂ ದಿನವೂ ಸಣ್ಣದಾಗುವುದರಿಂದ ಮಾಡುತ್ತಿಲ್ಲ, ಕ್ಷಮಿಸಿ. ಸಭೆ ತೀರಾ ಸಣ್ಣದು ಮತ್ತು ಅನೌಪಚಾರಿಕವೂ ಇರುವುದರಿಂದ ನೀವು ನೀವೇ ವನ್ಯಸಂರಕ್ಷಣೆಯ ಹಿತಕ್ಕಾಗಿ ಪರಸ್ಪರ ಪರಿಚಯ ಮಾಡಿಕೊಳ್ಳಬೇಕು, ಸ್ನೇಹಸಂಬಂಧ ಬೆಳೆಸಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ." - [ಅಡುಗೆಮನೆ ಜಗತ್ತಿನ ‘ಅವಿಲು’ಪಾಕ](https://athreebook.com/2020/12/02/a-seminar-on-the-world-of-kitchen/): ಮಣಿಪಾಲದ ಡಾ| ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠಕ್ಕೆ ವೈದೇಹಿಯವರು ಗೌರವಾಧ್ಯಕ್ಷೆಯಾಗಿದ್ದ ಕಾಲವದು (೨೦೧೭). ಅವರ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ, ಅಂದು ಎರಡು ದಿನಗಳುದ್ದಕ್ಕೊಂದು ವಿಚಾರ ಸಂಕಿರಣ - `ಅಡುಗೆಮನೆ ಜಗತ್ತು’ ಸಂಘಟಿಸಿದ್ದರು. ಅದರಲ್ಲಿ ನಮ್ಮ ಮಗ – ಅಭಯಸಿಂಹನಿಗೆ ಓರ್ವ ಪ್ರಬಂಧಕಾರನ ಪಾತ್ರ ಕೊಟ್ಟಿದ್ದರು. ಆದರೆ ವೇದಿಕೆ ಮೇಲಿನ ಮಾತು ಮತ್ತು ಕೆಳಗಿನ ಕೇಳ್ಮೆ ಮೀರಿ, ಹಳೆಗಾಲದ ಅಡುಗೆಮನೆಯ ಒಲೆಕಟ್ಟೆ ಸುತ್ತಣ ಸಂವಾದದ ಸಾಧ್ಯತೆಯನ್ನೂ ಶೋಧಿಸುವ ಸಾಹಸ ವೈದೇಹಿಯವರದ್ದು. ಇದಕ್ಕೆ ಬಲಕೊಡುವಂತೆ ವೇದಿಕೆಯ ಕಲಾಪಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಹಲವು ಆಯ್ದ ಖ್ಯಾತನಾಮರನ್ನು ಕರೆಸಿದ್ದಂತೆ ನನಗೂ ದೇವಕಿಗೂ ಸ್ಪಷ್ಟ ಆಮಂತ್ರಣವನ್ನು ವೈದೇಹಿಯವರು ಹೇರಿದ್ದರು. - [ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು](https://athreebook.com/2020/11/25/cycling-story/): ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ ಕಾಂಕ್ರೀಟೀಕರಣ ಮುಗಿದಿದೆ. ಏಕಮುಖ ಸಂಚಾರದ ನಿರ್ಬಂಧ ಏರುವವರ ಪರವಾಗಿಯೇ ಇತ್ತು. ವೃತ್ತದಲ್ಲಿ ನೇರ ಸಾಗಿ, ಪದವು ಶಾಲೆ, ಯೆಯ್ಯಾಡಿ, ಬೊಂದೇಲ್, ಕಾವೂರು ವೃತ್ತ, ಮರಕಡ, ಫಲ್ಗುಣಿ ನದಿ ದಾಟಿ, ವಿಮಾನ ನಿಲ್ದಾಣದ ಹೊಸ ದಾರಿಯವರೆಗೂ ಓಟಕ್ಕೊಂದು ಚೂಪು ಇರಲಿಲ್ಲ. ಇಲ್ಲಿ ಹಳೆಯ ಆದ್ಯಪಾಡಿ ರಸ್ತೆಗೆ ಹೊಸ ಬಾಯಿ ಕೊಟ್ಟು, ಇಲಿ ಹಿಡಿಯಲೆಂದೇ ಭಾರೀ ಗುಡ್ಡ ಅಗೆದದ್ದರ ವರ್ತಮಾನ ನೋಡುವ ಉತ್ಸಾಹದಲ್ಲಿ ತಿರುಗಿದೆ. ಹೊಸದಾರಿ ಗಿಡ್ಡವಾದ್ದರಿಂದ ಏರುವ ಕೋನದಲ್ಲಿ ಏನೂ ವ್ಯತ್ಯಾಸವಾಗಿರಲಿಲ್ಲ. ಆದರೆ ಹರಹು, ತಿರುವಿನ ಬಳುಕು, ಸಂಧಿಸ್ಥಾನದ ಡಾಮರ್, ಮುಂದುವರಿದು ಕಾಂಕ್ರೀಟ್ ಹಾಸು ನಿರೀಕ್ಷೆಯಂತೆ ಅದ್ಭುತವಾಗಿಯೇ ಇದೆ. - [WILDLIFE SANCTUARIES - Visited 1996](https://athreebook.com/2020/11/10/wildlife-sanctuaries-visited-1996/): [‘ಭಾರತ ಅ-ಪೂರ್ವ ಕರಾವಳಿಯೋಟ’ - ೧೯೯೬, ಸಾಹಸಯಾನ ಮುಗಿದ ಕೆಲವೇ ವಾರಗಳಲ್ಲಿ ನಾನೊಂದು ಇಂಗ್ಲಿಷ್ ವರದಿಯನ್ನು ಬರೆದಿದ್ದೆ. ಅದರಲ್ಲಿ ನಾವು ಭೇಟಿ ಕೊಟ್ಟ ಪ್ರಾಕೃತಿಕ ವೈಶಿಷ್ಟ್ಯಗಳನ್ನಷ್ಟೇ ಲೆಕ್ಕಕ್ಕೆ ಹಿಡಿದು, ಸಂಬಂಧಿಸಿದ ಇಲಾಖೆಗಳಿಗೆ ಹೀಗೊಂದು ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸುವ ಕರ್ತವ್ಯವನ್ನು ನಿರ್ವಹಿಸಿದ್ದೆ. ಇದರಲ್ಲಿದ್ದ ಅಸಂಖ್ಯ ಭಾಷಾ ಸ್ಖಾಲಿತ್ಯವನ್ನು ಅಂದೇ ನನ್ನ ತಂದೆ ತಿದ್ದಿ ಕೊಟ್ಟಿದ್ದರು. ಉಳಿದಂತೆ, ನನ್ನದು ಕೇವಲ ಹಕ್ಕಿನೋಟ ಮತ್ತು ಅವಸರದ ದರ್ಶನ ಎಂಬ ಅರಿವು ನನಗಿದೆ. ಇವೆಲ್ಲವುಗಳ ಮೇಲೆ ‘ತಜ್ಞ ವರದಿ’ ಕೊಡುವಲ್ಲಿ ನನಗೆ ಪ್ರಾಮಾಣಿಕ ವನ್ಯ ಪ್ರೀತಿಯೊಂದೇ ಬೆಳಕು, ವಿಸ್ತಾರ ಅಧ್ಯಯನ ಅಲ್ಲ ಎಂಬ ಅರಿವೂ ನನಗಿದೆ. ಎಲ್ಲಕ್ಕೂ ಮುಖ್ಯವಾಗಿ ಇದು ಇಪ್ಪತ್ನಾಲ್ಕು ವರ್ಷಗಳ ಹಿಂದಿನ ಪ್ರತ್ಯಕ್ಷ ಅನುಭವದ ಅಂದೇ ಬರೆದ ಸಾರಾಂಶ ಎನ್ನುವುದನ್ನೂ ಗಮನಿಸಿ.] - [ಹಂಪಿ, ದುರ್ಗ, ಜಯ ಮಂಗಳಂ](https://athreebook.com/2020/11/06/hampi-durga-trip/): ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ ಹಠವಾಗಲೀ ನನ್ನದಲ್ಲ. ಬದಲಿಗೆ ರಚನೆಗಳ ವೈಭವವನ್ನೂ ಅದರ ಸೃಷ್ಟಿಕರ್ತ ಮನುಷ್ಯನ ವರ್ತನೆಗಳನ್ನೂ ಕಂಡುಕೊಳ್ಳುವ ಕುತೂಹಲ ನನ್ನದು. ಹಾಗಾಗಿ ಈ ಯಾನದಲ್ಲಿ ಡಾರ್ಜಿಲಿಂಗ್, ಕಾನ್ಹಾಗಳಂತೆ ಕಾಶಿ, ಗಯಾಗಳನ್ನೂ ಪಟ್ಟಿ ಮಾಡಿ ನೋಡಿದ್ದೆ. ಅಲ್ಲಿ ದೇವ ಬಿಂಬದ ದರ್ಶನ, ಔಪಚಾರಿಕ ನಮನ, ತೀರ್ಥ ಪ್ರಸಾದಗಳಿಗೆ ನಾನು ಅಂಟಿಕೊಂಡದ್ದಿಲ್ಲ. ಉದಾಹರಣೆಗೆ, ತಿರುಮಲೆಯಲ್ಲಿ ಎರಡು ದಿನವಿದ್ದೂ ವೆಂಕಟ್ರಮಣನ ದರ್ಶನ ಮಾಡಲೇ ಇಲ್ಲ. ಆದರೆ ಎಲ್ಲೂ ಅವಾಗಿ ಒದಗಿದಾಗ ಭಾವ ತುಮುಲಗಳೇನೂ ಇಲ್ಲದೇ ತೀರ್ಥ, ಗಂಧ, ಹೂ, ತುಳಸಿ ಇತ್ಯಾದಿಗಳನ್ನು ವಸ್ತು ನಿಷ್ಠವಾಗಿ ಗ್ರಹಿಸುತ್ತ ಬಂದಿದ್ದೇನೆ. ತಿರುಪತಿಯ ಲಡ್ಡು, ಮಧೂರಿನ ಅಪ್ಪ, ಕಾಶ್ಮೀರದ ಖೀರು, ಅನ್ನಾವರಂನ ಸಪಾದಭಕ್ಷ್ಯ, ಕೃಷ್ಣಮಠದ ಮಡ್ಡಿ, ಶರವಿನ ಪಂಚಕಜ್ಜಾಯ, ಅನೇಕಾನೇಕ ದೇವಳಗಳ ಊಟ ಮುಂತಾದವನ್ನು ಮನಮೆಚ್ಚಿ ಸ್ವೀಕರಿಸಿದ್ದೇನೆ. - [ವಿಜಯ ಧಾವಂತ ಕರ್ನೂಲಿನವರೆಗೆ](https://athreebook.com/2020/10/30/vijayavada-tour/): ವಿಜಯವಾಡಾ ನಗರದ ನಡುವೆ ಇರುವ ಬೆಟ್ಟದ ಹೆಸರು ಇಂದ್ರಕೀಲಕ. ಅದು ಪುರಾಣ ಕಾಲದಲ್ಲಿ ಅಲ್ಲಿದ್ದ ಉಗ್ರ ತಪವನ್ನಾಚರಿಸಿದ ಮಹರ್ಷಿಯೊಬ್ಬನ ಹೆಸರಂತೆ. ಋಷಿಯ ತಪಸ್ಸಿಗೆ ಮಹಿಷಾಸುರ ವಿಘ್ನಕಾರಿಯಾದನಂತೆ. ಆಗ ಋಷಿ ದೇವಿ ಕನಕದುರ್ಗೆಯ ಮೊರೆಹೋದನಂತೆ. ದೇವಿ ಮಹಿಷಮರ್ಧಿನಿಯಾಗಿ ಮೆರೆದು, ಇಂದ್ರಕೀಲಕ ಬೆಟ್ಟದಲ್ಲಿ ಸಾರ್ವಕಾಲಿಕವಾಗಿ ನೆಲೆಸಿದ್ದಾಳೆ. ಆಕೆಯ ವಿಜಯದ ನೆಲೆಯಾಗಿ ಊರು ವಿಜಯವಾಡ. - [ಕಣ್ದಣಿಸಿದ ಬುರ್ರಾ, ಹೊಟ್ಟೆ ದಣಿಸಿದ ಕಾಕಿನಾಡ](https://athreebook.com/2020/10/26/burra-and-kakinad/): ಮುರಕಲ್ಲ ಹಾಸುಗಳಲ್ಲಿನ ದೊಡ್ಡ ಪೊಳ್ಳುಗಳನ್ನು ದಕ ಜಿಲ್ಲಾ ವಲಯದಲ್ಲಿ ನಾನು ಸಾಕಷ್ಟು ಕಂಡಿದ್ದೇನೆ, ಹೊಕ್ಕು ಹೊರಟಿದ್ದೇನೆ. ಗಟ್ಟಿ ಕೆಮ್ಮಣ್ಣಿನ ಹಾಸುಗಳಲ್ಲಿ ಬಿಳಿ-ಬೂದು ಬಣ್ಣದ ಮಿದು ಮಣ್ಣಿನ ಸೆಳಕುಗಳು ಅರ್ಥಾತ್ ಸೇಡಿ ಮಣ್ಣಿನ ಅಂಶಗಳು ಇರುತ್ತವೆ. ಅವು ನೂರಾರು ವರ್ಷಗಳ ನೀರ ಕೊರೆತದಲ್ಲಿ ತೊಳೆದು ಹೋಗಿ ಉಳಿದ ಖಾಲಿ ಜಾಗವೇ ಈ ಪೊಳ್ಳುಗಳು. ಇವು ಹೊರಲೋಕಕ್ಕೆ ಸಹಜವಾಗಿ ತೆರೆದಿರುವುದೂ ಇದೆ, ಕೆಲವೊಮ್ಮೆ ಮನುಷ್ಯ ಉದ್ದೇಶಪಟ್ಟೋ (ನೀರಿಗಾಗಿ) ಆಕಸ್ಮಿಕದಲ್ಲೋ ತೆರೆಯುವುದೂ ಇದೆ. - [ಪುರಿ, ಕೊನಾರ್ಕ ಮತ್ತು ಚಿಲ್ಕಾ](https://athreebook.com/2020/10/22/puri-konark-and-chilka/): "ಹೊಟ್ಟೆ ಪಾಡಿನ ಕಷ್ಟಕ್ಕಾಗಿ ನಮ್ಮ ಅನೇಕ ಹಿರಿಯರು ಕೇವಲ ಸೌಟು, ಸಟ್ಟುಗ ಹಿಡಿದು (ದಕ ಜಿಲ್ಲೆ) ಊರು ಬಿಟ್ಟಿದ್ದರು. ಅಪರಿಚಿತ ಊರು, ಅನಿಶ್ಚಿತ ಭವಿಷ್ಯಗಳ ನಡುವೆ ಆಂಧ್ರಪ್ರದೇಶವನ್ನು ವ್ಯಾಪಿಸಿ, ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತ ಅಂಥವರ ಸಾಹಸ ತುಂಬ ದೊಡ್ಡ ಕತೆ..." ಎಂದೇ ಕೂರಾಡಿ ಚಂದ್ರಶೇಖರ ಕಲ್ಕೂರರು (ಕೆ.ಸಿ ಕಲ್ಕೂರ) ಹೇಳಿದ್ದರು. ಅವರು ಆಂಧ್ರಪ್ರದೇಶದ ಕರ್ನೂಲಿನಲ್ಲಿ ಹಿರಿಯರ ಹೋಟೆಲ್ ಸಾಹಸವನ್ನು ಯಶಸ್ವೀಯಾಗಿಯೇ ಮುಂದುವರಿಸಿದ್ದರು. - [ಮಾರ್ಗಕ್ರಮಣ ಮತ್ತು ಸೋರಿದ ಎಣ್ಣೆ](https://athreebook.com/2020/10/19/bilaspura-and-jabbalpura/): ಜಬ್ಬಲ್ ಪುರದಿಂದೀಚೆಗೆ ನಮ್ಮ ಪ್ರಯಾಣ ಹೆಚ್ಚು ಪೂರ್ವಭಿಮುಖವಾಗಿತ್ತು. ಶಿವ್ರಿನಾರಾಯಣ್ ಎಂಬ ತೀರ್ಥಕ್ಷೇತ್ರದ ಬಳಿ ಮಹಾಸೇತುವೊಂದರಲ್ಲಿ ಪೂರ್ವವಾಹಿನಿಯೇ ಆದ ಮಹಾನದಿಯ ದರ್ಶನವೂ ಆಯ್ತು. ಶಿವ್ರಿನಾರಾಯಣದ ಸ್ಥಳಪುರಾಣ ಕುತೂಹಲಕರವಾಗಿದೆ. ಈ ವಲಯದ ಕಾಡು ರಾಮಾಯಣದ ದಂಡಕಾರಣ್ಯವಂತೆ. ಇಲ್ಲೇ ರಾಮಸ್ವರೂಪೀ ನಾರಾಯಣನಿಗೆ ಶಿವ್ರಿ ಯಾನೇ ಶಬರಿ ಎಂಜಲು ತಿನ್ನಿಸಿದ್ದಂತೆ! ರಾಮಾಯಣವನ್ನು ಇತಿಹಾಸವೆಂದು ಪ್ರಮಾಣಿಸಿದವರು ಹೇಳಿದ್ದು ನೆನಪಾಯ್ತು. - [ಬಾಂಧವ್ಯ ಹೆಚ್ಚಿಸಿದ ಕಾನ್ಹಾ ವನಧಾಮ](https://athreebook.com/2020/10/15/khanna-sanctuary/): ಎರಿಕ್ ಡಿ ಕುನ್ನಾರನ್ನು ನೀವು ಮರೆತಿಲ್ಲವೆಂದು ಭಾವಿಸುತ್ತೇನೆ. ಒಂದೇ ವಾಕ್ಯದಲ್ಲಿ ಹೇಳುವುದಿದ್ದರೆ, ಅವರು ‘ಇಂಡಿಯನ್ ಅಡ್ವೆಂಚರ್ಸ್’ ಎಂಬ ಖಾಸಗಿ ಪ್ರವಾಸೋದ್ಯಮ ಸಂಸ್ಥೆಯಲ್ಲಿ ಪರಿಸರ ಮಾರ್ಗದರ್ಶಿ. ೧೯೯೦ರ ನಮ್ಮ ಭಾರತ ಸೀಳೋಟಕ್ಕೆ ಅವರು ಚೆನ್ನಾಗಿಯೇ ಸೌಕರ್ಯಗಳ ವ್ಯವಸ್ಥೆ ಮಾಡಿದ್ದರು, ಸ್ವತಃ ನಿಂತು ನಿಭಾಯಿಸಲು ಅವಕಾಶ ಕಳೆದುಕೊಂಡಿದ್ದರು. ಈ ಬಾರಿ, "ನಾನು ಕಾನ್ಹಾ ವನಧಾಮದಲ್ಲೇ ಇದ್ದೇನೆ ಮತ್ತು ಸಮೀಪದ ಬಾಂಧವಘರ್‍ನಲ್ಲೂ ಏನು ಮಾಡಲು ಸಾಧ್ಯ ನೋಡ್ತೇನೆ..." ಎಂದೇ ಮುಂದಾಗಿಯೇ ಬರೆದಿದ್ದರು. - [ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ](https://athreebook.com/2020/10/10/khajuraho-monuments/): ಶಿವರಾಮ ಕಾರಂತರು ಸಾರ್ವಜನಿಕಕ್ಕೆ ಹತ್ತೆಂಟು ಮುಖಗಳಿಂದ ವಿಖ್ಯಾತರಿದ್ದಷ್ಟೇ ಗಾಢವಾಗಿ ನಮಗೆ ಕುಟುಂಬದ ಸ್ನೇಹಿತರೂ ಹೌದು. ಅವರು ೧೯೯೫ರ ಸುಮಾರಿಗೆ ಯಾರಿಂದಲೋ ನನ್ನ ಪ್ರಥಮ ಭಾರತ ಯಾನದ ಸುದ್ದಿಯನ್ನು ಕೇಳಿದರಂತೆ. ಮುಂದುವರಿದು, ನಾನು ಎರಡನೇದಕ್ಕೆ ಸಜ್ಜುಗೊಳ್ಳುತ್ತಿರುವುದು ತಿಳಿದ ಕೂಡಲೇ ಅವರ ಸ್ವಭಾವಕ್ಕೆ ಭೂಷಣದಂತೇ ನನಗೆ ಖಡಕ್ ಸಂದೇಶ ಕಳಿಸಿದ್ದರು "...ಖಜುರಾಹೋ ಅವಶ್ಯ ನೋಡಿ..."! ಯೋಜನಾ ಹಂತದಲ್ಲಿ ಪೂರ್ವ ಕರಾವಳಿಯಲ್ಲೇ ಹೆಚ್ಚು ತೊಡಗಬೇಕಿದ್ದ ನನ್ನ ಪೆನ್ಸಿಲ್‍ನ್ನು ಮಧ್ಯಪ್ರದೇಶದವರೆಗೂ ಎಳೆದಿದ್ದೆ. ಆಗ ಖಜುರಾಹೋ ದಾರಿಯಲ್ಲಿ, ವಿಶೇಷ ಮೋಹವಿಲ್ಲದೆಯೇ ನನಗೆ ಸಿಕ್ಕಿದ್ದು ಈ ಪನ್ನಾ ವನಧಾಮ. - [ಗಯಾ ಕಾಶಿ, ಪನ್ನಾಕ್ಕೆ ಗುನ್ನಾ](https://athreebook.com/2020/10/06/gaya-khasi-panna-trip/): ಯೋಜನಾ ಹಂತದಲ್ಲಿ ನಾನು ಸಿಕ್ಕ ನಕ್ಷೆಗಳಲ್ಲಿ ನನಗೆ ಬೇಕಾದ ಎರಡು ಸ್ಥಳಗಳ ನಡುವೆ ದಾರಿ ಎಂಬ ಗೀಟುಗಳಲ್ಲಿ ಹತ್ತಿರದವನ್ನು ಆಯ್ದುಕೊಳ್ಳುತ್ತಿದ್ದೆ. ಆಮೇಲೆ ಅದರ ಉದ್ದಕ್ಕೆ ನೂಲನ್ನು ಆದಷ್ಟು ನಿಖರವಾಗಿ ಬಳುಕಿಸಿಟ್ಟು, ಇಂಚುಪಟ್ಟಿಯಲ್ಲಿ ಅಳೆದು, ಕಿಮೀಗೆ ಪರಿವರ್ತಿಸಿ ಪ್ರಯಾಣದ ಅಂದಾಜುಗಳನ್ನು ಮಾಡುತ್ತಿದ್ದೆ. ಆದರೂ ವಾಸ್ತವ ಭಿನ್ನವಿರುವ ಅಪಾಯ ಸದಾ ಇರುತ್ತಿತ್ತು. ಹಾಗಾಗಿ ಆಯಾ ಸ್ಥಳಕ್ಕೆ ಹೋದಾಗ ನಾವು ಹಾಕಿಕೊಂಡ ದಾರಿಯ ಸ್ಥಿತಿಗತಿಗಳನ್ನು ಸ್ಥಳೀಯರಿಂದ ವಿಚಾರಿಸಿಕೊಂಡೇ ಮುಂದುವರಿಯುತ್ತಿದ್ದೆವು. ಅಂಥ ಸಂದರ್ಭಗಳಲ್ಲಿ ಸಮಗ್ರ ದೃಷ್ಟಿ ಇಟ್ಟುಕೊಂಡು, ನಿಖರವಾಗಿ ಅಂತರವನ್ನೋ ಪರ್ಯಾಯ ಉತ್ತಮ ದಾರಿಯನ್ನೋ ಹೇಳುವವರು ಸಿಗುತ್ತಿದ್ದದ್ದು ಬಹಳ ಕಡಿಮೆ. - [ನಲಂದಾ - ರಾಜಗಿರ್ ಮುಟ್ಟಿ, ಓಡು](https://athreebook.com/2020/10/03/nalanda-and-rajgir/): ಎಂಟು ತಿಂಗಳ ಹಿಂದೆ ನಾನು ಅಭಯ ರೈಲೇರಿ ಕೊಯಂಬತ್ತೂರಿಗೆ ಹೋಗಿದ್ದೆವು. ಇಬ್ಬರಿಗೂ ಅಪರಿಚಿತ ನೆಲ. ಅಭಯ ಸಹಜವಾಗಿ ಕರದೊಳಿದ್ದ ‘ಮಾಯೆ’ಗೆ (ಚರವಾಣಿ) ನಾವಿಳಿದ ಪೋದನೂರು ಮತ್ತು ಹೋಗಬೇಕಾದ ‘ಶ್ರದ್ಧಾ ಟ್ರಾನ್ಸ್ಪೋರ್‍ಟ್’ ಮಂತ್ರಾನುಸಂಧಾನ ಮಾಡಿದ. ಮತ್ತೆ ನಮ್ಮ ೫ ಕಿಮೀ ನಡಿಗೆಯ ಉದ್ದಕ್ಕೂ ಮೇಲಿನ ಲೋಕದಿಂದ, ಭೂ ಲಕ್ಷಣಗಳ ಯಥಾಚಿತ್ರದೊಡನೆ ಅಶರೀರವಾಣಿಯ ನಿಖರ ಮಾರ್ಗದರ್ಶನವೇ ಸಿಕ್ಕಿತ್ತು. ಆದರೆ ಇಲ್ಲಿ ನಾನು ಹೇಳುತ್ತಿರುವುದಾದರೂ ಇಂಥ ಸಿದ್ಧಿಗಳಿಲ್ಲದ ದಿನದ, ಅಂದರೆ ಇಪ್ಪತ್ನಾಲ್ಕು ವರ್ಷಗಳ ಹಿಂದಿನ (೧೯೯೬) ಕಥೆ. - [ಡಾರ್ಜಿಲಿಂಗ್ ಮತ್ತು ಮಿರಿಕ್ ಮಿಸ್ಟೇಕ್](https://athreebook.com/2020/09/28/darjiling-trip/): ಕಾಲೇಜು ದಿನಗಳಿಂದ ನನ್ನ ದೊಡ್ಡ ಕನಸು - ಡಾರ್ಜಿಲಿಂಗ್ ಭೇಟಿ ಮತ್ತು ತೇನ್ ಸಿಂಗ್ ಶಿಷ್ಯತ್ವ ಗಳಿಕೆ. ಸಿಕ್ಕ ಮೊದಲ ಅವಕಾಶ - ೧೯೭೧ರ ಅಸ್ಸಾಂ ಭೇಟಿ, ನಾನು ಮಿಂಚು ನೋಟಕ್ಕಾದರೂ ಡಾರ್ಜಿಲಿಂಗ್ ಎಂದು ತಿಣುಕಿದ್ದೆಲ್ಲ ನಿಮಗೆ ತಿಳಿದೇ ಇದೆ. ಹಾಗಾಗಿ ಪ್ರಸ್ತುತ ಸಾಹಸಯಾನ ಯೋಜಿಸುವಂದು, ತೇನ್‍ಸಿಂಗ್ ಇಲ್ಲದ ಡಾರ್ಜಿಲಿಂಗಿನಲ್ಲಿ ಒಂದು ರಾತ್ರಿಗಾದರೂ ನಿಂತು, ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬೇಕೆಂದು ನಿಶ್ಚೈಸಿದ್ದೆ. ಅದಕ್ಕನುಕೂಲ ಆರಂಭ ಬಿಂದುವಾಗಿ ನಮಗೊದಗಿದ್ದು ಸುಖ್ನಾ ಅರಣ್ಯ ವಲಯದಲ್ಲಿದ್ದ ಮಹಾನಂದಾ ಅಭಯಾರಣ್ಯದ ಅತಿಥಿಗೃಹ. - [ಗಂಗಾ ಪಾತ್ರೆಯಲ್ಲಿ ಸ್ವಲ್ಪ ಉದ್ದಕ್ಕೆ...](https://athreebook.com/2020/09/25/himachal-pradesh-tour/): ‘ಆಸೇತು ಹಿಮಾಚಲ’ ಎನ್ನುವಲ್ಲಿ ಭಾರತದ ಉದ್ದ ಸ್ಪಷ್ಟ ಇದೆ. ಬಹುತೇಕ ಆ ‘ಸೇತು’ವಿನ (ದಕ್ಷಿಣ ಕೊನೆಯ ರಾಮಸೇತು) ಸಮೀಪವೇ ಇರುವ ನಾವು ಭಾರತಯಾನ ಎಂದೇ ಯೋಜಿಸುವಾಗ, ಹಿಮಾಲಯ ಮುಟ್ಟದೇ ಪರಿಪೂರ್ಣವಲ್ಲ ಎಂಬ ಭಾವವೂ ಸೇರಿತ್ತು. ಹಾಗಾಗಿ ಮೊದಲ ಹಂತದಲ್ಲಿ ಯೋಜನೆಯಂತೇ ರೈಲ್ವೇ, ನಗರದರ್ಶನ, ದೋಣಿಯಾನ ಎಂದೆಲ್ಲ ಎಂಟು ದಿನ ಸಂದರೂ ಆ ಬೆಳಿಗ್ಗೆ (೨೨-೪-೯೬) ನಿಜದ ಬೈಕ್ ಯಾನ ಮತ್ತು ‘ಹಿಮಾಚಲ’ ಮುಟ್ಟಲು ಹೊರಟಿದ್ದೆವು. - [ಸುಂದರಬನದ ಕೂಳು ಭಕ್ಷಕರು!](https://athreebook.com/2020/09/17/sundarabana/): ವನಧಾಮಗಳ ವಿಚಾರ ಬರುತ್ತಿದ್ದಂತೆ ನನಗೆ ಮೊದಲು ಹೊಳೆಯುವ ಹೆಸರು - ವನ್ಯ ವಿಜ್ಞಾನಿ ಗೆಳೆಯ, ಉಲ್ಲಾಸ ಕಾರಂತ. ಅ-ಪೂರ್ವ ಕರಾವಳಿಯೋಟದ ಯೋಜನಾ ಹಂತದಲ್ಲೇ ನಾನವರನ್ನು ಸಂಪರ್ಕಿಸಿದ್ದೆ. ಭಾರತದ ವಿವಿಧ ವನಧಾಮಗಳಲ್ಲಿ ಅವರಿಗಿದ್ದ ವಿಸ್ತೃತ ಪರಿಚಯ ಬಲದಲ್ಲಿ ನನಗೆ ನಾಲ್ಕೆಂಟು ಪರಿಚಯ ಪತ್ರಗಳನ್ನೂ ಧಾರಾಳ ಸಲಹೆಗಳನ್ನೂ ನೀಡಿದ್ದರು. ಅದರಲ್ಲೂ ಭಾರತದ ಪ್ರಥಮ ‘ಟೈಗರ್ ಪ್ರಾಜೆಕ್ಟ್’ ತಾಣವೆಂದೇ ಖ್ಯಾತವಾದ ಸುಂದರಬನದಲ್ಲಿ ಹೆಚ್ಚಿನ ವ್ಯವಸ್ಥೆಗಳನ್ನೇ ಕೊಡಿಸುವವರಿದ್ದರು. ಆದರೆ ಅಷ್ಟು ದೊಡ್ಡ ವ್ಯವಸ್ಥೆಗೆ ನಮ್ಮ ಪಾತ್ರತೆಯ ಬಗ್ಗೆ ನನಗೇ ಸಂದೇಹವಿದ್ದುದರಿಂದ ಪೇಚಾಟದಲ್ಲಿದ್ದೆ. - [ಕಲ್ಕತ್ತಾ ದರ್ಶನ](https://athreebook.com/2020/09/17/kolkata-trip/): ಈಶ್ವರಚಂದ್ರ ವಿದ್ಯಾ ಸಾಗರ ಸೇತುವೆ ಅಥವಾ ವಿದ್ಯಾಸಾಗರ್ ಸೇತು, ಹದಿಮೂರು ವರ್ಷಗಳ ನಿರ್ಮಾಣ ಸಮಯ ನುಂಗಿ ೧೯೯೨ರಲ್ಲಿ ಲೋಕಾರ್ಪಣೆಗೊಂಡಿತು. ಆದರೆ ಅದರ ಉತ್ತರೋತ್ತರ ಕೆಲಸಗಳು ನಾವು ಕಲ್ಕತ್ತಾಕ್ಕೆ ಹೋದಂದೂ ಪೂರ್ಣಗೊಂಡಿರಲಿಲ್ಲ. ಅಂದರೆ, ಎರಡೂ ದಂಡೆಗಳ ವಿವಿಧ ದಾರಿಗಳನ್ನು ತಡೆರಹಿತವಾಗಿ ಸೇರಿಕೊಳ್ಳುವ ಮೇಲು ಸೇತುವೆಗಳ ಜಾಲ ಮತ್ತು ವಾಹನ ಸಂಚಾರದ ಪ್ರಮುಖಧಾರೆಯನ್ನು ಇತ್ತ ಹರಿಬಿಡುವ ಕೆಲಸಗಳು ಕುಂಟುಗತಿಯಲ್ಲೇ ಇದ್ದವು. ಆದರೇನು, ಐವತ್ತು ವರ್ಷಕ್ಕೂ ಹಳೆಯ ಹೌರಾ ಸೇತುವೆಗೆ ಹೆಚ್ಚಿನ ಸಾಮರ್ಥ್ಯದ ಜತೆಗಾರ, ಭಾರತದ ತೂಗು ಸೇತುವೆಗಳ ಅಗ್ರಣಿ (೨೭೦೦ ಅಡಿ) ಎಂಬ ಖ್ಯಾತಿಗಳೇ ನಮಗೆ ಸಾಕಿತ್ತು. ನಮ್ಮ ಹೊಸ ಹಗಲ (೧೯-೪-೧೯೯೬) ಸಂದರ್ಶನ ಪಟ್ಟಿಯಲ್ಲಿ ಮೊದಲ ಸ್ಥಾನ ಅದಕ್ಕಿತ್ತು. ‘ಉಡುಪಿ ಲಂಚ್ ಹೋಂ’ ಪತ್ತೆ ಹಚ್ಚಿದ ಸಂತೋಷಕ್ಕೆ ರೂಢಿ ರುಚಿಯ ಚಪಲವನ್ನು ಭರ್ಜರಿಯಾಗಿಯೇ ತೀರಿಸಿಕೊಂಡಿದ್ದೆವು. - [ಮೆಟ್ರೋದಲ್ಲಿ ಕಾಣೆಯಾದ ಮೂವರು!](https://athreebook.com/2020/09/17/missing-people-in-the-metro/): ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು.ಮತ್ತೆ ನಿರ್ವಿಘ್ನವಾಗಿ.... ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ. ಅದನ್ನು ನೋಡುವುದರಿಂದಲೇ ನಮ್ಮ ಎರಡನೇ ಭಾರತ ಸಾಹಸಯಾನವನ್ನು ಪ್ರಾರಂಭಿಸುವ ಯೋಜನೆ ನನ್ನದಿತ್ತು. ಅದಕ್ಕನುಕೂಲವಾಗುವಂತೆ ಕಲ್ಕತ್ತಾ ವಾಸ/ ದರ್ಶನವನ್ನು ಸ್ವಲ್ಪ ಹೆಚ್ಚೇ ಮಾಡಲು ನಮಗೆ ಒಳ್ಳೆಯ ಅವಕಾಶ ಒದಗಿಸಿದವರು ಸ್ವಾಮೀ ಜಗದಾತ್ಮಾನಂದ (೧೯೨೯-೨೦೧೮). ರಾಮಕೃಷ್ಣಾಶ್ರಮದ ಬಹು ಗೌರವಾನ್ವಿತ ಸಂನ್ಯಾಸಿಗಳಲ್ಲಿ ಜಗದಾತ್ಮಾನಂದರದು ದೊಡ್ಡ ಹೆಸರು. ಅಪ್ಪಟ ಕನ್ನಡಿಗರೇ ಆದ ಸ್ವಾಮೀಜೀ ತನ್ನ ಓದು, ಅಧ್ಯಯನ ಹಾಗೂ ಸಮಾಜಸೇವೆಗಳ ಅನುಭವಗಳನ್ನು ಕ್ರೋಢೀಕರಿಸಿ ಬರೆದ ‘ಬದುಕಲು ಕಲಿಯಿರಿ’ (೨ ಭಾಗಗಳು) ಪುಸ್ತಕವಂತೂ ಕನ್ನಡ ಪ್ರಕಾಶನರಂಗದಲ್ಲಿ ಅದ್ವಿತೀಯ ದಾಖಲೆಯನ್ನೇ ಮಾಡಿದೆ. - [ರೈಲ್ವೇಯಲ್ಲಿ ಪ್ರಭಾವ, ವಿಭಾವಗಳು](https://athreebook.com/2020/09/17/train-tralvel-experiance/): (ಭಾರತ ಅ-ಪೂರ್ವ ಕರಾವಳಿಯೋಟ - ೨) ೧೯೯೬ರ ಏಪ್ರಿಲ್ ಹದಿನಾಲ್ಕರಂದು ಮೋಟಾರ್ ಬೈಕ್ ಏರದೇ ನಮ್ಮ ಬೈಕ್ ಮಹಾಯಾನ ಮೊದಲ್ಗೊಂಡಿತ್ತು. ಅಂದು ಬೆಳಿಗ್ಗೆ ಕಿಶೋರ್ ಮತ್ತು ನಾನು ಬೈಕುಗಳನ್ನು ಮಂಗಳೂರು ರೈಲ್ವೇ ನಿಲ್ದಾಣಕ್ಕೊಯ್ದು ಗೆಳೆಯ ಕಿಶನ್ ಬಂಗೇರಾರ (ಇವರು ನಿಲ್ದಾಣದ ಸ್ವಾಗತಕಾರ) ಸಹಾಯಕರಿಗೊಪ್ಪಿಸಿದೆವು. ಬೈಕ್ ಯಾನದ ನಾಲ್ವರ ರೈಲ್ವೇ ಪ್ರಯಾಣದ ಟಿಕೇಟ್ ಒಟ್ಟು ರೂ. ೧೪೨೦/-ಶುಲ್ಕ ಕೊಟ್ಟು (ಮೂರು ಅಟ್ಟಳಿಗೆ ಮಲಗು ಸೌಕರ್ಯದ ಮೂರನೇ ದರ್ಜೆ ಡಬ್ಬಿ) ತಿಂಗಳ ಮುಂಚೆಯೇ ಕಾಯ್ದಿರಿಸಿದ್ದಾಗಿತ್ತು. ಈಗ ಬೈಕುಗಳಿಗೆ ‘ಪ್ಯಾಕಿಂಗ್’ ಶಾಸ್ತ್ರ ಮಾಡಿಸಿ, ಪ್ರಯಾಣದ ಟಿಕೆಟ್ಟಿಗೆ ಲಗತ್ತಿಸಿದಂತೆ ಬ್ರೇಕ್ ವ್ಯಾನ್ ಶುಲ್ಕ ರೂ ೧೩೪೦ ಕೊಟ್ಟು ರಸೀದಿ ಮಾಡಿಸಿಕೊಂಡು ಬಂದೆವು. ಸಂಜೆಗೆ ಉಪಾಧ್ಯರು ಸಾಲಿಗ್ರಾಮದಿಂದ ನಮ್ಮ ಮನೆಗೇ ಬಂದು ಸೇರಿಕೊಂಡರು. ಬೇಗನೇ ಊಟದ ಶಾಸ್ತ್ರ ಮುಗಿಸಿ, ಕತ್ತಲ ಪರದೆ ಬೀಳುತ್ತಿದ್ದಂತೆ, ನಾವು ಮೂವರು ಗಂಟು ಗದಡಿ ಸಮೇತ ರಿಕ್ಷಾ ಏರಿ ರೈಲ್ವೇ ನಿಲ್ದಾಣ ಸೇರಿಕೊಂಡೆವು. ಕಿಶೋರ್ ಪ್ರತ್ಯೇಕವಾಗಿ ಬಂದರು. ಬೈಕುಗಳು ನಮಗೂ ಮೊದಲೇ ರೈಲೇರಿ ಕುಳಿತಿದ್ದವು. - [ನವ ಭಾರತಾಹವಕ್ಕೆ ಅನ್ಯೋದ್ಯೋಗ ಪರ್ವ!](https://athreebook.com/2020/09/17/all-india-rounds/): (ಭಾರತ ಅ-ಪೂರ್ವ ಕರಾವಳಿಯೋಟ - ೧) ೧೯೯೦ರ ಪ್ರಾಕೃತಿಕ ಭಾರತ ಸೀಳೋಟ ಎರಡು ವರ್ಷ ಹಳತಾಗುತ್ತಿದ್ದಂತೆ ತಲೆಯೊಳಗೆ ಇನ್ನೊಂದೇ ಸಾಹಸಯಾನ ಮೊಳಕೆಯೊಡೆದಿತ್ತು. ಹಿಂದಿನಂತೆ ವ್ಯಾಪಾರ ಕಡಿಮೆಯಿರುವ ಬೇಸಗೆ ಕಾಲ, ಮತ್ತೆ ತಿಂಗಳ ಕಾಲ ಅಂಗಡಿ, ಮನೆ ಮತ್ತು ಮಗನ ನಿರ್ವಹಣೆಗೆ ತಂದೆ ತಾಯಿಯರಲ್ಲಿ ಬೇಡಿಕೆ ಇಡುವವನಿದ್ದೆ. ಅಷ್ಟರಲ್ಲಿ ನನ್ನ ಅಮೆರಿಕನ್ನಡಿಗ ತಮ್ಮ - ಆನಂದನಿಂದ, ಅವರಿಬ್ಬರಿಗೆ ಮಾಮೂಲೀ ಕರೆ - "ನಮ್ಮಲ್ಲಿಗೆ ಒಮ್ಮೆಯಾದರೂ ಬನ್ನಿ" ಹೊಸ ಭಾರೀ ಆಮಿಷದೊಡನೆ ಬಂದಿತ್ತು. "ಪ್ರಯಾಣ ನನ್ನ ಎರಡನೇ ವೈರಿ (ದೇವರು ಮೊದಲನೇ ವೈರಿ)" ಎಂದೇ ಸಾರುತ್ತಿದ್ದ ತಂದೆಗೆ ನಿರಾಕರಿಸಲಾಗದ ಆಮಿಷ - ಎಸ್. ಚಂದ್ರಶೇಖರ್ ಭೇಟಿ. ಭಾರತೀಯ ಮೂಲದ, ಶಿಕಾಗೋದಲ್ಲಿದ್ದ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯನ್ ಚಂದ್ರಶೇಖರ್ ಏನೂ ತೋರಿಕೆಯಿಲ್ಲದ ಅಪ್ಪಟ ಖ-ಭೌತ ವಿಜ್ಞಾನಿ. - [ಲಕ್ಷದ್ವೀಪದತ್ತ ಒಂದು ಲಕ್ಷ್ಯ](https://athreebook.com/2020/09/17/lakshadweep-story/): ಮುಮ್ಮಾತು: ಸಾವಿರ ಕೊಟ್ಟು ಲಕ್ಷ ಗಳಿಸುವ ಯೋಗ ೨೦೧೦ ರ ನನ್ನ ಆರು ಭಾಗಗಳ ಲಕ್ಷದ್ವೀಪ ಪ್ರವಾಸ ಕಥನ ನೀವೆಲ್ಲ ಓದಿದ್ದೀರಿ ಎಂದು ಭಾವಿಸುತ್ತೇನೆ. ಅನಂತರದ ದಿನಗಳಲ್ಲಿ ಗೆಳೆಯ ಅಬ್ದುಲ್ ರಶೀದ್ ಕವರತ್ತಿಯಲ್ಲಿರುವ ಆಕಾಶವಾಣಿಯ ಶಾಖೆಗೆ ವರ್ಗಾವಣೆಗೊಂಡರು. ಅವರ ಚಿತ್ರಗಳು, ಚಲಚಿತ್ರಗಳು ಎಲ್ಲಕ್ಕೂ ಮಿಗಿಲಾಗಿ ಲಕ್ಷದ್ವೀಪ ಡೈರಿಯ ಮುಗಿಯದ ಪುಟಗಳು, ನಮಗೆ ಎಂದೂ ಹಳತಾಗದ, ಕಡಲಲೆಗಳಂತೇ ಹೊಸ ವಿಚಾರಗಳನ್ನು ಮಗುಚುತ್ತಲೇ ಇವೆ. ನನಗೆ ಸಿಕ್ಕ ಈ ಆಪ್ತ ಸರಣಿಯಲ್ಲಿ ಮೂರನೇ ಕಣ್ಣು ತೆರೆಯುತ್ತಿರುವವರು - ಇನ್ನೊಬ್ಬ ಗೆಳೆಯ, ಗಿರೀಶ್. ಇವರದು ಉರಿಗಣ್ಣಲ್ಲ, ಲಕ್ಷದ್ವೀಪಗಳನ್ನಾವರಿಸಿದ ಅರಬೀ ಸಮುದ್ರದ್ದೇ ಇನ್ನೊಂದು (ಪೂರ್ವ) ಮಗ್ಗುಲಿನ ಕರಾವಳಿಯಲ್ಲೇ ಹದಗೊಂಡ ದೃಷ್ಟಿ. ವೃತ್ತಿಯಲ್ಲಿ ಅಗ್ನಿಶಾಮಕರಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಗಿರೀಶ್ ಈಗ ಲಕ್ಷದ್ವೀಪಕ್ಕೆ ವರ್ಗಾವಣೆಗೊಂಡಿದ್ದಾರೆ. ಇವರು ನನ್ನ ಜಾಲತಾಣದ ಓದುಗರಿಗೆ ಹೊಸಬರೇನಲ್ಲ (ನೋಡಿ: ಡಾರ್ಜಿಲಿಂಗ್ ಜೋಡುಕಥನ ). ಗಿರೀಶ್ ಬಜ್ಪೆಯ ‘ಟೇಬಲ್ ಟಾಪ್’ ನಿಂದ ಅಗಾತ್ತಿಯ ‘ಲಂಬಿಸಿದ ಮೀನಬಾಲ’ಕ್ಕೆ ತನ್ನ ವಿಶಿಷ್ಟ ನೋಟವನ್ನು ಅಳವಡಿಸಿದ್ದಾರೆ. - [ಆರು ದಶಕಗಳ ಹಿಂದಿನ ಶಿಷ್ಯನ ಕಣ್ಣಲ್ಲಿ ಜಿಟಿನಾ](https://athreebook.com/2020/09/17/article-about-gt-narayana-rao/): ಕನ್ನಡ ಜನಪ್ರಿಯ ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ಪ್ರಯೋಗಗಳನ್ನು ಮತ್ತು ವ್ಯವಸಾಯವನ್ನು ಮಾಡಿದ ಶ್ರೇಷ್ಠರಲ್ಲಿ ಶಿವರಾಮ ಕಾರಂತರು ಮೊದಲಿಗರಾದರೆ, ಜಿಟಿ ನಾರಾಯಣರಾಯರ (ಜೀಟಿಯೆನ್ ಅಥವಾ ಜಿಟಿನಾ) ಕೊಡುಗೆ ಅಷ್ಟೇ ಅಪಾರ, ಮಹತ್ವಪೂರ್ಣ, ಸಂದರ್ಭೋಚಿತ. - [ತೇನ್ ಸಿಂಗ್ ಬಿಳಿಮಲೆ ಮತ್ತು ‘ಕಾಗೆ ಮುಟ್ಟಿದ ನೀರು’](https://athreebook.com/2020/08/15/bilimale-and-kaage-muttida-neeeru/): ಬಹುಮಂದಿಗೆ ಪಶ್ಚಿಮ ಘಟ್ಟದ ದಿಗ್ಗಜಗಳ (ಕುದುರೆಮುಖ, ಕುಮಾರ ಪರ್ವತ...) ಗಹನತೆ ಅಡಿ, ಮೀಟರ್‍ಗಳಲ್ಲಿ ಹೇಳಿದರೆ ಮುಟ್ಟುವುದಿಲ್ಲ. ಅವರಿಗೆ ನಿತ್ಯ ಕಾಣುವ ಬಲ್ಲೇರಿ, ಕಳಂಜಿಮಲೆ, ಬಿರುಮಲೆ, ಬಂಟಮಲೆಗಳೇ ನಿಜದ ಅಳತೆಗೋಲು. ನಾನು ಅವನ್ನೂ ಅನುಭವಿಸುವ ಸರಣಿಯಲ್ಲಿ, ಒಂದು ಮಳೆ ದಿನದ ಬೆಳಿಗ್ಗೆ ಬಂಟಮಲೆ ಆಯ್ದುಕೊಂಡಿದ್ದೆ. ತಂಡ ನಾಲ್ಕು ಬೈಕೇರಿ, ಪಂಜ ತಲಪಿತ್ತು. ಮತ್ತೆ ಅಲ್ಲಿ ಇಲ್ಲಿ ವಿಚಾರಿಸುತ್ತ ಸುಮಾರು ಹನ್ನೊಂದು ಕಿಮೀ ಕಳೆದು, ಬಿಳಿಮಲೆಯಲ್ಲಿದ್ದ ಪುರುಷೋತ್ತಮರ ಮನೆ ಸೇರಿದ್ದು ಒಂದು ಆಕಸ್ಮಿಕ. ಪುರುಷೋತ್ತಮರು ಆ ದಿನಗಳಲ್ಲಿ ಮಂಗಳೂರು ವಿವಿ ನಿಲಯದಲ್ಲಿದ್ದರು (೧೯೮೭). ಹಾಗಾಗಿ ಅವರು ನಮಗೆ ಮನೆಯಲ್ಲಿ ಸಿಗಲಿಲ್ಲ. ನಾವು ಬೈಕು, ಜಿಗಣೆಗೆ ಬೆದರಿದ ಅಭಯ, ಜತೆಗೆ ದೇವಕಿಯನ್ನು ಪುರುಷೋತ್ತಮರ ತಾಯಿಗೊಪ್ಪಿಸಿ, ಕಾಡು ನುಗ್ಗಿದ್ದೆವು. ಸುಮಾರು ಎರಡು ಗಂಟೆಯ ಅವಧಿಯಲ್ಲಿ, ಶಿಖರ ವಲಯವನ್ನು ತಲಪಿ ಸುತ್ತಾಡಿ, ಬುತ್ತಿಯೂಟ ಮಾಡಿ ಮುಗಿಸಿದ್ದೆವು. ಅನಂತರ ಉತ್ಸಾಹದಲ್ಲಿ ಇಳಿಯುತ್ತ ಮಳೆ, ಮಂಜು, ಹುಲ್ಲು, ಪೊದರುಗಳ ಫಿತೂರಿಯಲ್ಲಿ ದಿಕ್ಕು ತಪ್ಪಿ ತಲಪಿದ್ದು ಎದುರು ಮೈಯ ಏರಿಮಲೆ, ಗುತ್ತಿಗಾರು. ಮತ್ತೆ ಬಾಡಿಗೆ ವಾಹನ ಹಿಡಿದು ಪಂಜಕ್ಕಾಗಿ ಬಿಳಿಮಲೆ ಸೇರಿ, ಮರಳಿದ ಪ್ರಕರಣ ಸುಖಾಂತ ಸಾಹಸವೇ ಅನ್ನಿಸಿತ್ತು. - [ಸೀಳೋಟದ ಕೊನೆಗೊಂದು ಸೀಳು ನೋಟ](https://athreebook.com/2020/08/12/india-trip-vision/): ಪ್ರಾಕೃತಿಕ ಭಾರತದ ಸೀಳೋಟ ಯೋಜನೆಯಲ್ಲಿ ಆರಂಭದ ೨೫-೪-೯೦ ಮತ್ತು ಕೊನೆಯ ೨೭-೫-೯೦ ದಿನಾಂಕಗಳನ್ನು ಖಚಿತವಾಗಿಯೇ ನಿಶ್ಚೈಸಿದ್ದೆ. ಕಾರಣ ಸರಳ - ಹುಬ್ಬಳ್ಳಿ, ಭೋಪಾಲ ಮುಂತಾದ ಸ್ಥಳಗಳಲ್ಲಿ ನಮ್ಮನ್ನು ಕಾದು ಕುಳಿತವರನ್ನು ನಿಗದಿತ ದಿನಕ್ಕೆ ಮುಟ್ಟದೇ ಅಗೌರವಿಸಬಾರದು. ಮತ್ತು ಮಂಗಳೂರಿಗೆ ಮರಳಲು ರೈಲ್ವೇ ಕಾಯ್ದಿರಿಸುವಿಕೆ ವ್ಯರ್ಥವಾಗಬಾರದು. ಹಾಗೆ ಲಭ್ಯ ಮೂವತ್ಮೂರು ದಿನಗಳಲ್ಲಿ, ಬೈಕ್ ಯಾನ ಮತ್ತು ಸ್ಥಳ ಸಂದರ್ಶನದ ದಿನಗಳು ಮೂವತ್ತು ಮಾತ್ರ. ಹೆಚ್ಚುವರಿ ಮೂರು ದಿನಗಳನ್ನು ಮಾರ್ಗಕ್ರಮಣದ ಆಕಸ್ಮಿಕಗಳ ಹೊಂದಾಣಿಕೆಗೂ ದಿಲ್ಲಿ ದರ್ಶನಕ್ಕೂ ಮೀಸಲಿರಿಸಿದ್ದೆವು. ೨೪ರ ಅಪರಾಹ್ನವೇ ದಿಲ್ಲಿ ಸೇರಿದ್ದ ನಮಗೆ ವಿನಿಯೋಗಕ್ಕೆ ಸ್ಪಷ್ಟ ಮೂರು ದಿನಗಳು ಉಳಿದಿದ್ದವು. ಹನ್ನೊಂದು ದಿನಗಳ ಹಿಂದೆ ಬಾರದ ಅನೇಕ ಹೃದ್ಯವಾಗುವಂತ ಪತ್ರಗಳ ಪಠಣ ಪ್ರಥಮಾದ್ಯತೆಯ ಖುಷಿ. ಅನಂತರ ತಂದೆಗೆ "ಎಲ್ಲ ಸೌಖ್ಯ. ಬಾಕಿ ಸಂಗ್ತಿ ಮೊಖ್ತಾ" ಎಂದಷ್ಟೇ ತಿಳಿಸುವ ನನ್ನೆಲ್ಲ ಒದ್ದಾಟಗಳನ್ನು ಎಸ್ಟೀಡೀ ಭೂತಗಳು ಯಶಸ್ವಿಗೊಳಿಸಲೇ ಇಲ್ಲ. ಕರ್ನಾಟಕ ಸಂಘದ ಅಟೆಂಡರ್ - ಗೌಡ, ತಲಾ ರೂ ಮೂವತ್ತೈದರಂತೆ ದಿಲ್ಲಿ ದರ್ಶನ ಮಾಡಿಸುತ್ತೇನೆಂದ. ಒಪ್ಪಿ ಬಸ್ಸೇರಿದೆವು. - [ತಪ್ಪಿದ ಬದರಿ ಮತ್ತು ಮಾರ್ಗ ಕ್ರಮಣ](https://athreebook.com/2020/08/09/badari-and-kedaranath-story/): ಕೇದಾರ ನಾಥದ ‘ವಿಜಯ’ಕ್ಕೆ ನಾನು ಅನುಭವಿಸಿದ ನೋವು ಹೆಚ್ಚೇ ಆಗಿತ್ತು. ಹಾಗಾಗಿ ಮರುದಿನದ ಬದರೀ ಯಾನದ ಯೋಚನೆಯನ್ನು ನಾನು ಮತ್ತು ದೇವಕಿ ಕೈ ಬಿಟ್ಟೆವು. ಸೋನ್ ಪ್ರಯಾಗಿನಿಂದ ಬದರಿಗೆ ಹೋಗಿ ಮರಳುವಲ್ಲಿ ಕವಲೂರಾಗಿ ಸಿಗುವ ಊರು ಕರ್ಣಪ್ರಯಾಗ್. ಅಲ್ಲಿ ನಮಗೆ ಎರಡು ದಿನದ ವಿಶ್ರಾಂತಿ, ಇತರರು ಬದರೀನಾಥಕ್ಕೆ. (ಇಂದು ದಾರಿಯ ಸಾಧ್ಯತೆಗಳು ತುಂಬ ಬದಲಿವೆ, ಬಿಡಿ.) ತಂಡವಾದರೂ ಸಾಕಷ್ಟು ಸೋತಿದ್ದುದರಿಂದ ಬೆಳಿಗ್ಗೆ (೨೦-೫-೯೦) ಸುಮಾರು ಎಂಟು ಗಂಟೆಯ ಹೊತ್ತಿಗೆ ಎಲ್ಲರು ಒಟ್ಟಾಗಿಯೇ ಸೋನ್ ಪ್ರಯಾಗ್ ಬಿಟ್ಟೆವು. ರುದ್ರಪ್ರಯಾಗದಲ್ಲೊಂದು ಸೈನ್ಯದ ಆಸ್ಪತ್ರೆ ಕಾಣಿಸಿತು. ಅಲ್ಲಿ ವೈದ್ಯರಿನ್ನೂ ಬಂದಿರಲಿಲ್ಲ. ಹಿರಿಯ ಶುಶ್ರೂಷಕ ಸಹೃದಯತೆಯಲ್ಲೇ ನನ್ನ ಪರೀಕ್ಷೆ ಮಾಡಿದರು. ಮತ್ತೆ ತಾನು ಸೈನಿಕ ಆಸ್ಪತ್ರೆಯ ನಿಯಮಾನುಸಾರ ಸಾರ್ವಜನಿಕ ಚಿಕಿತ್ಸೆ ಕೊಡಲಾಗದ್ದಕ್ಕೆ ಮೊದಲು ಕ್ಷಮೆ ಯಾಚಿಸಿದರು. ಅನಂತರ "ಈಗಾಗಲೇ ನಿಮ್ಮಲ್ಲಿ ಇರುವ ನೋವು ಉಪಶಮನಕಾರಕ ನುಂಗಿ ಸುಧಾರಿಸಿಕೊಳ್ಳಿ. ಊರಿಗೆ ಹೋಗಿ ಅವಶ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿ" ಎಂದು ಸಲಹೆಯನ್ನಷ್ಟೇ ಕೊಟ್ಟರು. - [ಟೆಹ್ರಿ ಅಣೆಕಟ್ಟು, ಕೇದಾರನಾಥ ವಿಜಯ!](https://athreebook.com/2020/08/07/tehri-dam-kedaranath/): ಭಾರತ ಸೀಳೋಟದ ಯೋಜನೆಯಲ್ಲಿ ನಾವು ಮಂಗಳೂರು ಬಿಡುವಂದು, ಅನ್ಯ ಮೂವರು ಗೆಳೆಯರು ದಿಲ್ಲಿಗೆ ನೇರ ಬಂದು, ತಂಡಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಅವರಿಗೆ ನಮ್ಮೊಡನೆ ಚತುರ್ಧಾಮವಾದರೂ ಅನುಭವಿಸುವ ಹುಚ್ಚು ಹತ್ತಿತ್ತು. ಆದರೆ ಆ ತ್ರಿಮೂರ್ತಿಗಳು ನನ್ನ ನಿರೀಕ್ಷೆಯಂತೆ ಭೋಪಾಲಕ್ಕೆ, ಕೊನೆಗೆ ದಿಲ್ಲಿಗೂ ಪತ್ರ ಖಾತ್ರಿ ಕೊಡಲೇ ಇಲ್ಲ. ನಾವು ದಿಲ್ಲಿ ಬಿಡುವವರೆಗೂ ದಿಲ್ಲಿಗೆ ಬಂದಂತೇ ಇರಲಿಲ್ಲ. ದಿಲ್ಲಿಗೆ ಬಂದಿದ್ದ ನನ್ನ ತಂದೆಯ ಪತ್ರದಲ್ಲಿ ಅವರ ಗೊಂದಲಗಳಷ್ಟೇ ತಿಳಿದಿತ್ತು.  ವಾಸ್ತವದಲ್ಲಿ, ನಾವು ದಿಲ್ಲಿ ಬಿಡುವ ದಿನ (೧೧-೫-೯೦), ಆ ಮೂವರು - ಕೆ. ಲಕ್ಷ್ಮೀನಾರಾಯಣ ರೆಡ್ಡಿ (ರೆಡ್ಡಿ) - ಪ್ರಾಧ್ಯಾಪಕ, ಮೋಹನ ಆಚಾರ್ಯ (ಮೋಹನ್) - ಕುಶಲ ಕರ್ಮಿ, ಮತ್ತು ಕಾವೂರು ಪ್ರಸನ್ನ - ಉದ್ಯಮಿ, ಮಂಗಳೂರಿನಲ್ಲಿ ರೈಲೇರಿದ್ದರು! ಆ ಕಾಲದಲ್ಲಿ ಕೊಂಕಣ ರೈಲ್ವೇ ಇರಲಿಲ್ಲ. ಇವರು ಗಾದೆಯ ‘ಕೊಂಕಣ (ಅರಕ್ಕೋಣಂಗಾಗಿ) ಸುತ್ತಿ ಮೈಲಾರಕ್ಕೆ (ದಿಲ್ಲಿಗೆ)’ ಬರುವಾಗ ೧೪-೫-೯೦ರ ರಾತ್ರಿ. ಪೂರ್ವ ಲೆಕ್ಕಾಚಾರದಂತೆ ಅವರಲ್ಲಿಬ್ಬರ ದಿಲ್ಲಿ ಗೆಳೆಯರು, ಮರು ಬೆಳಗ್ಗೆಯೇ (೧೫-೫-೯೦) ಇವರಿಗೆ ತಮ್ಮ ಬೈಕ್ ಒಪ್ಪಿಸಿದರು. ನನ್ನ ದಿನಚರಿಯ ನಕ್ಷೆಯ ಯಥಾ ಪ್ರತಿ ತ್ರಿಮೂರ್ತಿಗಳಲ್ಲಿತ್ತು. ಅದರ ಬಲದಲ್ಲಿ ನಮ್ಮನ್ನು ನೇರ ಗಂಗೋತ್ರಿಯಲ್ಲಿ ಹಿಡಿಯುವ ಉಮೇದಿನಲ್ಲಿ, ಹನ್ನೊಂದು ಗಂಟೆಗೆ ದಿಲ್ಲಿ ಬಿಟ್ಟರು. ಮೋಹನ್ ಒಂಟಿ, ಪ್ರಸನ್ನನ ಬೆಂಬಲಕ್ಕೆ ರೆಡ್ಡಿ. - [ಯಮುನೋತ್ರಿ, ಗಂಗೋತ್ರಿ, ಗೋಮುಖ](https://athreebook.com/2020/08/05/yamuna-ganga-gomukha/): ಯಮುನೋತ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನಿಜ ಸೂರ್ಯ ದರ್ಶನಕ್ಕೆ ಮಂಜು, ಮೋಡ ಮತ್ತು ಒತ್ತಿನ ದೈತ್ಯ ಶಿಖರ ಶ್ರೇಣಿಗಳ ಪ್ರಭಾವ ಇದ್ದರೂ ಹಗಲಿನ ಪ್ರಕಾಶ ಬೆಳಿಗ್ಗೆ ಐದು ಗಂಟೆಗೇ ಸಿಗುತ್ತಿತ್ತು. ಆದರೆ ಜನ, ಕುದುರೆ, ಹೇಸರಗತ್ತೆ, ಕಾವಡಿ-ಬುಟ್ಟಿ ಹೊರುವವರು ಎಂಬ ವಿಪರೀತ ಸಂದಣಿ ಆರು ಗಂಟೆಗಷ್ಟೇ ತೊಡಗುವುದು ಎಂದು ತಿಳಿದಿದ್ದೆವು. ಹಾಗಾಗಿ ಸಮಯದ ಉಳಿತಾಯವನ್ನು ಲಕ್ಷಿಸಿ, (೧೪-೫-೯೦) ಚಾರಣದ ಆವಶ್ಯಕತೆಗಳನ್ನಷ್ಟೇ ಬೆನ್ನಿಗೇರಿಸಿ, ಐದೂಕಾಲಕ್ಕೇ ನಡಿಗೆಗಿಳಿದಿದ್ದೆವು. ಸಾಮಾನ್ಯ ಯಾತ್ರಿಗಳು ಈ ಚಾರಣದ ಅಂಶವನ್ನು (ಒಟ್ಟು ಸುಮಾರು ೨೬ ಕಿಮೀ) ಎರಡು ದಿನಗಳಲ್ಲಿ ಪೂರೈಸುತ್ತಾರೆಂದು ಕೇಳಿದ್ದೆವು. ಆದರೆ ನಮ್ಮ ಯೋಜನೆ ಒಂದೇ ದಿನದ್ದು. ಹಿಂದಿನದಂತೇ ಯಮುನೆಯ ದಂಡೆಯಲ್ಲೇ ಉತ್ತರಮುಖಿಗಳಾಗಿ, ಕಾಣುತ್ತಿದ್ದ ಕಾಡಿನತ್ತ ಸಾಗಿದೆವು. ಕಾಲ್ದಾರಿ ಬಹಳ ಸ್ಪಷ್ಟವಿದ್ದುದರಿಂದ ಮಾರ್ಗದರ್ಶಿ ಅಥವಾ ನಕ್ಷೆಯ ಗೋಜಿಗೆ ಹೋಗಲಿಲ್ಲ. ನನ್ನ ನೆನಪಿನಂತೆ, ಆ ಕಾಲದಲ್ಲಿ ಕಾಲ್ದಾರಿ ಉದ್ದಕ್ಕೂ ಯಮುನೆಯನ್ನು ಎಡಕ್ಕೇ ಇಟ್ಟುಕೊಂಡಿತ್ತು. ಇಂದು ಗೂಗಲ್ಲಿನಲ್ಲಿ, ವಾಹನಯೋಗ್ಯ ಮಾರ್ಗ ಅತ್ತ ಹರಿದಿರುವುದರಿಂದ ಹೊಸ ಜಾಡುಗಳನ್ನೂ ಅಡ್ಡ ಸೇತುವೆಗಳನ್ನೂ ಕಾಣಬಹುದು. - [ಹನುಮಾನ್ ಚಟ್ಟಿಯ ದುಂಧುಭಿ ವಧ!!](https://athreebook.com/2020/08/04/hanuman-chatti-place/): ಕಾಗೆ ಹಾರಿದಂತೆ ಡೆಹ್ರಾಡೂನ್ - ಮಸ್ಸೂರಿ ಅಂತರ ಸುಮಾರು ಐದೂವರೆ ಕಿಮೀಯಾದರೂ ದಾರಿ ಮೂವತ್ತೈದು ಕಿಮೀ, ಗಳಿಸುವ ಔನ್ನತ್ಯ ಅಸಾಧಾರಣ ೫೭೩೦ ಅಡಿ. ಅದರಲ್ಲೂ ಸುಮಾರು ಅರ್ಧ ಅಂತರದ - ರಾಜಾಪುರಕ್ಕೆ (ಔ. ಸುಮಾರು ೩೫೭೦) ತಲಪುವಾಗ ೨೧೦೦ ಅಡಿಯನ್ನಷ್ಟೇ ಗಳಿಸಿದ್ದೆವು. ಮುಂದಿನದು ಇನ್ನೂ ಕಡಿದು ಎಂದು ತಿಳಿದು, ಅಲ್ಲೇ ಊಟ ಮುಗಿಸಿಕೊಂಡೆವು. ಅಪರಾಹ್ನದ ದಾರಿ ಬಲು ಸುರುಳಿ ಚಕ್ಕುಲಿಯಂತೆ ಸುತ್ತುತ್ತಿದ್ದಂತೆ, ಕ್ಷಣ ಕ್ಷಣಕ್ಕೂ ವಾತಾವರಣದಲ್ಲೂ ತಂಪು ಏರುತ್ತಿತ್ತು. ದಾರಿಯ ಈ ಭಾಗವನ್ನೇ ಹೀರೊಂಡಾ ಕಂಪೆನಿ ತನ್ನ ಜಾಹೀರಾತುಗಳೆಲ್ಲ ‘ಒಂದು ಲೀಟರ್ ಪೆಟ್ರೋಲ್ ದಾರಿ’ ಎಂದೇ ಮೆರೆಸುತ್ತಿದ್ದದ್ದು ನೆನಪಾಗಿತ್ತು. ಎರಡೂ ಮುಕ್ಕಾಲು ಗಂಟೆಗೆ ನಾವು ಮಸ್ಸೂರಿ ಮುಟ್ಟುತ್ತಿದ್ದಂತೆ ಆಕಾಶವೇ ಹರಿದು ಬಿದ್ದಂತೆ ಭಾರೀ ಮಳೆ ಬಂತು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಮುದ್ರಣಾಲಯದ ಶೆಡ್ಡು ಖಾಲಿಯಾಗಿ ತೆರೆದುಕೊಂಡಿತ್ತು! ಸಕಾಲಕ್ಕೆ ಒಳ ಸೇರಿದ್ದಕ್ಕೆ ಉರಿ ಬಿಸಿಲ ನಾಡಿನ ವ್ಯವಸ್ಥೆಯಲ್ಲೇ ಇದ್ದ ನಾವೂ ನಮ್ಮ ಗಂಟು ಮೂಟೆಗಳೂ ಬಚಾವಾದವು. - [ದಿಲ್ಲಿಯಿಂದ ಡೆಹ್ರಾಡೂನಿಗೆ...](https://athreebook.com/2020/07/28/delhi-to-dehradun/): ದಿಲ್ಲಿ ದಾಳಿಗೆ (೯-೫-೯೦) ಬೆಳಿಗ್ಗೆ ಆರಕ್ಕೆ ನಾಂದಿಯೇನೋ ಹಾಡಿದೆವು. ಆದರೆ ನನ್ನ ಚಕ್ರವೊಂದು ನಿಟ್ಟುಸಿರು ಬಿಟ್ಟು, ಒಂದು ಗಂಟೆ ತಡವಾಗಿ ಮುಂದುವರಿದೆವು. ಆ ದಾರಿ ಖ್ಯಾತ ಪ್ರವಾಸೀ ತ್ರಿಕೋನದ ಬಲ ಭುಜ, ವಾಸ್ತವದಲ್ಲೂ ಬಹುತೇಕ ಸರಳ ರೇಖೆಯಂತೇ ಇದೆ. ಗಗನಗಾಮೀ ನಕ್ಷಾ ನೋಟದಲ್ಲಿ ಮಾತ್ರ ಉದ್ದಕ್ಕೂ ಯಮುನಾ ನದಿ ದೀರ್ಘ ಬಳಕುಗಳ ಸಾಂಗತ್ಯ ಕೊಡುತ್ತದೆ. ಮಾರ್ಗದ ಕಠೋರ ತಪೋನಿಷ್ಠೆಯನ್ನು ಮುರಿಯ ಬಂದ ಅಪ್ಸರೆಯಂತೆ ನಲಿದಿದೆ. ದಾರಿಗೆ ಈ ಅಲೌಕಿಕ ದೃಶ್ಯ ಅಗೋಚರವಾದ್ದರಿಂದ ಸುಮಾರು ಇನ್ನೂರು ಕಿಮೀ ಉದ್ದದ್ದ ದಿಲ್ಲಿಯ ಜಪವನ್ನೇ ನಾವು ಮಾಡಿಕೊಂಡಿದ್ದೆವು. ಸುಮಾರು ಮಧ್ಯಂತರದಲ್ಲಿದ್ದ ಏಕೈಕ ಬದಲಾವಣೆ ಮಥುರಾ. ಪುರಾಣ, ಇತಿಹಾಸಗಳಿಗೆ ಇಂದೂ ಈ ನೆಲದಲ್ಲಿ ಸಾಕಷ್ಟು ಪುರಾವೆಗಳು ಇವೆ. ಅವನ್ನು ವೈಚಾರಿಕವಾಗಿ ಗುರುತಿಸಿಕೊಳ್ಳುವ ಸಂತೋಷವೇ ನಿಜ ಸಂಸ್ಕೃತಿ. ಅದು ಬಿಟ್ಟು, ಅವನ್ನು ಯಾವುದೋ ಒಂದು ಕಾಲಘಟ್ಟಕ್ಕೆ ಸೀಮಿತಗೊಳಿಸಿ, ಇತಿಹಾಸವನ್ನು ತಿದ್ದುವ ಪ್ರಯತ್ನ ಮಾಡುವುದು ವಿಕೃತಿ. ನಮ್ಮೀ ಬೈಕ್ ಯಾನದಲ್ಲಿ ಬಾದಾಮಿಯಿಂದ ಆಗ್ರಾದವರೆಗಿನ ಐತಿಹಾಸಿಕ ರಚನೆಗಳಲ್ಲಿ ಹೆಚ್ಚಾಗಿ ಮೆರೆಯುವುದು - ವಿವಿಧ ಕಾಲಗಳ ವೈಯಕ್ತಿಕ ಮಹತ್ವಾಕಾಂಕ್ಷೆ ಮಾತ್ರ. ಅವರಲ್ಲಿ ಹೆಚ್ಚಿನವರಿಗೆ ಖಾಯಂ ಯಾವ ಮತಧರ್ಮದ ಸೋಂಕೂ ಇಲ್ಲ, ಜನಾಂಗ ಭಾಷೆಗಳ ದುರಭಿಮಾನವೂ ಇಲ್ಲ. ಇವನ್ನು ಗ್ರಹಿಸುವಲ್ಲಿ ಎಲ್ಲ ಕಾಲದಲ್ಲೂ ಇದ್ದಂತೆ ದೊಡ್ಡ ಅಡ್ಡಿ ವಿಚಾರಹೀನ ಆರಾಧಕರು ಮತ್ತು ಅವರನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ರಾಜಕಾರಣಿಗಳು. - [ಜೈಪುರಕ್ಕೆ ಜೈ ಆಗ್ರಾವೂ ಸೈ](https://athreebook.com/2020/07/26/jaipur-and-agra/): ‘ಹೊಟ್ಟೆ ಘಟ್ಟಿಯಿರಬೇಕು, ಘಟ್ಟ ಎದುರಾಗಬೇಕು’ ಸಾಹಸ ಯಾತ್ರೆಗಳಲ್ಲಿ ನನ್ನ ಅಭ್ಯಾಸ. ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಡಬೇಕಾದರೂ ತಿಂಡಿ ಮಾಡಿಕೊಟ್ಟರೆ, ನಾನು ತಿಂದೇ ಹೊರಡುವವ. ಹಾಗೆಂದು ಒಂದೆರಡು ಗಂಟೆ ತಡವಾದರೆ ಕೈಕಾಲೇನು ಬಿದ್ದು ಹೋಗುವುದೂ ಇಲ್ಲ. ಅಂದು (೬-೫-೯೦) ರಣಥೊಂಬರಾ ಕೋಟೆಯನ್ನು ಬೆಳಿಗ್ಗೆ ನೋಡಿ ಬರುವ ಉತ್ಸಾಹದಲ್ಲಿ ತಿಂಡಿ ತಿಂದಿರಲಿಲ್ಲ. ವಾಪಾಸು ಬಂದು ಮುಂದಿನ ಪ್ರಯಾಣಕ್ಕಿಳಿಯುವಾಗ ಮಾತ್ರ (೧೦.೪೫), ಒಂದೆರಡಲ್ಲ ಮೂರ್ನಾಲ್ಕು ಗಂಟೆಗಳೇ ತಡವಾಗಿತ್ತು. ಮೊದಲು ಸಿಕ್ಕ ಧಾಬಾಕ್ಕೇ ನುಗ್ಗಿದೆವು. ಅವನಲ್ಲಿ ಪೂರ್ವ ಸಿದ್ಧತೆಗಳೇನೂ ಇರಲಿಲ್ಲ. ಹಾಗಾಗಿ ನಾವು ಹಳಸಲು ಎಣ್ಣೇಲಿ ಕರಿದ ಪೂರಿ, ಜಿಡ್ಡು ಬಸಿಯುವ ಪರೋಟಾ ಬಿಟ್ಟು, ರೊಟ್ಟಿ, ಮೊಸರು, ಉಪ್ಪಿನ ಕಾಯಿ ಕೇಳಿದೆವು. "ಬನ್ಜಾಯೆಗಾ" (ಮಾಡ್ಕೊಡಾಣಾ) ಎಂದ. ಆದರೆ ಪುಣ್ಯಾತ್ಮ ಮಾಡಿದ್ದು ಅವನದೇ ಕ್ರಮದಲ್ಲಿ. ಹಿಟ್ಟನ್ನು ಕಲೆಸುವಾಗಲೇ ಧಂಡಿಯಾಗಿ ಎಣ್ಣೆ ಸುರಿದುಬಿಟ್ಟ. ಒಂದೊಂದು ಇಂಚು ದಪ್ಪಕ್ಕೆ ಲಟ್ಟಿಸಿ, ಅದೇನು ತವಾವೋ ಚಪ್ಪಟೆ ಬಾಣಲೆಯೋ ಎನ್ನುವಂತೆ ಎಣ್ಣೇ ಸ್ನಾನ ಮಾಡಿಸಿಯೇ ಕೊಟ್ಟ. ಲೇಟ್ ಫೀ ಪೇಡ್ ಬಿರೇಕ್ ಫಾಸ್ಟ್‍ಗೆ, ಅಡ್ವಾನ್ಸ್ಡ್ ಲಂಚೂ ಸೇರಿಸಿ, ಒಬ್ಬೊಬ್ಬರೂ ಕನಿಷ್ಠ ಆರೆಂಟು ರೊಟ್ಟಿಯಾದರೂ ಹೊಡೀಬೇಕು ಅಂದು ಕೊಂಡಿದ್ದೆವು. - [ಶಿವಪುರಿ ಮತ್ತು ರಣಥೊಂಬರಾದ ಹುಲಿಗಳು](https://athreebook.com/2020/07/24/shivapuri-and-ranathombara/): (ಪ್ರಾಕೃತಿಕ ಭಾರತ ಸೀಳೋಟ – ೬) ಬಳಲಿಕೆಯೋ ತಿನಿಸಿನ ಎಡವಟ್ಟೋ ರಾತ್ರಿ ದೇವಕಿ ಒಂದೆರಡು ಬಾರಿ ವಾಂತಿ ಮಾಡಿದ್ದಳು. ಧಾರಾಳ ನೀರು ಮತ್ತು ಗೆಳೆಯ ಡಾ| ಕೃಷ್ಣಮೋಹನ್ ಕಟ್ಟಿಕೊಟ್ಟಿದ್ದ ಪ್ರಥಮ ಚಿಕಿತ್ಸೆ ಕಟ್ಟಿನಿಂದ ಒಂದು ಗುಳಿಗೆಯಲ್ಲಿ ಸುಮಾರು ಸುಧಾರಿಸಿದಳು. ಹಾಗೆಂದು ಬೆಳಗ್ಗಿನ (೪-೫-೯೦) ನಮ್ಮ ದಿನಚರಿಗೇನೂ ಬದಲಾವಣೆ ತರಬೇಕಾಗಲಿಲ್ಲ! ಆರೂ ಮುಕ್ಕಾಲಕ್ಕೆ ಭೋಪಾಲ್ ಬಿಟ್ಟು ‘ಶಿವಪುರಿ ವನಧಾಮ’ದತ್ತ, ಅಂದರೆ ಸುಮಾರು ಮುನ್ನೂರು ಕಿಮೀ ಗುರಿಗೆ ಧಾವಿಸಿದೆವು. ಅನುಕೂಲದಲ್ಲಿ ಕಾಫಿಂಡಿಗೆ ನಿಂತಿದ್ದೆವು, ಅಲ್ಲಿ ದೇವಕಿ ಕೇವಲ ನೀರಾಹಾರಿಯಾದಳು, ಧಾರಾಳಿಯೂ ಆದಳು. ನಿಧಾನ, ವಿಶ್ರಾಂತಿ ಜಾಸ್ತಿಯಲ್ಲೇ ನೂರೆಪ್ಪತ್ತು ಕಿಮೀ ಕಳೆದು ಸಾಕಷ್ಟು ದೊಡ್ಡೂರು ‘ಗುಣ’ ಸೇರಿದೆವು. ಅಲ್ಲಿ ಬ್ಯಾಂಕ್ ವಹಿವಾಟಿನ ನೆಪವಿತ್ತು. ಜತೆಗೇ ದೇವಕಿಯ ವೈದ್ಯಕೀಯ ತಪಾಸಣೆಯೂ ಆಯ್ತು. ಯಾತ್ರಾ ಮುಂದುವರಿಕೆಗೆ ಶಿಫಾರಸೂ ಸಿಕ್ಕಿತು. ಸ್ವಲ್ಪ ಹೆಚ್ಚೇ ವಿರಮಿಸಿ, ಊಟ ಮುಗಿಸಿಕೊಂಡೇ ಮುಂದುವರಿದೆವು. ನಮ್ಮ ಆರೋಗ್ಯಗಳ ಬುದ್ದುವಂತಿಕೆಯಲ್ಲಿ ಬೈಕನ್ನು ಮರೆತದ್ದಕ್ಕೆ ಮತ್ತೆ ದಾರಿಯಲ್ಲೆಲ್ಲೋ ‘ಕಪ್ಪು’ ಪೆಟ್ರೋಲ್ ತುಂಬಿಕೊಳ್ಳಬೇಕಾಯ್ತು. ಉಳಿದಂತೆ ವಿಶೇಷಗಳೇನೂ ಇಲ್ಲದೆ ಸಂಜೆ ಐದು ಗಂಟೆಯ ಸುಮಾರಿಗೆ […] - [ಕೋಟೆ ರೂಪವತಿಯ ಘುಂಗಟ್ ಸರಿಸಿ](https://athreebook.com/2020/07/21/north-india-trip/): ಅಂಗಡಿಯಲ್ಲಿ ಹಲವು ನಕ್ಷಾಪುಸ್ತಕಗಳಿಂದ ನಮ್ಮ ಸ್ವಾರ್ಥಾನುಕೂಲಿಯಾದ ಗೀಟುಗಳನ್ನು ಹೆಕ್ಕಿದ ಮಿಶ್ರಣವೇ ನನ್ನ ನಕಾಶೆ. ಆ ಲೆಕ್ಕದಲ್ಲಿ ನಮ್ಮ ಹೊಸದಿನದ (೧-೫-೯೦) ಲಕ್ಷ್ಯ - ರಾಣೀ ರೂಪಮತಿಯ ಅಮರ ಪ್ರೇಮ ಕತೆಗೂ ಸಾಕ್ಷಿಯಾದ ಮಾಂಡವಘಡ್ ಅಥವಾ ಮಾಂಡು. ಹಕ್ಕಿ ಹಾರಿದಂತೆ ಇದು ಮೇಲ್ಘಾಟಿನಿಂದ ಪಡುಬಡಗು ಅಥವಾ ವಾಯವ್ಯಕ್ಕಿತ್ತು. ನನ್ನ ದಾರಿಯ ಅಂದಾಜಿನಂತೆ ನಾನೂರು ಕಿಮೀಯ ಓಟ. ಸಾಲದ್ದಕ್ಕೆ ಮಾಂಡು ಕೋಟೆಯಲ್ಲಿನ ಊಟ, ವಾಸ್ತವ್ಯದ ಅನುಕೂಲಗಳೂ ಅಸ್ಪಷ್ಟವಿದ್ದವು. ಮೇಲ್ಘಾಟಿನ ಪರ್ವತ ಪ್ರದೇಶದ ದಾರಿಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಇದ್ದವಕ್ಕೂ ಸಮರ್ಥ ಮಾಹಿತಿದಾರರು ನಮಗೆ ವನಧಾಮದಲ್ಲಿ ಸಿಗಲಿಲ್ಲ. ನಾವು ವಿಚಾರಿಸಿದ ಒಂದಿಬ್ಬರು ಸರಳವಾಗಿ "ಅಸಾಧ್ಯ" ಎಂದುಬಿಟ್ಟರು. ಮತ್ತು ನೇರ ಉತ್ತರಕ್ಕೆ ಹೋಗುವ ಸುಮಾರು ಐವತ್ತರವತ್ತು ಕಿಮೀ ಬಳಸು ದಾರಿಯನ್ನೇ ಹೇಳಿದರು. ಕಾರಣ ಸರಳ - ನಾನು ಕಂಡುಕೊಂಡ ದಿಕ್ಕಿನಲ್ಲಿ ಇದ್ದರೂ ತೀರಾ ಕಚ್ಚಾದಾರಿಯಂತೆ. ಮತ್ತೆ ಹಾಗೆ ಹೋದರೂ ಅಡ್ಡಲಾಗುವ ಮೊದಲು ತಪತೀ, ಅ`ನಂತರ ನರ್ಮದಾ ನದಿಗಳನ್ನು ದಾಟಲು ಸೇತುವೆಗಳೇ ಇಲ್ಲವೆಂದರು. ನಮಗೋ ದಾರಿಯ ಉಳಿತಾಯದಂತೆ, ಬಳಸಂಬಟ್ಟೆ ಹಿಡಿದರೆ ಬೈಕುಗಳಿಗೆ ಪೆಟ್ರೋಲ್ ಕೊರತೆಯಾದೀತು ಎಂಬ ಹೆದರಿಕೆಯೂ ಇತ್ತು. - [ಔರಂಗಾಬಾದ್, ಅಜಂತಾ, ಮೇಲ್ಘಾಟ್](https://athreebook.com/2020/07/19/ajanta-aurangabad-melghat-trip/): ಪ್ರವಾಸ ಕಥನವೆಂದರೆ ತಿರುಗಾಡೀ ದಿನಚರಿಯ ಪುಟವಲ್ಲ, ಭೇಟಿ ಕೊಟ್ಟ ಸ್ಥಳಗಳ ಪುರಾಣವಲ್ಲ, ಓಡಿದ ದಾರಿಯಲ್ಲ, ಕಂಡ ಚಿತ್ರವಲ್ಲ, ತಿನಿಸುಗಳ ಪಟ್ಟಿಯಲ್ಲ, ....ಅಲ್ಲ, ಅಲ್ಲ! ಅಷ್ಟನ್ನೇ ಕೊಟ್ಟರೆ ಒಳ್ಳೆಯ ಮಾಹಿತಿ, ವರದಿ ಆಗಬಹುದು. ಒಂದು ಕಾಲಕ್ಕೆ ಅಂಥವು ಅವಶ್ಯವಿದ್ದದ್ದೂ ಸರಿಯೇ (ಹ್ಯೂಯೆನ್‍ತ್ಸಾಂಗ್). ಆದರೆ ಇಂದು ಅಂತರ್ಜಾಲದಲ್ಲಿ ಮಾಹಿತಿಗಳ ಮಹಾಪೂರವೇ ಇದೆ, ವಿದ್ಯುನ್ಮಾನದ ಸಾಧ್ಯತೆಯಲ್ಲಿ ನಿಜಧ್ವನಿ, ಯಥಾವತ್ತು ಚಲಚಿತ್ರಗಳೇ ಧಾರಾಳ ಲಭ್ಯವಿದೆ. ಹಾಗಾಗಿ ಪ್ರಾಸಂಗಿಕವಾಗಿ ನಾನು ಅಲ್ಲಗಳೆದವನ್ನೆಲ್ಲ ಸೇರಿಸಿಕೊಂಡರೂ ಇನ್ನು ಹೆಚ್ಚಿನ ಲಕ್ಷ್ಯವನ್ನು ಸಾಧಿಸಬೇಕೆನ್ನುವುದು ನನ್ನ ಪ್ರವಾಸ ಕಥನಗಳ ತುಡಿತ. ಅಂದರೆ ನಿಷ್ಪಕ್ಷ ವರದಿಗಿಂತ, ಪ್ರವಾಸಿಯ ಪ್ರಾಮಾಣಿಕ ಪ್ರತಿಕ್ರಿಯೆ, ಅದಕ್ಕೆ ಯುಕ್ತ ಅಭಿವ್ಯಕ್ತಿ ಮೂಡಿಸುವುದರಲ್ಲಿ ನಾನು ಹೆಚ್ಚು ಆಸಕ್ತ. ಅಂಥಾ ಒಂದು ದೊಡ್ಡ ಹೆಸರಿನ ಉದಾಹರಣೆ ಕೊಡುವುದಾದಲ್ಲಿ - ಕಾಳಿದಾಸನ ಮೇಘದೂತ. ಪ್ರಸ್ತುತ ಭಾರತ ಸೀಳೋಟದಲ್ಲಿ ನನಗೆ ಮೂವತ್ತು ವರ್ಷಗಳ ಮರವೆಯಿರುವುದರಿಂದ ಬೇಕೆಂದರೂ ಪಟ್ಟಿ ಕೊಡಲಾರೆ. ಆದರೆ ಕಾಲ ಸಂದರೂ ಅಚ್ಚಳಿಯದುಳಿಸಿದ ಭಾವನೆಗಳನ್ನು ಹಂಚಿಕೊಳ್ಳಲು ಈ ಪರದಾಟ ನಡೆಸಿದ್ದೇನೆ. ಕಥನದ ಮಿತಿಯನ್ನು ಮೀರಿದ ನಿಮ್ಮ ನಿರೀಕ್ಷೆಗಳೇನಿದ್ದರೂ ದಯವಿಟ್ಟು (ಗೂಗಲ್, ಯೂಟ್ಯೂಬ್, ವಿಕಿಪೀಡಿಯಾ..) ಅಂತರ್ಜಾಲಿಗರಾಗಿ! - [ಎಲ್ಲೋರಾ ದೌಲತ ಗಿರಿ](https://athreebook.com/2020/07/17/ellora-daulat-hills/): ವಿಜಯಪುರ - ಹಲವು ಪಾಳೇಪಟ್ಟುಗಳ ಮಿಶ್ರಣದೊಡನೆಯೂ ಸುಮಾರು ಹನ್ನೊಂದನೇ ಶತಮಾನದಲ್ಲಿ, ಚಾಲುಕ್ಯರ ಆಡಳಿತದಲ್ಲಿ ಗಟ್ಟಿಯಾಗಿ ರೂಪು ಪಡೆದ ನಗರ. ಮುಘಲ್, ಬಹಮನೀ, ಆದಿಲ್ ಶಾಹೀ, ಹೈದರಾಬಾದ್ ನಿಜಾಂ, ಮರಾಠ, ಬ್ರಿಟಿಶ್...... ಆಡಳಿತಗಳ ಸುಳಿಗಳಲ್ಲಿ ಬೆಳೆದಿದೆ, ಬಳಲಿದೆ. ಅದರಲ್ಲಿ ಢಾಳಾಗಿ ಕಾಣುವ ಕೆಲವು ಸಾಕ್ಷಿಗಳನ್ನಾದರೂ ನೋಡಲು ನಾವು (೨೭-೪-೯೦ರ) ಬೆಳಗ್ಗೆ ಐದೂವರೆ ಗಂಟೆಗೇ ಹೊರಟೆವು. ಮುಂದೆ ಮೊಪೆಡ್ಡಿನಲ್ಲಿ ಜೋಶಿಯವರ ‘ಶಿಷ್ಯ’ ಸಿದ್ಧಣ್ಣ ಬಿರಾದಾರ್. ಹಿಂದೆ ಖಾಲೀ ಬೈಕುಗಳಲ್ಲಿ ನಾವಾರು. ಅಪೂರ್ಣಗೊಂಡ ಮಹಲ್ಲಿನ ಹನ್ನೆರಡು ಕಮಾನುಗಳು (ಬಾರಾ ಕಮಾನ್), ಒಂದು ಭಾರೀ ಬುರುಜು (ಉಪ್ಲಿ ಬುರ್ಜ್), ಕೋಟೆಯ ಹಲವು ಫಿರಂಗಿಗಳ ಸಾಂಗತ್ಯದಲ್ಲಿ ತೋಪುಗಳ ರಾಜ ಎಂದೇ ಖ್ಯಾತವಾದ ಮಾಲಿಕ್ ಎ ಮೈದಾನ್, ತಾಜ್ ಮಹಲ್ಲಿಗೆ ಪ್ರೇರಣೆಯಾದ ಇಬ್ರಾಹಿಂ ರೋಜಾ, ಜುಮ್ಮಾ ಮಸೀದಿ ಸುತ್ತಿದೆವು. ನೋಡದೇ ಬಿಟ್ಟರೆ ಬಿಜಾಪುರ ನೋಡಿದ್ದೇ ಸುಳ್ಳೆನ್ನುವ ಗೋಲ್ ಗುಂಬಜ್‍‍ಗಂತೂ ಅವಶ್ಯ ಹೋಗಿದ್ದೆವು. ಅಲ್ಲಿನ ಶಬ್ದ ಮಾಲಿನ್ಯಕ್ಕೆ ಮೌನವಾಗಿ ಕಿವಿಕೊಟ್ಟೆವು. ಎಡೆಯಲ್ಲೆಲ್ಲೋ ಹೋಟೆಲಿನಲ್ಲಿ ತಿಂಡಿ ಮಾಡಿಕೊಂಡೆವು. ವಿವಿಧ ರಾಜಾಡಳಿತಗಳ ಕಾಲದಲ್ಲಿ ನಿರ್ಮಾಣಗೊಂಡು ಬೇಸಗೆಯ ಉತ್ತುಂಗದಲ್ಲೂ ಭರ್ತಿ ನೀರಿದ್ದ ಭಾರೀ ಬಾವಿಗಳಿಗೆ ಪ್ರತಿನಿಧಿ ಎನ್ನುವಂತೆ ಒಂದನ್ನೂ (ತಾಸ್ ಬಾವಡೆ) ಕಂಡೆವು. - [ವಿಜಯಪುರಕ್ಕೆ ಬಿಜಯಂಗೈದೆವು](https://athreebook.com/2020/07/15/vijayapura-trip/): ಸಾಹಸಯಾನದುದ್ದಕ್ಕೂ ಬೆಳಗ್ಗೆ ಹೊರಡುವಲ್ಲಿ ಹಿಂದಿನದ ಸುಸ್ತು ಅಥವಾ ನಿದ್ರೆ ಬಾಕಿ ನಮ್ಮನ್ನು ಕಾಡದಂತೆ ನೋಡಿಕೊಂಡೆವು. ನಾಲ್ಕೈದು ಗಂಟೆಗೇ ಎದ್ದು ಪ್ರಾತಃ ಕರ್ಮಗಳನ್ನು ಮುಗಿಸಿ, ಉಷಃ ಕಾಲದಲ್ಲೇ ಬೈಕ್‍ಗಳು ಗುಡುಗುಡಿಸುವುದನ್ನು ರೂಢಿಸಿಕೊಂಡೆವು. ಇದಕ್ಕೆ ಹುಬ್ಬಳ್ಳಿಯ ಮುಂಜಾವೇ ಸಾಕ್ಷಿ. ಹುಬ್ಬಳ್ಳಿಯ ವಾಸದ ನೆಲೆಯೇನೋ ಸೌಕರ್ಯಪೂರ್ಣ ದೃಢ ಹಾಗೂ ಸುಂದರವಾಗಿಯೇ ಇತ್ತು. ಆದರೆ ಅದರ ಹೆಸರಿನಲ್ಲಿದ್ದ (ಮಧುಕುಂಜ) ಸಿಹಿಗೆ, ಗೆಳೆಯರು ಕೊಟ್ಟ ಪೇಢೆಯ ಪರಿಮಳ ಸೇರಿತೋ ಎನ್ನುವಂತೆ, ಅದೆಲ್ಲಿಂದಲೋ ಕಚ್ಚುವ ಇರುವೆಗಳ ಸಾಲು ಬಂದು, ನಮ್ಮ ಹಾಸೆಲ್ಲ ವ್ಯಾಪಿಸಿ "ನಿದ್ರಿಸದಿರು ವೀರಾ..." ಎಂದು ತುಂಬ ಸತಾಯಿಸಿತು. ಅವನ್ನು ಸುಧಾರಿಸಿ ನಿಶ್ಚಿಂತರಾಗುವುದರೊಳಗೆ ಊರ ಸೊಳ್ಳೆಗಳ ಕವಾಯತು ಶುರು. ರಾತ್ರಿಯುದ್ದಕ್ಕೆ "ಉತ್ತಿಷ್ಠ ಉತ್ತಿಷ್ಠ" ಎಂಬ ಜಾಗೃತಿಯ ಕರೆ! - [ಪ್ರಾಕೃತಿಕ ಭಾರತದ ಸೀಳೋಟ](https://athreebook.com/2020/07/13/environmental-india/): ಕಳೆದ ಶತಮಾನದ ಕೊನೆಯ ದಶಕ, ನಿಖರವಾಗಿ ೧೯೯೦ರ ಏಪ್ರಿಲ್ ೨೫ನೇ ಬುಧವಾರ ಬೆಳಿಗ್ಗೆ ಆರೂವರೆ ಗಂಟೆ. ಗೆಳೆಯರೇ ಆದ ಯಜ್ಞ, ರೋಹಿತ್ ರಾವ್, ಮೋಹನ್, ಪ್ರಸನ್ನ, ಇಂದುಶೇಖರ, ಬೋಸ್ ಮೊದಲಾದವರು ಟ್ಯಾಗೋರ್ ಉದ್ಯಾನವನದೆದುರು, ನಾವು ಊರು ಬಿಡುವುದನ್ನು ಖಾತ್ರಿ ಪಡಿಸಿಕೊಳ್ಳಲೆಂಬಂತೆ ಬಂದಿದ್ದರು. ನಾವು ಆರು ಮಂದಿ (ಐದು ಗಂಡು, ಒಂದು ಹೆಣ್ಣು), ದೀರ್ಘ ಪ್ರಯಾಣಕ್ಕೆ ಮತ್ತು ವಾಸ್ತವ್ಯಕ್ಕೆ ಅಗತ್ಯವಾದ ಮಿತ ಸಾಮಾನುಗಳ ಹೊರೆ ಹೊತ್ತ ಮೂರು ಹೀರೋ ಹೊಂಡಾ ಮೋಟಾರ್ ಬೈಕ್‍ಗಳನ್ನೇರಿ (೧೦೦ ಸಿಸಿ) ಹೊರಟಿದ್ದೆವು. - [ಜಿಟಿ ನಾರಾಯಣ ರಾವ್ - ನನಗೆ ದಕ್ಕಿದ್ದು!](https://athreebook.com/2020/07/03/g-t-narayanarao/): ಹುಟ್ಟಿನ ಆಕಸ್ಮಿಕದೊಡನೇ ಸಮಾಜದಲ್ಲಿ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಭಾವನಾತ್ಮಕ ಜವಾಬ್ದಾರಿಗಳೂ ಸೇರಿಕೊಳ್ಳುತ್ತವೆ. ಅವನ್ನು ಹೊರತುಪಡಿಸಿ ಒಂದು ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಈ ಮಾಲಿಕೆಯನ್ನು ಮೀಸಲಾಗಿರಿಸಿದೆ. ಅದು ಒಂದು ಮಿತಿಯ ಆತ್ಮಕಥನವೂ ಆದದ್ದು ಆಕಸ್ಮಿಕ. ಆದರೆ ಈ ಕೊನೆಯಲ್ಲಿ, ನಾನು ‘ಮೀರಿದವು’ ಅಥವಾ ಸ್ವತಂತ್ರವೆಂದು ನಂಬಿದ ಪ್ರಭಾವಗಳೂ ಬಹುತೇಕ ‘ಮೂಲ ಆಕಸ್ಮಿಕ’ದ ಭಾಗವೇ ಆಗಿರುತ್ತದೆ ಎಂದರಿವಾಯ್ತು. - [ದ್ವಿಜತ್ವ ಕೊಡಿಸಿದ ಮೈಸೂರು](https://athreebook.com/2020/06/30/mysore-special-story/): ವೈಜ್ಞಾನಿಕ ಮನೋಧರ್ಮವನ್ನು ಸ್ವಂತ ಜೀವನಕ್ಕಳವಡಿಸಿಕೊಂಡೇ ಇತರರಿಗೆ ಮಾತು, ಬರಹಗಳಲ್ಲಿ ಪ್ರಚಾರ ಮಾಡಿದವರು ನನ್ನ ತಂದೆ - ಜಿಟಿನಾ. ಅವರಿಗೆ ಮುತ್ತಜ್ಜನಿಂದ ಶ್ಲೋಕಗಳ ಪಾಠವಾದ್ದಕ್ಕೆ, ಏಳರ ಪ್ರಾಯದಲ್ಲಿ ಉಪನಯನದ ಮುದ್ರೆ ಬಿದ್ದಿತ್ತು. ಮುಂದೆ ಹುಡುಗ ವೇದ ಮಂತ್ರಗಳಿಗೆ ಏರುತ್ತ, ಬಾಲಶಂಕರನೇ ಆಗಬೇಕೆಂಬ ನಿರೀಕ್ಷೆ ಅವರಪ್ಪಮ್ಮಂದಿರದ್ದಿತ್ತು. ಆದರೆ ಹನ್ನೊಂದರ ಪ್ರಾಯದಲ್ಲಿ ಇವರಲ್ಲಿ ‘ಬುದ್ಧ’ನೆದ್ದಿದ್ದ. - [ಅರೆಸೈನಿಕನ ರೂಪಣೆಯಲ್ಲಿ ಮೈಸೂರು](https://athreebook.com/2020/06/26/mysore-story/): ಮಹಾರಾಜಾದಲ್ಲಿ ನಾನು ಕಾಲೇಜಿಗಿಂತ ಹೆಚ್ಚಿನ ಮುತುವರ್ಜಿಯಲ್ಲಿ ಎನ್.ಸಿ.ಸಿ ಸೇರಿದ್ದೆ. ಕಾರಣ ಗೊತ್ತಲ್ಲ - ತನ್ಮೂಲಕ ಪರ್ವತಾರೋಹಣ ಶಿಬಿರಕ್ಕೆ ಹೋಗುವುದು! ನಾನು ಬೆಂಗಳೂರಿನಲ್ಲಿದ್ದಾಗ ಕಡ್ಡಾಯ ಎನ್.ಸಿ.ಸಿ ಇತ್ತು. ಸಹಜವಾಗಿ ಸರಕಾರೀ ಕಾಲೇಜು ಒಂದಕ್ಕೇ ಒಂದು ಬಟಾಲಿಯನ್ ವ್ಯವಸ್ಥೆ ಇತ್ತು. ಆದರೆ ಮೈಸೂರಿಗೆ ಬರುವಾಗ ಕಡ್ಡಾಯ ರದ್ದಾಗಿತ್ತು. ಹಾಗಾಗಿ ನಮ್ಮ ಬಟಾಲಿಯನ್ನಿನ ವ್ಯಾಪ್ತಿಗೆ ಮೈಸೂರಲ್ಲದೆ ಸಮೀಪದ ಕೊಳ್ಳೇಗಾಲ, ಮಂಡ್ಯ ಮುಂತಾದ ಊರುಗಳ ಹಲವು ಕಾಲೇಜುಗಳೂ ಸೇರಿಕೊಂಡಿದ್ದವು. - [ಮೈಸೂರಿನ ದಿನಗಳಲ್ಲಿ - ವಿದ್ಯಾರ್ಥಿ](https://athreebook.com/2020/06/23/student-life-in-mysore-days/): ಪದವಿಪೂರ್ವದ ಪರೀಕ್ಷೆಯಲ್ಲಿ ನಾನು ರಸಾಯನ ವಿಜ್ಞಾನ ಅಜೀರ್ಣ ಮಾಡಿಕೊಂಡು, ನ್ಯಾಶನಲ್ ಟ್ಯುಟೋರಿಯಲ್ಸ್‍ನಲ್ಲಿ ಶುಶ್ರೂಷೆ ಪಡೆದು ಸೆಪ್ಟೆಂಬರ್ ಪರೀಕ್ಷೆ ಎದುರಿಸಿದೆ. ಚೇತರಿಕೆಯ ಧೈರ್ಯ ಇದ್ದದ್ದಕ್ಕೆ, ಮುಂದಿನ ಶಿಕ್ಷಣ ವರ್ಷದವರೆಗೆ ಎಂಬಂತೆ, ಸುಲಭದಲ್ಲಿ ಜರ್ಮನ್ ಕಲಿತು ಬಿಡುತ್ತೇನೆಂದು ಗಯಟೆ ಸಂಸ್ಥೆಗೆ ಸೇರಿಕೊಂಡೆ. ಆದರೆ ವಾರಕ್ಕೆ ಎರಡೋ ಮೂರೋ ಗಂಟೆಯ ಪಾಠದಲ್ಲಿ ಕಾಗುಣಿತ, ವ್ಯಾಕರಣದ ಕಗ್ಗಂಟಿನಲ್ಲಿ ಸಿಕ್ಕಿ ಕಂಗಾಲಾದೆ. ಅಷ್ಟರಲ್ಲಿ ನನ್ನ ಅದೃಷ್ಟಕ್ಕೆ, ತಂದೆ ತನ್ನ ವೃತ್ತಿ ಜೀವನಕ್ಕೆ ಇನ್ನೊಂದೇ ಕ್ರಾಂತಿಕಾರಿ ತಿರುವು ತೆಗೆದುಕೊಂಡರು. - [ಬಹುಸಂಸ್ಕೃತಿಯ ರಾಜನಗರದಲ್ಲಿ](https://athreebook.com/2020/06/19/rajnagar-culture/): ಬಳ್ಳಾರಿ - ಪುತ್ತೂರು ಓಡಾಟ ಕಾಲದಲ್ಲಿ ನಮ್ಮ ಬೆಂಗಳೂರು ಮಧ್ಯವರ್ತಿ, ಹಿಂದೆ ಹೇಳಿದಂತೆ ಚಿಕ್ಕಪ್ಪ ಮೂರ್ತಿ. ಆತ (೧೯೬೫) ನಮಗೆ ಹನುಮಂತ ನಗರದಲ್ಲಿ ಬಾಡಿಗೆ ಮನೆ ಹಿಡಿದಿಟ್ಟಿದ್ದ. ಒಂದೇ ಯಜಮಾನಿಕೆಯ ಕಟ್ಟಡ ಗೊಂದಲವದು.ಒಂದು ಮಾಳಿಗೆ, ನಾಲ್ಕು ವ್ಯಾಪಾರೀ ಮಳಿಗೆ, ಸುಮಾರು ಎಂಟೋ ಒಂಬತ್ತೋ ಕುಟುಂಬಗಳ, ಅಷ್ಟೇ ಭಾಷಾ ಮತ್ತು ಸಾಂಸ್ಕೃತಿಕ ಗೋಜಲಿನೊಳಗೆ ನಮ್ಮದೂ ಒಂದು. ಬೆಂಗಳೂರು ಸೇರಿದ್ದೇ ವಿಧಾನ ಸೌಧ ನೋಡಬೇಕಲ್ಲ. - [ಜಾತಿ ಮತಗಳ ಚಕ್ರಸುಳಿ ಮೀರಿ](https://athreebook.com/2020/06/17/beyond-the-caste-and-religion/): ಹುಟ್ಟಿನ ಆಕಸ್ಮಿಕದೊಡನೆ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಅವಕ್ಕೆ ಸೇರಿದ ಭಾವನಾತ್ಮಕ ಜವಾಬ್ದಾರಿಗಳೂ ಸಾಮಾಜಿಕ ರೂಢಿಯಂತೆ ಸೇರಿಕೊಳ್ಳುತ್ತವೆ. ಅವನ್ನು ಬಿಟ್ಟು, ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಮೀಸಲಾದ ಮಾಲೆ - ಜಾತಿ ಮತಗಳ ಚಕ್ರಸುಳಿ ಮೀರಿ. ಇಲ್ಲಿ ‘ಜಾತಿ ಮತ’ ಎನ್ನುವುದನ್ನು ಸಾಮಾಜಿಕ, ಆರ್ಥಿಕ, ಭಾಷಿಕ ಎಂಬಿತ್ಯಾದಿ ತೋರಿಕೆಯ ರೂಢಿಗಳನ್ನೆಲ್ಲ ಒಳಗೊಂಡಿದೆ. - [ಬಲ್ಲಾಳರಾಯನ ದುರ್ಗ - ಬೆಂಬಿಡದ ಭೂತ!](https://athreebook.com/2020/05/01/ballalarayadurga/): ಎರಡು ದಿನಗಳ ರಜೆ ಬರುವುದನ್ನು ಮುಂದಾಗಿ ಗುರುತಿಸಿ, ಹಳೇ ಚಾಳಿಯವರನ್ನು ಲೆಕ್ಕಕ್ಕೆ ಹಿಡಿದು ಊರು ತಪ್ಪಿಸಿಕೊಳ್ಳುವ ಕಲಾಪ ಹೊಸೆಯುವುದು ನನಗೆ ರೂಢಿಸಿಬಿಟ್ಟಿತ್ತು. ಅಷ್ಟಕ್ಕೆ ಸುಮ್ಮನಾಗದೆ ಅಂಗಡಿಗೆ ಬಂದ ಯಾರೂ ಸ್ವಲ್ಪವೇ ವನ್ಯ ಒಲವನ್ನು ಕಾಣಿಸಿದರೂ ನಮ್ಮ ಕಲಾಪಕ್ಕೆ ಸೆಳೆದುಕೊಳ್ಳಲೂ ಪ್ರಯತ್ನಿಸುತ್ತಿದ್ದೆ. ಹೀಗೆ ಪ್ರಜಾವಾಣಿ ವರದಿಗಾರರಾಗಿ ಮಂಗಳೂರಿಗೆ ಬಂದಿದ್ದ, ಅಪ್ಪಟ ಬಯಲುಸೀಮೆಯ (ದಾವಣಗೆರೆ ಮೂಲ) ಜಿಪಿ ಬಸವರಾಜು, ಶಾಂತಾ ದಂಪತಿಯನ್ನು ‘ಕಡಮಕಲ್ಲು - ಗಾಳೀಬೀಡು’ ಅಸಾಧ್ಯ ದಾರಿಯಲ್ಲಿ ಕರೆದೊಯ್ದು ಸತಾಯಿಸಿಬಿಟ್ಟಿದ್ದೆ. - [ಹೋಗಿ ಬಲ್ಲಾಳರಾಯ ದುರ್ಗಕ್ಕೆ](https://athreebook.com/2020/04/29/ballalaraya-durga/): ಪಶ್ಚಿಮ ಘಟ್ಟದಲ್ಲಿ ನನ್ನ ಮೊದಲ ಹೆಜ್ಜೆ ಮೂಡಿಸುವ ದಿನ. ಮೈಸೂರಿನಿಂದ ಅದಕ್ಕೆಂದೇ ಬಂದ ಗೆಳೆಯ ವಿಶ್ವನಾಥ್ ಜತೆಗೆ ದಿಢೀರ್ ಸೇರ್ಪಡೆಯಾದವ, ಅಧಿಕೃತ ಪರ್ವತಾರೋಹಣಕ್ಕೇ ಅದೇ ಮೊದಲು ಪ್ರವೇಶ ಪಡೆದವ, ಸೋದರ ಮಾವನ ಮಗ ಎ.ಪಿ. ಚಂದ್ರಶೇಖರ. ಸಣ್ಣಾಳು, ಇನ್ನೂ ಚಡ್ಡಿ ಪ್ರಾಯ (೮/೯ನೇ ತರಗತಿ). ಆದರೆ ಔಪಚಾರಿಕ ವಿದ್ಯೆಯೊಡನೆ ಹಳ್ಳಿಯ ವಿದ್ಯೆಯಲ್ಲಿ ಅಪ್ಪನ ಗರಡಿಯಲ್ಲಿ ಪಳಗಿದವ ಎನ್ನುವುದೇ ಆತನ ಅರ್ಹತೆ. - [೫೦೦೦ ಅಡಿ ಎತ್ತರದ ಬಲ್ಲಾಳರಾಯನ ದುರ್ಗಕ್ಕೆ ಆರೋಹಣ](https://athreebook.com/2020/04/25/trip-to-ballarayana-durga/): ಮಧ್ಯರಾತ್ರಿ ಹನ್ನೆರಡರ ಸಮಯ, ಮೈ ಕೊರೆಯುವ ಚಳಿ, ಎದುರಲ್ಲಿ ಕೆನ್ನಾಲಗೆ ಚಾಚಿಕೊಂಡು ಲಾಸ್ಯವಾಡುವ ಬೆಂಕಿ, ಸುತ್ತಮುತ್ತ ನಿದ್ರಿಸುತ್ತಿರುವಂತೇ ಕಾಣುವ ಶಿಬಿರಾರ್ಥಿಗಳು. ಮೇಲೆ ಬಾನಲ್ಲಿ ಹುಣ್ಣಿಮೆಗೆ ಮುಂಚಿತ ದಿನಗಳ ಪ್ರವರ್ಧಮಾನ ಚಂದ್ರ. ಪಕ್ಕದಲ್ಲಿ ಬಂಡೆಯ ಮೇಲೆ ಹರಿಯುತ್ತಿರುವ ತೊರೆಯ ಜುಳು ಜುಳು ನಿನಾದ. ಬಾನೆತ್ತರಕ್ಕೆ ಏಣಿ ಇಟ್ಟಂತೆ ಬೆಳೆದು ನಿಂತ ವೃಕ್ಷರಾಜಿಗಳು, ಪೂರ್ವ ದಿಕ್ಕಿಗೆ - ಅದರಡಿಯಲ್ಲಿ ದೈತ್ಯಾಕಾರದ ಬಂಡೆಗಲ್ಲುಗಳು. ಬಂಡೆಗಲ್ಲಿನಡಿ ಮೊರೆಹೋದ ಹೆಪ್ಪುಗತ್ತಲು. - [ಬಂಡಾಜೆ ಅಬ್ಬಿಯ ತಲೆಯಲ್ಲೊಂದು ರಾತ್ರಿ](https://athreebook.com/2020/04/23/bandaaje-abbi/): ಜಾಡು ಮಾಸಿ, ಪೊದರು ಬೆಳೆದು, ನೆಲ ಕುಸಿದು, ಮರಬಿದ್ದು ಆದ ಬಾಹ್ಯ ಅಡಚಣೆಗಳು ಇಲ್ಲಿ ಹಲವಾರು. ರಮ್ಯ ಕಲ್ಪನೆಗಳೊಂದಿಗೆ ಏರ ಬಂದ ಹೊಸಬರಿಗೆ ಇಲ್ಲಿ ದಮ್ಮು ಕಟ್ಟುತ್ತದೆ. ಹಿಂದಕ್ಕೆಳೆಯುವ ಹೇರು, ಸಾಲನ್ನು ಬಿಡದೇ ನಡೆಯಬೇಕಾದ ಶಿಸ್ತು ಕಾಲನ್ನೂ ಕಟ್ಟುತ್ತದೆ. ಕಾಡೊಳಗೆ ನಡೆಯುತ್ತ ಬೇರು ಎಡವಿ, ಬಳ್ಳಿ ಕಾಲ್ಕಟ್ಟಿ, ತರಗೆಲೆ ಹಾಸಿನಲ್ಲಿ ಹೆಜ್ಜೆ ಬಿಗಿ ನಿಲ್ಲದಾಗ ಮೆಟ್ಟಿಲಿರಬಾರದಿತ್ತೇ ಎಂಬ ಕೊರಗು. ಅಕಸ್ಮಾತ್ ಸ್ವಲ ಮೆಟ್ಟಿಲ ಸಾಲೇ ಬಂದಾಗ ಕೂರಲು ಆಸನವಿರಬಾರದಿತ್ತೇ ಎಂಬ ಬಯಕೆ. ಕೊನೆಗೆ ಎಲ್ಲೆಂದರಲ್ಲಿ ಕೂತರೂ ಶೈತ್ಯೋಪಚಾರದೊಡನೆ ಅಡ್ಡಾಗಿ ಮೈಮರೆವ ಆಸೆಗೆ ಮಾತ್ರ ಇಲ್ಲಿಲ್ಲ ಆಸರೆ. - [ಜೋಗದ ಗಜಾನನ ಶರ್ಮರಿಗೊಂದು ಪತ್ರ](https://athreebook.com/2020/04/06/letter-to-gajanana-sharma/): [ಶರಾವತಿ ಸಾಗರದ ದೋಣಿಯಾನಕ್ಕೆ ನಾನು/ವು ಹೊನ್ನೆಮರಡಿಗೆ ಹೋದ ಕತೆ ನಿಮಗೆಲ್ಲ ಗೊತ್ತೇ ಇದೆ. (ಇಲ್ಲವಾದವರು ನೋಡಿ: ಶರಾವತಿ ಸಾಗರದ ಉದ್ದಕ್ಕೆ..) ಅಲ್ಲಿ ಸಂಘಟಕದ್ವಯರಾದ ಎಸ್.ಎಲ್ಲೆನ್ ಸ್ವಾಮಿ, ನೊಮಿತೊ ಕಾಮ್ದಾರ್ ದಂಪತಿಯ ಪ್ರೀತಿಯಲ್ಲಿ ‘ಪುನರ್ವಸು’ ಕಾದಂಬರಿ ನನಗೆ ಸಿಕ್ಕಿತು. ಮುಂದೆ ಕಾದಂಬರಿ ಓದಿದ ಸಂತೋಷದಲ್ಲಿ ಫೇಸ್ ಬುಕ್ ಸಂದೇಶಗಳ ಮೂಲಕ ಲೇಖಕ ಗಜಾನನ ಶರ್ಮರನ್ನು, ಮೊದಲ ಬಾರಿಗೆ ಎಂಬಂತೆ ಸಂಪರ್ಕಿಸಿದ್ದೆ. ಅವರು "ಇಲ್ಲ ನಾ ಮೊದಲು..." ಎಂದೇ ಉತ್ತರಿಸಿದ್ದರು. ಅದಕ್ಕೆ ನಾನು... ] - [ಮೂರು ಸಾವಿರ ಕೋಟಿ ನುಂಗಿದ ಸಂಕೇತ....](https://athreebook.com/2020/04/01/sardar-vallabhbhai-patel/): ಮಂಗಳೂರಿನಿಂದ ರಾಜಸ್ತಾನಕ್ಕೆ ಹೋಗುವ ದಾರಿಯಲ್ಲಿ ನಮ್ಮ ಜತೆಗಿರದ ಅನಿಲ್ ಶಾಸ್ತ್ರಿ, ವಾಪಾಸಾಗುವ ದಾರಿಯಲ್ಲಿ ಸೇರಿಕೊಂಡಿದ್ದರು. ಹೀಗೆ ಹರಿವಾಯು (ಹರಿಪ್ರಸಾದ್ ಶೇವಿರೆ ಮತ್ತು ಅನಿಲ್ ಶಾಸ್ತ್ರಿ) ಸಂಧಿಯಲ್ಲಿ ನಮ್ಮದು ಪೂರ್ಣ ರೈಲು ಯಾನ ಎಂದೂ ಟಿಕೆಟ್ಟೂ ಶುದ್ಧವಾಗಿತ್ತು. ವಡೋದರದಲ್ಲಿ ಐದಾರು ಗಂಟೆಗಳ ವ್ಯತ್ಯಾಸದಲ್ಲಿ ಗಾಡಿ ಬದಲಾವಣೆಯ ಅನಿವಾರ್ಯತೆ ಏನೋ ಇತ್ತು. ಆ ಅಂತರವನ್ನು ನಾವು ಹನ್ನೆರಡು ಗಂಟೆಗಳಿಗೆ (ಒಂದು ಗಾಡಿಯನ್ನು ನಿರಾಕರಿಸಿ) ವಿಸ್ತರಿಸಿ, ವಡೋದರ ರೈಲ್ವೇ ಆರಾಮ್ ಘರ್ ಜಗುಲಿ ನರ್ಮದಾಸಾಗರ ತಟದಲ್ಲಿ, ಹೊಸದಾಗಿ (೨೦೧೭) ಮೂಡಿ, ವಿಶ್ವವಿಕ್ರಮ ಸ್ಥಾಪಿಸಿರುವ ಸರ್ದಾರ್ ಪಟೇಲರ ವಿಗ್ರಹ ನೋಡುವುದೆಂದೂ ನಿಶ್ಚೈಸಿದ್ದೆವು. ಮಾಳಿಗೆ ರೈಲು ಸೈಕಲ್ ಯಾನ ಮತ್ತದರ ಸಮಾರೋಪ ಸಮಾರಂಭ ಅಪರಾಹ್ನ ಮೂರು ಗಂಟೆಗೇ ಮುಗಿದದ್ದು ಸರಿ. ಆದರೆ ಆ ಚಿತೋರ್ಘರ್‍ನಿಂದ ಸುಮಾರು ನೂರು ಕಿಮೀ ದೂರದ ಉದಯಪುರಕ್ಕೆ ನಮ್ಮನ್ನು ಹೊತ್ತು ಮುಟ್ಟಿಸಲಿದ್ದ ಬಸ್ ಮಾತ್ರ ನಿಧಾನಿಯಾಯ್ತು. ಕಾಡು ದಾರಿಯ ಪೆಡಲಿಕೆಯಿಂದ ಕಿತ್ತ ಬೆವರು, ಮೆತ್ತಿದ ದೂಳು, ಆವರಿಸಿದ ಬಳಲಿಕೆಗೆಲ್ಲ ಕನಿಷ್ಠ ಒಂದು ಸ್ನಾನ ಬಯಸಿದ್ದೆವು. - [ಸದಾಶಿವ ನೀಲಕಂಠನಲ್ಲ!](https://athreebook.com/2020/03/25/article-about-sadashiva/): ಆ ಬೆಳಿಗ್ಗೆ (ಸೆಪ್ಟೆಂಬರ್ ೧೧,೨೦೧೯) ಆಕಾಶದಲ್ಲಿ ಮೋಡ ಕಟ್ಟಿದ್ದು ನೋಡಿ ನಾನು ಸೈಕಲ್ ಸರ್ಕೀಟ್ ಕೈ ಬಿಟ್ಟಿದ್ದೆ. ಆದರೆ ಸುಮಾರು ಏಳೂವರೆಯ ಹೊತ್ತಿಗೆ ದೇವಕಿಗೆ ನಳಿನಿಯ ಫೋನ್ ಕರೆ ಬಂತು."ಅಶೋಕ ಭಾವ ಇದ್ದರೆ, ಕೂಡಲೇ ಬೈಕೇರಿ ನಮ್ಮನೆಗೆ ಬರಲಿ. ಸೈಕಲ್ ಬೇಡ". ನಾನು ದಡಬಡ ಬಟ್ಟೆ ಬದಲಿಸಿ, ಬೈಕ್ ತೆಗೆಯುವುದರೊಳಗೆ ದೇವಕಿ "ಏನು ವಿಷಯ" ಎಂದು ಕೇಳಿದ್ದಳು. "ಸದಾಶಿವ ಯೋಗಕ್ಕೆ ಹೋದವರು ಇನ್ನೂ ಬಂದಿಲ್ಲ. ಅದಕ್ಕೆ ಹೋಗುವಾಗ, ಎಂದಿನಂತೆ ಮೊಬೈಲ್ ತೆಗೆದುಕೊಂಡೂ ಹೋಗಿಲ್ಲವಾದ್ದರಿಂದ ವಿಚಾರಿಸುವ ಅವಕಾಶವೂ ಇಲ್ಲ. ನನಗೆ ತುಂಬ ಆತಂಕವಾಗಿದೆ" ಎಂದಷ್ಟೇ ಹೇಳಿದ್ದಳು. ಆತ ಎಲ್ಲೋ ಗೆಳೆಯರೊಡನೆ ಪಟ್ಟಾಂಗದಲ್ಲಿ ಸಮಯದ ಪರಿವೆ ತಪ್ಪಿಸಿಕೊಂಡಿರಬೇಕು ಎಂದುಕೊಳ್ಳುತ್ತಲೇ ನಾನು ಧಾವಿಸಿದೆ. ದಾರಿಯುದ್ದಕ್ಕೂ ನನ್ನ ಬಗೆಗಣ್ಣು, ನನ್ನಷ್ಟೇ ತರಾತುರಿಯಲ್ಲಿ ಮನೆಯತ್ತ ಸ್ಕೂಟರ್ ಓಡಿಸುವ ಸದಾಶಿವನನ್ನೇ ಕಾಣುತ್ತಿತ್ತು. ಆದರೆ ಬಿಜೈ ಹೊಸ ರಸ್ತೆಯಲ್ಲಿನ ‘ರಾಗ’ದಲ್ಲಿ ಸದಾಶಿವನಿರಲಿಲ್ಲ. ನಳಿನಿ ಬಾಗಿಲಿಗೆ ಬೀಗ ಹಾಕಿ, ಹೊರಡಲು ನಿಂತಿದ್ದವಳು, ಉಮ್ಮಳಿಸುತ್ತಿದ್ದ ದುಃಖವನ್ನು ನುಂಗಿಕೊಂಡು, ಸಣ್ಣದಾಗಿ ಪರಿಸ್ಥಿತಿ ಬಿಡಿಸಿಟ್ಟಳು. - [ಬಿದಿರ ಸೇತುವೆ ಸರಣಿ.......](https://athreebook.com/2020/03/22/meghalaya-babmboo-bridge/): ಮೋಡಗಳ ನಾಡಿನ ವಾಹ್ಖೆನ್ ಹಳ್ಳಿಯ ಮಹಾಬಂಡೆ, ಮೌರಿಂಗ್ ಖಾಂಗ್, ಜಗದೇಕ ಬಂಡೆಸುಂದರಿಯನ್ನು ಪ್ರೇಮಿಸಿದ. ಆದರೆ ಎಂದಿನಂತೆ ಬಂಡೆಖಳನೊಬ್ಬ ಸುಂದರಿಯನ್ನು ತನ್ನ ವಶಮಾಡಿಕೊಂಡ. ಪರಮಸಾಹಸಿಯಾದ ಮೌರಿಂಗ್ ಖಾಂಗ್ ವೀರಪಂಥವನ್ನೇ ಆಯ್ದುಕೊಂಡ. ಸಂಭವಿಸಿದ ಭೀಕರ ಸಂಗ್ರಾಮದಲ್ಲಿ ಮೌರಿಂಗ್ಖಾಂಗ್ ಎಡಗೈ ಕಳೆದುಕೊಂಡರೂ ಖಳನ ರುಂಡ ಹಾರಿಸಿ, ವಿಜಯಮಾಲಿಕೆಯೊಂದಿಗೆ ಪ್ರಿಯತಮೆಯನ್ನು ವರಿಸಿದ. ಅಂದಿನಿಂದ ಇಂದಿನವರೆಗೂ ಸದಾ ಅಬ್ಬರದ ಆನಂದಘೋಷವಿಕ್ಕುವ ಉಮ್ರ್ಯೂ ನದಿಯ ತಟದಲ್ಲಿ ನಿಂತು, ಪರ್ವತ ಮಾಂಡಲಿಕರ ಸಭೆಗೊಟ್ಟು, ಬಂಡೆಗಳ ಮಹಾರಾಜನಾಗಿ ಮೌರಿಂಗ್ ಖಾಂಗ್ ಮೆರೆದಿದ್ದಾನೆ. - [ಪ್ರವಾಸೋದ್ದಿಮೆ ಜಾಲದ ಸಣ್ಣಗೂಢದಲ್ಲಿ.....](https://athreebook.com/2020/03/17/continue-meghalaya-story/): ಫೆಬ್ರವರಿ ಎಂಟರ ಬೆಳಗ್ಗಿನಿಂದ ಹನ್ನೆರಡರ ರಾತ್ರಿಯವರೆಗೆ ಎಲ್ಲರು ಯೂಥ್ ಹಾಸ್ಟೆಲ್ಸ್ ಯೋಜಿಸಿದ್ದ ಕಲಾಪಗಳಲ್ಲೇ ಭಾಗಿಯಾಗಿದ್ದೆವು. ಅದರ ಮೇಲೆ ಒಂದು ದಿನವನ್ನು ಅವರು ನಮ್ಮ ಸ್ವತಂತ್ರ ಓಡಾಟಕ್ಕೂ ಹಾಸ್ಟೆಲ್ಲಿನ ಎಲ್ಲ ಸೌಲಭ್ಯಗಳನ್ನು (ಬುತ್ತಿ ಒಯ್ಯುವ ಆಹಾರ ಸಹಿತ) ಉಚಿತವಾಗಿಯೇ ಮುಕ್ತಗೊಳಿಸಿದ್ದರು. ನಾವಾದರೂ (ಆರು ಮಂದಿ) ತಲೆಯೊಳಗೆ ಹತ್ತೆಂಟು ಹೆಸರುಗಳ ಗೋಜಲಷ್ಟೇ ಇಟ್ಟುಕೊಂಡು, ಬೆಂಗಳೂರು ಹಾರಾಟಕ್ಕೆ (೧೬-೨) ಮುನ್ನ ನಾಲ್ಕು ಹಗಲುಗಳನ್ನೇ ಉಳಿಸಿಕೊಂಡಿದ್ದೆವು. ಸಂಘಟಕರ ಸಲಹೆ, ಇತರ ಶಿಬಿರವಾಸಿಗಳ ಒಲವು ನೋಡಿಕೊಂಡು, ಮೊದಲ ದಿನಕ್ಕೆ ಡಾವ್ಕೀಯಲ್ಲಿ ಉನ್ಗೊಟ್ ನದಿ ವಿಹಾರ, ಬಾಂಗ್ಲಾ ಗಡಿ ದರ್ಶನ ಮತ್ತು ಹಿಂದಿರುಗುವ ದಾರಿಯಲ್ಲಿ ‘ಸ್ವಚ್ಛ ಹಳ್ಳಿ’ ಎಂದೇ ಪ್ರಚಾರದಲ್ಲಿರುವ ಮೌಲಿನ್ನೊಂಗ್ ಭೇಟಿಗಳನ್ನು ಮುಖ್ಯ ಅಂಶವಾಗಿ ನಿಶ್ಚೈಸಿದೆವು. - [ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ......](https://athreebook.com/2020/03/15/story-related-falls/): ಲಿಕಾಯ್ ಹಾರಿಕೊಂಡ ಕೊಳ್ಳ ಇನ್ನೂ ಭೋರಿಟ್ಟು ಅಳುತ್ತಿದೆ! ಝರಿಯ ಧಾರಾ ಮೊತ್ತದಲ್ಲಿ, ರೋದನದ ತೀವ್ರತೆಯಲ್ಲಿ ಏರಿಳಿತವಿರಬಹುದು. ಹಾಗೆಂದು ಭರಿಸಿ ಸಮಾಧಾನಿಸುವ ಸುವಿಸ್ತಾರ ಹಸಿರು ಕಣಿವೆಯ ಔದಾರ್ಯ, ಮನ ಮಿಡಿದು ಎಲ್ಲೆಲ್ಲಿಂದಲೂ ಕಾಣ ಬರುವವರ ಸಂದಣಿ ಎಂದೂ ಕಡಿಮೆಯಾದದ್ದಿಲ್ಲ. ಮೂರನೇ ದಿನದ ಚಾರಣದ ಪ್ರಥಮ ಕಲಾಪವಾಗಿ, ಸೊಹ್ರಾದಿಂದ ಎರಡು ಕಂತುಗಳಲ್ಲಿ ವ್ಯಾನೇರಿ ಬಂದಿದ್ದ ನಾವೂ ಪ್ರಪಾತದ ಅಂಚಿನ ಕಟ್ಟೆಗಳಿಗೆ ಜೋತು ಬಿದ್ದು ಲಿಕಾಯ್ ವ್ಯಥೆಗೂ ಪ್ರಾಕೃತಿಕ ಸೌಂದರ್ಯಕ್ಕೂ ಹನಿಗಣ್ಣರಾದೆವು. - [ಅತಿ ಮೋಹಕ ಜಲಪಾತ್ರೆಯ ಉದ್ದಕ್ಕೆ.....](https://athreebook.com/2020/03/13/meghalaya-adventure/): ಮೊದಲ ಸುಮಾರು ಕಾಲು ಗಂಟೆಯಷ್ಟೇ ನಾವು ಜನವಸತಿಯ ಹಿಂಚುಮುಂಚು ನಡೆದಿದ್ದೆವು. ಹಿಂದಿನ ದಿನ ಬಸ್ ಬಂದಿದ್ದ ಕಾಂಕ್-ಡಾಮರ್ ದಾರಿಯಲ್ಲಿ ನೇರ ಊರಿಗೇ ನುಗ್ಗಿ, ಹಿಮ್ಮುರಿ ತಿರುವು ತೆಗೆದೆವು. ಅಲ್ಲಿ ಸಿಕ್ಕ ಮೆಟ್ಟಿಲ ಸಾಲಿಳಿದೆವು. ವಾಸ್ತವದಲ್ಲಿ ಇದು ನಾವು ಶಿಬಿರ ಹೂಡಿದ್ದ ಶಾಲೆಯ ಹಿತ್ತಿಲಿನಾಚೆಗೇ ಇರುವ ಸ್ವಲ್ಪವೇ ತಗ್ಗಿನ ಆದರೆ ವಿಸ್ತಾರ ಕಣಿವೆಯೇ ಆಗಿತ್ತು. ಈ ಸಾದಾಸೀದಾ ಬೋಳು ಗುಡ್ಡ ಇಳಿಯಲು ಹೀಗೆ ಸುತ್ತು ಹೊಡೆಯಬೇಕಿತ್ತೇ? ಅದೂ ಹಿಂದಿನ ದಿನ ಕ್ರೆಂಪುರಿ ಗುಹಾದ್ವಾರದ ಪಾತಾಳಕ್ಕೆ ಕಚ್ಚಾದಾರಿ ಇಳಿದು, ಹತ್ತಿ ಬಂದವರಿಗೆ ಅಸಾಧ್ಯವಾಗುತ್ತಿತ್ತೇ ಎಂದು ಸಣ್ಣ ನಗೆ ಬಾರದಿರಲಿಲ್ಲ. ಆದರೆ ನಡೆಯುತ್ತಿದ್ದಂತೆ ಇಲ್ಲಿನ ದರ್ಶನ ಬೇರೇ ಆಗತೊಡಗಿತ್ತು. - [ಮೇಘಾಲಯದ ಗಿರಿಕೊಳ್ಳಗಳಲ್ಲಿ](https://athreebook.com/2020/03/11/meghalaya-trip/): "ಪ್ರಾಯ ಅರವತ್ತು ಮೀರಿದವರು ಯೂಥ್ ಅಲ್ಲ, ಪ್ರವೇಶ ಇಲ್ಲ" ಎನ್ನುತ್ತದೆ ಯೂಥ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ವೈಎಚ್ಚೇಐ). "ಆದರೆ ಭಾಗಿಗಳ ಸಾಧನೆ, ಚಟುಲತೆ ನೋಡಿ ಯಾರನ್ನೂ ಸ್ವಾಗತಿಸುತ್ತದೆ" ಎಂದು ಗಟ್ಟಿಯಾಗಿ ಹೇಳಿ, ಸುಮಾರು ಆರು ತಿಂಗಳಿಗೂ ಮೊದಲೇ ಮೈಸೂರು ಯೂಥ್ ಹಾಸ್ಟೆಲ್ ಸದಸ್ಯತನ ಕೊಡಿಸಿ, ‘ಮೇಘಾಲಯ ಚಾರಣ ಹಾಗೂ ಗುಹಾನ್ವೇಷಣೆ’ಗೆ ನಮ್ಮಿಬ್ಬರ (ದೇವಕೀ ಸಮೇತ ಬೆಮರ್ನಾಥ!) ಭವಿಷ್ಯ ಬೆಸೆದವಳು ತಮ್ಮನ ಹೆಂಡತಿ - ರುಕ್ಮಿಣಿಮಾಲಾ. ತಮ್ಮ ಅನಂತವರ್ಧನ, - [ಕೊಯಂಬತ್ತೂರು ಟಿಪ್ಪಣಿಗಳು](https://athreebook.com/2019/12/27/coimbatore-stories/): ಕೊಯಮ್ಬತ್ತೂರು ತಮಿಳುನಾಡಿನಲ್ಲಿ ಚೆನ್ನೈಗೆ ಎರಡನೇ ದೊಡ್ಡ ನಗರ ಮತ್ತು ಯಂತ್ರೋಪಕರಣಗಳಿಗೆ ಪ್ರಸಿದ್ಧ ಕೇಂದ್ರ. ಆದರೆ ನನಗಿದು (ತಮ್ಮ ಅನಂತವರ್ಧನ ಮತ್ತು ರುಕ್ಮಿಣಿಮಾಲಾ ದಂಪತಿಗಳ) ಮಗಳು - ಅಕ್ಷರಿ, ಅಳಿಯ - ಮಹೇಶ ಮತ್ತು ಪುಳ್ಳಿ ಆರುಷರ ಹೊಸ ಊರು. ಅವರ ಪ್ರೀತಿಗೆ ನನ್ನ ಹೊಸತೊಂದು ‘ಸಾಹಸ’ ಅಗತ್ಯವನ್ನು ಬೆಸೆದು, ದೇವಕೀಸಮೇತನಾಗಿ ಹೊರಟೇಬಿಟ್ಟೆ. - [ಹೋಗಿ ಬರುವೆ ಶರಾವತಿ](https://athreebook.com/2019/11/28/sharavathi-river/): ಗುಡ್ಡೆಯ ತಲೆಯಿಂದ ಶರಾವತಿ ಸಾಗರದ ದೃಶ್ಯ ಮನೋಹರವಾಗಿಯೇ ಇತ್ತು. ಆದರೆ ಗುಡ್ಡಕ್ಕೆ ಗುಡ್ಡ ಅಡ್ಡ ಎನ್ನುವಂತೆ, ಹಿನ್ನೆಲೆಯಲ್ಲಿ ಇನ್ನೂ ಎತ್ತರಕ್ಕಿದ್ದ ಶಿಖರ ಈಗ ನಮ್ಮನ್ನು ಆಕರ್ಷಿಸಿತು. ಅಡ್ವೆಂಚರರ್ಸ್ ವಠಾರದ ಬೇಲಿ ಕಳೆದು, ಸಣ್ಣ ಕಣಿವೆಗಿಳಿದು, ಕುರುಚಲು ಕಾಡು ಹೊಕ್ಕೆವು. ಒಳಗೆ ಬಹುತೇಕ ವನ್ಯ ಜಾನುವಾರುಗಳೇ (ಕಾಟಿ, ಕಡವೆ...) ರೂಢಿಸಿದ್ದ ಜಾಡನುಸರಿಸಿದೆವು. ಮುಚ್ಚಿ ಬರುತ್ತಿದ್ದ ಪೊದರುಗಳ ನಡುವೆ ಸೊಂಟ ಡೊಂಕಿಸಿ, ಕಲ್ಲುಕೊರಕಲುಗಳೊಡನೆ ಉರುಡಿ, ಬೇರಗಟ್ಟೆಯಿಂದ ಕಟ್ಟೆಗೆ ಏರಿ ತೆರೆಮೈ ಸೇರಿದೆವು. ಮತ್ತೆ ಏರೇರುತ್ತಿದ್ದಂತೆ ತೆರೆದುಕೊಂಡ ದೃಶ್ಯಾವಳಿ ಅತಿಶಯ ಮನೋಹರ! ಬಲ ಮಗ್ಗುಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ನೆತ್ತಿರೇಖೆಯ ಪೂರ್ಣ ದರ್ಶನವಾಯ್ತು. - [ಶರಾವತಿ ಸಾಗರದ ಉದ್ದಕ್ಕೆ](https://athreebook.com/2019/11/24/sharavathi-river-story/): ಜಾಲ ಅಸಂಖ್ಯ. ಇಲ್ಲಿ ಮುಳುಗದುಳಿಯದ ಎತ್ತರಗಳೆಲ್ಲ ದ್ವೀಪಗಳೇ. ಹಾಗಾಗಿ ಕಟ್ಟೆ ಪೂರ್ವದಲ್ಲಿ ಚಾಲ್ತಿಯಿದ್ದ ಎಲ್ಲ ಸಾರ್ವಜನಿಕ ಹಕ್ಕುಗಳನ್ನು ಸರಕಾರ ವಜಾ ಮಾಡಿ, ಶರಾವತಿ ಕಣಿವೆ ವನ್ಯಧಾಮವೆಂದೇ ಹೆಸರಿಸಿತು. (ಅಂದಿನ ಜನ, ವೃತ್ತಿಗಳ ಮರುವಸತಿಯ ಬಹುತೇಕ ದುರಂತದ ಕತೆಗಳು ಇಂದಿಗೂ ಕಾಡುತ್ತವೆ. ಇಲ್ಲಿ ವಿಸ್ತರಿಸುವುದಿಲ್ಲ) ವರ್ಷಂಪ್ರತಿ ಶರಾವತಿ ಸಾಗರ ಬೇಸಗೆಯಲ್ಲಿ ಸೊರಗಿ, ಮಳೆಗಾಲದಲ್ಲಿ ಸೊಕ್ಕಿದಂತೆಲ್ಲ ದ್ವೀಪಗಳ ರೂಪ, ಮುಖ್ಯ ನೆಲದೊಡನೆ ಸಂಪರ್ಕ ಬದಲಾಗುತ್ತಲೇ ಇರುತ್ತದೆ. - [ಇನ್ನೊಂದು ಸಂಸ್ಕೃತಿ ಶಿಬಿರದ ನಿರೀಕ್ಷೆಯಲ್ಲಿ...](https://athreebook.com/2019/11/06/sanskrit-programme/): ಅಂದು ಅಪರಾಹ್ನದ ಎರಡನೇ ಕಲಾಪಕ್ಕೂ ಜನಪ್ರಿಯತೆಯದ್ದೇ ಥಳುಕಿತ್ತು! ‘ಒಂದು ಮೊಟ್ಟೆಯ ಕತೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ಮತ್ತು ‘ರಾಮಾ ರಾಮಾರೇ’ ಖ್ಯಾತಿಯ ಸತ್ಯಪ್ರಕಾಶ್ ತಮ್ಮ ಮೊದಲ ಸಿನಿಮಾಗಳ ಯಶಸ್ಸಿನ ಹಿಂದಿನ ಕತೆಯನ್ನು ಆತ್ಮೀಯವಾಗಿ, ಸರಳವಾಗಿ ಬಿಚ್ಚಿಟ್ಟರು. ರಾಜ್ ಶೆಟ್ಟಿ - ವಿದ್ಯಾರ್ಜನೆಯಲ್ಲಿ ದಡ್ಡ, ದೈಹಿಕ ರೂಪಿನಲ್ಲಿ ಅಚಂದ ಮತ್ತು ವೃತ್ತಿ ಮಾರ್ಗದಲ್ಲಿ ಕಾಲು ಸೋತವರು. ಆದರೂ ಕಿರು ಚಿತ್ರವನ್ನಾದರೂ ಮಾಡಲೇಬೇಕೆಂಬ ಹಠಕ್ಕೆ ಬಿದ್ದು, ಬಹು ಸಣ್ಣ ಮೊತ್ತದಲ್ಲಿ ಹಿರಿಚಿತ್ರವನ್ನೇ ಸಾಧಿಸಿದ್ದನ್ನು ಸರಳ, ಕೇಳುಗ ರಮ್ಯವಾಗಿ ಹೇಳಿದರು. ಸತ್ಯಪ್ರಕಾಶ್ ಮೊದಲಿಗೇ ತನ್ನನ್ನು ‘ಮಹಾ ಸುಳ್ಳುಗಾರ’ ಎಂದೇ ಘೋಷಿಸಿಕೊಂಡು, ರಾಜ್ ಶೆಟ್ಟಿಯವರಿಂದ ಭಿನ್ನ ಆದರೆ ಹೆಚ್ಚು ಕಠಿಣವೇ ಆದ ಪರಿಸ್ಥಿತಿಗಳಲ್ಲಿ ರಾಮಾ ರಾಮಾರೇ ಪೂರೈಸಿದ್ದನ್ನು ಹೇಳಿಕೊಂಡರು. - [ಅದ್ವಿತೀಯ ದಿನಗಳ ಚಿತ್ರಣ](https://athreebook.com/2019/11/05/memorable-days/): ಎರಡನೇ ದಿನದ ಮೊದಲ ಕಲಾಪ - ಹಿಂದಿನ ಸಂಜೆ ನೋಡಿದ ನಾಟಕ - ರಾಕ್ಷಸ-ತಂಗಡಿಯ ವಿಮರ್ಶೆ, ಜಶವಂತ ಜಾಧವರ ನಿರ್ವಹಣೆಯಲ್ಲಿ ನಡೆಯಿತು. ಅವರು ಪ್ರಯೋಗದ ಕುರಿತು ಪೀಠಿಕೆ ಕೊಡಲಿಲ್ಲ, ಹೀಗೊಂದು ಸಣ್ಣ ಸೂಚನೆಯನ್ನಷ್ಟೇ ಕೊಟ್ಟರು. ಔಪಚಾರಿಕ ಅಭಿನಂದನೆ, ಹೊಗಳಿಕೆಗಳಲ್ಲಿ ತೇಲಿಹೋಗದೆ, ನೇರ ನಾಟಕದ ಕುರಿತ ನಿಮ್ಮ ಅಭಿಪ್ರಾಯವನ್ನಷ್ಟೇ ಕೊಡಿ. ಚರ್ಚೆಗೆ ಬಂದಲ್ಲಿ ವಿವರಣೆ ಕೊಡಿ. ಮೊದಲ ಅವಕಾಶಗಳು ಕಿರಿಯರವು, ಮುಂದುವರಿದಂತೆ ಹಿರಿಯರೂ ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ. - [ಸಂಸ್ಕೃತಿ ಶಿಬಿರ ೨೦೧೯ -‘ಕಲಾನುಭವ’](https://athreebook.com/2019/11/02/culture-fest-2019/): ೧೯೭೫ರಲ್ಲಿ ನಾನು ಪುಸ್ತಕದಂಗಡಿ ತೆರೆದಾಗ, ಸಹಜವಾಗಿ ಅಕ್ಷರಪ್ರಕಾಶನದ ನೆಪದಲ್ಲಿ ಹೆಗ್ಗೋಡೆಂಬ ಪಕ್ಕಾ ಹಳ್ಳಿಯ ಸಂಪರ್ಕವಾಯ್ತು. ಆದರೆ ಅದು ಬಲು ಬೇಗನೆ ವ್ಯಾಪಾರಿ ಬಂಧದಿಂದ ಮೇಲೇರಿ ಬಹುಮುಖೀ ಸಾಂಸ್ಕೃತಿಕ ಚಳವಳಿಕಾರ - ಕೆವಿ ಸುಬ್ಬಣ್ಣ, ಮುಂದುವರಿದು ಅವರ ಮಗ ಕೆವಿ ಅಕ್ಷರರ ಬಳಗದ ಗಾಢ ಸಾಂಸ್ಕೃತಿಕ ಸಂಬಂಧವೇ ಆಗಿದೆ. - [ನೀನಾಸಂ ಹೆಗ್ಗೋಡು ವಠಾರಕ್ಕೆ ....](https://athreebook.com/2019/10/29/neenasam-heggodu/): ನೀನಾಸಂನ ಮಹತ್ತರ ನಾಟಕಗಳು ಮತ್ತು ತತ್ಸಂಬಂಧೀ ಕೆಲವು ಕಲಾಪಗಳನ್ನು ಸಂಚಿ ಫೌಂಡೇಶನ್ ವಿಡಿಯೋ ದಾಖಲೀಕರಣಕ್ಕೊಳಪಡಿಸಿ, ಯೂ ಟ್ಯೂಬ್ ಮೂಲಕ ಉಚಿತವಾಗಿ ಲೋಕಾರ್ಪಣಗೊಳಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ದಾಖಲೆಗಳು ಸಾರ್ವಕಾಲಿಕವಾಗುಳಿಯುತ್ತವೆ ಎನ್ನುವ ಎಚ್ಚರದೊಡನೆ ಸಂಚಿ ದುಡಿದರೆ, ಆಯಾ ಕಾಲಘಟ್ಟದ ಅತ್ಯುತ್ತಮ ಪ್ರಯೋಗವನ್ನೇ ಕೊಡಬೇಕೆನ್ನುವ ಕಾಳಜಿ ನೀನಾಸಂನಲ್ಲಿದೆ. ಆ ನಿಟ್ಟಿನಲ್ಲೇ ೧೫-೭-೧೯ರಂದು, ಸದ್ಯದ ಎರಡು ಹೊಸ ರಂಗಪ್ರಯೋಗಗಳ ವಿಶೇಷ ಪ್ರದರ್ಶನವನ್ನು ನೀನಾಸಂ ವ್ಯವಸ್ಥೆ ಮಾಡಿತ್ತು. - [ದಿಡುಪೆ ದುರಂತದ ಪ್ರತ್ಯಕ್ಷದರ್ಶನ](https://athreebook.com/2019/09/04/didupe-tragedy/): ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ - ಮುಕ್ಕಾಲು ಗಂಟೆಯಷ್ಟೇ ಬಂತು - ಮೇಘಸ್ಫೋಟದಂಥ ಮಳೆ. ಚಾರ್ಮಾಡಿಯಿಂದ ದಿಡುಪೆಯವರೆಗಿನ ವಲಯಕ್ಕಷ್ಟೇ ಮಿತಿಗೊಂಡ ಬಾನಬೋಗುಣಿ ಕವುಚಿದಂತಹ ಈ ನೀರು ನಡೆಸಿದ ಉತ್ಪಾತಗಳು ಸಾಮಾನ್ಯ ಲೆಕ್ಕಕ್ಕೆ ಸಿಗುವಂತದ್ದಲ್ಲ. ಅದರ ಸಣ್ಣ ನೋಟವಾದರೂ ನಮಗೊಂದು ಪಾಠವೆಂದುಕೊಂಡೇ ನಾವು ನಾಲ್ವರು ಮೊನ್ನೆ (೨೫-೮-೧೯) ಕಾರೇರಿ ಹೋಗಿದ್ದೆವು. - [ಈಶಾವಾಸ್ಯದ್ದು ಬರಿಯ ತಾಳಮದ್ದಳೆಯಲ್ಲ](https://athreebook.com/2019/08/19/krishnaprakash-ulittaya/): ಕೃಷ್ಣಪ್ರಕಾಶ ಉಳಿತ್ತಾ ಉಳಿತ್ತಾಯರ ಮನೆ - ‘ಈಶಾವಾಸ್ಯ’. ಇದು ಮಂಗಳೂರಿನಿಂದ ಸುಮಾರು ಹನ್ನೆರಡರಿಂದ ಇಪ್ಪತ್ತು ಕಿಮೀ ವರೆಗೆ ಹಲವು ಸಾಧನಾಪಥಗಳಿರುವ ಉಳಾಯಿಬೆಟ್ಟು, ಪೆರ್ಮಂಕಿಯಲ್ಲಿದೆ. ಇದನ್ನು ನಾನು ಐದು ತಿಂಗಳ ಹಿಂದೆ ಸೈಕಲ್ ಸರ್ಕೀಟಿನಲ್ಲಿ ಹುಡುಕಿ ಹಿಡಿದದ್ದು ನಿಮಗೆ ತಿಳಿದೇ ಇದೆ . ಅಂದು ಉಳಿತ್ತಾಯರು ಮಾತಿನಲ್ಲಿ, ಅಲ್ಲೇ ತಾವು ನಡೆಸಿದ್ದೊಂದು ತಾಳಮದ್ದಳೆ ಪ್ರಯೋಗದ ಉಲ್ಲೇಖ ಮಾಡಿದ್ದರು. ಆ ಹೆಮ್ಮೆಯಲ್ಲಿ ‘ನನ್ನದು’ ಎನ್ನುವುದಕ್ಕಿಂತ ಹೆಚ್ಚಿನ ಕಲೋತ್ಕರ್ಷದ ಹೊಳಹಿತ್ತು. ಆಗ ಸಹಜವಾಗಿ ನನಗದು ತಪ್ಪಿತಲ್ಲಾ ಎನ್ನುವ ಕೊರಗು ನನ್ನದಾಗಿತ್ತು. ಅದಕ್ಕೆ ಪರಿಹಾರವೆನ್ನುವಂತೆ ಉಳಿತ್ತಾಯರು, "ಈ ವರ್ಷವೂ ಮಳೆಗಾಲದಲ್ಲಿ ಅಂಥದ್ದೇ ಇನ್ನೊಂದು ಮಾಡುತ್ತೇನೆ. ಆಗ ನೀವು ಸಪತ್ನೀಕರಾಗಿ ಅವಶ್ಯ ಬರಬೇಕು" ಎಂದೂ ಸೇರಿಸಿದ್ದರು. - [ಅವತರಿಸಿದ ಗೌರೀಶಂಕರ!](https://athreebook.com/2019/08/03/gowri-shankara/): ಕಳೆದ ಮಳೆಗಾಲದ ಮೊದಲ ಪಾದದ ಒಂದು ರಾತ್ರಿ (೨೫-೫-೧೮), ಹನ್ನೊಂದೂವರೆಯ ಸುಮಾರಿಗೆ ಗಾಳಿ ಮಳೆಯ ಅಬ್ಬರಸಂಗೀತ ನಮ್ಮ ನಿದ್ರೆಗೆಡಿಸಿತು. ನೇರ ಹಿತ್ತಿಲಿನಲ್ಲಿ ಬರಲಿದ್ದ ವಸತಿಸಮೂಹದ ಜಿಂಕ್ ಶೀಟ್ ಗೋಡೆ ರೋಮಾಂಚನದಲ್ಲಿ ಗಲಗಲಿಸಿತು, ರೆಂಬೆಕೊಂಬೆಗಳು ಅದರ ಬೆನ್ನ ಚಪ್ಪರಿಸಿ ಕಣಕಣಿಸಿದವು. ನಿಗೂಢತೆ ಹೆಚ್ಚಿಸುವಂತೆ ಕರೆಂಟು ಹೋಯ್ತು; ಮಿಂಚಿನ ಛಮಕ್ಕಿಗೆ ಬಡಬಲ್ಬು ಸಾಟಿಯೇ! ಗುಡುಗಿನ ತಾಳಕ್ಕೆ ಮಳೆ ಕುಣಿಯತೊಡಗಿತು. ತಾರಸಿ ಕಕ್ಕಟ್ಟಿಗೆ ಒತ್ತಿನಿಂತ ತೆಂಗಿನ ಮರ ಭಾರೀ ರಸಿಕನಂತೆ ತಲೆ ಒಲೆಯುತ್ತ, ಧಗ್ ದಗ್ಗೆಂದು ಗೋಡೆ ಗುದ್ದಿತು. ಬಟ್ಟೆ ಒಗೆಯುವ ಕಲ್ಲಿನ ಮೇಲಿದ್ದ ಹಿಂಡಲಿಯಂ ಕೈಪಾತ್ರೆ, ಕಿವಿಗೆ ಗಾಳಿ ಹೊಕ್ಕವರಂತೆ ಕೆಳ ಹಾರಿ ರಿಂಗಣಿಸಿತು. ನಡುಕೋಣೆಯ ಒಡಕುಗನ್ನಡಿಯ ಕಿಟಕಿಪಡಿ ಬಡಿದುಕೊಂಡಾಗ ನಾನು ಅಸಹನೆಯಲ್ಲೇ ಕ್ರಿಯಾಶೀಲನಾಗಬೇಕಾಯ್ತು. - [ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ](https://athreebook.com/2019/06/25/cycle-ride-at-bisile-ghat/): ‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್ ರಾಮರಾಜ ಮೊನ್ನೆ ಆದಿತ್ಯವಾರ ಸೈಕಲ್ಲಿನಲ್ಲಿ ಕೇವಲ ಬಿಸಿಲೆ ಘಾಟಿ ಏರುವ ಯೋಜನೆ ಸಂಘಟಿಸಿದ್ದರು. ಹಾಗೆ ಬೆಳೀಗ್ಗೆ ಮಂಗಳೂರಿನಿಂದ ನಾಲ್ಕು, ಉಡುಪಿಯಿಂದ ಒಂದು ಕಾರನ್ನೇರಿ ಹನ್ನೊಂದು ಸೈಕಲ್ ಮತ್ತು ಸವಾರರು ಸುಬ್ರಹ್ಮಣ್ಯದತ್ತ ಹೊರಡುವವರಿದ್ದರು. ನಿಮಗೆಲ್ಲ ತಿಳಿದಂತೆ ‘ಅಶೋಕವನ’ದ ರಚನೆಯೊಡನೆ, ಬಿಸಿಲೆಯ ಕುರಿತ ನನ್ನ ಮೋಹಕ್ಕೆ ಹೆಚ್ಚಿನ ಮೆರುಗು ಇದೆ. - [ಗೌರೀಶಂಕರ - ಸೋದರಳಿಯನೊಬ್ಬನ ನೆನಪುಗಳು](https://athreebook.com/2019/06/13/gowrishankara-memories/): ಹಿಂದೆ ನಾನು ಹಲವು ಆತ್ಮೀಯರ ಅಗಲಿಕೆಯ ಸಂದರ್ಭಗಳಲ್ಲೆಲ್ಲ ಕಿರು ನುಡಿನಮನಗಳನ್ನು ಪ್ರಕಟಿಸಿದ್ದಿತ್ತು. ತೋರ ನೋಟಕ್ಕೆ ಇದೂ ಅಂಥದ್ದೇ ಒಂದು ಸನ್ನಿವೇಶ. ಆದರೆ ನನ್ನ ಮತ್ತು ಸ. ದೇವಕಿಯ ಸ್ಥಿತಿ ಬೇರೆಯೇ ಇತ್ತು. ನಮ್ಮ ನೆನಪುಗಳ ಭಿತ್ತಿಯಲ್ಲಿ ಹುಟ್ಟು, ವಿವಿಧ ಸಂಸ್ಕಾರ ಮತ್ತು ಎಂದಿಗೂ ಕಡಿಯದ ಪ್ರೀತಿಪೂರ್ಣ ಜವಾಬ್ದಾರಿಯ ಮೂರ್ತರೂಪರಾಗಿ ಅಪ್ಪ ಅಮ್ಮಂದಿರು ನಿಸ್ಸಂದೇಹವಾಗಿ ಪ್ರಥಮರು. ಆದರೆ ಹಾಗೇ ಆತ್ಮೀಯ ಒಡನಾಟಕ್ಕೆ ಒದಗಿದ ಇತರರ ಲೆಕ್ಕ ತೆಗೆದರೆ, ಅದರಲ್ಲೂ ನಮ್ಮ ಬುದ್ಧಿಪೂರ್ವಕ ಸ್ವತಂತ್ರ ಜೀವನದ ದಿನಗಳನ್ನು ಎಣಿಸಿದರೆ, ತಮ್ಮಂದಿರೂ ಸೇರಿದಂತೆ ಎಲ್ಲ ಸಂಬಂಧಿಕರನ್ನೂ ಮೀರಿ ಅಗ್ರ ಸ್ಥಾನದಲ್ಲಿ ನಿಲ್ಲುವವರು ಶಂಕರ ಮತ್ತು (ಅತ್ತೆ ಅಥವಾ ನಮ್ಮೊಳಗೇ ಗುರುತಿಸಿಕೊಳ್ಳುವಂತೆ ದೊಡ್ಡ) ದೇವಕಿಯರು ಮಾತ್ರ. - [ಕೊನೆಯ ಕೊಂಡಿ ಕಳಚಿತು](https://athreebook.com/2019/05/20/ap-ramanatha-rao-story/): ಎ.ಪಿ. ರಮಾನಾಥ ರಾವ್ - ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ (೧೬-೫-೧೯) ತನ್ನ ೮೨ರ ಹರಯದಲ್ಲಿ, ತೀರಿಹೋದರು. ಬಳಕೆಯ ಸರಳತೆಯಲ್ಲಿ - ‘ರಾಮನಾಥ’, ವಿದ್ಯಾ ದಿನಗಳಲ್ಲಿ ಬಯಸಿ, ಮದ್ರಾಸಿನ (ಇಂದಿನ ಚೆನ್ನೈ) ಪಶುವೈದ್ಯಕೀಯ ಕಾಲೇಜು ಸೇರಿದ್ದ. ಆದರೆ ಪ್ರಯೋಗಕ್ಕಾಗಿ ನಡೆಯುತ್ತಿದ್ದ ಪ್ರಾಣಿ ಹಿಂಸೆ ನೋಡಲಾಗದ ಸಹಜ ಸಾಧು ಸ್ವಭಾವದಲ್ಲಿ ಮುದುರಿ, ಮನೆ ಸೇರಿಕೊಂಡ. ಪಾಲಿನಲ್ಲಿ ಬಂದ ಪಿತ್ರಾರ್ಜಿತ ನೆಲದಲ್ಲೇ (ಮರಿಕೆ ಬಯಲಿನಲ್ಲಿ ‘ಭೂತಗುರಿ’ ಪಾಲು) ನೆಲೆಸಿ, ಸರಳ ಕೃಷಿಕ, ಸಭ್ಯ ಸಾಮಾಜಿಕನಾಗಿಯೇ ಉಳಿದ. ರಾಮನಾಥ ನನಗಿಂತ ಸುಮಾರು ಹದಿನಾಲ್ಕು ವರ್ಷಕ್ಕೆ ಹಿರಿಯ ಹಾಗೂ ಪೂರ್ಣ ಗೌರವ ಪಾತ್ರನಾದರೂ ರೂಢಿಯಂತೆ ಏಕವಚನದ ಸಂಬೋಧನೆಯಲ್ಲೇ ಮುಂದುವರಿಸುತ್ತೇನೆ, ತಪ್ಪು ತಿಳಿಯಬೇಡಿ. - [ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ....](https://athreebook.com/2019/05/15/shiriya-river-story/): ಅದೊಂದು ಶುಕ್ರವಾರ "ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್" ಎಂದು ಸೈಕಲ್ ಗೆಳೆಯ ಅನಿಲ್ ಶೇಟ್ ಕೇಳಿದ್ದರು. ನಾನು ಎಂದೋ ಯೋಚಿಸಿಟ್ಟಂತೆ "ಶೆರಿ, ಶಿರಿಯಾಕ್ಕೆ ಶಲೋ..." ಎಂದುಬಿಟ್ಟೆ. ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ, ಉಚ್ಚಿಲಾದಿ ನದಿಗಳನ್ನು ಕಂತುಗಳಲ್ಲಿ ತೇಲಿ ಮುಗಿಸಿದ ಹೊಸತರಲ್ಲಿ, ನಾನು ಅಂತರ್ಜಾಲದಲ್ಲಿ (ಗೂಗಲಿಸಿ) ಹುಡುಕಾಡಿದಾಗ, ಕುತೂಹಲ ಮೂಡಿಸಿತ್ತು ಈ ಶಿರಿಯಾ ಹೊಳೆ. ಮಂಗಳೂರು - ಕಾಸರಗೋಡು ದಾರಿಯನ್ನು ಬಂದ್ಯೋಡಿನಿಂದ ತುಸು ಮುಂದೆ, ಪೂರ್ವ- ಉತ್ತರದಿಂದ ಇಳಿದು, ಅಡ್ಡ ಹಾಯುವ ತೋರ ನೀಲಿ ರೇಖೆಯಿದು. ಮತ್ತೆ ಒತ್ತಿನಲ್ಲೇ ಹರಿಯುವ ರೈಲ್ವೇ ದಾರಿಯನ್ನು ದಾಟಿ, ಸ್ಪಷ್ಟ ದಕ್ಷಿಣ ತಿರುವು ತೆಗೆಯುತ್ತದೆ. ಅಲ್ಲಿ ಎಡ ಮಗ್ಗುಲಿನಲ್ಲೊಂದು ಸಣ್ಣ ಭೂಭಾಗ ಕತ್ತರಿಸಿಟ್ಟು (ಶಿರಿಯಾ ಪಾರ್ಕ್ ಎಂಬ ಕುದುರು, ಅರ್ಥಾತ್ ನದಿ ದ್ವೀಪ), ಬಲ ಹೊರಳಿ ಸಮುದ್ರ ಸೇರುತ್ತದೆ. ಆದರೆ ಅದೇನು ಭೂ ರಚನಾ ಚೋದ್ಯವೋ - ನೀಲ ಹರಹು ಮಾತ್ರ ಅತ್ತ ಸಮುದ್ರಕ್ಕೊಂದು ಕಂದು ಮರಳರೇಖೆ ಇಟ್ಟು ಸಮಾಂತರದಲ್ಲಿ, ಸುಮಾರು ಐದು ಕಿಮೀ ಉದ್ದಕ್ಕೆ, ಅಂದರೆ ಕುಂಬ್ಳೆಯವರೆಗೂ ವ್ಯಾಪಿಸಿರುವುದು ಕಾಣುತ್ತಿತ್ತು. ## Pages - [About Me](https://athreebook.com/about-me/) - [blog](https://athreebook.com/blog/) - [AthreeHome](https://athreebook.com/) - [Athree Books](https://athreebook.com/athree-books/) - [Divi Login Designer](https://athreebook.com/divi-login-designer/): This page is used for Divi Login Designer extension. It will not be visible to your readers. Do not delete it. - [Sample Page](https://athreebook.com/sample-page/) [comment]: # (Generated by Hostinger Tools Plugin)