ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ

ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ

"ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ ಮನೆಯಲ್ಲಿ ಸೇರುತ್ತಿದ್ದೆವು. ಅಲ್ಲಿ ಆಡದ ಮಾತಿಲ್ಲ, ಮಾಡದ ಚಟುವಟಿಕೆಗಳಿಲ್ಲ…." ಎಂದೇ ತೊಡಗಿತ್ತು ಎನ್.ಜಿ ಮೋಹನರ ಪ್ರಾಸ್ತಾವಿಕ ಮಾತುಗಳು. ಸಂದರ್ಭ - ಮೋಹನ್ನರ ತಾಯಿ - ವಸಂತಿ ಟೀಚರ್ ಅವರ ಜನ್ಮ ಶತಾಬ್ದಿ, ಅವರ ಪುಸ್ತಕ - ಬೀದಿ ದೀಪದ ಬೆಳಕು, ಇದರ ಲೋಕಾರ್ಪಣ ಮತ್ತು ‘ದ ಅನಿರುದ್ಧ್ ಚಾರಿಟೆಬಲ್ ಟ್ರಸ್ಟ್’ ಉದ್ಘಾಟನೆ. ಎನ್.ಜಿ ಮೋಹನ್ ಮಂಗಳೂರಿನಲ್ಲಿ ಕೆಲವು ಔಷಧ ಕಂಪೆನಿಗಳ ಯಶಸ್ವೀ ಸಗಟು ವಿತರಕರು. ಈ ತ್ರಿವಳಿ ಸಂತೋಷಕೂಟವನ್ನು ಮೋಹನ್ ಅವರ ಕಂಪೆನಿ - ‘ಬೆಟಾ ಏಜನ್ಸೀಸ್ ಅಂಡ್ ಪ್ರಾಜೆಕ್ಟ್ಸ್ ಪ್ರೈ.ಲಿ’, ಅವರ ಪ್ರಿಯ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್ ಕಾಲೇಜ್ ಸಹಯೋಗ ಮತ್ತು ಸಭಾಂಗಣದಲ್ಲಿ (೧೫-೫-೨೦೨೨, ಆದಿತ್ಯವಾರ ಸಂಜೆ) ವ್ಯವಸ್ಥೆ ಮಾಡಿತ್ತು. ಬಹುತೇಕ ಉದ್ಯಮ/ಉದ್ಯಮಿಗಳ ‘ಸಾಮಾಜಿಕ ಸೇವೆ’, ಕಾನೂನಿನ ನಿರ್ಬಂಧಕ್ಕೆ ತೊಡಿಸಿದ ಔದಾರ್ಯದ ಮುಖವಾಡವಾಗಿರುತ್ತದೆ. ಅದರಲ್ಲೂ ಪ್ರಚಾರ ಲಾಭವನ್ನು ತಮ್ಮ ಉದ್ದಿಮೆಯ ಹಿತಾಸಕ್ತಿಗೆ ಗಿರವಿ ಇಡುವವರೇ ಹೆಚ್ಚು. ಆದರೆ ಮೋಹನ್ ಆರ್ಯಸಮಾಜ, ರೆಡ್ ಕ್ರಾಸ್, ಸ್ಕೌಟ್ ಮುಂತಾದ ಸಂಘಟನೆಗಳ ಮುಂಚೂಣಿಯಲ್ಲಿ, ಸ್ವಂತ ತಾಕತ್ತಿನಲ್ಲಿ ನಡೆಸಿದ ಸಮಾಜಸೇವೆಗೆ ಪ್ರಚಾರದ ಹೆದ್ದೀಪವನ್ನು ಎಂದೂ ಎಳಕೊಂಡವರಲ್ಲ. ಹಾಗಾಗಿ ಅವರ ಸೇವಾ ಸಹಯೋಗದ ಸವಿಯುಂಡ ಫಾ| ಡಯನೀಶಿಯಸ್ ವಾಸ್, ಬೆಂಗಳೂರಿನಿಂದ ಬಂದು, ತ್ರಿವಳಿ ಕಲಾಪಗಳ ಔಪಚಾರಿಕ ಉದ್ಘಾಟನೆಯನ್ನು ನಡೆಸಿಕೊಟ್ಟರು. ಫಾ| ವಾಸ್ ಅವರು ಹಿಂದೆ ಅಲೋಶಿಯಸ್ ಕಾಲೇಜಿನ ರೆಕ್ಟರ್ ಆಗಿದ್ದರು. (ಪ್ರಾಂಶುಪಾಲರಿಂದಲೂ ಮೇಲೆ, ಆಡಳಿತ ನಿರ್ದೇಶಕರು ಎನ್ನಬಹುದೇನೋ) ಸದ್ಯ ಬೆಂಗಳೂರಿನಲ್ಲಿ ‘ಕರ್ನಾಟಕ ಜೆಸುಯಿಟ್ ಪ್ರಾಂತ್ಯ’ದ ಮುಖ್ಯಸ್ಥರಾಗಿ (ಪ್ರೊವಿನ್ಶಿಯಲ್) ಕಾರ್ಯ ನಿರ್ವಹಿಸುತ್ತಿದ್ದಾರೆ. ಫಾ| ವಾಸ್ ಮೋಹನ್ ಕೊಟ್ಟ ಸಹಯೋಗವನ್ನು ನೆನೆಸಿಕೊಂಡು, ಅವರ ಸದ್ಯದ ಎಲ್ಲ ಯೋಜನೆಗಳಿಗೂ ಹಾರ್ದಿಕ ಯಶ ಕೋರಿದರು. ಪ್ರಸ್ತಾವನೆಯಲ್ಲಿ ಬಂದ ಬಾಲ ಕೂಟದ ಸದಸ್ಯರು, ಸಂದ ಆರೇಳು ದಶಕಗಳಲ್ಲಿ ವಿದ್ಯೆ, ವೃತ್ತಿ, ಊರು, ಕುಟುಂಬ ಎಂದಿತ್ಯಾದಿ ಅನಿವಾರ್ಯತೆಗಳಲ್ಲಿ ಅಕ್ಷರಶಃ ವಿಶ್ವಾದ್ಯಂತ ಚದುರಿಹೋಗಿದ್ದಾರೆ. ಆದರೆ ಆಗಿಂದಾಗ್ಗೆ ಸಣ್ಣ ಬಿಡುವು ಮಾಡಿಕೊಂಡಾದರೂ ಪರಸ್ಪರ ಭೇಟಿಯಾಗಿ, ಪ್ರೀತಿ ವಿಶ್ವಾಸಗಳ ನವೀಕರಣ ನಡೆಸುತ್ತಲೂ ಬಂದಿದ್ದಾರೆ. ಆ ಎಳವೆಯಲ್ಲಿ, ಬೆಸೆಂಟ್ ಶಾಲೆಯ ವ್ಯಾಯಾಮ ಟೀಚರರ ಮಗ ಮೋಹನ್, ಉದ್ಧಾಮ ಸಾಹಿತಿ ಶಿವರಾಮ ಕಾರಂತರ ಮಗ ಉಲ್ಲಾಸ್, ಜನಪ್ರಿಯ ವೈದ್ಯದಂಪತಿ ಸತ್ಯಶಂಕರ್ ಹಾಗೂ ವಸಂತರ ಮಗ ರಘು…. ಮುಂತಾದವರೆಲ್ಲರೂ (ಕ್ಷಮಿಸಿ ಪೂರ್ಣ ಪಟ್ಟಿ ನನ್ನಲ್ಲಿಲ್ಲ) ಸ್ನೇಹಬಂಧದಲ್ಲಿ ಸಮಾನರೇ ಆಗಿದ್ದರು. ಮುಂದುವರಿದಂತೆ ಅವರೆಲ್ಲರೂ ಯೋಗ ಮತ್ತು ಯೋಗ್ಯತೆಗಳಲ್ಲಿ (ಮೋಹನ್ ದೊಡ್ಡ ಉದ್ಯಮಿ, ಉಲ್ಲಾಸ್ ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ….) ಏನೆಲ್ಲಾ ವಿಕಸಿಸಿದರೂ ಮೂಲ ಸ್ನೇಹದ ಬಂಧ ಏಕಪ್ರಕಾರವಾಗಿತ್ತು. ಅದನ್ನು ಮೋಹನ್, ತನ್ನಡಿಗೆ ಬಂದ ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಬೆಳಗುವ ಬೀದಿ ದೀಪದ ಬೆಳಕಿಗೆ ಹೋಲಿಸುತ್ತಾರೆ. ಹಾಗೆ ಕಂಡ ತನ್ನ ನೂರೊಂದು ನೆನಪುಗಳನ್ನು ಇಂದು ಮೋಹನ್ ಅಚ್ಚಗನ್ನಡದ ಕಥನಕ್ಕಿಳಿಸಿದ್ದಾರೆ. ಸಹಜವಾಗಿ ಪುಸ್ತಕದ ಹೆಸರೂ ‘ಬೀದಿ ದೀಪದ ಬೆಳಕು’. ಹನ್ನೊಂದೂ ಮಂದಿಯ ಸಾಮಾಜಿಕ ಸ್ಥಿತಿಗತಿ ಏನೇ ಆದರೂ ಶಿಥಿಲವಾಗದ ತಮ್ಮ ಈ ಬಾಂಧವ್ಯಕ್ಕೆ ಮೋಹನ್ ಕಾಣುವ ಒಂದೇ ಕಾರಣ - ನಿಷ್ಕಾಮ ಸ್ನೇಹ! "ನಾವು ಎಂದೂ ಗೆಳೆತನವನ್ನು ವೈಯಕ್ತಿಕ ಜೀವನೋಪಾಯದ ಭಾಗವಾಗಿ ಕಾಣಲೇ ಇಲ್ಲ." ಅದನ್ನು ವಿಸ್ತರಿಸುತ್ತ ಮೋಹನ್ ಕೊಟ್ಟ ಒಂದು ಹೃದಯಸ್ಪರ್ಷೀ ಉದಾಹರಣೆಯನ್ನಷ್ಟೇ ನಾನಿಲ್ಲಿ ಉಲ್ಲೇಖಿಸುತ್ತೇನೆ. ಬಳಗದ ಓರ್ವ ಗೆಳೆಯ ಹೇಮ - ಎರಡು ಹೆಮ್ಮಕ್ಕಳ ತಂದೆ. ಅವರಿಗೆ ಹಿಂದೊಮ್ಮೆ ಹೃದಯ ಚಿಕಿತ್ಸೆಯಾಗಿತ್ತು. ಸುಮಾರು ಹದಿನೈದು ವರ್ಷ ಕಳೆದು ಎರಡನೆಯದರ ಅನಿವಾರ್ಯತೆ ಬಂದಿತ್ತು. ಚಿಕಿತ್ಸೆಯ ಅಂದಾಜು ವೆಚ್ಚ ಐದು ಲಕ್ಷ ರೂಪಾಯಿ. ಅನಾವಶ್ಯಕವಾಗಿ ಹೇಮ, ಪ್ರಾಯಕ್ಕೆ ಬಂದ ತಮ್ಮ ಮಗಳಂದಿರ ಮದುವೆಯ ವೆಚ್ಚವನ್ನು ಎಣಿಸಿ, ತನ್ನ ಚಿಕಿತ್ಸೆಯನ್ನು ಗುಟ್ಟಾಗಿಯೇ ಮುಂದೂಡಿಬಿಟ್ಟರು. ಮಕ್ಕಳ ಮದುವೆ ಪೂರೈಸಿ, ಮಿತ್ರ ಬಳಗವೇನು ಸ್ವಂತ ಕುಟುಂಬಕ್ಕೂ ಅನಿರೀಕ್ಷಿತವಾಗಿ ಕಾಲವಶರಾದರು. "ಆನಂತರದ ದಿನಗಳಲ್ಲಷ್ಟೇ ಹೇಮ ಮಾಡಿದ ಗುಟ್ಟು ನಮಗೆ ತಿಳಿಯಿತು. ನಮ್ಮಲ್ಲಿ ಯಾರೊಬ್ಬರಿಗೂ ಆತ ತಿಳಿಸಲೇ ಇಲ್ಲ...

read more

Category

Latest Comments

  1. ಅಲ್ಲೇ ನಿಂತು ವಿಚಾರಿಸಿದ್ದರೆ ಪ್ರಾಯಶಃ ನಮ್ಮ ತಪ್ಪಿಲ್ಲದಿದ್ದರೂ ೧) ಮಾತು ಬೆಳೆಯುತ್ತಿತ್ತು ೩) ಅಮೂಲ್ಯ ಕಾಲ ಹರಣವಾಗುತ್ತಿತ್ತು ೩) ಅವ್ನಿಗಾದ ನಷ್ಟ, ತುಂಬಿಕೊಡಲು ಆಗ್ರಹಿಸುತ್ತಿದ್ದರು ೪) ವಿಕೋಪಕ್ಕೆ…

  2. ಶಿಲಪ್ಪದಿಕಾರಂ ( ತಮಿಳು ಮಹಾಕಾವ್ಯ) ದಲ್ಲಿ ಕಾವೇರಿಯನ್ನು ಪೊನ್ನಿ ಎಂದು ಕರೆಯಲಾಗಿದೆ. ಕೊಡಗಿನಲ್ಲಿ ಪೊನ್ನಪ್ಪ/ ಪೊನ್ನಮ್ಮ ಹೆಸರುಗಳು ಬಹಳ ಜನಪ್ರಿಯವೇ ಹೌದು. ಅಂದರೆ, ಕೊಡಗಿನಲ್ಲಿಯೂ ಕಾವೇರಿಯ ಹಳೆಯ…

  3. ವಾಹ್ ಎಂಥ ರೋಚಕ ಅನುಭವ. ಪ್ರಾದೇಶಿಕ ಪದಗಳಿಂದ ಭರಪೂರ ತುಂಬಿದ ನಿರೂಪಣೆ ಬಹಳ ಚೆಂದ. ನನಗೆ ಮತ್ತೆ ಬಿಸ್ಲೆಯನ್ನು ನೋಡಬೇಕೆನಿಸಿದೆ. ನಾನು ಹತ್ತನೇ ಕ್ಲಾಸಿನಲ್ಲಿದ್ದಾಗ ಒಮ್ಮೆ ಮಾತ್ರ…

  4. ಸ್ವಲ್ಪ ಚರಿತ್ರೆ, ಸ್ವಲ್ಪ ರಾಜಕೀಯ, ಸ್ವಲ್ಪ ಬ್ರಾಹ್ಮಣ ಸಂಬಂಧಗಳು... ಚೆನ್ನಾಗಿದೆ. ಲೇಖನದಲ್ಲಿ ಬಂದಿರುವ ಕೆಲವರ ಪರಿಚಯ ನನಗೂ ಇದೆ. ಎಂ ಎಸ್ ಸುಬ್ಬರಾವ್ ಅವರು ಡಿ ಎನ್…