by athreebook | Jun 23, 2020 | ಆತ್ಮಕಥಾನಕ, ಇತರ ಸಾಹಸಗಳು, ಮಹಾರಾಜಾ ಕಾಲೇಜು, ವೈಚಾರಿಕ
(ಜಾತಿ ಮತಗಳ ಚಕ್ರಸುಳಿ ಮೀರಿ – ೩) ೧. ಕೈಮರದ ಅಡಿಯಲ್ಲಿ ‘ಕನ್ನಾಡಿಗ’ನ ಗೊಂದಲ ಪದವಿಪೂರ್ವದ ಪರೀಕ್ಷೆಯಲ್ಲಿ ನಾನು ರಸಾಯನ ವಿಜ್ಞಾನ ಅಜೀರ್ಣ ಮಾಡಿಕೊಂಡು, ನ್ಯಾಶನಲ್ ಟ್ಯುಟೋರಿಯಲ್ಸ್ನಲ್ಲಿ ಶುಶ್ರೂಷೆ ಪಡೆದು ಸೆಪ್ಟೆಂಬರ್ ಪರೀಕ್ಷೆ ಎದುರಿಸಿದೆ. ಚೇತರಿಕೆಯ ಧೈರ್ಯ ಇದ್ದದ್ದಕ್ಕೆ, ಮುಂದಿನ ಶಿಕ್ಷಣ ವರ್ಷದವರೆಗೆ...