ಬತ್ತಿಯ ಬೆಂಬತ್ತಿ!

ಬತ್ತಿಯ ಬೆಂಬತ್ತಿ!

ತಲೆಗೆರಡು ತಟ್ಟಿ ಗುಂಡಿ ಅದುಮಿದಾಗ, ನನ್ನ ಹತ್ತು ವರ್ಷ ಹಳೆಯ ಮರುಪೂರಣ ತಾಕತ್ತಿನ ಟಾರ್ಚ್ ಮಿಣಕು ಬೆಳಕೇನೋ ಕೊಟ್ಟಿತು. ಅದರ ಅವನತ ಪ್ರಕಾಶ ಶೂನ್ಯ ಮುಟ್ಟುವ ಮೊದಲು ನಮ್ಮ ಕಾಡ್ಮನೆಯ ಅಡುಗೆಮನೆ ಮೂಲೆಯಲ್ಲಿ ಮಂಕಳಂತೆ ಕೂತ ಬುಡ್ಡೀದೀಪ ಗುರುತಿಸಿಕೊಂಡೆ. (ಪದಮೂಲ ಹುಡುಕುವವರು ಇದು ಬೆಡ್ ಲ್ಯಾಂಪಿನ ತದ್ಭವ ಎನ್ನಬಹುದೋ ಏನೋ. ಆದರೆ...