by athreebook | Nov 28, 2013 | ಮಹಾರಾಜಾ ಕಾಲೇಜು, ಮೈಸೂರು, ವ್ಯಕ್ತಿಚಿತ್ರಗಳು
[೧೯೭೫ ಡಿವಿಕೆ ಮೂರ್ತಿಯವರ ಪೂರ್ಣ ಅಭಯ ಮತ್ತು ತಂದೆ – ಜಿಟಿನಾ ಪುಸ್ತಕ ಲೋಕದೊಡನೆ ಗಳಿಸಿದ್ದ ಸದ್ಭಾವಗಳನ್ನಷ್ಟೇ ಬಂಡವಾಳವಾಗಿಟ್ಟುಕೊಂಡು (ಗಮನಿಸಿ – ಹಣವಲ್ಲ!) ನಾನು ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ತೆರೆದಿದ್ದೆ. ನನ್ನ ತಂದೆಗೆ ಗಣಿತವೇ ಮೊದಲಾಗಿ ವಿಜ್ಞಾನ ವಿಷಯಗಳು ಕಲಿಕೆ ಮತ್ತು ವೃತ್ತಿ ಅಗತ್ಯಕ್ಕೆ...
by athreebook | Nov 25, 2013 | ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೆರಡು ಅಧ್ಯಾಯ ಅರವತ್ತ ಎಂಟು [ಮೂಲದಲ್ಲಿ ೪೦] ೧೯೬೮ರ ನವೆಂಬರ್, ಬೆಂಗಳೂರು ವಿಶ್ವವಿದ್ಯಾಲಯದ ಹುದ್ದೆಗೆ ಔಪಚಾರಿಕ ಸಂದರ್ಶನ (ಹಾಗೆಂದು ಅಲ್ಲಿಯ ವರಿಷ್ಠರು ನನಗೆ ಆಶ್ವಾಸಿಸಿದ್ದರು) ನಡೆಯಿತು. ಖುದ್ದು ಗಣಿತವಿಭಾಗದ ಮುಖ್ಯಸ್ಥರೇ ನನ್ನ ಅರ್ಹತೆ, ಸಾಮರ್ಥ್ಯ...
by athreebook | Nov 21, 2013 | ಪರಿಸರ ಸಂರಕ್ಷಣೆ, ಮಂಗಳೂರು, ಮೈಸೂರು, ವೈಚಾರಿಕ
ಪೀಠಿಕೆ: ಮೊನ್ನೆ ಬೆಂಗಳೂರಿನಲ್ಲಿ ‘ಸಕ್ಕರೆ ತಿಂದು, ನೀರು ಕುಡಿದ’ ಮೇಲೆ ನಾನು ದೇವಕಿ ಬೈಕೇರಿ ಮೈಸೂರಿಗೆ ಬಂದೆವು. ನನ್ನ ಮೂಲಮನೆ ‘ಅತ್ರಿ’ಯಲ್ಲಿ ತಾಯಿಯನ್ನು ಕಂಡು, ಎರಡು ದಿನ ವಿರಾಮದಲ್ಲಿದ್ದು ಮಂಗಳೂರಿಸುವ ಯೋಜನೆ ನಮ್ಮದು. ನೆಲವಿರುವುದೇ ನಗರ ವಿಸ್ತರಣೆಗೆಂಬಂತೆ ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣಾದಿ...
by athreebook | Nov 18, 2013 | ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೊಂದು ಅಧ್ಯಾಯ ಅರವತ್ತ ಐದು [ಮೂಲದಲ್ಲಿ ೩೭] ೧೯೬೮ರ ಫ಼ೆಬ್ರುವರಿ ತಿಂಗಳು. ವಿಶ್ವವಿದ್ಯಾಲಯದ ಕುಲಸಚಿವ ಪಿ. ಮಲ್ಲಿಕಾರ್ಜುನಪ್ಪನವರಿಂದ ನನಗೊಂದು ತುರ್ತು ಕರೆ. ಹೋಗಿ ಅವರೆದುರು ಕುಳಿತೆ. ನಾನು ಮಡಿಕೇರಿಯಲ್ಲಿದ್ದಾಗ ಇವರು ಮೈಸೂರು ವಿಶ್ವವಿದ್ಯಾನಿಲಯದ...
by athreebook | Nov 14, 2013 | ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ಕೊಡಗಿನ ಸುಮಗಳು ಸಂಕಲನದ ಮೂರನೇ ಸಣ್ಣ ಕತೆ -೧೯೪೫) ಜಿ.ಟಿ ನಾರಾಯಣ ರಾವ್ ಪ್ರಕಾಶಕನ ಮಾತು [ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೫ರಲ್ಲಿ ಬರೆದ ಕತೆಯಿದು. ಈ ಹಿಂದೆ ಹೇಳಿದಂತೆ ೧೯೯೩ರಲ್ಲಿ ಇವರ ಸಮಗ್ರ ಕತಾಸಂಕಲನವಾಗಿ ನಾನೇ ಪ್ರಕಟಿಸಿದ ಕೊಡಗಿನ ಸುಮಗಳಲ್ಲಿ ಇದು ಮೂರನೇ ಕತೆ. (ಹಿಂದಿನೆರಡನ್ನು ಓದದವರಿಗೆ ಇಲ್ಲಿದೆ ಸೇತು)...