ಮಡಿಕೇರಿ ಟಿಪ್ಪಣಿಗಳು

ಮಡಿಕೇರಿ ಟಿಪ್ಪಣಿಗಳು

[ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು - ಮಡಿಕೇರಿಗೆ, ಕೆಲವು ಭೇಟಿ ಕೊಡುವುದು ಅನಿವಾರ್ಯವಾಯ್ತು. ಆಗ ಮೂಡಿದ ಸಾಮಾಜಿಕ ಕಾಳಜಿಯ ಸಾಮಯಿಕ ಟಿಪ್ಪಣಿಗಳನ್ನು ಫೇಸ್ ಬುಕ್ಕಿನಲ್ಲಿ ಪ್ರಕಟಿಸುತ್ತ ಬಂದಿದ್ದೆ. ಇಲ್ಲಿ ಅವುಗಳನ್ನು ಪರಿಷ್ಕರಿಸಿ, ಕಾಲಾನುಕ್ರಮದಲ್ಲೇ ಸಂಕಲಿಸಿದ್ದೇನೆ.] ೧. ಭಾಗಮಂಡಲ ಮುಳುಗಿದರೂ ಸೇತುವೆ... ಕೌಟುಂಬಿಕ ಕಾರ್ಯಕ್ರಮ (೨-೯-೨೧) ಒಂದಕ್ಕಾಗಿ ತಲಕಾವೇರಿಯ ಸಮೀಪದ ‘ಕಾವೇರಿ ಯಾತ್ರಿಕ ಧಾಮ’ಕ್ಕೆ ಹೋಗಿ ಬರುವಾಗ ಭಾಗಮಂಡಲದಲ್ಲಿ ಕಾವೇರಿಯ ಮೇಲಿನ ಈ ಅಪೂರ್ಣ ಸೇತುವೆ ಕಂಡೆ. ಅದರ ಸ್ಥಗಿತಗೊಂಡ ಕಾರ್ಯದ ಪ್ರಾಚೀನತೆ ಮತ್ತು ಅಪೂರ್ಣತೆ ನೋಡಿ, ಖಂಡಿತವಾಗಿಯೂ ಇದು ಜವಾಹರಲಾಲ್ ನೆಹರೂ ಮಾಡಿದ ಇನ್ನೊಂದು ಮಹಾಪರಾಧ ಎಂದೇ ನಿರ್ಧರಿಸಿದ್ದೆ. ಆದರೆ ಈಗ ಮಂಗಳೂರು ಪಂಪ್ವೆಲ್ ವೃತ್ತ, ಕುಂದಾಪುರದ ಮೇಲ್ಸೇತುಗಳೆಲ್ಲ ದೇಶಭಕ್ತರ ಉಸ್ತುವಾರಿಯಲ್ಲಿ ಹತ್ತಕ್ಕೂ ಮಿಕ್ಕು ವರ್ಷ ಕಳೆದೂ ಉತ್ತಮಿಕೆಗೆ ತುಡಿಯುತ್ತಿರುವ (ಆದರೆ ಎಂದೂ ಮುಟ್ಟದ) ಉನ್ನತ ಆದರ್ಶ ನೆನಪಾಯ್ತು. ಇದು ಕೇವಲ ನಾಲ್ಕೇ ವರ್ಷ ಹಳತಂತೆ ಪಾಪ. ಅದರ ಬುಡದ ಅವ್ಯವಸ್ಥೆ ಸಾವಿರವನ್ನು ಊರವರೂ ಭಕ್ತರೂ ಅಪಾರ ದೇಶಪ್ರೇಮದಲ್ಲಿ ತಾಳಿಕೊಳ್ಳುತ್ತಲೇ ಇದ್ದಾರಂತೆ. ಯಾಕೇಂದ್ರೇ ಮುಂದೊಂದು ಕಾಲದಲ್ಲಿ ಜಲಪ್ರಳಯವೇ ಆದರೂ ಭಾಗಮಂಡಲ ಊರಿಗೆ ಊರೇ ಮುಳುಗಿದರೂ ಸ್ವತಃ ಶ್ರೀ ಶ್ರೀ ಭಗಂಡೇಶ್ವರನೇ ಜಲಸ್ತಂಭನಕ್ಕೊಳಗಾದರೂ ಈ ಅಪೂರ್ಣ ಸೇತುವೆಯ ಅವಶೇಷಗಳು ಮುಳುಗದು! ಈ ಅರಿವು ನನ್ನಲ್ಲೂ ಜಾಗೃತವಾದಾಗ ಹೃದಯ ತುಂಬಿಬಂತು. "ಭಾರತ್ ಮತಾಕೀ ಜೈ, ಭಾಜ-ಪಾಕೀ ಜೈ, ಮೋದಿಜೀ ಕೀ ಜೈ, ಯಡ್ಡೀಜೀ ಕೀ ಜೈ, ಬಂಮೈಜೀ ಕೀ...." ಎಂಬ ಘೋಷಣಾ ಸರಣಿಯನ್ನು ತಡೆಯದಾದೆ.   ೨. ಕೊಡಗಿನ ಸಮಾಜಾಭಿವೃದ್ಧಿಗೆ ಹೆಣಗಿದ ಪ್ರಮುಖರು ಪ್ರಸಾದ್ ರಕ್ಷಿದಿಯವರು ಹುಟ್ಟು ಹಾಗೂ ಬಾಲ್ಯದ ಕೆಲಕಾಲವನ್ನು ಮಡಿಕೇರಿಯಲ್ಲಿ ಕಂಡವರು. ಅನಂತರ ಕುಟುಂಬದ ಜತೆ ಸಕಲೇಶಪುರದ ರಕ್ಷಿದಿಗೆ ವಲಸೆ ಹೋದರೂ ಅಷ್ಟೇನೂ ದೂರದ್ದಲ್ಲದ ಕೊಡಗಿನ ಸಂಬಂಧವನ್ನು ಸಾಕಷ್ಟು ಉಳಿಸಿಕೊಂಡೇ ಇದ್ದರು. ಹಾಗೆ ಅವರಿಗೆ ಮೂಲತಃ ಕೊಡಗಿನವರೇ ಆದರೂ ಸದ್ಯ (೩-೯-೨೦೨೧) ಸಕಲೇಶಪುರದಲ್ಲಿ ನೆಲೆಸಿರುವ ಕುಕ್ಕುಪುಳಿ ವಾಸುದೇವಶರ್ಮರಲ್ಲಿ ಈ ಪಟ ಸಿಕ್ಕಿತಂತೆ. ಇದು ೧೯೫೬ರಲ್ಲಿ ಕೊಡಗಿನ ನೀರ್ಕೊಲ್ಲಿಯ ಕೃಷ್ಣರಾಜ ಮಾಸ್ಟರು ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಾಕ್ಕೆ ಹೋಗುವ ಸಂದರ್ಭದಲ್ಲಿ, ‘ಕೊಡಗು ಬ್ರಾಹ್ಮಣ ಸಂಘ’ದಲ್ಲಿ ವಿದಾಯ ಸಮಾರಂಭ ನಡೆಸಿದ್ದರ ದಾಖಲೆ. ಆ ದಿನಗಳಲ್ಲಿ ಸಾರ್ವತ್ರಿಕವಾಗಿ ಬಡತನ ಮತ್ತು ಸವಲತ್ತುಗಳ ಕೊರತೆ ತೀವ್ರವೇ ಇತ್ತು. ಆಗ ಜಾಗೃತ (ಬ್ರಾಹ್ಮಣ) ಸ್ಥಿತಿವಂತರು ತಮ್ಮ ಮಿತಿಯಲ್ಲಿ ಸಾಮಾಜಿಕ ಹಿತಕ್ಕಾಗಿ ಕಟ್ಟಿಕೊಂಡ ಸಂಸ್ಥೆಗಳಲ್ಲಿ ‘ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ’ ಒಂದು. ಪಟದಲ್ಲಿ ಮೊದಲು ನಾನು ಕೆಲವು ವ್ಯಕ್ತಿಗಳನ್ನು ಗುರುತಿಸಿದೆ. ಮತ್ತೆ ಫೇಸ್ ಬುಕ್ಕಿನಲ್ಲಿ ಚಿತ್ರ ಸಹಿತ ಪ್ರಕಟಿಸಿ, ಗೆಳೆಯರ ಸಲಹೆಯಲ್ಲಿ ಪರಿಷ್ಕರಿಸಿಕೊಂಡೆ. ಆ ಪಟ್ಟಿ ಹೀಗಿದೆ: (ಈಗಲೂ ಹೊಸದಾಗಿ ನೀವು ಗುರುತು, ತಿದ್ದು ಎಂದು ಸೂಚಿಸಿದರೆ ಅವಶ್ಯ ಪರಿಷ್ಕರಿಸುತ್ತೇನೆ) ಮೊದಲ ಸಾಲು: ಮೊದಲಿಗರು ಜಿಟಿ ನಾರಾಯಣ ರಾವ್ (ನನ್ನಪ್ಪ). ಬಲಗಡೆ ಕೊನೆಯವರು ಎಂ.ಎಸ್.ಸುಬ್ಬರಾಯರು. ಬಲಗಡೆಯಿಂದ ಮೂರನೆಯವರು ಸಿಂಗಾಪುರ ಈಶ್ವರ ಭಟ್ಟರು(ಕೈಲಂಕಜೆ) ಉಳಿದ ಯಾರೂ ಗೊತ್ತಿಲ್ಲ. ಎರಡನೇ ಸಾಲು: ೧. ಬಿ.ಸೂರ್ಯನಾರಾಯಣ ರಾವ್ (ಮುಖ್ಯೋಪಾಧ್ಯಾಯರು), ೨. ವೆಂಕಟರಮಣರಾವ್ (ಸರಕಾರೀ ಕಾಲೇಜಿನ ಪ್ರಾಂಶುಪಾಲರು, ಗಣಿತಾಧ್ಯಾಪಕ), ೩. ಎಂ.ಎ. ರಾಮಚಂದ್ರರಾವ್ (ಭೌತ ಅಧ್ಯಾಪಕ), ೪. ಬಾಳಿಗರು (?), ೫. ಜಿ.ಎನ್.ತಿಮ್ಮಪ್ಪಯ್ಯ (ನನ್ನಜ್ಜ, ಬ್ಯಾಂಕ್, ಕೃಷಿ), ಜಿ.ಎಂ.ಮಂಜನಾಥಯ್ಯ (ಗುಂಡುಕುಟ್ಟಿ, ಕೃಷಿ), ಗುಡ್ಡೆಹಿತ್ಲು ಶಿವಣ್ಣಯ್ಯ (ಕೃಷ್ಣರಾಜ ಮಾಷ್ಟ್ರ ತಂದೆ), ಜಿ.ಎಸ್.ಕೃಷ್ಣರಾಜು (ಅಮೆರಿಕಕ್ಕೆ ಹೊರಟುನಿಂತವರು) ಎನ್.ಆರ್ .ಗೋಪಾಲಕೃಷ್ಣ (ನ್ಯಾಯಾಧೀಶ), ಸಿ.ಎಸ್.ನಾರಾಯಣ (ವಕೀಲ), ಎಂ.ಎಸ್.ಅನಂತ ಪದ್ಮನಾಭರಾಯರು (ಹರಿದಾಸ), ಐಭಟ್ರ ಸುಬ್ಬರಾಯರು, ಬಿ.ಟಿ.ಗೋವಿಂದಯ್ಯ, ರಾಮಕೃಷ್ಣ ಉಡುಪರು (ಕನ್ನಡ ಅಧ್ಯಾಪಕ), ರಾಮಣ್ಣ ಮೇಷ್ಟ್ರು (ಶಿಕ್ಷಕ) ಮೂರನೇ ಸಾಲು : ೧. ಗೊತ್ತಿಲ್ಲ, ೨. ಎಂ.ಎಸ್.ಸುಬ್ಬರಾಯರು, ೩. ಜವಾಹರ್, ೪. ಕೆ.ಎನ್ ಸೀತಾರಾಮ, ೫. ಜಿ.ವಿ.ಕೃಷ್ಣಮೂರ್ತಿ, ೬. ಎಚ್ ಕೆ.ಚಂದ್ರಶೇಖರ್, ೭. ಕೃಷ್ಣಪ್ಪ, ೮. ಎನ್.ಎಸ್.ತಿಮ್ಮಪ್ಪಯ್ಯ (ಪತ್ರಿಕೋದ್ಯಮಿ), ೯. ಡಾ|...

read more

Category

Latest Comments

  1. ಅಲ್ಲೇ ನಿಂತು ವಿಚಾರಿಸಿದ್ದರೆ ಪ್ರಾಯಶಃ ನಮ್ಮ ತಪ್ಪಿಲ್ಲದಿದ್ದರೂ ೧) ಮಾತು ಬೆಳೆಯುತ್ತಿತ್ತು ೩) ಅಮೂಲ್ಯ ಕಾಲ ಹರಣವಾಗುತ್ತಿತ್ತು ೩) ಅವ್ನಿಗಾದ ನಷ್ಟ, ತುಂಬಿಕೊಡಲು ಆಗ್ರಹಿಸುತ್ತಿದ್ದರು ೪) ವಿಕೋಪಕ್ಕೆ…

  2. ಶಿಲಪ್ಪದಿಕಾರಂ ( ತಮಿಳು ಮಹಾಕಾವ್ಯ) ದಲ್ಲಿ ಕಾವೇರಿಯನ್ನು ಪೊನ್ನಿ ಎಂದು ಕರೆಯಲಾಗಿದೆ. ಕೊಡಗಿನಲ್ಲಿ ಪೊನ್ನಪ್ಪ/ ಪೊನ್ನಮ್ಮ ಹೆಸರುಗಳು ಬಹಳ ಜನಪ್ರಿಯವೇ ಹೌದು. ಅಂದರೆ, ಕೊಡಗಿನಲ್ಲಿಯೂ ಕಾವೇರಿಯ ಹಳೆಯ…

  3. ವಾಹ್ ಎಂಥ ರೋಚಕ ಅನುಭವ. ಪ್ರಾದೇಶಿಕ ಪದಗಳಿಂದ ಭರಪೂರ ತುಂಬಿದ ನಿರೂಪಣೆ ಬಹಳ ಚೆಂದ. ನನಗೆ ಮತ್ತೆ ಬಿಸ್ಲೆಯನ್ನು ನೋಡಬೇಕೆನಿಸಿದೆ. ನಾನು ಹತ್ತನೇ ಕ್ಲಾಸಿನಲ್ಲಿದ್ದಾಗ ಒಮ್ಮೆ ಮಾತ್ರ…

  4. ಸ್ವಲ್ಪ ಚರಿತ್ರೆ, ಸ್ವಲ್ಪ ರಾಜಕೀಯ, ಸ್ವಲ್ಪ ಬ್ರಾಹ್ಮಣ ಸಂಬಂಧಗಳು... ಚೆನ್ನಾಗಿದೆ. ಲೇಖನದಲ್ಲಿ ಬಂದಿರುವ ಕೆಲವರ ಪರಿಚಯ ನನಗೂ ಇದೆ. ಎಂ ಎಸ್ ಸುಬ್ಬರಾವ್ ಅವರು ಡಿ ಎನ್…