ಬಿಳಿಹುಲಿಗೊಂದು ಬಾಲ

ಬಿಳಿಹುಲಿಗೊಂದು ಬಾಲ

ಇಂಗ್ಲಿಷ್ ಮಾಧ್ಯಮ ಶಾಲೆಯೊಂದರ ಇಬ್ಬರು ಟೀಚರಮ್ಮಂದಿರು ಆರಿಸಿಟ್ಟ ಪುಸ್ತಕಗಳನ್ನು ನಾನು ಬಿಲ್ಲು ಮಾಡುತ್ತಿದ್ದೆ. ಅವರು ನನ್ನ ಮೇಜಿನ ಅಂಚುಗಟ್ಟಿ ನಿಂತ ಹಾಗೇ ಮೇಜಿನ ಕನ್ನಡಿಯಡಿಯಲ್ಲಿ ನಾನಿಟ್ಟಿದ್ದ ಎರಡು ವ್ಯಂಗ್ಯ ಚಿತ್ರಗಳನ್ನು ಗಮನಿಸಿದರು. ಮೊದಲು ಟೈಮ್ಸ್ ಆಫ್ ಇಂಡಿಯಾದ್ದು, ಕಲಾವಿದ – ಪೊನ್ನಪ್ಪ. ಅರವಿಂದ ಅಡಿಗರ...