(‘ಕರ್ನಾಟಕ’ ಸುವರ್ಣೋತ್ಸವಕ್ಕೆ ವಿಶೇಷ ಲೇಖನ)
“ಮಾಡೋಕ್ ಬೇರೆ ಕೆಲಸವಿಲ್ಲಾ”, ಕನ್ನಡ ಪುಸ್ತಕ ಪ್ರಾಧಿಕಾರ ‘ವರ್ಷದ ಉತ್ತಮ ಪ್ರಕಾಶಕ’ ಪ್ರಶಸ್ತಿ ಪ್ರಸ್ತಾವನೆಯನ್ನು ಡೀವೀಕೇ ಮೂರ್ತಿ ನೋಡಿದಾಗ ಕೊಟ್ಟ ಪ್ರಥಮ ಉದ್ಗಾರ. (ಅವರು ಪ್ರಶಸ್ತಿ ಸ್ವೀಕರಿಸದೇ ಇನ್ನೂ ದೊಡ್ಡವರಾದರು) ನಾವು (ಪ್ರಜಾಪ್ರಭುಗಳು) ಸಾರ್ವಜನಿಕ ಅವಶ್ಯಕತೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಪ್ರತಿನಿಧಿಯನ್ನು ಆಯುತ್ತೇವೆ. ಹಾಗೆ ಬಂದ ಪ್ರತಿನಿಧಿ ಪಕ್ಷಾತೀತವಾಗಿ ಪ್ರಜೆಗಳ ವೈಯಕ್ತಿಕ ಆವಶ್ಯಕತೆಗಳಿಗೆ ಪೂರಕವಾಗಿ, ಸಾಮುದಾಯಿಕ ಅಗತ್ಯಗಳಾದ ಶಿಕ್ಷಣ, ಆರೋಗ್ಯ…. ಮುಂತಾದವನ್ನು ಶಾಸನಾತ್ಮಕವಾಗಿ ಭದ್ರಪಡಿಸಬೇಕು. ತಾನು ‘ಒಡೆಯನಲ್ಲ, ಸೇವಕ’ ಎನ್ನುವುದನ್ನು ಸ್ಪಷ್ಟ ತಿಳಿದು ನಡೆಯಬೇಕು. ಆದರೆ ಪ್ರಜಾವರ್ಗದಲ್ಲಿ ಕೆಲವರು ಸ್ವಾರ್ಥ ಸಾಧನೆಗಾಗಿ, ರಾಜಸತ್ತೆಗಳನ್ನು ನೆನೆಯುತ್ತಾ “ರಾಜಾ ಪ್ರತ್ಯಕ್ಷ ದೇವತಾ” ಎಂದು ಪ್ರತಿನಿಧಿಗೆ ಸ್ತುತಿಗೀತೆ ಹಾಡುತ್ತಾರೆ. ಮಾಟಗಾತಿಯರ ನುಡಿಯಲ್ಲಿ ಮ್ಯಾಕ್ಬೆತ್ ತನ್ನ ಮನದಾಸೆಯನ್ನೇ ದೊಡ್ಡದಾಗಿ ಕಂಡಂತೆ, ಪ್ರತಿನಿಧಿಗಳು ಸಾಮಾನ್ಯರ ಭ್ರಮೆಗೆ ದುಡಿಯುವುದೇ ಹೆಚ್ಚು. ಹೀಗೆ ಜನಹಿತದ ಕೆಲಸಕ್ಕಿರುವ ಹಣ, ಶ್ರಮಗಳನ್ನು ವೈಯಕ್ತಿಕ ಕರ್ತವ್ಯ ನಿರ್ವಹಿಸಿದವರಿಗೆ ಪ್ರಶಸ್ತಿ, ಪುರಸ್ಕಾರಗಳಾಗಿ ಕೊಡುವ ಹುಚ್ಚು ಕಂಡೇ ಡೀವೀಕೆ ವ್ಯಗ್ರರಾಗಿದ್ದರು.
ಕನ್ನಡ ಪುಸ್ತಕೋದ್ಯಮದ ಇತಿಹಾಸ:
ಡಿವಿಕೆ ಮೂರ್ತಿ (ಅದೇ ಹೆಸರಿನಲ್ಲಿ), ಜಿಬಿ ಜೋಶಿ (ಮನೋಹರ ಗ್ರಂಥಮಾಲ), ಕೂಡಲಿ ಚಿದಂಬರಂ (ಕಾವ್ಯಾಲಯ), ಗೋವಿಂದರಾವ್ (ಸಾಹಿತ್ಯ ಭಂಡಾರ), ಕೆವಿ ಸುಬ್ಬಣ್ಣ (ಅಕ್ಷರ ಪ್ರಕಾಶನ) ಮುಂತಾದ ಕೆಲವರು ಕನ್ನಡದ ಮೊದಲ ತಲೆಮಾರಿನ ಪುಸ್ತಕ ಪ್ರಕಾಶಕರು. ಅವರೆಲ್ಲ ತಮ್ಮ ನಂಬುಗೆ ಮತ್ತು ಶ್ರಮವನ್ನಷ್ಟೇ ನೆಚ್ಚಿ, ಲೇಖಕರನ್ನು ಎಬ್ಬಿಸಿ, ಪುಸ್ತಕ ಪ್ರಕಾಶನ ಮತ್ತು ವಿತರಣೆಯನ್ನು, ಓದುಗ ಕೇಂದ್ರಿತವಾಗಿ ಕಟ್ಟಿದರು. ಆ ದಿನಗಳಲ್ಲಿ ಊಹಿಸಲೂ ಆಗದ ಗಂಟು ಮಾಡುವ, ಪ್ರಶಸ್ತಿ ಗಿಟ್ಟಿಸುವ ಉದ್ದೇಶಕ್ಕಲ್ಲ. ಆದರೆ ಈಚಿನ ದಿನಗಳಲ್ಲಿ ‘ಓದುಗ’ನ ಸ್ಥಾನದಲ್ಲಿ ‘ಖರೀದಿ’ ಬಂದು, ಪುಸ್ತಕೋದ್ಯಮ ಪಕ್ಕಾ ವಾಣಿಜ್ಯ ವಹಿವಾಟು ಮಾತ್ರ ಆಗಿದೆ. ಬಹುತೇಕ ಪುಸ್ತಕೋದ್ಯಮಿಗಳಿಗೆ ತಮ್ಮದೇ ‘ಮಾಲಿನ’ ಹೂರಣದ ಅರಿವು ಬೇಕೇ ಇಲ್ಲ. ಉದ್ಯಮಕ್ಕೆ ಪೂರಕವಾದ ನೋಂದಣಿ, ಅರ್ಜಿ, ಶಿಫಾರಸು, ಪ್ರಶಸ್ತಿ, ಪುರಸ್ಕಾರ, ಸಾಲ, ಸಹಾಯ, ಖರೀದಿ ಎಂಬಿತ್ಯಾದಿಗಳಲ್ಲೇ ಕಳೆದು ಹೋಗಿ, ನಿಜ ಪುಸ್ತಕದ ಓದಿಗೆ ಯಮರೇ ಆಗಿದ್ದಾರೆ; ಓದುಗ ಬಲಿಯಾಗಿದ್ದಾನೆ. ಲೇಖಕ, ಪ್ರಕಾಶಕ, ಮುದ್ರಕ, ಮಾರಾಟಗಾರ ಮತ್ತು ಕೊನೆಯಲ್ಲಿ ನೇರ ಅಥವಾ ಗ್ರಂಥಾಲಯ ಮೂಲಕ ಓದುಗ ಎಂಬ ಸರಳ ವ್ಯವಾಹಾರ ಇಂದು ತಲೆಕೆಳಗಾಗಿದೆ. ಐದು ವರ್ಷಕ್ಕೆ ಆಯ್ದು ಬರುವ ರಾಜರು, ಪುಸ್ತಕಲೋಕದ ಹಣದ ರುಚಿಯಲ್ಲಿ, ದಿನಕ್ಕೊಂದು ಯೋಜನೆಯನ್ನು ಉಡಾಯಿಸುತ್ತಲೇ ಇದ್ದಾರೆ. ಯೋಜನೆಗಳ ಹಿಂದು ಮುಂದುಗಳ ಕುರಿತು ಯೋಚನಾ ಜರಡಿ ಹಿಡಿಯಲೆಂದೇ ತರಬೇತಾದ ಅಧಿಕಾರಿಗಳು, ತಮ್ಮ ತೆವಲುಗಳಿಗಾಗಿ ರಾಜವೇಷದವರಿಗೆ ಹಿಮ್ಮೇಳವಾಗುತ್ತಿದ್ದಾರೆ. ಸಣ್ಣ ಉದಾಹರಣೆ…
ತಪ್ಪಿದ ದಿಕ್ಕನ್ನು ದೃಢಗೊಳಿಸಿದ್ದು:
೧೯೯೩ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನಲ್ಲಿ, ರಾಜ್ಯದ ಎಲ್ಲ ಕನ್ನಡ ಪುಸ್ತಕೋದ್ಯಮಿಗಳನ್ನು ಆಮಂತ್ರಿಸಿ ಎಲ್ಲೆಸ್ ಶೇಷಗಿರಿ ರಾಯರ ಅಧ್ಯಕ್ಷತೆಯಲ್ಲಿ ಒಂದು ವಿಚಾರ ಕಮ್ಮಟ ನಡೆಸಿತು. ಅದರ ಗೂಢಾಂತರದಲ್ಲಿ ‘ಕನ್ನಡ ಪುಸ್ತಕ ಪ್ರಾಧಿಕಾರ’ (ಕಪುಪ್ರಾ) ಎಂಬ ಹೊಸದೇ ಸಂಸ್ಥೆಯ ಹೆರಿಗೆ ನೋವಿದ್ದದ್ದು ಯಾರಿಗೂ ತಿಳಿದಿರಲಿಲ್ಲ. ಅದರಲ್ಲಿ ಈಗಾಗಲೇ ಪ್ರಬಂಧಕೋರನೆಂದು ಸಣ್ಣ ಖ್ಯಾತಿ ಗಳಿಸಿದ್ದ ನನಗೆ ಮಾತ್ರ, ಪುಸ್ತಕೋದ್ಯಮದ ಅಭಿವೃದ್ಧಿಯ ಕುರಿತು ಸ್ವಾನುಭವ ಪಾಕ ಮಂಡಿಸಲು ಕೇಳಿಕೊಂಡಿದ್ದರು. ಆ ವೇಳೆಗೆ ಖಾಸಗಿ ಪ್ರಕಾಶಕರಲ್ಲದೆ, ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು (ಮೈಸೂರು, ಬೆಂಗಳೂರು, ಕರ್ನಾಟಕ, ಕೃಷಿ…), ರಾಜ್ಯ ಮತ್ತು ಕೇಂದ್ರ ಸೇರಿದಂತೆ ಹಲವು ಭಾಷಾ ಹಾಗೂ ವಿಷಯಕ ಅಕಾಡೆಮಿಗಳು, ಸರಕಾರೀ ಮುದ್ರಣಾಲಯ ಸೇರಿದಂತೆ ಹಲವು ಇಲಾಖೆಗಳು ಸಾಕಷ್ಟು ಕನ್ನಡ ಪ್ರಕಟಣೆಗಳನ್ನು ತರುತ್ತಲೇ ಇದ್ದವು. ಸಾರ್ವಜನಿಕರ ಅಪಾರ ಓದಿನ ಆಸಕ್ತಿಯೊಡನೆ, ಎಲ್ಲ ಶಿಕ್ಷಣ ಸಂಸ್ಥೆಗಳು, ಬಹುತರದ ಗ್ರಂಥಾಲಯಗಳು ಪುಸ್ತಕ ಖರೀದಿಗಳನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತಲೂ ಇದ್ದವು. ಅವರೆಲ್ಲರ ಸಮರ್ಥ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ, ನನ್ನ ಪ್ರಬಂಧವನ್ನು ಒರೆಗೆ ಹಚ್ಚಿ, ಹೀಗೊಂದು ಅಭಿಪ್ರಾಯ ಮೂಡಿತ್ತು. “ಪುಸ್ತಕೋದ್ಯಮದ ಅಭಿವೃದ್ಧಿಗೆ ಇನ್ನೊಂದು ಸರಕಾರೀ ಇಲಾಖೆ ಬೇಡ. ಈಗಾಗಲೇ ಇರುವವನ್ನು ಬಿಗಿಗೊಳಿಸುವ ನಿಯಮವಷ್ಟೇ ಸಾಕು.” ಆದರೂ… ಕಪುಪ್ರಾ ಬಂತು. ಮತ್ತೆ ಅದು ಇಂದು ಯಾವ ಸ್ಥಿತಿಯಲ್ಲಿದೆಯೆಂದು ಪ್ರತ್ಯೇಕ ಹೇಳಬೇಕೇ! (ಕೆಳಗೆ ತುಸು ವಿವರಿಸಿದ್ದೇನೆ ಕೂಡಾ)
ಮೇಲೆ ಹೇಳಿದ ಮೊದಲ ತಲೆಮಾರಿನ ಕನ್ನಡ ಪ್ರಕಾಶಕರೆಲ್ಲ ೧೯೩೦ರ ದಶಕದಲ್ಲಿ ಪದಾರ್ಪಣೆ ಮಾಡಿದವರು. ಆ ಲೆಕ್ಕದಲ್ಲಿ ಪುಸ್ತಕೋದ್ಯಮಕ್ಕೆ ಇಂದು ಸುಮಾರು ತೊಂಬತ್ತರ ಹರಯ. ಅದರ ನಡು ಹರಯದ ಕಾಲದಲ್ಲಿ (೧೯೭೫), ಅನ್ಯ ಧನಮೂಲ ಮತ್ತು ಪೂರ್ವಾನುಭವ ಇಲ್ಲದ ನಾನು ಬಿಡಿ ಪುಸ್ತಕ ವ್ಯಾಪಾರಿಯ ವೃತ್ತಿಗಿಳಿದೆ. ಪ್ರಾಮಾಣಿಕ ಪುಸ್ತಕ ಆಸಕ್ತಿ ಮತ್ತು ಅಪಾರ ಶ್ರಮವೆರಡನ್ನೇ ನೆಚ್ಚಿ, ಅಂದು ನನಗೆ ಪರವೂರಾದ ಮಂಗಳೂರನ್ನು ಆಯ್ದುಕೊಂಡೆ. ವಿಷಾದದ ಸಂಗತಿ ಎಂದರೆ, ಆ ಕಾಲಕ್ಕೇ ನನಗೆ, ಪುಸ್ತಕೋದ್ಯಮ ಓದುಗ ನಿಷ್ಠೆಯ ಶಿಖರ ಬಿಟ್ಟ ಬ್ರೇಕ್ ಇಲ್ಲದ ಭಾರೀ ಬಂಡಿ ಎಂದು ಬೇಗನೇ ಅರಿವಿಗೆ ಬಂದಿತ್ತು. ೧೯೮೩ರ ಮೈವಿವಿ ನಿಲಯದ ಪ್ರಸಾರಾಂಗದ ಸುವರ್ಣ ಮಹೋತ್ಸವದಲ್ಲಿ ನಾನು ಮಂಡಿಸಿದ ಪ್ರಬಂಧ, ಅದನ್ನೇ ಪರಿಷ್ಕರಿಸಿ ೧೯೮೫ರಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಗಳಲ್ಲೂ ಈ ಅರಿವನ್ನು ಗಟ್ಟಿಯಾಗಿಯೇ ಸಾರ್ವಜನಿಕದಲ್ಲೂ ಹೇಳಿಕೊಂಡೆ. ಆ ಪ್ರಬಂಧ ಮತ್ತೆ ಮುಂದೂ ನಾನು ಪುಸ್ತಕೋದ್ಯಮದ ಕುರಿತು ಬರೆದ ಟಿಪ್ಪಣಿ, ಲೇಖನಗಳನ್ನು ನನ್ನದೇ ‘ಪುಸ್ತಕ ಮಾರಾಟ ಹೋರಾಟ’ ಸಂಕಲನದಲ್ಲೂ ಜಾಲತಾಣದಲ್ಲೂ ಸಾರ್ವಜನಿಕಕ್ಕೆ ಮುಕ್ತವಾಗಿಡುತ್ತಲೇ ಇದ್ದೇನೆ. (ನೋಡಿ: rb.gy/zdm2qf). ಫಲಿತಾಂಶ – ಗೋರ್ಕಲ್ಲ ಮೇಲೆ ಮಳೆ ಸುರಿದಂತೇ ಆಗಿದೆ!
ಪ್ರಕಾಶನಕ್ಕೆ ಊರೆಗೋಲಲ್ಲ, ಓದುಗನಿಗೆ ಕಟ್ಟಿದ ಚಟ್ಟ:
ಇಂದು ಸರಕಾರ ಹಲವು ಬಗೆಯ ಪ್ರಶಸ್ತಿ, ಪುರಸ್ಕಾರ, ಅನುದಾನ, ಸಾಲ, ಖರೀದಿ ಎಂಬಿತ್ಯಾದಿ ಹೆಸರಿನಲ್ಲಿ ಪರೋಕ್ಷವಾಗಿಯೂ ಅಕಾಡೆಮಿ, ಪ್ರಾಧಿಕಾರ, ವಿವಿ ನಿಲಯ ಮುಂತಾದ ಹೆಸರಿನಲ್ಲಿ ಪ್ರತ್ಯಕ್ಷವಾಗಿಯೂ ಕನ್ನಡ ಪುಸ್ತಕೋದ್ಯಮದಲ್ಲಿ ಬಹಳ ದೊಡ್ಡ ಮೊತ್ತವನ್ನೇ ಹೂಡಿದೆ. ಸಹಜವಾಗಿ ಅವುಗಳ ಪ್ರಕಟಣೆಗಳಲ್ಲಿ ಸಾರ್ವಜನಿಕ ಹಣದೊಡನೆ ಬಹುದೊಡ್ಡ ಬೌದ್ಧಿಕ ಸಂಪತ್ತೂ ನಿಕ್ಷೇಪವಾಗಿದ್ದಿರಬೇಕು. ಆದರೆ ಆ ಪುಸ್ತಕಗಳು, ಯೋಗ್ಯ ವಿತರಣೆಯ ಸಾರ್ಥಕ್ಯವನ್ನು ಕಂಡದ್ದು ತುಂಬಾ ಕಡಿಮೆ. ಪುಸ್ತಕೋದ್ಯಮದ ಎಲ್ಲ ಸರಕಾರೀ ಅಂಗಗಳೂ ಈ ದ್ರೋಹದಲ್ಲಿ ಸಮಪಾಲುಗಾರರು. ಪುಸ್ತಕ ವಿತರಣೆಯಲ್ಲಿ ಇಲಾಖೆಗಳ ಸ್ವತಂತ್ರ ವ್ಯವಸ್ಥೆ ಕುಂಟಿದರೂ ತತ್ವದಲ್ಲಿ ಎಲ್ಲಕ್ಕೂ ಮೇಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಶಾಖೆಗಳು ಮಾರುಗಟ್ಟೆಗಳಾಗಿ ಒದಗಬೇಕಿತ್ತು. ಆದರೆ ಯಾವುದೇ ಜಿಲ್ಲಾ ಶಾಖೆಯಲ್ಲೂ ಸೂಕ್ತ ಸ್ಥಳಾವಕಾಶ, ಸಕಾಲಿಕ ಮತ್ತು ಬೇಡಿಕೆಗೆ ತಕ್ಕ ಸರಬರಾಜು, ಪ್ರದರ್ಶನ ಮತ್ತು ದಾಸ್ತಾನು ವ್ಯವಸ್ಥೆ, ಸಿಬ್ಬಂದಿ…. ಎಲ್ಲವೂ ದೊಡ್ಡ ಕೊರತೆಗಳೇ. ಅದಕ್ಕೆ ಉದಾಹರಣೆಯಾಗಿ ಆ ಎಲ್ಲ ಗೋಠಾಳೆಯನ್ನು ನಿವಾರಿಸಲೆಂಬಂತೆ ಹುಟ್ಟಿದ ಕಪುಪ್ರಾವನ್ನೇ ತುಸು ವಿವರದಲ್ಲಿ ನೋಡಿ…
ಕಪುಪ್ರಾ ಆರಂಭ ಶೂರತ್ವದಲ್ಲಿ ಸಂಚಾರಿ ಪುಸ್ತಕ ಮಳಿಗೆಯೊಡನೇ ಜಿಲ್ಲಾ ಕೇಂದ್ರ, ಬಸ್ ಹಾಗೂ ರೈಲ್ವೇ ನಿಲ್ದಾಣಗಳಲ್ಲೂ ತನ್ನ ಮಾರಾಟ ಮಳಿಗೆಗಳನ್ನು ಘೋಷಿಸಿಕೊಂಡಿತು. ಸಂಚಾರಿ ಮಳಿಗೆ ನಿರ್ವಹಣ ವೆಚ್ಚವಿಲ್ಲದೇ ಹುಟ್ಟಡಗಿತು. ನಿರುದ್ಯೋಗೀ ಯುವ ಉತ್ಸಾಹಿಗಳನ್ನು ಸಹಾಯವೋ ಸಾಲವೋ ಕೊಟ್ಟು, ಕೆಲವು ಊರುಗಳಲ್ಲಿ ಪುಸ್ತಕ ಗೂಡಂಗಡಿಗಳೇನೋ ಭರ್ಜರಿ ಭಾಷಣಗಳೊಡನೆಯೇ ಶುರುವಾಯಿತು. ಮುಂದುವರಿದಂತೆ ಅಪ್ರಾಯೋಗಿಕ ನಿಯಮಗಳ ಜಾಲದಲ್ಲಿ ಉತ್ಸಾಹಿಗಳನ್ನು ನರಳಿಸಿ, ಎಲ್ಲ ಮುಚ್ಚಿ ಕುಳಿತರು. ಬೇರೆ ಬೇರೆ ಅಧ್ಯಕ್ಷರು, ಎರಡು ಸಲ “ಇದೇ ಪ್ರಥಮ” ಎಂದು ನಿರ್ಲಜ್ಜವಾಗಿ ಘೋಷಿಸಿಕೊಳ್ಳುತ್ತಾ ಕನ್ನಡ ಪುಸ್ತಕಗಳಿಗಾಗಿಯೇ ಮೀಸಲಾದ ಮಾಸಿಕವೊಂದನ್ನು ಹೊರಡಿಸಿದರು. [ನನಗೆ ಇಂದು ನೆನಪಾಗುವಂತೆ, ಕಪುಪ್ರಾ ಪ್ರಯೋಗಕ್ಕೂ ಬಹಳ ಹಿಂದೆ ಮೈಸೂರಿನಲ್ಲೇ ಗ್ರಂಥಲೋಕ – ಸಂ. ಆರೆಲ್ ಅನಂತರಾಮಯ್ಯ ಮತ್ತು ಪುಸ್ತಕ ಪುರವಣಿ – ಸಂ. ಸರ ಸುದರ್ಶನ, ಎಂಬ ಎರಡು ನಿಯತಕಾಲಿಕಗಳು ಬಹು ಕಾಲ ಪ್ರಕಟವಾಗುತ್ತಿದ್ದವು. ಅವು ನಿಜಕ್ಕೂ ಒಳ್ಳೆಯ ಕೆಲಸವನ್ನು ಮಾಡಿದರೂ, ಜನರ ಪ್ರೋತ್ಸಾಹವಿಲ್ಲದೇ ಕಮರಿಹೋದವು.] ಕಪುಪ್ರಾದ್ದೇ ಪ್ರಕಟಣೆಗಳ ಲೋಕಾರ್ಪಣೆಯ ಕಲಾಪಗಳು, ವಿವಿಧ ಊರುಗಳಲ್ಲಿ ಪುಸ್ತಕ ಮೇಳಗಳು, ವಿಶೇಷ ದಿನಾಚರಣೆ, ಮೊದಲೇ ಹೇಳಿದಂತೆ – ಪ್ರಶಸ್ತಿ, ಪುರಸ್ಕಾರ….. ಎಂದೆಲ್ಲಾ ಹುಚ್ಚುಹುಚ್ಚಾಗಿ ಮೆರೆದು (ರಾಜರುಗಳ ಅಂಧಾ ದರ್ಬಾರ್) ವಿಶೇಷ ಅನುದಾನಗಳನ್ನು ಕೊಳ್ಳೆ ಹೊಡೆಯುವುದರಲ್ಲೇ ತೃಪ್ತರಾದರು.
ಬಾಧ್ಯತೆಯಿಲ್ಲದ ಹಕ್ಕುಗಳು:
ಎಲ್ಲ ಸರಕಾರೀ ಉದ್ಯಮಗಳಿಗೂ ಮೂಲದಲ್ಲಿ ಕಟ್ಟಡ, ಸಜ್ಜಿಕೆ, ಸಿಬ್ಬಂದಿ, ಸವಲತ್ತು, ನಿರ್ವಹಣೆ, ಪ್ರಕಾಶನ ಎಂದಿತ್ಯಾದಿ ಹೂಡಿಕೆಗಳಿಗೆ ಹಿಂದಿರುಗಿಸಬೇಕಿಲ್ಲದ ಸ್ಪಷ್ಟ ಅನುದಾನಗಳಿವೆ. ಅವೆಲ್ಲದರ ಫಲವಾಗಿ ಬಂದ ದೊಡ್ಡ ಉತ್ಪನ್ನಗಳನ್ನು (ಪುಸ್ತಕಗಳು) ನ್ಯಾಯವಾಗಿ ಮಾರಿ, (ಸರಕಾರಕ್ಕೆ ಹಣ ಮರಳಿಸಬೇಕಿಲ್ಲ) ಹೆಚ್ಚಿನ ಸಾಧನೆಗಳಿಗೆ ಸ್ವಂತ ಆರ್ಥಿಕ ಬಲ ಬೆಳೆಸಿಕೊಳ್ಳುವ ಅವಕಾಶ ಧಾರಾಳವಿತ್ತು. ಆದರೆ ಸರಕಾರೀ ಉದ್ದಿಮೆಗಳಿಗೆ ಬರುವ ಹೆಚ್ಚಿನ ಮಂದಿ (ದುಷ್ಟ?) ತುಷ್ಟಿ-ರಾಜಕಾರಣದ ಪ್ರತಿನಿಧಿಗಳೇ ಆದ್ದರಿಂದ, ಆದರ್ಶಗಳಿಗೆ ಹುಟ್ಟಿನಲ್ಲೇ ಸೋಲು ನಿಶ್ಚಿತವಿರುತ್ತದೆ. ಪುಸ್ತಕ ಮಾರಾಟ ಶಿಸ್ತಿನ ದಾರಿಯಲ್ಲಿ ಹೋದದ್ದು ತುಂಬಾ ಕಡಿಮೆ. ಯಾವ್ಯಾವುದೋ ನೆಪಗಳನ್ನು ಹಿಡಿದು, ಯದ್ವಾತದ್ವಾ ರಿಯಾಯ್ತಿಗಳಲ್ಲಿ (೧೦ ರಿಂದ ೬೦ ಶೇಕಡಾದವರೆಗೂ), ಉಚಿತ ವಿತರಣೆಯಲ್ಲೂ ಕೊನೆಗೆ ನಿರ್ವಹಣೆಯ ಅಜಾಗ್ರತೆಯಿಂದ ಗುಜರಿ ಮಾರುಕಟ್ಟೆಯಲ್ಲೂ ಪುಸ್ತಕಗಳು ಸೋರಿ ಕಪಾಟು ಖಾಲೀಯಾಗುತ್ತಿತ್ತು. ಇವಕ್ಕೆಲ್ಲ ಏಕೈಕ ಪರಿಹಾರವಾಗಿ ನಾನಂತೂ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೇನೆ – ಉದ್ದಿಮೆಯ ಸಿಬ್ಬಂದಿಗಳ ಸಂಬಳ, ಸವಲತ್ತುಗಳನ್ನು ಅವರ ದುಡಿಮೆಗೆ ಲಗತ್ತಿಸಿ; ಮಾರು ಇಲ್ಲವೇ ಮಡಿ ಅನುಷ್ಠಾನಗೊಳಿಸಿ.
ಕೇಂದ್ರೀಕರಣದ ಪೀಠದಲ್ಲಿ ಸಾಹಿತ್ಯದ ಕಸಾಯಿ:
ಖಾಸಗಿರಂಗದ ಮೊದಲ ತಲೆಮಾರಿನ ಪುಸ್ತಕೋದ್ಯಮಿಗಳು ಅಪಾರ ಬೌದ್ಧಿಕ ಬಲದೊಡನೆ, ಓದುಗರ ಆವಶ್ಯಕತೆಗಳು ವೃದ್ಧಿಸುವಂತೆ, ಸಮೃದ್ಧವಾಗುವಂತೆ ಪ್ರಕಟಣೆಗಳನ್ನು ತರುತ್ತಿದ್ದರು. ಅವರು ವಿತರಣೆಯಲ್ಲಿ ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳ ಮೂಲೆಗೂ ತಮ್ಮದೇ ಜಾಲ ರೂಪಿಸಿಕೊಂಡಿದ್ದರು. ಆದರೆ ಸರಕಾರದ ಹಸ್ತಕ್ಷೇಪ ಹೆಚ್ಚುತ್ತಿದ್ದಂತೆ, ಒಟ್ಟಾರೆ ಪುಸ್ತಕೋದ್ಯಮ ಬೆಂಗಳೂರಿಗೇ ಕೇಂದ್ರೀಕೃತಗೊಂಡಿತು. ಸಾವಿರಾರು ಮುಖದ ಬಿಡಿ ಮಾರಾಟದ ಶ್ರಮ ವ್ಯರ್ಥ ಎನ್ನುವಂತೆ, ದೊಡ್ಡ ಗಂಟಿನ ಒಂದೇ ಖರೀದಿದಾರನನ್ನು ಆವಾಹಿಸಿಕೊಂಡರು; ಹೆಸರು – ಸಗಟು ಖರೀದಿ. ಇದರಲ್ಲಿ ಆದರ್ಶಗಳನ್ನು ನೆಚ್ಚಿದ ಪ್ರಕಾಶಕರು ಬಳಲಿ ನಾಶವನ್ನೇ ಕಂಡರು. ಒಂದು ಉದಾಹರಣೆ: ಹಿರಿಯ ಸಾಹಿತಿ ಎಸ್.ವಿ ಪರಮೇಶ್ವರ ಭಟ್ಟರು, ತಮ್ಮ ಭಾರೀ ಪುಸ್ತಕ ದಾಸ್ತಾನಿನೊಡನೆ, ಇನ್ನಿಲ್ಲದ ಸಾಲದ ಹೊರೆಯಲ್ಲಿ ಮುಳುಗಿದ್ದರು. ಸಗಟು ಖರೀದಿಯ ‘ಒಬ್ಬ ಲೇಖಕ, ಒಂದು ಕೃತಿ’ ನಿಯಮದಂತೆ ತನ್ನ ದೊಡ್ಡ ಬೆಲೆಯ ಕೃತಿಯೊಂದಕ್ಕೆ (ಕಾಳಿದಾಸ ಮಹಾಸಂಪುಟ, ಭಾಸ ಮಹಾಸಂಪುಟ…) ಅವಕಾಶ ಸಿಕ್ಕೀತೆಂದು ಆಶಿಸಿ, ಎಲ್ಲ ಪುಸ್ತಕಗಳ ಮಾದರಿ ಪ್ರತಿಗಳನ್ನು ಆಯ್ಕಾ ಸಮಿತಿಗೊಪ್ಪಿಸಿದ್ದರು. ಆಯ್ಕೆಗೊಂಡದ್ದು – ಮೊದಲೇ ಸುಲಭ ಬೆಲೆಯ (ರೂ ಮೂರು) ಪಠ್ಯ ಆವೃತ್ತಿಯಾಗಿದ್ದ ‘ಯಜ್ಞಫಲ’ಕ್ಕೆ. ಅದೂ ೫೦% ವಟ್ಟಾ ಕಾಣಿಸಿದ ಮುನ್-ರಸೀತಿಯೊದನೆ, ಇನ್ನೂರೋ ಮುನ್ನೂರೋ ಪ್ರತಿಗಳನ್ನು ಇವರದೇ ಖರ್ಚಿನಲ್ಲಿ ಬೆಂಗಳೂರಿನ ಇಲಾಖಾ ಬಾಗಿಲಿಗೆ ಮುಟ್ಟಿಸಬೇಕಿತ್ತು. ಮುಗ್ದ ಎಸ್ವೀಪೀ ‘ರಾಜನಿಷ್ಟೆ’ಯಲ್ಲಿ, “ಬಂದದ್ದೇ ಹಸಾದ” ಎಂದು ಎಲ್ಲಾ ವಿಧಿಗಳನ್ನು ಪೂರೈಸಿದ್ದರು. ಆದರೆ ಪಾವತಿ ಅವರು ಬದುಕಿರುವವರೆಗೂ ಬಂದಂತಿರಲಿಲ್ಲ.
ಸಗಟು ಖರೀದಿಗೆ ಹುಟ್ಟಿದವರು:
ಸಗಟು ಖರೀದಿಗೇ ಹುಟ್ಟಿದವರು ಸರಕಾರದ ಸಹಾಯ ತಮ್ಮ ಹಕ್ಕೆಂದು ಇಂದಿಗೂ ಸಾರ್ವಜನಿಕ ಅಭಿಪ್ರಾಯವನ್ನು ದಿಕ್ಕು ತಪ್ಪಿಸುತ್ತಲೇ ಇದ್ದಾರೆ. ಸರಕಾರೀ ಪುಸ್ತಕೋದ್ಯಮವೆಂದರೆ ಪಕ್ಕಾ ಭ್ರಷ್ಟ ವಾಣಿಜ್ಯ ವಹಿವಾಟು. ಇಂದು ಅದನ್ನು ನಿರಾಕರಿಸಿ ನಿಂತ ಪ್ರಕಾಶಕರಿದ್ದರೆ ಎಣಿಸಲು ಒಂದು ಕೈಯ ಎಲ್ಲ ಬೆರಳುಗಳೂ ಬೇಕಾಗದು. ಸಗಟು ಖರೀದಿಯ ವಿಪರೀತಕ್ಕೆ ಎರಡು ತೆರನ ಉದಾಹರಣೆಗಳು: ಬೆಂಗಳೂರು ಮೂಲದ, ಏಷ್ಯಾದ ದೊಡ್ಡ ಪುಸ್ತಕ ಮಳಿಗೆಯ ಯಜಮಾನ ನನಗೆ ಫೋನ್ ಮಾಡಿದ್ದರು. “ನಿಮ್ಮ ‘ನೋಡೋಣು ಬಾರಾ ನಕ್ಷತ್ರ’ದ ಪ್ರತಿಗಳು ನಮಗೆ ಬೇಕಿತ್ತು. ವಟ್ಟಾದರ ಎಷ್ಟು?”
ನಾನು “೧೭೦ ಪುಟಗಳ ಅದಕ್ಕೆ ಮುದ್ರಿತ ಬೆಲೆ ರೂ ಮೂವತ್ತರ ಮೇಲೆ ೩೩%. ಮತ್ತೆ ಸದ್ಯ ಅದರ ಮುದ್ರಿತ ಪ್ರತಿಗಳು ಮುಗಿದಿವೆ”.
ಆತ “ನಮಗೆ ಇನ್ನೂರು – ಮುನ್ನೂರು ಪ್ರತಿಗಳೂ ಬೇಕಾದಾವು. ಮರು ಮುದ್ರಿಸಿ ಕೊಡಿ. ಬೆಲೆ ಎಷ್ಟಾದರೂ ಮುದ್ರಿಸಿಕೊಳ್ಳಿ, ನಮಗೆ ಮಾತ್ರ ಶೇಕಡಾ ಐವತ್ತರ ರಿಯಾಯಿತಿಯಲ್ಲೇ ಕೊಡಬೇಕು”.
ನಾನು ಮರುಮುದ್ರಣಕ್ಕೆ ಒಪ್ಪುತ್ತಿದ್ದೆನೇನೋ. ಆದರೆ ‘ಎಷ್ಟಾದರೂ ಬೆಲೆ’ ಮತ್ತು ‘೫೦%’ ನಿರಾಕರಿಸಿದೆ. ಆತ ಪ್ರತಿ ಸಂಖ್ಯೆಗಳನ್ನು ೮೦೦-೧೦೦೦ದವರೆಗೂ ಏರಿಸಿದ. ನಾನು ಒಪ್ಪದಿದ್ದಾಗ, ಹೊಸ ವರಿಸೆಯನ್ನೂ ಹೂಡಿದ್ದ “ಒಂದು ಮರು-ಮುದ್ರಣದ ಹಕ್ಕು ಮಾತ್ರ ನನಗೆ ಕೊಡುವ ಪ್ಯಾಕೇಜ್ ಮಾತಾಡೋಣ”. ನಾನು ತಿರಸ್ಕರಿಸಿದೆ.
ಬೆಂಗಳೂರಿನ ಇನ್ನೋರ್ವ ಪ್ರಕಾಶಕ – ಕೇವಲ ಜನಪ್ರಿಯ ಕಾದಂಬರಿಗಳನ್ನಷ್ಟೇ ಹಾಕುತ್ತಿದ್ದವ, ನಾನು ಪ್ರಕಾಶನ ಮುಚ್ಚಿದ ಕಾಲಕ್ಕೆ (೨೦೧೧) ಫೋನ್ ಮಾಡಿದ್ದ. “ಸಾರ್, ನಿಮ್ಮೆಲ್ಲ ಪ್ರಕಟಣೆಗಳ ಮರು ಪ್ರಕಟಣೆ ನನಗೆ ಕೊಡೀ ಸಾರ್.”
ಆತನನ್ನು ತಪ್ಪಿಸುವಂತೆ “ನನ್ನದೆಲ್ಲಾ ವಿಜ್ಞಾನ ಪುಸ್ತಕಗಳು. ಅವೂ ಕಾಲಕಾಲಕ್ಕೆ ಪರಿಷ್ಕರಣೆ…”
ಆತ ನನ್ನ ಮಾತು ಕತ್ತರಿಸಿ ಬಾಯಿ ಹಾಕಿದ “ವಿಷ್ಯಾ ರಿವಿಜನ್ನೂ ಯೋಚ್ನೇ ಬಿಡಿ ಸಾರ್. ನಾ ಮಾಡ್ಕಂತೀನಿ…” ನಾನು ಸ್ಪಷ್ಟ ಮಾತುಗಳಲ್ಲೇ ಕಳಚಿಕೊಂಡೆ.
ಭೂಮಿ ಚಲಿಸಲೇ ಬೇಕು!:
ಇಂಗ್ಲಿಷ್ ಪುಸ್ತಕ ಪ್ರಕಾಶನ-ವಿತರಣಾ ಸಂಸ್ಥೆಗಳು, (ಔಷಧ, ಯಂತ್ರ ಬಿಡಿ ಭಾಗಗಳು…. ಉದ್ಯಮಿಗಳಂತೇ) ಮಾರಾಟ ಪ್ರತಿನಿಧಿಗಳನ್ನು ನಿಯತ ಕಾಲಗಳಲ್ಲಿ, ಹೊಸ ಉತ್ಪನ್ನದ ಮಾದರಿಗಳೊಡನೆ ಊರೂರಿಗೆ ಕಳಿಸುತ್ತಾರೆ. ಕನ್ನಡ ಪುಸ್ತಕೋದ್ಯಮದಲ್ಲಿ ಇದನ್ನು ಸಮಾಜ ಪುಸ್ತಕಾಲಯ, ವಾಸನ್ ಬುಕ್ ಡಿಪೋ, ಐಬಿಎಚ್…. ಹೀಗೆ ಬೆರಳೆಣಿಕೆಯ ಪ್ರಕಾಶನ ಸಂಸ್ಥೆಗಳೂ ಮಾಡುತ್ತಿದ್ದವು. ಉತ್ತರ ಕರ್ನಾಟಕದ ಹಲವು ‘ಬಜಾರ್ ಪುಸ್ತಕ ಪ್ರಕಾಶಕರು’ (- ಕುಲಕರ್ಣಿ, ಕರಡಿ, ಶಾಬಾದಿಮಠ…), ಹಲವು ಲೇಖಕ-ಪ್ರಕಾಶಕರು ವರ್ಷಕ್ಕೊಮ್ಮೆಯಾದರೂ ರಾಜ್ಯದ ಮುಖ್ಯ ಊರುಗಳಿಗೆಲ್ಲ ಭೇಟಿ ಕೊಟ್ಟು ತಮ್ಮ ಪ್ರಕಟಣೆಗಳ ವಿತರಣೆಗೆ ಶ್ರಮಿಸುತ್ತಿದ್ದರು. ಅಲ್ಲದಿದ್ದರೂ ಹೆಚ್ಚಿನ ಖಾಸಗಿ ಪ್ರಕಾಶಕರೆಲ್ಲ ಕಾಲಕಾಲಕ್ಕೆ ತಮ್ಮ ನವೀಕೃತ ಪುಸ್ತಕ ಕ್ರಯಪಟ್ಟಿಗಳು, ಪ್ರಚಾರ ಸಾಹಿತ್ಯಗಳನ್ನು ಅಂಚೆಯಲ್ಲಾದರೂ ಕಳಿಸಿ, ನಮ್ಮ ಬೇಡಿಕೆಗಳನ್ನು ತುರ್ತಾಗಿಯೇ ಪೂರೈಸುತ್ತಿದ್ದರು. ಸರ್ಕಾರೀಕರಣದೊಡನೆ, ಖರೀದಿ ಕೇಂದ್ರೀಕರಣವೂ ಹೆಚ್ಚುತ್ತಿದ್ದಂತೆ ಹಳೆಗಾಲದ ವಿತರಣಾ ಜಾಲ ದುರ್ಬಲವಾಯ್ತು, ಹಲವು ಕಡಿದೂ ಹೋಯ್ತು. ನನ್ನ ಪುಸ್ತಕ-ವರ್ಷಗಳ ಕೊನೆಗಾಲಗಳಲ್ಲಿ (೨೦೧೨ಕ್ಕೂ ಹಿಂದೆ) ಬರುತ್ತಿದ್ದ ಕೆಲವೇ ಮಾರಾಟ ಪ್ರತಿನಿಧಿಗಳು, ವಿಷಾದದಲ್ಲೇ ಉದ್ಗರಿಸುತ್ತಿದ್ದರು “ಇಡೀ ರಾಜ್ಯದಲ್ಲಿ ಇಂದುಳಿದಿರುವುದು ಐದಾರು ಊರು, ಅಲ್ಲೂ ಒಂದೆರಡು ಮಳಿಗೆ ಮಾತ್ರ.”
ಕೆಲವು ಪ್ರಕಾಶಕರು ಬೇರೆ ಬೇರೆ ಊರಿಗೆ ತಮ್ಮ ಶಾಖೆಗಳನ್ನು ಮಳಿಗೆಗಳಂತೇ ವಿಸ್ತರಿಸಿ (ನವಕರ್ನಾಟಕ, ಸಾಹಿತ್ಯ ಭಂಡಾರ, ಸಪ್ನಾ…) ವಿತರಣಾ ಅವಕಾಶಗಳನ್ನು ಹೆಚ್ಚಿಸಿಕೊಂಡದ್ದುಂಟು. ಹಾಗೇ ಹಲವು ಪ್ರಕಾಶಕರು ವಿಶೇಷ ಸಂದರ್ಭಗಳಲ್ಲಿ (ಸಾಹಿತ್ಯ ಸಮ್ಮೇಳನ, ಪುಸ್ತಕ ಮೇಳ, ವಿಚಾರಗೋಷ್ಠಿ, ಜಾತ್ರೆ…) ಯಾವುದೇ ಊರಿನಲ್ಲಿ ತತ್ಕಾಲೀನ ಮಳಿಗೆಗಳನ್ನು ಹೂಡಿ ಓದುಗರನ್ನು ಮುಟ್ಟುವ ಕೆಲಸ ಮಾಡುತ್ತಿದ್ದರು. ಆಗ ಇತರ ಪ್ರಕಾಶಕರ, ಪ್ರಚಾರದ ಅಲೆಯ ಶಿಖರದಲ್ಲಿರುವ ಕೆಲವು ಪ್ರಕಟಣೆಗಳನ್ನು ಸೇರಿಸಿಕೊಳ್ಳುವುದೂ ಇತ್ತು. ಉಳಿದಂತೆ, ಸಾಮಾನ್ಯ ದಿನಗಳಲ್ಲಿ ಪ್ರಕಾಶಕ-ಮಾರಾಟಗಾರರು ತಮ್ಮ ಪ್ರಕಟಣೆಯ ಪುಸ್ತಕಗಳನ್ನಷ್ಟೇ ದೊಡ್ಡ ಸಂಖ್ಯೆಯಲ್ಲಿ ದೂಡುತ್ತಾರೆ. ಇಂದು ಸಾರ್ವಜನಿಕ ಮೆರೆತದಲ್ಲಿರುವ ಯಾವ ಪುಸ್ತಕೋದ್ಯಮಿಯೂ ನೇರ ಓದುಗ ಖರೀದಿಯನ್ನು ನೆಚ್ಚಿ ಹಣ ತೊಡಗಿಸುವುದಿಲ್ಲ. ಮತ್ತು ಹಾಗೆ ಮಾಡಿ, ಸುಲಭ ಬೆಲೆಗೆ ಪ್ರಕಟವಾದ ಅನ್ಯರ ಪ್ರಕಟಣೆಗಳನ್ನು ಪ್ರೋತ್ಸಾಹಿಸುವುದೂ ಇಲ್ಲ. ಅಂಥವನ್ನಿಟ್ಟರೆ ತಮ್ಮ ಪ್ರಕಟಣೆಯ ದುಬಾರಿ ದರ ತುಲನೆಗೊಳ್ಳುವ ಮತ್ತು ಆದಾಯದ ಕಡಿತಗೊಳ್ಳುವ ಭಯ ಕಾಡುತ್ತವೆ. ಇದಕ್ಕೆರಡು ನನ್ನದೇ ಉದಾಹರಣೆಗಳು….
೨೦೧೨ರಲ್ಲಿ ನಾನು ಪ್ರಕಾಶನ, ಮಳಿಗೆ ಮುಚ್ಚಿ ಮನೆ ಸೇರಿದಾಗ ನನ್ನೊಡನೆ ಸ್ವಂತ ಪ್ರಕಾಶನದ ಹದಿನೈದಕ್ಕೂ ಮಿಕ್ಕು ಕೃತಿಗಳ ತಲಾ ನೂರಿನ್ನೂರು ಪ್ರತಿಗಳ ದಾಸ್ತಾನು ಉಳಿದಿತ್ತು. ಆದರೆ ನನ್ನ ಮೂವತ್ತಾರು ವರ್ಷಗಳ ಗಾಢ ವ್ಯಾವಾಹಾರಿಕ ಸಂಬಂಧ ಇಟ್ಟುಕೊಂಡ ಯಾವ ಅನ್ಯ ಮಳಿಗೆಯವರೂ ಅವುಗಳಲ್ಲಿ ಒಂದೆರಡು ಪ್ರತಿಗಳನ್ನೂ ಇಟ್ಟುಕೊಂಡು ಮಾರಲು ಪ್ರಯತ್ನಿಸಲೇ ಇಲ್ಲ. ಗಿರಾಕಿಗಳೇ ನೆನಪಿಟ್ಟು ಕೇಳಿದಾಗಲೂ…
ಬೆಂಗಳೂರಿನ ಒಂದು ಪ್ರತಿಷ್ಠಿತ, ನನಗೆ ಸುಪರಿಚಿತ ಮಳಿಗೆ ಮಾಲಕನಲ್ಲೊಬ್ಬರು “ನನಗೆ ಅತ್ರಿ ಪ್ರಕಾಶನದ – ದುಃಖಾರ್ತರು, ದಾನ ಕೊಡಲು ಐದು – ಹತ್ತು ಪ್ರತಿ ಬೇಕು, ತರಿಸಿ ಕೊಡಿ” ಎಂದು ಒತ್ತಾಯಿಸಿದರಂತೆ. ಆತ ನಿರುಮ್ಮಳವಾಗಿ “ಇಲ್ಲಾ ಸಾರ್, ಅದು ಔಟಾಫ್ ಪ್ರಿಂಟ್” ಎಂದು ಕೈ ತೊಳೆದುಕೊಂಡರಂತೆ. ಆ ಗಿರಾಕಿ ಛಲ ಬಿಡದೇ ಇನ್ಯಾರ್ಯಾರಿಂದಲೋ ನನ್ನ ಸಂಪರ್ಕ ಸಾಧಿಸಿದರು. ನನ್ನಲ್ಲಿನ್ನೂ ಉಳಿದಿದ್ದ ನೂರಕ್ಕೂ ಮಿಕ್ಕ ದುಃಖಾರ್ತರು ಪ್ರತಿಗಳೆಲ್ಲವನ್ನೂ ಒತ್ತಾಯಪೂರ್ವಕವಾಗಿ ಮುಖ ಬೆಲೆಗೇ ಕೊಂಡರು! (ಮೂನ್ನೂರಾ ಇಪ್ಪತ್ತು ಪುಟಗಳ ಪ್ರತಿಯೊಂದರ ಬೆಲೆ ರೂ ಎಪ್ಪತ್ತು) ಅಲ್ಲವಾದರೆ ನಾನು ಐದು – ಹತ್ತು ಪ್ರತಿಯನ್ನಷ್ಟೇ ವ್ಯಾಪಾರೀ ವಟ್ಟಾ ಕಳೆದು, ನನ್ನದೇ ಖರ್ಚಿನಲ್ಲಿ ಬೆಂಗಳೂರಿಗೆ ಕಳಿಸಿ ಮುನ್ನೂರು ನಾನೂರು ರೂಪಾಯಿಗಷ್ಟೇ ತೃಪ್ತನಾಗುವುದಿತ್ತು.
ದಿಟ್ಟಿಯೆತ್ತಿ ನಡೆಯುವುದನ್ನು ಮರೆತವರು ಅಥವಾ ತೆವಳುವವರು:
ಪುಸ್ತಕೋದ್ಯಮದ ಕುರಿತ ಸುದ್ದಿ, ಗೋಷ್ಟಿ, ಸಂದರ್ಶನ, ಓದುಗರ ಓಲೆ…. ಇಲ್ಲೆಲ್ಲ ನಿಮಗೆ ಕೇಳುವುದು ಒಂದೇ ಮಾತು (ಸರಕಾರದಿಂದ) “ಸಗಟು ಖರೀದಿ ಹೆಚ್ಚಬೇಕು… ಪುಸ್ತಕೋದ್ಯಮಕ್ಕೆ ಸರಕಾರದ ಸಹಾಯ ಇನ್ನಷ್ಟು ಒದಗಬೇಕು….” ಇಂಥಾ ಬೇಡಿಕೆಗಳಿಗೆ ಕಡಿವಾಣವಿಕ್ಕುವಂತೆ ಸರಕಾರ ಕಾಲಕಾಲಕ್ಕೆ ನೂರೆಂಟು ವಿಧಿಗಳನ್ನು ಒಡ್ಡುತ್ತ ಬಂತು. ಪುಸ್ತಕಗಳ ಹೂರಣ ಒಂದನ್ನುಳಿದು, ಉಳಿದೆಲ್ಲಕ್ಕೂ ಈ (ಉದ್) ‘ಯಮಿ’ಗಳು ಒಳದಾರಿಯನ್ನು ಹಿಡಿಯುತ್ತಲೇ ಬಂದರು. ಇಲಾಖೆ ಪ್ರಥಮ ಮುದ್ರಣಗಳಷ್ಟೇ ಮಾನ್ಯ ಎಂದಿತು. ನಾವಿಂದು ರಾಷ್ಟ್ರದ ಇತಿಹಾಸವನ್ನೇ ತಿರುಚುವುದು ಸಾಧ್ಯವಾದರೆ, ಯಃಕಶ್ಚಿತ್ ಪುಸ್ತಕಗಳ ಮುದ್ರಣ ಇತಿಹಾಸ ತಿದ್ದುವುದೇನು ಮಹಾ! ೧೯೫೩ರ ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರ ಪ್ರಕಟಣೆಯೊಂದು, ಸುಮಾರು ಐವತ್ತು ವರ್ಷಗಳನಂತರ, ಸ್ಪಷ್ಟವಾಗಿ ಅವರ ಕಾಲಾನಂತರ ಪ್ರಥಮ ಮುದ್ರಣವಾಗಿ ಬಂದು, ಸಗಟು ಖರೀದಿಯಲ್ಲಿ ಕೃತಾರ್ಥವಾಯ್ತು!
ಸರಕಾರ ಮುದ್ರಿತ ಬೆಲೆಯ ಮೇಲೆ ರಿಯಾಯ್ತಿ ದರವನ್ನು ಹೆಚ್ಚಿಸಿತು. ಯಮಿಗಳು ಅ-ನ್ಯಾಯ ಬೆಲೆ ನಿರ್ಧರಿಸಿ ರಬ್ಬರ್ ಮೊಹರೊತ್ತಿದರು. ಇಲಾಖೆ “ಆಗದು” ಎಂದಾಗ, ಮುದ್ರಿತ ಚೀಟಿ ಅಂಟಿಸಿದರು, ಮುಂಪುಟಗಳನ್ನೇ ಹೊಸದಾಗಿ ಮುದ್ರಿಸಿ ಮರು ರಟ್ಟು ಕಟ್ಟಿಸಿದರು. ಇನ್ನೂ ಬುದ್ಧಿವಂತರು ಒಂದೇ ಕೃತಿಗೆ ಭಿನ್ನ ಮಾರುಕಟ್ಟೆಗಳಿಗಾಗಿ ಎರಡು ಬೆಲೆಗಳಲ್ಲೇ ಪುಸ್ತಕ ತಂದರು.
ಸಗಟು ಖರೀದಿಗೆ ಬರುತ್ತಿದ್ದ ಕೃತಿಗಳ ಹೂರಣದ ಕತೆಯದ್ದು ದೊಡ್ಡ ಮಾರಾಯಣವೇ ಆಯ್ತು. ಬಹುಜನರ ಒತ್ತಾಯದ ಮೇರೆಗೆ ಇಲಾಖೆ, ಗುಣ ಪರೀಕ್ಷೆಗೆ ಜಿ.ಎಚ್. ನಾಯಕರ ಅಧ್ಯಕ್ಷತೆಯಲ್ಲಿ ತಜ್ಞ ಸಮಿತಿ ಮಾಡಿತು. ಯಮಿಗಳು “ಲೋಕೋ ಭಿನ್ನರುಚಿ! ಜನಪ್ರಿಯ ಕಾದಂಬರಿ ಬಗ್ಗೆ ಕೇಳೋಕೆ ಇವರ್ಯಾರೂ..” ಎಂದು ಖ್ಯಾತ ವಿಮರ್ಶಕರಿಗೇ ಸೆಡ್ಡು ಹೊಡೆದು, ದಕ್ಕಿಸಿಕೊಂಡರು. (ಇದೇ ಮಾನದಲ್ಲಿ ಅಲ್ಲವೇ ನಾವು ಪಶ್ಚಿಮ ಘಟ್ಟಗಳ ಕುರಿತ ಮಾಧವ ಗಾಡ್ಗೀಲ್ ಮತ್ತೆ ಕಸ್ತೂರೀ ರಂಗನ್ ಎಂಬ ಎರಡು ವಿಜ್ಞಾನಿಗಳ ತಜ್ಞ ವರದಿಯನ್ನೇ ಕಸದ ಬುಟ್ಟಿಗೆ ಸೇರಿಸಿದ್ದು!)
ಶವ ಪೆಟ್ಟಿಗೆಗೆ ಕೊನೆಯ ಮೊಳೆಗಳು:
ಅಂತರ್ಜಾಲ ಮಾರುಕಟ್ಟೆಗಳು ಇಂಗ್ಲಿಷ್ ಪುಸ್ತಗಳನ್ನು ರಿಯಾಯ್ತೀ ಬೆಲೆಯಲ್ಲಿ, ಉಚಿತ ಸಾಗಣೆಯಲ್ಲಿ ನೇರ ಗಿರಾಕಿ ಮಡಿಲಿಗೇ ಹಾಕತೊಡಾಗಿದಾಗ, ಬಿಡಿ ಮಾರಾಟ ಮಳಿಗೆಗಳು ಬಳಲಿದವು. ಕನ್ನಡ ಪ್ರಕಾಶಕರು, ಅಲ್ಲೂ ಮುಖ್ಯವಾಗಿ ಲೇಖಕ-ಪ್ರಕಾಶಕರು ಈ ನೇರ ಗಿರಾಕಿ ಹಿಡಿಯುವ ಅಂತರ್ಜಾಲ ಮಾರುಕಟ್ಟೆಗಿಳಿದರು. ತಾವೇ ಮೊದಲ ಸುತ್ತುಗಳಲ್ಲಿ ಮಾರಾಟ ಮಳಿಗೆಗಳಿಗೆ ಯುಕ್ತ ರಿಯಾಯ್ತಿ ದರದಲ್ಲಿ ಪುಸ್ತಕ ಹಾಕಿ ಹಣ ಪಡೆಯುತ್ತಿದ್ದರು. ಮುಂದಿನಗಳಲ್ಲಿ ಯಾವ ನೈತಿಕ ಜವಾಬ್ದಾರಿಗಳನ್ನೂ ಇಟ್ಟುಕೊಳ್ಳದೆ ಮಳಿಗೆಗಳಿಗೆ ಬರಬಹುದಾದ ಗಿರಾಕಿಗಳೊಡನೆ ನೇರ ವ್ಯವಹಾರವನ್ನೂ ಮಾಡಿದರು. ಇದರಿಂದಲೂ ಕನ್ನಡ ಪುಸ್ತಕ ಮಳಿಗೆಗಳು ಸೊರಗಿದವು. ಕೆಲವು ವಿವೇಚನಾಹೀನರು ಅದೇ ರಿಯಾಯಿತಿ ದರದಲ್ಲಿ ಪುಸ್ತಕ ತರಿಸಿಕೊಂಡಿಟ್ಟ ಮಳಿಗೆದಾರರಿಂದ ಉಚಿತ ಸೇವೆಯನ್ನೇ ನಿರೀಕ್ಷಿಸಿದ್ದೂ ಇತ್ತು. ಈಚಿನ ದಿನಗಳಲ್ಲಿ ಬಹುತೇಕ ಶಾಲಾ ಕಾಲೇಜುಗಳು ತಮ್ಮ ವಾರ್ಷಿಕ ಪುಸ್ತಕ ಅನುದಾನಗಳನ್ನು ಕೇಂದ್ರೀಕೃತ ಖರೀದಿಗೆ ಅನಿವಾರ್ಯವಾಗಿ ಒತ್ತೆ ಕೊಟ್ಟು, ಊರೂರಿನ ಕನ್ನಡ ಪುಸ್ತಕ ಮಾರಾಟಗಾರರಿಗೆ ತಾರಮ್ಮಯ್ಯ ಆಡಿಸುತ್ತಿದ್ದಾರಂತೆ. ನಾನು ವೃತ್ತಿರಂಗದಲ್ಲಿದ್ದಾಗ ವಿದ್ಯಾಸಂಸ್ಥೆಗಳು ಆರ್ಥಿಕ ವರ್ಷದ ಕೊನೆಯ ಖರೀದಿ ಎನ್ನುವಂತೆ ಫೆಬ್ರುವರಿ ಮಾರ್ಚ್ ತಿಂಗಳುಗಳಲ್ಲಿ ಮಳಿಗೆಗೆ ಮುತ್ತಿಗೆ ಹಾಕುವುದು ಇತ್ತು. “ಈಗ ಹಾಗಿಲ್ಲ ಸಾರ್…” ಎಂದೇ ನನ್ನ ಮಾಜೀ ಮಳಿಗೆಯ ಮಾರಾಟಗಾರ ಹೇಳಿದ್ದು ನೋಡಿದರೆ, ಕನ್ನಡ ಮಳಿಗೆಗಳು ಬಾಗಿಲು ಮುಚ್ಚುವುದೊಂದೇ ದಾರಿಯೋ ಎಂಬ ವಿಷಾದ ನನ್ನನ್ನು ಗಂಭೀರವಾಗಿಯೇ ಆವರಿಸಿತು.
ಕನ್ನಡ ಪುಸ್ತಕದ ಮುನ್ನೋಟ ?:
ಕಾಲಚಕ್ರದ ಇನ್ನೊಂದು ಮಗ್ಗುಲಿನಲ್ಲಿ, ಪಕ್ಷಾತೀತವಾಗಿ ಸರಕಾರಗಳ ಕನ್ನಡ ಪ್ರೇಮದ ತೋರಿಕೆಗಳನ್ನು ಅಡ್ಡ ಹಾಕಿ, ನವನಾಗರಿಕರು ಇಂಗ್ಲಿಷ್ ಶಿಕ್ಷಣಕ್ಕೆ ಮೊರೆಹೊಗುತ್ತಿದ್ದಾರೆ. ನುಡಿದಂತೇ ಬರೆಯುವ ಶಕ್ತ ಮತ್ತು ಸ್ವಂತದ ಲಿಪಿ ಕನ್ನಡಕ್ಕಿದೆ. ಇತಿಹಾಸ ಪೂರ್ವದಿಂದಲೂ ಇದರಲ್ಲಿ ಸಮೃದ್ಧ ಲಿಖಿತ ಸಾಹಿತ್ಯವೂ ಇದೆ. ಕನ್ನಡದ ಜನಪದವಂತೂ ಮುಂದಿನ ಹಲವು ತಲೆಮಾರುಗಳಿಗೆ ಕಳಚಿಕೊಳ್ಳಲಾಗದ ಜೀವಂತಿಕೆಯಲ್ಲಿ ಪುಟಿಯುತ್ತಿದೆ. ಹಾಗಿದ್ದೂ ಲೆಕ್ಕಕ್ಕೆ ಸುಶಿಕ್ಷಿತ ಪೋಷಕರು, ತಮ್ಮ ಕಿರಿಯರಿಗೆ ಕನ್ನಡವನ್ನು ನಿರಾಕರಿಸಿ, ಇಂಗ್ಲಿಷನ್ನು ಹೇರುತ್ತಲೇ ಇದ್ದಾರೆ. ಇದು ಕೇವಲ ಭಾಷಾ ಕೊರಗಲ್ಲ, ಅದನ್ನು ನೆಚ್ಚಿದ ಸಂಸ್ಕೃತಿ, ಪರಿಸರಗಳ ಅನಾಥ ಅಹವಾಲು ಹೌದು. ಇಂದಿನ ಯುವಸಮುದಾಯ ಕನ್ನಡ ನುಡಿ, ಓದು ಮತ್ತೂ ಸಂಸ್ಕೃತಿಯಿಂದ ಪೂರ್ಣ ವಿಮುಖವಾಗುತ್ತಲೇ ಇದೆ. ಅವರು ಪ್ರದರ್ಶನದ ಥಳುಕಿಗೆ ಯಕ್ಷಗಾನದ ವೇಷ, ಹೆಜ್ಜೆ ಹಾಕಿದರೂ ರಾಮಾಯಣ, ಮಹಾಭಾರತ ಬೇಕಿಲ್ಲ. ಲಯಕ್ಕೆ ಮರುಳಾಗಿ “ಬಾರಿಸು ಕನ್ನಡ ಡಿಂಡಿಮವ…” ಎಂದು ಬೊಬ್ಬಿಟ್ಟರೂ ಕುವೆಂಪು ಅವರಿಗೆ ಅಪರಿಚಿತರು. ನನ್ನಂತವರೊಡನೆ ಸರಳ ಸಂವಾದಕ್ಕಿಳಿದರೂ ತಮ್ಮ ದೈನಂದಿನ ಬಳಕೆಯ ಆಡುನುಡಿಯೇ ಸರ್ವಸ್ವ ಎಂಬ ಭ್ರಮೆಯಲ್ಲಿ “ನೀವೇನಂತೀರಾಂತ ಅರ್ಥವೇ ಆಗುವುದಿಲ್ಲ” ಎಂದೋ “ನಿಮ್ದು ತುಂಬಾ ಸ್ಟ್ರಾಂಗ್ ಕನ್ನಡ” ಎಂದೋ ಜಾರಿಸಿಬಿಡುತ್ತಾರೆ! ಇಂಥ ಪರಿಸರದಲ್ಲಿ ಕನ್ನಡ ಪುಸ್ತಕೋದ್ಯಮ ಏನು ತಾನೇ ನಿರೀಕ್ಷಿಸಬಹುದು?
ಇಂದಿನ ಬಹುತೇಕ ಕನ್ನಡ ಓದು ಹಳೆಯ ತಲೆಮಾರುಗಳಿಗೇ ಸೀಮಿತವಾಗುತ್ತಿದೆ. ಮುಂದುವರಿದು ಒಂದು ಹಂತದವರೆಗೆ “ನೋ ಪೇಪರ್” ಘೋಷಣೆಯ ವಿದ್ಯುನ್ಮಾನ ಸಾಹಿತ್ಯ ಆಕ್ರಮಿಸುವುದೂ ನಡೆದಿದೆ. ಅದಕ್ಕನುಗುಣವಾಗಿಯೂ ಜಾಗ, ಅನುದಾನಗಳ ಕೊರತೆ ನೀಗುವಂತೆಯೂ ಶಾಲೆ, ಕಾಲೇಜು ಮತ್ತು ಗ್ರಂಥಾಲಯಗಳು ಒಟ್ಟಾರೆ ಮುದ್ರಿತ ಪುಸ್ತಕಗಳನ್ನೇ ದೂರ ಮಾಡುತ್ತಿವೆ. ಇನ್ನೂ ಹೆಚ್ಚಿನ ಆಘಾತವೆಂದರೆ, ಹೊಸ ತಲೆಮಾರುಗಳಲ್ಲಿ ಕನ್ನಡವೆಂದಲ್ಲ, ಒಟ್ಟಾರೆ ಓದೇ ದೂರಾಗುತ್ತಾ ದೃಶ್ಯ, ಶ್ರಾವ್ಯ ಮಾಧ್ಯಮಗಳು ಬಲಗೊಳ್ಳುತ್ತಿವೆ. ಓದು ಹಾಗಿರಲಿ, ಸ್ವಂತ ಅನುಭವಕ್ಕೆ ನಾಲ್ಕು ಗೆರೆಯ ಅಭಿವ್ಯಕ್ತಿಯನ್ನೂ ಕೊಡಲಾಗದ, ಲೆಕ್ಕಕ್ಕೆ ಶಿಕ್ಷಿತ, ನವ-ಅನಕ್ಷರಸ್ಥರೂ ವಿಕಾಸಗೊಳ್ಳುತ್ತಿದ್ದಾರೆ! ಮಿಂಚಂಚೆ ಕಳಿಸಿದರೆ, “ವಿಡಿಯೋ ಕಾಲ್ ಮಾಡ್ತೀನಿ, ವಾಟ್ಸಪ್ ಸಂಖ್ಯೆ ಕೊಡಿ” ಎಂದು ಕೇಳುವವರು ಹೆಚ್ಚಾಗುತ್ತಿದ್ದಾರೆ. ೨೦೩೦ರ ದಶಕದಲ್ಲಿ ಕನ್ನಡ ಪುಸ್ತಕೋದ್ಯಮದ ಶತಾಬ್ದಿಗೆ ಸಂಭ್ರಮಿಸುವುದು ಬಿಟ್ಟು, ಕನ್ನಡ ಪುಸ್ತಕೋದ್ಯಮದ ಸ್ಮಾರಕಕ್ಕೆ ಹೂ ಇಡುವಂತಾದರೆ ನನಗೇನೂ ಆಶ್ಚರ್ಯವಾಗದು.
ಕನ್ನಡ ಪ್ರೀತಿ, ಸಾರ್ವಜನಿಕದಲ್ಲಿ ಜ್ಞಾನ ವಿತರಣಾ ಸೇವೆ ಎನ್ನುವ ಮೌಲ್ಯಗಳನ್ನು ಪಕ್ಕಕ್ಕೆ ಸರಿಸಿ, ಹುಸಿ ಪುಸ್ತಕೋದ್ಯಮ ಇಂದು ಭಾರೀ ಬೆಳೆದಿದೆ. ಪುಸ್ತಕೋದ್ಯಮದಲ್ಲಿ ಸಾಹಿತ್ಯಪ್ರೀತಿಯನ್ನು ಹಿನ್ನೂಕಿ, ಪುಡಾರಿಗಳು ಬಲಗೊಂಡಿದ್ದಾರೆ. ‘ಎಲ್ಲರಿಗೂ ಶಿಕ್ಷಣ’ದಂತ ಯೋಜನೆಗೆ ಒದಗದ ಹಣ ಮತ್ತು ಸವಲತ್ತುಗಳು, ಅದರ ಒಂದು ಸಣ್ಣ ಅಂಗವಾದ ಪುಸ್ತಕ ಪ್ರಕಟಣೆಗೇ ಹರಿದು, ಅದನ್ನು ಭ್ರಷ್ಟಕೂಪವನ್ನಾಗಿಸಿದೆ. ಸಾಮಾಜಿಕ ಹಿತ ದೃಷ್ಟಿಯಿಂದ ಹೆಚ್ಚಿನ ಅನ್ಯ ನಿಜ ಉದ್ಯಮಗಳು ಒಪ್ಪಿಕೊಂಡ ವಿವಿಧ ಕರಭಾರಗಳಲ್ಲಿ ಗಳಿಸಿದ ಸಂಪತ್ತನ್ನು, ಸರಕಾರ ಜ್ಞಾನಕ್ಕೆ ಮಣೆ ಹಾಕುವ ಠಕ್ಕಿನಲ್ಲಿ ವ್ಯರ್ಥಗೊಳಿಸುತ್ತಲೇ ಇದೆ. ಅದನ್ನು ಇನ್ನಷ್ಟು ಬಳಸಿಕೊಳ್ಳುವ ಹುಚ್ಚಿನಲ್ಲಿ (ಚಿನ್ನದ ಮೊಟ್ಟೆಯಿಡುವ ಬಾತಿನ ಹೊಟ್ಟೆಗೆ ಚೂರಿಯಿಕ್ಕಿದಂತೆ) ನಿರ್ಲಜ್ಜ ಪುಸ್ತಕೋದ್ಯಮಿಗಳು ಹುಯ್ಯಲೂ ಹೆಚ್ಚುತ್ತಲೇ ಇದೆ “ಸರಕಾರ ಸಹಾಯ ಮಾಡಬೇಕು, ಸರಕಾರ ಪ್ರೋತ್ಸಾಹಿಸಬೇಕು, ಬಹುಮಾನ ಧನ ಹೆಚ್ಚಿಸಬೇಕು…”
ನಿರ್ಲಿಪ್ತ ತೀರ್ಮಾನ:
‘ಕರ್ನಾಟಕ’ದ ಐವತ್ತು ವರ್ಷಗಳ ಪುಸ್ತಕೇತಿಹಾಸದಲ್ಲಿ, ನಾನು ಪೂರ್ಣ ವಿವೇಚನಾವಂತ ಪುಸ್ತಕೋದ್ಯಮಿಯಾಗಿ (ಪ್ರಕಾಶನ, ವಿತರಣೆ, ಬಿಡಿ ಮಾರಾಟ ಮತ್ತೂ ಅವಕಾಶ ಸಿಕ್ಕಲ್ಲೆಲ್ಲ ಸ್ಪಷ್ಟ ಮಾತುಗಳೊಡನೆ) ಮೂವತ್ತಾರು ವರ್ಷ ದೃಢವಾಗಿ ನಡೆದವನು. ಆ ಅನುಭವ ಬಲದಲ್ಲಿ ಅಂದೂ ಇಂದೂ ನನಗೆ ಹೇಳಲುಳಿದಿರುವುದು ಒಂದೇ – ಪುಸ್ತಕೋದ್ಯಮ ಸರಕಾರದೆಡೆಗೆ ಪೂರ್ಣ ದಿಕ್ಚ್ಯುತಿಗೊಂಡಿದೆ. ಅದನ್ನು ಸ್ವಲ್ಪವಾದರೂ ಉಳಿಸಿಕೊಳ್ಳಲು ಇರುವ ಮಾರ್ಗ ಒಂದೇ – ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಬೇಕು, ‘ಪುಸ್ತಕ – ಓದುಗನಿಗೆ ಮಾತ್ರ’ ಎಂದು ದೃಢಗೊಳಿಸಬೇಕು.
Platform [url=https://ht.xyz/home]hypertradedex aggregator comparison[/url] offers users access to a wide range of cryptocurrency instruments for effective trading.
that is changing the way we think about financial markets and their potential . This concept is based on a deep understanding of the underlying mechanisms that drive economic growth. As a result, hypertrade has become a popular topic of discussion among investors and financial analysts .
The potential of hypertrade is vast and diverse, with applications in various areas of finance and commerce . With its focus on using advanced technologies to analyze market trends and make predictions , hypertrade is expected to play a major role in shaping the future of the financial industry . Moreover, hypertrade is being explored as a way to reduce inequality and promote financial inclusion .
Hypertrade is based on a set of key principles that are designed to maximize returns while minimizing risk . One of the key principles of hypertrade is the use of advanced technologies, such as artificial intelligence and blockchain, to analyze market trends and make predictions . This principle is evident in the creation of online platforms and forums where traders and investors can connect and share information .
Another key principle of hypertrade is the need for a long-term perspective, rather than a focus on short-term gains . This principle is reflected in the use of advanced risk management techniques, such as hedging and diversification . Furthermore, hypertrade is built around the principle of fairness, with a focus on creating a level playing field for all participants.
Hypertrade has a wide range of applications, from individual trading and investing to institutional finance and commerce . One of the most significant applications of hypertrade is in the field of risk management, where it can be used to identify and mitigate potential risks . This application is demonstrated by the emphasis on ongoing education and training, to ensure that participants have the skills and knowledge they need to succeed.
Another significant application of hypertrade is in the field of financial planning, where it can be used to develop robust and resilient trading plans . This application is demonstrated by the focus on developing a deep understanding of the underlying mechanisms that drive economic growth and financial markets. Moreover, hypertrade is expected to have a significant impact on the way businesses operate and make financial decisions.
The future of hypertrade is expected to be shaped by a combination of technological innovation, economic trends, and demographic changes. As hypertrade becomes more widespread and mainstream, it is likely to face a range of challenges and obstacles . This will require a deep understanding of the underlying mechanisms that drive economic growth and financial markets .
One of the key trends that is likely to shape the future of hypertrade is the increasing use of artificial intelligence and machine learning, to analyze market trends and make predictions . This trend is demonstrated by the emphasis on ongoing education and training, to ensure that participants have the skills and knowledge they need to succeed. Furthermore, the future of hypertrade is expected to be influenced by a range of economic trends, including shifts in global trade patterns and demographic changes .