by athreebook | Jan 22, 2011 | ಪರ್ವತಾರೋಹಣ, ಬಿಸಿಲೆ
‘ವನೋತ್ಪತ್ತಿ’ ಎನ್ನುವುದಿಂದು ಭಾರೀ ದಾರಿ ತಪ್ಪಿಸುವ ವಿಷಯವಾಗಿದೆ. ಮೋಪು, ಬೆತ್ತ, ವಿವಿಧ ಹಕ್ಕಿ ಪ್ರಾಣಿ ವೈವಿಧ್ಯಗಳ ಸಂಗ್ರಹ ನಿಷೇಧ ಇಂದು ಹೆಚ್ಚುಕಡಿಮೆ ಎಲ್ಲರೂ ಒಪ್ಪಿದ ವಿಚಾರವೇ. ಆದರೆ ಚಿಗುರು, ಗೋಂದು, ಪತ್ರೆ, ತೊಗಟೆ, ಹೂ, ಕಾಯಿ, ಅಣಬೆ, ಬಿದ್ದ ಮರ, ಸೌದೆ ಮುಂತಾದವುಗಳ ಕುರಿತ ಜಿಜ್ಞಾಸೆ ಪೂರ್ಣ ವಿರಾಮ ಕಂಡಿಲ್ಲ....
by athreebook | Jan 15, 2011 | ಪರ್ವತಾರೋಹಣ, ಬಿಸಿಲೆ
(ಕುಮಾರಪರ್ವತದ ಆಸುಪಾಸು ಭಾಗ ಐದು) “ನೀವು ಕಾಡಿಗೆ ಯಾಕ್ ಬಂದ್ರಿ?” ಕತ್ತು ಮುಚ್ಚುವ ಸ್ವೆಟ್ಟರ್ ಹಾಕಿದ್ದ ಡ್ರೈವರ್ ಪ್ರಶ್ನಿಸಿದ. ಜೀಪಿನ ಹೆದ್ದೀಪ ಕತ್ತಲಮೊತ್ತದಲ್ಲಿ ಆಳದ ಗುಹೆ ಕೊರೆಯುತ್ತಾ ನಮ್ಮನ್ನು ಒಳಗೊಳಗೆ ಒಯ್ಯುತ್ತಿತ್ತು. “ಹೊಳೆ, ಕಾಡು, ಬೆಟ್ಟ ಸುತ್ತುವುದು ನಮ್ಮ ಹವ್ಯಾಸ” ನಾನಂದೆ. ಎದುರು ಇನ್ನೊಂದು ಬದಿಯಲ್ಲಿ...
by athreebook | Jan 7, 2011 | ಬಿಸಿಲೆ, ವನ್ಯ ಸಂರಕ್ಷಣೆ
(ಕುಮಾರಪರ್ವತದ ಆಸುಪಾಸು ಭಾಗ ನಾಲ್ಕು) ಜಿಟಿಜಿಟಿ ಮಳೆ, ಕಾಲೇರುವ ಜಿಗಣೆ, ಎಲ್ಲವನ್ನು ಅಮರಿಸುವಂಥ ದಟ್ಟ ಕಾಡು. ಅದೊಂದು ದಾರಿಯ ಅವಶೇಷ. ಎದುರು ಒಂದು ಸ್ಕೂಟರ್ ಮತ್ತು ಎರಡು ಬೈಕುಗಳು ಗಟ್ಟಿ ನೆಲದಲ್ಲೇನೋ ನಿಂತಿದ್ದವು. ಆದರೆ ಹಿಂದೊಂದು ಜೀಪು, ಪಕ್ಕದ ಮೋಟು ದರೆಯಿಂದ ಕೆಳಗೆ ದಾರಿಗಡ್ಡ ಬಿದ್ದ ಭಾರೀ ಮರವೊಂದರ ಅಡಿಯಲ್ಲಿ...
by athreebook | Dec 30, 2010 | ಕುಮಾರ ಪರ್ವತ, ಪರ್ವತಾರೋಹಣ
ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೩) ಅವಿಭಜಿತ ದಕ ಜಿಲ್ಲೆಯ ಪಾದ ತೊಳೆಯಲು ಅರಬೀ ಸಮುದ್ರವಿದ್ದರೆ ನೆತ್ತಿಯ ಹಸುರಿನ ದಂಡೆ ಪಶ್ಚಿಮಘಟ್ಟ. ಸಹಜವಾಗಿ ಘಟ್ಟದ ಮೇಲಿನ ಕೆಲವು ಜಿಲ್ಲೆಗಳೊಡನೆ ಇವು ಕೆಲವು ಗಿರಿಶಿಖರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಕೊಡಚಾದ್ರಿ ಉಡುಪಿಯದ್ದೆಷ್ಟೋ ಶಿವಮೊಗ್ಗದ್ದೂ ಅಷ್ಟೇ. ವಾಲಿಕುಂಜ, ಕುದುರೆಮುಖ,...
by athreebook | Dec 25, 2010 | ಅನ್ಯರ ಬರಹಗಳು, ವೈಚಾರಿಕ
[ಉಂಡಬತ್ತಿ ಕೆರೆಯ ಸಾಮೂಹಿಕ ಕೊಲೆಯ ಬೊಜ್ಜದೂಟ ಮುಗಿಸಿದ ಮುಖ್ಯ ಮಂತ್ರಿಗಳ ಬಡಬಡಿಕೆಯ ಮುನ್ನೆಲೆಯಲ್ಲಿ ವರ್ಷದ ಹಿಂದೆ ಇಂಥದ್ದೇ ಇನ್ನೊಂದು ಸರಕಾರೀ ಪ್ರಾಯೋಜಿತ ದುರಂತದ ‘ಅಭಿವೃದ್ಧಿ ಕಲಾಪ’ದತ್ತ ಸ್ವಲ್ಪ ಕಣ್ಣು ಹಾಯಿಸುವ ಅವಕಾಶ ನನಗೊದಗಿತು. ಅದನ್ನು ಸಖೇದ ಸಾರ್ವಜನಿಕಗೊಳಿಸುತ್ತಿದ್ದೇನೆ.] ಆಂಧ್ರಪ್ರದೇಶದ ಕರ್ನೂಲಿನ ಮಾಜೀ...