by athreebook | Jun 24, 2010 | ಪರ್ವತಾರೋಹಣ, ರಂಗನಾಥ ಸ್ತಂಭ ವಿಜಯ
ಗಣಪತಿಭಟ್ಟರ ಸ್ವಗತ: “ಊಟಿಗೆ ಬರ್ತೀರಾ” ಅದೊಂದು ದಿನ ಹೀಗೇನೋ ಅಶೋಕರು ಕೇಳಿದರು. ಊಟಿಯ ಆಕರ್ಷಣೆಯಲ್ಲಿ ವಿಳಂಬಿಸದೆ ಒಪ್ಪಿದ್ದೆ. ವಿರಾಮದಲ್ಲಿ ತಯಾರಿ ನಡೆಸಿದ್ದಂತೆ, ‘ಕೆಲಸ’ ಸಣ್ಣದಿರಲಾರದು ಎಂದನಿಸಿತು. ಕನಿಷ್ಠ ರಾತ್ರಿ ಬಸ್ಸಿನಲ್ಲಿ ನಿದ್ರೆಯಾದರೂ ಗಟ್ಟಿ ಮಾಡಬೇಕೆಂದು ನಿರ್ಧರಿಸಿದ್ದೆ. ಬಸ್ಸೇರಿದ ಕೂಡಲೇ ಎಲ್ಲರ ನಿದ್ರೆ...
by athreebook | Jun 21, 2010 | ಯಕ್ಷಗಾನ
“ಪ್ರದರ್ಶನದಲ್ಲಿ ಏನಾದರೂ ಹುರುಳುಂಟೇ ಅಥವಾ ಇದು ಕೇವಲ ನನ್ನೊಬ್ಬನ ಹಳವಂಡವೋ?” ಇದು ತನ್ನ ದೀವಟಿಗೆ ಪ್ರದರ್ಶನದ ಬೆನ್ನಲ್ಲಿ ಸದಾ ರಾಘವ ನಂಬಿಯಾರರು ಕೇಳುತ್ತಿದ್ದ ಪ್ರಶ್ನೆ. ಮನೋಹರ ಉಪಾಧ್ಯರ ಸೂಚನೆಯೊಂದಿಗೆ ನಾವು ಎರಡು ದೀವಟಿಗೆ ಪ್ರಯೋಗಗಳನ್ನು ವಿಡಿಯೋ ದಾಖಲೀಕರಣಕ್ಕಾಗಿಯೇ ಆಡಿಸಿ, ಮಾಡಿಸಿದ ಮೇಲೂ ಉಳಿದದ್ದು ಅದೇ ಪ್ರಶ್ನೆ...
by athreebook | Jun 18, 2010 | ಪರ್ವತಾರೋಹಣ, ರಂಗನಾಥ ಸ್ತಂಭ ವಿಜಯ, ವೈಚಾರಿಕ
(ರಂಗನಾಥ ಸ್ತಂಭ ವಿಜಯ ಭಾಗ -೧) ಇಲ್ಲಿ ನನ್ನ ಲಕ್ಷದ್ವೀಪ ಕಥನ ಸಾಪ್ತಾಹಿಕ ಕಂತಿನಲ್ಲಿ ಸಾಗಿದ್ದಂತೆ ಲೋಕಮುಖದಲ್ಲಿ ಎಂತವರನ್ನೂ ಕಲಕುವ ಅಸಾಮಾನ್ಯ ಘಟನೆಗಳು ಬೆಳೆಯುತ್ತಲೇ ಇದ್ದವು/ ಇವೆ. ಕೆಂಜಾರಿನಲ್ಲಿ ದುಬೈ ಕೂಲಿಕಾರರೂ ಹರಪನಹಳ್ಳಿಯಲ್ಲಿ ಬೆಂಗಳೂರು ಕೂಲಿಕಾರರೂ ದಾರುಣವಾಗಿ ಸುಟ್ಟುಹೋದರು. ದಾಂತೇವಾಡ ಸಾಲದೆಂದು ಬಂಗಾಳದಲ್ಲೂ...
by athreebook | May 31, 2010 | ಪ್ರವಾಸ ಕಥನ, ಲಕ್ಷದ್ವೀಪ ಪ್ರವಾಸ
(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ – ಮುಕ್ತಾಯ) ‘ದುಡ್ಡು ಬಿಸಾಡಿದರಾಯ್ತು, ಒಂದಷ್ಟು ದಿನ ಮಜವಾಗಿ ತಿಂದುಂಡು, ಕುಶಿ ಬಂದಾಗ ಯಾವುದೇ ವಿಶೇಷ ಜವಾಬ್ದಾರಿ ಅಥವಾ ಶ್ರಮವಿಲ್ಲದೆ ಸಿಕ್ಕಿದಷ್ಟನ್ನು ನೋಡಿಕೊಂಡು ಬಂದ’ ಎನ್ನುವ ಧೋರಣೆ ಲಕ್ಷದ್ವೀಪಗಳಿಗೆ ಸಲ್ಲ ಎನ್ನುವುದನ್ನು ನಮ್ಮ ಸ್ನಾರ್ಕೆಲ್ ತಂಡ ಬಲು ದೊಡ್ಡದಾಗಿಯೇ ಸಾರಿ...
by athreebook | May 23, 2010 | ಪ್ರವಾಸ ಕಥನ, ಲಕ್ಷದ್ವೀಪ ಪ್ರವಾಸ
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ – ಭಾಗ ಐದು ಕೊಚ್ಚಿಯ ಉಬ್ಬೆಮನೆಯಿಂದ ಹವಾನಿಯಂತ್ರಿತ ಕವರಟ್ಟಿಯ ತಬ್ಬಿಗೆ ಬರುವಾಗ ಹಾsssss ಎನಿಸಿತ್ತು. ಅಪರಾತ್ರಿಯಲ್ಲಂತೂ ಚಳಿಯೇ ಹಿಡಿದು, ಹಡಗು ಕೊಟ್ಟಿದ್ದ ಚಂದದ ಮಡಿಕೆಯ ರಗ್ಗು ಬಿಡಿಸಿ, ಅದರೊಳಗೆ ನಾವು ಹುಗಿದುಕೊಂಡಿದ್ದೆವು. ಕಲ್ಪೆನಿಯ ಅಸಾಮಾನ್ಯ ಚಟುವಟಿಕೆ ಮತ್ತು ಉರಿಗೆ ಅಂಕದ...