by athreebook | Dec 13, 2009 | ಪುಸ್ತಕೋದ್ಯಮ, ಮೈಸೂರು, ವ್ಯಕ್ತಿಚಿತ್ರಗಳು
ಡಿವಿಕೆ ಮೂರ್ತಿ ಬೀಯೇ ಆನರ್ಸಿನಲ್ಲಿ (ಅರ್ಥಶಾಸ್ತ್ರ) ಸ್ವರ್ಣಪದಕ ಗಳಿಸಿ, ಅಧ್ಯಾಪನ ಮತ್ತು ಸಂಶೋಧನ ಅವಕಾಶಗಳು ಕೈಬೀಸಿ ಕರೆಯುತ್ತಿದ್ದಾಗ, ಸ್ವಇಚ್ಛೆಯಿಂದ ಅವನ್ನೆಲ್ಲ ನಿರಾಕರಿಸಿ, ಸ್ಪಷ್ಟ ವಿಚಾರದೊಡನೆ ಪುಸ್ತಕ ಲೋಕಕ್ಕೆ ಕಾಲಿಟ್ಟವರು. ಇವರು ನನ್ನಲ್ಲೇನು ಕಂಡರೋ ಬಿಟ್ಟರೋ ನನ್ನನ್ನೂ ಪುಸ್ತಕಲೋಕಕ್ಕೆ ತಂದರು. ಪ್ರಥಮ ಎಂಎ...
by athreebook | Dec 7, 2009 | ಅಭಯಾರಣ್ಯ, ದೀವಟಿಗೆ ಪ್ರದರ್ಶನ, ಯಕ್ಷಗಾನ
ಆಹಾಹೋsssss ಹ್ಹೋss ಹ್ಹೋಯ್! ಐದು ತಿಂಗಳ ದೂರದಲ್ಲಿ ಕೇಳಿತೀ ಮೊದಲ ಅಟ್ಟಹಾಸ. ಡಾ| ಮನೋಹರ ಉಪಾಧ್ಯ, ಎರಡು ಯಕ್ಷಪ್ರಸಂಗಗಳ ದೀವಟಿಗೆ ಆಟ ದಾಖಲೀಕರಣದ ಯೋಜನೆಗೆ ಬಣ್ಣ ಬಳಿದು, ವೇಷ ತೊಟ್ಟು, ಗೆಜ್ಜೆ ಕಟ್ಟಿಯಾಗಿತ್ತು! ಈ (ಕೆಲಸದಲ್ಲಿ) ರಾಕ್ಷಸನಿಗೆ ಚಂಡೆ ಮದ್ದಳೆಗಳ ಹಿಮ್ಮೇಳವಷ್ಟೇ ನನ್ನದು. ನನ್ನ ಮಗ (ಸಿನಿ-ನಿರ್ದೇಶಕ)...
by athreebook | Nov 26, 2009 | ಅನ್ಯರ ಬರಹಗಳು, ನಟೇಶ ಉಲ್ಲಾಳ್, ಪರಿಸರ ಸಂರಕ್ಷಣೆ, ವೈಚಾರಿಕ
“ಪರ್ವತಾರೋಹಣ ವನ್ಯಸಂರಕ್ಷಣೆಗಳ ಬಗ್ಗೆ ಮಾತಾಡಿದ ತೀವ್ರತೆಯಲ್ಲಿ ನೀವು ಯಕ್ಷಗಾನವೋ ಇನ್ನೊಂದು ಕಲಾಪ್ರಕಾರದ ಬಗ್ಗೆಯೋ ಮಾತಾಡ್ತೀರಿ. ಅದನ್ನು ಪರಿಸರ ಪ್ರೀತಿ ಎನ್ನಬಹುದು. ಇದು?” ಮಣ್ಣು, ನೀರು, ಗಾಳಿ, ಹಸಿರು, ಜೀವವೈವಿಧ್ಯ ಇತ್ಯಾದಿ ಹೆಸರಿಸುವ ಎಲ್ಲಾ ಪ್ರಾಕೃತಿಕ ಸತ್ಯಗಳು ಮನುಷ್ಯನ ಜೀವ-ಪರಿಸರವನ್ನು ಪೋಷಿಸಿದಷ್ಟೇ ಮುಖ್ಯವಾಗಿ...
by athreebook | Nov 19, 2009 | ಅಭಯಾರಣ್ಯ, ದೀವಟಿಗೆ ಪ್ರದರ್ಶನ, ಯಕ್ಷಗಾನ
ಕೇಳಿ ಹೊಡೆದ್ರೀ, ಸಭಾಕ್ಲಾಸ್ ಕೊಟ್ರೀ, ನಿಜದ ದೀವಟಿಗೆ ಆಟ ಎಲ್ರೀ ಎನ್ನಬೇಡಿ. ಹಾಡು, ಭಾಷಣಗಳನ್ನಾದರೋ ನನ್ನ ಮಿತಿಯ ಲಿಖಿತ ಸಾಹಿತ್ಯದಲ್ಲಿ ಹಿಂದಿನೆರಡು ಕಥಾನಕಗಳಲ್ಲಿ ‘ಸುಧಾರಿಸಿದ್ದು’ ನಿಜ. ಅಂದ ಮಾತ್ರಕ್ಕೆ ಬಹುಮುಖೀ ಯಕ್ಷಗಾನ ಬಯಲಾಟಕ್ಕೆ ನಾನು ನೇರ ನುಗ್ಗುವುದು ಸರಿಯಾಗದು. ಹಾಗಾಗಿ ಅಂದಿನ ಪ್ರದರ್ಶನದ ಕುರಿತು ಸುಧಾ...
by athreebook | Nov 12, 2009 | ಅಭಯಾರಣ್ಯ, ದೀವಟಿಗೆ ಪ್ರದರ್ಶನ, ಯಕ್ಷಗಾನ
ಹೆಸರು ಕ್ಷೀರಸಾಗರ, ಮಜ್ಜಿಗೆಗೆ ಗತಿಯಿಲ್ಲ ಎಂಬಂತೇ ಇತ್ತು ನಮ್ಮ ‘ಅಭಯಾರಣ್ಯ’; ತುಂಡು ನೆರಳಿಲ್ಲ. ಆದರೂ ಪೂರ್ವಾಹ್ನವಿಡೀ ರಣಗುಡುವ ಬಿಸಿಲಿನಲ್ಲಿ, ಕಲ್ಲುಮುಳ್ಳುಗಳ ಪದವಿನಲ್ಲಿ ಕೊನೆಗಳಿಗೆಯ ಸಿದ್ಧತೆಗಳನ್ನು ಮಾಡಿಕೊಂಡೆವು. ದಾರಿಬದಿಗೆ ಅಭಯಾರಣ್ಯದ ಬ್ಯಾನರು ಕಟ್ಟಿದ್ದಾಗಿತ್ತು. ಅಲ್ಲೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ...