ಬಂಡಾಜೆ ಅಬ್ಬಿಯ ತಲೆಯಲ್ಲೊಂದು ರಾತ್ರಿ

ಬಂಡಾಜೆ ಅಬ್ಬಿಯ ತಲೆಯಲ್ಲೊಂದು ರಾತ್ರಿ

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೩) [೧೯೮೦ರ ಪರ್ವತಾರೋಹಣ ಸಪ್ತಾಹದ ಕೊನೆಯ ಕಲಾಪ – ನೀವೇ ಅನುಭವಿಸಿ – ರಾತ್ರಿ ಚಾರಣ ಮತ್ತು ಏರಿಕಲ್ಲು ಏರೋಣ, ಇವುಗಳ ಕೊನೆಯಲ್ಲಿ ಕೇಳಿದ ಸೊಲ್ಲು – ಮತ್ತೆಂದು, ಇಂಥ ಇನ್ನೊಂದು? ಅದಕ್ಕೆ ಸ್ಪಷ್ಟ ಉತ್ತರ ರೂಪದಲ್ಲಿ ನಡೆದ ಒಂದೇ ಸಾಹಸಯಾತ್ರೆಗೆ ಮೂರು ಭಿನ್ನ ಕಥನ ರೂಪ...
ಜೋಗದ ಗಜಾನನ ಶರ್ಮರಿಗೊಂದು ಪತ್ರ

ಜೋಗದ ಗಜಾನನ ಶರ್ಮರಿಗೊಂದು ಪತ್ರ

[ಶರಾವತಿ ಸಾಗರದ ದೋಣಿಯಾನಕ್ಕೆ ನಾನು/ವು ಹೊನ್ನೆಮರಡಿಗೆ ಹೋದ ಕತೆ ನಿಮಗೆಲ್ಲ ಗೊತ್ತೇ ಇದೆ. (ಇಲ್ಲವಾದವರು ನೋಡಿ: ಶರಾವತಿ ಸಾಗರದ ಉದ್ದಕ್ಕೆ..) ಅಲ್ಲಿ ಸಂಘಟಕದ್ವಯರಾದ ಎಸ್.ಎಲ್ಲೆನ್ ಸ್ವಾಮಿ, ನೊಮಿತೊ ಕಾಮ್ದಾರ್ ದಂಪತಿಯ ಪ್ರೀತಿಯಲ್ಲಿ ‘ಪುನರ್ವಸು’ ಕಾದಂಬರಿ ನನಗೆ ಸಿಕ್ಕಿತು. ಮುಂದೆ ಕಾದಂಬರಿ ಓದಿದ ಸಂತೋಷದಲ್ಲಿ ಫೇಸ್ ಬುಕ್...
ಮೂರು ಸಾವಿರ ಕೋಟಿ ನುಂಗಿದ ಸಂಕೇತ….

ಮೂರು ಸಾವಿರ ಕೋಟಿ ನುಂಗಿದ ಸಂಕೇತ….

ಭಾರತದ ಏಕತಾಮೂರ್ತಿ – ಸರ್ದಾರ್ ಪಟೇಲ್ ವಿಗ್ರಹ! (ಸೈಕಲ್ಲೇರಿ ವನಕೆ ಪೋಗುವ- ಮೂರನೇ ಮತ್ತು ಅಂತಿಮ ಭಾಗ) ರಾಜಸ್ತಾನದ ಮೂರು ವನಧಾಮಗಳಲ್ಲಿ ನಾವು ಸೈಕಲ್ ಹೊಡೆದ ಕಥನ – ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ (೨೦೧೮ ಡಿಸೆಂಬರ್), ನೀವೆಲ್ಲ ಓದಿದ್ದೀರಿ. ಆ ಕಥನಾಂತ್ಯದಲ್ಲಿ “……....
ಸದಾಶಿವ ನೀಲಕಂಠನಲ್ಲ!

ಸದಾಶಿವ ನೀಲಕಂಠನಲ್ಲ!

ಆ ಬೆಳಿಗ್ಗೆ (ಸೆಪ್ಟೆಂಬರ್ ೧೧,೨೦೧೯) ಆಕಾಶದಲ್ಲಿ ಮೋಡ ಕಟ್ಟಿದ್ದು ನೋಡಿ ನಾನು ಸೈಕಲ್ ಸರ್ಕೀಟ್ ಕೈ ಬಿಟ್ಟಿದ್ದೆ. ಆದರೆ ಸುಮಾರು ಏಳೂವರೆಯ ಹೊತ್ತಿಗೆ ದೇವಕಿಗೆ ನಳಿನಿಯ ಫೋನ್ ಕರೆ ಬಂತು.”ಅಶೋಕ ಭಾವ ಇದ್ದರೆ, ಕೂಡಲೇ ಬೈಕೇರಿ ನಮ್ಮನೆಗೆ ಬರಲಿ. ಸೈಕಲ್ ಬೇಡ”. ನಾನು ದಡಬಡ ಬಟ್ಟೆ ಬದಲಿಸಿ, ಬೈಕ್ ತೆಗೆಯುವುದರೊಳಗೆ...
ಬಿದಿರ ಸೇತುವೆ ಸರಣಿ…….

ಬಿದಿರ ಸೇತುವೆ ಸರಣಿ…….

ಮೇಘಾಲಯದ ಗಿರಿಕೊಳ್ಳಗಳಲ್ಲಿ – ೫ ಮೋಡಗಳ ನಾಡಿನ ವಾಹ್ಖೆನ್ ಹಳ್ಳಿಯ ಮಹಾಬಂಡೆ, ಮೌರಿಂಗ್ ಖಾಂಗ್, ಜಗದೇಕ ಬಂಡೆಸುಂದರಿಯನ್ನು ಪ್ರೇಮಿಸಿದ. ಆದರೆ ಎಂದಿನಂತೆ ಬಂಡೆಖಳನೊಬ್ಬ ಸುಂದರಿಯನ್ನು ತನ್ನ ವಶಮಾಡಿಕೊಂಡ. ಪರಮಸಾಹಸಿಯಾದ ಮೌರಿಂಗ್ ಖಾಂಗ್ ವೀರಪಂಥವನ್ನೇ ಆಯ್ದುಕೊಂಡ. ಸಂಭವಿಸಿದ ಭೀಕರ ಸಂಗ್ರಾಮದಲ್ಲಿ ಮೌರಿಂಗ್ಖಾಂಗ್ ಎಡಗೈ...
ಪ್ರವಾಸೋದ್ದಿಮೆ ಜಾಲದ ಸಣ್ಣಗೂಢದಲ್ಲಿ…..

ಪ್ರವಾಸೋದ್ದಿಮೆ ಜಾಲದ ಸಣ್ಣಗೂಢದಲ್ಲಿ…..

ಮೇಘಾಲಯದ ಗಿರಿಕೊಳ್ಳಗಳಲ್ಲಿ – ೪ ಫೆಬ್ರವರಿ ಎಂಟರ ಬೆಳಗ್ಗಿನಿಂದ ಹನ್ನೆರಡರ ರಾತ್ರಿಯವರೆಗೆ ಎಲ್ಲರು ಯೂಥ್ ಹಾಸ್ಟೆಲ್ಸ್ ಯೋಜಿಸಿದ್ದ ಕಲಾಪಗಳಲ್ಲೇ ಭಾಗಿಯಾಗಿದ್ದೆವು. ಅದರ ಮೇಲೆ ಒಂದು ದಿನವನ್ನು ಅವರು ನಮ್ಮ ಸ್ವತಂತ್ರ ಓಡಾಟಕ್ಕೂ ಹಾಸ್ಟೆಲ್ಲಿನ ಎಲ್ಲ ಸೌಲಭ್ಯಗಳನ್ನು (ಬುತ್ತಿ ಒಯ್ಯುವ ಆಹಾರ ಸಹಿತ) ಉಚಿತವಾಗಿಯೇ...
ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ……

ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ……

ಮೇಘಾಲಯದ ಗಿರಿಕೊಳ್ಳಗಳಲ್ಲಿ – ೩ ಲಿಕಾಯ್ ಹಾರಿಕೊಂಡ ಕೊಳ್ಳ ಇನ್ನೂ ಭೋರಿಟ್ಟು ಅಳುತ್ತಿದೆ! ಝರಿಯ ಧಾರಾ ಮೊತ್ತದಲ್ಲಿ, ರೋದನದ ತೀವ್ರತೆಯಲ್ಲಿ ಏರಿಳಿತವಿರಬಹುದು. ಹಾಗೆಂದು ಭರಿಸಿ ಸಮಾಧಾನಿಸುವ ಸುವಿಸ್ತಾರ ಹಸಿರು ಕಣಿವೆಯ ಔದಾರ್ಯ, ಮನ ಮಿಡಿದು ಎಲ್ಲೆಲ್ಲಿಂದಲೂ ಕಾಣ ಬರುವವರ ಸಂದಣಿ ಎಂದೂ ಕಡಿಮೆಯಾದದ್ದಿಲ್ಲ. ಮೂರನೇ ದಿನದ...
ಅತಿ ಮೋಹಕ ಜಲಪಾತ್ರೆಯ ಉದ್ದಕ್ಕೆ…..

ಅತಿ ಮೋಹಕ ಜಲಪಾತ್ರೆಯ ಉದ್ದಕ್ಕೆ…..

ಮೇಘಾಲಯದ ಗಿರಿಕೊಳ್ಳಗಳಲ್ಲಿ – ೨ ಲೈಟ್ರಿಂಗ್ಲ್ಯು (Laitrynglew) ಶಿಬಿರತಾಣ – ಶಾಲಾವಠಾರವನ್ನು, ಕಳಚಿಕೊಳ್ಳುವಾಗ ಗಂಟೆ ಎಂಟೂವರೆ ಕಳೆದಿತ್ತು. ಅಂದು ಚಾರಣದಿನ. ಮೊದಲ ಸುಮಾರು ಕಾಲು ಗಂಟೆಯಷ್ಟೇ ನಾವು ಜನವಸತಿಯ ಹಿಂಚುಮುಂಚು ನಡೆದಿದ್ದೆವು. ಹಿಂದಿನ ದಿನ ಬಸ್ ಬಂದಿದ್ದ ಕಾಂಕ್-ಡಾಮರ್ ದಾರಿಯಲ್ಲಿ ನೇರ ಊರಿಗೇ...
ಮೇಘಾಲಯದ ಗಿರಿಕೊಳ್ಳಗಳಲ್ಲಿ

ಮೇಘಾಲಯದ ಗಿರಿಕೊಳ್ಳಗಳಲ್ಲಿ

ಯೂಥ್ ಹಾಸ್ಟೆಲ್ಸ್ ಅನುಸಂಧಾನ – ೧ “ಪ್ರಾಯ ಅರವತ್ತು ಮೀರಿದವರು ಯೂಥ್ ಅಲ್ಲ, ಪ್ರವೇಶ ಇಲ್ಲ” ಎನ್ನುತ್ತದೆ ಯೂಥ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ವೈಎಚ್ಚೇಐ). “ಆದರೆ ಭಾಗಿಗಳ ಸಾಧನೆ, ಚಟುಲತೆ ನೋಡಿ ಯಾರನ್ನೂ ಸ್ವಾಗತಿಸುತ್ತದೆ” ಎಂದು ಗಟ್ಟಿಯಾಗಿ ಹೇಳಿ, ಸುಮಾರು ಆರು ತಿಂಗಳಿಗೂ...
ಕೊಯಂಬತ್ತೂರು ಟಿಪ್ಪಣಿಗಳು

ಕೊಯಂಬತ್ತೂರು ಟಿಪ್ಪಣಿಗಳು

ಮೋಹಕ ಪಯಣ ಕೊಯಮ್ಬತ್ತೂರು ತಮಿಳುನಾಡಿನಲ್ಲಿ ಚೆನ್ನೈಗೆ ಎರಡನೇ ದೊಡ್ಡ ನಗರ ಮತ್ತು ಯಂತ್ರೋಪಕರಣಗಳಿಗೆ ಪ್ರಸಿದ್ಧ ಕೇಂದ್ರ. ಆದರೆ ನನಗಿದು (ತಮ್ಮ ಅನಂತವರ್ಧನ ಮತ್ತು ರುಕ್ಮಿಣಿಮಾಲಾ ದಂಪತಿಗಳ) ಮಗಳು – ಅಕ್ಷರಿ, ಅಳಿಯ – ಮಹೇಶ ಮತ್ತು ಪುಳ್ಳಿ ಆರುಷರ ಹೊಸ ಊರು. ಅವರ ಪ್ರೀತಿಗೆ ನನ್ನ ಹೊಸತೊಂದು ‘ಸಾಹಸ’ ಅಗತ್ಯವನ್ನು...