by athreebook | Apr 3, 2015 | ಪರಿಸರ ಸಂರಕ್ಷಣೆ, ಬೆಂಗಳೂರು, ಸೈಕಲ್ ಸಾಹಸಗಳು
(ಭಾಗ ಒಂದು) ಗಡಿಯಾರದ ಪ್ರತಿ ಮೈಮುರಿತಕ್ಕೂ ಅಲಾರಾಂ ಈಗ ಹೊಡೆಯುತ್ತದೆ, ಗಂಟೆ ಎರಡೂವರೆಯಾಗುತ್ತದೆ, ಏಳಬೇಕು, ಹೊರಡಬೇಕು, ಮೂರೂವರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿನ ಪ್ರಾದೇಶಿಕ ಕಚೇರಿ ಎದುರು ಸೇರಬೇಕು ಎಂಬ ತಹತಹದಲ್ಲಿ ಮೊನ್ನೆ ಶುಕ್ರವಾರ (೧೩-೩-೧೫) ರಾತ್ರಿಯಿಡೀ ನಿದ್ದೆಯಿಲ್ಲ. ಇದು ನನ್ನೊಬ್ಬನ ಭ್ರಮೆಯಲ್ಲ, ಹೆಚ್ಚು...
by athreebook | Mar 27, 2015 | ಇತರ ಸಾಹಸಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು
`ವೈದಿಕ’ ಲೆಕ್ಕಾಚಾರಗಳ ಪ್ರಕಾರ ಮೊನ್ನೆ ೮-೩-೧೫ರಂದು ನನ್ನ ಮರಿಕೆಯ `ಅಣ್ಣ’ನ ವರ್ಷಾಂತಿಕ. ನನ್ನ ತಾಯಿಯ ತಂದೆ, ಅಜ್ಜ ಎ.ಪಿ. ಸುಬ್ಬಯ್ಯನವರ (೧೯೦೧-೧೯೭೭) ಹತ್ತು ಮಕ್ಕಳಲ್ಲಿ ಹಿರಿಯನಾದ್ದಕ್ಕೆ ಎ.ಪಿ.ತಿಮ್ಮಪ್ಪಯ್ಯ (೧೯೨೮-೨೦೧೪) ಮನೆಮಂದಿಗೆಲ್ಲಾ `ಅಣ್ಣ’. ಆತನ ಪ್ರಥಮ ತಂಗಿ, ನನ್ನಮ್ಮ – ಲಕ್ಷ್ಮೀ ದೇವಿ. ಸಂಬಂಧದಲ್ಲಿ...
by athreebook | Mar 13, 2015 | ಪರಿಸರ ಸಂರಕ್ಷಣೆ, ಸೈಕಲ್ ಸಾಹಸಗಳು
ಗೆಳೆಯ ಕಾವೂರು ಪ್ರಸನ್ನನಿಗಿರುವ (ಗೊತ್ತಲ್ಲಾ ಸರ್ವೋ ಕೀಲೆಣ್ಣೆಗಳ ಪ್ರಾದೇಶಿಕ ವಿತರಕ) ಕಲ್ಲೆಣ್ಣೆ ಕಂಪೆನಿಗಳ ಸಂಪರ್ಕ ಬಲದಲ್ಲಿ `ಮಂಗಳೂರು ಬೆಂಗಳೂರು ಸೈಕಲ್ ಓಟ’ಕ್ಕೆ ಕರೆ ಕೊಟ್ಟ. ಮಾರ್ಚ್ ೧೪ ಶನಿವಾರ ಬೆಳೀಈಈಗ್ಗೆ ಶಿರಾಡಿ ದಾರಿಯಲ್ಲಿ ಗುಂಡ್ಯ (೯೩ ಕಿಮೀ). ಅಲ್ಲಿಂದ ಸಕಲೇಶಪುರದವರೆಗೆ ಹೆದ್ದಾರಿ ಬಂದಾಗಿರುವ ಕಾರಣ...
by athreebook | Feb 20, 2015 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
ಕುದುರೆ ಮುಖದಾಸುಪಾಸು – ೯ “ಪದ ಕುಸಿಯೆ ನೆಲವಿಹುದು ಮಂಕುತಿಮ್ಮ” ಮಳೆ ಬಿಟ್ಟ ಬೆಟ್ಟದ ಇಳಿಜಾಡಿನಲ್ಲಂತೂ ಮತ್ತೆ ಮತ್ತೆ ನೆಗ್ಗಿದ ಅಂಡು ಒರೆಸಿಕೊಳ್ಳುವಾಗ ನೆನಪಿಗೆ ಬರುತ್ತಲೇ ಇತ್ತು! ಆದರೂ ಮಳೆ ತೊಳೆದ ಹಸಿರು, ಕಣಿವೆಬಟ್ಟಲ ಅಂಚಿನಲ್ಲಿ ಉಕ್ಕುತ್ತಿದ್ದ ಮೋಡಗಳ ಆಟ ನಮ್ಮನ್ನು ಆಗಾಗ ಮುಖವೆತ್ತಿ ನೋಡುವಂತೆ ಪ್ರೇರಿಸುತ್ತಿತ್ತು....
by athreebook | Feb 6, 2015 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
ಕುದುರೆಮುಖದಾಸುಪಾಸು – ೮ “ಬರುವಾಗ ಆದಿತ್ಯವಾರ ತಡ ರಾತ್ರಿಯಾದೀತು, ಎಂದಿದ್ದ ಸಮೀರ. ಅದು ಬಿಟ್ಟು ಇವತ್ತಿನ (ಸೋಮವಾರ) ಮೊದಲ ಬಸ್ಸುಗಳು ಬಂದ ಮೇಲೂ ಗಂಟೆ ಹನ್ನೊಂದಾದರೂ ತಂಡ ಯಾಕೆ ಬರಲಿಲ್ಲ?” ವಿಠಲ ರಾಯರ ಪ್ರಶ್ನೆ. ಎಂಟೂವರೆಯಿಂದಲೇ ಅಂಗಡಿ ತೆರೆಯಲು ಕಾದಿದ್ದ ಪ್ರಕಾಶ (ನನ್ನ ಅಂದಿನ ಸಹಾಯಕ) ಆಕಾಶ ನೋಡಿದ. [ಅವನಿಗೇನು ಗೊತ್ತು...
by athreebook | Jan 30, 2015 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
ಕುದುರೆಮುಖದಾಸುಪಾಸು – ೭ ಬೆಟ್ಟ ಹತ್ತುವಲ್ಲಿನ ಏಕಲಕ್ಷ್ಯ ಇಳಿಯುವಾಗ ಸಾಮಾನ್ಯವಾಗಿ ಉಳಿದಿರುವುದಿಲ್ಲ. ಅಂದು (೨೦೧೪) ಬೆಳಗ್ಗಿನ ತಿಂಡಿಯನ್ನು ತಡವಾಗಿ ತಿಂದದ್ದಕ್ಕೆ `ಮಧ್ಯಾಹ್ನದ ಊಟ’ ಎಂಬ ಬಿಡುವು ಬೇಕಿರಲಿಲ್ಲ. ಇಗರ್ಜಿ, ಹಿಂದಣ ಶಿಬಿರತಾಣಗಳ ಆಕರ್ಷಣೆ ಬಿಟ್ಟು ಶಿಖರದಲ್ಲೇ ಸಾಕಷ್ಟು ಸಮಯ ಕಳೆದುದರಿಂದ ಬಂದ ದಾರಿಯಲ್ಲೇ ಹಿಂದೆ...