ಹೋಗಿ ಬರುವೆ ಶರಾವತಿ

ಹೋಗಿ ಬರುವೆ ಶರಾವತಿ

(ಶರಾವತಿ ಸಾಗರದ ಉದ್ದಕ್ಕೆ ಕೊನೆಯ ಅರ್ಧ) ಬುತ್ತಿಯೂಟ ಮುಗಿಸಿದ್ದೇ ಹಿತ್ತಲಿನ ಗುಡ್ಡೆಯತ್ತ ಪಾದ ಬೆಳೆಸಿದೆವು. ಗುಡ್ಡೆಯ ಮೇಲೆ ಅಡ್ವೆಂಚರ್ ಬಳಗದ್ದೇ ಹೆಚ್ಚುವರಿ ವಾಸದ ಕಟ್ಟಡಗಳು ಕಾಣಿಸಿದವು. ಅಡ್ವೆಂಚರರ್ಸಿನಲ್ಲಿ ಜಲಕ್ರೀಡೆಗಳಲ್ಲದೆ ಚಾರಣ ಶಿಬಿರಗಳೂ ನಡೆಯುತ್ತವೆ. ನೆಲದ ಸತ್ವ ಬೆಳಗುವಂತೆ ಜನಪದ, ಮಹಿಳಾಪರ ಮುಂತಾದ ವಿವಿಧ...
ಶರಾವತಿ ಸಾಗರದ ಉದ್ದಕ್ಕೆ

ಶರಾವತಿ ಸಾಗರದ ಉದ್ದಕ್ಕೆ

(ಮೊದಲ ಅರ್ಧ – ಪ್ರಥಮ ಚುಂಬನೇ….) ಶರಾವತಿಯ ಕೆಳಪಾತ್ರೆಯಲ್ಲಿ ಲಿಂಗನಮಕ್ಕಿ ಅಣೆಕಟ್ಟು (೧೯೬೪) ಬಂದಾಗ ಹಿರೇಭಾಸ್ಕರ ಅಣೆಕಟ್ಟು (೧೯೪೮) ಮುಳುಗಿತು. ಸಹಜವಾಗಿ ಇದು ಮತ್ತಷ್ಟು ಕಣಿವೆ ಬಯಲುಗಳಿಗೂ ತನ್ನ ಹಿನ್ನೀರ ಸೆರಗನ್ನು ಹಾಸಿತ್ತು. ಕಟ್ಟೆ ಪೂರ್ಣ ತುಂಬಿದ (೧೮೧೯ ಅಡಿ) ದಿನಗಳಲ್ಲಿ ‘ಶರಾವತಿ ಸಾಗರ’ದ ವ್ಯಾಪ್ತಿ...
ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….

ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….

ಅದೊಂದು ಶುಕ್ರವಾರ “ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್” ಎಂದು ಸೈಕಲ್ ಗೆಳೆಯ ಅನಿಲ್ ಶೇಟ್ ಕೇಳಿದ್ದರು. ನಾನು ಎಂದೋ ಯೋಚಿಸಿಟ್ಟಂತೆ “ಶೆರಿ, ಶಿರಿಯಾಕ್ಕೆ ಶಲೋ…” ಎಂದುಬಿಟ್ಟೆ. ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ, ಉಚ್ಚಿಲಾದಿ ನದಿಗಳನ್ನು ಕಂತುಗಳಲ್ಲಿ ತೇಲಿ...
ಫಲ್ಗುಣಿ – ಒಂದು ನದಿಯ ಅವಹೇಳನ ದರ್ಶನ

ಫಲ್ಗುಣಿ – ಒಂದು ನದಿಯ ಅವಹೇಳನ ದರ್ಶನ

ಮಂಗಳೂರಿನ ನಾವು ನಾಲ್ಕೈದು ದೋಣಿಮಿತ್ರರು ಮಳೆಗಾಲ ತಗ್ಗುವುದನ್ನು ಕಾದಿದ್ದೆವು. ನಾವಿನ್ನೂ ಕಡಲಿಗಿಳಿಯುವ ಕಲಿಗಳಲ್ಲ, ನದಿಗಳಲ್ಲೂ ಮಳೆಗಾಲದ ಸೆಳವು, ಸೆಡೆತಗಳೊಡನೆ ಸೆಣಸುವ ಸಾಹಸಿಗಳೂ ಅಲ್ಲ. ಸಣ್ಣದಕ್ಕೆ ಬಡಕಲು ಫಲ್ಗುಣಿ ನದಿಯನ್ನು ಆಯ್ದುಕೊಂಡೆವು. ಸುಲ್ತಾನ್ ಬತೇರಿಯಿಂದ ಕೂಳೂರು, (ಸ್ವಚ್ಛಭಾರತದಲ್ಲಿ ನಮ್ಮ ಹೊಳೆಗಳಿಲ್ಲವೇ?)...
ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!

ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!

ಮೊನ್ನೆ ಗೆಳೆಯ ವೆಂಕಟ್ರಮಣ ಉಪಾಧ್ಯರು “ಇದೊಂದು ವಿಚಿತ್ರ ನದಿ ನೋಡಿ ಮಾರಾಯ್ರೇ. ಜನರ ಹುಚ್ಚಾಟವನ್ನಿದು ಮನ್ನಿಸಿ, ಮತ್ತೆ ಮತ್ತೆ ಸಂಭ್ರಮಕ್ಕೆ ಅವಕಾಶ ಕೊಡುತ್ತಲೇ ಇದೆಯಂತೆ!” ಎಂದು ಈ ಸೇತು ಕೊಟ್ಟರು: ನಾನು ನೋಡಿದೆ, ನಿಸ್ಸಂದೇಹವಾಗಿ ಸಂತೋಷಪಟ್ಟೆ. ಆದರೆ ಮರುಕ್ಷಣಕ್ಕೆ ಉದ್ಗರಿಸಿದ್ದಿಷ್ಟೇ “ಅಯ್ಯೋ ಇದು...
ಫಲ್ಗುಣಿಯ ಮೇಲೊಂದು ಪಲುಕು…..

ಫಲ್ಗುಣಿಯ ಮೇಲೊಂದು ಪಲುಕು…..

ಯಾರೇ ವಿಚಾರಿಸಿದಾಗ, ನನ್ನ ವಾಹನಪಟ್ಟಿಯಲ್ಲಿ ನಾನು ಮರೆಯದೆ ಸೇರಿಸುವ ಹೆಸರು ‘ದೋಣಿ.’ ಆದರೆ ಒಳಗೊಳಗೇ “ಅದರ ಬಳಕೆ ಮಾತ್ರ ಕಡಿಮೆ” ಎಂಬ ಕೀಳರಿಮೆ ನನ್ನನ್ನು ಬಿಟ್ಟದ್ದೂ ಇಲ್ಲ. ಅದನ್ನು ಸ್ವಲ್ಪವಾದರೂ ಹೋಗಲಾಡಿಸುವಂತೆ ನಮ್ಮ ‘ಅನಾಮಧೇಯ ಕಯಾಕೀ ಸಂಘ (ಅನೋಂ)’ದೊಳಗೆ ‘ಆದಿತ್ಯವಾರ (೨೯-೪-೧೮) ಕೂಳೂರು –...