ಜಯಂತರಿಗೊಂದು ನುಡಿ ನಮನ

ಜಯಂತರಿಗೊಂದು ನುಡಿ ನಮನ

“ನಾನು ಜಯಂತ್+ಅ, ಜಯಂತ! ಏಗ್ನೆಸ್ (ಮಹಿಳಾ) ಕಾಲೇಜಿನ ಕೆಮಿಸ್ಟ್ರಿ ಅಧ್ಯಾಪಕ. ನಮ್ಮದು ಮಹಿಳಾ ಕಾಲೇಜಾದ್ದರಿಂದ ಬರಿಯ ಹೆಸರು ಕೇಳಿದವರು ‘ಜಯಂತಿ’ ಮಾಡಿಬಿಡ್ತಾರೆ…” ಎಂದು ನನ್ನಂಗಡಿಯ ಹೊಸ ಕಾಲದಲ್ಲಿ ಬಂದಿದ್ದವರು (೧೯೭೬ರ ಸುಮಾರಿಗೆ) ಮುಕ್ತ ನಗೆಯೊಡನೆ, ನಾಲ್ಕು ಹನಿ ಕಣ್ಣೀರು ಒರೆಸಿಕೊಳ್ಳುತ್ತ...