ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು

ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು

ಎ.ಪಿ. ಗೌರೀಶಂಕರ ಇನ್ನಿಲ್ಲ – ೧ ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ ಸೋದರ ಮಾವ ಎ.ಪಿ. ಗೌರೀಶಂಕರ (ಶ್ರೀಶೈಲ) ಹಾಗೂ ನನ್ನ (ಅಭಯಾದ್ರಿ) ಮನೆಗಳು ಸ್ವತಂತ್ರವೇ ಇದ್ದರೂ ರೂಢಿಯಲ್ಲಿ ಒಂದೇ ವಠಾರ ಎಂಬಂತೇ ಇವೆ. ಎರಡೂ ಮನೆಗೆ ನಂದಿನಿ ಹಾಲು ತಂದು ಕೊಡುವ ಜವಾಬ್ದಾರಿ ನನ್ನದು....
ಒಡವೆ ಇದ್ದೂ ಬಡವೆ!

ಒಡವೆ ಇದ್ದೂ ಬಡವೆ!

ಯಕ್ಷಗಾನ ಕಲಾರಂಗ, ಉಡುಪಿ ತನ್ನ ನಲ್ವತ್ತನೇ ವಾರ್ಷಿಕೋತ್ಸವವನ್ನು ಪ್ರಥಮ ಬಾರಿಗೆ ಉಡುಪಿಯಿಂದ ಹೊರಗೆ, ಅದೂ ಕರ್ನಾಟಕದ ರಾಜಧಾನಿಯಲ್ಲೇ ನಡೆಸುವುದಿತ್ತು. ಹಿಂದೆ ಅವರ ಕೆಲವು ಉಡುಪಿ ವಾರ್ಷಿಕೋತ್ಸವಗಳಿಗೆ ನಾನು ಹಾಜರಿ ಹಾಕಿದ್ದಿದೆ. ಆದರೆ ಈ ಬಾರಿ ಬೆಂಗಳೂರೆಂದ ಕೂಡಲೇ ನಾನು ಆಸಕ್ತಿ ಕಳೆದುಕೊಂಡೆ. ಯಕ್ಷಗಾನ ಕಲಾರಂಗ ಸಾರ್ವಜನಿಕ...
ಸುದರ್ಶನೋಪಖ್ಯಾನ

ಸುದರ್ಶನೋಪಖ್ಯಾನ

‘ಸಾಧ್ಯೋ ನಾರಾಯಣೋ ಹರಿ:’ ಎಂಬ ಘೋಷ ಉಕ್ತಿಯೊಡನೆ ಕಟೀಲಿನಲ್ಲಿ ಆಯೋಜಿತವಾದ ತಾಳಮದ್ದಳೆ ಸಪ್ತಾಹದಲ್ಲಿ ೨೦-೬-೨೦೧೩ರಂದು ಸುದರ್ಶನೋಪಖ್ಯಾನ ಎಂಬೊಂದು ಕಥಾನಕಕ್ಕೆ ನಾನು ಸಾಕ್ಷಿಯಾಗಿದ್ದೆ. ನನ್ನ ರಸಿಕ ಮನಸ್ಸು ಮತ್ತು ಕೈಯಲ್ಲಿದ್ದ ಪುಟ್ಟ ಸ್ಥಿರ ಕ್ಯಾಮರಾವನ್ನು ಪ್ರದರ್ಶನದ ಉದ್ದಕ್ಕೂ ಚುರುಕಾಗಿಟ್ಟಿದ್ದೆ. ಹಾಗೆ ನಾನು ಗ್ರಹಿಸಿದ...
ದೊಂದಿಯಲ್ಲಿ ಬೆಂದ ಯಕ್ಷಗಾನ

ದೊಂದಿಯಲ್ಲಿ ಬೆಂದ ಯಕ್ಷಗಾನ

ಇತಿಹಾಸವನ್ನು ತಿಳಿಯದವನು ಪುನರಪಿ ಅನುಭವಿಸುತ್ತಾನೆ ಎಂಬರ್ಥದ ಮಾತು ಆ ಮೂರೂ ಗಂಟೆ ಮತ್ತೆ ಮತ್ತೆ ನನ್ನ ತಲೆಗೆ ಬರುತ್ತಲೇ ಇತ್ತು. ಸಂದರ್ಭ – ಪಣಂಬೂರಿನಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಇವರ ದೊಂದಿ ಬೆಳಕಿನ ಬಯಲಾಟ. ಮೊದಲ ಪ್ರಸಂಗ – ದುಶ್ಶಾಸನ ವಧೆ. ಅಚ್ಚ ಬಿಳಿ ಬಣ್ಣದ ಕಾಂಕ್ರಿಟ್...
ತೆಂಕು ತಿಟ್ಟಿಗೊಂದು ಶಾಲೆ ಬರಲಿ

ತೆಂಕು ತಿಟ್ಟಿಗೊಂದು ಶಾಲೆ ಬರಲಿ

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ (ಕಲ್ಲುಗುಂಡಿ), ಇದು ಹಲವು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಸುತ್ತಿರುವ ಯಕ್ಷೋತ್ಸವ ಬಲು ದೊಡ್ಡ ಕಲಾವಿದರ ಕೂಡುವಿಕೆಯಲ್ಲೂ ಎಲ್ಲೆಲ್ಲಿಂದಲೋ ಬರುವ ಪ್ರೇಕ್ಷಕರಿಂದಲೂ ಬಹುಖ್ಯಾತವಾಗಿದೆ. ಈ ಪ್ರತಿಷ್ಠಾನದಂತೆಯೇ ಇದರ ಅಘೋಷಿತ ಸಹವ್ಯವಸ್ಥೆಗಳು ಮಂಗಳೂರು ಬಳಿಯ ಕೈರಂಗಳದಲ್ಲೂ...