ದಿಡುಪೆ ದುರಂತದ ಪ್ರತ್ಯಕ್ಷದರ್ಶನ

ದಿಡುಪೆ ದುರಂತದ ಪ್ರತ್ಯಕ್ಷದರ್ಶನ

ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ – ಮುಕ್ಕಾಲು ಗಂಟೆಯಷ್ಟೇ ಬಂತು – ಮೇಘಸ್ಫೋಟದಂಥ ಮಳೆ. ಚಾರ್ಮಾಡಿಯಿಂದ ದಿಡುಪೆಯವರೆಗಿನ ವಲಯಕ್ಕಷ್ಟೇ ಮಿತಿಗೊಂಡ ಬಾನಬೋಗುಣಿ ಕವುಚಿದಂತಹ ಈ ನೀರು ನಡೆಸಿದ ಉತ್ಪಾತಗಳು ಸಾಮಾನ್ಯ ಲೆಕ್ಕಕ್ಕೆ ಸಿಗುವಂತದ್ದಲ್ಲ. ಅದರ ಸಣ್ಣ ನೋಟವಾದರೂ ನಮಗೊಂದು...