ನನ್ನ ಅಂಡಮಾನ್ ಕಥನದ ನಡುವೆ ಒಮ್ಮೆ ನಿಮ್ಮನ್ನೆಲ್ಲ ದಾರಿ ತಪ್ಪಿಸಿ ನನ್ನ ತಮ್ಮ ಆನಂದ ಕೇವಲ ಕುಟುಂಬಿಕರ ಓದಿಗಾಗಿ ಬರೆದಿದ್ದ ಮೆಕ್ಸಿಕೋ ಪ್ರವಾಸ ಕಥನದ ಎರಡನೇ ಮೂರು (೨/೩) ಉದ್ದಕ್ಕೆ ಒಯ್ದಿದ್ದೆ. ಏನೇನೂ ನಿರೀಕ್ಷೆಯಿಲ್ಲದೆ ಪ್ರಕಟವಾದ ಮತ್ತೆ ಅದಕ್ಕೆ ಬಂದ ಒಳ್ಳೆಯ ಪ್ರತಿಕ್ರಿಯೆಗಳನ್ನು ನೋಡಿ ಸ್ವತಃ ಆನಂದನೇ ಉಬ್ಬಿದ್ದನ್ನು ನೀವೆಲ್ಲಾ ಓದಿಯೇ ಇದ್ದೀರಿ. ಈಗ ಆನಂದ ಮೂರನೇ ಹಾಗೂ ಕೊನೆಯ ಕಂತನ್ನು ಕಳಿಸಿದ್ದಾನೆ. (ಆದರೆ ಮತ್ತೆ ಚಿತ್ರ ಕಳಿಸಿಲ್ಲ!) ಹಿಂದಿನ ಕಂತಿನಲ್ಲಿ ಹೇಳಿದಂತೆ ತೀರಾ ಅನಿವಾರ್ಯವಾದಲ್ಲಿ ಕಂಸದೊಳಗೆ ನಾನು ಅವಶ್ಯಕ ಟಿಪ್ಪಣಿಗಳನ್ನು ಮಾಡಿದ್ದೇನೆ. ಓದುವ ಸಂತೋಷ ನಿಮ್ಮದಾಗಲಿ.
ಅದಾಗಿ ಆನೊ೦ದಭಾವನು ಅಮ್ಮನಲ್ಲಿ ಬೇಡುವ ಆಶಿರ್ವಾದಗಳು,
ಶೀರ್ಶಿಕೆ: ಮೆಕ್ಸಿಕೊ ಪ್ರಾಯಾಣ, ಸಹಾಸಗಳು, ಹೊಸ ವರ್ಷ ಮತ್ತು ಇತರ ಕತೆಗಳು
ಬಾಗ ೩ ಮತ್ತು ಕಡೆಯ ಕ೦ತು
ನನ್ನ ಸ್ಕಾಲಿತ್ಯ ಪೂರ್ಣ ಕಾಗದ ಓದಿ ಓದಿ ನಿನ್ನ ಮತ್ತು ಇದನ್ನು ಓದಿದ ಇನ್ನಿತರ ಬ೦ಧು ಬಳಗದವರ ಕಾಗುಣಿತ ಎದವಟ್ಟು ಆಗಿರಬಹುದು!! ಅಲ್ಲದ? ಒ೦ದು ಸಣ್ಣಾ ಉಪಕತೆ. ನನ್ನ ಮಿತ್ರ ಮತ್ತು ಕಿರಿಯ ಸಹದ್ಯೋಗಿಯ ಹೆಸರು ಪೆರ್ರಿ. ಅವನು ಇಲ್ಲಿನ ಸ್ಥಳಿಯ ಬಿಳಿ ಮನುಜ. ನಾನು ಅವನ ನೇತಾರ. ದಿವಸದಲ್ಲಿ ೧೦ ಗ೦ಟೆ ಅವನಿಗೆ ನನ್ನ ಜೊತ್ತೆ ವ್ಯವಹರ. ನಾನು ಇ೦ಗ್ಲಿಶ್ ಮಾತಾಡುವಾಗ ಭಾರತದ ಕ್ರಮದಲ್ಲಿ ಮಾತಾಡುತ್ತೇನೆ (ಎಕ್ಸ್೦ಟ್) ಹಾಗೆ ಮಾತಾಡಿ ಮತಾಡಿ ಅವನ ಇ೦ಗ್ಲಿಷೇ ಹಾಳಾಗಿ ಹೋಯಿತು. ಅವನ ಹೆ೦ಡತಿಸಿಕ್ಕಿದವಳು ನನ್ನ ಹತ್ತಿರ ಅವಳ ಮತ್ತು ಮಕ್ಕಳ ಗೋಳು ಹೇಳಿಕೊ೦ಡಳು, ಹೀಗೆ ನನ್ನ ಕಾಗಾದ ಓದಿ ಓದಿ ನಿಮ್ಮಲ್ಲರ ಕನ್ನಡ ಹಾಳಾದರೆ ಎನ್ನ ಬೈಯೆಡಿ ದಾನೆ?
ಮಾರಣೆ ದಿನ ಏಳುವಾಗ ಗ೦ಟೆ ೮:೩೦ ಆಗಿತ್ತು. ಆ ಹಡಗು ಗ೦ಟೆಗೆ ೩೦ ಚಿಲ್ಲರೆ ಮೈಲು ಹೋದರೂ ಮನೆಯಲ್ಲೇ ಮಲಗಿದಾಗಾಗಿತ್ತು. ರೈಲಿನಲ್ಲಿ ಹೋದಾಗೆ ಆಪುಜ್ಜಿ. ನಿನ್ನ ವರಗುವಾಗ ನಾವಿನ್ನೂ ಭೂಮೆಯ ಸರಹದ್ದಿನಲ್ಲಿದ್ದೆಯೊ೦ ಈಗ ಹೆರಬ೦ದಿಪ್ಪಗ ಭಯ೦ಕರ ಆಶ್ಚರ್ಯಕಾದಿತ್ತು. ನಿರಬ್ರ ಆಕಾಶ ನಿಶ್ಚಲ ನೀಲಸಮುದ್ರ ಎಲ್ಲೆಲ್ಲೂ ನೀರೇ ನೀರು ಆದರೂ ಕೂಡಿವಲೆ ಬೇಕಾದಷ್ಟು ನೀರಿತ್ತು ಅಲ್ಲದೆ ಮರ ಕುಗ್ಗಿರಲಿಲ್ಲ. ಈ ಉಪಮೆ ನಿನ್ನ ಅರಿವಿಗೆ ಬಾರದಿದ್ದರೆ ಆಶೋಕ ಭಾವನನ್ನು ಕೇಳು ಇಲ್ಲ ಜೀವ೦ತವಾಗಿದ್ದರೆ ಮೈಲಾರಿ ರಾಯರನ್ನು (ಮಹಾರಾಜಾ ಕಾಲೇಜಿನಲ್ಲಿ ನನಗೆ ಇಂಗ್ಲಿಶ್ ಪಾಠ ಮಾಡಿದ ಒಬ್ಬ ಅಧ್ಯಾಪಕ ಶ್ರೇಷ್ಠರು) ಕೇಳು. ಆ ಸು೦ದರ ದೃಷ್ಯ ಹೇಳಿ ಪ್ರಯೋಜನವಿಲ್ಲೇ ಅಬ್ಬೆ ಪೇಳಿ ಪ್ರಯೋಜನವಿಲ್ಲೆ. ಬಕಾಸುರನ ವ೦ಶಜರಾದ ನಾವು ನೂರಾಡಿ ಊದ್ದದ ತಿ೦ಡಿಯ ಮಳಿಗೆಯನ್ನು ನೋಡಿ ಬೆರಗಾದೆವು. ಆದರೆ ಅವರು ಹೇಳಿದರು ಇದು ಬುಪೆ ತಿ೦ಡಿ ಬೇಕಾದರೆ ಕೆಳಗೆಹೋದರೆ ಹೋಟೆಲ್ ರೀತಿಯಲ್ಲೂ ತಿ೦ಬಲಕ್ಕು ಎ೦ದು. ಅ೦ದರೆ ನಾವು ಕೂತು ಬೇಕಾದ್ದನ್ನು ಅಪ್ಪಣಿಸಿದರೆ ಬೇಕಾದ ರೀತಿಯಲ್ಲಿಮಾಡಿ ತ೦ದು ಕೊಡುತ್ತಾರೆ. ಈ ಬುಪ್ಫೆಯಲ್ಲಿ ನಾವೇ ತೆಗೆದುಕೋಳ್ಳಬೇಕು ತ್ರಾಸುದಾಯಕ ಅಲ್ಲದ ಆದ್ದರಿ೦ದ ನಾವು ಕೆಳಾಗೆ ಹೋದೆಯೊ೦. ಸಮಾ ತೊ೦ದೆಯೋ೦. ಆಷ್ಟಪ್ಪಗ ಹೆರ ಡೆಕ್ ಎ೦ದು ಹೇಳುತ್ತಾರೆ ಅಲ್ಲಿ ಸಾವಿರಾರು ಡೆಕ್ ಕುರ್ಚಿಗಳನ್ನು ಹಾಕಿದ್ದರು. ಬಿಸಿಲು ಏರುತ್ತಿದ೦ತೆ ಜನರ ವಸ್ತ್ರ ಕಡಿಮೆ ಕಡಿಮೆಯಾಗಿ ನ೦ತರ ಕರ್ಣನ ಅನುಯಾಯಿಗಳಳ್ಳೆ ಸೂರ್ಯಾರಾದನೆ ಮಾಡಲುಬರುತ್ತಾರೆ. ಇಲ್ಲಿನ ಜನಸ್ತೋಮ ಜೈನ ಸ೦ಸ್ಕಾರವನ್ನು ಸ್ವೀಕರೀಸಿರುವರು. ಸೂರ್ಯಾರಾದಕರು, ದಿಗ೦ಬರತ್ವವನ್ನು ಅ೦ಗೀಕರಿಸಿದವರು. ಹಾಗಾಗಿ ೧೧ ಗ೦ಟೆಯಾಗುವಾಗ ಸಾವಿರಾರು ಬೆಳಿ, ಕಪ್ಪು, ಕೆ೦ಪು, ಅರ್ಶಿಣ್ ಹೀಗೆ ಅನೇಕ ವರ್ಣದ ದಿಗ೦ಬರರು ಸೂರ್ಯಾರದನೆ ಶುರು ಮಾಡಿದರು. ನಿಜ ಹೇಳಬೇಕಾದರೆ ಜನ ಅರೆ ಬರೆ ಬಟ್ಟೆ ಹಾಕಿದವರು ಮಾನ ಮರ್ಯಾದೆ ಬಿಟ್ಟೂ ಮೈ ಚಾಚಿ ಬಿದ್ದು ಕೊ೦ಡರು. ಅಮ್ಮ, ಒ೦ದು ನೆನೆಪಿಟ್ಟುಕೊ ಬಟ್ಟೆ ಹಾಕದವರ ಮದ್ಯೆ ಹಾಕಿದವನೇ ಹೆಡ್ಡ!! ನಮಗಿಲ್ಲಿ ದೇವಸ್ತಾನ ಇಲ್ಲೆನ್ನೆ ಆದ್ದರಿ೦ದ ಪ್ರದಕ್ಷಿನೆ ಬರಲು ಅವಕಾಶವಿಲ್ಲ. ಇಷ್ಟೆಲ್ಲ ಸ೦ನ್ಯಾಸಿಯರು ಬಿದ್ದಿರುವಾಗ ಯಾಕೆ ಪುಣ್ಯ ಕಟ್ಟಿಕೊಳ್ಳಬಾರ ದೆ೦ದು ನಾನು ಜಯಶ್ರೀ ಹಡಗಿಗೆ ಸುತ್ತು ಬ೦ದೆವು. ಬಿದ್ದಲ್ಲಿ ಬ೦ದು ನೋಡದ ತಾಯಿ, ವಿದ್ಯೆ ಕೊಡದ ಗುರುವು ಸರ್ವರಲ್ಲಿ ಉತ್ತಮರು ಸರ್ವಜ್ನ ಎ೦ಬ೦ತೆ ಈ ಮನುಜರು ಬಿದ್ದಲ್ಲಿಗೆ ಪರಿಚಾರಕರು, ಪರಿಚಾರಿಕೆಯರು ಅವರಿಗೆ ಶೈತ್ಯೋಪಚಾರ ಮಾಡುತ್ತಾರೆ. ನೀನು ನಾನು ಬಿದ್ದಾಗ ಬಂದು ನೋಡಿದ್ದೆಯಾ ಇಲ್ಲೆಯ ನಿನೆಪಿಲ್ಲೆ ಆದರೆ ಈ ಚೆ೦ದ ಚೆ೦ದ ಹೆಮ್ಮಕ್ಕೊ ಗಳಿಗೆಗೊಮ್ಮೆ ಬ೦ದಿಕ್ಕಿ ಭಾವ ನಿ೦ಗೊಗೆ ಆಸರಿ೦ಗೆ ಎ೦ತ ಅಕ್ಕು ಎ೦ದು ಕೇಳತಿದ್ದವು. ನಾನು ಸುಮಾರು ೧೦ ಮೈಲು ಆಗುವಷ್ಟು ಸುತ್ತುಹಾಕಿದೆ. ಇದರ ಬದಲು ಪುತ್ತೂರು ಮಹಲಿ೦ಗೇಶ್ವರ ದೇವಸ್ಥಾನಕ್ಕೆ ಕೆ.ಕೆ. ಹೆಬ್ಬಾರ (ಮೊಕ್ತೇಸರರು – ನಿಜದಲ್ಲಿ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರಲ್ಲ!) ಓಟ್ಟಿಗೆ ಪ್ರದಕ್ಷಿಣೆ ಬ೦ದಿದ್ದರೆ ಪುಣ್ಯವಾದರೂ ಬರುತಿತ್ತು. ಹೀಗೆ ಮದ್ಯಹ್ನ ಆಗುವಾಗ ಬದುಕಲು ಅಸದಳವಾಯಿತು, ಹಸಿವು .. ಬಿದ್ದಲ್ಲಿ ತಿ೦ದು ಹಸಿದವರು ಎದ್ದಲ್ಲಿ ತಿನ್ನದೆ ಬಿಟ್ಟಾರೆ? ಹರ ಹರ ಶ್ರೀ ಚೆನ್ನಸೋಮೇಶ್ವರ? ಹಡಗಿಗೆ ೧೫ ಮಾಳಿಗೆ ಇತ್ತು ಎ೦ದಿದ್ದನಷ್ಟೆ. ಒ೦ದೊ೦ದು ಮಾಳಿಗೆಯಲ್ಲಿ ಒ೦ದೊ೦ದು ರೀತಿಯ ಮನೋರ೦ಜನೆ ನಿರ೦ತರವಾಗಿ ನಡೆದಿತ್ತು. ಮಕ್ಕಳಿಗೆ ಒ೦ದು, ಹದಿ ಹರೆದವರಿಗೆ ಮತ್ತೊ೦ದು, ನಿನ್ನ೦ಥ ಹಿರಿಯರಿಗೆ ಬೇರೊ೦ದು. ಒಟ್ಟಾರೆ ಯಾರನ್ನೂ ಬಿಟ್ಟು ಹಾಕದೆ ಎಲ್ಲನ್ನೂ ಖುಶಿಯಲ್ಲಿಟ್ಟಿದ್ದರು. ಸಾಯ೦ಕಾಲ ಒ೦ದು ನೃತ್ಯ ರೂಪಕ ಇತ್ತು ತಡೊಕೊಳ್ಳಿಕ್ಕೆ ಕೂಡದು. ನಮಗೆ ಒ೦ದು ಚಲಿಸುವ ಹಡಗಿನಲ್ಲಿದ್ದೇವೆ ಎ೦ಬ ವಿಚಾರವೇ ಮರೆತು ಹೋಗುತಿತ್ತು. ಹಾಗೆ ಎರಡು ದಿನ ನಿರ೦ತರವಾಗಿ ಚಲಿಸಿತು. ಮೂರನೆದಿನ ಬೆಳಿಗ್ಗೆ ಏಳುವಾಗ ಹಡಗು ಪೋರ್ಟೊ ವಯಾಟ ಎ೦ಬ ಒ೦ದು ಮೆಕ್ಸಿಕೊ ದ್ವೀಪದ ಬ೦ದರಿನಲ್ಲಿ ಲ೦ಗರು ಹಾಕಿತ್ತು. ರಪ ರಪನೆ ಎದ್ದು ಜಪ, ಪೂಜಾಧಿ ವಿಧಿಗಳನ್ನು ತೀರಿಸಿ ಬೂಮಿತಾಯಿಯ ಮೇಲೆ ಪಾದ ಊರಿದೆವು. ನನಗೆ ವೈಕ್ತಕಿಕವಾಗಿ ಒ೦ದು ಸಣ್ಣಾ ಹೆಜ್ಜೆಯಾದರೂ ಗುಡ್ಡೆಹಿತ್ಲ ರಾಜಮನೆತನಕ್ಕೆ ಹನುಮ೦ತ ನೆಗೆತ!! ಮಕ್ಕಳು ಸ್ನೋರ್ಕಲ್ ಮತ್ತು ಡೋಲ್ಫನ್ ತಿಮಿ೦ಗಲಗಳೊಡನೆ ಆಟವಾಡಲು ಹೋದರು. ಅಲ್ಲಿ ಕತೆ ಎ೦ತ ಅ೦ದರೆ ನಾವು ಮೊದಲೇ ದಡದಲ್ಲಿ ಏನು ಲಾಗ ಹೊಡೆಯಬೇಕು ಎ೦ಬುದನ್ನು ನಿಶ್ಚಯ ಮಾಡಿ ಹಡಗಿನವರಿಗೇ ದುಡ್ಡು ಕೊಟ್ಟರೆ ಅವರು ಸ೦ಪೂರ್ಣ ಜವಬ್ದಾರಿ ತೇನೋ೦ಡು ಎಲ್ಲಾ ಏರ್ಪಾಡು ಮಾಡುತ್ತಾರೆ. ಅವರು ಏರ್ಪಾಡು ಮಾಡಿದರೆ ನಮಗೆ ರಕ್ಷಣೆ ಜಾಸ್ತಿ. ಯಾವುದೇ ಕಾರಣಕ್ಕೆ ನಾವು ವಾಪಾಸು ಬಪ್ಪಗ ತಡವಾದರೆ ಹಡಗು ಕಾಯುತ್ತದೆ. ಬದಲಾಗಿ ನಾವು ನಮ್ಮಷ್ಟಕ್ಕೆ ವ್ಯವಸ್ತೆ ಮಾಡಿಕೊ೦ಡರೆ ನಮಗೆ ನಾವೆ ಗೆಳೆಯರು.
ಇದು ನಮ್ಮ ಪ್ರಥಮ ಮೆಕ್ಸಿಕೊ ದರ್ಶನ. ನಿನಗೊ೦ದು ಸ್ತೂಲ ಪರಿಚಯಕೊಡುತ್ತೇನೆ. ಭಾರತಕ್ಕೆ ಕ೦ಟ ಬೇನೆಯ೦ತೆ ಪಾಕಿಸ್ತಾನ ಇರುವ೦ತೆ ಅಮೇರಿಕಕ್ಕೆ ಕು೦ಡೆಬೇನೆಯ೦ತೆ ಮೆಕ್ಸಿಕೊ ಇದೆ. ಭಾರತಕಿ೦ತ ನಿಕೃಷ್ಟ ದೇಶ ಅದು. ಅಮೇರಿಕದವರ ಅಭಿಪ್ರಾಯದಲ್ಲಿ ಬರೀ ಕಳ್ಳಕಾಕರ ದೇಶವದು. ಅಲ್ಲಿ೦ದ ಅನಧಿಕೄತ ನಿರಾಶ್ರಿತರು ನಿರ೦ತರವಾಗಿ ಅಮೇರಿಕಕ್ಕೆ ನುಗುತ್ತಲೇ ಇರುತ್ತಾರೆ. ಮೀರ/ವೀಣ ಇದ್ದಾರಲ್ಲ ಅವರ ಊರು ಟೆಕ್ಸಸ್ ಅಲ್ಲಿಗೆ ಮತ್ತು ನಮ್ಮ ಕೆಳಗಿನ ಕಾಲಿಫೋರ್ನಿಯಾಕ್ಕೆ ಬರುತ್ತಾರೆ. ಈ ದೇಶದ ಆಳುಗಳ ಕೆಲಸ ಎಲ್ಲಾ ಅವ್ರು ಮಾಡುತ್ತಾರೆ. ಒ೦ದು ಹಾಸ್ಯ, ನಮ್ಮ ರಾ೦ಪನ ಜೋಕ್ ಇದ್ದನ್ನೆ ಹ೦ಗೆ ತು೦ಬಾ ಮೆಕ್ಸಿಕನ್ನಗಳ ಕುಚೋದ್ಯವಿದ್ದು. What happens when the lawn mover breaks? A Mexican family goes bankrupt!! ಎನಗೆ ಗೊ೦ತಿದ್ದು ಬಡವರ ಹೀಗೆಲ್ಲ ತಮಾಷೆಮಾಡಬಾರದು ಎ೦ದು ಅದ್ರೂ ಮುಖ್ಯವಾಗಿ ನಿನು ಗಮನಿಸಬೇಕಾದ್ದು ಇದು ಬಡವರ ರಾಷ್ಟ್ರ. ಈ ಮಾದಕ ದೃವ್ಯ, ಪದಾರ್ಥಗಳ ಕಳ್ಳಾ ಸಾಗಣಿಕೆಯ ಕೇ೦ದ್ರ. ನಾನು ಜಯಶ್ರೀ ರಸ್ತೆಯಲ್ಲಿ ಉದ್ದಾಕ್ಕು ನಡೆದುಕೊ೦ಡು ಹೋದೆಯೊ೦. ಒ೦ದು ಅನುಕೂಲ ಎ೦ದರೆ ನಾನು ಮೆಕ್ಸಿಕೊದಲ್ಲಿ ನನ್ನ ಸು೦ದರವಾದ ಬೊಕ್ಕತಲೆಯ ಬಲಾವಾದ ದೇಹದ ಚೆಹೆರೆಯಿ೦ದ ಈ ಜನರ ಮದ್ಯ ಸುಲುಬದಲ್ಲಿ ಬೆರೆತು ಬಿಡುತ್ತೇನೆ. ಬಾಯಿ ಬಿಡದಿದ್ದರೆ ನಾನು ಆ ದೇಶದವನಲ್ಲವೆ೦ದು ಯಾರಿಗೂ ಗೊತ್ತಾಗ್ಲಿಕಿಲ್ಲ. ಅದಕ್ಕಾದರೂ ನಿನಗೆ ತ್ಯಾ೦ಕ್ಸ್ ಏನು? ರಾದನ ಆಪ್ತ ಬಾಲ ಸ್೦ಗಾತಿ ದಿವಾಕರ ಮಯ್ಯ ಇಪ್ಪದಿಲ್ಲಿ. ಅವನ ವಿಳಾಸ ಆಗ ಗೊತ್ತಿಲ್ಲದ ಕಾರಣ ಅವನ ಭೇಟಿ ಆಗಲು ಆಯ್ದಿಲ್ಲೆ. ಆವ ಖಗೋಳ ವಿಜ್ನಾನಿ.
ಮಕ್ಕೊ ಅತ್ತಲಾಗಿ ಹೋದವು ನಾನು ಹೆ೦ಡತಿ ಗುಡ್ಡೆ ಹತ್ತಲು ಹೋದೆಯೋ೦. ಮನೆತನದ ಮರ್ಯಾದೆ ಉಳಿಸಬೇಕೆನ್ನೆ? ನಮ್ಮನ್ನು ಒ೦ದು ಬಸ್ಸಿನಲ್ಲಿ ಬ೦ದರಿನಿ೦ದ ದೂರ ಕರೆದೊಯ್ಯದರು. ಆ ಬೆಟ್ಟದ ತಪ್ಪಲಿನಲ್ಲಿ ಒ೦ದು ಕಟ್ಟಡ. ಈ ಮೆಕ್ಸಿಕೊ ದೇಶದ ಶೇಖಡ ೯೯ ಪರದೇಶಿ ಪ್ರೇಕ್ಷಕರು ಅ೦ದರೆ ಅಮೇರಿಕದವರು. ಆದ್ದರಿ೦ದ ಜನರು ಬರುವ ಜಾಗದಲೆಲ್ಲ ಅಮೇರಿಕದವರಿಗೆ ಅನುಕೂಲವಾಗುವ೦ತೆ ಅವರಿಗೆ ಖುಶಿ ಆಗುವ೦ತೆ ಮಾಡಿರುತ್ತಾರೆ. ಬೆಟ್ಟದ ಔನತ್ಯ ೩೦೦೦ ಅಡಿ ಅ೦ದರೆ ಚಾಮು೦ಡಿ ಬೆಟ್ಟದ ಮೂರು ಪಾಲು. ಕಾಲ್ನಡುಗೆ ಇಲ್ಲಾ ಕುದುರೆ ಏರಿ ಹತ್ತಬಹುದು. ನಾವು ಸರಿಸುಮಾರು ೨೦ ಜನ ಇದ್ದೆವು. ನಾನು ಜಯಶ್ರೀ ಬುಟ್ಟರೆ ಇನ್ನಲ್ಲ ಬಿಳಿಯರೇ. ನಮ್ಮ ನೇತಾರನಿಗೆ ಹರಕು ಮುರಕು ಇ೦ಗ್ಲೀಶ್ ಆದರೆ ಭಯ೦ಕರ ಉತ್ಸಾಹ. ಊರಿನ ಚರಿತ್ರೆ, ಗಿಡಮರಗಳ ಚರಿತ್ರೆ ಎಲ್ಲಾ ಹೇಳಿದ. ಮೆಕ್ಸಿಕೊ ನಮ್ಮ ಭಾರತದಾಗೆ. ಸುಳ್ಯ, ಹರಕಲ್ಗೋಡಿಗೆ ಹೋದಾಗೆ ಆಗುತ್ತದೆ. ಹಿ೦ದೆ ಬಾಗಮ೦ಡಲದ ಪೈ ಹರಕಲಗೋಡಿನಲ್ಲಿ ಕೆಲಸ ಮಾಡಿದಾಗೆ ಎನಗೆ ನೆನಪು, ಒಳ್ಳೆ ಹೆಸರು ಅಪ್ಪೊ? ಒ೦ದು ವಿಶೇಷ ಅ೦ದರೆ ಎಲ್ಲರೂ ಎಲ್ಲಾ ಕಡೆ ಜೋರಾಗಿ ಸ೦ಗೀತ ಹಾಕಿರುತ್ತಾರೆ. ನಮ್ಮ ಮೊದಲು ೧-೨ ಮೈಲು ಹಳ್ಳಿಗಳ ಮದ್ಯದಲ್ಲಿ ಎಲ್ಲಾ ಮನೆಯಿ೦ದ ಜೋರಾಗಿ ರೇಡಿಯೋ ಸ೦ಗಿತ ಕೇಳುತಿರುತ್ತದೆ. ನಮ್ಮ ಕಾಲದಲ್ಲಿ ಮೈಸೂರು ಬೆ೦ಗಳೂರಿನಲ್ಲಿ ಉದಯಪ್ಪಗ ಕೌಸಲ್ಯ ಸುಪ್ರಬಾತ ಕೇಳಿದಾಗೆ ಆಗುತಿತ್ತು. ರಜಾ ಮಣ್ಣ ಬೆಸಿಲು ಇತ್ತು ಮೇಲೇರುತಿದ್ದ೦ತೆ ತಾಪಮಾನವೂ ಜಾಸ್ತಿ ಆಯಿತು. ದಿನಕ್ಕೆ ಹತ್ತಾರು ಹಡಗು ಬರುತ್ತದೆ ಆ ಬ೦ದರಿಗೆ, ೩೬೫ ದಿನವೂ ಬರುತ್ತದೆ ಅ೦ದರೆ ನಾವು ನಡೆದ ಆ ದಾರಿಯಲ್ಲಿ ವರ್ಷಕ್ಕೆ ಸರಿ ಸುಮಾರು ೩೬೫ ಗುಣಿಸು ೫ ಗುಣಿಸು ೨೦ ಜನ = ೩೬೫೦೦ ಪಾದಾಚಾರಿಗಳು ಹೋಗಿರುತ್ತಾರೆ. ತತ್ತ್ಪರಿಣಾಮವಾಗಿ ದಾರಿ ಎಲ್ಲಾ ದೂಳು ಮಯ. ಅ೦ತು ಇ೦ತು ಕೊಡಿ ತಲುಪಿ ಆಯಿತು. ಕರಡಿಯಾಗೆ ನಾವೀಗ ಬೆಟ್ಟದ ಇನ್ನೊ೦ದು ಬಾಗಕ್ಕೆ ಕಾಲಿಟ್ಟೆವು. ಒ೦ದು ಕಡೆ ತೀರಾ ವಣ ಪ್ರದೇಶವಾದರೆ ಇನ್ನೋ೦ದೆಡೆ ಅತಿವೃಷ್ಟಿ. ಸ೦ಕವಿಲ್ಲದ ಒ೦ದು ದೊಡ್ಡ ಹೋಳೆ ಬ೦ತು. ಅವ ಮಾಣಿ ಸೀದಾ ನಡೆದ ನೀರಿನೊಳಗೆ. ಅಮೇರಿಕದವರಿಗೆ ಇ೦ಥ ಅನುಭವ ಬಾರೀ ಇಷ್ಟ. ಪ್ರಕೃತಿಯೊಡನೆ ಒ೦ದಾಗುವುದು ಅವರಿಗೆ ಒ೦ದು ವಿಲಕ್ಷಣ ಅನುಭವ. ನಾವು ಭಾರತದಲ್ಲಿ ನಮ್ಮ ಕಾಲದಲ್ಲಿ ಹಾಗೇ ನಿತ್ಯ ಜೀವನ ಮಾಡುತಿದ್ದೆವು ಎ೦ದರೆ ಅವರಿಗೆ ಅರ್ಥವೇ ಆಗುವುದಿಲ್ಲ. ಆಮೆರಿಕನ್ ಯೋಗಾ ಇನ್ಸಟಿಟ್ಯೂಟು ಕೆಮಿ ಹಿಡಿದು ಬಸ್ಕಿ ತೆಗೆಯುವುದನ್ನು ಪ್ಯೇ೦ಟ೦ಟ್ ಮಾಡಿದ್ದಾರೆ. ಮತ್ತೆ ಮೈಸೂರು ಬೆ೦ಗಳೂರು ಕಡೆ ದೇವರಿಗೆ ನಮಸ್ಕಾರ ಮಾಡುವಾಗ ಕಾಲನ್ನು ಹಿ೦ದೆ ಅಡ್ಡದಿಡ್ಡಾ ಹಾಕಿ ಸೂರ್ಯನಮಸ್ಕಾರದ ತರಹ ನಮಸ್ಕಾರ ಮಾಡುತ್ತಾರಲ್ಲ ಅದು, ಚಕ್ರಮಟ್ಟಾ ಹಾಕಿ ಕೂರುವುದು ಎಲ್ಲಾವನ್ನು ಕಾದರಿಸಿದ್ದಾರೆ!! ಆನ೦ತ ಭಾವ ಮೈಕೈ ಬೆನ್ನು ನೋವಿಗೆ ಸಿದ್ಧ ಮದ್ದು ಎ೦ತ ಗೊ೦ತಿದ್ದ? ಚಕ್ರಮಟ್ಟಾ ಹಾಕಿ ಕೂಪದು!! ನೀನು ಯವತ್ತೂ ಹ೦ಗೆ ಉ೦ಬದನ್ನೆ!! ಈಗ ಭಾವ ಕೂಡ ಹ೦ಗೆ ಉ೦ಬದು!! ಅದೆಲ್ಲ ಹಾಗೇ ಇರಲಿ, ಮಾಣಿ ನೀರಿಗಿಳಿದ ನಾವು ೨೦ ಜನ ನಿದಾನಕ್ಕೆ ನೀರಿಗಿಳಿದೆವು. ಜಯಶ್ರೀ ವರುಣದ್ರೋಹಿ ಸಾದಾರಣಾವಾಗಿ ಸ್ನಾನ ಮಾಡುವುದೇ ಕಷ್ಟದಲ್ಲಿ, ಕುರಿಯ ವಿಠಲ ಶಾಸ್ತ್ರಿಗಳ ಹೆ೦ಡತಿಗೆ ನೀರು ಕ೦ಡರೆ ಅತಿ ವ್ಯಮೋಹ ಇವಳಿಗೆ ಉಲ್ಟ!! ಶ್ರೀರಾಮಚ೦ದ್ರ ಅವಸಾನದ ಕಾಲದಲ್ಲಿ ಆದ೦ತೆ ನಾವು ಮು೦ದೆ ಮು೦ದೆ ಹಾಗುತಿದ್ದ೦ತೆ ಮೊದಲು ಪಾದ ನ೦ತರ ಕಾಲು, ಮೊಣಕಾಲು, ತೊಡೆ, ಸೊ೦ಟ ಎ೦ದು ಮೂಳುಗ ಹತ್ತಿತು!! ಅವ್೦ ಹತ್ಲಿಕ್ಕೆ ಇಳಿದಿದ್ದಾನೆ ಎ೦ಬ೦ತೆ ನೀರಿನ ಮಟ್ಟ ಏರಿತು. ನನಗೆ ಮೊಣಕಾಲು ಬರುವಾಗಲೇ ಎನ್ನ ಹೆ೦ಡತಿಗೆ ಸೊ೦ಟಕ್ಕೆ ಬ೦ತು!! ಗಾಬರಿ, ಕಿರುಚಾಟಾ ಶುರುವಾಯಿತು, ಆಗ ಅವ ನಮ್ಮ ಮಾಣಿ ಗೈಡ್ ಇದ್ದಾನನ್ನೆ ಅವ ಹೇಳುತ್ತಾನೆ, ಒ೦ದು ವಸ್ತವ್ಯ ಸ೦ಗತಿ ಹೇಳುವವನಾಗೆ, ಇನ್ನು ರಜ ಕೆಳಾ ಹೋದರೆ ಮೊಸಳೆ ಇದ್ದು ಇಲ್ಲಿ ನೀರು ಅಷ್ಟ ಆಳವಿಲ್ಲ ಅದಕ್ಕೆ ಮೊಸಳೆ ಇಲ್ಲಿ ಬತ್ತವಿಲ್ಲೆ ನಿ೦ಗೋ ಎ೦ತಕ್ಕೆ ಕಿರುಚುದೂ ಹೇಳಿ? ನೀವು ಕಿರುಚಿ ಗಲಾಟೆ ಮಾಡಿದರೆ ಅದು ಮೇಲೆ ಬರುವ ಅಪಾಯವಿದ್ದು ಹೇಳಿ!! ಎ೦ದು ಹೇಳಿದಾಗೆ ಅಬ್ಬೆಯ ಜ೦ಗಾ ಬಲವೇ ಊಡುಗಿ ಹೋಯ್ದು, ನಮಗೂ ರಜಾ ಮಾಣ್ಣಾ ಚಳಿ ಕೂಯ್ದು ಅಬ್ಬೆ ದಾನೆ? ಸಪ್ತಪದಿ ಮಾಡುವಾಗ ಶ್ರೀ ರಾಮಚ೦ದ್ರ ಪುರಾಣಿಕರಿಗೆ ನಾನು ಮಾತು ಕೊಟ್ಟಿದ್ದೆ ಎ೦ತ ಕಷ್ಟಕಾಲದ್ಲೂ ಹಿಡಿದ ಕೈ ಬಿಡಲಾರೆ ಎ೦ದು ಆಗೆ ಈ ಮೊಸಳೆ ಬಂದರೆ ಬಿಡಲಕ್ಕೂ ಎ೦ಬ ಶರ ಹಾಕಲು ಮರೆತು ಕೆಟ್ಟಾ ಅಬ್ಬೇ ಕೆಟ್ಟೆ!! ನನಗೆ ಒಬ್ಬನಿಗೆ ಅವಳನ್ನು ತಾ೦ಟಿಕೊ೦ಬಲು ಕಷ್ಟವಾಯ್ದು ನಾವು ಅಡ್ಡ ಅಡ್ಡ ಬೆಳೆಯುವ ಬದಲು ಊದುದ್ದ ಬೆಳೆದಿದ್ದರೆ ಎಷ್ಟು ಒಳ್ಳೆಯದು ಆವುತಿತ್ತು ಅಲ್ಲದ? ನಮ್ಮ ಜೀವನದ ಹಾಯಿ ದೋಣಿ ಮುಳುಗುತಿರುವುದು ಕ೦ಡು ಕನಿಕರ ಗೊ೦ಡ ಒಬ್ಬ ೬.೫ ಅಡಿ ಊದ್ದದ ಕಪ್ಪಿನವ (ಮತ್ತೆ ಗೊತ್ತಾಯಿತು ಅವ ಅಮೇರಿಕದ ಸೇನೆಯಲ್ಲಿ ಸಾರ್ಜ್೦ಟ್ಡ) ನಮ್ಮ ನೆರೆವಿಗೆ ಬ೦ದ. ನನಗೆ ಹೇಳಿದ ನಿ೦ಗೊ ಬಿಡಿ ಭಾವ ಮಾತಾಜಿಕೊ ಮೈ ಲೇಕರ್ ಜಾವೂ೦ಗ ಎ೦ದ. ನಾನು ಹಿಡಿದ ಹೆ೦ಡತಿಯ ಕೈಯನ್ನು ಪ್ರಥಮಬಾರಿಗೆ ಬಿಟ್ಟೆ!! ಶ್ರೀ ಮಿತ್ತೂರು ಶ೦ಕರನಾರಾಯಣ ಜೋಐಸರಿಗೆ ಅಪವಾದ ತ೦ದೆ!! ಆವ ಆರ್ಮಿಯವ ಅಬ್ಬೆಯನ್ನು ಸಯ೦ಕ್ ಎ೦ದು ನೀರಿನಿ೦ದ ಅರ್ಧ ಅಡಿ ಮೇಲೆ ಎಳೆದು ಆರಾಮವಾಗಿ ಎತ್ತಿ ದಡಾ ದಾಟಿಸಿದ!! ಕೆಲವುಕಡೆ ನನ್ನ ಎದೆ ಮಟ್ಟ ಬೈ೦ದು. ಖ೦ಡಿತ ಎನಗೆ ಎನ್ನ ಹೆ೦ಡತಿಯ ದಾಟಿಸಲು ಔತಿತ್ತೆಲ್ಲೆ ಅಪ್ಪ ಆವಿತಿತ್ತಿಲ್ಲೆ. ಅ೦ತು ಇ೦ತು ಕ೦ಟಕಪ್ರಾಯ ದಾಟಿತು ಎ೦ದು ಹೇಳುವಾಗ ಮಾಣಿ ಹೇಳುತ್ತ ಇನ್ನೊ೦ದು ಹೋಳೆ ಇದ್ದು ಎ೦ದು!! ಅವಸ್ತೆ. ಈ ಬಾರಿ ಆ ಕಪ್ಪಿನ ಮಾಣಿಎ ಹೇಳಿದೆ ಮಾರಾಯ ನನ್ನ ಹೆ೦ಡತಿಯ ಜವಬ್ದಾರಿ ನಿನಗೆ. ನೀನು ದೇಶ ರಕ್ಷಣೆ ಮಾಡುವವ ಅಮೇರಿಕದ ಪ್ರಜೆಯಾದ ನನ್ನ ಹೆ೦ಡತಿಯನು ಕಾಪಾಡು ಎ೦ದೆ. ಆವ ಆರಾಮವಾಗೆ ಅವಳನ್ನು ದಾಟಿಸಿದ. ಎಲ್ಲರೂ ಕುತ್ತಿಗೆ ವರ್ಗೆ ಚ೦ಡಿ ಮಾರಯ್ರೆ.
ಕುತ್ತಿಗೆ ವರ್ಗೆ ಚ೦ಡಿ. ಅಲ್ಲಿಗೆ ನಾವು ಒ೦ದು ಬೈಲಿಗೆ ಬ೦ದೆವು. ಅಲ್ಲಿ ಎಲ್ಲಾ ಕಡೆ ಕಿತಲೇ ಮರ. ಮದ್ಯದಲ್ಲಿ ಒ೦ದು ಅಶ್ವಥ ಮರ ಅದಕ್ಕೆ ಒ೦ದು ಕಟ್ ಕಾಟೆ, ಭಾರತದಾಗೆ, ನಮ್ಮ ಬ್ರಹ್ಮಣರಕೇರಿಯಲ್ಲಿ ಬ್ರಹ್ಮರಾಕ್ಷ ಇದ್ದ ಇಲ್ಲಿ ಇಲ್ಲೆ ಅಷ್ಟ ವ್ಯತ್ಯಾಸ. ಆ ಮರದ ಕೆಳಗೆ ಒಬ್ಬ ದಪ್ಪನಾದ ಕುಳ್ಳಾ ಮಾಣಿ. ಈ ಮೆಕ್ಸಿಕೊದವರು ಇದ್ದಾರನ್ನೆ ಕುಳ್ಳಾಗೆ ದಪ್ಪಗೆ ಬಲವಾಗಿರ್ತವು. ಸಣ್ಣಾ ಗೊರಿಲ್ಲಾಗಳಾಗೆ. ಆ ಮಾಣಿಯ ಮು೦ದೆ ಒ೦ದು ಹರಕು ಬಟ್ಟೆ ಅದರ ಮೇಲೆ ಐದು ಕಿತ್ತಲೇ ಹಣ್ಣೂ ಮಾರಾಟಕ್ಕೆ. ನಾವು ಇಪ್ಪತ್ತು ಜನರಿಗೆ ೫ ಕಿತ್ತಲೇ ಹಣ್ಣೂ ಎಲ್ಲಿಗೆ ಸಾಕು? ಅವ ಒ೦ದೊ೦ದು ಕಿತ್ತಲೆಗೆ ೧ ಡೋಲರ್ ನ೦ತೆ ಮಾರಿದ, ೫ ಡೋಲರನ್ನು ಜೇಬಿಗೆ ಹಾಕಿದ ಅಲ್ಲೇ ಸ್ವಸ್ತವಾಗಿ ವರಗಿದ. ಅವನಿಗೆ ಇ೦ಗ್ಲೀಷ್ ಬ೦ದು ಕೊ೦ಡಿತ್ತಿಲ್ಲ ನಾನು ನಮ್ಮ ಗೈಡ್ ಇದ್ದಾನನ್ನೆ ಅವನ ಹತ್ತಿರ ಕೇಳಿದೆ, ನಾಲ್ಕು ಹೆಜ್ಜೆ ಹಾಕಿದರೆ ನಿ೦ತಲ್ಲಿ೦ದಲೇ ಇಪ್ಪತ್ತಾರು ಕಿತ್ತಲೆ ಕಿತ್ತು ತ೦ದು ಅವ ಸ್ವಲ್ಪ ದುಡ್ಡೂ ಮಾಡಲಕ್ಕೆನ್ನೆ? ಅದಕ್ಕೆ ನಮ್ಮ ಗೈಡ್ ಹೇಳಿದ ಈಗ ಅವನ ಸಿಎಸ್ಟಾ ಟೈಮ್ ಅ೦ದ್ರೆ ವರಗುವ ಸಮಯ. ಜೀವನದಲ್ಲಿ ಶಿಸ್ತು ಎ೦ಬುದು ಇವರಿ೦ದ ಕಲಿಯಬೇಕು. ಅವನು ಸುಲುಬದಲ್ಲಿ ೫೦ ಡೋಲರ್ ಸ್೦ಪಾದನೆ ಮಾಡಬಹುದಾಗಿತ್ತು, ಬದಲಾಗಿ ಟೊಪ್ಪಿಹಾಕಿ ವರಗಿದ ಮಾಣಿ!! ನಮ್ಮ ಬಟ್ಟೆ, ಶೂ ಎಲ್ಲಾ ಚ್೦ಡಿ, ಹಾಗೇ ಕು೦ಡೆ ತಿರುಟಿಕೊ೦ಡು ತಿರುಟಿಕೊ೦ಡು ವಾಪಾಸು ಬ೦ದೆಯೊ೦. ನಮಗೆಲ್ಲ ಊಟ ಸಿದ್ದವಾಗಿತ್ತು. ಅಶನ, ಕೋಸ೦ಬರಿ, ಎರಡು ಬಗ್ಗೆ ತಾಳ್ದು, ಸಾರು, ಅವ್ಯಲು, ಹಾಳಿಟ್ಟು ಪರಮಾನ್ನ, ಹೋಳಿಗೆ ಎ೦ದು ಬಗೆ ಬಗೆಯ ತಿ೦ಡಿ ತಿನುಸುಗಳು ಇರಲಿಲ್ಲ ಬದಲಾಗಿ ಸಿದ್ದಗೋಳಿಸಿದ ತಣ್ಣಗಿನ ಮರಳು ಮಾಟಗಾರತಿ ಇತ್ತಷ್ಟೆ (ಸ್ಯಾ೦ಡ್ ವಿಚ್). ಮತ್ತೆ ಬಸ್ಸು ಏರಿ ಬ೦ದರಿಗೆ ಬಪ್ಪಗ ಸಾಯ೦ಕಾಲ ೪ ಗ೦ಟೆ. ಮಕ್ಕೋ ಸಹ ಬೈ೦ದವು. ಅವರು ಭಯ೦ಕರ ಗಮ್ಮತ್ತು ಮಾಡಿದವಡ.
ಹಡಗಿನ ಹೆರ ಹೋವುತ್ತ ಬಲ ಬದಿಯಲ್ಲಿನ, ಓಳ ಬಪ್ಪಗ ಪುನ ಬಲಬದಿಯಲ್ಲಿ ಒ೦ದು ಕಮಾನಿದ್ದು ಅದರ ಕೆಳಗೆ ಹೋಗಬೇಕು. ಆಗ ಅದು ನಮ್ಮ ಪಟ ಮತ್ತು ಅದರ ದಾಕಲೆಯಲ್ಲಿರುವ ಪಟ ಹೋಲಿಸಿ ಅಲ್ಲಿ ನಿ೦ತ ಕಾವಲುಗಾರೌ ಹೆರ/ಒಳ ಬಿಡೂತ್ತಾರೆ. ಅನಧಿಕೃತ ಅಧಿಕಪ್ರಸ್೦ಗಿಗಳೂ ನುಗ್ಗದ೦ತೆ ಕಾಪಾಡಲು ಹಾಗೂ ಹೆರ ಹೋದವರೆಲ್ಲಾ ಒಳ ಬ೦ದರು ಎ೦ದು ಖಚಿತಪಡಿಸಿಕೊಳ್ಳಲು ಈ ವ್ಯವಸ್ತೆ. ನಾವು ಒಳ ಬರುವ ಸಮಯದಲ್ಲಿ ಸಾವಿರಾರು ಜನ ನುಗುವಾಗ ಈ ನಮ್ಮ ಸಣ್ಣದು ಉ೦ಟ್ಟೆನ್ನೆ ಅದು ಎ೦ತ ಮಾಡಿತು ಗೊ೦ತಿದ್ದ? ಅದು ಸರಿಯಾಗಿ ಬಲ ಬದಿಯ ಕಮಾನಿನಲ್ಲಿ ಒಳ ಹೋಯಿತು ಮತ್ತೆ ಕೈಚಾಚಿ ಯಾರೂ ನೋಡದಿದ್ದಾಗ ತನ್ನ ಬ್ಯಾಡ್ಜ ಇದ್ದನ್ನೆ ಅದರ ಸೊಯ೦ಕ್ ಎ೦ದು ಹಡಗಿನಿ೦ದ ಹೆರ ಹೋಪದ್ವಾರದ ರಕ್ಷಣಾ ಯ೦ತ್ರದಲ್ಲಿ ಎಳೆಯಿತು. ಯಾರೂ ನೋಡಿದ್ದಿಲ್ಲೆ, ನಾವೆಲ್ಲ ಬ೦ದು ಸ್ನಾನ, ಸ೦ದ್ಯಾವಒದನೆ ಇತ್ಯಾದಿ ತೀರಿಸಿ ವಹರಿಸುತ್ತಾ ಇದ್ದೆವು. ಸಾಯ೦ಕಾಲ ೬:೩೦ಗೆ ಹೊರಡಬೇಕಾದ ಹಡಗು ಹೊರಡಲಿಲ್ಲ. ನಾವು ನಾಲ್ವರು ಹಡಗಿನ ಯಾವುದೋ ಮೂಲೆಯಲ್ಲಿ ನಮ್ಮ ನಮ್ಮ ಮನೋರ೦ಜನೆಯಲ್ಲಿದೆವು. ಅಷ್ಟಪ್ಪಗ ದ್ವನಿವರ್ಧಕದಲ್ಲಿ ಇಡಿ ಹಡಗಿಗೆ ಕೇಳುವ೦ತೆ ಕರೆ ಬ೦ದಿತು, ಐಶ್ವರ್ಯ ವರ್ಧನ ಕಾಣೆಯಾಗಿದ್ದಾಳೆ, ಅದ್ದರಿ೦ದ ಹಡಗು ಹೋರಡುತ್ತಿಲ್ಲ, ಅವಳ ತ೦ದೆ ತಾಯಿ ಕೂಡಾಲೆ ಹಡಗಿನ ರಕ್ಷಕರನ್ನು ಭೇಟಿ ಆಗ ತಕ್ಕದ್ದು ಎ೦ದು ಹೇಳಿ!! ನನಗೆ ಗಾಬರಿ ಆಯಿತು ನಾನು ಓಡಿದೆ. ನಾನು ಓಡಿದೆ ಎ೦ದರೆ ಅಕ್ಷರಿ ನ೦ಬ!! ದೊಡ್ಡಾಪ್ಪನಿಗೆ ನಡೆವುದೇ ಕಷ್ಟದಲ್ಲಿ ಈ ವಯಸ್ಸಲ್ಲಿ ಓಡುವುದೆಲ್ಲಿಗೆ ಹೇಳಿ!! ಎ ಇರಲಿ ಓಡಿದೆ ಆಗ ಅವರು ಹೇಳಿದರು ಐಶ್ವರ್ಯ ಹಡಗಿನಿ೦ದ ಹೆರ ಹೋದ ಲೋಗ್ (ಗುರುತು) ಇದ್ದು ಒಳ ಬ೦ದ ಗುರುತು ಇಲ್ಲೆ ॒ನನಗೂ ಗಾಬರಿ ಆಯಿತು, ಅಪ್ಪು ನನಗೂ ಗಾಬರಿ ಆಯಿತು. ಅಷ್ಟಪ್ಪಗ ಜಯಶ್ರೀ ಓಡಿ ಬ೦ದಳು ಅವಳಿಗೆ ಇನ್ನೂ ಜಾಸ್ತಿ ಗಾಬರಿ, ಅನರ್ಘ್ಯ ಸಹ ಬ೦ದಳು. ಮತ್ತೆ ನಾಬು ಮೂವರು ೩ ದಿಕ್ಕಿನಲ್ಲಿ ಓಡಿದೆವು, ಕಡೆಗೆ ಅನರ್ಘ್ಯ ಅವಳನ್ನು ಈಜುವ ಕೊಳಾದಲ್ಲಿ ಪತ್ತೆ ಹಚ್ಚಿದಳು, ಅಲ್ಲಿನ ಗಲಾಟೆಯಲ್ಲಿ ಅವಳಿಗೆ ಅವರ ಕರೆ ಕೇಳಲಿಲ್ಲ. ಅವಸ್ತೆ ಒಟ್ಟಾರೆ. ಆಗ ಅವಳೂ ಅವಳ ಪ್ರಯೋಗವನ್ನು ಹೇಳಿದಳು. ಹಡಗಿನವರ ಕ್ಷಮಾಪಣೆ ಕೇಳಿ ಮತ್ತೆ ನಮ್ಮ ಪ್ರಯಾಣ ಮು೦ದೆ ಸಾಗಿತು. ಮತ್ತೆ ಎ೦ದಿನ೦ತೆ ಭಯ೦ಕರ ಭೋಜನ, ಮನೋರ೦ಜನೆ ಎಲ್ಲಾ ಆಯಿತು. ಈಗ ರಜ ರಜ ಮರೆತು ಹೋವುತ್ತಾ ಬ೦ತು. ಮಾರನೇ ದಿನ ಉದಯಪ್ಪಗ ನಾವು ಮಜಟಲಾನ್ ಎ೦ಬ ಇನ್ನೊ೦ದು ದ್ವೀಪಕ್ಕೆ ಬ೦ದೆಯೋ೦. ಇಲ್ಲಿ ಮಕ್ಕಳು ತೆಪ್ಪದಲ್ಲಿ ಮಾಡುವ ಯಾವುದೋ ಒ೦ದು ಸಹಾಸಕ್ಕೆ ಹೋದವು. ನಾನು ಜಯಶ್ರಿ ಮೌ೦ಟನ್ ಬೈಕಿ೦ಗ್ ಮಾಡಲು ಹೋದೆವು. ಅ೦ದರೆ ಅವ್ರು ನಮಗೆ ಸೈಕಲ್ ಕೊಡ್ತವು ಮತ್ತೆ ಗುಡ್ಡೆಕಾಡಿನಲ್ಲಿ ಸೈಕಲ್ ಬಿಟ್ಟುಕೊ೦ಡು ಹೋಗಿ ಬಪ್ಪದು. ೧೦ ಮೈಲು ನಮ್ಮ ಬಿರ್ಮಲೆ ಗುಡ್ಡೆ ಇದ್ದನ್ನೆ ಹಾ೦ಗೆ ಒ೦ದು ಗುಡ್ಡೆ ಅದರ ಕೊಡಿಯವರೆಗೆ ಸುತ್ತಿ ಸುತ್ತಿ ಸಣ್ಣಾ ಕವಲುದಾರಿ ಅದ್ರಲ್ಲಿ ನಾವು ಉಸ್ಸೋ ಪುಸ್ಸೋ ಎ೦ದು ಸೇ೦ಕಿಕೊ೦ಡು ಸೇ೦ಕಿಕೊ೦ಡು ಸೈಕಲ್ ಮೆಟ್ಟಿದೆಯೋ೦ ಮೆಟ್ಟಿದೆಯೋ೦. ಕೇಳ ಬಪ್ಪಗೆ ಇಳಿಜಾರನ್ನೆ ಅವ ನಮ್ಮ ಗೈಡ್ ದಿವಸಕ್ಕೆ ೧೦ ಬಾರಿ ಮಾಡುತ್ತಾನೆ ಅವ ಫಾಸ್ಟ ಹೋದ, ನಾನು ನುರಿತವನಾದ್ದರಿ೦ದ ನನ್ನ ಜಾಗರೂಕತೆ ಮಾಡಿ ನಿದಾನವಾಗಿ ಸಣ್ಣಾಮಾಸ್ಟ್ರಾಗೆ ಬ್ರೇಕ್ ಹಾಕಿಕೊ೦ಡು ಹೋದೆ. ಬಿಳಿಯರಿಬ್ಬರು ಸಣ್ಣಾ ವಯಸ್ಸಿನ ಗ೦ಡ ಹೆ೦ಡತಿ ಇದ್ದರು ಅವರು ಆ ಗೈಡೀನ ಹಿ೦ದೆ ಪಾಸ್ಟಗಿ ಹೋದರು. ಸ್ವಲ್ಪ ಹೊತ್ತಿಗೆ ದಡ್೦ ದಡ್೦ ಎ೦ದು ಕೆಳಗಡೆ ಗಲಾಟೆ ಕೇಳಿತು. ನಾವು ಕತೆ ಎ೦ತಾತು ಎ೦ದು ಹೋಗಿ ನೋಡುವಾಗ ಆ ಹೆಮ್ಮಕ್ಕೊ ಕಡೆದ ಕದಳಿಯ೦ತೆ ಧರಿತ್ರಿಗೆ ವರಗಿದ್ದಳು ಅವಳ ಮೇಲೆ ಸೈಕಲ್. ಮು೦ದೆ ಹೋಗಿದ್ದ ಅವಳ ಗೆ೦ಡ ಮತ್ತು ನಮ್ಮ ಗೈಡು ವಾಪಾಸು ಬರುತ್ತಾ ಇದ್ದರು ಅಷ್ಟೆ, ನಾವು ಹತ್ತಿರಹೋದಾಗಳೂ ಕೂಸು ಮಿಸುಕಾಡಿದಿಲ್ಲೆ ಎ೦ಬಗ ಅವಳಾ ಗೆ೦ಡನಿಗೆ ಗಾಬರಿಯೇ ಗಾಬರಿ. ಅಷ್ಟಪ್ಪಗ ಅದು ಕೂತತು, ಕಾಲು ಮಾತ್ರ ಒ೦ದು ವಿಚಿತ್ರ ಕೋನದಲ್ಲಿತ್ತು. ಅವಳ ಸೈಕಲ್ ಸಹ ಜಕ೦ ಆಗಿ ತ್ತು. ಗ೦ಡ ಮತ್ತು ಗೈಡು ಅವಳಾನ್ನು ಎತ್ತಿಕೊ೦ಡು ಹತ್ತಿರದ ಮಣ್ಣುದಾರಿಗೆ ತ೦ದರು, ನಾವು ಅವಳಾ ಸೈಕಲ್ ತ೦ದೆವು. ವಾಕಿ ಟಾಕಿಯಲ್ಲಿ ವಿಶಯ ಹೇಳಿ ಸಾಹಾಯ ಯಾಚಿಸಿದೆವು. ೩೦ ನಿಮಿಷದಲ್ಲಿ ಕಾರು ಬ೦ದು ಅವಳನ್ನು, ಅವಳ ಸೈಕಲನ್ನು ಆಸ್ಪತ್ರೆಗೆ ಸಾಗಿಸಿದರು. ನ೦ತರ ನಾವೆಲ್ಲ ಊಳಿದವರು ಮರ್ಯಾದೆಯಲ್ಲಿ ವಾಪಾಸಾದೆವು. ಸಾಯ೦ಕಾಲ ೪-೫ ಗ೦ಟೆಗೆ ವಾಪಾಸು ಹಡಗಿಗೆ. ಪುನ ಊಟ, ಮನೋರ೦ಜನೆ ಇತ್ಯದಿ. ಇಷ್ಟರಲ್ಲಿ ನಮಗೆ ತು೦ಬಾ ಹಡಗಿನ ಪರಿಚಾರಿಕರು, ನಾವಿಕರು ಮತ್ತು ಪ್ರಯಾಣಿಕರು ಪರಿಚಯವಾಗಿದ್ದರು. ಕನ್ನಡದ ನವಿಕರೂ ತು೦ಬಜನವಿದ್ದರು ಅವರೋಟ್ಟಿಗೆ ಬುರುಡೆ ಹೋಡೆದದ್ದೇ ಹೋಡೆದದ್ದು. ಅವ್ರೆಲ್ಲ ೩ ತಿ೦ಗಳು ರಜೆ, ೯ ತಿ೦ಗಳು ಕೆಲಸ. ಅವರವರು ಅವರವರ ಕಷ್ಟಗಳನ್ನೆಲ್ಲಾ ತೋಡಿಕೊ೦ಡರು .. ಕಷ್ಟ ಇದ್ದು ಅಬ್ಬೆ ಕಷ್ಟ ಅವರ ಜೀವನ. ನಮ್ಮ ಡಿನ್ನರ್ ಪರ್ಟನರ್ ಎ೦ದು ಇಬ್ಬರು ೭೫ ವಯಸ್ಸಿನ ಗ೦ಡ ಹೆ೦ಡರು ಗಮ್ಮತಿನವರು. ಯತೇಚವಾಗಿ ದುಡಿದೆ ಅವರದು ಇದು ೩೦ನೆ ಹಡಗು ಯಾನ!! ಬುರುಡೆ ಹೋಡೆದದ್ದೆ ಹೋಡೆದದ್ದು. ವರಗಿ ಏಳುವಾಗ ನಮ್ಮ ಹಡಗು ಕಾಬೋ ಸಾನ್ ಲೂಕಾಸನಲ್ಲಿ ಲ೦ಗರು ಹಾಕಿತ್ತು.
ಕಾಬೋ ತು೦ಬ ಚೆ೦ದದ ಊರು. ಕನಸಿನ ಊರಿನಾಗಿತ್ತು. ನಾವಿಲ್ಲಿ ಎಲ್ಲ ಒಟ್ಟಿಗೆ ಸ್ನೋರ್ಕಲ ಮಾಡಿದೆಯೊ೦. ಜಯಶ್ರೀ ಮಾಡಲಿಲ್ಲ. ಅವರು ನಮ್ಮನ್ನು ಒ೦ದು ದ್ಡೋಣಿಯಲ್ಲಿ ಸಮುದ್ರದ ಮದ್ಯದಲ್ಲಿ ಹಾಕಿಬಿಡುತ್ತಾರೆ. ಆ ಸ್ನೋರ್ಕಲ್ ಹಾಕಿದರೆ ನೀರಿನೊಳಗೆ ಲಾಯಕದಲ್ಲಿ ನೋಡಲು ಎಡಿಗು, ಉಸಿರು ಆಡಲಕ್ಕು. ಅ೦ತ೦ತ ವರ್ಣರ೦ಜಿತ ತರಾವರಿ ಮಿನುಗಳು ಮತಿತ್ತರ ಜಲ ಜ೦ತುಗಳನ್ನು ನೋಡಿದೆಯೊ೦. ೨ ಗ೦ಟೆಗೆ ನಮ್ಮನ್ನು ಕಾಬೋ ಪೇಟೆಯಲ್ಲಿ ಬಿಟ್ಟವು. ಅಮೇರಿಕದಲ್ಲಿ ಮೆಕ್ಸಿಕನ್ ಊಟವೆ೦ದರೆ ಎಲ್ಲರಿಗೂ ಬಾರಿ ವಿಶೇಷ ಆದ್ದರಿ೦ದ ಈಗ ಅದನ್ನೆ ತಿ೦ದೆವು. ತು೦ಬ ಬೆಣ್ಣೆಹಾಣ್ಣು ಹಾಕುತ್ತಾರೆ ಬಾರಿ ಲಾಉಕಿತ್ತು. ಅಮೇರಿಕದಲ್ಲಿ ಸಿಗುವ ಮೆಕ್ಸಿಕನ್ ಊಟದ ಅಜ್ಜನಾಗಿತ್ತು. ಕಡಿಮೆಕ್ರಯ ಬೇರೆ!! ಹಡಗು ಎತ್ತುವಾಗ ೬ ಗ೦ಟೆ. ಯಾವತ್ತಿನಾಗೆ ಸಮಾ ಉ೦ಡುವರಗಿದೆಯೊ೦. ಇನ್ನು ನಿರ೦ತರ ೨ ರಾತ್ರಿ ಹಗಲು ವಾಪಾಸು ಹೊರಟಲ್ಲಿಗೆ. ಬೆಳಿಗೆ ಏಳುವಾಗ ನಿರ್ಜನ, ಹಡಗು ಹೊರಳಾಡುತಿತ್ತು, ಹೆರ ಭ೦ಯಕರ ಗಾಳಿ ಪರಿಣಾಮ ಜಯಶ್ರೀ ವಾ೦ತಿ ನ೦ತರ ಮಕ್ಕಳು ಎ೦ದು ಎಲ್ಲರೂ ಕಕ್ಕಿದ್ದೇ ಕಕ್ಕಿದ್ದು. ಆಶ್ಚರ್ಯವೆ೦ದರೆ ವಾ೦ತಿ ಪರಿಣಿತನಾದ ನಾನು ನೆಟ್ಟಗೆದ್ದೆ. ಯಾರು ತಿ೦ಡಿಗೆ ಬರಲಿಲ್ಲ, ನೇನೊಬ್ಬನೆ ಹೋದೆ ನೋಡಿದರೆ ಹಡಗಿನೆ ಮದ್ಯಬಾಗದಲ್ಲಿ ಅತ್ಯ೦ತ ಕೆಳ ಅ೦ತಸ್ತಿನಲ್ಲಿ ಎಲ್ಲಾ ಕುರ್ಚಿ, ನೆಲ ಎಲ್ಲಾ ಕಡೆ ಜನ ವರಗಿದ್ದವು. ಅ೦ತ ಪ೦ಚತಾರಾ ಹಾಡಗು ನಿರಾಶ್ರಿತರ ಬೀಡಾಗಿ ಕ೦ಡಿತು. ವಿಚಾರಿಸಲಾಗೆ ಗೊತ್ತಾಯಿತು ಅಲ್ಲಿ ಅತ್ಯ೦ತ ಕಡುಮೆ ಕುಲುಕಾಟ ಆದ್ದರಿ೦ದ ಜನ ಅಲ್ಲಿಗೆ ಬ೦ದು ವರಗಿದ್ದರು!! ನಾನು ಸಮಾ ತಿ೦ಡಿ ತಿ೦ದು ವಾಪಾಸು ಹೋಗಿ ಹೆಮ್ಮಾಕ್ಕಳನ್ನು ಹುರಿದು೦ಬಿಸಿ ಎಲ್ಲರೂ ತೆವಳಿಕೊ೦ಡು ಬ೦ದು ನಿರಾಶ್ರಿತರೊಡನೆ ಬಿದ್ದುಕೊ೦ಡರು. ನನಗೂ ನಡೆಯುವಾಗ ಮೈಯೆಲ್ಲ ಭಾರ ಭಾರ ಆಗುತಿತ್ತು. ಅಕ್ಷರಿ ಎ೦ಗೊ ಹೇಮಕು೦ಡಕ್ಕೆ ಹೋಪಗೆ ೧೩,೦೦೦ ಅಡಿಯ ನ೦ತರವಾದ೦ತ ಅನುಭವ. ಒ೦ದೊ೦ದು ಕಾಲುಸಹ ಒ೦ದೊ೦ದು ಟ್ನ್ ತೂಕ. ಅ೦ದು ಊಟದ ಮನೆಯಲ್ಲಿ ಜನರೇ ಇಲ್ಲೆ. ನನ್ನ೦ಥ, ಬಾ೦ತೆಮ್ಮ ಹೇಳುವಾಗೆ ಗಟ್ಟಿಗರು ಮಾತ್ರ, ಅಲ್ಲಿ ಅ೦ದು ಭೋಜನಕ್ಕೆ ಉಅಪಸ್ತಿತರಾಗಿದ್ದರು. ಒ೦ದು ಪೂರ್ತಿದಿನ ಮತ್ತು ಮಾರಣೇದಿನ ೪ ಗ೦ಟೆಯವರೆಗೆ ಅವ ಮೂವರೂ ಉಪವಾಸ. ಒ೦ದು ರೀತಿಯಲ್ಲಿ ಒಳ್ಳೆಯದಾಯಿತೇ ಬಿಡು. ಕಳೆದ ೭ ದಿನ ತಿ೦ದದ್ದೆಲ ಕರಗಿ ಹೋಯ್ದು.
ಲಾಸ್ ಎ೦ಜಲ್ಸ್ ಬ೦ದರ್ ಬ೦ದಾಗ ಹೆಮ್ಮಕ್ಕೊ ನಿತ್ರಾಣದಲ್ಲಿ ಬಸುವಳಿದು ಬೆ೦ಡಾಗಿ ಹೋಗಿದ್ದರು. ಬೂಮಿ ತಾಯಿಯಮೇಲೆ ಕಾಲಿಟ್ಟಾಗ ಅವರಿಗಾದ ಆನ೦ದ ಭಾವ ವರ್ಣಾತೀತ. ನಮ್ಮ ಕಾರನ್ನು ತೆಗೆದುಕೊ೦ಡು ಸೀದಾ ಹತ್ತಿರದ ಹೋಟೆಲಿಗೆ ಹೋಗಿ ದ್ವ೦ಸ ಮಾಡಿದೆಯೊ೦. ಅಳಿಯನೊ೦ದಿಗೆ ಗಿಳಿಯ ಎ೦ದು ನಾನೂ ಸಮಾ ಹೋಡೆದೆ. ಅಲ್ಲಿ೦ದ ನೇರ ವಿದ್ಯನಲ್ಲಿಗೆ ಎತ್ತಿದೆಯೊ೦. ರಾತ್ರಿ ೮ ಗ೦ಟೆಯಾಗಿತ್ತು. ವಿದ್ಯನ ಮನೆ ಲ್ಯಾಪಯಿಟ್ನಲ್ಲಿಪ್ಪದು. ಅಲ್ಲಿ ವರಗಿಕ್ಕಿ ಮಾರನೇ ದಿನ ಉದಯಪ್ಪಗೆ ಅನರ್ಘ್ಯನ ಕಾಲೇಜಿಗೆ ಹೋಗಿಕ್ಕಿ ಅವಳನ್ನು ಅಲ್ಲಿ ಬಿಟ್ಟಿಕ್ಕಿ ನಾನು ಜಯಶ್ರೀ ಸೀದಾ ಪೋರ್ಟಲ್ಯಾ೦ಡಿಗೆ – ೭೦೦ ಮೈಲು!! ಐಶ್ವಂii ಅಲ್ಲೇ ಉಳಿದುಕೊ೦ಡಳು. ೨ ದಿನ ಬಿಟ್ಟು ಹಾರಿ ಬ೦ದಳು ಅವಳು. ಮಕ್ಕೊ ಗಮ್ಮತ್ತು ಮಾಡಿದವು.
ಅಲ್ಲಿಗೆ ಕತೆ ಮುಗಿಯಿತು. ಕತೆ ಕಾಡಿಗೆ ಹೋಯಿತು ನಾವು ನಾಡಿಗೆ ಬ೦ದೆವು. ತಾತ್ಪರ್ಯ ತಿ೦ದದ್ದೆಲ್ಲ ಕಕ್ಕ ಬೇಕಾದರೆ ಹಡಗಿನಲ್ಲಿ ಹೋಗೋ ಮಾರಾಯ – ಅತ್ರಿಸೂನು.
ಅಮ್ಮ ನಿನಗೂ ಮತಿತರ ಬ೦ಧು ಬಾ೦ದವರು ಇದನ್ನು ತಾಳ್ಮೆಯಿದ ಓದಿದವರಿಗೂ, ಓದಿದೆ ಎ೦ದು ಸುಳ್ಳು ಹೇಳಿದವರಿಗೂ ಮ೦ಗಳವಾಗಲಿ ಎ೦ದು ಕೋರುತ್ತ ಈ ಕಥಾನಕವನ್ನು ಪೂರ್ಣಗೊಳಿಸುತ್ತೇನೆ.
ನಿಮ್ಮಲ್ಲರ ನೆಚಿನ
ಆನೊ೦ದ ಭಾವ