ಕಲ್ಪವೃಕ್ಷದಲ್ಲಿ ಚತುರ್ಮುಖಗಳು

ಕಲ್ಪವೃಕ್ಷದಲ್ಲಿ ಚತುರ್ಮುಖಗಳು

ಹವ್ಯಾಸೀ ಮರ ಕೆತ್ತುವ ಕಲೆ – ಭಾಗ ೧ ಬನ್ನಿ, ನನ್ನ ಹೊಸ ಪರಿವಾರದ ಪರಿಚಯ ಮಾಡಿಕೊಳ್ಳಿ. ಚಿತ್ರದಲ್ಲಿ ಎಡದಿಂದ ಮೊದಲನೆಯವ ದೊಡ್ಡ – ತೆಂಗಿನ ನಾಲ್ಕು ಮರದ ತುಂಡುಗಳಲ್ಲಿ ದೊಡ್ಡವ, ದೊಡ್ಡ ತೆಂಗಿನ ಮರದ ಬುಡದ ತುಂಡು. ಸಹಜ ಉರುಟು ಮೈಯನ್ನು ಆರು ಕೋನಯುಕ್ತಗೊಳಿಸುವ ಅಂದಾಜಿನಲ್ಲೇ ಆಯ್ಕೆಯಾಗಿ ಬಂದವ – ಎರಡನೆಯವ, ಆರ್ಮುಗಂ...
ಗೇರುಬೀಜದ ಅನುಬಂಧ

ಗೇರುಬೀಜದ ಅನುಬಂಧ

[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ, ಔದ್ಯಮಿಕ ಸತ್ಯಗಳ ಕುರಿತು ಪ್ರತ್ಯಕ್ಷದರ್ಶಿಯ ಹಕ್ಕಿನೋಟ] ಹರಿಪ್ರಸಾದ್ ಶೇವಿರೆ ತಾನು “ಪುತ್ತೂರು ಮೂಲದವನು,” ಎಂದಾಗಲೇ ಆಪ್ತವೆನ್ನಿಸಿ, “ನನ್ನಜ್ಜನ ಊರು” ಎಂದಿದ್ದೆ. `ಶೇವಿರೆ’ ಅಂದರೆ ಕೆಸುವಂತೆ. ಸಸ್ಯ...
ಕುದುರೆಮುಖಕ್ಕೆ ಸೈಕಲ್ ಸವಾರಿ

ಕುದುರೆಮುಖಕ್ಕೆ ಸೈಕಲ್ ಸವಾರಿ

ನಿಶ್ಚಲ ಕತ್ತಲಿನಲ್ಲಿ, ಚಳಿಗಾಲದ ತೆಳು ಮಂಜಿನ ಹೊದಿಕೆಯಲ್ಲಿ, ಮೂಕವಾಗಿದ್ದ ದಾರಿಗೆ ಒಮ್ಮೆಗೇ ನಾಲ್ಕು ಜೋಡಿ ಚಕ್ರಗಳು ಚಕ್ಕಂದಕ್ಕೆ ಸಿಕ್ಕ ಸಂಭ್ರಮ “ರೊಂಯ್ ರೊಂಯ್, ರೊಂಯ್!” ಕರಿಯ ಹೊಗೆಯಿಲ್ಲ, ಕರ್ಕಶ ಧ್ವನಿಯಿಲ್ಲ, ಹರಿದೋಡುವ ಧಾವಂತವಿಲ್ಲ – ಸಮಾಧಾನದ ಸವಾರಿಯ ನಾಲ್ಕು ಸೈಕಲ್ಲುಗಳು, ಮೇಲೆ ಸವಾರರು. ಮಾರ್ಗದಂಚಿನ ಬಿಳಿಗೀಟು...
ಅಸಮ ಸಾಹಸಿ ಮರಿಕೆಯ ಅಣ್ಣ!

ಅಸಮ ಸಾಹಸಿ ಮರಿಕೆಯ ಅಣ್ಣ!

`ವೈದಿಕ’ ಲೆಕ್ಕಾಚಾರಗಳ ಪ್ರಕಾರ ಮೊನ್ನೆ ೮-೩-೧೫ರಂದು ನನ್ನ ಮರಿಕೆಯ `ಅಣ್ಣ’ನ ವರ್ಷಾಂತಿಕ. ನನ್ನ ತಾಯಿಯ ತಂದೆ, ಅಜ್ಜ ಎ.ಪಿ. ಸುಬ್ಬಯ್ಯನವರ (೧೯೦೧-೧೯೭೭) ಹತ್ತು ಮಕ್ಕಳಲ್ಲಿ ಹಿರಿಯನಾದ್ದಕ್ಕೆ ಎ.ಪಿ.ತಿಮ್ಮಪ್ಪಯ್ಯ (೧೯೨೮-೨೦೧೪) ಮನೆಮಂದಿಗೆಲ್ಲಾ `ಅಣ್ಣ’. ಆತನ ಪ್ರಥಮ ತಂಗಿ, ನನ್ನಮ್ಮ – ಲಕ್ಷ್ಮೀ ದೇವಿ. ಸಂಬಂಧದಲ್ಲಿ...
ಕ್ಷಣಕ್ಷಣವೂ ರೋಮಾಂಚನ: ಮೋಟಾರ್ ರ‍್ಯಾಲಿ

ಕ್ಷಣಕ್ಷಣವೂ ರೋಮಾಂಚನ: ಮೋಟಾರ್ ರ‍್ಯಾಲಿ

(ಚಕ್ರವರ್ತಿಗಳು – ಹತ್ತನೇ ಸುತ್ತು) [ಚಾಲಕ-ವಾಹನ-ಮಾರ್ಗ ಅಥವಾ ವ್ಯಕ್ತಿ-ಯಂತ್ರ-ಪರಿಸರ ಸಮನ್ವಯದ ಪರಾಕಾಷ್ಠೆಗೊಂದು ನಿದರ್ಶನ ಮೋಟಾರ್ ರ‍್ಯಾಲಿ: ಅರಾಜ ಮಾರ್ಗದಲ್ಲಿ ಅಶಿಸ್ತಿನ ಗೊಂದಲದಲ್ಲಿ ಅಸ್ಥಿರ ಮನಸ್ಕನಾಗದೇ ಲಕ್ಷ್ಯಚ್ಯುತನಾಗದೇ ನಿಶ್ಚಿತ ಮುಹೂರ್ತದಲ್ಲಿ ಗುರಿ ತಲಪಬಲ್ಲ ಅದಟಿನ ಪ್ರತ್ಯಕ್ಷ ರೂಪ, ಅರ್ಜುನ...
ರೈಲೋಡಿದ ಬೈಕು

ರೈಲೋಡಿದ ಬೈಕು

(ಚಕ್ರವರ್ತಿಗಳು – ಆರನೆಯ ಸುತ್ತು) ದೇವಕಿ ಮುನಿಸಿಕೊಂಡಿದ್ದಳು. “ಬೆಟ್ಟ ಗುಡ್ಡ ಏರ್ತೀರಿ, ಬಂದು ಕೊಚ್ತೀರಿ, ಪೇಪರಿಗೆ ಗೀಚ್ತೀರಿ, ನಮಗೆ ಸಿಕ್ಕಿದ್ದೇನು?” ಒಂದರ್ಥದಲ್ಲಿ ನಿಜ. ಮಗ ಸಣ್ಣವನಾದ್ದರಿಂದ ಎಲ್ಲಾದಕ್ಕೂ ಒಯ್ಯುವುದು ಅಸಾಧ್ಯ. ಸಹಜವಾಗಿ ಅವನಿಗೆ ಜೊತೆಯಾಗಿ ಈಕೆಯೂ ನಿಲ್ಲುವುದು ಅನಿವಾರ್ಯ. (ನಾನು ನಿಂತರೆ...