by athreebook | Jan 16, 2015 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದಾಸುಪಾಸು ೫) ಹೌದು, ಅದು ಅಖಂಡ ಹಸಿರಿನ ಹಾಸಿಗೆ, ಅದಕ್ಕೆ ಮಂಜುಮೋಡದ ಬಲು ದಪ್ಪದ ಹೊದಿಕೆ. ತರಂಗಿತ ಕಣಿವೆ ಕಾಣದಾಯ್ತೆಂದು ಯಾರೂ ದೂರದಂತೆ, ಹಲವು ಪದರಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಆವರಿಸುತ್ತ, ಅನಾವರಿಸುತ್ತಲೂ ಇದ್ದ ಬೆಳ್ಮೋಡದ ಮೋಡಿಯಾದರೂ ನೋಡಿ ಮುಗಿಯುವಂಥದ್ದಲ್ಲ. ಆದರೆ ನೋಡುವ ನಮಗೆ ಸಮಯದ ಮಿತಿಯಿದೆಯಲ್ಲಾ....
by athreebook | Dec 26, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದಾಸುಪಾಸು ೪) ಮಟ ಮಟ ಮಧ್ಯಾಹ್ನ ಹೇವಳ ಮುಟ್ಟಿದ್ದೆವು (೧೯೮೩ರ ಹಗಲು ತಂಡ). ಎದುರು ವಿಸ್ತಾರ ಬೋಗುಣಿಯಂಥಾ ಕಣಿವೆ. ಎಡಕ್ಕೆ ಕುದುರೆಮುಖ, ಬಲಕ್ಕೆ ಹಿರಿಮರುದುಪ್ಪೆ – ಹೇವಳದ ಬೋಗುಣಿಗೆ ಭರ್ಜರಿ ಅಂಚುಗಟ್ಟೆಗಳು. ಕುದುರೆಮುಖದ ಈ ಖಾಸಾ ಒಕ್ಕಲುಗಳ ಮನೆ, ಜನ, ಜಾನುವಾರು, ಕೃಷಿ ನಮ್ಮಲ್ಲಿ ಕೆಲವರನ್ನು ತುಸು ಹೆಚ್ಚೇ...
by athreebook | Dec 19, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದ ಆಸುಪಾಸು – ೩) ೧೯೯೦ರ ನವರಾತ್ರಿಯ ಮೂರು ರಜಾದಿನಗಳನ್ನು ಹೊಂದಿಸಿಕೊಂಡು ನಮ್ಮ ಇನ್ನೊಂದೇ ಪುಟ್ಟ ತಂಡ – ಆರೇ ಜನ ಕುದುರೆಮುಖ ಶಿಬಿರವಾಸಕ್ಕೆ ಹೊರಟೆವು. ಹೆಂಡತಿ – ದೇವಕಿ, ಮಗ – ಒಂಬತ್ತರ ಬಾಲಕ ಅಭಯ ಸೇರಿಕೊಂಡಿದ್ದರು. (ಕೇದಗೆ) ಅರವಿಂದ ರಾವ್, ಮೋಹನ್ (ಆಚಾರ್ಯ) ಮತ್ತು (ಕೆ.ಆರ್) ಪ್ರಸನ್ನ ಇತರ...
by athreebook | Dec 12, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದಾಸುಪಾಸು – ೨) ಸೋಜಾ ಮೊದಲೇ ಕೊಟ್ಟ ಸೂಚನೆಯಂತೆ – ಅಂದರೆ ನಲ್ವತ್ತು ವರ್ಷಗಳ ಹಿಂದಿನ ಕತೆ ನೆನೆಸಿಕೊಳ್ಳಿ, ನಡುರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ, ನಾವು ಎಚ್ಚರಾದೆವು. ಕೇವಲ ಮೂರು ಗಂಟೆಯ ಆದರೆ ಚೇತೋಹಾರಿ ವಿಶ್ರಾಂತಿಯನಂತರ ಜಾಗೃತರಾಗಿದ್ದೆವು. ಏನೋ ಕುರುಕಲು ಮುಕ್ಕಿ, ಮೂರು ಕಲ್ಲಿನ ಒಲೆ ಹೂಡಿ, ಚಾ ಕಾಯಿಸಿ...
by athreebook | Dec 5, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
ಕುದುರೆಮುಖದೆಡೆಗೆ – ಕನ್ನಡದ ಪ್ರಥಮ `ಸಾಹಸ ಪ್ರವಾಸ ಕಥನ’, ನನ್ನ ತಂದೆಯ ಪುಸ್ತಕ. ಅದು ಹೊಸತರಲ್ಲಿ (೧೯೬೮) ಪ್ರಕಟವಾದಾಗ ನಾನು ತುಸು ಖಿನ್ನತೆ ಅನುಭವಿಸಿದ್ದಿರಬೇಕು. ವಾಸ್ತವವಾಗಿ ಆ ಸಾಹಸಯಾತ್ರೆ ಆಯೋಜಿತವಾದದ್ದು ಕೇವಲ ಬೆಂಗಳೂರು ಸರಕಾರೀ ಕಾಲೇಜಿನ (ಗ್ಯಾಸ್ ಕಾಲೇಜ್!) ವಿದ್ಯಾರ್ಥಿಗಳಿಗೆ. ನಾನೋ ಬೆಂಗಳೂರು ಪ್ರೌಢಶಾಲೆಯ...
by athreebook | Jul 10, 2014 | ಆತ್ಮಕಥಾನಕ, ಪರ್ವತಾರೋಹಣ, ಪುಸ್ತಕ ವಿಮರ್ಶೆ, ಪುಸ್ತಕೋದ್ಯಮ, ಪ್ರವಾಸ ಕಥನ
ಪ್ರಶಸ್ತಿ, ಪುರಸ್ಕಾರ, ಸಮ್ಮಾನ ಏನೇ ಹೇಳಿದರೂ ತೆರೆಮರೆಯಾಟಗಳ ಆಯಾಮದ ಕುರಿತ ನನ್ನ ಆತಂಕವನ್ನು ಕಳೆದ ವಾರದ ಇಲ್ಲಿನ ಬರೆಹದಲ್ಲಿ ತೋಡಿಕೊಂಡಿದ್ದೆ. ಲೇಖನಕ್ಕೆ `ವ್ಯವಸ್ಥಿ’ತವಾಗಿ ನೀರೂಡಿದರೂ ಭಣಭಣಿಸಿದ ಒಣಕಡ್ಡಿ ಮೊದಲ ಮಳೆಗೆ ಗಂಟುಗಂಟಿನಲ್ಲೂ ಎಬ್ಬಿಸಿದ ಮೊಳೆ-ಸಾಲಿನಂತೆ ಮಿಂಚಂಚೆ, ಜಾಲತಾಣಗಳಲ್ಲಿ ಅಭಿನಂದನೆಗಳ ರಾಶಿ,...