ಗೊಂಡೋಲಾ ನಿಸ್ಸತ್ತ್ವ ಸಂಭ್ರಮ

ಗೊಂಡೋಲಾ ನಿಸ್ಸತ್ತ್ವ ಸಂಭ್ರಮ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೫) ಶ್ರೀನಗರದ ಮೊಕ್ಕಾಂನ ಎರಡನೇ ದಿನದ ನಮ್ಮ ಏಕೈಕ ಯೋಜನೆ ಗುಲ್ಮಾರ್ಗ್ ಭೇಟಿ, ಅರ್ಥಾತ್ ನೇರ ಹಿಮದ ಒಡನಾಟ. ವಿದ್ಯಾ ಮನೋಹರ ಉಪಾಧ್ಯ ದಂಪತಿಯನ್ನು ಇಲ್ಲಿನ ಹಿಮಮಹಿಮೆ ತುಂಬಾ ಪ್ರಭಾವಿಸಿತ್ತು. (ವಿವರಗಳನ್ನು ವಿದ್ಯಾ ಪ್ರತ್ಯೇಕ ಕಥನದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಇಲ್ಲೇ ಹಂಚಿಕೊಳ್ಳಲಿದ್ದಾರೆ!)...
ಜಲನಿಧಿಯ ಅವಹೇಳನ – ದಾಲ್ ಸರೋವರ

ಜಲನಿಧಿಯ ಅವಹೇಳನ – ದಾಲ್ ಸರೋವರ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೪) ಅಪರಾಹ್ನ ದಾಲ್ ಲೇಕ್ ದರ್ಶನ. ಅಂತರಜಾಲದ ವಿಶ್ವಕೋಶವೇ ಆಗಿರುವ ವಿಕಿಪೀಡಿಯಾ ದಾಲ್ ಲೇಕನ್ನು ರಾಜ್ಯದ ಎರಡನೇ ದೊಡ್ಡ ನಾಗರಿಕ ಸರೋವರ ಎಂದೇ ಗುರುತಿಸುತ್ತದೆ. ಮಹಿಮೆಯನ್ನು ಕೀರ್ತಿಸುವಾಗ, ಸುಮಾರು ಹದಿನೈದೂವರೆ ಕಿಮೀ ಸುತ್ತಳತೆ, ಹದಿನೆಂಟು ಚದರ ಕಿಮೀ ವಿಸ್ತೀರ್ಣ, ತೋರವಾಗಿ...
ಮಕ್ಮಲ್ಲಿನ ನುಣುಪು? ಕೇಸರಿಯ ಕಂಪು?

ಮಕ್ಮಲ್ಲಿನ ನುಣುಪು? ಕೇಸರಿಯ ಕಂಪು?

(ಜಮ್ಮು ಕಾಶ್ಮೀರ ಪ್ರವಾಸ ಕಥನ -೩) ನಾವು ತಡವಾಗಿ ಮಲಗಿದವರೆಂದು ಮುಂಬೆಳಕು ತಡವಾಗುವುದುಂಟೇ! ಮತ್ತೆ ನಮ್ಮ ಪ್ರಾಯಕ್ಕೆ ಸಹಜವಾಗಿ ಹಾಸಿಗೆ ಬಿಸಿ ಮಾಡುವುದು ಆಗಲೇ ಇಲ್ಲ. ಆರು ಗಂಟೆಗೆಲ್ಲ ನಾವು ಶೌಚ, ಬಿಸಿನೀರ ಸ್ನಾನವೆಲ್ಲ ಮುಗಿಸಿ ಯುದ್ಧಸನ್ನದ್ಧರಾಗಿದ್ದೆವು! ಹೋಟೆಲಿನ ಕೊನೆಯ ಮತ್ತು ನಾಲ್ಕನೇ ಮಾಳಿಗೆಯ ನಮ್ಮ ಕೋಣೆಯ...
ಲಂಚಶ್ರೀಯಲ್ಲಿ ಗಳಿಸಿದ ಶ್ರೀನಗರ!

ಲಂಚಶ್ರೀಯಲ್ಲಿ ಗಳಿಸಿದ ಶ್ರೀನಗರ!

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೨) ದಿಲ್ಲಿಯ ಸೆಕೆ ಮುಂದುವರಿದಂತೆ ಬೆಳಗ್ಗಾಯಿತು. ಈ ಪ್ರವಾಸದುದ್ದಕ್ಕೆ ಅನುಭವಿಸಿದಂತೆ ಸುಮಾರು ನಾಲ್ಕು ಗಂಟೆಗೇ ಬೆಳಕು ಮೂಡಿತ್ತು. ಆದರೆ ರೈಲಿನ ಮೂರು ಹಂತದ ಮಲಗು ವ್ಯವಸ್ಥೆಯಲ್ಲಿ ಮಧ್ಯಮರ ಸಹಕಾರವಿಲ್ಲದಿದ್ದರೆ ಇತರ ಇಬ್ಬರು ಸ್ವಸ್ಥ ಕುಳಿತುಕೊಳ್ಳುವುದು ಅಸಾಧ್ಯ. ರಾತ್ರಿ ಉಚ್ಚೆ ಹೊಯ್ಯಲು...
ಕುತೂಹಲ ಕೆರಳಿಸದ ಜಮ್ಮು ಕಾಶ್ಮೀರ

ಕುತೂಹಲ ಕೆರಳಿಸದ ಜಮ್ಮು ಕಾಶ್ಮೀರ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೧) ದಿಲ್ಲಿ ಬಿಟ್ಟ ವಿಕ್ರಮ ನೇಪಾಳ ಕುಸಿದು ಕುಳಿತಿದೆ, ದಿಲ್ಲಿ ಪಾಟ್ನಾಗಳು ನಡುಗಿವೆ. ಕಳೆದ ವರ್ಷ ಶ್ರೀನಗರ ಮುಳುಗಿ ಹೋಗಿತ್ತು, ಅದಕ್ಕೂ ತುಸು ಹಿಂದೆ ಕೇದಾರ ಕೊಚ್ಚಿಯೇ ಹೋಯ್ತು. ಹೀಗೆ ಇನ್ನೂ ರೂಪುಗೊಳ್ಳುತ್ತಿರುವ, ಅತಿಕಿರಿ ಪ್ರಾಯದ ದೈತ್ಯ ಹಿಮಾಲಯದ `ಮಕ್ಕಳಾಟ’ಗಳು ಅಸಂಖ್ಯವೂ ನರಹುಳುಗಳಿಗೆ...
ಊಟಿಯಲ್ಲಿ ಮುಂದುವರಿದ ದೃಶ್ಯ ಲೂಟಿ!

ಊಟಿಯಲ್ಲಿ ಮುಂದುವರಿದ ದೃಶ್ಯ ಲೂಟಿ!

(ಚಕ್ರವರ್ತಿಗಳು – ೩೨, ದಕ್ಷಿಣಾಪಥದಲ್ಲಿ… – ೯) ರಂಗನಾಥ ಸ್ತಂಭವನ್ನು ನಮ್ಮ ತಂಡ ಸಾಧಿಸಿದ ಧನ್ಯತೆಯಲ್ಲಿ ಕಳೆದು ಹೋಗಲಿಲ್ಲ. ಬಹುಶಃ ಕೋತಗೇರಿಯಲ್ಲಿ ಊಟ ಮುಗಿಸಿಕೊಂಡೆವು. ಅನಂತರ ಮನೆಯ ದಾರಿಯಲ್ಲಿ ವರ್ಮ ನಮ್ಮನ್ನು ಆತನ ಗೆಳೆಯನೋರ್ವನ ಚಾ ಕಾರ್ಖಾನೆಗೆ ಒಯ್ದರು. ಸೊಪ್ಪು ಚೂರ್ಣವಾಗುವ ಕಥೆ: ಚಾ ಸೊಪ್ಪು ಕೊಯ್ದ ಹದಿನೈದೇ...