ಭೀಮ ಬಿದ್ದಾ ಮತ್ತೆರಡು ತಿರುಗೂಳಿ ವೃತ್ತಾಂತ

ಭೀಮ ಬಿದ್ದಾ ಮತ್ತೆರಡು ತಿರುಗೂಳಿ ವೃತ್ತಾಂತ

ಇತಿಹಾಸದ ‘ಅಶೋಕ’ವನ್ನು ನನ್ನ ತಂದೆತಾಯಿಯರು ನನಗೆ ಕೊಟ್ಟದ್ದು ನಿಜ. ಆದರೆ ‘ಚಕ್ರವರ್ತಿ’ಯನ್ನೂ ಎಳೆದುಕೊಳ್ಳುವಂತಾದ್ದು ನನ್ನ ಹವ್ಯಾಸ ಬಲದಲ್ಲಿ. ದಕ್ಷಿಣ ಭಾರತದ ಒಂದು ಸಣ್ಣ ಅಂಶವನ್ನೂ ಸೇರಿಸಿದಂತೆ ಈ ವಲಯದ ನನ್ನ ಮೋಟಾರು ಸೈಕಲ್ ಪ್ರವಾಸ ಕಥನಗಳ ಸಂಕಲನವನ್ನು ನಾನೇ ‘ಚಕ್ರವರ್ತಿಗಳು’ ಎಂದು ಹೆಸರಿಸಿ, ಪ್ರಕಟಿಸಿದ್ದು (ಸದ್ಯ...
ಶ್ವೇತಾಂಬರಿಯ ಸೆರಗಿನಲ್ಲಿ ಸೆಣಸಾಟ

ಶ್ವೇತಾಂಬರಿಯ ಸೆರಗಿನಲ್ಲಿ ಸೆಣಸಾಟ

ನನ್ನೊಡನೆ ಅಂಡಮಾನ್ ಪ್ರವಾಸಕ್ಕೆ ಬಂದ ಓದುಗರಿಗೆ ಅಮೆರಿಕಾದಲ್ಲಿರುವ ನನ್ನ ತಮ್ಮ ಆನಂದವರ್ಧನ ಏನೂ ಹೊಸಬನಲ್ಲ. (ಅ‘ತ್ರಿ’ಗಳಲ್ಲಿ ಇವನು ಮಧ್ಯಮ. ವೃತ್ತಿಯಲ್ಲಿ ಗಣಕತಂತ್ರಿ. ಜಯಶ್ರೀ ಹೆಂಡತಿ. ಅನರ್ಘ್ಯ, ಐಶ್ವರ್ಯ ಮಕ್ಕಳು.) ಅವನ ಹವ್ಯಕ ಗಿವ್ಯಕ, ತುಳು ಗಿಳು ಬೆರೆತ ಭಾಷಾ ಪ್ರಯೋಗ ನಿಮ್ಮ ಓದುವ ಆನಂದಕ್ಕೆ ಬಿಟ್ಟಿದ್ದೇನೆ. ಕೇವಲ...
ಸವಾಲಿನ ಬೆಂಬತ್ತಿ ಕೌಂಡಿಕಾನ

ಸವಾಲಿನ ಬೆಂಬತ್ತಿ ಕೌಂಡಿಕಾನ

“ಹೌದಯ್ಯಾ ನೀವು ಆ ಕಾಡಿಗೆ ಹೋಗುವುದೇ ಆದರೆ ಈ ರೇಸಿಗೆ ಹೋಗುವ ಬೈಕಿನವರು ಹಾಕಿಕೊಳ್ಳುವ, ಸರೀ ಕಿವಿ ಮುಚ್ಚುವ ಶಿರಸ್ತ್ರಾಣ ಉಂಟಲ್ಲಾ, ಅದೇ ನಿಮ್ಮ ಹೆಲ್ಮೇಟು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಅಲ್ಲಿ ಮುಷ್ಠಿ ಗಾತ್ರದ ವಜ್ರ ದುಂಬಿಗಳು ಆಕ್ರಮಣ ಮಾಡಿ ನಿಮ್ಮ ಈ ಕಿವಿಯಿಂದ ಹೊಕ್ಕು ಆಚೆ ಕಿವಿಯಿಂದ ಹೊರಬರುತ್ತವೆ. ಮತ್ತೆ ಹಳೇ ಲಾರೀ...
“ನಂಬಿಕೆಗಳನ್ನು ಕೆಣಕಬೇಡಿ!”

“ನಂಬಿಕೆಗಳನ್ನು ಕೆಣಕಬೇಡಿ!”

ಪ್ರೊ| ಎಂ ರಾಮಚಂದ್ರ ಕಾರ್ಕಳ, ಹಲವು ಖ್ಯಾತ ವಿದ್ವಾಂಸರುಗಳ ಪ್ರಿಯ ಶಿಷ್ಯ, ನನ್ನ ತಂದೆಯನ್ನು ಪರೋಕ್ಷವಾಗಿ ತನ್ನ ಪ್ರಮುಖ ಗುರುಗಳಲ್ಲಿ ಒಬ್ಬರೆಂದೇ ಕಂಡವರು, ವಿದ್ಯಾರ್ಥಿ ದೆಸೆಯಲ್ಲೇ ಪ್ರಕಟವಾದ ಇವರ ಸಾಹಿತ್ಯ ಪ್ರೇಮ ಕನ್ನಡ ಅಧ್ಯಾಪಕರಾಗಿ ನೆಲೆ ನಿಂತ ಮೇಲಂತೂ ವ್ರತತೊಟ್ಟ ಕನ್ನಡಸೇವೆಯೇ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ....
ಗುಹಾವಿವಾದಕ್ಕೆ ಮಂಗಳ ?

ಗುಹಾವಿವಾದಕ್ಕೆ ಮಂಗಳ ?

ಪತ್ರಿಕೆಯ ಬರಹಗಳ ಬಗ್ಗೆ (ನೇರ ಲೇಖಕನಿಗೂ) ಪ್ರತಿಕ್ರಿಯಿಸುವವರೇ ಕಡಿಮೆ. ಹಾಗೆ ಬರೆದದ್ದೆಲ್ಲ ಸ್ವೀಕಾರವಾಗುವುದು, ಸ್ವೀಕಾರವಾದದ್ದರಲ್ಲೂ ಪೂರ್ಣ ಪಾಠ ಬರುವುದು, ಬಂದದ್ದೂ ವಸ್ತುನಿಷ್ಠವಾಗಿರುವುದು ಮತ್ತಷ್ಟು ಮತ್ತಷ್ಟು ಕಡಿಮೆ. ಆ ಲೆಕ್ಕದಲ್ಲಿ ಸದಾ ಸಾರ್ವಜನಿಕದಲ್ಲೇ ಇರುವ ಅದೂ ಜಗತ್ತಿನ ಆಗುಹೋಗುಗಳ ಬಗ್ಗೆ ಸದಾ ಮುಕ್ತ...
ಸಾಹಸೀ ಸುಂದರ ಅನುಭವ

ಸಾಹಸೀ ಸುಂದರ ಅನುಭವ

ನೆಲ್ಲಿತಟ್ಟುತೀರ್ಥ ಘಟ್ಟ ಕೊರೆಯುವ ಆವೇಶ ಕಳಚಿದ pious-ವಿನಿ ಇಲ್ಲಿ ಆದೂರು ವಲಯದ ದಟ್ಟಾರಣ್ಯ ಪೊರೆವ ಮಂದಗಾಮಿನಿ. ಅದಕ್ಕೆ ಸಮಾನಾಂತರದಲ್ಲಿದ್ದ ಜಾಲ್ಸೂರು – ಕಾಸರಗೋಡು ರಸ್ತೆಯಲ್ಲಿ ಆ ಬೆಳಿಗ್ಗೆ (೨೪-೫-೧೯೮೧, ಆದಿತ್ಯವಾರ) ನಾನು ಯೆಜ್ದಿ ಮೋಟಾರು ಸೈಕಲ್ಲಿನಲ್ಲಿ ಭಾವ ಶಂಕರನಾರಾಯಣನನ್ನು ಬೆನ್ನಿಗೆ ಏರಿಸಿಕೊಂಡು...