by athreebook | Sep 17, 2020 | ವೈಚಾರಿಕ, ವ್ಯಕ್ತಿಚಿತ್ರಗಳು, ಹೊಂಡೆಲ್ ಪ್ರಸನ್ನ
[ಅಮೆರಿಕಾದಲ್ಲಿರುವ ನನ್ನ ತಮ್ಮ – ಆನಂದವರ್ಧನ ಓದಿ, ಭಾರೀ ಕುಶಿಪಟ್ಟು “ನೋಡೋ” ಎಂದು ನನಗೂ ದೂಡಿದ ಲೇಖನವಿದು. ಪ್ರಸ್ತುತ ವೃತ್ತಿ, ವಾಸ್ತವ್ಯಗಳಲ್ಲಿ ನ್ಯೂ ಜೆರ್ಸಿಯ ಹೊಂಡೆಲ್ಲಿನಲ್ಲಿರುವ ಬಿ.ಎಸ್. ಪ್ರಸನ್ನ ಅಥವಾ ಬಾಲ ಪ್ರಸನ್ನರು ನಮಗೆ ಪೂರ್ವಪರಿಚಿತರಲ್ಲ. ಅವರು ವಿದ್ಯಾರ್ಥಿ ದೆಸೆಯಲ್ಲಿ (೧೯೬೦ರ ದಶಕ)...