by athreebook | Jul 18, 2013 | ಅಶೋಕವನ, ಎತ್ತಿನ ಹೊಳೆ ಯೋಜನೆ, ಕಪ್ಪೆ ಶಿಬಿರಗಳು, ಬಿಸಿಲೆ, ವನ್ಯ ಸಂರಕ್ಷಣೆ
[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ ಮಂಡೂಕೋಪಖ್ಯಾನವನ್ನು ಮತ್ತೊಮ್ಮೆ ಓದಿಕೊಳ್ಳುವುದು ಉತ್ತಮ] “ಬಿಸಿಲೆಯಲ್ಲಿ ಕಪ್ಪೆ ಶಿಬಿರ ನಡೆದದ್ದು ಕಳೆದ ಮಳೆಗಾಲದ ಕೊನೇ ಪಾದ. ಈಗ ಹೊಸ ಮಳೆಗಾಲದ ಮೊದಲಪಾದ. ವೈಜ್ಞಾನಿಕ ಅಧ್ಯಯನಾಸಕ್ತರು ಋತುವೊಂದರಲ್ಲಿ ಕನಿಷ್ಠ...
by athreebook | Sep 17, 2012 | ಅನ್ಯರ ಬರಹಗಳು, ಕಪ್ಪೆ ಶಿಬಿರಗಳು, ಪೆಜತ್ತಾಯ ಎಂ.ಎಸ್, ವನ್ಯ ಸಂರಕ್ಷಣೆ
ಕಪ್ಪೆ ಕಮ್ಮಟವೆಂದು ಸಾರ್ವಜನಿಕವಾಗಿ ನಾನು ವಟಗುಟ್ಟುವ (= ಘೋಷಿಸು) ಮುನ್ನ ನೆನಪಾದದ್ದು ಎರಡು ಹೆಸರು. ನನ್ನ ಕಣ್ಣೆದುರೇ ಪ್ರಾಣಿಶಾಸ್ತ್ರಜ್ಞರಾಗಿ ಬೆಳೆದ ಸೂರ್ಯ (ಉರುಫ್ ಸೂರ್ಯನಾರಾಯಣ ರಾವ್ ಅಡ್ಡೂರು, (‘ಹಾವಾಡಿಗ’ ಗೆಳೆಯ ಶರತ್ತನ ಚಡ್ಡಿದೋಸ್ತ್) ಮತ್ತು ಸವಿತಾ (ಶರತ್ತನ ಹೆಂಡತಿ). ಇಬ್ಬರೂ ಸ್ನಾತಕೋತ್ತರ ಪದವಿಯನಂತರ...
by athreebook | Sep 13, 2012 | ಅಶೋಕವನ, ಕಪ್ಪೆ ಶಿಬಿರಗಳು, ಬಿಸಿಲೆ, ವನ್ಯ ಸಂರಕ್ಷಣೆ
(ಮಂಡೂಕೋಪಖ್ಯಾನದ ಎರಡನೇ ಮತ್ತು ಅಂತಿಮ ಭಾಗ) ಆಗಸ್ಟ್ ಇಪ್ಪತ್ನಾಲ್ಕರ ಅಪರಾತ್ರಿ ಎರಡು ಗಂಟೆಯ ಸುಮಾರಿಗೇ ಬೆಂಗಳೂರಿನಲ್ಲೊಂದು ಕ್ವಾಲಿಸ್ ನಗರದ ವಿವಿಧ ಮೂಲೆಗಳಿಗೆ ಓಡಾಡಿ ಐದಾರು ಬಿಸಿಲೆ ‘ಯಾತ್ರಿ’ಗಳನ್ನು ಸಂಗ್ರಹಿಸಲು ತೊಡಗಿತ್ತು. ಮೂರೂವರೆ ಗಂಟೆಯ ಸುಮಾರಿಗದು ನಗರ ಬಿಟ್ಟದ್ದೂ ಆಗಿತ್ತು. ಹಾಗೇ ಇತ್ತ ಮಂಗಳೂರಿನಲ್ಲೊಂದು ಟೆಂಪೋ...
by athreebook | Sep 10, 2012 | ಅನ್ಯರ ಬರಹಗಳು, ಕಪ್ಪೆ ಶಿಬಿರಗಳು, ವನ್ಯ ಸಂರಕ್ಷಣೆ, ವೈಚಾರಿಕ
ಚಿತ್ರ, ಲೇಖನ ಡಾ|| ರತ್ನಾಕರ್, ಮಂಟಪ ಕ್ಲಿನಿಕ್, ಶಿವಮೊಗ್ಗ. ಪ್ರಿಯರೇ, ನಮ್ಮ ಕಮ್ಮಟ, ಕೆವಿಜಿ ಒಡನಾಟದ ಕತೆ ಕೇಳಿಯೇ ಸಂತೋಷ ತಡೆಯಲಾಗದೆ ಗೆಳೆಯ, ರತ್ನಾಕರ ಉಪಾಧ್ಯರು ಪ್ರತಿಕ್ರಿಯೆಯಾಗಿ ಅವರದೊಂದು ೨೦೧೦ರ ಅನುಭವ ಕಥನವನ್ನು ಕಳಿಸಿದ್ದಾರೆ. ಅದಕ್ಕೆ ಸ್ವತಂತ್ರ ಲೇಖನದ ಯೋಗವೇ ಇರುವುದರಿಂದ ಇಲ್ಲಿ ಯಥಾವತ್ತು ನಿಮ್ಮೆದುರು...
by athreebook | Sep 6, 2012 | ಅಶೋಕವನ, ಎತ್ತಿನ ಹೊಳೆ ಯೋಜನೆ, ಕಪ್ಪೆ ಶಿಬಿರಗಳು, ಬಿಸಿಲೆ, ವನ್ಯ ಸಂರಕ್ಷಣೆ, ವ್ಯಕ್ತಿಚಿತ್ರಗಳು
“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ…” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ)...