ಬೆಟ್ಟದ ಮೇಲಿನ ‘ಮನೆ’

ಬೆಟ್ಟದ ಮೇಲಿನ ‘ಮನೆ’

(ಕುದುರೆಮುಖದಾಸುಪಾಸು ೪) ಮಟ ಮಟ ಮಧ್ಯಾಹ್ನ ಹೇವಳ ಮುಟ್ಟಿದ್ದೆವು (೧೯೮೩ರ ಹಗಲು ತಂಡ). ಎದುರು ವಿಸ್ತಾರ ಬೋಗುಣಿಯಂಥಾ ಕಣಿವೆ. ಎಡಕ್ಕೆ ಕುದುರೆಮುಖ, ಬಲಕ್ಕೆ ಹಿರಿಮರುದುಪ್ಪೆ – ಹೇವಳದ ಬೋಗುಣಿಗೆ ಭರ್ಜರಿ ಅಂಚುಗಟ್ಟೆಗಳು. ಕುದುರೆಮುಖದ ಈ ಖಾಸಾ ಒಕ್ಕಲುಗಳ ಮನೆ, ಜನ, ಜಾನುವಾರು, ಕೃಷಿ ನಮ್ಮಲ್ಲಿ ಕೆಲವರನ್ನು ತುಸು ಹೆಚ್ಚೇ...
ಕುದುರೆಮುಖದಲ್ಲಿ ಮಧುಚುಂಬನ!

ಕುದುರೆಮುಖದಲ್ಲಿ ಮಧುಚುಂಬನ!

(ಕುದುರೆಮುಖದ ಆಸುಪಾಸು – ೩) ೧೯೯೦ರ ನವರಾತ್ರಿಯ ಮೂರು ರಜಾದಿನಗಳನ್ನು ಹೊಂದಿಸಿಕೊಂಡು ನಮ್ಮ ಇನ್ನೊಂದೇ ಪುಟ್ಟ ತಂಡ – ಆರೇ ಜನ ಕುದುರೆಮುಖ ಶಿಬಿರವಾಸಕ್ಕೆ ಹೊರಟೆವು. ಹೆಂಡತಿ – ದೇವಕಿ, ಮಗ – ಒಂಬತ್ತರ ಬಾಲಕ ಅಭಯ ಸೇರಿಕೊಂಡಿದ್ದರು. (ಕೇದಗೆ) ಅರವಿಂದ ರಾವ್, ಮೋಹನ್ (ಆಚಾರ್ಯ) ಮತ್ತು (ಕೆ.ಆರ್) ಪ್ರಸನ್ನ ಇತರ...
ಕುದುರೆಮೊಗ ದರ್ಶನ

ಕುದುರೆಮೊಗ ದರ್ಶನ

(ಕುದುರೆಮುಖದಾಸುಪಾಸು – ೨) ಸೋಜಾ ಮೊದಲೇ ಕೊಟ್ಟ ಸೂಚನೆಯಂತೆ – ಅಂದರೆ ನಲ್ವತ್ತು ವರ್ಷಗಳ ಹಿಂದಿನ ಕತೆ ನೆನೆಸಿಕೊಳ್ಳಿ, ನಡುರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ, ನಾವು ಎಚ್ಚರಾದೆವು. ಕೇವಲ ಮೂರು ಗಂಟೆಯ ಆದರೆ ಚೇತೋಹಾರಿ ವಿಶ್ರಾಂತಿಯನಂತರ ಜಾಗೃತರಾಗಿದ್ದೆವು. ಏನೋ ಕುರುಕಲು ಮುಕ್ಕಿ, ಮೂರು ಕಲ್ಲಿನ ಒಲೆ ಹೂಡಿ, ಚಾ ಕಾಯಿಸಿ...
ಕುದುರೆ ಕೆನೆಯುತಿದೆ ಕೇಳಿದಿರಾ!

ಕುದುರೆ ಕೆನೆಯುತಿದೆ ಕೇಳಿದಿರಾ!

ಕುದುರೆಮುಖದೆಡೆಗೆ – ಕನ್ನಡದ ಪ್ರಥಮ `ಸಾಹಸ ಪ್ರವಾಸ ಕಥನ’, ನನ್ನ ತಂದೆಯ ಪುಸ್ತಕ. ಅದು ಹೊಸತರಲ್ಲಿ (೧೯೬೮) ಪ್ರಕಟವಾದಾಗ ನಾನು ತುಸು ಖಿನ್ನತೆ ಅನುಭವಿಸಿದ್ದಿರಬೇಕು. ವಾಸ್ತವವಾಗಿ ಆ ಸಾಹಸಯಾತ್ರೆ ಆಯೋಜಿತವಾದದ್ದು ಕೇವಲ ಬೆಂಗಳೂರು ಸರಕಾರೀ ಕಾಲೇಜಿನ (ಗ್ಯಾಸ್ ಕಾಲೇಜ್!) ವಿದ್ಯಾರ್ಥಿಗಳಿಗೆ. ನಾನೋ ಬೆಂಗಳೂರು ಪ್ರೌಢಶಾಲೆಯ...
ಶಿವಮೊಗ್ಗ ಕರ್ನಾಟಕ ಸಂಘ – ಕೂಡಲಿ!

ಶಿವಮೊಗ್ಗ ಕರ್ನಾಟಕ ಸಂಘ – ಕೂಡಲಿ!

ಪ್ರಶಸ್ತಿ, ಪುರಸ್ಕಾರ, ಸಮ್ಮಾನ ಏನೇ ಹೇಳಿದರೂ ತೆರೆಮರೆಯಾಟಗಳ ಆಯಾಮದ ಕುರಿತ ನನ್ನ ಆತಂಕವನ್ನು ಕಳೆದ ವಾರದ ಇಲ್ಲಿನ ಬರೆಹದಲ್ಲಿ ತೋಡಿಕೊಂಡಿದ್ದೆ. ಲೇಖನಕ್ಕೆ `ವ್ಯವಸ್ಥಿ’ತವಾಗಿ ನೀರೂಡಿದರೂ ಭಣಭಣಿಸಿದ ಒಣಕಡ್ಡಿ ಮೊದಲ ಮಳೆಗೆ ಗಂಟುಗಂಟಿನಲ್ಲೂ ಎಬ್ಬಿಸಿದ ಮೊಳೆ-ಸಾಲಿನಂತೆ ಮಿಂಚಂಚೆ, ಜಾಲತಾಣಗಳಲ್ಲಿ ಅಭಿನಂದನೆಗಳ ರಾಶಿ,...