ಅತ್ರಿ ಜಾಲತಾಣದ ವೀಕ್ಷಣೆ ಲಕ್ಷ ದಾಟಿತು!

ಅತ್ರಿ ಜಾಲತಾಣದ ವೀಕ್ಷಣೆ ಲಕ್ಷ ದಾಟಿತು!

ಬರುವ (೨೦೧೪) ಮಾರ್ಚ್ ತಿಂಗಳೊಡನೆ ಅತ್ರಿ ಬುಕ್ ಸೆಂಟರ್ ಮುಚ್ಚಿ, ಅಂದರೆ ನಾನು ಪುಸ್ತಕ ವ್ಯಾಪಾರಿತನದಿಂದ ನಿವೃತ್ತಿ ತೆಗೆದುಕೊಂಡು ವರ್ಷವೆರಡು ಕಳೆದಂತಾಗುತ್ತದೆ. ಸುದ್ದಿ ಮಾಡುವುದು, ಪ್ರಚಾರ ಗಿಟ್ಟಿಸುವುದು ಅಷ್ಟಾಗಿ ನನಗೆ ಹಿಡಿಸಿದ್ದಿಲ್ಲ. ‘ಬ್ರೇಕಿಂಗ್ ನ್ಯೂಸ್’ ಎಂಬಿತ್ಯಾದಿ ಶಬ್ದಾಲಂಕಾರ ಸಹಿತ ನುಸಿ ಹೋದರೂ ಗಜಗಮನದ...
ನರಕದ ನೀರು ಇದು! ತುಂಬಾ ಕ್ಲೀನ್ ಇದೆ ಸಾರ್!

ನರಕದ ನೀರು ಇದು! ತುಂಬಾ ಕ್ಲೀನ್ ಇದೆ ಸಾರ್!

ಪೀಠಿಕೆ: ಮೊನ್ನೆ ಬೆಂಗಳೂರಿನಲ್ಲಿ ‘ಸಕ್ಕರೆ ತಿಂದು, ನೀರು ಕುಡಿದ’ ಮೇಲೆ ನಾನು ದೇವಕಿ ಬೈಕೇರಿ ಮೈಸೂರಿಗೆ ಬಂದೆವು. ನನ್ನ ಮೂಲಮನೆ ‘ಅತ್ರಿ’ಯಲ್ಲಿ ತಾಯಿಯನ್ನು ಕಂಡು, ಎರಡು ದಿನ ವಿರಾಮದಲ್ಲಿದ್ದು ಮಂಗಳೂರಿಸುವ ಯೋಜನೆ ನಮ್ಮದು. ನೆಲವಿರುವುದೇ ನಗರ ವಿಸ್ತರಣೆಗೆಂಬಂತೆ ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣಾದಿ...
ಇದೇ ಮೊದಲು ಎನ್ನುವಂತೆ ವಿಶ್ವಾಸಾರ್ಹ ರಾಜ್ಯೋತ್ಸವ ಪ್ರಶಸ್ತಿಗಳು!

ಇದೇ ಮೊದಲು ಎನ್ನುವಂತೆ ವಿಶ್ವಾಸಾರ್ಹ ರಾಜ್ಯೋತ್ಸವ ಪ್ರಶಸ್ತಿಗಳು!

ಕನ್ನಡ ಗಣಕಲೋಕದ ಬ್ರಹ್ಮ, ಅಕ್ಷರ ಮಾಂತ್ರಿಕ ಇತ್ಯಾದಿ ಬಿರುದಾಂಕಿತ, ಸಿಂಹ ಕೇಸರ, ಎತ್ತರದ ನಿಲುವಿನ ಕೆಪಿ ರಾಯರನ್ನು ಮೊದಲು ಪರಿಚಯಿಸಿಕೊಳ್ಳುವವರು ಭಯೋತ್ಪಾದನೆಗೊಳಗಾದರೆ ಆಶ್ಚರ್ಯವಿಲ್ಲ. ಆದರೆ ಎಲ್ಲ ವಿಶೇಷಣಗಳಿಗೆ ಸಂಪೂರ್ಣ ಅನ್ವರ್ಥಕರಾಗಿದ್ದುಕೊಂಡೂ ಮೂಕನನ್ನು ಮಾತಾಡಿಸಿ, ಮೂಢನಿಗೆ ಇಷ್ಟು ಸುವಿಚಾರ ತಲೆ ತುಂಬಿ, ಎಂದೂ ಸರಳ...
ನಾಚಿಕೆಯಲ್ಲೆ ಒಂದು ಕವನ ನಾಚಿಕೆ!

ನಾಚಿಕೆಯಲ್ಲೆ ಒಂದು ಕವನ ನಾಚಿಕೆ!

ಉಪ್ಪಿನಂಗಡಿಯ ಗೆಳೆಯ ಗೋಪಾಲಕೃಷ್ಣ ಕುಂಟಿನಿ ನನ್ನಂಗಡಿಗೆ ಬಂದಾಗೆಲ್ಲಾ “ನಿಮ್ಮ ಜಗಳಗಂಟ ಕಡತದಲ್ಲಿ ಹೊಸತೇನಿದೆ” ಎಂದು ಹಾಸ್ಯಕ್ಕೂ ವಾಸ್ತವಕ್ಕೂ ಕೇಳುವುದಿತ್ತು. ನಾನು ಪುಸ್ತಕೋದ್ಯಮಕ್ಕೇ ಸಂಬಂಧಿಸಿದ ಬಹುತೇಕ ಜಗಳಗಳನ್ನು ಒಟ್ಟು ಮಾಡಿ ‘ಪುಸ್ತಕ ಮಾರಾಟ ಹೋರಾಟ’ ಎಂದು ಪುಸ್ತಕವನ್ನೇ ಮಾಡಿ ಪ್ರಕಟಿಸಿಬಿಟ್ಟೆ. ಆ ಕಾಲದಲ್ಲೇ...
ಮೂರು ತಿಂಗಳು ಬಾಳುವ ಹೂವಿನ ಗುಡ್ಡ – ಡಾ| ಕೆ. ಮಹಾಲಿಂಗ ಭಟ್

ಮೂರು ತಿಂಗಳು ಬಾಳುವ ಹೂವಿನ ಗುಡ್ಡ – ಡಾ| ಕೆ. ಮಹಾಲಿಂಗ ಭಟ್

[ಡಾ| ಕೇಜಿ ಭಟ್ಟರನ್ನು ನಾನು ಮೊದಲು ಪುಸ್ತಕ ವ್ಯಾಪಾರಿಯಾಗಿ ಸಂಪರ್ಕಿಸಿದ್ದೆ. ಮುಂದುವರಿದು ನನ್ನದೇ ಹುಚ್ಚಿನ ಬಿಸಿಲೆ ವಲಯಕ್ಕೆ ಚಾರಣಕ್ಕೆ ಕರೆದಾಗ ಹಿರಿತನ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಸರರ ಹಮ್ಮುಗಳೊಂದೂ ಇಲ್ಲದೆ ವಿಜ್ಞಾನಿಯ ಕುತೂಹಲ, ತನಗೆ ತಿಳಿದದ್ದನ್ನು ಇತರರಲ್ಲಿ ಯಾವುದೇ ಕೃಪಣತೆಯಿಲ್ಲದೇ ಹಂಚಿಕೊಳ್ಳುವ...