ಗೋವಾ ಚಿತ್ರೋತ್ಸವ ಭಾಗ – ೨

ಗೋವಾ ಚಿತ್ರೋತ್ಸವ ಭಾಗ – ೨

ಉಡ್‌ಲ್ಯಾಂಡ್ಸ್‌ನಲ್ಲಿ ಪುತ್ತಪ್ಪ ಬ್ಯಾರಿ! ನಮ್ಮ ಅನುಕೂಲಕ್ಕೆ ಹೊರಟರೂ ಕಾದಿದ್ದ ಹವಾನಿಯಂತ್ರಿತ ವ್ಯಾನ್ ಕೂಡಲೇ ನಮ್ಮ ಐವರನ್ನೇ ಉತ್ಸವಾಂಗಣಕ್ಕೆ ಒಯ್ದು ಬಿಟ್ಟಿತು. ಉತ್ಸವದ ಪ್ರಧಾನ ಆಡಳಿತ ಕಚೇರಿ ಬದಿಯ ಹಳೆಯ ಕಟ್ಟಡದಲ್ಲಿತ್ತು (ಅಲ್ಲಿ ಹಿಂದೆ ವೈದ್ಯಕೀಯ ಕಾಲೇಜ್ ಇತ್ತು). ಉತ್ಸವದ ಅತಿಥಿಗಳಿಗೆ ತಲಾ ನಾಲ್ಕು `ಉಪ...