by athreebook | Mar 31, 2018 | ಪರಿಸರ ಸಂರಕ್ಷಣೆ, ಸೈಕಲ್ ದಿನಚರಿ
ಚಕ್ರೇಶ್ವರ ಪರೀಕ್ಷಿತ – ೧೯ ಸಂಜೆಯ ಸೈಕಲ್ ಸವಾರಿ ತೊಕ್ಕೋಟಿಗೆ ಹೋಯ್ತು. ತೊಕ್ಕೋಟಿನ ರೈಲ್ವೇ ಮೇಲ್ಸೇತು ದಾಟಿದ್ದೇ ಬಲದ ಪೆರ್ಮನ್ನೂರಿಗಿಳಿದೆ. ಬಂದ ದಿಕ್ಕಿಗೇ ಮರಳಿದಂತೆ, ರೈಲ್ವೇ ಹಳಿಯ ಸಮಾನಾಂತರದ ದಾರಿಯನ್ನೇ ಆಯ್ದುಕೊಳ್ಳುತ್ತ ಹೋದೆ. ಸವೇರಪುರ್ಬುಗಳ (ನೋಡಿ: `ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು)...