ನಡೆದು ನೋಡಿ ಮಂಗಳೂರು ನರಕ!

ನಡೆದು ನೋಡಿ ಮಂಗಳೂರು ನರಕ!

ಅತ್ರಿ ಬುಕ್ ಸೆಂಟರ್ ಇದ್ದ ಕಾಲದಲ್ಲಿ, ದಿನವಿಡೀ ಕೂತು ಕಾಲು, ದೇಹ ಜಡವೇರುತ್ತಿದ್ದಂತೆ ಸಂಜೆ ದೇವಕಿ ಬರುವುದನ್ನು ಕಾಯುತ್ತಿದ್ದೆ. ಅವಳು ಹೆಚ್ಚುಕಡಿಮೆ ಇಡೀ ಹಗಲು ಮನೆಯೊಳಗೆ, ಅಂಗಳದ ಮಿತಿಯಲ್ಲಿ ಎಷ್ಟು ತಿರುತಿರುಗಿದರೂ ವ್ಯಾಯಾಮದ ಭಾವ ಬರದೇ ತೊಳಲುತ್ತಿದ್ದಳು. ಸಂಜೆಯಾಗುತ್ತಿದ್ದಂತೆ ಇದ್ದ ಇಲ್ಲದ ಕೆಲಸ ಹಚ್ಚಿಕೊಂಡು ಕೇಂದ್ರ...
ನಾವು ಮಾಡಿದ ಪ್ರಯೋಗಗಳು

ನಾವು ಮಾಡಿದ ಪ್ರಯೋಗಗಳು

(ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಐದು) ಅಧ್ಯಾಯ ಒಂಬತ್ತು ಜಿಎಸ್‌ಕೆ ಮೇಷ್ಟ್ರು ಬಹುಶ್ರುತರು: ಬಿಎಸ್‌ಸಿ ಪದವೀಧರರಾಗಿದ್ದುದರಿಂದ ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷೆಗಳ ಜೊತೆಗೆ ವಿಜ್ಞಾನ ವಿಭಾಗಗಳನ್ನೂ ಸಮರ್ಥವಾಗಿ ಬೋಧಿಸಬಲ್ಲವರಾಗಿದ್ದರು. ಪ್ರಧಾನವಾಗಿ ಅವರು ನಮಗೆ ಪ್ರೌಢಶಾಲೆಯಲ್ಲಿ...
‘ಬೋರೇಗೌಡ’ನ ಇನ್ನಷ್ಟು ನೆನಪುಗಳು!

‘ಬೋರೇಗೌಡ’ನ ಇನ್ನಷ್ಟು ನೆನಪುಗಳು!

(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ) ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ! ಬಾಲ್ಯದಲ್ಲಿ ನಾನು ಭಾರೀ ಕಾರುಭಾರಿಯೇನೂ ಅಲ್ಲ. (ಈಗ ಹೌದೆಂದೂ ಅಲ್ಲ! ಈ ಜಾಲತಾಣದ ದೆಸೆಯಲ್ಲಿ ಅನಿವಾರ್ಯವಾಗಿ ನನಗೆ ಬಂದ ‘ನಾಯಕ’ತ್ವಕ್ಕೆ ಇಷ್ಟು ಹೇಳಬೇಕಾಗಿದೆ) ಆದರೂ ಮಡಿಕೇರಿ ಮತ್ತು ಬಳ್ಳಾರಿಯಲ್ಲಿ ವಿಸ್ತಾರದಲ್ಲೇ ಬೆಳೆದ ನಮಗೆ...
ತವರೂರ ದಾರಿಯಲಿ

ತವರೂರ ದಾರಿಯಲಿ

ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಐದು) “ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿವೆ. ಹೊರಡಿ” ನೆಲ. “ಸರಿ” ನೌಕೆ. ಇನ್ನುಳಿದದ್ದು ಅವರು ಭೂಮಿಗೆ ಮರಳಿದ ಕತೆ. ಈ ಪ್ರಯಾಣದಲ್ಲಿ ಹೊಸತು ಅಥವಾ ನಿರೀಕ್ಷೆ ವಿಶೇಷವಾಗಿರದಿದ್ದರೂ ಎದುರಿಸಬೇಕಾದ ಅಪಾಯವೇನೂ ಕಡಿಮೆ ಇರಲಿಲ್ಲ. ಯಾತ್ರಿಕರು ಸಜೀವರಾಗಿ ನೆಲದ ಮೇಲೆ...
ಮರುಭೂಮಿಯಲ್ಲೊಂದು ಓಯಸಿಸ್!

ಮರುಭೂಮಿಯಲ್ಲೊಂದು ಓಯಸಿಸ್!

ಟೆಕ್ಕಿ ಗೆಳೆಯ ಸಂದೀಪ್ ಮಹಾರಾಷ್ಟ್ರದ ಯಾವುದೋ ಅನಾಮಧೇಯ ಹಳ್ಳಿಗಳಲ್ಲಿ ಸಂಶೋಧಕರೊಬ್ಬರಿಗೆ ಮೂಲ ಮಾಹಿತಿ ಸಂಗ್ರಾಹಕನಾಗಿ ವಾರ ಕಾಲ ಓಡಾಡಿ ಬಂದರು. ಅವೆಲ್ಲ ನಾಲ್ಕು ವರ್ಷಗಳಿಂದ ಬರ ಅನುಭವಿಸುತ್ತಿರುವ ವಲಯವಂತೆ. ಸರಕಾರೀ ಭೂ ದಾಖಲೆಗಳನ್ನೆ ಉದ್ಧರಿಸಿ ಸಂದೀಪ್ ಕೂಡಾ ಅದನ್ನು ಹುಲ್ಲುಗಾವಲೆಂದೇ ಹೇಳಿದರೂ ಅದು ಯಾವುದೇ ಮರುಭೂಮಿಗೆ...
ಗಾಂಧೀ ದರ್ಶನ

ಗಾಂಧೀ ದರ್ಶನ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ನಾಲ್ಕು ಅಧ್ಯಾಯ ಆರು ನಾನಿನ್ನೂ ಮಾಧ್ಯಮಿಕ ಶಾಲಾವಿದ್ಯಾರ್ಥಿಯಾಗಿದ್ದಾಗ, ೧೯೪೦ಕ್ಕಿಂತ ಹಿಂದೆ, ಮಹಾತ್ಮ ಗಾಂಧಿ ಮಡಿಕೇರಿಗೆ ಆಗಮಿಸಲಿದ್ದಾರೆಂಬ ಸುದ್ದಿ ಜನಜನಿತವಾಯಿತು. ಕೊಡಗಿನ ಎರಡು ವಾರಪತ್ರಿಕೆಗಳಾದ ‘ಕೊಡಗು’ ಮತ್ತು ‘ಜನ್ಮಭೂಮಿ’ಗಳಲ್ಲಿ ವಿವರಗಳು...
ಬೋರೇಗೌಡ ಬೆಂಗಳೂರಿಗ್ಬಂದ

ಬೋರೇಗೌಡ ಬೆಂಗಳೂರಿಗ್ಬಂದ

(ನಂದಿಹೋಗಲಿರುವ ನಂದಿಯ ಎರಡನೇ ಭಾಗ) ಈ ಸಲದ ನಮ್ಮ ಬೆಂಗಳೂರು ಪ್ರವಾಸದ ಮುಖ್ಯ ಕಲಾಪ ಹಿಂದಿನ ಲೇಖನದಲ್ಲಿ ಹೇಳಿದಂತೆ – ಮಂಟಪರ ‘ಭಾಮಿನಿ’ ಪ್ರದರ್ಶನ ಮತ್ತು ಚರ್ಚೆ. ನಂದಿ ಬೆಟ್ಟದಿಂದ ಹೊರಟ ನಾವು ಸಕಾಲಕ್ಕೆ ತಲಪಿಕೊಂಡೆವು. ಆರೂವರೆಗೇ ಅನೌಪಚಾರಿಕವಾಗಿ ತೊಡಗಿದ ಚರ್ಚೆ, ಪ್ರದರ್ಶನ ಮತ್ತು ಮುಂದುವರಿದ ಚರ್ಚೆ ರಾತ್ರಿ...
ರಾಕೆಟ್ ಮಾರಕಾಸ್ತ್ರ

ರಾಕೆಟ್ ಮಾರಕಾಸ್ತ್ರ

ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ನಾಲ್ಕು) ಗೊಡ್ಡಾರ್ಡನ ಕನಸನ್ನು ತಮ್ಮ ಕನಸೇ ಎಂದು ಅತ್ಯುತ್ಸಾಹದಿಂದ ಸ್ವಾಗತಿಸಿದವರು ವಿಜ್ಞಾನಿಗಳ ಒಂದು ಕಿರಿತಂಡ. ಅದನ್ನು ಸಾಕಷ್ಟು ಧನ ಸಹಾಯದಿಂದ ಮತ್ತು ನಿಷ್ಠಾಪೂರ್ವಕ ದುಡಿಮೆಯಿಂದ ವಾಸ್ತವವಾಗಿಸಬೇಕು ಎಂದು ಅವರು ಪಣತೊಟ್ಟರು. ಇವರು ನಾಝೀ ಜರ್ಮನಿಯ...
ನಂದಿಹೋಗಲಿರುವ ನಂದಿ – ಖ್ಯಾತ ಗಿರಿಧಾಮದ ವಿಭಿನ್ನ ಕತೆ!!

ನಂದಿಹೋಗಲಿರುವ ನಂದಿ – ಖ್ಯಾತ ಗಿರಿಧಾಮದ ವಿಭಿನ್ನ ಕತೆ!!

ಅಭಯನಿಗೀಗ ಕತೆ ಹೇಳುವ ವೃತ್ತಿ. ನಟರಾಜನಿಂದ ತೊಡಗಿ, ಝಣ ಝಣ ಲಕ್ಷ್ಮೀಪುತ್ರನಿಗೆ, ಕಟಿಪಿಟಿ ನಟೀಮಣಿಗೆ, ಕಾವ್ಯಶ್ರೀಗೆ, ವಿಶ್ವಕರ್ಮನಿಗೆ, ಕಂಠಶ್ರೀಗೆ ಮುಂತಾದವರಿಗೆ ಹೊಸಹೊಸದಾಗಿ ಬರೆದು ಓದುತ್ತಿರುತ್ತಾನೆ. ಕೆಲವೊಮ್ಮೆ ಇವರನ್ನೆಲ್ಲ ಸೇರಿಸಿ ಸಮೂಹ ಘೋಷದಲ್ಲಿ ಸಾರ್ವಜನಿಕಕ್ಕೂ ಇವನು ಹೇಳುವುದು ಕಥೆಯನ್ನೇ. (ಹಾಗೆ ಬಂದವುಗಳೆ...
ಶಾಲೆ ತೊಡಿಸಿದ ಕಡಿವಾಣ

ಶಾಲೆ ತೊಡಿಸಿದ ಕಡಿವಾಣ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಮೂರು ಅಧ್ಯಾಯ ನಾಲ್ಕು ಮೋಡದಂತೆ ತೇಲಿ, ಹಕ್ಕಿಯಂತೆ ಹಾರಿ, ಕಪ್ಪೆಯಂತೆ ಜಿಗಿದು ಸರ್ವತಂತ್ರ ಸ್ವತಂತ್ರನಾಗಿ ಬೆಳೆಯುತ್ತಿದ್ದ ನನ್ನನ್ನು ಐದು ವರ್ಷ ತುಂಬಿದಾಗ ಶಾಲೆಗೆ ಸೇರಿಸಿದರು (೧೯೩೧). ಅದರ ಹೆಸರು ಸರ್ಕಾರೀ ಮಾಧ್ಯಮಿಕ ಪ್ರಾಥಮಿಕ ಶಾಲೆ –...