by athreebook | Aug 27, 2009 | ಗುಹಾ ಶೋಧನೆ, ವೈಚಾರಿಕ
ನೆಲ್ಲಿತಟ್ಟುತೀರ್ಥ ಘಟ್ಟ ಕೊರೆಯುವ ಆವೇಶ ಕಳಚಿದ pious-ವಿನಿ ಇಲ್ಲಿ ಆದೂರು ವಲಯದ ದಟ್ಟಾರಣ್ಯ ಪೊರೆವ ಮಂದಗಾಮಿನಿ. ಅದಕ್ಕೆ ಸಮಾನಾಂತರದಲ್ಲಿದ್ದ ಜಾಲ್ಸೂರು – ಕಾಸರಗೋಡು ರಸ್ತೆಯಲ್ಲಿ ಆ ಬೆಳಿಗ್ಗೆ (೨೪-೫-೧೯೮೧, ಆದಿತ್ಯವಾರ) ನಾನು ಯೆಜ್ದಿ ಮೋಟಾರು ಸೈಕಲ್ಲಿನಲ್ಲಿ ಭಾವ ಶಂಕರನಾರಾಯಣನನ್ನು ಬೆನ್ನಿಗೆ ಏರಿಸಿಕೊಂಡು...
by athreebook | Aug 22, 2009 | ಗುಹಾ ಶೋಧನೆ, ವೈಚಾರಿಕ
ಎಪ್ಪತ್ತನೇ ದಶಕದ ಕೊನೆಯ ಭಾಗ ಹೀಗೇ ಒಂದು ದಿನ ಮುಚ್ಚೂರು ಬಳಿಯ ನೆಲ್ಲಿತೀರ್ಥ ಗುಹೆ ನೋಡಲು ನಾಲ್ಕು ಮಿತ್ರರು ಹೋಗಿದ್ದೆವು. ಆ ಗುಹೆಯ ಬಾಗಿಲಿನಲ್ಲಿ ಒಂದು ದೇವಸ್ಥಾನವೂ ಇತ್ತು. ಕಾಲದ ಹರಿವಿನಲ್ಲಿ ಜನಮನ ಗುಹೆಯ ಪ್ರಾಕೃತಿಕ ಸತ್ಯವನ್ನು ಕಂದಾಚಾರದ ವಿಧಿ ನಿಷೇಧಗಳಿಗೆ ಇಳಿಸಿದ್ದನ್ನು ನಾನು ವಿಷಾದದಿಂದ ಗುರುತಿಸಿದ್ದೆ ಮತ್ತು...
by athreebook | Aug 8, 2009 | ಜಮಾಲಾಬಾದ್, ಪರ್ವತಾರೋಹಣ
(ಕುದ್ರೆಯ ನೆರಳಲ್ಲೊರಗಿದ ಕರಿರಾಯ ಭಾಗ 3) ಕಳೆದ ಶತಮಾನದ ಅಪರ ಭಾಗದ ಕಥೆಯಿದು. ಅಂದರೆ ಸನ್ ಸಾವಿರದೊಂಬೈನೂರಾ ಎಪ್ಪತ್ತಾರನೇ ಇಸವಿಯ ಸುಮಾರಿಗೆ (ಇನ್ನೂ ಮಂಗಳೂರು ವಿಶ್ವವಿದ್ಯಾನಿಲಯ ಕಣ್ಣುಬಿಡದ ಕಾಲ) ಮಿತ್ರ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯ ಕನ್ನಡ ಅಧ್ಯಾಪಕ (ಇಂದು...
by athreebook | Aug 3, 2009 | ಜಮಾಲಾಬಾದ್, ಪರ್ವತಾರೋಹಣ
(ಕುದುರೆಯ ನೆರಳಲ್ಲೊರಗಿದ ಆನೆ ೨) ಬೆಳ್ತಂಗಡಿಯ ದಿಗಂತದಲ್ಲಿ, ಬಂಗಾಡಿ – ಕಿಲ್ಲೂರು ಕೊಳ್ಳದ ಬಾಗಿಲಲ್ಲಿ ನಿಂತ ಏಕಶಿಲಾ ಶಿಖರ ಜಮಾಲಾಬಾದ್. ಉತ್ತರ ದಕ್ಷಿಣವಾಗಿ ಹಬ್ಬಿದ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯಿಂದ ಕರಾವಳಿಯತ್ತ ಚಾಚಿದ ಒಂದು ಕಿರುಶ್ರೇಣಿಯ ಪೂರ್ಣ ಶಿಲಾಕೊನೆಯಿದು. ಅಂತಿಂಥ ಬಂಡೆ ಇದಲ್ಲ! ಪಶ್ಚಿಮ ಘಟ್ಟದ...
by athreebook | Jul 29, 2009 | ಜಮಾಲಾಬಾದ್, ಪರ್ವತಾರೋಹಣ
೧೯೬೬ರ ಸುಮಾರಿಗೆ ನಾನಿನ್ನೂ ಬೆಂಗಳೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ. ನನ್ನ ತಂದೆ, ತನ್ನ ಕಾಲೇಜಿನ ಎನ್‌ಸಿಸಿ ಶಿಷ್ಯರ ತಂಡದೊಡನೆ ಕುದುರೆಮುಖ ಶಿಖರಕ್ಕೆ ನಡೆಸಿದ ಸಾಹಸ ಯಾತ್ರೆ ನನ್ನ ಮನೋಭಿತ್ತಿಯಲ್ಲಿ ಎವರೆಸ್ಟ್ ಸಾಧನೆಯಂತೇ ದಾಖಲಾಯಿತು. ಆ ಸಾಹಸ ಯಾತ್ರೆಯ ಪ್ರಾಥಮಿಕ ಆಯ್ಕಾ ಪರೀಕ್ಷೆಗಳಲ್ಲಿ ಹೊರಗಿನವನಾಗಿಯೇ ನಾನು...
by athreebook | Jul 12, 2009 | ಪರ್ವತಾರೋಹಣ, ವೈಚಾರಿಕ
ನಂದಿಬೆಟ್ಟ ನೂರಾರು ಅಡಿ ಎತ್ತರದ ಬೋಳು ಬಂಡೆ. ಟಿಪ್ಪುಸುಲ್ತಾನ್ ಅದರ ಒಂದಂಚಿನಲ್ಲಿ ಅಪರಾಧಿಗಳನ್ನು ನಿಲ್ಲಿಸಿ ಪ್ರಪಾತಕ್ಕೆ ನೂಕಿಸಿ ಸಾಯಿಸುತ್ತಿದ್ದನಂತೆ. ಸಹಜವಾಗಿ ಆ ಕಮರಿಯನ್ನು ‘ಟಿಪ್ಪೂ ಡ್ರಾಪ್’ ಎಂದೇ ಜನ ಗುರುತಿಸಿದ್ದಾರೆ. ಈಚೆಗೆ ಅದರ ಅಂಚಿನಲ್ಲಿ ನಗುನಗುತ್ತಾ ನಿಂತಿದ್ದ ಒಬ್ಬ ಕಮರಿಗೆ ಹಾರಿದ! ಏನು ಜೀವನದಲ್ಲಿ...
by athreebook | Jul 1, 2009 | ವ್ಯಕ್ತಿಚಿತ್ರಗಳು
ಜೂನ್ ೨೦೦೯ರ ಚರ್ಚೆಗೊಂದು ಚಾವಡಿ ಬಂದ ಕ್ಷಣವೇ ಮಗುಚಿಹಾಕಿ ಮಿತ್ರ ನರೇಂದ್ರ ಪೈ ಅವರಿಗೆ ದೂರವಾಣಿಸಿ ಅಭಿನಂದಿಸಿದೆ; ‘ತಮ್ಮ ಹೆಸರು ಪತ್ರಿಕೆಗಳಲ್ಲಿ ಬರಲಿ ಎಂಬ ಕಾರಣಕ್ಕಾಗಿ ಪತ್ರಿಕೆಗಳಿಗೆ ಪತ್ರ ಬರೆಯುವವರ ಸಾಲಿನಲ್ಲಿ ಸೇರದವರು ನರೇಂದ್ರ ಎಂದೇ ಈ ಆಪ್ತ ಪತ್ರಿಕೆ ಗುರುತಿಸಿಬಿಟ್ಟಿತ್ತು. ಅಂಗೈ ಅಗಲದ ಕೇವಲ ನಾಲ್ಕು ಪುಟದ ಈ...
by athreebook | Jun 26, 2009 | ಅಂಡಮಾನ್ ಪ್ರವಾಸ, ಪ್ರವಾಸ ಕಥನ
ಪ್ರಿಯ ಆನಂದಾ, [ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನನನ್ನು ಉದ್ದೇಶಿಸಿದ ಅರೆ-ಖಾಸಗಿ ಪತ್ರವಿದು. ಹೆಚ್ಚಿನ ವಿವರಗಳಿಗೆ ‘ಮೆಕ್ಸಿಕೋಕ್ಕೆ ಬನ್ನಿ, ಅಂಡಮಾನ್ ಬಿಡಿ’ ಸೇರಿದಂತೆ ಇದರದ್ದೇ ಹಿಂದಿನ ಆರು ಭಾಗಗಳನ್ನು ಇಲ್ಲೇ ನೋಡಿ. ಪ್ರತಿ ಓದುಗನ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ...
by athreebook | Jun 7, 2009 | ಪುಸ್ತಕೋದ್ಯಮ
ಮಾನ್ಯರೇ ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವೀಧರನಾಗಿ ಹೊರಬಂದರೂ (೧೯೭೪) ತಾಬೇದಾರಿಯನ್ನು ಬಯಸದೆ ಮಂಗಳೂರಿನಲ್ಲಿ ಈ ಪುಸ್ತಕದ ಅಂಗಡಿಯನ್ನು ತೆರೆದು (೧೯೭೫) ನಿಂತೆ. ಈ ಮೂವತ್ನಾಲ್ಕು ವರ್ಷಗಳ ನನ್ನನುಭವದ ಲಾಭ ನಿಮ್ಮ ಖಾತಾನಿರ್ವಹಣೆಯಲ್ಲಿ ಬಳಕೆಗೆ ಬಂದು ಸಾಮಾಜಿಕ ಹಿತ ಹೆಚ್ಚುವುದಾದರೆ ಯಾಕೆ ಬೇಡ...
by athreebook | Jun 3, 2009 | ಅನ್ಯರ ಬರಹಗಳು, ಆನಂದವರ್ಧನ ಜಿ.ಎನ್, ಪ್ರವಾಸ ಕಥನ
ನನ್ನ ಅಂಡಮಾನ್ ಕಥನದ ನಡುವೆ ಒಮ್ಮೆ ನಿಮ್ಮನ್ನೆಲ್ಲ ದಾರಿ ತಪ್ಪಿಸಿ ನನ್ನ ತಮ್ಮ ಆನಂದ ಕೇವಲ ಕುಟುಂಬಿಕರ ಓದಿಗಾಗಿ ಬರೆದಿದ್ದ ಮೆಕ್ಸಿಕೋ ಪ್ರವಾಸ ಕಥನದ ಎರಡನೇ ಮೂರು (೨/೩) ಉದ್ದಕ್ಕೆ ಒಯ್ದಿದ್ದೆ. ಏನೇನೂ ನಿರೀಕ್ಷೆಯಿಲ್ಲದೆ ಪ್ರಕಟವಾದ ಮತ್ತೆ ಅದಕ್ಕೆ ಬಂದ ಒಳ್ಳೆಯ ಪ್ರತಿಕ್ರಿಯೆಗಳನ್ನು ನೋಡಿ ಸ್ವತಃ ಆನಂದನೇ ಉಬ್ಬಿದ್ದನ್ನು...