ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!

ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!

ಮೊನ್ನೆ ಗೆಳೆಯ ವೆಂಕಟ್ರಮಣ ಉಪಾಧ್ಯರು “ಇದೊಂದು ವಿಚಿತ್ರ ನದಿ ನೋಡಿ ಮಾರಾಯ್ರೇ. ಜನರ ಹುಚ್ಚಾಟವನ್ನಿದು ಮನ್ನಿಸಿ, ಮತ್ತೆ ಮತ್ತೆ ಸಂಭ್ರಮಕ್ಕೆ ಅವಕಾಶ ಕೊಡುತ್ತಲೇ ಇದೆಯಂತೆ!” ಎಂದು ಈ ಸೇತು ಕೊಟ್ಟರು: ನಾನು ನೋಡಿದೆ, ನಿಸ್ಸಂದೇಹವಾಗಿ ಸಂತೋಷಪಟ್ಟೆ. ಆದರೆ ಮರುಕ್ಷಣಕ್ಕೆ ಉದ್ಗರಿಸಿದ್ದಿಷ್ಟೇ “ಅಯ್ಯೋ ಇದು...
ಹಳೆಯಂಗಡಿಯ ಹೊಸ ಸಾಹಸ – ಸೈಕಲ್ ಸಂಘ

ಹಳೆಯಂಗಡಿಯ ಹೊಸ ಸಾಹಸ – ಸೈಕಲ್ ಸಂಘ

ಮಂಗಳೂರು ಕರಾವಳಿಯ ಚಳಿಗಾಲ ನಿಜದಲ್ಲಿ ಸೈಕಲ್ ಚಟುವಟಿಕೆಗಳಿಗೆ ಬಹಳ ಉತ್ತಮ ಕಾಲ. ಸಹಜವಾಗಿ ಅಂದು (೩೦-೧೨-೨೦೧೭) ಬೆಳಿಗ್ಗೆ ಎಂಟಕ್ಕೆ ಸೈಕಲ್ ಉಡುಪಿ ದಾರಿಯಲ್ಲಿ ಪೆಡಲೊತ್ತತೊಡಗಿದವ ಸುಮಾರು ೨೦ ಕಿಮೀ ಸವಾರಿಯನ್ನು ಒಂಬತ್ತಕ್ಕೆ ಸರಿಯಾಗಿ ವಿರಮಿಸಿದ ಸ್ಥಳ – ಹಳೆಯಂಗಡಿ ಸಪಪೂ ಕಾಲೇಜು ವಠಾರ. ಅಲ್ಲಿ ಮುಕ್ತ ವೇದಿಕೆಯ ಮೇಲೆ...
ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!

ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!

ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯ’ಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ ಮನಸ್ಸಾಯ್ತು. ಮಂಗಳೂರು, ಚಾರ್ಮಾಡಿ, ಮೂಡಿಗೆರೆ, ಸಕಲೇಶಪುರ, ಶಿರಾಡಿಗಾಗಿ ವಾಪಾಸು – ನಮ್ಮ ಯೋಜನೆ. ತಿಂಗಳ ಹಿಂದೆಯೇ ಮಾರ್ಚ್ ೧೨,೧೩ರ ಮುಹೂರ್ತವೇನೋ ನಿಕ್ಕಿಯಾಯ್ತು. ಆದರೆ ನಿವೃತ್ತ ನನ್ನನ್ನುಳಿದು ಮೂವರಿಗೂ ವೃತ್ತಿ...
ಅಣ್ಣನ ಸ್ಮೃತಿಗಾಗಿ ಉರುಳು ಸೇವೆ

ಅಣ್ಣನ ಸ್ಮೃತಿಗಾಗಿ ಉರುಳು ಸೇವೆ

ಎ.ಪಿ. ತಿಮ್ಮಪ್ಪಯ್ಯ, ಅಂದರೆ ಪುತ್ತೂರಿನಾಚಿನ ಹಳ್ಳಿ ಮರಿಕೆಯಲ್ಲಿದ್ದ ನನ್ನ ದೊಡ್ಡ ಸೋದರಮಾವ, ನಾನು ಸಂಬೋಧಿಸುತ್ತಿದ್ದಂತೆ ಅಣ್ಣ, ಸುಮಾರು ಎರಡು ವರ್ಷದ ಹಿಂದೆ ತೀರಿಹೋದದ್ದರ ನೆನಪಿನ ದಿನವದು (೨೫-೨-೨೦೧೬). (ನೋಡಿ: ಅಸಮ ಸಾಹಸಿ, ಮರಿಕೆಯ ಅಣ್ಣ) ಆ ನೆಪದಲ್ಲಿ ಬಾಲ್ಯದ ನೆನಪುಗಳನ್ನು ಮತ್ತೆ ಹೆಕ್ಕುವ, ಆಪ್ತರೊಡನೆ ಒಡನಾಡುವ...
ಕುದುರೆಮುಖಕ್ಕೆ ಸೈಕಲ್ ಸವಾರಿ

ಕುದುರೆಮುಖಕ್ಕೆ ಸೈಕಲ್ ಸವಾರಿ

ನಿಶ್ಚಲ ಕತ್ತಲಿನಲ್ಲಿ, ಚಳಿಗಾಲದ ತೆಳು ಮಂಜಿನ ಹೊದಿಕೆಯಲ್ಲಿ, ಮೂಕವಾಗಿದ್ದ ದಾರಿಗೆ ಒಮ್ಮೆಗೇ ನಾಲ್ಕು ಜೋಡಿ ಚಕ್ರಗಳು ಚಕ್ಕಂದಕ್ಕೆ ಸಿಕ್ಕ ಸಂಭ್ರಮ “ರೊಂಯ್ ರೊಂಯ್, ರೊಂಯ್!” ಕರಿಯ ಹೊಗೆಯಿಲ್ಲ, ಕರ್ಕಶ ಧ್ವನಿಯಿಲ್ಲ, ಹರಿದೋಡುವ ಧಾವಂತವಿಲ್ಲ – ಸಮಾಧಾನದ ಸವಾರಿಯ ನಾಲ್ಕು ಸೈಕಲ್ಲುಗಳು, ಮೇಲೆ ಸವಾರರು. ಮಾರ್ಗದಂಚಿನ ಬಿಳಿಗೀಟು...
ನಿತ್ಯ ಹಸಿರುಳಿಸಿದ ನೀಲಗಿರಿಯಾನ

ನಿತ್ಯ ಹಸಿರುಳಿಸಿದ ನೀಲಗಿರಿಯಾನ

(ನೀಲಗಿರಿಗೆ ಸೈಕಲ್ ಸವಾರಿ – ಅಂತಿಮ ಭಾಗ) ಉದಕಮಂಡಲದಲ್ಲಿ ತ್ರಿಕೋನದ ಮೂರು ಮೂಲೆಗಳಂತೆ ಮುಖ್ಯ ನಗರಗಳಿವೆ. ಮೈಸೂರು ಮೂಲೆಯಲ್ಲಿನ ಮುಖ್ಯ ನಗರಿ ಊಟಿ. ಅದರ ನೇರ ಮುಂದುವರಿಕೆಯಾಗಿ ಸಿಗುವ ಕೂನೂರು ಮೆಟ್ಟುಪಾಳ್ಯಂ ಮೂಲೆಯಲ್ಲಿದೆ. ಇವೆರಡರ ಸುಮಾರು ಸಮಾನ ಅಂತರದ ಎದುರು ಮೂಲೆಯಲ್ಲಿನ ನಗರಿ ಕೋತಗೇರಿ. ಇದನ್ನು ಕಾಡುಮೂಲೆ...