ನೇತ್ರಾವತಿ ನದಿ ತಿರುವು – ರಾಷ್ಟ್ರೀಯ ಕಮ್ಮಟ

ನೇತ್ರಾವತಿ ನದಿ ತಿರುವು – ರಾಷ್ಟ್ರೀಯ ಕಮ್ಮಟ

ದಕಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಮೂಲದಲ್ಲೇ (ಜಲಾನಯನ ಪ್ರದೇಶದಲ್ಲೇ) ಪೂರ್ಣ ಕುಲಗೆಡಿಸುವ ಕೆಲಸಕ್ಕೆ ಹೊಸ ಮತ್ತು ದೊಡ್ಡ ಹೆಸರು – ‘ಎತ್ತಿನಹೊಳೆ (ಎತ್ತು ನೀರಾವರಿ) ತಿರುವು ಯೋಜನೆ. ‘ನೇತ್ರಾವತಿ ನದಿ ತಿರುವು ಎಂಬ ಮಹಾಯೋಜನೆ ನಾಡಿನಾದ್ಯಂತ ಪರಿಸರಾಸಕ್ತರು ಮತ್ತು ಸ್ವಲ್ಪ ಹೆಚ್ಚೇ ದಕ ಜಿಲ್ಲೆಯ ವಿಚಾರಪರರು ಒಡ್ಡಿದ...
ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು

ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು

(ಸೈಕಲ್ ಅಭಿಯಾನ ೨೦೧೩) ಜಂಟಿ ಸೈಕಲ್ ಬಳಸುತ್ತ ನಾವು ವರ್ಷವೇನೋ ಕಳೆದೆವು. ಆದರೆ ಒಂಟಿಯಾಗಿ ನನಗೆ ಎರಡೆರಡು ಬಾರಿ ಸೈಕಲ್ ರ‍್ಯಾಲೀ ಅನುಭವ ಕೊಟ್ಟ ಆರೆಕ್ಸ್ ಲೈಫ್ ಬಳಗದ ವರ್ಷಾವಧಿ ಸೈಕಲ್ ರ‍್ಯಾಲೀಯಲ್ಲಿ ಭಾಗವಹಿಸಲಾಗದ ಬೇಸರವುಳಿದೇ ಇತ್ತು. ಅದು ಇಂದು (೨೦೧೩ ಡಿಸೆಂಬರ್ ೮) ತೀರಿತು. ಸುಮಾರು ಒಂದು ಸಾವಿರದ...
ನರಕದ ನೀರು ಇದು! ತುಂಬಾ ಕ್ಲೀನ್ ಇದೆ ಸಾರ್!

ನರಕದ ನೀರು ಇದು! ತುಂಬಾ ಕ್ಲೀನ್ ಇದೆ ಸಾರ್!

ಪೀಠಿಕೆ: ಮೊನ್ನೆ ಬೆಂಗಳೂರಿನಲ್ಲಿ ‘ಸಕ್ಕರೆ ತಿಂದು, ನೀರು ಕುಡಿದ’ ಮೇಲೆ ನಾನು ದೇವಕಿ ಬೈಕೇರಿ ಮೈಸೂರಿಗೆ ಬಂದೆವು. ನನ್ನ ಮೂಲಮನೆ ‘ಅತ್ರಿ’ಯಲ್ಲಿ ತಾಯಿಯನ್ನು ಕಂಡು, ಎರಡು ದಿನ ವಿರಾಮದಲ್ಲಿದ್ದು ಮಂಗಳೂರಿಸುವ ಯೋಜನೆ ನಮ್ಮದು. ನೆಲವಿರುವುದೇ ನಗರ ವಿಸ್ತರಣೆಗೆಂಬಂತೆ ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣಾದಿ...
ಜಂಟಿ ಸೈಕಲ್ ಬೆನ್ನೇರಿ

ಜಂಟಿ ಸೈಕಲ್ ಬೆನ್ನೇರಿ

(ಕಳೆದ ವಾರದ ‘ನಡೆದು ನೋಡು ಮಂಗಳೂರು ನರಕ’ದ ಜಾಡಿನಲ್ಲಿ ಎರಡನೇ ಭಾಗ) ಮಂಗಳೂರ ದಾರಿಗಳ ನವೀಕರಣದಲ್ಲಿ ಸುಖಕರ ಸವಾರಿಗೆ ನುಣುಪಿನ ಮೇಲ್ಮೈ ಧಾರಾಳ ಬರುತ್ತಿದೆ. ಇದು ಗುಡ್ಡೆ ಕಣಿವೆಗಳ ಊರಾದರೂ ಹೊಸ ಪ್ರಕ್ರಿಯೆಯಲ್ಲಿ ಏರಿಳಿತಗಳೂ ಸೌಮ್ಯಗೊಳ್ಳುತ್ತಿವೆ. ಇಲ್ಲಿ ವಾಹನ ಸಂಮರ್ದ ಕಡಿಮೆ ಇಲ್ಲ ಮತ್ತು ಚಾಲನಾಶಿಸ್ತು ಹೆಚ್ಚು ಇಲ್ಲ! ಆದರೂ...
ನಡೆದು ನೋಡಿ ಮಂಗಳೂರು ನರಕ!

ನಡೆದು ನೋಡಿ ಮಂಗಳೂರು ನರಕ!

ಅತ್ರಿ ಬುಕ್ ಸೆಂಟರ್ ಇದ್ದ ಕಾಲದಲ್ಲಿ, ದಿನವಿಡೀ ಕೂತು ಕಾಲು, ದೇಹ ಜಡವೇರುತ್ತಿದ್ದಂತೆ ಸಂಜೆ ದೇವಕಿ ಬರುವುದನ್ನು ಕಾಯುತ್ತಿದ್ದೆ. ಅವಳು ಹೆಚ್ಚುಕಡಿಮೆ ಇಡೀ ಹಗಲು ಮನೆಯೊಳಗೆ, ಅಂಗಳದ ಮಿತಿಯಲ್ಲಿ ಎಷ್ಟು ತಿರುತಿರುಗಿದರೂ ವ್ಯಾಯಾಮದ ಭಾವ ಬರದೇ ತೊಳಲುತ್ತಿದ್ದಳು. ಸಂಜೆಯಾಗುತ್ತಿದ್ದಂತೆ ಇದ್ದ ಇಲ್ಲದ ಕೆಲಸ ಹಚ್ಚಿಕೊಂಡು ಕೇಂದ್ರ...
ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್

ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್

(ಶರತ್ ಕಥನದಲ್ಲಿ ಎರಡನೇ ಮತ್ತು ಅಂತಿಮ ಭಾಗ) – ಬಿ.ಕೆ. ಶರತ್ ಬ್ರ| ಓಡ್ರಿಕ್ ದೇವಾನಂದರಿಗೊಬ್ಬ ಬಾಡಿಗೆ ಕಾರಿನ ಗೆಳೆಯನಿದ್ದ, ಹೆಸರು ಜೋಸೆಫ್. ಅಲ್ಲದೇ ಹೋಗಿದ್ದರೆ, ಬರಿಯ ಬಾಡಿಗೆ ಮುಖ ನೋಡುವ ಯಾವ ಕಾರಿನವನೂ ಜುಜುಬಿ ಇಪ್ಪತ್ತು ಕಿಮೀಯ ಒಂದು ಓಟಕ್ಕೆ ಸ್ವಂತ ಕಾರನ್ನು ಹಾಳು ಮಾಡಿಕೊಂಡು, ಇಡೀ ದಿನ ಇಬ್ಬರು ಹುಡುಗರೊಡನೆ...