ತೇನ್ ಸಿಂಗ್ ಬಿಳಿಮಲೆ ಮತ್ತು ‘ಕಾಗೆ ಮುಟ್ಟಿದ ನೀರು’

ತೇನ್ ಸಿಂಗ್ ಬಿಳಿಮಲೆ ಮತ್ತು ‘ಕಾಗೆ ಮುಟ್ಟಿದ ನೀರು’

ಬಹುಮಂದಿಗೆ ಪಶ್ಚಿಮ ಘಟ್ಟದ ದಿಗ್ಗಜಗಳ (ಕುದುರೆಮುಖ, ಕುಮಾರ ಪರ್ವತ…) ಗಹನತೆ ಅಡಿ, ಮೀಟರ್‍ಗಳಲ್ಲಿ ಹೇಳಿದರೆ ಮುಟ್ಟುವುದಿಲ್ಲ. ಅವರಿಗೆ ನಿತ್ಯ ಕಾಣುವ ಬಲ್ಲೇರಿ, ಕಳಂಜಿಮಲೆ, ಬಿರುಮಲೆ, ಬಂಟಮಲೆಗಳೇ ನಿಜದ ಅಳತೆಗೋಲು. ನಾನು ಅವನ್ನೂ ಅನುಭವಿಸುವ ಸರಣಿಯಲ್ಲಿ, ಒಂದು ಮಳೆ ದಿನದ ಬೆಳಿಗ್ಗೆ ಬಂಟಮಲೆ ಆಯ್ದುಕೊಂಡಿದ್ದೆ....
ಜಿಟಿ ನಾರಾಯಣ ರಾವ್ – ನನಗೆ ದಕ್ಕಿದ್ದು!

ಜಿಟಿ ನಾರಾಯಣ ರಾವ್ – ನನಗೆ ದಕ್ಕಿದ್ದು!

ಜಾತಿ ಮತಗಳ ಚಕ್ರ ಸುಳಿ ಮೀರಿ – ೬ ಹುಟ್ಟಿನ ಆಕಸ್ಮಿಕದೊಡನೇ ಸಮಾಜದಲ್ಲಿ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಭಾವನಾತ್ಮಕ ಜವಾಬ್ದಾರಿಗಳೂ ಸೇರಿಕೊಳ್ಳುತ್ತವೆ. ಅವನ್ನು ಹೊರತುಪಡಿಸಿ ಒಂದು ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಈ...
ಸದಾಶಿವ ನೀಲಕಂಠನಲ್ಲ!

ಸದಾಶಿವ ನೀಲಕಂಠನಲ್ಲ!

ಆ ಬೆಳಿಗ್ಗೆ (ಸೆಪ್ಟೆಂಬರ್ ೧೧,೨೦೧೯) ಆಕಾಶದಲ್ಲಿ ಮೋಡ ಕಟ್ಟಿದ್ದು ನೋಡಿ ನಾನು ಸೈಕಲ್ ಸರ್ಕೀಟ್ ಕೈ ಬಿಟ್ಟಿದ್ದೆ. ಆದರೆ ಸುಮಾರು ಏಳೂವರೆಯ ಹೊತ್ತಿಗೆ ದೇವಕಿಗೆ ನಳಿನಿಯ ಫೋನ್ ಕರೆ ಬಂತು.”ಅಶೋಕ ಭಾವ ಇದ್ದರೆ, ಕೂಡಲೇ ಬೈಕೇರಿ ನಮ್ಮನೆಗೆ ಬರಲಿ. ಸೈಕಲ್ ಬೇಡ”. ನಾನು ದಡಬಡ ಬಟ್ಟೆ ಬದಲಿಸಿ, ಬೈಕ್ ತೆಗೆಯುವುದರೊಳಗೆ...
ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು

ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು

ಎ.ಪಿ. ಗೌರೀಶಂಕರ ಇನ್ನಿಲ್ಲ – ೧ ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ ಸೋದರ ಮಾವ ಎ.ಪಿ. ಗೌರೀಶಂಕರ (ಶ್ರೀಶೈಲ) ಹಾಗೂ ನನ್ನ (ಅಭಯಾದ್ರಿ) ಮನೆಗಳು ಸ್ವತಂತ್ರವೇ ಇದ್ದರೂ ರೂಢಿಯಲ್ಲಿ ಒಂದೇ ವಠಾರ ಎಂಬಂತೇ ಇವೆ. ಎರಡೂ ಮನೆಗೆ ನಂದಿನಿ ಹಾಲು ತಂದು ಕೊಡುವ ಜವಾಬ್ದಾರಿ ನನ್ನದು....
ಕೊನೆಯ ಕೊಂಡಿ ಕಳಚಿತು

ಕೊನೆಯ ಕೊಂಡಿ ಕಳಚಿತು

ಎ.ಪಿ. ರಮಾನಾಥ ರಾವ್ – ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ (೧೬-೫-೧೯) ತನ್ನ ೮೨ರ ಹರಯದಲ್ಲಿ, ತೀರಿಹೋದರು. ಬಳಕೆಯ ಸರಳತೆಯಲ್ಲಿ – ‘ರಾಮನಾಥ’, ವಿದ್ಯಾ ದಿನಗಳಲ್ಲಿ ಬಯಸಿ, ಮದ್ರಾಸಿನ (ಇಂದಿನ ಚೆನ್ನೈ) ಪಶುವೈದ್ಯಕೀಯ ಕಾಲೇಜು ಸೇರಿದ್ದ. ಆದರೆ...
ರಾಘವೇಂದ್ರ ಉರಾಳರು ದಿನ ಮುಗಿಸಿದರು

ರಾಘವೇಂದ್ರ ಉರಾಳರು ದಿನ ಮುಗಿಸಿದರು

೧೯೭೫ರಲ್ಲಿ ನಾನು ಮಂಗಳೂರಿಗೆ ಬಂದಾಗ ವಾಸಕ್ಕೆ ನೆಲೆ ಕೊಟ್ಟದ್ದು ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ (ಬಿ.ವಿ. ಕೆದಿಲಾಯರ ಕೃಪೆ). ಆಗ ಅಲ್ಲಿದ್ದ ಹತ್ತಿಪ್ಪತ್ತು ದುಡಿಯುವ ಮಂದಿಗಳಲ್ಲಿ ಒಬ್ಬರಾಗಿ, ಅಷ್ಟೂ ಮಂದಿಗಿಂತ ಹಿರಿಯರಾದರೂ ವೈಚಾರಿಕವಾಗಿ ಸದಾ ಅತ್ಯಾಧುನಿಕರಾಗಿ, ಪರಿಚಯಕ್ಕೆ ಬಂದವರು – ಡಾ| ಕೆ. ರಾಘವೇಂದ್ರ ಉರಾಳ....