ಕುದುರೆ ಬಿಟ್ಟಿಳಿಯುವ ದುಃಖ

ಕುದುರೆ ಬಿಟ್ಟಿಳಿಯುವ ದುಃಖ

ಕುದುರೆ ಮುಖದಾಸುಪಾಸು – ೯ “ಪದ ಕುಸಿಯೆ ನೆಲವಿಹುದು ಮಂಕುತಿಮ್ಮ” ಮಳೆ ಬಿಟ್ಟ ಬೆಟ್ಟದ ಇಳಿಜಾಡಿನಲ್ಲಂತೂ ಮತ್ತೆ ಮತ್ತೆ ನೆಗ್ಗಿದ ಅಂಡು ಒರೆಸಿಕೊಳ್ಳುವಾಗ ನೆನಪಿಗೆ ಬರುತ್ತಲೇ ಇತ್ತು! ಆದರೂ ಮಳೆ ತೊಳೆದ ಹಸಿರು, ಕಣಿವೆಬಟ್ಟಲ ಅಂಚಿನಲ್ಲಿ ಉಕ್ಕುತ್ತಿದ್ದ ಮೋಡಗಳ ಆಟ ನಮ್ಮನ್ನು ಆಗಾಗ ಮುಖವೆತ್ತಿ ನೋಡುವಂತೆ ಪ್ರೇರಿಸುತ್ತಿತ್ತು....
ಹಿರಿಮರುದುಪ್ಪೆಯೆಂದು ಕಾಡುಪಾಲಾದವರು

ಹಿರಿಮರುದುಪ್ಪೆಯೆಂದು ಕಾಡುಪಾಲಾದವರು

ಕುದುರೆಮುಖದಾಸುಪಾಸು – ೮ “ಬರುವಾಗ ಆದಿತ್ಯವಾರ ತಡ ರಾತ್ರಿಯಾದೀತು, ಎಂದಿದ್ದ ಸಮೀರ. ಅದು ಬಿಟ್ಟು ಇವತ್ತಿನ (ಸೋಮವಾರ) ಮೊದಲ ಬಸ್ಸುಗಳು ಬಂದ ಮೇಲೂ ಗಂಟೆ ಹನ್ನೊಂದಾದರೂ ತಂಡ ಯಾಕೆ ಬರಲಿಲ್ಲ?” ವಿಠಲ ರಾಯರ ಪ್ರಶ್ನೆ. ಎಂಟೂವರೆಯಿಂದಲೇ ಅಂಗಡಿ ತೆರೆಯಲು ಕಾದಿದ್ದ ಪ್ರಕಾಶ (ನನ್ನ ಅಂದಿನ ಸಹಾಯಕ) ಆಕಾಶ ನೋಡಿದ. [ಅವನಿಗೇನು ಗೊತ್ತು...
ಕಾಡಿದ ಹಿರಿಮರುದುಪ್ಪೆ

ಕಾಡಿದ ಹಿರಿಮರುದುಪ್ಪೆ

ಕುದುರೆಮುಖದಾಸುಪಾಸು – ೭ ಬೆಟ್ಟ ಹತ್ತುವಲ್ಲಿನ ಏಕಲಕ್ಷ್ಯ ಇಳಿಯುವಾಗ ಸಾಮಾನ್ಯವಾಗಿ ಉಳಿದಿರುವುದಿಲ್ಲ. ಅಂದು (೨೦೧೪) ಬೆಳಗ್ಗಿನ ತಿಂಡಿಯನ್ನು ತಡವಾಗಿ ತಿಂದದ್ದಕ್ಕೆ `ಮಧ್ಯಾಹ್ನದ ಊಟ’ ಎಂಬ ಬಿಡುವು ಬೇಕಿರಲಿಲ್ಲ. ಇಗರ್ಜಿ, ಹಿಂದಣ ಶಿಬಿರತಾಣಗಳ ಆಕರ್ಷಣೆ ಬಿಟ್ಟು ಶಿಖರದಲ್ಲೇ ಸಾಕಷ್ಟು ಸಮಯ ಕಳೆದುದರಿಂದ ಬಂದ ದಾರಿಯಲ್ಲೇ ಹಿಂದೆ...
ಕುರಿಯಿಂದ ಕುದುರೆಗೆ

ಕುರಿಯಿಂದ ಕುದುರೆಗೆ

ಕುದುರೆಮುಖದಾಸುಪಾಸು – ೬ ಕುದುರೆಮುಖ ಶಿಖರದ ಕುರಿತಂತೆ ಬಗೆತರದ ಕನವರಿಕೆ ನನ್ನದು. ಒಂದು ವಾರವಾದರೂ ಜನವಿದೂರವಾದ ಆ ಎತ್ತರಗಳಲ್ಲಿ ಕನಿಷ್ಠ ಆವಶ್ಯಕತೆಗಳೊಡನೆ, ಯಾವುದೇ ನಿರ್ದಿಷ್ಟ ಕಾರ್ಯಕ್ರಮವಿಲ್ಲದೇ ಸುತ್ತಬೇಕು ಎನ್ನುವುದಂತೂ ಬಲವತ್ತರವಾಗಿತ್ತು. ವೃತ್ತಿರಂಗ ಅದಕ್ಕೆಲ್ಲ ಅನುವು ಮಾಡಿಕೊಡುವುದಿಲ್ಲ ಎಂಬ ಸಂಕಟಕ್ಕೆ ಸಣ್ಣ...
ಅಮ್ಮ ಬಿಡಿಸಿದ ಹಾಸಿಗೆ, ಅಪ್ಪ ಕೊಟ್ಟ ಕಾಸು

ಅಮ್ಮ ಬಿಡಿಸಿದ ಹಾಸಿಗೆ, ಅಪ್ಪ ಕೊಟ್ಟ ಕಾಸು

(ಕುದುರೆಮುಖದಾಸುಪಾಸು ೫) ಹೌದು, ಅದು ಅಖಂಡ ಹಸಿರಿನ ಹಾಸಿಗೆ, ಅದಕ್ಕೆ ಮಂಜುಮೋಡದ ಬಲು ದಪ್ಪದ ಹೊದಿಕೆ. ತರಂಗಿತ ಕಣಿವೆ ಕಾಣದಾಯ್ತೆಂದು ಯಾರೂ ದೂರದಂತೆ, ಹಲವು ಪದರಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಆವರಿಸುತ್ತ, ಅನಾವರಿಸುತ್ತಲೂ ಇದ್ದ ಬೆಳ್ಮೋಡದ ಮೋಡಿಯಾದರೂ ನೋಡಿ ಮುಗಿಯುವಂಥದ್ದಲ್ಲ. ಆದರೆ ನೋಡುವ ನಮಗೆ ಸಮಯದ ಮಿತಿಯಿದೆಯಲ್ಲಾ....
ಬೆಟ್ಟದ ಮೇಲಿನ ‘ಮನೆ’

ಬೆಟ್ಟದ ಮೇಲಿನ ‘ಮನೆ’

(ಕುದುರೆಮುಖದಾಸುಪಾಸು ೪) ಮಟ ಮಟ ಮಧ್ಯಾಹ್ನ ಹೇವಳ ಮುಟ್ಟಿದ್ದೆವು (೧೯೮೩ರ ಹಗಲು ತಂಡ). ಎದುರು ವಿಸ್ತಾರ ಬೋಗುಣಿಯಂಥಾ ಕಣಿವೆ. ಎಡಕ್ಕೆ ಕುದುರೆಮುಖ, ಬಲಕ್ಕೆ ಹಿರಿಮರುದುಪ್ಪೆ – ಹೇವಳದ ಬೋಗುಣಿಗೆ ಭರ್ಜರಿ ಅಂಚುಗಟ್ಟೆಗಳು. ಕುದುರೆಮುಖದ ಈ ಖಾಸಾ ಒಕ್ಕಲುಗಳ ಮನೆ, ಜನ, ಜಾನುವಾರು, ಕೃಷಿ ನಮ್ಮಲ್ಲಿ ಕೆಲವರನ್ನು ತುಸು ಹೆಚ್ಚೇ...