ಬಿಸಿಲೆಯಲ್ಲಿ ಪ್ರೇಮ ಪರ್ವ

ಬಿಸಿಲೆಯಲ್ಲಿ ಪ್ರೇಮ ಪರ್ವ

“ಬಾರೇ ಬಾರೇ ಚಂದದ ಚೆಲುವಿನ ತಾರೇ! ಬಾರೇ ಬಾರೇ….” ಕೊಳದ ನೀರಿನಲ್ಲಿ ಎತ್ತರಿಸಿದ ಕಣ್ಣನ್ನಷ್ಟೇ ಬಿಟ್ಟು ಹಾಡುತ್ತಿದ್ದನೊಬ್ಬ! ಅಂಚಿನ ಗೊಸರಿನ ಮೇಲೆ ಒಂಬತ್ತು ಜೋಡಿ ಬೆರಳುಗಳ ಮುದ್ರೆ ಬೀಳುವಷ್ಟೇ ಹಗುರಕ್ಕೆ ಕುಳಿತು ಧ್ವನಿ ಸೇರಿಸಿದ್ದನಿನ್ನೊಬ್ಬ. ತುಸು ಆಚೆಗೆ ಹುಲ್ಲಿನ ಎಡೆಯಲ್ಲಿ ಮೈಮರೆಸಿಯೂ ಮರೆತಂತೆ ಹಾಡುವವ...
ಕುಮಾರ ಪರ್ವತ ಮತ್ತು ಕುಕ್ಕೆ ಪ್ರಶಸ್ತಿ!

ಕುಮಾರ ಪರ್ವತ ಮತ್ತು ಕುಕ್ಕೆ ಪ್ರಶಸ್ತಿ!

ಕಳೆದ ತಿಂಗಳು ನನಗೊಂದು ಅನಿರೀಕ್ಷಿತ ದೂರವಾಣಿ ಕರೆ, “ಶಿವಮೊಗ್ಗ ಕರ್ನಾಟಕ ಸಂಘದ ಕಾರ್ಯದರ್ಶಿ ಮಾತಾಡುತ್ತಿದ್ದೇನೆ. ನಿಮ್ಮ ಪುಸ್ತಕ – ಕುಮಾರ ಪರ್ವತದ ಸುತ್ತ ಮುತ್ತ, ಇದು ನಮ್ಮ ಸಂಘದ ೨೦೧೩ರ ಸಾಲಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನಕ್ಕೆ ಆಯ್ಕೆಯಾಗಿದೆ, ಅಭಿನಂದನೆಗಳು. ಜುಲೈ ಐದಕ್ಕೆ ವಿತರಣಾ ಸಮಾರಂಭ. ಅವಶ್ಯ...
ಕಾರ್ಗಾಲದ ಪುಷ್ಪಗಿರಿಯಲ್ಲೊಂದು ರಾತ್ರಿ

ಕಾರ್ಗಾಲದ ಪುಷ್ಪಗಿರಿಯಲ್ಲೊಂದು ರಾತ್ರಿ

(ಕುಮಾರಪರ್ವತದ ಆಸುಪಾಸಿನಲ್ಲಿ ಹೇಳಲುಳಿದ ಎರಡು ತುಣುಕುಗಳು ಭಾಗ ೨) ಪುಷ್ಪಗಿರಿಯ ಮೇಲಿನ ನಾಗರಿಕ ಕೊಳೆಯನ್ನು ಮಳೆಗಾಲವೆಂಬ ಜಾಡಮಾಲಿ ತೊಳೆಯುವುದು ಸರಿ. ಆದರೆ ಅದಕ್ಕೆ ನಾವು ಒಂದು ದಿನದ ಸಾಕ್ಷಿಯಾಗುವುದಾದರೆ ಹೇಗಿರಬಹುದು ಎಂಬ ಯೋಚನೆಯೊಡನೆ ಯೋಜನೆಯನ್ನು ಬೆಸೆದೆವು. ಹಿಮಾಲಯದಲ್ಲಿ ವಾರಗಟ್ಟಳೆ ಚಾರಣ, ವಾಸಗಳಿಗೆ ಯುಕ್ತ...
ಪುಷ್ಪಗಿರಿಯ ಮಗ್ಗುಲಿನಲ್ಲಿ

ಪುಷ್ಪಗಿರಿಯ ಮಗ್ಗುಲಿನಲ್ಲಿ

(ಕುಮಾರಪರ್ವತದ ಆಸುಪಾಸಿನಲ್ಲಿ ಹೇಳಲುಳಿದ ಎರಡು ತುಣುಕುಗಳು) ಭಾಗ ೧ ಕೊಡಗಿನ ಮಗ್ಗುಲಿನ ಕುಮಾರಪರ್ವತವೇ ಪುಷ್ಪಗಿರಿ ಎಂದೇನೋ ಹೇಳಿದ್ದು ಸರಿ. ಹಾಗೇ ಅದನ್ನು ನೋಡಲು ಒಂದು ಆದಿತ್ಯವಾರ ನಮ್ಮ ಮೋಟಾರ್ ಸೈಕಲ್ ಸೈನ್ಯ ಹೊರಡಿಸಿಯೇ ಬಿಟ್ಟೆವು. ಹಳೆಯ ನೆನಪುಗಳನ್ನು ಹೆಕ್ಕುತ್ತಾ ಹೊಸಬರಿಗೆ ಎಂಥದ್ದನ್ನೆಲ್ಲಾ ನೀವು ಕಳೆದುಕೊಂಡಿರಿ ಎಂದು...
ಹುಲಿ, ಹುಲಿ

ಹುಲಿ, ಹುಲಿ

ನಾಗರಹೊಳೆ ವನ್ಯ ಜಾನುವಾರು ಗಣತಿ ಮುಗಿಸಿ ಬರುವ ಕಾಲಕ್ಕೆ ಟೈಗರ್ ಕ್ರೈಸಿಸ್ ಎಂಬ ವಿಡಿಯೋ ಕ್ಯಾಸೆಟ್ ಉಲ್ಲಾಸ ಕೊಟ್ಟದ್ದು ಹೇಳಿದ್ದೆನಷ್ಟೆ. ಆ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಹುಲಿಗಳ ಅಸ್ತಿತ್ವಕ್ಕೇ ಸಂಚಕಾರ ತರುವ ವಿವಿಧ ಮುಖದ ಕಲಾಪಗಳು ತೀವ್ರಗೊಂಡಿದ್ದವು. ಬೇಟೆಯ ಮೋಜಿಗಾಗಿ, ಸಾಕುಪ್ರಾಣಿಗಳ ರಕ್ಷಣೆಗಾಗಿ, ಅಕ್ರಮ ಕೃಶಿ ಮತ್ತು...

ಉಲ್ಲಾಸ್ ಕರೆದಲ್ಲಿಗೆ ಹುಲಿ ಬರುತ್ತೆ!

(ಕುಮಾರಪರ್ವತದ ಆಸುಪಾಸು -೧೧) ನಾಗರಹೊಳೆಯ ವನ್ಯ ಜಾನುವಾರು ಗಣತಿಯಲ್ಲಿ ಭಾಗಿಗಳಾಗಿದ್ದ ನಮ್ಮಲ್ಲಿ ಕೆಲವರನ್ನು ಒಂದು ವಿರಾಮದ ಸಮಯದಲ್ಲಿ ಉಲ್ಲಾಸ ಕಾರಂತ ತಮ್ಮ ವಾಹನಕ್ಕೇರಿಸಿಕೊಂಡು ‘ಸುಂದರಿ’ ತೋರಿಸ್ತೇನೆ ಅಂತ ಹೊರಟರು. ತೀರಾ ಅಗತ್ಯದ ಮಾತುಗಳನ್ನಷ್ಟೇ ಪಿಸುಮಾತಿನಲ್ಲಿ ಅವರು ಹೇಳಿದ್ದಿತ್ತು. ಉಳಿದಂತೆ ಕಿವಿಗೆ ಶ್ರವಣ ಸಾಧನ...