by athreebook | Nov 10, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
[‘ಭಾರತ ಅ-ಪೂರ್ವ ಕರಾವಳಿಯೋಟ’ – ೧೯೯೬, ಸಾಹಸಯಾನ ಮುಗಿದ ಕೆಲವೇ ವಾರಗಳಲ್ಲಿ ನಾನೊಂದು ಇಂಗ್ಲಿಷ್ ವರದಿಯನ್ನು ಬರೆದಿದ್ದೆ. ಅದರಲ್ಲಿ ನಾವು ಭೇಟಿ ಕೊಟ್ಟ ಪ್ರಾಕೃತಿಕ ವೈಶಿಷ್ಟ್ಯಗಳನ್ನಷ್ಟೇ ಲೆಕ್ಕಕ್ಕೆ ಹಿಡಿದು, ಸಂಬಂಧಿಸಿದ ಇಲಾಖೆಗಳಿಗೆ ಹೀಗೊಂದು ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸುವ ಕರ್ತವ್ಯವನ್ನು ನಿರ್ವಹಿಸಿದ್ದೆ....
by athreebook | Nov 6, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
(ಭಾರತ ಅ-ಪೂರ್ವ ಕರಾವಳಿಯೋಟ – ೧೬) ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ...
by athreebook | Oct 30, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
(ಭಾರತ ಅ-ಪೂರ್ವ ಕರಾವಳಿಯೋಟ – ೧೫) ಎಲುರು ಹೋಟೆಲಿನಿಂದ ದೇವಕಿ ಅಭಯನಿಗೆ ಬರೆದ ಪತ್ರ “…ವಿಜಯವಾಡಾ ಇಲ್ಲಿಂದ ೬೪ ಕಿಮೀ ಮಾತ್ರ. ಅಲ್ಲಿ ಕಲ್ಕೂರರ ಇನ್ನೋರ್ವ ಗೆಳೆಯರ ಹೋಟೆಲ್ ನಮ್ಮನ್ನು ಕಾದಿದ್ದಂತೇ ನಾವಿಲ್ಲೇ ಉಳಿಯಬೇಕಾಯ್ತು….. ಒರಿಸ್ಸಾಕ್ಕೆ ಬಂದ ಮೇಲೆ ನಮ್ಮೂರಿನದೇ ವಾತಾವರಣ – ಬೆವರು...
by athreebook | Oct 26, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
(ಭಾರತ ಅ-ಪೂರ್ವ ಕರಾವಳಿಯೋಟ – ೧೪) ಮುರಕಲ್ಲ ಹಾಸುಗಳಲ್ಲಿನ ದೊಡ್ಡ ಪೊಳ್ಳುಗಳನ್ನು ದಕ ಜಿಲ್ಲಾ ವಲಯದಲ್ಲಿ ನಾನು ಸಾಕಷ್ಟು ಕಂಡಿದ್ದೇನೆ, ಹೊಕ್ಕು ಹೊರಟಿದ್ದೇನೆ. ಗಟ್ಟಿ ಕೆಮ್ಮಣ್ಣಿನ ಹಾಸುಗಳಲ್ಲಿ ಬಿಳಿ-ಬೂದು ಬಣ್ಣದ ಮಿದು ಮಣ್ಣಿನ ಸೆಳಕುಗಳು ಅರ್ಥಾತ್ ಸೇಡಿ ಮಣ್ಣಿನ ಅಂಶಗಳು ಇರುತ್ತವೆ. ಅವು ನೂರಾರು ವರ್ಷಗಳ ನೀರ...
by athreebook | Oct 22, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
(ಭಾರತ ಅ-ಪೂರ್ವ ಕರಾವಳಿಯೋಟ – ೧೩) “ಹೊಟ್ಟೆ ಪಾಡಿನ ಕಷ್ಟಕ್ಕಾಗಿ ನಮ್ಮ ಅನೇಕ ಹಿರಿಯರು ಕೇವಲ ಸೌಟು, ಸಟ್ಟುಗ ಹಿಡಿದು (ದಕ ಜಿಲ್ಲೆ) ಊರು ಬಿಟ್ಟಿದ್ದರು. ಅಪರಿಚಿತ ಊರು, ಅನಿಶ್ಚಿತ ಭವಿಷ್ಯಗಳ ನಡುವೆ ಆಂಧ್ರಪ್ರದೇಶವನ್ನು ವ್ಯಾಪಿಸಿ, ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತ ಅಂಥವರ ಸಾಹಸ ತುಂಬ ದೊಡ್ಡ...
by athreebook | Oct 19, 2020 | ಪ್ರವಾಸ ಕಥನ, ಭಾರತ ಅ-ಪೂರ್ವ ಕರಾವಳಿಯೋಟ
(ಭಾರತ ಅ-ಪೂರ್ವ ಕರಾವಳಿಯೋಟ – ೧೨) ಜಬ್ಬಲ್ ಪುರದ ಜಬ್ಬರ್ದಸ್ತ್ ಸರ್ವೀಸಾಗಿ ಏಳ್ನೂರು ಕಿಮೀ ಕಳೆಯುವುದರೊಳಗೇ ಅಂದರೆ, ಎರಡೇ ದಿನದ ಓಟದೊಳಗೇ ಬೈಕುಗಳು ಬಹಳ ಬಳಲಿದ್ದವು. ಹಾಗಾಗಿ ಸಂಜೆ ನಾಲ್ಕಕ್ಕೆ ದೊಡ್ಡ ಊರಾಗಿ ಸಿಕ್ಕಿದ ಬಿಲಾಸ್‍ಪುರದಲ್ಲಿ ಓಟ ಮುಗಿಸಿದ್ದೆವು. ತರಾತುರಿಯಿಂದ ಹೋಟೇಲ್ ಹಿಡಿದು, ಹೊರೆ ಇಳಿಸಿ,...