ಅತ್ರಿ ಜಾಲತಾಣಕ್ಕೊಂದು ಹೊಸ ಮುನ್ನುಡಿ

ಅತ್ರಿ ಜಾಲತಾಣಕ್ಕೊಂದು ಹೊಸ ಮುನ್ನುಡಿ

ಸುಮಾರು ನಾಲ್ಕು ವರ್ಷಗಳ ಹಿಂದೆ ನನ್ನ ಈ ಜಾಲತಾಣ ಸುರುವಾದಾಗ ಜಾಲಿಗನ ನೆಲೆ ಅಥವಾ ಹೋಂ ಪೇಜೊಂದನ್ನು ಬರೆದುಕೊಂಡಿದ್ದೆ. ಅದನ್ನೇನು, ಯಾವುದೇ ಜಾಲತಾಣದಲ್ಲೂ ಆ ಪುಟದಲ್ಲಿ ಕೋಷ್ಠಕ ಮಾದರಿಯನ್ನು (ಅರ್ಥಾತ್ ಬಯ್ಯೋದಾತಾ ಅಥವಾ ಬಯೋ ಡಾಟಾ) ಮೀರಿ ಬರೆದ ಮಾತುಗಳನ್ನು ಬಹುತೇಕ ಮಂದಿ ಓದುವುದೇ ಇಲ್ಲ ಎಂದು ನನ್ನಂದಾಜು. (ನನಗಿಲ್ಲಿಯವರೆಗೆ...
ಅತ್ರಿ ನಾಮಾಂತರ ಪ್ರಸಂಗ!

ಅತ್ರಿ ನಾಮಾಂತರ ಪ್ರಸಂಗ!

ಇಂದು, ಅಂದರೆ ೧-೪-೨೦೧೨ರಂದು ಬಲ್-ಮಠದ, ಕರ್ನಾಟಕ ಕ್ರಿಶ್ಚಿಯನ್ ಎಜುಕೇಷನ್ ಸೊಸಾಯಿಟಿಯ ಸಹೋದಯ ಭವನದಲ್ಲಿ ಪ್ರೊ| ಬಿ.ಎ. ವಿವೇಕ ರೈಯವರ ಪೌರೋಹಿತ್ಯದಲ್ಲಿ ಅಲ್ಲೇ ಶರಾವತಿ ಕಟ್ಟಡದಲ್ಲಿ ಇದುವರೆಗೆ ‘ಅತ್ರಿಯೆಂದಿದ್ದ ಪುಸ್ತಕ ಮಳಿಗೆಯನ್ನು ‘ನವಕರ್ನಾಟಕವೆಂದು ನಾಮತಾಂತರಿಸುವುದೆಂದು ನಿಶ್ಚಯಿಸಿಯಾಗಿದೆ. ಆ ಸಂದರ್ಭದಲ್ಲಿ ನವ...
ದ್ವೀಪ ಕಥನದಿಂದ ಕಾದಂ-ಸಂಗೀತದವರೆಗೆ

ದ್ವೀಪ ಕಥನದಿಂದ ಕಾದಂ-ಸಂಗೀತದವರೆಗೆ

ಭೌತಿಕವಾಗಿ ಅಂಗಡಿಯನ್ನು ಕಟ್ಟಿದಷ್ಟೇ ಕಳಚಿಕೊಳ್ಳುವಲ್ಲೂ ಕಟ್ಟುಪಾಡುಗಳಿವೆ! ಆ ಅನಿವಾರ್ಯತೆಯಲ್ಲಿ ನಾನು ತೊಡಗಿದ್ದಂತೆ ಅಂದು (೪-೨-೧೨), ನಾನು ಕಾದಿರದ ಗೆಳೆಯ – ಅಭಿನವ ಪ್ರಕಾಶನದ ನ. ರವಿಕುಮಾರ್ ದೂರವಾಣಿಸಿದರು. ಅವರು ವರ್ಷದ ಹಿಂದೆ ನಾನು ಅತ್ರಿಯ ಪ್ರಕಾಶನ ವಿಭಾಗವನ್ನು ಮುಚ್ಚಿದ ದಿನವೇ ಮನವಿ ಕೊಟ್ಟಿದ್ದರು “ನಿಮ್ಮ...
ಉತ್ತರಕ್ರಿಯೆ!

ಉತ್ತರಕ್ರಿಯೆ!

ಅತ್ರಿ ಮುಚ್ಚುಗಡೆಯ ವಿಚಾರ ಸಾರ್ವಜನಿಕಕ್ಕೆ ಭಾರೀ ವಿಷಯವಾಗಬೇಕಿಲ್ಲ. ಆದರೆ ತಿಳಿಸುವ ಕರ್ತವ್ಯ ನನ್ನದು. ಸುಮಾರು ಮೂರು ವರ್ಷದ ಹಿಂದೆಯೇ ನಿರೇನ್ ಈ ವಲಯದಲ್ಲಿ ಏಕಾಂಗವೀರನಾಗಿ ವನ್ಯಸಂರಕ್ಷಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾಗ, “ನನಗೆ ಅರುವತ್ತಾದಾಗ ಅತ್ರಿ ಮುಚ್ಚಿ, ಪೂರ್ಣಾವಧಿ ತೊಡಗಿಕೊಳ್ಳುತ್ತೇನೆ” ಎಂದಿದ್ದೆ. ಮತ್ತೆ ಈಗ...
ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ!

ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ!

ವೃತ್ತಿ ಜೀವನದ ಸರಣಿಯೋಟದಲ್ಲಿ ನಾನು ತಂದೆಯಿಂದ (ಅಧ್ಯಾಪನದ) ಕೈಕೋಲು ಪಡೆದವನಲ್ಲ, ಮಗನಿಗೆ (ಸಿನಿಮಾ ನಿರ್ದೇಶಕ) ಕೊಡಬೇಕಾಗಿಯೂ ಇಲ್ಲ. ಮೂವತ್ತಾರು ವರ್ಷಗಳ ಪುಸ್ತಕೋದ್ಯಮದಲ್ಲಿ ನನ್ನ ನಿರ್ವಹಣೆ ಬಗ್ಗೆ ಧನ್ಯತೆಯಿದ್ದರೂ ನನ್ನನ್ನು ಬೆಳೆಸಿದ ಮತ್ತು ನನ್ನ ಭವಿಷ್ಯಕ್ಕೆ ಭದ್ರತೆಯನ್ನೂ ಒದಗಿಸುತ್ತಿರುವ ಈ ವೃತ್ತಿಯ ಬಗ್ಗೆ...
ದೇಶಕಾಲದ್ದು ಕೊನೆಯಲ್ಲ; ವಿರಾಮ!

ದೇಶಕಾಲದ್ದು ಕೊನೆಯಲ್ಲ; ವಿರಾಮ!

೨೦೧೧ರ ಅಕ್ಟೋಬರ್ ಮೊದಲವಾರದಲ್ಲಿ ನಾನು ಅಂತರ್ಜಾಲದಲ್ಲಿ ಮಿಂಚಂಚೆ ತನಿಖೆ ನಡೆಸಿದ್ದಂತೆ ಎಡಪಕ್ಕದ ‘ದೇಶಕಾಲ’ದ ಹಸಿರು ದೀಪ ಮಿನುಗಿ, ಬಲಪಕ್ಕದಲ್ಲಿ ಸಂವಾದ ಕಿಂಡಿ ಮೊಳೆದು ಸಾರಿತು – ‘೨೮ನೇ ಸಂಚಿಕೆಗೆ ದೇಶಕಾಲ ನಿಲ್ಲಿಸುತ್ತಿದ್ದೇನೆ’. ಮತ್ತೆ ಎರಡನೇ ವಾರದಲ್ಲಿ ೨೭ನೇ ಸಂಚಿಕೆ ಬಂದಾಗ ಸಂಪಾದಕೀಯದಲ್ಲಿ ಚುಟುಕಾಗಿ...