by athreebook | Nov 16, 2012 | ವೈಚಾರಿಕ
ಶ್ರೀ ಮಹಾಲಿಂಗೇಶ್ವರ ಪ್ರಸನ್ನ ಎಂದ ಕೂಡಲೇ ನನ್ನ ತಲೆಯಲ್ಲಿ ಸ್ಪಷ್ಟ ಎರಡು ಚಿತ್ರಗಳು ಬರುತ್ತವೆ. ಮೊದಲನೇದು ನನ್ನ ಬಾಲ್ಯದ್ದು, ಅಜ್ಜೀ ಮನೆಯದ್ದು, ಪುತ್ತೂರಿನ ಅಧಿದೈವ ಮಹಾಲಿಂಗೇಶ್ವರನದ್ದು. ೧೯೫೦-೬೦ರ ದಶಕಗಳ ನನ್ನ ಶಾಲಾ ರಜಾದಿನಗಳಲ್ಲಿ ಪುತ್ತೂರಿಗೆ ಹೋದಾಗ ಆಗೀಗ ಅಜ್ಜಿ (ಶ್ರೀಮತಿ ಎ.ಪಿ. ಸುಬ್ಬಯ್ಯ – ಪಾರ್ವತಿ)...
by athreebook | Nov 12, 2012 | ವೈಚಾರಿಕ
ಪುತ್ತೂರಿನ ಕೃಷಿ ಯಂತ್ರಮೇಳ ನನ್ನ ಲೆಕ್ಕಕ್ಕೆ ಪೂರ್ಣ ಹಳಿ ತಪ್ಪಿದೆ. ಆಶಯ (ಆರ್ಥಿಕ ಯಶಸ್ಸು), ಆಸಕ್ತಿಗಳ (ಪರಿಸರ ಪ್ರೇಮ) ಸಮನ್ವಯಕ್ಕೆ ಯಂತ್ರ ಮೇಳ ತಪ್ಪು ಆದರ್ಶಗಳನ್ನು ತೋರಿಸುವಂತೇ ನನಗೆ ಅನಿಸಿತು. ತನ್ನ ನೆಲವೊಂದುಳಿದು ಜಗತ್ತಿನೆಲ್ಲಾ ಪೆಟ್ರೋ ನಿಕ್ಷೇಪಗಳು ತನ್ನ ದಾಸ್ತಾನು ಕೋಠಿ, ತನ್ನ ಸೌಕರ್ಯಕ್ಕೊದಗುವ ಮಾಲಿನ್ಯಕಾರಕ...
by athreebook | Oct 29, 2012 | ಪರಿಸರ ಸಂರಕ್ಷಣೆ, ವೈಚಾರಿಕ
ನಗ್ರಿಮೂಲೆಯ, ನೆಲ್ಯಾರುಸ್ಥಿತನಾದ ಗೋವಿಂದ ಸೈಕಲ್ಲೇರಿ ವಿಶ್ವಯಾನಿ ಎನ್ನಿಸಿಕೊಂಡದ್ದು ನಮ್ಮ ನಿಮ್ಮ ಮಾತಿನಲ್ಲಿ. ಅವನದು ವಿಶ್ವ ಪರಿಸರ ಗೀತೆ. ಪ್ರಾಕೃತಿಕ ಶಕ್ತಿಗಳು ಇದ್ದಂತೆ ನಮ್ಮನುಕೂಲಕ್ಕೆ ಪಳಗಿಸಿಕೊಳ್ಳುವ ಕಡೆಗೆ ಗಮನ ಹೆಚ್ಚು. ಒಂದಡಿಯಿಟ್ಟು ಭೂಮಿಯಳೆದವ ಎರಡನೆಯದನ್ನು ಆಕಾಶಕ್ಕಿಟ್ಟಂತೆ ಈ ಅವತಾರ ಪುರುಷನೂ ಮುಂದುವರಿದು...
by athreebook | Oct 25, 2012 | ಲಘು ಬರಹಗಳು, ವೈಚಾರಿಕ
ತಲೆಗೆರಡು ತಟ್ಟಿ ಗುಂಡಿ ಅದುಮಿದಾಗ, ನನ್ನ ಹತ್ತು ವರ್ಷ ಹಳೆಯ ಮರುಪೂರಣ ತಾಕತ್ತಿನ ಟಾರ್ಚ್ ಮಿಣಕು ಬೆಳಕೇನೋ ಕೊಟ್ಟಿತು. ಅದರ ಅವನತ ಪ್ರಕಾಶ ಶೂನ್ಯ ಮುಟ್ಟುವ ಮೊದಲು ನಮ್ಮ ಕಾಡ್ಮನೆಯ ಅಡುಗೆಮನೆ ಮೂಲೆಯಲ್ಲಿ ಮಂಕಳಂತೆ ಕೂತ ಬುಡ್ಡೀದೀಪ ಗುರುತಿಸಿಕೊಂಡೆ. (ಪದಮೂಲ ಹುಡುಕುವವರು ಇದು ಬೆಡ್ ಲ್ಯಾಂಪಿನ ತದ್ಭವ ಎನ್ನಬಹುದೋ ಏನೋ. ಆದರೆ...
by athreebook | Oct 11, 2012 | ಯಕ್ಷಗಾನ, ವೈಚಾರಿಕ, ವ್ಯಕ್ತಿಚಿತ್ರಗಳು
ಇಷ್ಟದ ಮೇಳದ ಹಿಡಿಸದ ಆಟ ನೋಡಿ (ಆಸಕ್ತರು ಇಲ್ಲೇ ಚಿಟಿಕೆ ಹೊಡೆಯಿರಿ) ಹಿಡಿದ ತಲೆನೋವು ಇಳಿದಿರಲಿಲ್ಲ. ಪ್ರಾಯೋಜಕರ ಧಾರಾಳಕ್ಕೆ ಪಾತಾಳಗರಡಿ ಹುಡುಕುತ್ತಾ ಪ್ರಯೋಜಕರ ಔದಾರ್ಯಕ್ಕೆ ಅರ್ಥಗಳನ್ನು ಹೇರುತ್ತಾ ಮನಸ್ಸು ಕಹಿಯಾಗಿತ್ತು. ಆಗ ಹಿರಿಯ ಗೆಳೆಯ, ಡಾ| ಎಂ. ಪ್ರಭಾಕರ ಜೋಶಿಯವರ ಸಮ್ಮಾನ ಸಭೆಯ ಸುದ್ದಿ ಸಿಕ್ಕಿ, ತುಸು...
by athreebook | Sep 27, 2012 | ಪುಸ್ತಕೋದ್ಯಮ, ರಂಗ ಸ್ಥಳ, ವೈಚಾರಿಕ, ವ್ಯಕ್ತಿಚಿತ್ರಗಳು
೧೯೬೯ರಲ್ಲಿ ಬೆಂಗಳೂರು ಸರಕಾರೀ ಕಾಲೇಜಿನಿಂದ ಪದವಿಪೂರ್ವ ‘ಪಾಸ್’ ಎನಿಸಿಕೊಂಡು ಹೊಸದಾಗಿ ಮೈಸೂರು ಕಂಡವನು, ಮಹಾರಾಜಾ ಕಾಲೇಜಿನಲ್ಲಿ ಸ್ನಾತಕ ಪದವಿಗೆ ದಾಖಲಾದೆ. ನಾನು ವಿಶೇಷ ಯೋಜನೆಯೇನೂ ಇಲ್ಲದೆ ಕನ್ನಡವನ್ನೂ ಒಂದು ಐಚ್ಛಿಕ ವಿಷಯವನ್ನಾಗಿ (ಇನ್ನೊಂದು ಐಚ್ಛಿಕ ಅರ್ಥಾತ್ ಮೇಜರ್ರು ಇಂಗ್ಲಿಷ್, ಅಮುಖ್ಯ ಅರ್ಥಾತ್ ಮೈನರ್ರು...