ಫಲ್ಗುಣಿಯ ಮೇಲೊಂದು ಪಲುಕು…..

ಫಲ್ಗುಣಿಯ ಮೇಲೊಂದು ಪಲುಕು…..

ಯಾರೇ ವಿಚಾರಿಸಿದಾಗ, ನನ್ನ ವಾಹನಪಟ್ಟಿಯಲ್ಲಿ ನಾನು ಮರೆಯದೆ ಸೇರಿಸುವ ಹೆಸರು ‘ದೋಣಿ.’ ಆದರೆ ಒಳಗೊಳಗೇ “ಅದರ ಬಳಕೆ ಮಾತ್ರ ಕಡಿಮೆ” ಎಂಬ ಕೀಳರಿಮೆ ನನ್ನನ್ನು ಬಿಟ್ಟದ್ದೂ ಇಲ್ಲ. ಅದನ್ನು ಸ್ವಲ್ಪವಾದರೂ ಹೋಗಲಾಡಿಸುವಂತೆ ನಮ್ಮ ‘ಅನಾಮಧೇಯ ಕಯಾಕೀ ಸಂಘ (ಅನೋಂ)’ದೊಳಗೆ ‘ಆದಿತ್ಯವಾರ (೨೯-೪-೧೮) ಕೂಳೂರು –...
ಉಚ್ಚಿಲದ ಕಾಳಿಂದೀ ಮಡುವಿನಲ್ಲಿ ಕಯಾಕ್

ಉಚ್ಚಿಲದ ಕಾಳಿಂದೀ ಮಡುವಿನಲ್ಲಿ ಕಯಾಕ್

“ದೋಣಿ ಸಾಗಲಿ ಮುಂದೆ ಹೋಗಲಿ, ೨೦೧೮ ಸೇರಲಿ…..” ಹಾಡುತ್ತ ಮೊನ್ನೆ (೩೧-೧೨-೨೦೧೭) ಮೂರು ಕಯಾಕ್‍ಗಳಲ್ಲಿ (ಫೈಬರ್ ಗ್ಲಾಸಿನ ಎರಡು ಪದರದ, ತೆಪ್ಪದಂಥ ದೋಣಿ) ನಾವು ಆರು ಮಂದಿ (ಪ್ರವೀಣ್, ಯಶಸ್, ಅನಿಲ್ ಶೇಟ್, ಶಿವಾನಂದ್, ದೇವಕಿ ಮತ್ತು ನಾನು) ಉಚ್ಚಿಲದ ತ್ರಿವೇಣಿ ಸಂಗಮದಲ್ಲಿ ಮನಸೋಯಿಚ್ಛೆ ವಿಹರಿಸಿ...
`ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು

`ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು

(ಇದುವರೆಗಿನ ದೋಣಿಯಾನದ ಟಿಪ್ಪಣಿಗಳ ಎರಡನೇ ಸಂಕಲನ) ವಿಶ್ವ ಜಲದಿನ (೨೩-೩-೧೫), “ನೇತ್ರಾವತಿ ಉಳಿಸಿ” ಅರಣ್ಯರೋದನಂತೇ ಕೇಳುತ್ತಿತ್ತು. ಈಗ ಇರುವಷ್ಟನ್ನಾದರೂ ಸ್ವಲ್ಪ ವಿವರಗಳಲ್ಲಿ ನೋಡಲು ನಾನು, ದೇವಕಿ ಹೊರಟೆವು. ಬಹುದಿನಗಳ ಬಿಡುವಿನ ಮೇಲೆ ದೋಣಿ ಸವಾರಿಗೆ ಸಜ್ಜಾದೆವು. ಅದುವರೆಗಿನ ನಮ್ಮ ದೋಣಿ ಚಲಾವಣೆಗಳೆಲ್ಲ ಲೆಕ್ಕಕ್ಕೆ...
ಸ್ವಚ್ಛ ಭಾರತದಲ್ಲಿ ನಮ್ಮ ಹೊಳೆಗಳಿಲ್ಲವೇ?

ಸ್ವಚ್ಛ ಭಾರತದಲ್ಲಿ ನಮ್ಮ ಹೊಳೆಗಳಿಲ್ಲವೇ?

(ಇದುವರೆಗಿನ ದೋಣಿಯಾನದ ಟಿಪ್ಪಣಿಗಳ ಮೊದಲ ಸಂಕಲನ) ಇಂದು ರಸ್ತೆ ನಿರ್ಮಾಣ (ಮತ್ತದಕ್ಕೆ ಬಳಸುವ ಯಂತ್ರ ಸಾಮರ್ಥ್ಯವೂ) ಅದ್ಭುತ ಉನ್ನತಿಯಲ್ಲಿದೆ. ಸಹಜವಾಗಿ ದಿಬ್ಬಗಳು ಮಟ್ಟವಾಗುವುದು, ತಿರುವುಗಳು ನೇರವಾಗುವುದು, ಆಳಗಳು ತುಂಬಿಬರುವುದು, ವಿಸ್ತಾರಗಳು ಸುಲಭಸಂಧಿಸುವುದು, ಕಗ್ಗಲ್ಲು ಕರಗುವುದು, ಜವುಗು ಘನವಾಗುವುದೆಲ್ಲ ಆಗುತ್ತಿದೆ;...
ದೋಣಿ ದಂಡ ಯಾತ್ರೆ -೨೦೧೪

ದೋಣಿ ದಂಡ ಯಾತ್ರೆ -೨೦೧೪

ಶಾಂಭವಿ ಮತ್ತು ಉಚ್ಚಿಲ ಹೊಳೆಗಳ ಮೇಲೆ ವಿಜಯ ಪತಾಕೆ ಹಾರಿಸಿ ಬಂದಮೇಲೆ, “ವರ್ತಮಾನ ಕಾಲದಲ್ಲಿ ಮಂಗಳೂರಿನ ಆಸುಪಾಸಿನ ದೊಡ್ಡ ನೀರಹರಹುಗಳಿಗೆ ಹವ್ಯಾಸೀ ನಾವಿಕರು ಯಾರೂಂತ ಕೇಳಿದ್ದೀರಿ” ಎಂದು ನಾವು ಸಭೆ ಕೊಟ್ಟಿದ್ದೆವು. ಭಟ್ಟಂಗಿಗಳು ಬಿದಿರಾವಳಿ ಸಹಿತ ನಮ್ಮ ನಾಮೋದ್ಧರಣ ಮಾಡುತ್ತಿರುವ ಕಾಲದಲ್ಲಿ, ತರುಣಮಿತ್ರ ರೋಶನ್ ಕಾಮತನ...