ಜಲನಿಧಿಯ ಅವಹೇಳನ – ದಾಲ್ ಸರೋವರ

ಜಲನಿಧಿಯ ಅವಹೇಳನ – ದಾಲ್ ಸರೋವರ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೪) ಅಪರಾಹ್ನ ದಾಲ್ ಲೇಕ್ ದರ್ಶನ. ಅಂತರಜಾಲದ ವಿಶ್ವಕೋಶವೇ ಆಗಿರುವ ವಿಕಿಪೀಡಿಯಾ ದಾಲ್ ಲೇಕನ್ನು ರಾಜ್ಯದ ಎರಡನೇ ದೊಡ್ಡ ನಾಗರಿಕ ಸರೋವರ ಎಂದೇ ಗುರುತಿಸುತ್ತದೆ. ಮಹಿಮೆಯನ್ನು ಕೀರ್ತಿಸುವಾಗ, ಸುಮಾರು ಹದಿನೈದೂವರೆ ಕಿಮೀ ಸುತ್ತಳತೆ, ಹದಿನೆಂಟು ಚದರ ಕಿಮೀ ವಿಸ್ತೀರ್ಣ, ತೋರವಾಗಿ...
ಮಕ್ಮಲ್ಲಿನ ನುಣುಪು? ಕೇಸರಿಯ ಕಂಪು?

ಮಕ್ಮಲ್ಲಿನ ನುಣುಪು? ಕೇಸರಿಯ ಕಂಪು?

(ಜಮ್ಮು ಕಾಶ್ಮೀರ ಪ್ರವಾಸ ಕಥನ -೩) ನಾವು ತಡವಾಗಿ ಮಲಗಿದವರೆಂದು ಮುಂಬೆಳಕು ತಡವಾಗುವುದುಂಟೇ! ಮತ್ತೆ ನಮ್ಮ ಪ್ರಾಯಕ್ಕೆ ಸಹಜವಾಗಿ ಹಾಸಿಗೆ ಬಿಸಿ ಮಾಡುವುದು ಆಗಲೇ ಇಲ್ಲ. ಆರು ಗಂಟೆಗೆಲ್ಲ ನಾವು ಶೌಚ, ಬಿಸಿನೀರ ಸ್ನಾನವೆಲ್ಲ ಮುಗಿಸಿ ಯುದ್ಧಸನ್ನದ್ಧರಾಗಿದ್ದೆವು! ಹೋಟೆಲಿನ ಕೊನೆಯ ಮತ್ತು ನಾಲ್ಕನೇ ಮಾಳಿಗೆಯ ನಮ್ಮ ಕೋಣೆಯ...
ಲಂಚಶ್ರೀಯಲ್ಲಿ ಗಳಿಸಿದ ಶ್ರೀನಗರ!

ಲಂಚಶ್ರೀಯಲ್ಲಿ ಗಳಿಸಿದ ಶ್ರೀನಗರ!

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೨) ದಿಲ್ಲಿಯ ಸೆಕೆ ಮುಂದುವರಿದಂತೆ ಬೆಳಗ್ಗಾಯಿತು. ಈ ಪ್ರವಾಸದುದ್ದಕ್ಕೆ ಅನುಭವಿಸಿದಂತೆ ಸುಮಾರು ನಾಲ್ಕು ಗಂಟೆಗೇ ಬೆಳಕು ಮೂಡಿತ್ತು. ಆದರೆ ರೈಲಿನ ಮೂರು ಹಂತದ ಮಲಗು ವ್ಯವಸ್ಥೆಯಲ್ಲಿ ಮಧ್ಯಮರ ಸಹಕಾರವಿಲ್ಲದಿದ್ದರೆ ಇತರ ಇಬ್ಬರು ಸ್ವಸ್ಥ ಕುಳಿತುಕೊಳ್ಳುವುದು ಅಸಾಧ್ಯ. ರಾತ್ರಿ ಉಚ್ಚೆ ಹೊಯ್ಯಲು...
ಕುತೂಹಲ ಕೆರಳಿಸದ ಜಮ್ಮು ಕಾಶ್ಮೀರ

ಕುತೂಹಲ ಕೆರಳಿಸದ ಜಮ್ಮು ಕಾಶ್ಮೀರ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೧) ದಿಲ್ಲಿ ಬಿಟ್ಟ ವಿಕ್ರಮ ನೇಪಾಳ ಕುಸಿದು ಕುಳಿತಿದೆ, ದಿಲ್ಲಿ ಪಾಟ್ನಾಗಳು ನಡುಗಿವೆ. ಕಳೆದ ವರ್ಷ ಶ್ರೀನಗರ ಮುಳುಗಿ ಹೋಗಿತ್ತು, ಅದಕ್ಕೂ ತುಸು ಹಿಂದೆ ಕೇದಾರ ಕೊಚ್ಚಿಯೇ ಹೋಯ್ತು. ಹೀಗೆ ಇನ್ನೂ ರೂಪುಗೊಳ್ಳುತ್ತಿರುವ, ಅತಿಕಿರಿ ಪ್ರಾಯದ ದೈತ್ಯ ಹಿಮಾಲಯದ `ಮಕ್ಕಳಾಟ’ಗಳು ಅಸಂಖ್ಯವೂ ನರಹುಳುಗಳಿಗೆ...