by athreebook | Jan 11, 2013 | ಜಲಪಾತಗಳು, ಪರ್ವತಾರೋಹಣ
ತಿಂಗಳೆ ಕಣಿವೆಯ ಜಲಪಾತಗಳು – ಭಾಗ ಎರಡು [ತಿಂಗಳೆ ಕಣಿವೆಯ ಕೂಡ್ಲು ತೀರ್ಥದ ದರ್ಶನ ಮತ್ತು ಬರ್ಕಣ ಅಬ್ಬಿಯ ತಳಶೋಧದ ನೆಪದಲ್ಲಿ ನಮ್ಮ ಬಳಗ (ಆರೋಹಣ ಪರ್ವತಾರೋಹಿಗಳು ಸಾಹಸಿಗಳು) ಅಸಂಖ್ಯ ಚಾರಣಗಳನ್ನು ನಡೆಸಿತ್ತು. ಅವುಗಳಲ್ಲಿ ಸ್ವಾರಸ್ಯವಾದದ್ದನ್ನು ಮಾತ್ರ ಇಲ್ಲಿ ಹಿಡಿದಿಡುವ ಕಥನ ಮಾಲಿಕೆಗೆ ತಿಂಗಳ ಹಿಂದೆಯೇ ಕಳೆದ ಕಂತು...
by athreebook | Dec 20, 2012 | ಜಲಪಾತಗಳು, ಮಂಗಳೂರು, ವನ್ಯ ಸಂರಕ್ಷಣೆ
ತಿಂಗಳೆ ಕಣಿವೆಯ ಜಲಪಾತಗಳು – ಭಾಗ ಒಂದು ಆಗುಂಬೆಯ ದಾರಿ ಬದಿಯಲ್ಲಿ ಒನಕೆ ಅಬ್ಬಿ ಉತ್ತರ ದಿಕ್ಕಿಗಾದರೆ ಬರ್ಕಣ ದಕ್ಷಿಣಕ್ಕೆ. ಬರ್ಕಣ ದೂರದರ್ಶನದಲ್ಲಿ ದಕ್ಕಿದ್ದರೂ ಅದರ ತಲೆ ತಳ ನೋಡಲು “ಇನ್ನೊಮ್ಮೆಬರ್ಕಣ್ಣಾ” ಎಂಬುದು ನಮ್ಮ ದೊಡ್ಡ ಯೋಜನೆಗೆ ಪಲ್ಲವಿಯೇ ಆಗಿತ್ತು. ಯಾಕೆಂದರೆ ಕಣ್ಣಿಗೆ ಕಾಣುವಂತೆಯೂ, ಸರ್ವೇಕ್ಷಣ ಭೂಪಟ...
by athreebook | Oct 4, 2012 | ಚಕ್ರವರ್ತಿಗಳು, ಜಲಪಾತಗಳು, ಪ್ರವಾಸ ಕಥನ
(ಚಕ್ರವರ್ತಿಗಳು ಮೂರನೆಯ ಸುತ್ತು – ಮೂಲ ಪುಸ್ತಕದಲ್ಲಿ ಮೂರುದಾರಿಗಳು ಅಧ್ಯಾಯದ ಅಂಗಭಾಗ) ದಕ್ಷಿಣದ ಚಿರಾಪುಂಜಿ ಎಂದೇ ಹೆಸರಾಂತ ಆಗುಂಬೆಪೇಟೆಗೆ ಒನಕೆ ಅಬ್ಬಿ ಕವಲಿನಿಂದೇ ಒಂದೇ ಕಿಮೀ ಅಂತರ. ವಾತಾವರಣಕ್ಕೆ ಸಹಜವಾಗಿ ಮುದುರಿ ಕುಳಿತ ಕೆಲವು ಮನೆಗಳ ಸಾಲು, ನಡುವೆ ಒಂದೆರಡು ಅಂಗಡಿಯೇ ಊರು. [ಇಂದು ಆಗುಂಬೆಯ ಚಹರೆ ತೀವ್ರವಾಗಿ...
by athreebook | Sep 20, 2012 | ಚಕ್ರವರ್ತಿಗಳು, ಜಲಪಾತಗಳು, ಪ್ರವಾಸ ಕಥನ
(ಚಕ್ರವರ್ತಿಗಳು ಎರಡನೆಯ ಸುತ್ತು – ಮೂಲ ಪುಸ್ತಕದಲ್ಲಿ ಮೂರುದಾರಿಗಳು ಅಧ್ಯಾಯದ ಅಂಗಭಾಗ) ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು ಇಲ್ಲಿ ಭೇಟಿಯಾಗುತ್ತಾರೆ’ ಎನ್ನುವ ಸಣ್ಣ ನಾಮಫಲಕ ನನ್ನಂಗಡಿಯ ಹೊರ ಮೂಲೆಯಲ್ಲಿ ತುಂಬಾ ವರ್ಷಗಳವರೆಗೆ ಶೋಭಿಸುತ್ತಿತ್ತು. ಅದನ್ನು ನೋಡಿಯೇ ಪರ್ವತಾರೋಹಣದ ಕುರಿತು ವಿಚಾರಿಸಿದವರು,...
by athreebook | Aug 16, 2012 | ಗೋವಾ, ಜಲಪಾತಗಳು, ದೂದ್ ಸಾಗರ್, ಪ್ರವಾಸ ಕಥನ
ಗೋವಾ-ಕರ್ನಾಟಕದ ವಾಸ್ತವದ ಗಡಿ ರೇಖೆ ಘಟ್ಟದ ಮೇಲೆಲ್ಲೋ ಇದ್ದರೂ ತನಿಖಾ ಠಾಣೆಯನ್ನು ಮೊಲೆನ್ನಿನಲ್ಲೇ ಇಟ್ಟುಕೊಂಡಿದ್ದರು. ಇವರಿಗೆ ‘ಬಾಟಲಿ-ಪುತ್ರ’ರಿಂದ ಒಳ್ಳೆಯ ಕರ (ಅಥವಾ ಮೇಲ್ಸಂಪಾದನೆ) ಸಂಗ್ರಹವಾಗುತ್ತದಂತೆ. ಕುಡಿಯುವ ಯೋಗ್ಯತೆ ಇಲ್ಲದ ನಮ್ಮನ್ನವರು ಕೀಳ್ಗಣ್ಣಲ್ಲಿ ಕಂಡರು. ಆದರೆ ಅಲ್ಲಿ ಸಹಜವಾಗಿ ವಿಕಸಿಸಿದ್ದ ಧಾಬಾ ಮಾತ್ರ...