ಕಲ್ಪನೆಯಿಂದೆದ್ದ ಕಲ್ಪೆನಿ

ಕಲ್ಪನೆಯಿಂದೆದ್ದ ಕಲ್ಪೆನಿ

(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೨) ಎಂ.ವಿ ಕವರಟ್ಟಿಯ ಮೂರನೆಯ ಮಾಳಿಗೆಯ (Deck. ಈ ಶಬ್ದಕ್ಕೆ ಮೈವಿವಿನಿಲಯದ ನಿಘಂಟು ದಕ್ಕ ಎನ್ನುತ್ತದೆ. ಕನ್ನಡ ಕೋಶಗಳು ಬಂದರುಗಟ್ಟೆಯನ್ನು ಮಾತ್ರ ಧಕ್ಕೆ ಎನ್ನುತ್ತವೆ, ದಕ್ಕ ದಕ್ಕಿಸಿಕೊಂಡಿಲ್ಲ. ವಾಸ್ತವದಲ್ಲಿ ನಮ್ಮ ಹೆಚ್ಚಿನ ಕೋಶಕಾರರು ಬಯಲು ಸೀಮೆಯವರು, ಸಮುದ್ರದೂರರು....
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ

ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ

ಭಾಗ ಒಂದು – ಎಂ.ವಿ ಕವರಟ್ಟಿ “ಅಶೋಕೆರೇ ಲಕ್ಷದ್ವೀಪಗ್ ಬರ್ಪರೇ” ಆ ಸಂಜೆ ಅಂಗಡಿಗೆ ಬಂದ ಪ್ರಸನ್ನ ಅರೆ-ಕುಶಾಲಿನಲ್ಲೇ ಕೇಳಿದ. ನಾನೂ ಅಷ್ಟೇ ಹಗುರವಾಗಿ “ಹಾಂ, ಪೋಯಿ” ಎಂದವನು ಎರೆಕಚ್ಚಿದ ಮೀನಿನಂತೆ ಇದೇ ೧೬ ರಿಂದ ೨೨ರವರೆಗೆ ಬಲಿಬಿದ್ದದ್ದು ಏಪ್ರಿಲ್ (೨೦೧೦) ಮಹಿಮೆಯಲ್ಲೂ ಇರಬಹುದು! ಕೇಂದ್ರಾಡಳಿತ ಪ್ರದೇಶವಾದ...
ಭೀಮ ಬಿದ್ದಾ ಮತ್ತೆರಡು ತಿರುಗೂಳಿ ವೃತ್ತಾಂತ

ಭೀಮ ಬಿದ್ದಾ ಮತ್ತೆರಡು ತಿರುಗೂಳಿ ವೃತ್ತಾಂತ

ಇತಿಹಾಸದ ‘ಅಶೋಕ’ವನ್ನು ನನ್ನ ತಂದೆತಾಯಿಯರು ನನಗೆ ಕೊಟ್ಟದ್ದು ನಿಜ. ಆದರೆ ‘ಚಕ್ರವರ್ತಿ’ಯನ್ನೂ ಎಳೆದುಕೊಳ್ಳುವಂತಾದ್ದು ನನ್ನ ಹವ್ಯಾಸ ಬಲದಲ್ಲಿ. ದಕ್ಷಿಣ ಭಾರತದ ಒಂದು ಸಣ್ಣ ಅಂಶವನ್ನೂ ಸೇರಿಸಿದಂತೆ ಈ ವಲಯದ ನನ್ನ ಮೋಟಾರು ಸೈಕಲ್ ಪ್ರವಾಸ ಕಥನಗಳ ಸಂಕಲನವನ್ನು ನಾನೇ ‘ಚಕ್ರವರ್ತಿಗಳು’ ಎಂದು ಹೆಸರಿಸಿ, ಪ್ರಕಟಿಸಿದ್ದು (ಸದ್ಯ...
ಶ್ವೇತಾಂಬರಿಯ ಸೆರಗಿನಲ್ಲಿ ಸೆಣಸಾಟ

ಶ್ವೇತಾಂಬರಿಯ ಸೆರಗಿನಲ್ಲಿ ಸೆಣಸಾಟ

ನನ್ನೊಡನೆ ಅಂಡಮಾನ್ ಪ್ರವಾಸಕ್ಕೆ ಬಂದ ಓದುಗರಿಗೆ ಅಮೆರಿಕಾದಲ್ಲಿರುವ ನನ್ನ ತಮ್ಮ ಆನಂದವರ್ಧನ ಏನೂ ಹೊಸಬನಲ್ಲ. (ಅ‘ತ್ರಿ’ಗಳಲ್ಲಿ ಇವನು ಮಧ್ಯಮ. ವೃತ್ತಿಯಲ್ಲಿ ಗಣಕತಂತ್ರಿ. ಜಯಶ್ರೀ ಹೆಂಡತಿ. ಅನರ್ಘ್ಯ, ಐಶ್ವರ್ಯ ಮಕ್ಕಳು.) ಅವನ ಹವ್ಯಕ ಗಿವ್ಯಕ, ತುಳು ಗಿಳು ಬೆರೆತ ಭಾಷಾ ಪ್ರಯೋಗ ನಿಮ್ಮ ಓದುವ ಆನಂದಕ್ಕೆ ಬಿಟ್ಟಿದ್ದೇನೆ. ಕೇವಲ...
ಅಂಡಮಾನ್ ಎಂಟನೇ ಭಾಗ (ಮುಕ್ತಾಯ)

ಅಂಡಮಾನ್ ಎಂಟನೇ ಭಾಗ (ಮುಕ್ತಾಯ)

ಪ್ರಿಯ ಆನಂದಾ, [ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನನನ್ನು ಉದ್ದೇಶಿಸಿದ ಅರೆ-ಖಾಸಗಿ ಪತ್ರವಿದು. ಹೆಚ್ಚಿನ ವಿವರಗಳಿಗೆ ‘ಮೆಕ್ಸಿಕೋಕ್ಕೆ ಬನ್ನಿ, ಅಂಡಮಾನ್ ಬಿಡಿ’ ಸೇರಿದಂತೆ ಇದರದ್ದೇ ಹಿಂದಿನ ಆರು ಭಾಗಗಳನ್ನು ಇಲ್ಲೇ ನೋಡಿ. ಪ್ರತಿ ಓದುಗನ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ...