ದೇಶಕಾಲದ್ದು ಕೊನೆಯಲ್ಲ; ವಿರಾಮ!

ದೇಶಕಾಲದ್ದು ಕೊನೆಯಲ್ಲ; ವಿರಾಮ!

೨೦೧೧ರ ಅಕ್ಟೋಬರ್ ಮೊದಲವಾರದಲ್ಲಿ ನಾನು ಅಂತರ್ಜಾಲದಲ್ಲಿ ಮಿಂಚಂಚೆ ತನಿಖೆ ನಡೆಸಿದ್ದಂತೆ ಎಡಪಕ್ಕದ ‘ದೇಶಕಾಲ’ದ ಹಸಿರು ದೀಪ ಮಿನುಗಿ, ಬಲಪಕ್ಕದಲ್ಲಿ ಸಂವಾದ ಕಿಂಡಿ ಮೊಳೆದು ಸಾರಿತು – ‘೨೮ನೇ ಸಂಚಿಕೆಗೆ ದೇಶಕಾಲ ನಿಲ್ಲಿಸುತ್ತಿದ್ದೇನೆ’. ಮತ್ತೆ ಎರಡನೇ ವಾರದಲ್ಲಿ ೨೭ನೇ ಸಂಚಿಕೆ ಬಂದಾಗ ಸಂಪಾದಕೀಯದಲ್ಲಿ ಚುಟುಕಾಗಿ...
ಕುಮಾರವ್ಯಾಸ ನೃತ್ಯ ಭಾರತ

ಕುಮಾರವ್ಯಾಸ ನೃತ್ಯ ಭಾರತ

[ಕುಬ್ಜ ಚಿತ್ರಕ್ಕೆ ತೋರದ ಚೌಕಟ್ಟು] ಅದೊ೦ದು ಮಧ್ಯಾಹ್ನ ಅ೦ಗಡಿ ಬಾಗಿಲಡಿಯಲ್ಲಿ ತೂರಿದ್ದ ಕರೆಯೋಲೆ ಸಿಕ್ಕಿತು – ವಿದುಷಿ ಭ್ರಮರಿ ಶಿವಪ್ರಕಾಶ್ ಪ್ರಸ್ತುತ ಪಡಿಸುವ ‘ಕುಮಾರವ್ಯಾಸ ನೃತ್ಯ ಭಾರತ. ಬೆ೦ಬತ್ತಿದ೦ತೆ ಭ್ರಮರಿಯವರ ದೂರವಾಣಿ ಕರೆಯೂ ಬ೦ತು. ಹೆಚ್ಚಿನ ಒತ್ತಡ ತರುವಂತೆ ಕಾರ್ಕಳದಿ೦ದ ಪ್ರೊ| ಎ೦. ರಾಮಚ೦ದ್ರರ ದೂರವಾಣಿ...
ದಾಸಜನದ ನೆಪದಲ್ಲಿ ಮತ್ತಷ್ಟು ಜವಳಿ ನೆನಪುಗಳು

ದಾಸಜನದ ನೆಪದಲ್ಲಿ ಮತ್ತಷ್ಟು ಜವಳಿ ನೆನಪುಗಳು

ದಾಸಜನ ಕೆನರಾ ಕಾಲೇಜಿನ ಸಹಯೋಗದಲ್ಲಿ ಮೊನ್ನೆ (೩-೧೨-೧೧) ಸಂಜೆ ಜವಳಿಯವರಿಗೆ ಶ್ರದ್ಧಾಂಜಲಿ ಸಭೆ ಮಾಡಿತ್ತು. ನಾನು ಜವಳಿಯವರ ಅಗಲಿಕೆಯ ಮೊದಲ ಆಘಾತಕ್ಕೆ ಹೊಳೆದ ನಾಲ್ಕು ವಿಚಾರಗಳನ್ನು ೨೭ರಂದೇ ಬ್ಲಾಗಿಗೇರಿಸಿ, ಅನಿವಾರ್ಯವಾದ್ದನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಲೇ ಇದ್ದೆ. ಆದರೆ ಪ್ರತಿ ಬೆಳಿಗ್ಗೆ ಯಾವುದೇ ಪತ್ರಿಕೆ ತೆರೆದಾಗ...
ಜವಳಿ ಪರವಶ!

ಜವಳಿ ಪರವಶ!

[ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು] “ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತೆ ಎಮ್ಮಾರ್) ಮತ್ತು ಎಸ್ವೀಪಿ (ಮಹಾಮಾನವ ಪ್ರೊ|ಎಸ್.ವಿ ಪರಮೇಶ್ವರ ಭಟ್ಟ) ಶಿಷ್ಯತ್ವದೊಡನೆ ಅವರ ಆಶಯದ ‘ದಂಡಧಾರಿ’ (ಕ್ವೀನ್ಸ್ ಬೇಟನ್ ಹಾಗೆ) ಅಂದರೆ ಅಕ್ಷರಶಃ...
ನೆನಪಿನ ಪುಟ ಸೇರಿದ ಶಿಲಾಯುಗದ ‘ಪಾಂಡವರಕಲ್ಲು’

ನೆನಪಿನ ಪುಟ ಸೇರಿದ ಶಿಲಾಯುಗದ ‘ಪಾಂಡವರಕಲ್ಲು’

ಪೀಠಿಕೆ ಪ್ರಾಕೃತಿಕ ಶೋಧನೆಗಳ ಅಲೆದಾಟದಲ್ಲಿ ನಾನು ಕೆಲವು (ಐತಿಹಾಸಿಕವೂ ಸೇರಿದಂತೆ) ಮಹತ್ವದ ರಚನೆಗಳನ್ನು ಗುರುತಿಸಿದಂತೇ ಅರಿವಿಲ್ಲದೆ ತುಳಿದು ಸಾಗಿದ್ದು ಹಲವಿರಬಹುದು. ಗುರುತಿಸಿದವನ್ನು ನನ್ನ ಸಂಪರ್ಕಕ್ಕೆ ಬಂದ ಪರಿಣತರಿಗೆ ನನ್ನದೇ ಮಿತಿಯಲ್ಲಿ ಹೇಳಿ, ಅವರು ಬಯಸಿದಲ್ಲಿ ಸಂತೋಷದಲ್ಲೇ ಅಲ್ಲಿಗೊಯ್ದು ತೋರುವ ಉತ್ಸಾಹವನ್ನೂ...