ಬಾಂಧವ್ಯ ಹೆಚ್ಚಿಸಿದ ಕಾನ್ಹಾ ವನಧಾಮ

ಬಾಂಧವ್ಯ ಹೆಚ್ಚಿಸಿದ ಕಾನ್ಹಾ ವನಧಾಮ

(ಭಾರತ ಅ-ಪೂರ್ವ ಕರಾವಳಿಯೋಟ – ೧೧) ಎರಿಕ್ ಡಿ ಕುನ್ನಾರನ್ನು ನೀವು ಮರೆತಿಲ್ಲವೆಂದು ಭಾವಿಸುತ್ತೇನೆ (ನೋಡಿ: ರಣಥೊಂಬರಾದ ಹುಲಿಗಳು). ಒಂದೇ ವಾಕ್ಯದಲ್ಲಿ ಹೇಳುವುದಿದ್ದರೆ, ಅವರು ‘ಇಂಡಿಯನ್ ಅಡ್ವೆಂಚರ್ಸ್’ ಎಂಬ ಖಾಸಗಿ ಪ್ರವಾಸೋದ್ಯಮ ಸಂಸ್ಥೆಯಲ್ಲಿ ಪರಿಸರ ಮಾರ್ಗದರ್ಶಿ (ಗೈಡ್ ಅಲ್ಲ, ನ್ಯಾಚುರಲಿಸ್ಟ್). ೧೯೯೦ರ ನಮ್ಮ ಭಾರತ...
ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ

ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ

(ಭಾರತ ಅ-ಪೂರ್ವ ಕರಾವಳಿಯೋಟ – ೧೦) ಶಿವರಾಮ ಕಾರಂತರು ಸಾರ್ವಜನಿಕಕ್ಕೆ ಹತ್ತೆಂಟು ಮುಖಗಳಿಂದ ವಿಖ್ಯಾತರಿದ್ದಷ್ಟೇ ಗಾಢವಾಗಿ ನಮಗೆ ಕುಟುಂಬದ ಸ್ನೇಹಿತರೂ ಹೌದು. ಅವರು ೧೯೯೫ರ ಸುಮಾರಿಗೆ ಯಾರಿಂದಲೋ ನನ್ನ ಪ್ರಥಮ ಭಾರತ ಯಾನದ ಸುದ್ದಿಯನ್ನು ಕೇಳಿದರಂತೆ. ಮುಂದುವರಿದು, ನಾನು ಎರಡನೇದಕ್ಕೆ ಸಜ್ಜುಗೊಳ್ಳುತ್ತಿರುವುದು ತಿಳಿದ...
ಗಯಾ ಕಾಶಿ, ಪನ್ನಾಕ್ಕೆ ಗುನ್ನಾ

ಗಯಾ ಕಾಶಿ, ಪನ್ನಾಕ್ಕೆ ಗುನ್ನಾ

(ಭಾರತ ಅ-ಪೂರ್ವ ಕರಾವಳಿಯೋಟ – ೯) ದೇವರು, ನಂಬಿಕೆಗಳ ಕುರಿತ ನನ್ನ ವೈಯಕ್ತಿಕ ನಿಲುವು ಎಂದೂ ನನ್ನ ವೃತ್ತಿಯ ಭಾಗವಾದ ಪುಸ್ತಕ ವೈವಿಧ್ಯದ ಸಂಗ್ರಹ ಮತ್ತು ಮಾರಾಟವನ್ನು ಪ್ರಭಾವಿಸಿದ್ದಿಲ್ಲ. (ಎಲ್ಲೂ ಇಲ್ಲದ್ದು ಅತ್ರಿಯಲ್ಲಿ ವಿಚಾರಿಸಿ!) ಹಾಗಾಗಿ ಮಠಾಧಿಪತಿಗಳೂ ಜ್ಯೋತಿಷ್ಯ ಮಾರ್ತಾಂಡರೂ ಸಕಲ ಧರ್ಮೀಯರೂ ಸಂಶಯಚಿತ್ತರೂ...
ಡಾರ್ಜಿಲಿಂಗ್ ಮತ್ತು ಮಿರಿಕ್ ಮಿಸ್ಟೇಕ್

ಡಾರ್ಜಿಲಿಂಗ್ ಮತ್ತು ಮಿರಿಕ್ ಮಿಸ್ಟೇಕ್

(ಭಾರತ ಅ-ಪೂರ್ವ ಕರಾವಳಿಯೋಟ – ೭) ಕಾಲೇಜು ದಿನಗಳಿಂದ ನನ್ನ ದೊಡ್ಡ ಕನಸು – ಡಾರ್ಜಿಲಿಂಗ್ ಭೇಟಿ ಮತ್ತು ತೇನ್ ಸಿಂಗ್ ಶಿಷ್ಯತ್ವ ಗಳಿಕೆ. ಸಿಕ್ಕ ಮೊದಲ ಅವಕಾಶ – ೧೯೭೧ರ ಅಸ್ಸಾಂ ಭೇಟಿ, ನಾನು ಮಿಂಚು ನೋಟಕ್ಕಾದರೂ ಡಾರ್ಜಿಲಿಂಗ್ ಎಂದು ತಿಣುಕಿದ್ದೆಲ್ಲ ನಿಮಗೆ ತಿಳಿದೇ ಇದೆ (ನೋಡಿ: ೫. ಮತ್ತೆ ಮತ್ತೆ...
ಗಂಗಾ ಪಾತ್ರೆಯಲ್ಲಿ ಸ್ವಲ್ಪ ಉದ್ದಕ್ಕೆ…

ಗಂಗಾ ಪಾತ್ರೆಯಲ್ಲಿ ಸ್ವಲ್ಪ ಉದ್ದಕ್ಕೆ…

(ಭಾರತ ಅ-ಪೂರ್ವ ಕರಾವಳಿಯೋಟ – ೬) ‘ಆಸೇತು ಹಿಮಾಚಲ’ ಎನ್ನುವಲ್ಲಿ ಭಾರತದ ಉದ್ದ ಸ್ಪಷ್ಟ ಇದೆ. ಬಹುತೇಕ ಆ ‘ಸೇತು’ವಿನ (ದಕ್ಷಿಣ ಕೊನೆಯ ರಾಮಸೇತು) ಸಮೀಪವೇ ಇರುವ ನಾವು ಭಾರತಯಾನ ಎಂದೇ ಯೋಜಿಸುವಾಗ, ಹಿಮಾಲಯ ಮುಟ್ಟದೇ ಪರಿಪೂರ್ಣವಲ್ಲ ಎಂಬ ಭಾವವೂ ಸೇರಿತ್ತು. ಹಾಗಾಗಿ ಮೊದಲ ಹಂತದಲ್ಲಿ ಯೋಜನೆಯಂತೇ ರೈಲ್ವೇ, ನಗರದರ್ಶನ,...