ಹೋಗಿ ಬಲ್ಲಾಳರಾಯ ದುರ್ಗಕ್ಕೆ

ಹೋಗಿ ಬಲ್ಲಾಳರಾಯ ದುರ್ಗಕ್ಕೆ

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೫) ಲೇಖಕ: ಎ.ಪಿ. ಚಂದ್ರಶೇಖರ (ಚಿತ್ರಗಳು: ಕೀರ್ತಿ, ಮಂಗಳೂರು) [ಪಶ್ಚಿಮ ಘಟ್ಟದಲ್ಲಿ ನನ್ನ ಮೊದಲ ಹೆಜ್ಜೆ ಮೂಡಿಸುವ ದಿನ. ಮೈಸೂರಿನಿಂದ ಅದಕ್ಕೆಂದೇ ಬಂದ ಗೆಳೆಯ ವಿಶ್ವನಾಥ್ ಜತೆಗೆ ದಿಢೀರ್ ಸೇರ್ಪಡೆಯಾದವ, ಅಧಿಕೃತ ಪರ್ವತಾರೋಹಣಕ್ಕೇ ಅದೇ ಮೊದಲು ಪ್ರವೇಶ ಪಡೆದವ, ಸೋದರ ಮಾವನ ಮಗ ಎ.ಪಿ....
ಪ್ರವಾಸೋದ್ದಿಮೆ ಜಾಲದ ಸಣ್ಣಗೂಢದಲ್ಲಿ…..

ಪ್ರವಾಸೋದ್ದಿಮೆ ಜಾಲದ ಸಣ್ಣಗೂಢದಲ್ಲಿ…..

ಮೇಘಾಲಯದ ಗಿರಿಕೊಳ್ಳಗಳಲ್ಲಿ – ೪ ಫೆಬ್ರವರಿ ಎಂಟರ ಬೆಳಗ್ಗಿನಿಂದ ಹನ್ನೆರಡರ ರಾತ್ರಿಯವರೆಗೆ ಎಲ್ಲರು ಯೂಥ್ ಹಾಸ್ಟೆಲ್ಸ್ ಯೋಜಿಸಿದ್ದ ಕಲಾಪಗಳಲ್ಲೇ ಭಾಗಿಯಾಗಿದ್ದೆವು. ಅದರ ಮೇಲೆ ಒಂದು ದಿನವನ್ನು ಅವರು ನಮ್ಮ ಸ್ವತಂತ್ರ ಓಡಾಟಕ್ಕೂ ಹಾಸ್ಟೆಲ್ಲಿನ ಎಲ್ಲ ಸೌಲಭ್ಯಗಳನ್ನು (ಬುತ್ತಿ ಒಯ್ಯುವ ಆಹಾರ ಸಹಿತ) ಉಚಿತವಾಗಿಯೇ...
ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ……

ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ……

ಮೇಘಾಲಯದ ಗಿರಿಕೊಳ್ಳಗಳಲ್ಲಿ – ೩ ಲಿಕಾಯ್ ಹಾರಿಕೊಂಡ ಕೊಳ್ಳ ಇನ್ನೂ ಭೋರಿಟ್ಟು ಅಳುತ್ತಿದೆ! ಝರಿಯ ಧಾರಾ ಮೊತ್ತದಲ್ಲಿ, ರೋದನದ ತೀವ್ರತೆಯಲ್ಲಿ ಏರಿಳಿತವಿರಬಹುದು. ಹಾಗೆಂದು ಭರಿಸಿ ಸಮಾಧಾನಿಸುವ ಸುವಿಸ್ತಾರ ಹಸಿರು ಕಣಿವೆಯ ಔದಾರ್ಯ, ಮನ ಮಿಡಿದು ಎಲ್ಲೆಲ್ಲಿಂದಲೂ ಕಾಣ ಬರುವವರ ಸಂದಣಿ ಎಂದೂ ಕಡಿಮೆಯಾದದ್ದಿಲ್ಲ. ಮೂರನೇ ದಿನದ...
ಅತಿ ಮೋಹಕ ಜಲಪಾತ್ರೆಯ ಉದ್ದಕ್ಕೆ…..

ಅತಿ ಮೋಹಕ ಜಲಪಾತ್ರೆಯ ಉದ್ದಕ್ಕೆ…..

ಮೇಘಾಲಯದ ಗಿರಿಕೊಳ್ಳಗಳಲ್ಲಿ – ೨ ಲೈಟ್ರಿಂಗ್ಲ್ಯು (Laitrynglew) ಶಿಬಿರತಾಣ – ಶಾಲಾವಠಾರವನ್ನು, ಕಳಚಿಕೊಳ್ಳುವಾಗ ಗಂಟೆ ಎಂಟೂವರೆ ಕಳೆದಿತ್ತು. ಅಂದು ಚಾರಣದಿನ. ಮೊದಲ ಸುಮಾರು ಕಾಲು ಗಂಟೆಯಷ್ಟೇ ನಾವು ಜನವಸತಿಯ ಹಿಂಚುಮುಂಚು ನಡೆದಿದ್ದೆವು. ಹಿಂದಿನ ದಿನ ಬಸ್ ಬಂದಿದ್ದ ಕಾಂಕ್-ಡಾಮರ್ ದಾರಿಯಲ್ಲಿ ನೇರ ಊರಿಗೇ...
ಕೊಯಂಬತ್ತೂರು ಟಿಪ್ಪಣಿಗಳು

ಕೊಯಂಬತ್ತೂರು ಟಿಪ್ಪಣಿಗಳು

ಮೋಹಕ ಪಯಣ ಕೊಯಮ್ಬತ್ತೂರು ತಮಿಳುನಾಡಿನಲ್ಲಿ ಚೆನ್ನೈಗೆ ಎರಡನೇ ದೊಡ್ಡ ನಗರ ಮತ್ತು ಯಂತ್ರೋಪಕರಣಗಳಿಗೆ ಪ್ರಸಿದ್ಧ ಕೇಂದ್ರ. ಆದರೆ ನನಗಿದು (ತಮ್ಮ ಅನಂತವರ್ಧನ ಮತ್ತು ರುಕ್ಮಿಣಿಮಾಲಾ ದಂಪತಿಗಳ) ಮಗಳು – ಅಕ್ಷರಿ, ಅಳಿಯ – ಮಹೇಶ ಮತ್ತು ಪುಳ್ಳಿ ಆರುಷರ ಹೊಸ ಊರು. ಅವರ ಪ್ರೀತಿಗೆ ನನ್ನ ಹೊಸತೊಂದು ‘ಸಾಹಸ’ ಅಗತ್ಯವನ್ನು...