by athreebook | Nov 6, 2024 | ಪುಸ್ತಕೋದ್ಯಮ
(‘ಕರ್ನಾಟಕ’ ಸುವರ್ಣೋತ್ಸವಕ್ಕೆ ವಿಶೇಷ ಲೇಖನ) “ಮಾಡೋಕ್ ಬೇರೆ ಕೆಲಸವಿಲ್ಲಾ”, ಕನ್ನಡ ಪುಸ್ತಕ ಪ್ರಾಧಿಕಾರ ‘ವರ್ಷದ ಉತ್ತಮ ಪ್ರಕಾಶಕ’ ಪ್ರಶಸ್ತಿ ಪ್ರಸ್ತಾವನೆಯನ್ನು ಡೀವೀಕೇ ಮೂರ್ತಿ ನೋಡಿದಾಗ ಕೊಟ್ಟ ಪ್ರಥಮ ಉದ್ಗಾರ. (ಅವರು ಪ್ರಶಸ್ತಿ ಸ್ವೀಕರಿಸದೇ ಇನ್ನೂ ದೊಡ್ಡವರಾದರು) ನಾವು (ಪ್ರಜಾಪ್ರಭುಗಳು) ಸಾರ್ವಜನಿಕ...
by athreebook | Apr 13, 2023 | ನೀನಾಸಂ, ಪ್ರವಾಸ ಕಥನ
(ನೀನಾಸಂ ಕಲೆಗಳ ಸಂಗಡ ಮಾತುಕತೆ-೪) ತೊಟ್ಟ ಬಾಣವನ್ನು ಮರಳಿ ತೊಡೆ… ಶಿಬಿರ ಮುಗಿದ ಮೇಲೆ ‘ಅಲ್ಲಿರುವುದು ಸುಮ್ಮನೆ’ ಎಂದು ಬೆಳಿಗ್ಗೆ (೧೦/೧೧) ಏಳು ಗಂಟೆಗೇ ಬೈಕೇರಿದ್ದೆವು. ಹೊಸ ಅನುಭವದ ಹುಡುಕಾಟದಲ್ಲಿ ನನ್ನದೊಂದು ಸಣ್ಣ ನಿರ್ಧಾರ – ಒಮ್ಮೆ ಬಳಸಿದ ದಾರಿಯನ್ನು ವಿಶೇಷ ಕಾಲಾಂತರವಲ್ಲದೇ (ಮತ್ತು ...
by athreebook | Dec 24, 2022 | ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
(ನೀನಾಸಂ ಕಲೆಗಳ ಸಂಗಡ ಮಾತುಕತೆ ಭಾಗ ೨) ವಾಸ, ಊಟ ಆಹ್ವಾನಿತ ಅತಿಥಿ’ಯಾಗಿ ನಮಗೆ ನೀನಾಸಂ ಸ್ವಾಗತ ಕಚೇರಿಯ ಒತ್ತಿನ ಕಟ್ಟಡದ ಕೋಣೆಯನ್ನು ಕೊಟ್ಟಿದ್ದರು. ವಠಾರದ ಹೆಚ್ಚಿನಕಟ್ಟಡಗಳಂತೆ ಇದೂ ಹಳತು. ಆದರೆ ಎರಡು ಮಂಚ, ಹಾಸಿ ಹೊದೆಯುವುದು, ಫ್ಯಾನ್, ಸ್ನಾನಕ್ಕೆ ಬಿಸಿನೀರು, ಸ್ವತಂತ್ರ ಶೌಚ ವ್ಯವಸ್ಥೆ, ‘ಆಹಾರ್ಯ’ದ ನೆರೆಮನೆ...
by athreebook | Dec 21, 2022 | ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
(ಭಾಗ ೧) ನಾನು ನೀನು ಸೇರಿಕೊಂಡೂ…. ಗುರುವಾರ (೪-೧೧-೨೨) ಬೆಳಿಗ್ಗೆ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ ಮಂಗಳೂರು ಬಿಟ್ಟೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಿದ್ದವು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆಂದು ಹಿಡಿದುಕೊಂಡ ಬಟ್ಟೆಬರಿಗಳು...
by athreebook | Dec 10, 2022 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ರಂಗ ಸ್ಥಳ
ಹಾಮ ಭಟ್ಟ ಸ್ಮೃತಿ ಹಬ್ಬ – ೨೦೨೨ ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ (ನೋಡಿ: ನೆಲ ನಿಲ್ಲಿಸುವುದು, ನೆಲ ಮುಳುಗಿಸುವುದು, ೧೯೮೮) ತುಮರಿ ಕಂಡದ್ದು ಬಹುತೇಕ ಮರವೆಗೆ ಸಂದಿತ್ತು. ದೀರ್ಘ ಬಿಡುವಿನ ಮೇಲೆ ಅಂದರೆ, ಕಳೆದ ಹತ್ತು ವರ್ಷಗಳಲ್ಲಿ, ನನಗೆ ಹೆಗ್ಗೋಡು ಒಡನಾಟ ಹೆಚ್ಚಾಗಿ, ಶರಾವತಿ ಸಾಗರದ...