by athreebook | Jul 9, 2010 | ಪರ್ವತಾರೋಹಣ, ರಂಗನಾಥ ಸ್ತಂಭ ವಿಜಯ
ರಂಗನಾಥ ಸ್ತಂಭ ವಿಜಯ – ಭಾಗ ನಾಲ್ಕು ಬಂಡೆ ಬೊಬ್ಬಿಟ್ಟಿತು, ಕಾಡು ಚೀರಿತು, ತಂಡದವರಂತೂ “ಅಶೋಕ್ ಹೇಗಿದ್ದೀರಿ? ಪ್ರಸನ್ನಾ ಹುಶಾರಾ? ಗಣಪತಿ ಭಟ್ಟರ ಕೈ ಹ್ಯಾಗಿದೇ?” ಉದ್ಗಾರಗಳದೇ ಸಂತೆ. ಆದರೆ ಅದೃಷ್ಟ ನಮ್ಮೆಲ್ಲರ ಜೊತೆಗಿತ್ತು. ಬಂಡೆ ಜಾರಿದಾಗ ನಾನು ನೇರದಲ್ಲಿದ್ದದ್ದು ನಿಜ. ಆದರೆ ಅದು ಗಿಡಕ್ಕೆ ತಾಗಿ ಹೊರಳಿ ಬೀಳುವ...
by athreebook | Jul 6, 2010 | ಅನ್ಯರ ಬರಹಗಳು, ವೈಚಾರಿಕ, ವ್ಯಕ್ತಿಚಿತ್ರಗಳು
ಪ್ರಜಾವಾಣಿಯ ಶನಿವಾರದ ಕರಾವಳಿ ಪುರವಣಿಯಲ್ಲಿ ಗೆಳೆಯ ಮಹಾಲಿಂಗ ಭಟ್ಟರು ಕೆಲವು ಸಮಯದಿಂದ ಒಂದು ಅಂಕಣ ನಡೆಸುತ್ತಾ ಇಲ್ಲ! ಬದಲು ಅವರ ಚಿತ್ರ ಮತ್ತು ಹೆಸರು ಹೊತ್ತು ಅವರ ಸಾಹಿತ್ಯ, ಸಂಸ್ಕೃತಿಗಳ ಬಹುಮುಖೀ ಆಸಕ್ತಿಗಳೇ ಸುಮಾರು ಕಾಲುಪುಟದ ಹರವಿನಲ್ಲಿ ಮಾತಾಡುತ್ತವೆ. ವಾಸ್ತವದಲ್ಲಿ ಈ ಅಂಕಣ ಸದಾ ಕರಾವಳಿ ಎಂಬ ಪ್ರಾದೇಶಿಕ ಮಿತಿಯನ್ನು...
by athreebook | Jul 1, 2010 | ಪರ್ವತಾರೋಹಣ, ರಂಗನಾಥ ಸ್ತಂಭ ವಿಜಯ
ರಂಗನಾಥ ಸ್ತಂಭ ವಿಜಯ ಭಾಗ ಮೂರು ಚಳಿಗೆ ಕಾಲವೂ ನಡುಗುವುದು: ಶ್ರೀರಂಗನಾಥ ಸ್ವಾಮಿಯು ಆದಿಶೇಷನ ಮೇಲೆ ಒರಗಿ, ಒಂದೆಸಳು ಶ್ರೀತುಳಸಿಗೋ ಬಿಂದು ಗಂಗೋದಕಕ್ಕೋ ಭಕ್ತಾಭೀಷ್ಟವರಪ್ರದಾಯಕನಾಗಿರುವುದನ್ನು ನಾನು ಶ್ರೀರಂಗಪಟ್ಟಣದಲ್ಲಿ ಕಂಡವನಿದ್ದೇನೆ. ಕಾಲಹತಿಯಲ್ಲಿ ಆರಾಧನೆ ಆರತಿ ತಟ್ಟೆಯ ಆದಾಯವನ್ನು ಆತುಕೊಂಡಾಗ, ಮೇಲ್ವಿಚಾರಣೆ...
by athreebook | Jun 24, 2010 | ಪರ್ವತಾರೋಹಣ, ರಂಗನಾಥ ಸ್ತಂಭ ವಿಜಯ
ಗಣಪತಿಭಟ್ಟರ ಸ್ವಗತ: “ಊಟಿಗೆ ಬರ್ತೀರಾ” ಅದೊಂದು ದಿನ ಹೀಗೇನೋ ಅಶೋಕರು ಕೇಳಿದರು. ಊಟಿಯ ಆಕರ್ಷಣೆಯಲ್ಲಿ ವಿಳಂಬಿಸದೆ ಒಪ್ಪಿದ್ದೆ. ವಿರಾಮದಲ್ಲಿ ತಯಾರಿ ನಡೆಸಿದ್ದಂತೆ, ‘ಕೆಲಸ’ ಸಣ್ಣದಿರಲಾರದು ಎಂದನಿಸಿತು. ಕನಿಷ್ಠ ರಾತ್ರಿ ಬಸ್ಸಿನಲ್ಲಿ ನಿದ್ರೆಯಾದರೂ ಗಟ್ಟಿ ಮಾಡಬೇಕೆಂದು ನಿರ್ಧರಿಸಿದ್ದೆ. ಬಸ್ಸೇರಿದ ಕೂಡಲೇ ಎಲ್ಲರ ನಿದ್ರೆ...
by athreebook | Jun 21, 2010 | ಯಕ್ಷಗಾನ
“ಪ್ರದರ್ಶನದಲ್ಲಿ ಏನಾದರೂ ಹುರುಳುಂಟೇ ಅಥವಾ ಇದು ಕೇವಲ ನನ್ನೊಬ್ಬನ ಹಳವಂಡವೋ?” ಇದು ತನ್ನ ದೀವಟಿಗೆ ಪ್ರದರ್ಶನದ ಬೆನ್ನಲ್ಲಿ ಸದಾ ರಾಘವ ನಂಬಿಯಾರರು ಕೇಳುತ್ತಿದ್ದ ಪ್ರಶ್ನೆ. ಮನೋಹರ ಉಪಾಧ್ಯರ ಸೂಚನೆಯೊಂದಿಗೆ ನಾವು ಎರಡು ದೀವಟಿಗೆ ಪ್ರಯೋಗಗಳನ್ನು ವಿಡಿಯೋ ದಾಖಲೀಕರಣಕ್ಕಾಗಿಯೇ ಆಡಿಸಿ, ಮಾಡಿಸಿದ ಮೇಲೂ ಉಳಿದದ್ದು ಅದೇ ಪ್ರಶ್ನೆ...