by athreebook | Apr 17, 2018 | ಪಡ್ಡಾಯಿ, ಸಿನಿಮಾ
(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೪) ‘ಪಡ್ಡಾಯಿ’ (ಪಶ್ಚಿಮ) – ಬರಿಯ ದಿಕ್ಕಲ್ಲ, ಈ ವಲಯದ ಮೀನುಗಾರರ ಜೀವನದ ಅವಿಭಾಜ್ಯ ಅಂಗವೇ ಆದ ಪಶ್ಚಿಮದ ಸಮುದ್ರವೇ ಆಗಿದೆ. ಸಹಜವಾಗಿ ಪಡ್ಡಾಯಿ ಸಿನಿಮಾದಲ್ಲಿ ಸಾಮಾಜಿಕ ಸಂಘರ್ಷದ ಅನಿವಾರ್ಯ ಭಾಗವಾಗಿ ಪ್ರಾಕೃತಿಕ ದೃಶ್ಯಗಳ ಚಿತ್ರಣ ಧಾರಾಳವಿದೆ. ಹಾಗೆಂದು ಚಿತ್ರೀಕರಣವನ್ನು...
by athreebook | Apr 15, 2018 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೨೩) ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ ಛಲ ಬಿಡದ ತ್ರಿವಿಕ್ರಮನಂತೆ ಸರ್ಕೀಟಿಗೆ ಸಜ್ಜುಗೊಂಡು ನಾನು ಸೈಕಲ್ ಕೊಟ್ಟಿಗೆಗೆ ಹೋದೆ. ಸೈಕಲ್ ಕತ್ತಲ ಮೂಲೆಯಲ್ಲಿ ಶೀರ್ಷಾಸನ ಮಾಡಿತ್ತು. ದೀಪ ಹಾಕಿ, ಕೀಲೆಣ್ಣೇ ಬಿಟ್ಟು ಸಮಾಧಾನಿಸಿದೆ. ಹೊರಗೆ ಆಕಾಶರಾಯ ಉತ್ತರಿಸಿದ “ಟ-ಠ-ಡ-ಢ-ಣ!” ಅರ್ಥವಾಗಲಿಲ್ವಾ –...
by athreebook | Apr 11, 2018 | ಚಕ್ರವರ್ತಿಗಳು, ಸೈಕಲ್ ದಿನಚರಿ
ಜಂಟಿ ಸೈಕಲ್ ಮಾರಿಹೋದ ಮೇಲೆ, ಒಂಟಿ ಸೈಕಲ್ಲೇರಿ ನಾ ಕಂಡ ಲೋಕದ ‘ಪ್ರಥಮಾನುಭವ ವರದಿ’ ದೇವಕಿಗೆ ಸಾಕಾಗುತ್ತಿರಲಿಲ್ಲ. ಅದನ್ನು ಸ್ವಲ್ಪ ತುಂಬಿಕೊಡುವಂತೆ ಕಳೆದ ವರ್ಷ (೭-೩-೨೦೧೭) ಇಂಥದ್ದೇ ಉರಿಬಿಸಿಲಿನಲ್ಲಿ ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ನಾವಿಬ್ಬರು ಮನೆಯಲ್ಲೇ ತಿಂಡಿ ಮುಗಿಸಿ ಮೋಟಾರ್ ಸೈಕಲ್ ಏರಿದೆವು. ತೊಕ್ಕೋಟು, ಕಿನ್ಯ...
by athreebook | Apr 8, 2018 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೨೨) ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ ಸೈಕಲ್ ತತ್ತ್ವಜ್ಞಾನ: ಸರಳ, ಆರೋಗ್ಯಪೂರ್ಣ, ಮಿತವ್ಯಯಿ ಇತ್ಯಾದಿ ಖ್ಯಾತಿಯೊಡನೆ ಚಲಾವಣೆಗಿಳಿದ ಹೊಸ ತಲೆಮಾರಿನ ಸೈಕಲ್ ಸವಾರಿಯಲ್ಲಿ ದುಬಾರಿ ಸೈಕಲ್ಲುಗಳನ್ನೇನೋ ಗುಣಮಟ್ಟದಿಂದ ಸಮರ್ಥಿಸಿಕೊಳ್ಳಬಹುದು. ಆದರೆ ಚಟುವಟಿಕೆಗಳು – ಕೇವಲ ಕ್ರಮಿಸಿದ ಅಂತರಗಳ ದಾಖಲೆಗಾಗಿ,...
by athreebook | Apr 6, 2018 | ಪಡ್ಡಾಯಿ, ಪರಿಸರ ಸಂರಕ್ಷಣೆ, ಸಿನಿಮಾ, ಸೈಕಲ್ ದಿನಚರಿ
(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೩) (ಚಕ್ರೇಶ್ವರ ಪರೀಕ್ಷಿತ ೨೧) ಅಭಯ ‘ಪಡ್ಡಾಯಿ’ ಚಿತ್ರ ಯೋಜನೆಯೊಡನೆ ಹೊರಟ ಮೊದಲಲ್ಲೇ ನಾವಿಬ್ಬರೂ ಭೇಟಿಯಾದ ವ್ಯಕ್ತಿ – ಕಣ್ವತೀರ್ಥದ ಬಳಿಯಿರುವ ದಿನೇಶ್ ಉಚ್ಚಿಲ. ಸುಮಾರು ಎರಡೂವರೆ ದಶಕಗಳ ಹಿಂದೆ ಇವರ ಚಾಮುಂಡೀ ಮೀನುಗಾರಿಕಾ ದೋಣಿ ಪಡೆಗಳೊಡನೆ ನಾವು ಸುಮಾರು...