by athreebook | Jan 31, 2013 | ಯಕ್ಷಗಾನ
ತಿಂಗಳ ಹಿಂದೆ ಜಾಲ-ಸಂವಾದಕ್ಕೆ (ಚಾಟ್) ಸಿಕ್ಕಾಗ (ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರೂ ಬಹುಮುಖೀ ಕಲಾವಿದರೂ ಎಂ.ಜಿ.ಎಂ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರೂ ನನ್ನ ಆತ್ಮೀಯ ಗೆಳೆಯರೂ ಆದ ಎಂ. ಲಕ್ಷ್ಮೀನಾರಾಯಣ-) ಸಾಮಗರು ‘ಜನವರಿ ೨೪ ರಿಂದ ೨೬ ಬಿಡುವಿಟ್ಟುಕೊಳ್ಳಿ’ ಎಂದು ಮುನ್ಸೂಚನೆಯನ್ನೇ...
by athreebook | Jan 24, 2013 | ಜಲಪಾತಗಳು, ಪರ್ವತಾರೋಹಣ
ಬರ್ಕಣ ತಳಶೋಧ ಈ ಬಾರಿ ಶತಸ್ಸಿದ್ಧ ಎಂದು ಎಂಟು ಬೈಕೇರಿದ ನಮ್ಮ ಹದಿನೈದು ಸದಸ್ಯರ ತಂಡ ಆಗುಂಬೆಯ ತಪ್ಪಲಿನಲ್ಲಿರುವ ಸೋಮೇಶ್ವರ ಕಾಡು ನುಗ್ಗಿತು. ಕುಗ್ರಾಮ ಮೂಲೆಯ ತಣ್ಣೀರಬೈಲು (ಸುಮಾರು ನಾಲ್ಕೂವರೆ ಕಿಮೀ) ಎಂಬ ಕೊನೆಯ ಒಕ್ಕಲು ಮನೆಯವರೆಗೆ ಹಳ್ಳಿಯ ಸಾಮಾನ್ಯ ಮಣ್ಣುದಾರಿಯಿತ್ತು. ಅನಂತರ ಸುಮಾರು ಒಂದೂವರೆ ಕಿಮೀಯಷ್ಟು ಕೂಪು...
by athreebook | Jan 21, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಭವಿಷ್ಯ ವಿಜ್ಞಾನ
[ಭವಿಷ್ಯ ವಿಜ್ಞಾನ – ಅನುಬಂಧ – ಒಂದು, ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] [ಏಳನೇ ಮತ್ತು ಕೊನೆಯ ಕಂತು] ಇಪ್ಪತ್ತನೆಯ ಶತಮಾನ ಇನ್ನು ಕೆಲವೇ ವರ್ಷಗಳಲ್ಲಿ (೧೯೯೩ರಲ್ಲಿ ಬರೆದ ಮಾತು.) ನೇಪಥ್ಯಕ್ಕೆ ನಿರ್ಗಮಿಸಿ ಇಪ್ಪತ್ತೊಂದನೆಯ...
by athreebook | Jan 17, 2013 | ಜಲಪಾತಗಳು, ಪರ್ವತಾರೋಹಣ
ದುರ್ಗಮ ಕಾಡುಕೊಳ್ಳದಲ್ಲಿ ಎದ್ದುಬಿದ್ದು ಬಂದ ಶ್ರಮಕ್ಕೆ ಮೈಯನ್ನು ಗಾಳಿಗೊಡ್ಡಿಕೊಳ್ಳುತ್ತಾ ಉಶ್ ಎಂದು ಬಂಡೆಯಂಚಿನಿಂದ ಕೂಡ್ಲು ಝರಿ ಹಾರಿಕೊಳ್ಳುತ್ತಲೇ ಇತ್ತು. ಗಾಳಿಯ ಲಹರಿಯಲ್ಲಿ ಬಳುಕಿ, ಅತ್ತಿತ್ತ ತೆಳು ಪರದೆಯನ್ನೇ ಬಿಡಿಸಿ, ಅಲ್ಲಿಲ್ಲಿ ನೀರಹುಡಿಯಲ್ಲಿ ಕಾಮನಬಿಲ್ಲು ಮೂಡಿಸಿ, ದರೆಯ ಗೋಡೆಗಂಟಿದ ಅಷ್ಟೂ ತನ್ನ ಖಾಸಾ ಹಸಿರಿನ...
by athreebook | Jan 14, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಭವಿಷ್ಯ ವಿಜ್ಞಾನ
[ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] [ಆರನೇ ಕಂತು] ತಾಂತ್ರಸ್ಥಾಪಕರು ವಿನಾಶಪ್ರವಾಚಕರು, ಮಧ್ಯವರ್ತಿಗಳು: ಭವಿಷ್ಯ ವಿಜ್ಞಾನಿಗಳ ಪ್ರಕಾರ ಇಂದು ಮಾನವ ಅಖಂಡವಾದ ಒಂದೇ ಭೂಮಿಯಲ್ಲಿ ಬಾಳುತ್ತಿಲ್ಲ. ಬದಲು,...
by athreebook | Jan 11, 2013 | ಜಲಪಾತಗಳು, ಪರ್ವತಾರೋಹಣ
ತಿಂಗಳೆ ಕಣಿವೆಯ ಜಲಪಾತಗಳು – ಭಾಗ ಎರಡು [ತಿಂಗಳೆ ಕಣಿವೆಯ ಕೂಡ್ಲು ತೀರ್ಥದ ದರ್ಶನ ಮತ್ತು ಬರ್ಕಣ ಅಬ್ಬಿಯ ತಳಶೋಧದ ನೆಪದಲ್ಲಿ ನಮ್ಮ ಬಳಗ (ಆರೋಹಣ ಪರ್ವತಾರೋಹಿಗಳು ಸಾಹಸಿಗಳು) ಅಸಂಖ್ಯ ಚಾರಣಗಳನ್ನು ನಡೆಸಿತ್ತು. ಅವುಗಳಲ್ಲಿ ಸ್ವಾರಸ್ಯವಾದದ್ದನ್ನು ಮಾತ್ರ ಇಲ್ಲಿ ಹಿಡಿದಿಡುವ ಕಥನ ಮಾಲಿಕೆಗೆ ತಿಂಗಳ ಹಿಂದೆಯೇ ಕಳೆದ ಕಂತು...
by athreebook | Jan 7, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಭವಿಷ್ಯ ವಿಜ್ಞಾನ
[ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] [ಐದನೇ ಕಂತು] ಮೊದಲನೆಯದಾಗಿ ಜನರ ವಸತಿ, ಸಂಚಾರ, ವಿಹಾರ ಮೊದಲಾದವುಗಳಿಗಾಗಿ ಹೆಚ್ಚು ಹೆಚ್ಚು ನೆಲವನ್ನು ಆಕ್ರಮಿಸಬೇಕಾಗುತ್ತದೆ. ಎರಡನೆಯದಾಗಿ ಆಹಾರೋತ್ಪಾದನೆಗಾಗಿ ಹೆಚ್ಚು...
by athreebook | Jan 4, 2013 | ಯಕ್ಷಗಾನ
‘ಪಂಚಮೇಳಗಳ ಕೂಡಾಟ, ಸಪ್ತ ಕಲ್ಯಾಣಗಳೇ ಪ್ರಸಂಗ’ ಎಂದು ಅಜಿತ್ ಕುಮಾರ್ ಹೆಗಡೆ ಶಾನಾಡಿಯವರು ಆಮಂತ್ರಣ ಕಳಿಸಿದಾಗ ನಾನು ಎರಡನೇ ಯೋಚನೆ ಮಾಡಲಿಲ್ಲ. ಶಾನಾಡಿ ಮನೆಗೆ ದಾರಿ, ಸಾರ್ವಜನಿಕ ವಾಹನ ಸೌಕರ್ಯದ ವಿವರ ಮಾತ್ರ ಕೇಳಿದೆ. ಅಜಿತರೂ ಸೇರಿದಂತೆ ಆ ಕುಟುಂಬದ ಐದು ವಿಭಿನ್ನರು ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಹೇಳಿಕೊಂಡ...
by athreebook | Dec 31, 2012 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಭವಿಷ್ಯ ವಿಜ್ಞಾನ
ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] [ನಾಲ್ಕನೇ ಕಂತು] ನಿಸರ್ಗದ ಸಂಪನ್ಮೂಲಗಳಲ್ಲಿ ವ್ಯಾಪಕವಾಗಿ ಎರಡು ವರ್ಗಗಳನ್ನು ಗುರುತಿಸಬಹುದು. ಪುನರಾವರ್ತನಶೀಲ ಸಂಪನ್ಮೂಲಗಳು, ಅಪುನರಾವರ್ತನಶೀಲ ಸಂಪನ್ಮೂಲಗಳು....
by athreebook | Dec 27, 2012 | ಚಕ್ರವರ್ತಿಗಳು, ವನ್ಯ ಸಂರಕ್ಷಣೆ
(ಚಕ್ರವರ್ತಿಗಳು – ಎಂಟನೆಯ ಸುತ್ತು) ಶನಿವಾರ ಸಂಜೆ ಹಿಡಿದ ಮಳೆ ರಾತ್ರಿ ಪೂರಾ ಹೊಡೆದೇ ಹೊಡೆಯಿತು. ಬೆಳಿಗ್ಗೆ ಅಲಾರಾಂ ಟ್ರೀಈಈಈಣ್‌ನಿಂದ ಹೇಮಾವತಿ ಎಕ್ಸ್‌ಪ್ರೆಸ್ ಬ್ರೇಏಏಏಏಂವರೆಗೆ ಸಣ್ಣ ಸಂದೇಹ, ನನಗೆ ಮೊದಲೇ ಹೆಸರು ಕೊಟ್ಟವರೆಲ್ಲ ಬಂದಾರೇ? ಮತ್ತು ದೊಡ್ಡ ಆತಂಕ ಹಾಸನ ಮಾರ್ಗದಲ್ಲಿ ಅಂದು ರೈಲೋಡೀತೇ? ಬಂದವರನ್ನು ಗಣಿಸದೇ...